ಮಂಡ್ಯ: ಆದಿಚುಂಚನಗಿರಿ (Adichunchanagiri) ಮಠಕ್ಕೆ ಹೊರಟಿದ್ದ ಪ್ರವಾಸಿಗರ ಕಾರು (Car) ಹೊತ್ತಿ ಉರಿದ ಘಟನೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಬಳಿ ನಡೆದಿದೆ.
ಬೆಂಗಳೂರಿನ (Bengaluru) ಕುಟುಂಬವೊಂದು ಆದಿಚುಂಚನಗಿರಿಗೆ ಕಾರಿನಲ್ಲಿ ಹೊರಟಿತ್ತು. ಕಾರನ್ನು ಮಹಿಳೆ ಚಲಾಯಿಸುತ್ತಿದ್ದರು. ಕಾರು ಆದಿಚುಂಚನಗಿರಿ ಸಮೀಪ ಬಂದಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಐಶ್ವರ್ಯ ಗೌಡ ವಂಚನೆ ಕೇಸ್ – ವಿನಯ್ ಕುಲಕರ್ಣಿಗೆ ಇಡಿ ಸಮನ್ಸ್
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಮಹಿಳೆ, ಹಾಗೂ ಆಕೆಯ ಪತಿ ಮಗುವನ್ನು ಕರೆದುಕೊಂಡು ಕಾರಿನಿಂದ ಇಳಿದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬ ಪಾರಾಗಿದೆ.
ಮಂಡ್ಯ: ಕೇಂದ್ರ ಸಚಿವರಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಇಂದು ಮಂಡ್ಯದ (Mandya) ಆದಿಚುಂಚನಗಿರಿಗೆ ತೆರಳಿ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಆದಿಚುಂಚನಗಿರಿಗೆ ಇಂದು ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಪೂರ್ಣ ಕುಂಭ ಹಾಗೂ ಮಂಗಳ ವಾದ್ಯಗಳ ಮೂಲಕ ಸ್ವಾಗತಿಸಲಾಯಿತು. ಬಳಿಕ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಅವರು ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ದರ್ಶನ್‍ನಂತೆ ರಾಜಕಾರಣಿಗಳೂ ನಿರ್ಧಾರ ತಗೊಳೋದಾದ್ರೆ ಗಂಟೆಗೊಂದು ಹೆಣ ಬೀಳ್ತಿತ್ತು: ಸಿ.ಟಿ ರವಿ ಖಂಡನೆ
ಬಳಿಕ ಮಠಕ್ಕೆ ತೆರಳಿದ ಹೆಚ್‌ಡಿಕೆ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭ ಕುಮಾರಸ್ವಾಮಿ ಅವರಿಗೆ ಶ್ರೀಗಳು ಆಶೀರ್ವಾದ ನೀಡಿ ಶುಭಕೋರಿದರು. ಕುಮಾರಸ್ವಾಮಿಗೆ ಮಾಜಿ ಸಚಿವ ಪುಟ್ಟರಾಜು, ಮಾಜಿ ಶಾಸಕ ಸುರೇಶ್‌ಗೌಡ ಹಾಗೂ ಜೆಡಿಎಸ್ ಬಿಜೆಪಿ ನಾಯಕರು ಸಾಥ್ ನೀಡಿದರು. ಇದನ್ನೂ ಓದಿ: ಸ್ವಾಮಿ ಶವ ಎಸೆಯೋ ಬಗ್ಗೆ ದರ್ಶನ್ ಮನೆಯಲ್ಲೇ ನಡೆದಿತ್ತು ಸ್ಕೆಚ್!
ಮಂಡ್ಯ: ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ (BJP) ಪ್ರಧಾನಿ ಸೇರಿದಂತೆ ಕೇಂದ್ರದ ಮಂತ್ರಿಗಳು ಇಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದ್ದಾರೆ.
ಆದಿಚುಂಚನಗಿರಿಯಲ್ಲಿ (Adichunchanagiri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ನಾಯಕರು ಕೂಡ ಇಲ್ಲಿಯೇ ಇದ್ದಾರೆ. ಆದರೆ ಕರ್ನಾಟಕದ ದುರಾದೃಷ್ಟವೇನೆಂದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಇಬ್ಬರೂ ಹೇಳುತ್ತಿಲ್ಲ. ಪ್ರಧಾನ ಮಂತ್ರಿಗಳು ಕೇವಲ ಅವರನ್ನು ನಿಂದಿಸಿದ ಬಗ್ಗೆ ಹೇಳುತ್ತಾರೆ. ಕಾಂಗ್ರೆಸ್‌ನವರು (Congress) ಅವರನ್ನು ವಿಷಸರ್ಪ ಎಂದು ಮಾತನಾಡುತ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬೆಳಗಾವಿಯ (Belagavi) ಗಡಿ ವಿಚಾರದ ಬಗ್ಗೆ ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಧಿಕಾರಕ್ಕಾಗಿ ದೇವರ ಮೊರೆ ಹೋದ ದಳಪತಿ- ಆದಿಚುಂಚನಗಿರಿ ಕ್ಷೇತ್ರಕ್ಕೆ ಹೆಚ್‍ಡಿಕೆ ಭೇಟಿ
ನಾಡಿನ ಜನರ ಬದುಕಿನ ಬಗ್ಗೆ ಎರಡೂ ಪಕ್ಷಗಳು ಸಂದೇಶ ನೀಡುತ್ತಿಲ್ಲ. ಕಾಂಗ್ರೆಸ್ ಎರಡು ಸಾವಿರ ಗ್ಯಾರಂಟಿ ಸೇರಿ ಇನ್ನೂ ನಾಲ್ಕು ಭರವಸೆಯನ್ನು ಬೇರೆ ರಾಜ್ಯದಲ್ಲಿ ಘೋಷಣೆ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಇಲ್ಲ. ನಾಡಿನ ಸಮಸ್ಯೆಗಳಿಗೆ ಜೆಡಿಎಸ್ (JDS) ಪರಿಹಾರ ನೀಡುತ್ತದೆ. ನಮ್ಮ ಯೋಜನೆಯನ್ನು ಜನರು ಮೆಚ್ಚಿದ್ದಾರೆ ಎಂದರು. ಇದನ್ನೂ ಓದಿ: `ನಮೋ’ ರೋಡ್ ಶೋ; ಮೈಸೂರಿನ ಈ ಮಾರ್ಗಗಳಲ್ಲಿಂದು ವಾಹನ ಸಂಚಾರ ಬಂದ್
ಅಶೋಕ್ (R.Ashok) ಅವರು ಜೆಡಿಎಸ್ ಲಾಟರಿ ನಿರೀಕ್ಷೆ ಮಾಡುತ್ತಿದೆ ಎಂದು ಹೇಳಿದ್ದರು. ನಾವು ಯಾವುದೇ ಲಾಟರಿಯನ್ನು ನಿರೀಕ್ಷೆ ಮಾಡುತ್ತಿಲ್ಲ. ಜೆಡಿಎಸ್‌ಗೆ 20 ಸೀಟ್ ಬರುತ್ತದೆ ಎಂದು ಹೇಳುತ್ತಾರೆ. ಬಿಜೆಪಿಗೆ ಎಷ್ಟು ಸೀಟ್ ಬರುತ್ತದೆ ಎಂದು ನೋಡಿಕೊಳ್ಳಲಿ. ಮಂಡ್ಯ (Mandya) ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಅಶೋಕ್ ಸಾಮ್ರಾಟ್ ಎಲ್ಲಿ ಹೋಗಿದ್ದರು? ನಾನು ಸಿಎಂ ಆಗಿದ್ದಾಗ ಬಜೆಟ್ ಘೋಷಣೆ ಮಾಡಿದ್ದಕ್ಕೆ ಮಂಡ್ಯ ಬಜೆಟ್ ಎಂದರು. ಈಗ ಬಿಜೆಪಿ ಮಂಡ್ಯಕ್ಕೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮನೆಯಿಂದ್ಲೇ ಮತದಾನ ಮಾಡಿದ ಮೂಡಿಗೆರೆ ಕ್ಷೇತ್ರದ ಶತಾಯುಷಿಗಳು
ಬಿಜೆಪಿಯವರು ಇಡಿ, ಐಟಿಯನ್ನು ಆಕ್ಟಿವ್ ಮಾಡುತ್ತಿದ್ದಾರೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷದಲ್ಲೂ ಒಂದೊಂದು ಮೋರ್ಚಾ ಇಟ್ಟುಕೊಂಡಿದ್ದಾರೆ. ಅದೇ ರೀತಿ ಬಿಜೆಪಿ ಇಡಿ, ಐಟಿ ಮೋರ್ಚಾ ಎಂದು ಇಟ್ಟುಕೊಂಡಿದೆ. ಆ ಮೋರ್ಚಾಗಳನ್ನು ಚುನಾಚಣೆಯ (Election) ಸಂದರ್ಭದಲ್ಲಿ ಬಿಡುತ್ತಿದ್ದಾರೆ. ಅವುಗಳನ್ನು ಈಗ ಆಕ್ಟಿವ್ ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವುದು ಸರಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ʻಮನ್ ಕಿ ಬಾತ್ʼ100ನೇ ಸಂಚಿಕೆ ಇಂದು ಪ್ರಸಾರ
ಸುಮಲತಾ ಅಂಬರೀಶ್ (Sumalatha Ambareesh) ಅವರ ಜೆಡಿಎಸ್ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ಅವರು ಮಹಾನ್ ನಾಯಕಿ. ಅಲ್ಲದೇ ದೊಡ್ಡ ಪಕ್ಷದವರು. ನಾವು ಚಿಕ್ಕ ಪಕ್ಷದವರಾಗಿದ್ದರಿಂದ ಅವರ ಬಗ್ಗೆ ಮಾತನಾಡಲು ಆಗಲ್ಲ. ನಾವು ಒಂದು ಅವಕಾಶಕ್ಕೆ ಕಾಯುತ್ತಿದ್ದೇವೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ಹಲವು ಒಳ್ಳೆಯ ಕೆಲಸ ಮಾಡಿದ್ದೇನೆ. ಲಾಟರಿ, ಸಾರಾಯಿ ಎಲ್ಲವನ್ನು ನಿಷೇಧ ಮಾಡಿದ್ದೇ ನಾನು. ಎಲ್ಲಾ ಮಾತಿಗೂ ಜನ ತೀರ್ಪು ಕೊಡುತ್ತಾರೆ ಎಂದರು. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ
ಮಂಡ್ಯ: ಅಧಿಕಾರಕ್ಕಾಗಿ ಇದೀಗ ದಳಪತಿಗಳು ದೇವರ ಮೊರೆ ಹೋಗಿದ್ದಾರೆ. ಎಚ್.ಡಿ.ದೇವೇಗೌಡ (H.D Devegowda), ಎಚ್.ಡಿ.ರೇವಣ್ಣ (H.D Revanna) ಬಳಿಕ ಇದೀಗ ಕುಮಾರಸ್ವಾಮಿ (H.D Kumaraswamy) ಯವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿಯ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಿಂಗಳ ಹಿಂದೆಯಷ್ಟೇ ರೇವಣ್ಣ ಅವರು ತಮ್ಮ ಪತ್ನಿ ಜೊತೆ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿದ್ದರು. ಅಲ್ಲದೆ ಇತ್ತೀಚೆಗೆ ಅಮಾವಾಸ್ಯೆಯಂದು ಹೆಚ್‍ಡಿಡಿ ಕೂಡ ಪೂಜೆ ಸಲ್ಲಿಸಿದ್ದರು. ಇಂದು (ಭಾನುವಾರ) ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪೂಜೆ ಸಲ್ಲಿಕೆಯಾಗಿದೆ. ಇದನ್ನೂ ಓದಿ: ಮನೆಯಿಂದ್ಲೇ ಮತದಾನ ಮಾಡಿದ ಮೂಡಿಗೆರೆ ಕ್ಷೇತ್ರದ ಶತಾಯುಷಿಗಳು
ಈ ಮೂಲಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪದೇ ಪದೇ ಕಾಲಭೈರವೇಶ್ವರನ ಮೊರೆ ಹೊಗುತ್ತಿದ್ದಾರೆ. ಬೆಳಗ್ಗೆ 8.30ಕ್ಕೆ ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಜೊತೆ ಮಂಡ್ಯ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳಿಂದಲೂ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಅಭ್ಯರ್ಥಿಗಳ ಜೊತೆ ಕುಮಾರಸ್ವಾಮಿ ಮಹತ್ವದ ಮೀಟಿಂಗ್ ನಡೆಸಲಿದ್ದಾರೆ. ಅಂತಿಮ ಅಂತದ ತಂತ್ರಗಾರಿಕೆ ಬಗ್ಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದಾರೆ. ಕೆಲವು ಸಲಹೆ, ಸೂಚನೆ ನೀಡಲಿದ್ದಾರೆ.
ಚಾಮರಾಜನಗರ: ನನಗೆ ಸಿ.ಡಿ-ಪಾಡಿ ಯಾವುದೂ ಗೊತ್ತಿಲ್ಲ. ನಾನು ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಈ ಬಗ್ಗೆ ನಂಗೆ ಏನೂ ಗೊತ್ತಿಲ್ಲ. ಇದರಲ್ಲಿ ನಾನು ಎಲ್ ಬೋರ್ಡ್ ಎಂದು ಸಚಿವ ವಿ. ಸೋಮಣ್ಣ (V Somanna) ಹೇಳಿದ್ದಾರೆ.
ಸಿಡಿ ರಾಜಕಾರಣ (CD Politics) ದ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನೀವು ಯಾವ ಪ್ರಶ್ನೆ ಯಾರಿಗೆ ಕೇಳಬೇಕು ಅಂತಾ ಕೇಳ್ದೆ ನನ್ನನ್ನು ಕೇಳಿದ್ರೆ ಹೇಗೆ? ರಾಂಗ್ ಡೈರಕ್ಷನ್‍ನಲ್ಲಿ ಕೇಳಿದ್ರೆ ನಾನೇನು ಹೇಳಲಿ? ನಾನು ಅಭಿವೃದ್ಧಿ ಜಪ ಮಾಡೋನು, ನನ್ನ ಕೇಳಿದ್ರೆ ಸುಖವಿಲ್ಲ, ದಯಮಾಡಿ ಯಾರ್ಯಾರೂ ಸಂಬಂಧಪಟ್ಟೋರು ಇದ್ದಾರೋ ಅವರನ್ನು ಕೇಳಿ ಮಾಹಿತಿ ತಗೊಳ್ಳಿ ಎಂದರು.
ತಮ್ಮ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದೆಯೆಂಬ ಎಚ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ (H Vishwanath) ಬುದ್ದಿಜೀವಿ, ಹಳ್ಳಿ ಹಕ್ಕಿ, ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಈ ಬಾರಿಯೂ ಗೆಲ್ಲಲಿ ಅಂತ ಆಶಿಸುವೆ: ಸುಧಾಕರ್
Live Tv
[brid partner=56869869 player=32851 video=960834 autoplay=true]
ಹಾವೇರಿ: ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ. ಒಕ್ಕಲಿಗರ ಸ್ವಾಮೀಜಿ ಎಂದು ಹೇಳಿವ ಮೂಲಕ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಬಿಜೆಪಿಗರಿಗೆ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಜಾತಿಯವರ ಪರ ಇರೋ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ನಾನು ಒಕ್ಕಲಿಗರ ಬಗ್ಗೆ ಏನು ಮಾತಾಡಿದ್ದೇನೆ.?, ನಾನು ರಾಜಕೀಯಕ್ಕೆ ಬರೋಕೆ ಕಾರಣವೆ ಒಕ್ಕಲಿಗರು. ನಾನು ಬೆಳಗ್ಗೆಯಿಂದ ಸಂಜೆಯವರೆಗೆ ಆದಿಚುಂಚನಗಿರಿ ಮಠದಲ್ಲೇ ಬೆಳೆದಿರೋದು. ನಾನು ರಾಜಕೀಯಕ್ಕೆ ಬರಲು ಕಾರಣ ಆದಿಚುಂಚನಗಿರಿ ಮಠದ ಸ್ವಾಮೀಜಿ. ಸ್ವಾಮೀಜಿ ದಾರಿ ತೋರಿಸಿದರು ಎಂದರು. ಇದನ್ನೂ ಓದಿ: ಚುನಾವಣೆ ವರ್ಷ ಇದು, ಏನೇ ಮಾಡಿದರೂ ಪಕ್ಷಕ್ಕೆ ಲಾಭ: ಕೆ.ಎನ್ ರಾಜಣ್ಣ
ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ. ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ನನ್ನ ಗುರುಗಳು. ನಾನು ಮಠಕ್ಕೆ ಹೋಗೋದು ತಡವಾದರೆ ಸ್ವಾಮೀಜಿ ಎಲ್ಲಿದ್ದೀಯಾ ಜಮೀರ್ ಅಂತಾ ಫೋನ್ ಮಾಡುತ್ತಿದ್ದರು. ಸ್ವಾಮೀಜಿಗಳ ಆದೇಶದ ಮೇರೆಗೆ ನಾನು ಜನತಾದಳಕ್ಕೆ ಹೋಗಿದ್ದು. ವಿಜಯನಗರ, ಚುಂಚನಗಿರಿ ಮಠದಲ್ಲಿ ಕೇಳಿ ನನ್ನ ಸ್ವಾಮೀಜಿಗಳ ಸಂಬಂಧ ಏನು ಅಂತಾ ಹೇಳ್ತಾರೆ. ದೇವೇಗೌಡರೇ ನನ್ನ ರಾಜಕೀಯ ಗುರುಗಳು. 2005ರಲ್ಲಿ ನನ್ನ ಗೆಲ್ಲಿಸಿರೋದು ದೇವೇಗೌಡರು. ನಾನು ಈ ಮಟ್ಟಕ್ಕೆ ಬೆಳೆದಿದ್ದು ದೇವೇಗೌಡರಿಂದ ಎಂದು ಹೇಳಿದರು.
ಆರ್.ಅಶೋಕ್ ಅವರದ್ದು ನಾನು ಬಿಡಿಸಿ ಹೇಳಲಾ…? ಅಶೋಕ್ ಅವರಿಗೆ ಸಿಎಂ ಆಗೋ ಆಸೆ ಇಲ್ವಾ.? ಅಶೋಶ್, ಸಿ.ಟಿ.ರವಿಗೆ ಆಸೆ ಇಲ್ವಾ.? ಅವರವರಲ್ಲೆ ಕಾಂಫಿಟೇಶನ್ ಇದೆ. ಇದೇ ವೇಳೆ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್, ಬಿಜೆಪಿಯವರು ದೇಶವನ್ನು ಹಾಳು ಮಾಡ್ತಿದ್ದಾರೆ. ಈ ರೀತಿ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಸಿ.ಟಿ.ರವಿಯವರಿಗೆ ಹೇಳಿಕೊಳ್ಳಲು ವಿಷಯಗಳಿಲ್ಲ. ಕಾಂಗ್ರೆಸ್ ಕಾರ್ಯಕ್ರಮ ತೋರಿಸಿ ಮತ ಕೇಳ್ತೇವೆ. ಸಿ.ಟಿ.ರವಿಯವರಿಗೆ ಹಿಂದೂ, ಮುಸಲ್ಮಾನ ಯಾರೂ ಬೇಕಾಗಿಲ್ಲ. ಅವರಿಗೆ ಬೇಕಿರೋದು ಖುರ್ಚಿ ಮತ್ತು ಅಧಿಕಾರ ಎಂಉದ ವಾಗ್ದಾಳಿ ನಡೆಸಿದರು.
Live Tv
[brid partner=56869869 player=32851 video=960834 autoplay=true]
ಮಂಡ್ಯ: ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸರಳವಾಗಿ ಜರುಗಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ ಗಂಗಾಧರೇಶ್ವರಸ್ವಾಮಿಯ ಮಹಾರಥೋತ್ಸವ ಇಂದು ಮುಂಜಾನೆ 4.58ರ ಬ್ರಾಹ್ಮೀ ಮುಹೂರ್ತದಲ್ಲಿ ಅದ್ದೂರಿಯಾಗಿ ಜರುಗಿತು.
ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಿದ್ದು, ಕಾಲಭೈರವೇಶ್ವ ಮತ್ತು ಗಂಗಾಧರೇಶ್ವರಸ್ವಾಮಿಗೆ ಜೈಕಾರ ಕೂಗಿದ್ರು. ರಥೋತ್ಸವದ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಇದನ್ನೂ ಓದಿ: ಬೊಮ್ಮಾಯಿ ಸಚಿವರ ನಡುವೆ ಟಾಕ್ ಫೈಟ್- ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಕಿತ್ತಾಟ
ರಥೋತ್ಸವ ಹಿನ್ನೆಲೆ ಇಡೀ ಆದಿಚುಂಚನಗಿರಿ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಇತ್ತ ಬಾನೆತ್ತರಕ್ಕೆ ಬಾಣ ಬಿರುಸುಗಳು ಚಿಮ್ಮುತ್ತಿದ್ದವು. ಒಟ್ಟಿನಲ್ಲಿ ಕೊರೊನಾ ನಂತರ ಮಹಾರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.
ಮಂಡ್ಯ: ಕೊರೊನಾ ಎದುರಿಸಲು ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಸಾಮರ್ಥ್ಯವುಳ್ಳ ಆಮ್ಲಜನಕ ಉತ್ಪಾದನಾ ಘಟಕವನ್ನು ಇಂದು ಲೋಕಾರ್ಪಣೆಗೊಳಿಸಿದೆ.
ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿದೆ. ಅಮ್ಲಜನಕ ಘಟಕವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ವರ್ಚುಯಲ್ ಮೂಲಕ ಉದ್ಘಾಟಿಸಿದರು.
ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ಇರುವ ಎಐಎಂಎಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಘಟಕ ನಿರ್ಮಾಣಗೊಂಡಿದೆ. ಈ ಘಟಕ ಪ್ರತಿ ನಿಮಿಷಕ್ಕೆ 700 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಆಮ್ಲಜನಕ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ ಶ್ರೀಗಳು ಕುದುರೆಮುಖ ಕಬ್ಬಿಣದ ಅದಿರು ಕಂಪನಿಯೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೇ ತಮ್ಮ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರನ್ನು ಒಳಗೊಂಡಂತೆ ವಿಶೇಷ ಸಮಿತಿಯೊಂದನ್ನು ರಚಿಸಿದ್ದರು. ಆ ಸಮಿತಿ ಆಮ್ಲಜನಕ ಉತ್ಪಾದನಾ ಘಟಕದ ಅಗತ್ಯದ ಬಗ್ಗೆ ಶಿಫಾರಸು ಮಾಡಿತ್ತು. ಅದರನ್ವಯ ಉಪಕರಣಗಳನ್ನು ಯುರೋಪ್‍ನಿಂದ ಆಮದು ಮಾಡಿಕೊಂಡು ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಇದನ್ನೂ ಓದಿ:ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡಬೇಕು, ಮೂರನೇ ಅಲೆಗೂ ಮುನ್ನ ಸರ್ವ ಪಕ್ಷ ಸಭೆ ಕರೆಯಬೇಕು: ರಾಮಲಿಂಗಾ ರೆಡ್ಡಿ
ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಈ ಘಟಕ ಒಂದು ನಿಮಿಷಕ್ಕೆ 700 ಲೀಟರ್ ಅನಿಲ ರೂಪದ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 143 ಸಿಲಿಂಡರ್ ಹೊಂದಿರುವ ಆಮ್ಲಜನಕ ಸಾಮರ್ಥ್ಯಕ್ಕೆ ಇದು ಸಮವಾಗಿದೆ. ಇದರಿಂದ ಏಕಕಾಲಕ್ಕೆ 150 ಆಮ್ಲಜನಕ ಅವಲಂಬಿತ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೆಐಒಸಿ ಲಿಮಿಟೆಡ್ ಮುಖ್ಯಸ್ಥರು ಹಾಗೂ ಮಠದ ಮತ್ತಿತರರು ಭಾಗವಹಿಸಿದ್ದರು. ಇದನ್ನೂ ಓದಿ: ಸರ್ಕಾರದ ಅಕ್ರಮಗಳನ್ನು ಚರ್ಚೆ ಮಾಡಲು ಅಧಿವೇಶನ ಕರೆಯಿರಿ – ಎಚ್‍ಡಿಕೆ ಸವಾಲ್
ಮಂಡ್ಯ: ಕೊರೊನಾ ವೈರಸ್ ತಾಂಡವಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ರದ್ದು ಮಾಡಲಾಗಿದೆ.
ಈ ಕುರಿತು ಆದಿಚುಂಚನಗಿರಿ ಮಠದಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಜನಪದ ಕಲೆ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಪ್ರತಿವರ್ಷ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ರಾಜ್ಯಮಟ್ಟದ ಜಾನಪದ ಕಲಾ ಮೇಳವನ್ನು ಏರ್ಪಡಿಸುತ್ತಿತ್ತು. ಆದರೆ ಕೊರೊನಾ ವೈರಸ್ ಹಾವಳಿ ಹಿನ್ನೆಲೆ ಈ ಬಾರಿ ಜಾನಪದ ಕಲಾಮೇಳವನ್ನು ರದ್ದು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ದಿನಾಂಕ 23, 24 ಮತ್ತು 25 ಮೂರು ದಿನಗಳ ಕಾಲ ಈ ಕಲಾಮೇಳವನ್ನು ಏರ್ಪಡಿಸಲಾಗುತ್ತಿತ್ತು. ಇದರಲ್ಲಿ ರಾಜ್ಯಾದ್ಯಂತ ಆಗಮಿಸುವ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಕಲಾವಿದರು ಪಾಲ್ಗೊಳ್ಳುತ್ತಿದ್ದರು. ಈ ಮೂಲಕ ಅದ್ಧೂರಿಯಾಗಿ ಜಾನಪದ ಉತ್ಸವ ನಡೆಯುತ್ತಿತ್ತು. ಈ ವರ್ಷ ಕೊರೊನಾ ವೈರಸ್ ಇಡೀ ವಿಶ್ವಾದ್ಯಂತ ಹರಡಿ ಜನರ ಆರೋಗ್ಯವನ್ನು ಕಾಡುತ್ತಿದೆ. ಹೀಗಾಗಿ ಜನರ ಆರೋಗ್ಯವನ್ನು ರಕ್ಷಿಸುವ ದೃಷ್ಟಿಯಿಂದ ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಬೇಕಿದ್ದ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಈ ವರ್ಷ ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ರಾಯಚೂರು/ಮೈಸೂರು/ಬೆಂಗಳೂರು: ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮಂತ್ರಾಲಯ, ಆದಿಚುಂಚನಗಿರಿ ಹಾಗೂ ನಂಜನಗೂಡು ದೇವಸ್ಥಾನವನ್ನು ಬಂದ್ ಮಾಡಲಾಗಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ಮಂತ್ರಾಲಯದಲ್ಲಿ ಭಕ್ತರ ದರ್ಶನ ಬಂದ್ ಆಗಿದೆ. ಈ ಹಿಂದೆ 2009 ಅಕ್ಟೋಬರ್ ತಿಂಗಳಲ್ಲಿ ಪ್ರವಾಹದಿಂದ ರಾಯರ ದರ್ಶನ ಬಂದ್ ಆಗಿತ್ತು. 11 ವರ್ಷಗಳ ಬಳಿಕ ಮತ್ತೆ ಇಂದಿನಿಂದ ರಾಯರ ದರ್ಶನ ಭಕ್ತರಿಗೆ ಲಭ್ಯವಿಲ್ಲ. ಕೊರೊನಾ ಭೀತಿ ಮುಗಿಯುವರೆಗೂ ಮಂತ್ರಾಲಯಕ್ಕೆ ಬರಬೇಡಿ ಎಂದು ಶ್ರೀಮಠದ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ. ಇಂದು ಗುರುವಾರ ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ಭಾರೀ ನಿರಾಸೆಯಾಗಿದ್ದು, ಶ್ರೀಮಠದ ಒಳಗಡೆ ರಾಯರಿಗೆ ಎಂದಿನಂತೆ ಪೂಜೆ-ಪುರಸ್ಕಾರ ನಡೆಯಲಿವೆ. ಆದರೆ ಭಕ್ತರಿಗೆ ಮಾತ್ರ ದರ್ಶನ ರದ್ದು ಮಾಡಿ ಎಂದು ಶ್ರೀಮಠ ಸೂಚನೆ ನೀಡಿದೆ.
ಇನ್ನೂ ಮಾಧ್ಯಮ ಪ್ರಕಟಣೆಯಲ್ಲಿ ಆದಿಚುಂಚನಗಿರಿ ಮಠ ಶ್ರೀ ಕಾಲಭೈರವೇಶ್ವರನ ದರ್ಶನಕ್ಕೆ ಶನಿವಾರ ಮತ್ತು ಭಾನುವಾರ ಕಾಲಭೈರವನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇತ್ತೀಚೆಗೆ ವಿಶ್ವದಾದ್ಯಂತ ಹರಡಿರುವ ಕೊರೊನಾ ಹಿನ್ನೆಲೆಯಲ್ಲಿ ಮುಂದಿನ 2 ವಾರಗಳ ಕಾಲ ಭಕ್ತರು ದೇವರ ದರ್ಶನಕ್ಕೆ ಆಗಮಿಸದಂತೆ ಆದಿಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರುಗಳು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಭಕ್ತಾದಿಗಳಲ್ಲಿ ತಿಳಿಸಿದ್ದಾರೆ. ಇದಕ್ಕೆ ತಾವುಗಳು ಸಹಕರಿಸಬೇಕಾಗಿ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತ ಕೊರೊನಾ ಎಫೆಕ್ಟ್ ನಿಂದಾಗಿ ಇಂದಿನಿಂದ ನಂಜನಗೂಡಿನ ಶ್ರೀ ನಂಜುಡೇಶ್ವರನ ದರ್ಶನ ಭಕ್ತರಿಗೆ ಇಲ್ಲ. ಕೊರೊನಾದಿಂದಾಗಿ ನಂಜನಗೂಡು ದೇವಾಲಯವನ್ನು ಬಂದ್ ಆಗಿದೆ. ದೇವಾಲಯಕ್ಕೆ ಇಂದಿನಿಂದ ಭಕ್ತಾದಿಗಳ ಪ್ರವೇಶ ನಿಷೇಧವಿದ್ದು ದೇವಾಲಯದ ಮುಂಬಾಗಿಲು ಮುಚ್ಚಲಾಗಿದೆ. ಮಾರ್ಚ್ 31ರವರೆಗೆ ದೇವಾಲಯ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶ ಇಲ್ಲ ಎಂದು ನೋಟಿಸ್ ಆಂಟಿಸಲಾಗಿದೆ. ದೇವಾಲಯದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆದಿವೆ.
ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ತರಬೇತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಿನೇ ದಿನೇ ಕಿಲ್ಲರ್ ಕೊರೊನಾ ವ್ಯಾಪಾಕವಾಗಿ ಹರಡುತ್ತಿರುವುದರಿಂದ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ರಜೆ ಘೋಷಣೆ ಮಾಡಿದೆ. ಕೊರೋನಾದಿಂದ ಆಗುವ ಅನಾಹುತಗಳನ್ನ ತಪ್ಪಿಸಲು ತರಬೇತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದೇ ತಿಂಗಳ 31ರ ತನಕ ಪೊಲೀಸ್ ತರಬೇತಿ ಶಾಲೆಗೆ ರಜೆ ಘೋಷಣೆ ಮಾಡಿ ತರಬೇತಿ ವಿಭಾಗದ ಐಜಿಪಿ ಬುಧವಾರ ಆದೇಶ ಹೊರಡಿಸಿದ್ದಾರೆ. ಪೊಲೀಸ್ ತರಬೇತಿ ಶಾಲೆಗಳಲ್ಲಿ ಪೇದೆಗಳು, ಸಬ್‍ಇನ್ಸಪೆಕ್ಟರ್ ಅಭ್ಯರ್ಥಿಗಳು ಶಿಕ್ಷಣ ನೀಡುತ್ತಾರೆ.