ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಇಂದು ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದು ವಿಜಯನಗರದ ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರಿಂದ ಭಗವದ್ಗೀತೆ ಗ್ರಂಥವನ್ನು ಪಡೆದಿದ್ದು, ಮನಸ್ಸಿಗೆ ಸಂತೋಷ ನೀಡಿತು ಎಂದು ತಿಳಿಸಿದ್ದಾರೆ.
2017ರಲ್ಲಿ ಜಗದೀಶ್ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಜಾಸ್ತಿ ಗಮನ ನೀಡುತ್ತಿದ್ದಾರೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ವಿಚಾರವನ್ನು ಕೆಲವೇ ದಿನಗಳ ಹಿಂದೆ ಅಮೂಲ್ಯ ಮತ್ತು ಜಗದೀಶ್ ದಂಪತಿ ತಿಳಿಸಿದ್ದರು. ಇದನ್ನೂ ಓದಿ: ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ
ಕೆಲವು ದಿನಗಳ ಹಿಂದೆ ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಸೀಮಂತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ: ಸಖತ್ ಹಾಟ್ ಫೋಟೋಗಳಿಂದ ಮೋಡಿ ಮಾಡಿದ ರಾಯ್ ಲಕ್ಷ್ಮೀ
ಮಂಡ್ಯ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜನವರಿ 4-5 ರಂದು ಆದಿಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಅದಕ್ಕೆ ಯಾವುದೇ ಕುಂದು ಕೊರತೆ ಆಗದ ರೀತಿ ನೋಡಿಕೊಳ್ಳಿ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಯುವಜನೋತ್ಸವ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಪೂರ್ವಭಾವಿ ಕ್ರಮಗಳ ಕುರಿತು ಇಂದು ಅಧಿಕಾರಿಗಳ ಜೊತೆ ಡಾ.ನಾರಾಯಣಗೌಡ ಸಭೆ ನಡೆಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜನವರಿ 4-5ರಂದು ಆದಿಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: 700ರ ಗಡಿದಾಟಿದ ಕೊರೊನಾ – ಓಮಿಕ್ರಾನ್ 43ಕ್ಕೆ ಏರಿಕೆ
ಜನವರಿ 4ರಂದು ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ನಾರಾಯಣಗೌಡ, ಡಾ.ಸಿ.ಎನ್ ಅಶ್ವಥ್ ನಾರಾಯಣ್, ಸುನಿಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಿಜೇತರಿಗೆ ಬಹುಮಾನ ಹೆಚ್ಚಳ:
ಯುವಜನೋತ್ಸವದ ವಿವಿಧ ಭಾಗವಹಿಸುವ ಸ್ಪರ್ಧಿಗಳ ಬಹುಮಾನ ಮೊತ್ತವನ್ನು ಹೆಚ್ಚಿಸಲು ಸಚಿವ ಡಾ. ನಾರಾಯಣಗೌಡ ಕ್ರಮವಹಿಸಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಿಗೆ ಮೊದಲ ಬಹುಮಾನ 15 ಸಾವಿರ, ಎರಡನೇ ಬಹುಮಾನ 10 ಸಾವಿರ, ಮೂರನೇ ಬಹುಮಾನ 5 ಸಾವಿರ, ಗುಂಪುಗಳಿಗೆ ನೀಡುವ ಮೊದಲ ಬಹುಮಾನ 25 ಸಾವಿರ, ಎರಡನೇ ಬಹುಮಾನ 25 ಸಾವಿರಕ್ಕೆ ಹೆಚ್ಚಳ ಮಾಡಿ ಡಾ.ನಾರಾಯಣಗೌಡ ಆದೇಶಿಸಿದರು. ಇದನ್ನೂ ಓದಿ: ನಾಳೆ ಬಂದ್ ಇಲ್ಲ – ವ್ಯಾಪಾರ, ವ್ಯವಹಾರ ನಡೆಸಬಹುದು: ಬೊಮ್ಮಾಯಿ
ಯುವಜನೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಎರಡು ಸಾವಿರಕ್ಕೂ ಅಧಿಕ ಪ್ರತಿಭಾನ್ವಿತರು ಆಗಮಿಸಲಿದ್ದಾರೆ. ಅವರಿಗೆ ಊಟ, ವಸತಿ ಸೇರಿದಂತೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೋವಿಡ್ ನಿಯಮಗಳನ್ನು ಪಾಲನೆಯೊಂದಿಗೆ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ಪ್ರತಿಭಾನ್ವಿತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದೆ. ರಾಜ್ಯ ಮಟ್ಟದ ಈ ಯುವಜನೋತ್ಸವ ಕಾರ್ಯಕ್ರಮ ಮಂಡ್ಯ ಜಿಲ್ಲೆಯಲ್ಲಿ ಹೆಮ್ಮೆಯಾಗಿದ್ದು, ಇದನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಜನವರಿ 4-5 ರಂದು ನಡೆಯಲಿರುವ ರಾಜ್ಯ ಮಟ್ಟದ 'ಯುವ ಜನೋತ್ಸವ'ವನ್ನು ಯಶಸ್ವಿಗೊಳಿಸಬೇಕು. ಅದಕ್ಕೆ ಯಾವುದೇ ಕುಂದುಕೊರತೆ ಆಗದ ರೀತಿ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.@CMofKarnataka 1/4 pic.twitter.com/BzCEzaG1ZO
— Dr. Narayana Gowda / ಡಾ.ನಾರಾಯಣ ಗೌಡ (@narayanagowdakc) December 30, 2021
ಮಂಡ್ಯದಲ್ಲಿ ನಡೆದರೆ ಇಂಡಿಯಾದಲ್ಲಿ ನಡೆದಂತೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಮಂಡ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯಬೇಕು ಎಂದು ಸಚಿವರು ಕರೆ ನೀಡಿದರು. ಯುವಜನೋತ್ಸವದಲ್ಲಿ ಭಾಗಿಯಾಗುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಕ್ಲಿನಿಕ್ ಸ್ಥಾಪನೆ, ಅಂಬುಲೆನ್ಸ್ ಸೇವೆ, ಊಟ, ವಸತಿ ಸೇರಿದಂತೆ ಯಾವುದೇ ಕುಂದು ಕೊರತೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಶ್ವಥಿ ಸಚಿವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ನಾಳೆಯ ಕರ್ನಾಟಕ ಬಂದ್ ವಾಪಸ್
ಸಭೆಯಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ, ಜಿಲ್ಲಾಧಿಕಾರಿ ಅಶ್ವಥಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು: ಕಳೆದ ಮೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ಗೋಲ್ಡನ್ ಗರ್ಲ್ ಅಮೂಲ್ಯಗೆ ಇಂದು 24ನೇ ಜನ್ಮದಿನದ ಸಂಭ್ರಮ.
ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ `ಚೆಲುವಿನ ಚಿತ್ತಾರ’ ಸಿನಿಮಾದ ಮೂಲಕ ನಾಯಕಿಯಾಗಿ ಕರುನಾಡಿನ ಮನೆಮಗಳಾದ್ರು. 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಮೂಲ್ಯ, ಸದ್ಯ ವಿವಾಹ ಬಂಧನದಲ್ಲಿ ಬೆಚ್ಚಗಿದ್ದಾರೆ. ಇಂದು ಅವರ ಜನ್ಮದಿನದ ಪ್ರಯುಕ್ತ ನಾಗಮಂಗಲದ ಆದಿಚುಂಚನಗಿರಿಗೆ ಬೆಳಗ್ಗೆ 11ಗಂಟೆಗೆ ಭೇಟಿ ನೀಡಲಿದ್ದಾರೆ.
ಅಮೂಲ್ಯ ಅವರ ಮದುವೆ ಕೂಡ ಆದಿಚುಂಚನಗಿರಿಯಲ್ಲೇ ನಡೆದಿತ್ತು. ಈಗ ತಮ್ಮ ಹುಟ್ಟುಹಬ್ಬವನ್ನ ಕೂಡ ಆದಿಚುಂಚನಗರಿಯ ಕಾಲಭೈರವನ ಸನ್ನಿಧಿಯಲ್ಲಿ ಆಚರಿಸಿಕೊಳ್ಳುತ್ತಿರುವುದು ವಿಶೇಷ.
ಮಂಡ್ಯ: 2016ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ರಾಜ್ಯಕ್ಕೆ ಕೀರ್ತಿ ತಂದಿದ್ದ ಕೋಲಾರದ ಕೆ.ಆರ್. ನಂದಿನಿ ಅವರು ಶುಕ್ರವಾರ ಸಂಜೆ ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿಗಳ ಆರ್ಶೀವಾದ ಪಡೆದಿದ್ದಾರೆ.
ಕುಟಂಬ ಸಮೇತ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಕೆ.ಆರ್.ನಂದಿನಿ, ಮಠದಲ್ಲಿ ನಡೆದ ಪೌರ್ಣಿಮೆ ಪೂಜೆಯಲ್ಲಿ ಭಾಗವಹಿಸಿದ್ರು. ಬಳಿಕ ನಿರ್ಮಲಾನಂದನಾಥ ಸ್ವಾಮೀಜಿಗಳ ಆರ್ಶೀವಾದ ಪಡೆದ್ರು. ಪರೀಕ್ಷೆಯಲ್ಲಿ ಟಾಪರ್ ಆಗಿ ಅತ್ಯುತ್ತಮ ಸಾಧನೆ ಮಾಡಿದ ನಂದಿನಿ ಅವರನ್ನ ನಿರ್ಮಲಾನಂದನಾಥ ಸ್ವಾಮೀಜಿ ಅಭಿನಂದಿಸಿದ್ರು.
ಚಿನ್ನದ ಗಣಿ ನಾಡಿನ ಖ್ಯಾತಿಯ ಕೋಲಾರದ ಹೆಣ್ಣು ಮಗಳು ನಂದಿನಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಯುಪಿಎಸ್‍ಸಿ ಇತಿಹಾಸದಲ್ಲಿ ಎರಡನೇ ಬಾರಿಗೆ ಕನ್ನಡತಿಯೊಬ್ಬರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದಂತಾಗಿದೆ. ಕೋಲಾರ ಜಿಲ್ಲೆ ಕೆಂಬೋಡಿ ಗ್ರಾಮದ ಕೆ.ಆರ್ ನಂದಿನಿ ಸದ್ಯ ಹರ್ಯಾಣಾದ ಫರೀದಾಬಾದ್‍ನಲ್ಲಿ ಐ.ಆರ್.ಎಸ್ ತರಬೇತಿಯಲ್ಲಿದ್ದಾರೆ. ಕೆ.ಆರ್. ನಂದಿನಿ, ನಿವೃತ್ತ ಹೈಸ್ಕೂಲ್ ಶಿಕ್ಷಕರಾದ ರಮೇಶ್ ಅವರ ಪುತ್ರಿ.
ಕೋಲಾರದ ಚಿನ್ಮಯ ಸ್ಕೂಲ್‍ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ನಂದಿನಿ, ಪಿಯುಸಿಯನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೂರೈಸಿದರು. ನಂತ್ರ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಬಿಇ ಪದವಿ ಪಡೆದ್ರು. ನಂತರ ದೆಹಲಿ ಕರ್ನಾಟಕ ಭವನದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ರು. ಕಳೆದ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ 849ನೇ ಸ್ಥಾನ ಪಡೆದು ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾಗಿದ್ದರು. ಐಆರೆಸ್ ಅಧಿಕಾರಿಯಾಗಿದ್ದುಕೊಂಡೇ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಕೆ.ಆರ್. ನಂದಿನಿ ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಮಂಡ್ಯ: ನಟಿ ಅಮೂಲ್ಯ ಜಗದೀಶ್ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಆದಿಚುಂಚನಗಿರಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಅಮೂಲ್ಯ ಜಗದೀಶ್ ಕೈ ಹಿಡಿಯಲಿದ್ದಾರೆ.
ಆದಿಚುಂಚನಗಿರಿಯ ನಾಗಲಿಂಗನ ಸನ್ನಿಧಿಯಲ್ಲಿ ಮದುವೆ ನಡೆಯಲಿದ್ದು, ಅದ್ಧೂರಿ ಮಂಟಪ ಸಜ್ಜಾಗಿದೆ. ನಾನಾ ಬಗೆಯ ಪುಷ್ಪಗಳಿಂದ ಮಂಟಪವನ್ನ ಅಲಂಕರಿಸಲಾಗಿದೆ.
12 ರಿಂದ 12.30 ರ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ವಿವಾಹ ನಡೆಯಲಿದೆ. ಮೊದಲಿಗೆ ಸೋದರಮಾವನಿಂದ ವಧು ವರರಿಗೆ ಕಂಕಣ ಕಟ್ಟಿಸಲಾಯ್ತು. ಮಠದ ಕಲ್ಯಾಣಿಯಲ್ಲಿ ವರ ಮತ್ತು ವಧು ಕಡೆಯವರಿಂದ ನೀರು ತುಂಬುವ ಶಾಸ್ತ್ರ ನಡೆಯಿತು.ರಾತ್ರಿ ನಡೆದ ವರಪೂಜೆಯಲ್ಲಿ ಮನೆದೇವರ ಪ್ರಾರ್ಥನೆ ಮಾಡಿದ್ರು. ನಂತರ ಕಾಲಭೈರವೇಶ್ವರ ಪಾರ್ಥನೆ, ಮಹಾಗಣಪತಿ ಪೂಜೆ ಹಾಗೂ ಬಳೆ ಶಾಸ್ತ್ರ ನಡೆಯಿತು.
ಅಮೂಲ್ಯ ಅಣ್ಣ ದೀಪಕ್ ಹಾಗೂ ಅತ್ತಿಗೆ ವರ ಜಗದೀಶ್ ಕಾಲು ತೊಳೆದು ಕನ್ಯಾಧಾನ ಮಾಡಲಿದ್ದಾರೆ. ನಂತರ ಇಬ್ಬರಿಗೂ ಸಮನ್ ಮಾಲೆ, ಜೀರಿಗೆ ಬೆಲ್ಲ ಶಾಸ್ತ್ರ ನಡೆಯಲಿದೆ. ಬಳಿಕ ಮಾಂಗಲ್ಯ ಧಾರಣೆ ಮಾಡಲಾಗುತ್ತೆ. ಕುಟುಂಬ ಸದಸ್ಯರು ಮತ್ತು ಹತ್ತಿರದ ಬಂಧುಗಳು ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಸಿನಿಮಾ ಗಣ್ಯರು ಕಡಿಮೆ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಮದುವೆಗೆ ಸಾಕ್ಷಿಯಾಗಲಿದ್ದಾರೆ.
ಅಮೂಲ್ಯ ಮದುವೆ ಊಟದ ಮೆನು: ಬೆಳಗ್ಗೆ ಉಪಹಾರ: ಪೈನಾಪಲ್ ಕೇಸರಿ ಬಾತ್, ಖಾರಾಬಾತ್ , ಇಡ್ಲಿ ಚಟ್ನಿ, ಪೊಂಗಲ್, ಕಾಫಿ ಮಧ್ಯಾಹ್ನದ ಊಟ: ಅನ್ನ ಸಾರು, ರಸಂ , ಖರ್ಜುರ ಪಾಯಸ, ಫೇಣಿ, ಬೂಂದಿ ಲಾಡು, ಬಾದಾಮ್ ಹಲ್ವ, ಕಾಜು ಬರ್ಫಿ, ಮೆಂತೆ ರೋಟಿ, ಟೊಮೆಟೋ ಹಾಗಲಕಾಯಿ ಮಸಾಲೆ ಪಲ್ಯ, ಅಕ್ಕಿ ರೊಟ್ಟಿ, ಕಾಯಿ ಚಟ್ನಿ, ವೆಜ್ ಬಿರಿಯಾನಿ, ರಾಯಿತಾ, ಆಲು ಬೆಂಡೆ ಪಲ್ಯ, ಬೇಬಿ ಕಾರ್ನ್ ಮಂಚೂರಿ.