Tag: Adhyaksha In America

  • ಅಧ್ಯಕ್ಷ ಇನ್ ಅಮೆರಿಕಾ: ಗೆದ್ದು ಬೀಗಿತು ಶರಣ್-ರಾಗಿಣಿ ಜೋಡಿ!

    ಅಧ್ಯಕ್ಷ ಇನ್ ಅಮೆರಿಕಾ: ಗೆದ್ದು ಬೀಗಿತು ಶರಣ್-ರಾಗಿಣಿ ಜೋಡಿ!

    ಬೆಂಗಳೂರು: ಶರಣ್ ವರ್ಷಾಂತರಗಳ ಹಿಂದೆ ಅಧ್ಯಕ್ಷ ಎಂಬ ಚಿತ್ರದಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿಯೇ ಗೆದ್ದಿದ್ದರು. ಅವರು ಅಧ್ಯಕ್ಷ ಇನ್ ಅಮೆರಿಕಾ ಚಿತ್ರದಲ್ಲಿ ನಟಿಸೋ ಸುದ್ದಿ ಬಂದಾಗ ಪ್ರೇಕ್ಷಕರಿಗೆಲ್ಲ ನೆನಪಾಗಿದ್ದದ್ದು ಅಧ್ಯಕ್ಷನ ಗೆಲುವಿನ ಫ್ಲೇವರ್. ಈ ಸಿನಿಮಾ ಕೂಡಾ ಅಂಥಾದ್ದೇ ಗೆಲುವು ದಾಖಲಿಸುತ್ತೆ ಎಂಬ ನಂಬಿಕೆಯ ಹಿಮ್ಮೇಳದಲ್ಲಿಯೇ ಅಧ್ಯಕ್ಷ ಇನ್ ಅಮೆರಿಕಾ ತೆರೆ ಕಂಡಿತ್ತು. ಮೊದಲ ದಿನದಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಈ ಸಿನಿಮಾ ಇದೀಗ ದಸರೆಯ ಸಂಭ್ರಮದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಶರಣ್ ಮತ್ತು ರಾಗಿಣಿ ಜೋಡಿಯೂ ಮೋಡಿ ಮಾಡಿದೆ.

    ಇದು ಯೋಗಾನಂದ್ ಮುದ್ದಾನ್ ನಿರ್ದೇಶನ ಮಾಡಿರೋ ಚೊಚ್ಚಲ ಚಿತ್ರ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಸಿನಿಮಾ ಭರಪೂರ ಕ್ರೇಜ್ ಹುಟ್ಟು ಹಾಕಿತ್ತು. ಇದರ ಪ್ರಧಾನ ಆಕರ್ಷಣೆಯಾಗಿದ್ದದ್ದು ಶರಣ್ ಮತ್ತು ರಾಗಿಣಿ ಜೋಡಿ. ಮೊದಲ ಸಲ ರಾಗಿಣಿ ಶರಣ್ ಜೋಡಿಯಾಗಿ ನಟಿಸಿದ್ದಾರೆ. ಇದರಲ್ಲಿ ರಾಗಿಣಿ ಈ ಹಿಂದೆಂದೂ ಕಾಣಿಸಿಕೊಳ್ಳದಿರೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಗಿಣಿ ಈವರೆಗೂ ಬಬ್ಲಿ ಹುಡುಗಿಯ ಪಾತ್ರ ಮಾತ್ರವಲ್ಲದೇ ಮಾಸ್ ಅವತಾರದಲ್ಲಿಯೂ ಮಿಂಚಿದ್ದಾರೆ. ಅವರು ಈ ಚಿತ್ರದಲ್ಲಿ ಕಾಮಿಡಿಯನ್ನೂ ಮಾಡಿದ್ದಾರೆ. ಈ ಕಾರಣದಿಂದಲೇ ರಾಗಿಣಿ ಮತ್ತು ಶರಣ್ ಜೋಡಿ ಪ್ರೇಕ್ಷಕರ ಮನಗೆದ್ದಿದೆ.

    ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರ ಮೊದಲ ಪ್ರಯತ್ನವಾದ ಅಧ್ಯಕ್ಷ ಇನ್ ಅಮೆರಿಕಾ ಇದೀಗ ಎಲ್ಲ ಸೆಂಟರುಗಳಲ್ಲಿಯೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾಮಾನ್ಯವಾಗಿ ದಸರೆ ಸೇರಿದಂತೆ ಯಾವ ರಜೆಗಳು ಬಂದಾಗಲೂ ಜನ ಕುಟುಂಬ ಸಮೇತರಾಗಿ ಹೋಗಿ ನೋಡುವಂಥಾ ಚೆಂದದ ಚಿತ್ರಕ್ಕಾಗಿ ಹುಡುಕಾಡುತ್ತಾರೆ. ಆದರೆ ಈ ಬಾರಿ ಹುಡುಕೋ ಗೋಜೇ ಇಲ್ಲದಂತೆ ದಸರೆಗೆ ಗಿಫ್ಟ್ ಎಂಬಂತೆ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ ತೆರೆಕಂಡಿತ್ತು. ರಜೆಯ ಸಂದರ್ಭದಲ್ಲಿ ಹೆಚ್ಚೆಚ್ಚು ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರದತ್ತ ಧಾವಿಸಿದ್ದರಿಂದಾಗಿ ಈ ಸಿನಿಮಾ ಕಲೆಕ್ಷನ್ನಿನಲ್ಲಿಯೂ ಮಿರುಗುವಂತಾಗಿದೆ. ಈ ಮೂಲಕ ಚಿತ್ರತಂಡದ ಪರಿಶ್ರಮಕ್ಕೂ ಗೆಲುವು ಸಿಕ್ಕಿದೆ.

  • ಅಮೆರಿಕ ಪಾಲಾದ ಅಧ್ಯಕ್ಷನ ಸಖಿ ರಾಗಿಣಿ!

    ಅಮೆರಿಕ ಪಾಲಾದ ಅಧ್ಯಕ್ಷನ ಸಖಿ ರಾಗಿಣಿ!

    ಬೆಂಗಳೂರು: ವೀರಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ರಾಗಿಣಿ ದ್ವಿವೇದಿ. ಚಿಗರೆಯಂತೆ ಕನ್ನಡಕ್ಕಾಗಮಿಸಿ ಇಲ್ಲಿಯೇ ನೆಲೆ ಕಂಡುಕೊಂಡಿರೋ ರಾಗಿಣಿ ಆ ನಂತರದಲ್ಲಿಯೂ ಸಾಕಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಥರ ಥರದ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಮೂಲಕವೇ ಕನ್ನಡ ಪ್ರೇಕ್ಷಕರ ಮನ ಗೆದ್ದಿರೋ ರಾಗಿಣಿಯೀಗ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲಕ ಶರಣ್‍ಗೆ ಜೋಡಿಯಾಗಿ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

    ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಯೋಗಾನಂದ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿನ ನಾಯಕಿ ಪಾತ್ರವನ್ನು ರಾಗಿಣಿ ಬಿಟ್ಟರೆ ಬೇರೆ ಯಾರೂ ನಿರ್ವಹಿಸೋದು ಕಷ್ಟ ಎಂಬ ಬಗ್ಗೆ ನಿರ್ದೇಶಕರು ಮತ್ತು ಚಿತ್ರತಂಡ ಆರಂಭದಲ್ಲಿಯೇ ಫಿಕ್ಸಾಗಿತ್ತಂತೆ. ಯಾಕೆಂದರೆ ಅದರ ಚಹರೆ ರಾಗಿಣಿ ಪಾಲಿಗೆ ಪಕ್ಕಾ ಸೂಟ್ ಆಗುವಂತಿತ್ತು. ಆದರೆ ರಾಗಿಣಿ ಪಾಲಿಗದು ನಿಜಕ್ಕೂ ಸವಾಲಿನ ಪಾತ್ರವಾಗಿತ್ತು!

    ಯಾಕೆಂದರೆ ಈ ಪಾತ್ರಕ್ಕೂ ಕಾಮಿಡಿ ಶೇಡುಗಳಿವೆ. ಕಮರ್ಶಿಯಲ್ ಸಿನಿಮಾಗಳಲ್ಲಿ ಗ್ಲಾಮರ್ ಗೊಂಬೆಯಂತೆ ಮಿಂಚಿದ ಯಾರಿಗೇ ಆದರೂ ಏಕಾಏಕಿ ಕಾಮಿಡಿ ಟಚ್ ಇರೋ ಪಾತ್ರಗಳನ್ನು ಮಾಡಬೇಕಾಗಿ ಬಂದಾಗ ಕಸಿವಿಸಿ ಕಾಡುತ್ತೆ. ಯಾಕೆಂದರೆ ಕಾಮಿಡಿ ಟೈಮಿಂಗ್ ಅನ್ನು ಹಠಾತ್ತನೆ ಫಾಲೋ ಮಾಡೋದು ಬಲು ಕಷ್ಟದ ಕೆಲಸ. ಆದರೂ ರಾಗಿಣಿ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಗೆದ್ದಿದ್ದಾರೆ. ಒಂದಷ್ಟು ತಯಾರಿಯೊಂದಿಗೆ ಅವರು ಹಾಸ್ಯರಸ ಹೊಂದಿರೋ ಪಾತ್ರದ ಮೂಲಕ ಶರಣ್‍ಗೆ ಸರಿಯಾಗಿಯೇ ಸಾಥ್ ಕೊಟ್ಟಿದ್ದಾರಂತೆ. ರಾಗಿಣಿ ಯಾವ ಥರದ ಪಾತ್ರದಲ್ಲಿ ನಟಿಸಿದ್ದಾರೆಂಬ ವಿಚಾರ ಈ ವಾರವೇ ಜಾಹೀರಾಗಲಿದೆ.

  • ಅಮೆರಿಕ ಪಾಲಾದ ಅಧ್ಯಕ್ಷ ಶರಣ್‍ರ ಹೊಸ ಗೆಟಪ್!

    ಅಮೆರಿಕ ಪಾಲಾದ ಅಧ್ಯಕ್ಷ ಶರಣ್‍ರ ಹೊಸ ಗೆಟಪ್!

    ಬೆಂಗಳೂರು: ಹಾಸ್ಯ ಕಲಾವಿದರಾಗಿದ್ದ ಕಾಲದಿಂದ ಮೊದಲ್ಗೊಂಡು, ನಾಯಕ ನಟನಾಗಿರೋ ಈ ಕಾಲದವರೆಗೂ ಶರಣ್ ನಿರ್ವಹಿಸಿರುವ ಪಾತ್ರಗಳೇ ವೈವಿಧ್ಯಮಯವಾದದ್ದು. ಯಾವ ಪಾತ್ರಗಳಿಗೇ ಆದರೂ ಒಗ್ಗಿಕೊಳ್ಳುವ, ನ್ಯಾಯ ಸಲ್ಲಿಸುವ ಛಾತಿಯೇ ಶರಣ್ ಅವರನ್ನು ನಾಯಕನನ್ನಾಗಿಯೂ ನೆಲೆಗಾಣಿಸಿರೋದರಲ್ಲಿ ಯಾವ ಸಂದೇಹವೂ ಇಲ್ಲ. ಅವರು ಹಾಸ್ಯ ಪ್ರಧಾನ ಪಾತ್ರಗಳಿಗೇ ಪ್ರಸಿದ್ಧಿ ಪಡೆದುಕೊಂಡಿರುವವರು. ಆದರೆ ಹಾಸ್ಯದಾಚೆಯ ಪಾತ್ರಗಳಿಗೂ ಕೂಡ ಅಚ್ಚರಿದಾಯಕವಾಗಿ ನ್ಯಾಯ ಸಲ್ಲಿಸೋ ಶಕ್ತಿ ಶರಣ್ ಅವರಿಗಿದೆ. ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದಲ್ಲಿ ಶರಣ್ ಅವರನ್ನು ಅಂತಹ ಭಿನ್ನ ಪಾತ್ರದಲ್ಲಿ ನೋಡೋ ಭಾಗ್ಯ ಖಂಡಿತಾ ಅವರ ಅಭಿಮಾನಿ ಪ್ರೇಕ್ಷಕರಿಗೆ ಸಿಗಲಿದೆ.

    ಈ ಚಿತ್ರದ ಕಥೆಯಲ್ಲಿಯೇ ಶರಣ್ ಅವರನ್ನು ಈವರೆಗಿನದಕ್ಕಿಂತಲೂ ಭಿನ್ನವಾಗಿ ತೋರಿಸೋ ವಿಪುಲ ಅವಕಾಶಗಳಿದ್ದವಂತೆ. ಅಷ್ಟಕ್ಕೂ ನವ ನಿರ್ದೇಶಕ ಯೋಗಾನಂದ್ ಆರಂಭ ಕಾಲದಿಂದಲೂ ತಾನು ಶರಣ್ ಅವರಿಗೊಂದು ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಹೊಂದಿದ್ದವರು. ಇದಲ್ಲದೇ ಶರಣ್ ಅವರನ್ನು ಈವರೆಗಿನದ್ದಕ್ಕಿಂತಲೂ ಬೇರೆಯದ್ದೇ ಥರದ ಪಾತ್ರದಲ್ಲಿ ತೋರಿಸಬೇಕೆಂಬ ಹಂಬಲವೂ ಅವರದ್ದಾಗಿತ್ತು. ಕಡೆಗೂ ಮೊದಲ ಚಿತ್ರದಲ್ಲಿಯೇ ಅದು ಸಾಕಾರಗೊಂಡಂತಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಮತ್ತು ಟಿ.ಜಿ ವಿಶ್ವಪ್ರಸಾದ್ ಅವರ ಸಾಥ್‍ನೊಂದಿಗೆ ಯೋಗಾನಂದ್ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಶರಣ್ ಈವರೆಗಿನ ಪಾತ್ರಗಳಿಗಿಂತಲೂ ಭಿನ್ನವಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂದಾಕ್ಷಣ ಅವರ ಪಾತ್ರಕ್ಕೆ ಹಾಸ್ಯದ ಟಚ್ ಕಡಿಮೆ ಇದೆಯಾ ಎಂಬಂಥಾ ಅನುಮಾನ ಕಾಡೋದು ಸಹಜವೇ. ಅವರ ಪಾತ್ರ ಹಾಸ್ಯಕ್ಕೇನೂ ತತ್ವಾರ ಮಾಡೋದಿಲ್ಲ. ಆದರೆ ಆ ಪಾತ್ರ ಈವರೆಗೂ ಶರಣ್ ನಿರ್ವಹಿಸಿರೋ ಪಾತ್ರಗಳಂತಿಲ್ಲ. ಅದಕ್ಕೆ ಭಿನ್ನವಾದ ಶೇಡುಗಳಿವೆ. ಅದೆಲ್ಲವೂ ಕೂಡಾ ಶರಣ್ ಅಭಿಮಾನಿಗಳನ್ನೂ ಥ್ರಿಲ್ ಆಗಿಸುವಂತಿವೆ ಎಂಬ ಭರವಸೆ ನಿರ್ದೇಶಕ ಯೋಗಾನಂದ್ ಅವರಿಗಿದೆ. ಶರಣ್ ಕೂಡ ಆಗಾಗ ಈ ಬದಲಾವಣೆಯ ಸುಳಿವು ನೀಡುತ್ತಾ ಬಂದಿದ್ದಾರೆ. ಇದೆಲ್ಲದರ ನಿಜವಾದ ಹೂರಣ ಈ ವಾರವೇ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

  • ಅಧ್ಯಕ್ಷ ಇನ್ ಅಮೆರಿಕಾ: ಮೈಸೂರು ಸೀಮೆಯ ಹಳ್ಳಿಯ ನಂಟು!

    ಅಧ್ಯಕ್ಷ ಇನ್ ಅಮೆರಿಕಾ: ಮೈಸೂರು ಸೀಮೆಯ ಹಳ್ಳಿಯ ನಂಟು!

    ಬೆಂಗಳೂರು: ಅಧ್ಯಕ್ಷ ಎಂಬ ಚಿತ್ರದ ಮೂಲಕವೇ ನಾಯಕನಾಗಿ ದೊಡ್ಡ ಮಟ್ಟದ ಗೆಲುವು ಗಿಟ್ಟಿಸಿಕೊಂಡಿರುವವರು ಶರಣ್. ಈ ಶೀರ್ಷಿಕೆ ಅವರ ಪಾಲಿಗೆ ಲಕ್ಕಿ ಎಂಬ ನಂಬಿಕೆಯೂ ಇದೆ. ಅದೇ ನಂಬಿಕೆಯೊಂದಿಗೇ ಅವರ ಹೊಸಾ ಚಿತ್ರಕ್ಕೆ ಅಮೆರಿಕಾ ಇನ್ ಅಧ್ಯಕ್ಷ ಎಂಬ ನಾಮಕರಣವನ್ನೂ ಮಾಡಿ ಅದು ಈ ವಾರ ಅದ್ದೂರಿಯಾಗಿ ತೆರೆಗಾಣಲು ರೆಡಿಯಾಗಿದೆ. ಖುದ್ದು ಶರಣ್ ಅವರೇ ಭಾರೀ ಭರವಸೆ ಹೊಂದಿರೋ ಈ ಸಿನಿಮಾ ಮೇಲೆ ಪ್ರೇಕ್ಷಕರಲ್ಲಿಯೂ ಅಂಥಾದ್ದೇ ಭಾವನೆ ಇದೆ. ಆದ್ದರಿಂದಲೇ ಅಮೆರಿಕ ಸೇರಿಕೊಂಡ ಅಧ್ಯಕ್ಷನನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.

    ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಮೂಲಕ ಟಿಜಿ ವಿಶ್ವಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯೋಗಾನಂದ ನಿರ್ದೇಶನದ ಮೊದಲ ಚಿತ್ರವಾಗಿಯೂ ಅಧ್ಯಕ್ಷ ಇನ್ ಅಮೆರಿಕಾ ಮೂಡಿ ಬಂದಿದೆ. ಹಲವಾರು ವರ್ಷಗಳ ಕಾಲ ಕಿರುತೆರೆ ಲೋಕದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾ, ಸಿನಿಮಾ ಬಗ್ಗೆ ಕನಸಿಟ್ಟುಕೊಂಡಿದ್ದ ಯೋಗಾನಂದ್ ಪಾಲಿಗೆ ಶರಣ್ ಅವರಿಗಾಗಿ ಸಿನಿಮಾ ಮಾಡಬೇಕೆಂಬುದು ಹಲವಾರು ವರ್ಷಗಳ ಕನಸಾಗಿತ್ತಂತೆ. ಆ ಅವಕಾಶ ಈ ಸಿನಿಮಾ ಮೂಲಕ ಅವರ ಪಾಲಿಗೆ ತಾನೇ ತಾನಾಗಿ ಕೂಡಿ ಬಂದಿದೆ.

    ಇದು ಮೇಲುನೋಟಕ್ಕೆ ರೀಮೇಕ್‍ನಂತೆ ಕಂಡರೂ ನಿರ್ದೇಶಕರು ಇದನ್ನು ಸಂಪೂರ್ಣವಾಗಿಯೇ ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ರೂಪಿಸಿದ್ದಾರಂತೆ. ಮಜವಾದ ಕಥೆ ಹೊಂದಿರೋ ಅಧ್ಯಕ್ಷನ ವೃತ್ತಾಂತಕ್ಕೂ ಮೈಸೂರು ಸೀಮೆಯ ಹಳ್ಳಿಗೂ ನೇರಾನೇರ ಸಂಬಂಧಗಳಿವೆಯಂತೆ. ಆದರೆ ಈ ಬಗ್ಗೆ ಹೆಚ್ಚಿನ ಯಾವ ಮಾಹಿತಿಯನ್ನೂ ಕೂಡಾ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಆದರೆ, ಈವರೆಗೆ ಸದರಿ ಸಿನಿಮಾ ಬಗ್ಗೆ ಯಾವ ಥರದ ನಿರೀಕ್ಷೆಗಳು ಮೂಡಿಕೊಂಡಿವೆಯೋ, ಅದೆಲ್ಲವನ್ನು ಮೀರಿಸುವಂಥಾ ಸೊಗಸಿನೊಂದಿಗೆ ಇಡೀ ಚಿತ್ರ ಮೂಡಿ ಬಂದಿದೆ ಅನ್ನೋ ಭರವಸೆ ಚಿತ್ರತಂಡದಲ್ಲಿದೆ.

  • ಅಮೆರಿಕ ಪಾಲಾದ ಅಧ್ಯಕ್ಷನ ಡ್ಯುಯೆಟ್ ಸಾಂಗ್!

    ಅಮೆರಿಕ ಪಾಲಾದ ಅಧ್ಯಕ್ಷನ ಡ್ಯುಯೆಟ್ ಸಾಂಗ್!

    ಬೆಂಗಳೂರು: ಶರಣ್ ಮತ್ತು ರಾಗಿಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇದೆ. ಚಿತ್ರೀಕರಣವನ್ನೆಲ್ಲ ಸುಸೂತ್ರವಾಗಿ ಮುಗಿಸಿಕೊಂಡು ಬಿಡುಗಡೆಯ ಹಂತದಲ್ಲಿರುವ ಈ ಸಿನಿಮಾದ ಹಾಡೊಂದು ಇದೀಗ ಬಿಡುಗಡೆಯಾಗಿದೆ. ಕಾಶಿನಾಥ್ ನಿರ್ದೇಶನದ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಚಿತ್ರದ ಅಮ್ಮಾ ನಾ ಸೇಲಾದೆ, ಅಮೆರಿಕಾ ಪಾಲಾದೆ ಎಂಬ ಹಾಡಿನ ಸಾಲುಗಳನ್ನೇ ಇಟ್ಟುಕೊಂಡು ಹೊಸ ಬಗೆಯಲ್ಲಿ ಸದರಿ ಹಾಡನ್ನು ರೂಪಿಸಲಾಗಿದೆ.

    ಕವಿರತ್ನ ಡಾ.ವಿ. ನಾಗೇಂದ್ರ ಪ್ರಸಾದ್ ಈ ಹಾಡನ್ನು ರಚಿಸಿದ್ದಾರೆ. ಅಮ್ಮಾ ನಾ ಸೇಲಾದೆ ಅಮೆರಿಕಾ ಪಾಲಾದೆ ಎಂಬ ಸಾಲುಗಳನ್ನಿಟ್ಟುಕೊಂಡು ಹೊಸ ಬಗೆಯಲ್ಲಿ ಈ ಹಾಡಿನ ಸಾಹಿತ್ಯವನ್ನು ರಚಿಸಲಾಗಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಈ ಹಾಡು ಟಿಪ್ಪು ಧ್ವನಿಯಲ್ಲಿ ಮೂಡಿ ಬಂದಿದೆ. ಈ ವೀಡಿಯೋ ಸಾಂಗಲ್ಲಿ ಶರಣ್ ಮತ್ತು ರಾಗಿಣಿ ಜೋಡಿ ಮಸ್ತ್ ಆಗಿ ಕಾಣಿಸಿಕೊಂಡಿದೆ.

    ಅಧ್ಯಕ್ಷ ಇನ್ ಅಮೆರಿಕಾ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಯೋಗಾನಂದ್ ಮುದ್ದಾನ್ ನಿರ್ದೇಶನ ಮಾಡಿರೋ ಈ ಚಿತ್ರವನ್ನು ವಿಶ್ವಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಶರಣ್ ಚಿತ್ರಗಳೆಂದ ಮೇಲೆ ಭರ್ಜರಿ ಮನೋರಂಜನೆ ಗ್ಯಾರೆಂಟಿ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಆದರೆ ನಿರ್ದೇಶಕರು ಈ ಚಿತ್ರವನ್ನು ಶರಣ್ ಅವರ ಈವರೆಗಿನ ಚಿತ್ರಗಳಿಗಿಂತಲೂ ಭಿನ್ನವಾಗಿ ರೂಪಿಸಿದ್ದಾರಂತೆ. ಈಗ ಹೊರ ಬಂದಿರೋ ಹಾಡಿನ ಮೂಲಕ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ ಬಿಡುಗಡೆಯ ಹಂತದಲ್ಲಿ ಮತ್ತೆ ಸದ್ದು ಮಾಡಲಾರಂಭಿಸಿದೆ.