Tag: Adheera

  • ಪಂಜಾಬಿ ಸಿನಿಮಾದತ್ತ ‘ಕೆಜಿಎಫ್ 2’ ನಟ ಸಂಜಯ್‌ ದತ್

    ಪಂಜಾಬಿ ಸಿನಿಮಾದತ್ತ ‘ಕೆಜಿಎಫ್ 2’ ನಟ ಸಂಜಯ್‌ ದತ್

    ಬಾಲಿವುಡ್ ನಟ ಸಂಜಯ್ ದತ್‌ (Sanjay Dutt) ಅವರು ಇದೀಗ ದಕ್ಷಿಣ ಭಾರತದ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ‘ಕೆಜಿಎಫ್ 2’ (KGF 2) ಸಿನಿಮಾದ ಸಕ್ಸಸ್ ನಂತರ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟ ಮಿಂಚ್ತಿದ್ದಾರೆ. ಈ ಬೆನ್ನಲ್ಲೇ ಪಂಜಾಬಿ ಸಿನಿಮಾಗೆ ಸಂಜಯ್ ದತ್ ಓಕೆ ಎಂದಿದ್ದಾರೆ. ಇದನ್ನೂ ಓದಿ:ರಾಜೀವ್ ಅಭಿನಯದ ‘ಉಸಿರೇ ಉಸಿರೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಹಿಂದಿ ಚಿತ್ರರಂಗದಲ್ಲಿ ಸಂಜಯ್ ದತ್‌ಗೆ ಬೇಡಿಕೆಯಿದೆ. ಆದರೆ ಕೆಜಿಎಫ್ 2 ಸಿನಿಮಾದ ಯಶಸ್ಸಿನ ನಂತರ ಸಂಜಯ್ ದತ್ ವೃತ್ತಿ ಬದುಕನ್ನ ನೋಡುವ ರೀತಿ ಬದಲಾಗಿದೆ. ಪ್ರಸ್ತುತ ಜವಾನ್, ತಮಿಳಿನ ಲಿಯೋ, ತೆಲುಗಿನ ಡಬಲ್ ಇಸ್ಮಾರ್ಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಧೀರ ಬ್ಯುಸಿಯಾಗಿದ್ದಾರೆ.

    ಕಥೆ ಮತ್ತು ಪಾತ್ರಕ್ಕೆ ಹೆಚ್ಚು ಒತ್ತು ಕೊಡ್ತಿರೋ ಸಂಜಯ್ ದತ್, ಈಗ ಪಂಜಾಬಿ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಡೈರೆಕ್ಟರ್ ಗಿಪ್ಪಿ ಗ್ರೆವಾಲ್ (Gippy Grewal) ಚಿತ್ರದ ಕಥೆ ಇಷ್ಟವಾಗಿ, ಸಂಜಯ್ ಓಕೆ ಎಂದಿದ್ದಾರೆ ಈ ಮೂಲಕ ಪಂಜಾಬಿ ಸಿನಿಮಾ ರಂಗಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡ್ತಿದ್ದಾರೆ. ಚಿತ್ರಕ್ಕೆ ‘ಶೆರಾನ್‌ ದಿ ಕಮ್‌ ಪಂಜಾಬಿ’  ಎಂದು ಟೈಟಲ್‌ ಫಿಕ್ಸ್‌ ಮಾಡಲಾಗಿದೆ. ಸಂಜಯ್‌ ದತ್‌ ಪಾತ್ರದ ಬಗ್ಗೆಯಾಗಲಿ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಪಂಜಾಬಿ (Panjabi Films) ಸಿನಿಮಾರಂಗದಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಗಿಪ್ಪಿ ಜೊತೆ ಕೈ ಜೋಡಿಸಿರೋದರ ಬಗ್ಗೆ ಸಂಜಯ್ ದತ್ ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಭಾಷೆಗೆ ಆಧ್ಯತೆ ಅನ್ನೊದಕ್ಕಿಂತ ಕಥೆ ಮತ್ತು ಪಾತ್ರಕ್ಕೆ ಮಹತ್ವ ಕೊಡ್ತಾರೆ ಅನ್ನೋದನ್ನ ನಟ ಸಂಜಯ್ ದತ್ ಪ್ರೂವ್ ಮಾಡಿದ್ದಾರೆ. ಒಟ್ನಲ್ಲಿ ಅಧೀರನ ನಯಾ ಅವತಾರವನ್ನ ತೆರೆಯ ಮೇಲೆ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಬಾಹುಬಲಿ’ ಪ್ರಭಾಸ್ ಚಿತ್ರಕ್ಕೆ ಸಂಜಯ್ ದತ್ ಎಂಟ್ರಿ

    `ಬಾಹುಬಲಿ’ ಪ್ರಭಾಸ್ ಚಿತ್ರಕ್ಕೆ ಸಂಜಯ್ ದತ್ ಎಂಟ್ರಿ

    `ಕೆಜಿಎಫ್ 2′ (Kgf 2) ಸಿನಿಮಾದ ಸಕ್ಸಸ್ ನಂತರ ಸಂಜಯ್ ದತ್ ಹೆಚ್ಚೆಚ್ಚು ದಕ್ಷಿಣ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಧ್ರುವ ಸರ್ಜಾ ನಟನೆಯ `ಕೆಡಿ’ (KD) ನಂತರ ಇದೀಗ ಸಂಜಯ್ ದತ್ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಪ್ರಭಾಸ್ ಜೊತೆಗೆ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಬಾಲಿವುಡ್‌ನಲ್ಲಿ (Bollywood) ನಟನಾಗಿ ಮಿಂಚಿದವರು ಸಂಜಯ್ ದತ್, ಕನ್ನಡದ `ಕೆಜಿಎಫ್’ 2ನಲ್ಲಿ (Kgf 2) ಯಶ್‌ಗೆ ವಿಲನ್ ಆಗಿ ಮಿಂಚಿದ್ದರು. ಇದಾದ ಬಳಿಕ ಸಂಜಯ್ ದತ್ ಈಗ ಭರ್ಜರಿ ಡಿಮ್ಯಾಂಡ್‌ನಲ್ಲಿ ಸೌತ್ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ ಜೊತೆ `ಕೆಡಿ’, ನಂತರ ತಮಿಳಿನ ನಟ ವಿಜಯ್ ಸಿನಿಮಾದಲ್ಲೂ ಸಂಜಯ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಪ್ರಭಾಸ್ ಸಿನಿಮಾಗೆ ಅಧೀರ ಸಾಥ್ ಕೊಡುತ್ತಿದ್ದಾರೆ. ಇದನ್ನೂ ಓದಿ: ನನ್ನ- ಮಹೇಶ್ ಬಾಬು ನಡುವಿನ ಜಗಳಕ್ಕೆ ಕಾರಣ ಯಾರು ಎಂದು ಬಿಚ್ಚಿಟ್ಟ ನಮ್ರತಾ ಶಿರೋಡ್ಕರ್

    ಮಾರುತಿ (Maruti) ನಿರ್ದೇಶನದ ಹೊಸ ಚಿತ್ರದಲ್ಲಿ ಪ್ರಭಾಸ್ ಈಗಾಗಲೇ ನಟಿಸಿದ್ದು, ಈ ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಬಾರಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿಲ್ಲ, ಬದಲಾಗಿ ಬಹುಮುಖ್ಯ ಪಾತ್ರದಲ್ಲಿ ಡಾರ್ಲಿಂಗ್ ನಟನಿಗೆ ಸಾಥ್ ನೀಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಚಂದನವನಕ್ಕೆ ಪ್ರವೇಶ ನೀಡಿರುವ ಸಂಜಯ್ ದತ್ ನಟನೆಯ ಅಧೀರನ ಲುಕ್ ಇಂದು ಅನಾವರಣಗೊಂಡಿದೆ.

    ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆ ಹೊಂಬಾಳೆ ಫಿಲಂಸ್ ಅಧೀರನ ಪೋಸ್ಟರ್ ಬಿಡುಗಡೆ ಮಾಡಿದೆ. ಕೈಯಲ್ಲಿ ಕತ್ತಿ ಹಿಡಿದು ಏನೋ ಯೋಚಿಸೋ ರೀತಿಯಲ್ಲಿ ಅಧೀರ ಕುಳಿತಿದ್ದು, ಫೋಟೋ ಸೋಶಿಯ್ ಮೀಡಿಯಾದಲ್ಲಿ ಧಗ ಧಗಿಸುತ್ತಿದೆ. ಇದರ ಜೊತೆಗೆ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಯೋಧ ಎಂದು ಬರೆಯಲಾಗಿದೆ.

    ಎರಡು ದಿನಗಳ ಹಿಂದೆ ಕೆಜಿಎಫ್ ಅಂಗಳದಿಂದ ದೊಡ್ಡ ಸುದ್ದಿ ಹೊರ ಬೀಳುವ ಮುನ್ಸೂಚನೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದರು. ರಾಕಿಯ ಜೊತೆಗಿನ ಯದ್ಧ ಅಧೀರನ ಯುದ್ಧ ಬಲುರೋಚಕವಾಗಿರಲಿದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ. ಗರುಡನನ್ನ ಮುಗಿಸುವ ರಾಕಿಯ ಮುಂದಿನ ಯುದ್ಧ ಅಧೀರನೊಂದಿಗೆ ಇರಲಿದೆ. ಸಾವಿರಾರು ಜನರ ನಾಯಕನಾಗಿ ರಾಕಿ ಹೇಗೆ ತನ್ನ ಹೊಸ ಸಾಮ್ರಾಜ್ಯ ಕಟ್ಟಲಿದ್ದಾನೆ ಎಂಬು ಚಾಪ್ಟರ್-2ರಲ್ಲಿ ರಿವೀಲ್ ಆಗಲಿದೆ.

  • ತೆರೆಮರೆಯಲ್ಲಿದ್ದ ಖಳನಾಯಕ ಅಧೀರನ ರಗಡ್ ಲುಕ್ ರಿವೀಲ್

    ತೆರೆಮರೆಯಲ್ಲಿದ್ದ ಖಳನಾಯಕ ಅಧೀರನ ರಗಡ್ ಲುಕ್ ರಿವೀಲ್

    ಬೆಂಗಳೂರು: ‘ಕೆಜಿಎಫ್ ಚಾಪ್ಟರ್-2’ ಚಿತ್ರತಂಡ ಇಂದು ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಧೀರ ಯಾರಾಗಿರುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಅಧಿಕೃತವಾಗಿ ಸಿನಿಮಾ ಖಳನಾಯಕ ಅಧೀರನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

    ಹೊಂಬಾಳೆ ಫಿಲ್ಮ್ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ರಿಲೀಸ್ ಆಗಿದ್ದು, ಅಧೀರ ಯಾರಾಗುತ್ತಾರೆ ಎಂದು ಮೊದಲೇ ಊಹಿಸಿದ ರೀತಿಯಲ್ಲಿಯೇ ಬಾಲಿವುಡ್ ನಟ ಸಂಜಯ್ ದತ್ ಅವರೇ ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇಂದು ಸಂಜಯ್ ದತ್ ಅವರ ಹುಟ್ಟುಹಬ್ಬವಾಗಿದೆ. ಈ ಪ್ರಯುಕ್ತ ಚಿತ್ರತಂಡ ಅವರ ಪಾತ್ರದ ಮೊದಲ ಲುಕ್ ಬಿಡುಗಡೆ ಮಾಡುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಿದೆ. ಪೋಸ್ಟರ್‌ನಲ್ಲಿ ಸಂಜಯ್ ದತ್ ಅವರು ತಮ್ಮ ಅರ್ಧ ಮುಖವನ್ನು ಕವರ್ ಮಾಡಿಕೊಂಡಿದ್ದು, ಭಯಾನಕ ಲುಕ್ ಕೊಟ್ಟಿದ್ದಾರೆ. ಜೊತೆಗೆ ಹಿಂದೆ ನೂರಾರು ಮಂದಿ ಇರುವುದನ್ನು ಕಾಣಬಹುದಾಗಿದೆ.

    ಪೋಸ್ಟರ್‌ನಲ್ಲಿ ಸಂಜಯ್ ದತ್ ಈಗ ಅಧೀರ ಎಂದು ಬರೆಯಲಾಗಿದೆ. ಸಂಜಯ್ ಅವರ ಲುಕ್ ರಿಲೀಸ್ ಮಾಡಿ ಚಿತ್ರತಂಡ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದೆ.

    ಈ ಹಿಂದೆ ಹೊಂಬಾಳೆ ಫಿಲಂಸ್ ತನ್ನ ಟ್ವಿಟ್ಟರ್ `ಕೆಜಿಎಫ್ ಚಾಪ್ಟರ್-2′ ಸಿನಿಮಾದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ಮತ್ತೊಂದು ಬಿಗ್ ನ್ಯೂಸ್‍ಗೆ ಕಾಯುವಂತೆ ಅಭಿಮಾನಿಗಳಿಗೆ ತಿಳಿಸಿತ್ತು. ಅದರಲ್ಲಿ ಎರಡು ಕೈಗಳನ್ನು ಹಿಂದೆ ಹಿಡಿದಿರುವ ಅಧೀರನ ಪೋಸ್ಟರ್ ಆಗಿತ್ತು.

    ಯಾರು ಈ ಅಧೀರ?
    ಕೆಜಿಎಫ್ ಸಿನಿಮಾದಲ್ಲಿ ಖಳನಾಯಕ ಸೂರ್ಯವರ್ಧನ್ ಬರುತ್ತಾನೆ. ಆತನ ಸಹೋದರನೇ ಅಧೀರ. ಆದರೆ ಮೊದಲ ಭಾಗದಲ್ಲಿ ಅಧೀರನ ಪಾತ್ರ ಕೆಲವೇ ನಿಮಿಷವಿತ್ತು. ಅಷ್ಟೇ ಅಲ್ಲದೇ ಆತನ ಮುಖವನ್ನು ತೋರಿಸಿರಲಿಲ್ಲ. ಸೂರ್ಯವರ್ಧನ್ ಸಾವಿನ ನಂತರ ಗರುಡ ಅಧಿಕಾರಕ್ಕೆ ಬರುತ್ತಾನೆ. ಆಗ ರಾಕಿ ಭಾಯ್‍ಗೆ ಸುಪಾರಿ ಕೊಟ್ಟು ಗರುಡನನ್ನು ಕೊಲೆ ಮಾಡಿಸಿದ್ದನು. ಇದೀಗ `ಕೆಜಿಎಫ್ ಚಾಪ್ಟರ್ 2′ ಸಿನಿಮಾದಲ್ಲಿ ಅಧೀರ ಬರುತ್ತಾನೆ.