Tag: Address

  • ವಿಳಾಸ ಕೇಳುವ ನೆಪದಲ್ಲಿ ಕಿರುಕುಳ – ಪುಂಡನ ಗಾಡಿ ಚರಂಡಿಗೆ ತಳ್ಳಿದ ಮಹಿಳೆ

    ವಿಳಾಸ ಕೇಳುವ ನೆಪದಲ್ಲಿ ಕಿರುಕುಳ – ಪುಂಡನ ಗಾಡಿ ಚರಂಡಿಗೆ ತಳ್ಳಿದ ಮಹಿಳೆ

    ಡಿಸ್ಪುರ್: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯನ್ನು ತಡೆದು ಪುಂಡನೊಬ್ಬ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ವಿಚಲಿತರಾಗದೇ ಆತನ ಸ್ಕೂಟರ್ ಎಳೆದು ಚರಂಡಿಗೆ ತಳ್ಳಿ ಆತ ಎಲ್ಲೂ ತಪ್ಪಿಸಿಕೊಳ್ಳದಂತೆ ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಭಾವನಾ ಕಶ್ಯಪ್ ಎಂಬವರು ಈ ವೀಡಿಯೋವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅಡ್ರಸ್ ತಿಳಿದಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಪದೇ ಪದೇ ಆರೋಪಿ ಪೀಡಿಸುತ್ತಿದ್ದ, ಅಲ್ಲದೇ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳಲು ಆರಂಭಿಸಿದ, ಈ ವೇಳೆ ನಾನು ಒಂದು ಕ್ಷಣ ಏನಾಯಿತು ಎಂಬುದರ ಪ್ರಜ್ಞೆಯನ್ನು ಕಳೆದುಕೊಂಡೆ. ಆದರೆ ಯಾವಾಗ ನನ್ನ ಬಾಯಿಯಿಂದ ಮಾತುಗಳು ಬರಲಾರಂಭಿಸತೋ ಆಗ ಆತ ಭಯಭೀತಗೊಂಡ ಎಂದು ಭಾವನಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಮಹಿಳೆ ಸ್ಕೂಟರ್‍ನನ್ನು ಚರಂಡಿಗೆ ತಳ್ಳಿದ ನಂತರ ರೆಕಾರ್ಡ್ ಆಗಿರುವ ಈ ವೀಡಿಯೋದಲ್ಲಿ ಆರೋಪಿ ತನ್ನ ಸ್ಕೂಟರ್‍ನನ್ನು ಹಿಂದೆಗೆದುಕೊಳ್ಳಲು ಸ್ಥಳೀಯರಲ್ಲಿ ಸಹಾಯ ಕೇಳುತ್ತಿರುವುದನ್ನು ಕಾಣಬಹುದಾಗಿದೆ.

    ಘಟನೆ ವೇಳೆ ಆರೋಪಿ ವೇಗವಾಗಿ ಸ್ಕೂಟರನ್ನು ಚಲಾಯಿಸಲು ಪ್ರಯತ್ನಿಸಿದಾಗಲೂ ಮಹಿಳೆ ಅದನ್ನು ಹಿಡಿದು ಚರಂಡಿಗೆ ಎಳೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಗಲಾಟೆ ಮಾಡುತ್ತಿದ್ದ ವೇಳೆ ಸ್ಥಳೀಯರು ಸೇರುತ್ತಿದ್ದಂತೆ, ಮಹಿಳೆ ಮಧುಶನ ರಾಜ್ ಕುಮಾರ್ ಎಂಬ ವ್ಯಕ್ತಿಗೆ ನಡೆದ ಎಲ್ಲಾ ವಿಚಾರವನ್ನು ವಿವರಿಸಿದ್ದಾರೆ. ಆತನಿಂದ ಮಹಿಳೆ ಹೊರ ಹೋಗಲು ಹೆದರಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:2024ಕ್ಕೆ ಭಾರತದ ಪ್ರಧಾನಿ ಮಹಿಳೆಯಾಗಲಿ: ಜಯಾ ಬಚ್ಚನ್

  • ಕಾರು ನಿಲ್ಲಿಸಿ ವಿಳಾಸ ಕೇಳಿದ – ಮಹಿಳೆ ಹತ್ತಿರ ಬರ್ತಿದ್ದಂತೆ ಫ್ಯಾಂಟ್ ಬಿಚ್ಚಿದ

    ಕಾರು ನಿಲ್ಲಿಸಿ ವಿಳಾಸ ಕೇಳಿದ – ಮಹಿಳೆ ಹತ್ತಿರ ಬರ್ತಿದ್ದಂತೆ ಫ್ಯಾಂಟ್ ಬಿಚ್ಚಿದ

    ಮುಂಬೈ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಮುಂದೆ ಪ್ಯಾಂಟ್ ಬಿಚ್ಚಿ ಅಶ್ಲೀಲವಾಗಿ ವರ್ತಿಸಿದ್ದಕ್ಕೆ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

     ಆರೋಪಿಯನ್ನು ಬಿಥು ಪರ್ಚಾ ಎಂದು ಗುರುತಿಸಲಾಗಿದೆ. ಪೂರ್ವ ಘಾಟ್ಕೋಪರ್ ನಗರದ ರಾಜವಾಡಿ ರಸ್ತೆಯಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ತನ್ನ ಕಾರಿನಲ್ಲಿ ಬಂದು ರಾಜವಾಡಿ ರಸ್ತೆಯಲ್ಲಿ ನಿಲ್ಲಿಸಿದ್ದಾನೆ. ಈ ವೇಳೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಳಿ ವಿಳಾಸದ ಬಗ್ಗೆ ಕೇಳಿದ್ದಾನೆ. ಆಗ ಮಹಿಳೆ ವಿಳಾಸ ಹೇಳಲು ಕಾರಿನ ಸಮೀಪ ಬರುತ್ತಿದ್ದಂತೆ ಆರೋಪಿ ತನ್ನ ಪ್ಯಾಂಟ್ ಬಿಚ್ಚಿ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಹಿಳೆ ಇದರಿಂದ ಭಯಗೊಂಡು ಕೂಗಿಕೊಂಡಿದ್ದಾರೆ. ಆಗ ಆರೋಪಿ ಭಯದಿಂದ ಪರಾರಿಯಾಗಿದ್ದನು. ನಂತರ ಮಹಿಳೆ ತಿಲಕ್ ನಗರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿ ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಬಿಜೆಪಿ ಮುಖಂಡನ ಮನೆ ಮೇಲೆ ರೇಡ್ ಮಾಡಲು ಹೋದ ಅಧಿಕಾರಿಗಳೇ ಕನ್ಫ್ಯೂಸ್!

    ಬಿಜೆಪಿ ಮುಖಂಡನ ಮನೆ ಮೇಲೆ ರೇಡ್ ಮಾಡಲು ಹೋದ ಅಧಿಕಾರಿಗಳೇ ಕನ್ಫ್ಯೂಸ್!

    ರಾಯಚೂರು: ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ಐಟಿ ದಾಳಿ ನಡೆಸಲು ಹೋದ ಅಧಿಕಾರಿಗಳು ವಿಳಾಸ ಸಿಗದೇ ಕಕ್ಕಾಬಿಕ್ಕಿಯಾಗಿ ಬೀದಿಯಲ್ಲೇ ಪರದಾಡಿದ ಘಟನೆ ನಡೆದಿದೆ.

    ಹೌದು. ಬಿಜೆಪಿ ಮುಖಂಡ ಬಂಡೇಶ್ ಅವರ ಮನೆಗೆ ದಾಳಿ ನಡೆಸಲು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್, ಸಹಾಯಕ ಆಯುಕ್ತೆ, ಜಿಪಂ ಸಿಇಓ ತಂಡ ಮುಂದಾಗಿತ್ತು. ಆದ್ರೆ ಅಧಿಕಾರಿಗಳೆಲ್ಲ ಬಂದಿರುವುದನ್ನ ನೋಡಿ ಸ್ವತಃ ಬಿಜೆಪಿ ಮುಖಂಡ ಹೊರಗಡೆ ಬಂದು ಹೋದರೂ ಅಧಿಕಾರಿಗಳಿಗೆ ಗೊತ್ತೇ ಆಗ್ಲಿಲ್ಲವಂತೆ.

    ಬಾತ್ ರೂಂನಲ್ಲಿ ದುಡ್ಡು ಇಟ್ಟಿದ್ದರೂ, ಸ್ಟೆಪ್ನಿಯಲ್ಲಿ ದುಡ್ಡು ಇಟ್ಟಿದ್ದರೂ ಹುಡುಕಿ ತೆಗೆಯೋ ಐಟಿ ಅಧಿಕಾರಿಗಳಿಗೆ ವಿಳಾಸ ಪತ್ತೆ ಹಚ್ಚೋದು ಕಷ್ಟವಾಗಿದ್ದು, ಸುಮಾರು ಹೊತ್ತು ಕಾದು ನೋಡಿ ಮರಳಿ ಹೋಗಿರುವ ಪ್ರಹಸನ ನಡೆದಿದೆ.

    ಇದೇ ವೇಳೆ ಪಕ್ಕದಲ್ಲಿರುವ ಬಿಜೆಪಿ ಮುಖಂಡ ರವಿ ಜಲ್ದಾರ್ ಕಚೇರಿ ಹಾಗೂ ಪರಿಶೀಲನೆ ಮಾಡಿ ಮರಳಿದ್ದಾರೆ. ಇದಕ್ಕೂ ಮುನ್ನ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್ ಅಳಿಯ ಜಿ.ಪಂ.ಸದಸ್ಯ ಸಂದೀಪ್ ನಾಯಕ್ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಒಟ್ಟು ಎರಡು ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಸಹ ದಾಳಿ ನಡೆಸಿ ಮಾಹಿತಿ ಪಡೆದಿದ್ದಾರೆ. ನಗರದ ಲಿಂಗಸುಗೂರು ರಸ್ತೆಯಲ್ಲಿರುವ ಕೃಷ್ಣಾ ಮೇಡೌಸ್ ನಲ್ಲಿರುವ ಮನೆ ಮೇಲೆ ದಾಳಿ ನಡೆದು ಹಣ ಜಪ್ತಿ ಮಾಡಿದ್ದಾರೆ.

  • ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯಿಂದ 28 ಗ್ರಾಂ ಚಿನ್ನದ ಸರ ಎಗರಿಸಿದ ಕಳ್ಳರು!

    ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯಿಂದ 28 ಗ್ರಾಂ ಚಿನ್ನದ ಸರ ಎಗರಿಸಿದ ಕಳ್ಳರು!

    ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಹಾಡಹಗಲೇ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲದ ಮಾದನಾಯಕನಹಳ್ಳಿಯ ರಾಜೇಶ್ವರಿ ಬಡಾವಣೆಯ ನಿವಾಸಿ ಕಾಳಮ್ಮ ಚಿನ್ನ ಕಳೆದುಕೊಂಡ ವೃದ್ಧೆ. ಕಾಳಮ್ಮ ಅವರ ಕೊರಳಲ್ಲಿ ಇದ್ದ 28 ಗ್ರಾಂ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿಯೇ ಕಿತ್ತುಕೊಂಡ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

    ಆಗಿದ್ದೇನು?:
    ವಿಳಾಸ ಕೇಳಿದ ಹಿನ್ನೆಲೆಯಲ್ಲಿ ವೃದ್ಧೆ ಕಾಳಮ್ಮ ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಮಹಿಳೆಯರು ಕಾಳಮ್ಮ ಅವರನ್ನು ಮಾತನಾಡಿಸಿ, ವಿಳಾಸ ಕೇಳಿದ್ದಾರೆ. ಮೂವರು ಇರುವ ಜಾಗಕ್ಕೆ ಬಂದ ವ್ಯಕ್ತಿಯೊಬ್ಬ, ನನ್ನ ಪರ್ಸ್ ಇಲ್ಲಿ ಎಲ್ಲಿಯೋ ಬಿದ್ದಿದೆ. ಅದನ್ನು ನೀವು ತೆಗೆದುಕೊಂಡಿದ್ದೀರಾ ಕೊಡಿ ಎಂದು ಕೇಳಿದ್ದಾನೆ. ತಕ್ಷಣವೇ ಜಗಳಕ್ಕೆ ಇಳಿದಂತೆ ವರ್ತಿಸಿ ಕಾಳಮ್ಮ ಅವರ ಬಾಯಿ ಮುಚ್ಚಿ, ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆದರೆ ಅವರ ಹಿಡಿಯಲು, ಜನರನ್ನು ಕೂಗಿ ಕರೆಯಲು ಕಾಳಮ್ಮ ಅವರಿಗೆ ಆಗಿಲ್ಲ.

    ಚಿನ್ನ ಹಿಡಿದು ಓಡಿದ ಕಳ್ಳರು ದೂರದಲ್ಲಿ ನಿಲ್ಲಿಸಿದ್ದ ಕಾರು ಹತ್ತಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಡ್ರೆಸ್ ಕೇಳುವ ನೆಪದಲ್ಲಿ ಯುವಕನ ಪ್ರಜ್ಞೆ ತಪ್ಪಿಸಿ ಯುವತಿಯರಿಂದ ಕೃತ್ಯ!

    ಅಡ್ರೆಸ್ ಕೇಳುವ ನೆಪದಲ್ಲಿ ಯುವಕನ ಪ್ರಜ್ಞೆ ತಪ್ಪಿಸಿ ಯುವತಿಯರಿಂದ ಕೃತ್ಯ!

    ಬೆಂಗಳೂರು: ಅಡ್ರೆಸ್ ಕೇಳುವ ನೆಪದಲ್ಲಿ ಯುವಕನ ಪ್ರಜ್ಞೆ ತಪ್ಪಿಸಿ ಯುವತಿಯರಿಬ್ಬರು ಸುಲಿಗೆ ಮಾಡಿದ ಘಟನೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ನಡೆದಿದೆ.

    ಗೌರವ್ ನೇಗಿ ಎಂಬಾತನನ್ನು ಪ್ರಜ್ಞೆ ತಪ್ಪಿಸಿ ಯುವತಿಯರು ಸುಲಿಗೆ ನಡೆಸಿದ್ದಾರೆ. ಚುನ್ ಲಂಗ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮುಗಿಸಿ ಬರುವಾಗ ಈ ಘಟನೆ ನಡೆದಿದೆ. ಯುವತಿಯರು ಸ್ವಪ್ನ ಬುಕ್ ಸ್ಟಾಲ್ ಅಡ್ರೆಸ್ ಕೇಳುತ್ತಾ ಅಡ್ಡ ಬಂದರು. ನಂತರ ಕರ್ಚೀಫ್ ಮುಖಕ್ಕೆ ಒತ್ತಿ ಪ್ರಜ್ಞೆ ತಪ್ಪಿಸಿ ಚಿನ್ನದ ಸರ, ಪರ್ಸ್ ಎಗರಿಸಿ ಎಸ್ಕೇಪ್ ಆಗಿದ್ದಾರೆ.

    ಸದ್ಯ ಯುವತಿಯರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಯುವತಿಯರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.