Tag: Additional Commissioner of Traffic Division

  • ನೆಲಮಂಗಲ ಬಳಿ ಟ್ರಾಫಿಕ್ ಜಾಮ್- ಬೆಂಗಳೂರಿನತ್ತ ಜನರು

    ನೆಲಮಂಗಲ ಬಳಿ ಟ್ರಾಫಿಕ್ ಜಾಮ್- ಬೆಂಗಳೂರಿನತ್ತ ಜನರು

    ಬೆಂಗಳೂರು: ಲಾಕ್‍ಡೌನ್ ಆರಂಭವಾದ ದಿನಗಳಲ್ಲಿ ಬೆಂಗಳೂರು ತೊರೆದಿದ್ದ ಜನರು ನಗರಕ್ಕೆ ಆಗಮಿಸುತ್ತಿದ್ದು, ನೆಲಮಂಗಲ ಟೋಲ್ ಗೇಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.

    ಬೆಂಗಳೂರಿನಲ್ಲಿ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕಾರ್ಖಾನೆಗಳು ಸೇರಿದಂತೆ ಖಾಸಗಿ ಸಂಸ್ಥೆ, ಕಂಪನಿಗಳು ಆರಂಭಗೊಂಡಿವೆ. ಹೀಗಾಗಿ ತಮ್ಮ ಉದ್ಯೋಗಿಗಳಿಗೆ ಕೆಲಸಕ್ಕೆ ಹಾಜರಾಗುವಂತೆ ಕಂಪನಿಗಳು ನೋಟಿಸ್ ನೀಡಿದ್ದರಿಂದ ಜನರು ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ ಬೆಂಗಳೂರು ನಗರವನ್ನು ಪ್ರವೇಶಿಸುತ್ತಿದ್ದಾರೆ.

    ಲಾಕ್‍ಡೌನ್ ಆದ ಬಳಿಕ ಇದೇ ಮೊದಲ ಬಾರಿಗೆ ನೆಲಮಂಗಲದ ನವಯುಗ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಜನರು ಯಾವ ಭಾಗಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಮಾಹಿತಿ ಮಾತ್ರ ಲಭ್ಯವಾಗಿಲ್ಲ. ಕಂಟೈನ್‍ಮೆಂಟ್ ಝೋನ್ ನಲ್ಲಿಯ ಜನರು ಬೆಂಗಳೂರಿಗೆ ಬಂದ್ರೆ ಹೇಗೆ ಎಂಬ ಆತಂಕ ಸಹ ಮನೆ ಮಾಡಿದೆ.

  • ಸೆನ್ಸೆಕ್ಸ್ ಮಾಹಿತಿ ನೀಡಿ ಪೇಚಿಗೆ ಸಿಲುಕಿದ್ರು ಟ್ರಾಫಿಕ್ ಪೊಲೀಸ್ ಅಧಿಕಾರಿ

    ಸೆನ್ಸೆಕ್ಸ್ ಮಾಹಿತಿ ನೀಡಿ ಪೇಚಿಗೆ ಸಿಲುಕಿದ್ರು ಟ್ರಾಫಿಕ್ ಪೊಲೀಸ್ ಅಧಿಕಾರಿ

    ಬೆಂಗಳೂರು: ಅಧಿಕಾರಿಗಳು ಎಲ್ಲದಕ್ಕೂ ಟ್ವೀಟ್ ಮಾಡುತ್ತ ಕುಳಿತರೆ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೀಗೆ ಟ್ವೀಟ್ ಮಾಡಿ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್.ಹಿತೇಂದ್ರ ಪೇಚಿಗೆ ಸಿಲುಕಿದ್ದಾರೆ.

    ಆರ್.ಹಿತೇಂದ್ರ ಸಂಚಾರ ಮಾಹಿತಿಯ ಬದಲಾಗಿ ಇಂದು ಅವರು ಸೆನ್ಸೆಕ್ಸ್ ಮಾಹಿತಿ ನೀಡಿ ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿದ ಶಶಿ ಬೆಂಗಳೂರು ಎಂಬವರು, ರೀ ಟ್ವೀಟ್ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

    ಹಿತೇಂದ್ರ ಟ್ವೀಟ್ ನಲ್ಲೇನಿದೆ?:
    ಯಾರು ಟ್ರೇಡಿಂಗ್ ಬ್ಯುಸಿನೆಸ್ ಮಾಡುತ್ತಿರುವಿರಿ, ಅವರು ಇಂದಿನ ಸೆನ್ಸೆಕ್ಸ್ ಹಾಗೂ ರೂಪಾಯಿ ಮೌಲ್ಯ ನೋಡಬಹುದು ಎಂದು ಬರೆದು ಆರ್.ಹಿತೇಂದ್ರ ಟ್ವೀಟ್ ಮಾಡಿದ್ದರು. ಇದಕ್ಕೆ ರೀ ಟ್ವೀಟ್ ಮಾಡಿದ ಶಶಿ ಅವರು, ಕ್ಷಮಿಸಿ ಸರ್, ನಾವು ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ನೀವೇ ಸ್ವಲ್ಪ ಅದರ ಗಮನಹರಿಸಿ ಎಂದು ಟಾಂಗ್ ಕೊಟ್ಟಿದ್ದಾರೆ.

    ಶಶಿ ಅವರ ಬಳಿಕ ಕೆಲ ನೆಟ್ಟಿಗರು ಹಿತೇಂದ್ರ ಅವರ ಪರ ಬ್ಯಾಟ್ ಬೀಸಿದರೆ, ಕೆಲವರು ವ್ಯಂಗ್ಯವಾಗಿ ಸೆನ್ಸೆಕ್ಸ್ ಪಟ್ಟಿಯನ್ನು ರೀ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv