ನವದೆಹಲಿ: ಮೊಬೈಲ್ ಗೇಮ್ (Mobile Game) ಆಡಿದ್ದಕ್ಕಾಗಿ ಅಕ್ಕ ಗದರಿದ್ದಕ್ಕೆ ಮನನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ (Delhi) ಆದರ್ಶ ನಗರದಲ್ಲಿ (Adarsh Nagar) ನಡೆದಿದೆ.
ಆದರ್ಶ್ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆದರ್ಶ್ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತನ್ನ ಅಧ್ಯಯನವನ್ನು ನಿರ್ಲಕ್ಷಿಸಿ ಮೊಬೈಲ್ ಗೇಮ್ ಆಡಿದ್ದಕ್ಕೆ ಅಕ್ಕ-ತಮ್ಮನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಅಕ್ಕ ತಮ್ಮನನ್ನು ಗದರಿದ್ದಾಳೆ. ಇದರಿಂದ ಮನನೊಂದ ಬಾಲಕ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಹಿಟ್ & ರನ್‌ಗೆ ವಿದ್ಯಾರ್ಥಿನಿ ಬಲಿ – ಟಿಪ್ಪರ್ ಚಾಲಕ ಅರೆಸ್ಟ್
ಕೂಡಲೇ ಆದರ್ಶ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಅಷ್ಟು ಹೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ಡಿಕ್ಕಿ – ವೀಡಿಯೋ ವೈರಲ್
ನವದೆಹಲಿ: ದೆಹಲಿಯಲ್ಲಿ (Delhi) ಭೀಕರ ಅಪಘಾತಕ್ಕೆ 20 ವರ್ಷದ ಯುವತಿ ಸಾವನ್ನಪ್ಪಿದ ಆಘಾತಕಾರಿ ಘಟನೆಯ ಬೆನ್ನಲ್ಲೇ ಇನ್ನೊಂದು ಘಟನೆ ದೆಹಲಿಯನ್ನು ಬೆಚ್ಚಿ ಬೀಳಿಸಿದೆ. ಸ್ನೇಹವನ್ನು (Friendship) ಕೊನೆಗೊಳಿಸಲು ಬಯಸಿದ ಯುವತಿಗೆ (Young Woman) ಪಾಗಲ್ ಪ್ರೇಮಿ ಚಾಕುವಿನಿಂದ ಪದೇ ಪದೇ ಇರುದಿರುವ (Stabbed) ಘಟನೆ ವರದಿಯಾಗಿದೆ.
ಆದರ್ಶ ನಗರದಲ್ಲಿ (Adarsh Nagar) ನಡೆದ ಘಟನೆ ನಡೆದಿದ್ದು, ಆರೋಪಿಯನ್ನು ಸುಖ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಹರಿಯಾಣದ ಅಂಬಾಲಾದಲ್ಲಿ ಬಂಧಿಸಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ 22 ವರ್ಷದ ಯುವತಿಯನ್ನು ಪ್ರಸ್ತುತ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ.
ವರದಿಗಳ ಪ್ರಕಾರ ಯುವತಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ಆಕೆ 5 ವರ್ಷಗಳಿಂದ ಸುಖ್ವಿಂದರ್ ಜೊತೆ ಸ್ನೇಹ ಹೊಂದಿದ್ದಳು. ಆದರೆ ಜನವರಿ 2 ರಂದು ಇಬ್ಬರು ಜಗಳ ಮಾಡಿಕೊಂಡಿದ್ದು, ಆಕೆ ಸ್ನೇಹವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದಾಳೆ. ಇದಕ್ಕೆ ಕೋಪಗೊಂಡ ಸುಖ್ವಿಂದರ್ ಯುವತಿಗೆ 3-4 ಬಾರಿ ಚಾಕುವಿನಿಂದ ಇರಿಸಿದ್ದಾನೆ. ಇದನ್ನೂ ಓದಿ: ತಲೆಬುರುಡೆ ಒಡೆದಿತ್ತು, ಪಕ್ಕೆಲುಬು ಕಾಣಿಸ್ತಿತ್ತು- ಅಂಜಲಿ ಶವಪರೀಕ್ಷೆ ಬಳಿಕ ಆಘಾತಕಾರಿ ಮಾಹಿತಿ
ಸುಖ್ವಿಂದರ್ ಭೇಟಿ ಮಾಡಲು ಬಂದಿದ್ದ ಸಂದರ್ಭ ಯುವತಿ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದಳು. ತನಗೆ ಆತ ಪರಿಚಯವಿದ್ದರಿಂದ ಹಲ್ಲೆ ಮಾಡುತ್ತಾನೆಂದು ನಿರೀಕ್ಷಿಸಿರಲಿಲ್ಲ. ಆತ ಯಾವುದೋ ವಿಷಯ ಚರ್ಚಿಸುವ ನೆಪದಲ್ಲಿ ರಸ್ತೆಯ ಬಳಿ ಕರೆದುಕೊಂಡು ಹೋಗಿ ಏಕಾಏಕಿ ಚಾಕುವಿನಿಂದ ಇರಿದಿರುವುದಾಗಿ ಯುವತಿ ತಿಳಿಸಿದ್ದಾಳೆ.
#WATCH | A 22-year-old youth namely Sukhvinder arrested for stabbing a girl in Adarsh Nagar area on Jan 2. Both were friends &due to some dispute, he stabbed her 3-4 times.The girl is admitted to a hospital&her condition is stable: Delhi Police
ನಾವು ಸ್ನೇಹಿತರಾಗಿದ್ದೆವು. ಆದರೆ ಆತನೊಂದಿಗೆ ಸಂಬಂಧ ಹೊಂದಲು ನಾನು ಬಯಸಿರಲಿಲ್ಲ. ನಾನು ಕೆಲವು ಸಮಸ್ಯೆಗಳಿಂದ ಆತನ ಸ್ನೇಹವನ್ನು ಮುರಿದುಬಿಟ್ಟಿದ್ದೆ. ಈ ನಡುವೆ ಆತ ಜನವರಿ 2 ರಂದು ನನ್ನನ್ನು ಭೇಟಿಯಾಗಿ ಸ್ನೇಹ ಮುಂದುವರಿಸುವಂತೆ ಕೇಳಿಕೊಂಡಿದ್ದ. ಆದರೆ ನಾನು ನಿರಾಕರಿಸಿದ್ದಕ್ಕೆ ಆತ ಚೂರಿಯಿಂದ ಇರಿದ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ವಿಮಾನದಲ್ಲಿ ಕಂಠಪೂರ್ತಿ ಕುಡಿದು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಸಹಪ್ರಯಾಣಿಕ
ಕೃತ್ಯದ ಬಳಿಕ ಆರೋಪಿ ದೆಹಲಿಯಿಂದ ಅಂಬಾಲಾಗೆ ಪರಾರಿಯಾಗಿದ್ದ. ಪೊಲೀಸರ ತಂಡ ಅಂಬಾಲಾಗೆ ತೆರಳಿ ಮಂಗಳವಾರ ಸಂಜೆ ಆತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]