Tag: Adani Group of companies

  • ಹಿಂಡನ್‍ಬರ್ಗ್ ಪ್ರಕರಣ – ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ

    ಹಿಂಡನ್‍ಬರ್ಗ್ ಪ್ರಕರಣ – ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ

    ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ (Adani Group of companies) ವಿರುದ್ಧದ ಹಿಂಡನ್‍ಬರ್ಗ್ ಸಂಶೋಧನಾ ವರದಿಯಲ್ಲಿನ (Hindenburg Research report) ಆರೋಪಗಳ ಕುರಿತಾದ ತನಿಖೆಯ ಸ್ಥಿತಿಗತಿಯ ವರದಿಯನ್ನು ಆಗಸ್ಟ್ 14 ರಂದು ನೀಡುವಂತೆ ಸೆಬಿಗೆ (SEBI) ಸುಪ್ರೀಂ ಕೋರ್ಟ್ (Supreme Court) ಬುಧವಾರ ಸೂಚಿಸಿದೆ.

    ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಈ ಆದೇಶವನ್ನು ನೀಡಿದೆ. ಆದೇಶ ವೇಳೆ ನ್ಯಾಯಾಲಯ ಸೆ.30ರ ವರೆಗೂ ತನಿಖೆಗೆ ಅವಕಾಶ ನೀಡಬಹುದು ಆದರೆ ನಿಗದಿಪಡಿಸಲಾದ ಅವಧಿಯಲ್ಲಿ ತನಿಖೆಯ ಪ್ರಗತಿಯನ್ನು ತಿಳಿಸಬೇಕು ಎಂದು ಸಿಜೆಐ ಸೂಚಿಸಿದರು. ಇದನ್ನೂ ಓದಿ: ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

    ಹಿಂಡನ್‍ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾದ 12 ಸಂಶಯಾಸ್ಪದ ವಹಿವಾಟುಗಳ ತನಿಖೆಗೆ ಕನಿಷ್ಠ 15 ತಿಂಗಳ ತನಿಖೆ ಅಗತ್ಯವಿದೆ. ಆದರೆ ಆರು ತಿಂಗಳು ಅವಕಾಶ ವಿಸ್ತರಿಸಿದರೆ ತನಿಖೆ ಪೂರ್ಣಗೊಳಿಸುವುದಾಗಿ ಕಳೆದ ತಿಂಗಳು ಸೆಬಿ ಸಲ್ಲಿಸಿದ್ದ ಮನವಿಯಲ್ಲಿ ಹೇಳಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೋರ್ಟ್ 6 ತಿಂಗಳ ಕಾಲಾವಕಾಶವನ್ನು ನೀಡಲು ನಿರಾಕರಿಸಿತ್ತು.

    ನಿವೃತ್ತ ನ್ಯಾಯಮೂರ್ತಿ ಎಎಂ ಸಪ್ರೆ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಬೇಸಿಗೆಯ ರಜೆಯ ನಂತರ ಪ್ರಕರಣದ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಕೋರ್ಟ್ ಹೇಳಿದೆ.

    ಇಂದಿನ ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ಇದು ಕಂಪನಿಯನ್ನು ರಕ್ಷಿಸುವ ಸ್ಪಷ್ಟ ಪ್ರಯತ್ನವಾಗಿದೆ ಎಂದು ಸೆಬಿಯ ವಿರುದ್ಧ ಆರೋಪಿಸಿದರು.

    ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರತಿ ವಾದಿಸಿ ತನಿಖೆ ನಡೆಸಲು ಸೆಬಿಗೆ ಅವಕಾಶವಿದೆ. ತನಿಖೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಹಿಂಡನ್‍ಬರ್ಗ್ ವರದಿ ವಿವಾದ – ತನಿಖೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ

  • ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

    ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

    ನವದೆಹಲಿ: ಅದಾನಿ ಸಮೂಹದ (Adani Group of companies) ವಿರುದ್ಧದ ಹಿಂಡೆನ್‍ಬರ್ಗ್ ಸಂಶೋಧನಾ ವರದಿಯ ( Research report) ವಿವಾದದ ಕುರಿತು ತನಿಖೆ ನಡೆಸಲು ಆರು ತಿಂಗಳ ಅವಧಿ ವಿಸ್ತರಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (Securities and Exchange Board of India) ಸುಪ್ರೀಂ ಕೋರ್ಟ್‍ಗೆ (Supreme Court) ಮನವಿ ಸಲ್ಲಿಸಿದೆ.

    ಈ ವರದಿಗೆ ಸಂಬಂಧಿಸಿದ ತನಿಖೆಗೆ ಸುಪ್ರೀಂ ಸೆಬಿಗೆ (SEBI) ಮಾರ್ಚ್ 2ರಂದು ಅನುಮತಿ ನೀಡಿತ್ತು. ಅದು ಮೇ 2ರಂದು ಪೂರ್ಣಗೊಳ್ಳಬೇಕಿತ್ತು. ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ಎ.ಎಂ ಸಪ್ರೆ (Justice AM Sapre)ನೇತೃತ್ವದ ತಜ್ಞರ ಸಮಿತಿಯ ತನಿಖೆಯ ಜೊತೆಗೆ ಸೆಬಿ ತನಿಖೆಗೂ ಆದೇಶಿಸಲಾಗಿತ್ತು. ಇದನ್ನೂ ಓದಿ: ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್

    ತನಿಖೆ ಪೂರ್ಣಗೊಳಿಸಲು ಕಾಲವಕಾಶದ ಅಗತ್ಯವಿದೆ. ಇನ್ನೂ ಆರು ತಿಂಗಳು ಅವಕಾಶ ವಿಸ್ತರಣೆಗೆ ಸೆಬಿ ಶನಿವಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ. ಇದುವರೆಗೂ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಹಾಗೂ ಇದುವರೆಗೂ ತಿಳಿದು ಬಂದ ಅಂಶಗಳನ್ನು ತಜ್ಞರ ಸಮಿತಿಯ ಗಮನಕ್ಕೆ ತರಲಾಗಿದೆ. ಅಲ್ಲದೆ ಹಿಂಡೆನ್‍ಬರ್ಗ್ ವರದಿಯಲ್ಲಿ ತಿಳಿಸಿರುವ 12 ಶಂಕಾಸ್ಪದ ವರ್ಗಾವಣೆಗಳ ಕುರಿತು ಆಳವಾದ ತನಿಖೆ ನಡೆಸಬೇಕಿದೆ. ಆ ವರ್ಗಾವಣೆಗಳ ಮಾಹಿತಿಗಳು ಜಟಿಲವಾಗಿವೆ. ಅಲ್ಲದೆ ಅಲ್ಲಿ ವಿವಿಧ ವರ್ಗಾವಣೆ ನಡೆದಿದೆ ಎಂದು ಸೆಬಿ ತನ್ನ ಮನವಿಯಲ್ಲಿ ತಿಳಿಸಿದೆ.

    ಸಂಪೂರ್ಣ ತನಿಖೆಗೆ ಹತ್ತು ವರ್ಷಗಳಿಗೂ ಹಳೆಯದಾದ ವಿವರ ಪಡೆಯಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಿದ್ದು, ತನಿಖೆಗೆ ಸುಮಾರು 15 ತಿಂಗಳು ಬೇಕಾಗುತ್ತದೆ. ಆದರೆ 6 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸೆಬಿ ಹೇಳಿಕೊಂಡಿದೆ. ಇದನ್ನೂ ಓದಿ: ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್