ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ (England vs Australia) 33 ರನ್‌ಗಳ ಜಯ ಸಾಧಿಸಿದೆ. ಆ ಮೂಲಕ ಸೆಮಿ-ಫೈನಲ್‌ಗೆ ಮತ್ತಷ್ಟು ಹತ್ತಿರವಾಗಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 286 ರನ್‌ಗಳಿಸಿ ಆಲೌಟ್ ಆಯಿತು. 287 ರನ್ ಗುರಿ ಬೆನ್ನತ್ತಿದ ಆಂಗ್ಲರು 48.1 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 253 ರನ್ ಅಷ್ಟೇ ಗಳಿಸಿತು. ಸತತ ಸೋಲುಗಳಿಂದ ಕಂಗೆಟ್ಟು ಸೆಮಿ ಹಾದಿಯಿಂದ ಹೊರಗಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ಪಾಕ್‌ಗೆ ವರವಾದ ವರುಣ – ಕಿವೀಸ್ ವಿರುದ್ಧ 21 ರನ್‌ಗಳ ಜಯ; ಸೆಮೀಸ್ ಆಸೆ ಜೀವಂತ
ಆಸೀಸ್ ನೀಡಿದ 287 ರನ್ ಗುರಿ ಬೆನ್ನತ್ತಿದ ಆಂಗ್ಲರು ಗೆಲುವಿನ ಭರವಸೆಯೊಂದಿಗೆ ಕೊನೆ ವರೆಗೂ ಹೋರಾಡಿದರು. ತಂಡದ ಪರ ಡೇವಿಡ್ ಮಲನ್ (50), ಬೆನ್ ಸ್ಟೋಕ್ಸ್ (64) ಅರ್ಧಶತಕ ಬಾರಿಸಿ ಉತ್ತಮ ಪ್ರದರ್ಶನ ತೋರಿದರು. ಮೊಯಿನ್ ಅಲಿ (42), ಕ್ರಿಸ್ ವೋಕ್ಸ್ (32) ಆಟವೂ ತಂಡಕ್ಕೆ ಜಯದ ಭರವಸೆ ಮೂಡಿಸಿತ್ತು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗದೇ ಆಂಗ್ಲ ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಜಾನಿ ಬೈರ್ಸ್ಟೋವ್ (0), ಜೋ ರೂಟ್ (13), ಜೋಸ್ ಬಟ್ಲರ್ (1), ಲಿಯಾಮ್ ಲಿವಿಂಗ್ಸ್ಟೋನ್ (2) ಕಳಪೆ ಪ್ರದರ್ಶನದಿಂದ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ತೋರಿತು. ಮಾರ್ನಸ್ ಲಾಬುಷೇನ್ 83 ಬಾಲ್‌ಗೆ 71 ರನ್ (7 ಫೋರ್) ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಂಡದ ಪರ ಕ್ಯಾಮರೂನ್ ಗ್ರೀನ್ (47), ಸ್ಟೀವ್ ಸ್ಮಿತ್ (44), ಮಾರ್ಕಸ್ ಸ್ಟೊಯಿನಿಸ್ (35) ತಂಡದ ಪರ ರನ್ ಕಾಣಿಕೆ ನೀಡಿದರು.
ಆಂಗ್ಲರ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಪಡೆದು ಮಿಂಚಿದರು. ಮಾರ್ಕ್ ವುಡ್ ಹಾಗೂ ಅದಿಲ್ ರಶೀದ್ ತಲಾ 2 ವಿಕೆಟ್ ಗಳಿಸಿದರು. ಆದರೆ ಬ್ಯಾಟಿಂಗ್ ವೈಫಲ್ಯದಿಂದ ತಂಡ ಸೋಲನುಭವಿಸಿತು.
ಲಕ್ನೋ: ಆ್ಯಡಂ ಜಂಪಾ (Adam Zampa) ಸ್ಪಿನ್ ಮೋಡಿ ಹಾಗೂ ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್ ಬ್ಯಾಟಿಂಗ್ ಅಬ್ಬರಕ್ಕೆ ಮಂಕಾದ ಲಂಕಾ, ಆಸೀಸ್ (Australia vs Sri Lanka) ವಿರುದ್ಧ ಹೀನಾಯ ಸೋಲನುಭವಿಸಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಆಸ್ಟ್ರೇಲಿಯಾ ಸೋಮವಾರದ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ. ಅಂತೆಯೇ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದ ಶ್ರೀಲಂಕಾ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ.
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್‌ಗಳಾದ ಪಥುಮ್ ನಿಸಾಂಕ ಮತ್ತು ಕುಶಾಲ ಪೆರೆರಾ (Kusal Perera) ಹೊರತುಪಡಿಸಿ ಉಳಿದೆಲ್ಲ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಕೇವಲ 209 ರನ್‌ಗಳಿಗೆ ಆಲೌಟ್ ಆಯಿತು. 210 ರನ್‌ಗಳ ಗುರಿ ಬೆನ್ನತ್ತಿದ ಆಸೀಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 35.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 215 ರನ್‌ಗಳನ್ನು ಬಾರಿಸಿ ಗೆಲುವು ದಾಖಲಿಸಿತು. ಇದನ್ನೂ ಓದಿ: 2028 ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ
ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ತಂಡಕ್ಕೆ ಶುಭಾರಂಭ ನೀಡಿದರು. ಲಂಕಾ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ ಮಾರ್ಷ್ ಅರ್ಧ ಶತಕ ಬಾರಿಸಿದರು. 52 (51 ಬಾಲ್, 9 ಫೋರ್) ರನ್‌ಗಳಿಸಿದ್ದ ಅವರು ಒಂದು ರನ್ ಕದಿಯಲು ಹೋಗಿ ರನೌಟ್ ಆದರು. ತಂಡದ ಗೆಲುವಿನ ಭರವಸೆಯೊಂದಿಗೆ ಆಡುತ್ತಿದ್ದ ಡೇವಿಡ್ ವಾರ್ನರ್ ಕೇವಲ 11 ರನ್ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು. 5 ಬಾಲ್‌ಗಳನ್ನು ಬೀಟ್ ಮಾಡಿದ್ದ ಸ್ಟೀವನ್ ಸ್ಮಿತ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.
ವಾರ್ನರ್ ಮತ್ತು ಸ್ಮಿತ್ ಪೆವಿಲಿಯನ್ ಪರೇಡ್ ನಡೆಸಿದ್ದು ತಂಡಕ್ಕೆ ಕೊಂಚ ಭೀತಿ ತಂದಿತ್ತು. ಆದರೆ ಮಾರ್ನಸ್ ಲಾಬುಶೇನ್ ಮತ್ತು ಜೋಶ್ ಇಂಗ್ಲಿಸ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು. ಲಾಬುಶೇನ್ 40 ರನ್ (60 ಬಾಲ್, 2 ಫೋರ್) ಗಳಿಸಿ ದಿಲ್ಶಾನ್ ಮಧುಶಂಕಾ ಬೌಲಿಂಗ್‌ನಲ್ಲಿ ಚಮಿಕಾ ಕರುಣಾರತ್ನೆಗೆ ಕ್ಯಾಚ್ ನೀಡಿ ಔಟಾದರು. ಅರ್ಧಶತಕ ಗಳಿಸಿ ಮಿಂಚಿದ ಜೋಶ್ ಇಂಗ್ಲಿಸ್ 59 ಬಾಲ್‌ಗಳಿಗೆ 58 ರನ್ ಗಳಿಸಿ (5 ಫೋರ್, 1 ಸಿಕ್ಸ್) ತಂಡದ ಗೆಲುವಿಗೆ ನೆರವಾದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಲಂಕಾ ಬೌಲರ್‌ಗಳನ್ನು ಬೆಂಡೆತ್ತಿ 21 ಬಾಲ್‌ಗಳಿಗೆ 31 ರನ್ ಗಳಿಸಿ (4 ಫೋರ್, 2 ಸಿಕ್ಸ್) ರನ್‌ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಮ್ಯಾಕ್ಸ್‌ವೆಲ್ (Glenn Maxwell) ಜೊತೆ ಗೆಲುವಿಗೆ ಸಾಥ್ ನೀಡಿದ ಮಾರ್ಕಸ್ ಸ್ಟೊಯಿನಿಸ್ 10 ಬಾಲ್‌ಗಳಿಗೆ 20 ರನ್ ಕಲೆ ಹಾಕಿ (2 ಫೋರ್, 1 ಸಿಕ್ಸ್) ನಾಟೌಟ್ ಆಗಿ ಉಳಿದರು. ಬ್ಯಾಟರ್‌ಗಳ ಉತ್ತಮ ಪ್ರದರ್ಶನದಿಂದ ಆಸ್ಟ್ರೇಲಿಯಾ ತಂಡ 35.2 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಶ್ರೀಲಂಕಾ ವಿರುದ್ಧ ಗೆಲುವು ದಾಖಲಿಸಿತು.
ದಿಲ್ಶಾನ್ ಮಧುಶಂಕಾ 3 ಹಾಗೂ ದುನಿತ್ ವೆಳಾಲಗೆ 1 ವಿಕೆಟ್ ಪಡೆದಿದ್ದು ಹೊರತು ಪಡಿಸಿದರೆ ಶ್ರೀಲಂಕಾ ಬೌಲರ್‌ಗಳು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಇದನ್ನೂ ಓದಿ: ಸಿಕ್ಸರ್ ಗುಟ್ಟು ಬಿಚ್ಚಿಟ್ಟ ರೋಹಿತ್ ಶರ್ಮಾ
ಪೆರೆರಾ, ನಿಸಾಂಕ ಅರ್ಧಶತಕ ವ್ಯರ್ಥ
ಟಾಸ್ ಗೆದ್ದ ಶ್ರೀಲಂಕಾ ತಂಡ ಆಸೀಸ್ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡಿತು. ಲಂಕಾದ ಆರಂಭಿಕ ಬ್ಯಾಟರ್ಸ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಪತನಕ್ಕೆ 125 ರನ್ ಜೊತೆಯಾಟ ಆಡಿದ ಪಥುಮ್ ನಿಸಾಂಕ ಹಾಗೂ ಕುಶಾಲ್ ಪೆರೆರಾ ಆಸೀಸ್ ಬೌಲರ್ಸ್‌ಗಳನ್ನು ಕಾಡಿದರು. ಪಥುಮ್ ನಿಸಾಂಕ 61 ರನ್ (67 ಬಾಲ್, 8 ಫೋರ್) ಗಳಿಸಿದರೆ, ಕುಶಾಲ್ ಪೆರೆರಾ 78 ರನ್ (82 ಬಾಲ್, 12 ಬೌಂಡರಿ)ಬಾರಿಸಿ ಪ್ಯಾಟ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಉತ್ತಮ ಆರಂಭದ ಹೊರತಾಗಿಯೂ ತಂಡ ಸ್ಥಿರ ಪ್ರದರ್ಶನ ನೀಡಲು ವಿಫಲವಾಯಿತು.
ಆಸ್ಟ್ರೇಲಿಯಾ ಬೌಲಿಂಗ್ ಎದುರು ನಿಲ್ಲಲಾಗದೆ ಲಂಕಾ ವಿಕೆಟ್‌ಗಳು ಒಂದಾದ ಮೇಲೆ ಒಂದರಂತೆ ಬೀಳತೊಡಗಿತು. ಕುಶಾಲ್ ಮೆಂಡಿಸ್ 9 ರನ್ ಗಳಿಸಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಾಲ್ಕನೇ ಕ್ರಮಾಂಕದ ಸದೀರ ವಿಕ್ರಮ 8 ರನ್ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ನಿರಾಸೆ ಮೂಡಿಸಿದರು. 32.1 ಆಗಿದ್ದ ಸಂದರ್ಭ ಮಳೆ ಕಾಣಿಸಿಕೊಂಡ ಪರಿಣಾಮ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ಮಳೆ ನಿಂತ ಮೇಲೆ ಬ್ಯಾಟಿಂಗ್ ಆರಂಬಿಸಿದ ಲಂಕಾ ಬ್ಯಾಟರ್ಸ್ ಅಕ್ಷರಶಃ ಪರದಾಡಿದರು. ಧನಂಜಯ್ ಡಿಸಿಲ್ವ (7) ಚಮಿಕಾ ಕರುಣಾರತ್ನೆ (2) ಗಳಿಸಿ ವಿಕೆಟ್ ಕೈಚೆಲ್ಲಿದರು. ದುನಿತ್ ವೆಳಾಲಗೆ 2 ರನ್ ಗಳಿಸಿ ರನ್ ಕದಿಯಲು ಮುಂದಾಗಿ ರನೌಟ್ ಆದರು. ಮಹೇಶ ತೀಕ್ಷಣ ಶೂನ್ಯಕ್ಕೆ ಎಲ್‌ಬಿಡಬ್ಲ್ಯೂ ಆದರು. ಲಾಹಿರು ಕುಮಾರ 4 ರನ್‌ಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು. ಒಂದು ಕಡೆ ವಿಕೆಟ್‌ಗಳ ಪತನ ಆಗುತ್ತಿದ್ದರೂ ಚರಿತ್ ಹಸಲಂಕ 25 ರನ್ ಗಳಿಸಿ ರಕ್ಷಣಾತ್ಮಕ ಆಟದ ಪ್ರಯತ್ನದಲ್ಲಿದ್ದರು. ಆದರೆ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾಗಿ ನಿರಾಸೆ ಮೂಡಿಸಿದರು. ಆ ಮೂಲಕ ಶ್ರೀಲಂಕಾ 209 ರನ್‌ಗೆ ಆಲೌಟ್ ಆಯಿತು. ಇದನ್ನೂ ಓದಿ: ಪಾಕ್ ಕ್ರಿಕೆಟಿಗರಿಗೆ ಜೈ ಶ್ರೀರಾಮ್ ಘೋಷಣೆ: ಉದಯನಿಧಿ ಆಕ್ಷೇಪ
ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡಿದ ಆ್ಯಡಂ ಜಂಪಾ 4 ವಿಕೆಟ್ ಕಬಳಿಸಿ ಮಿಂಚಿದರೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ತಲಾ 2, ಗ್ಲೆನ್ ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು.
ಸಿಡ್ನಿ: ಬಿಗ್‍ಬಾಶ್ ಲೀಗ್‍ನಲ್ಲಿ (Big Bash league) ಮೆಲ್ಬರ್ನ್ ಸ್ಟಾರ್ ತಂಡ ಬೌಲರ್ ಆ್ಯಡಂ ಜಂಪಾ (Adam Zampa) ಮಾಡಿದ ಮಂಕಡ್ ರನೌಟ್‌ನ್ನು (Mankad Run Out) ಅಂಪೈರ್ ನಾಟೌಟ್ ನೀಡಿರುವುದು ವಿವಾದಕ್ಕಿಡಾಗಿದೆ.
ಮೆಲ್ಬರ್ನ್ ರೆನೆಗೇಡ್ಸ್ ತಂಡದ ಪರ ನಾನ್‍ಸ್ಟ್ರೈಕ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಟಾಮ್ ರೋಜರ್ಸ್ ಇತ್ತ ಬೌಲಿಂಗ್ ಆರಂಭಿಸುತ್ತಿದ್ದ ಜಂಪಾರನ್ನು ನೋಡಿ ಕ್ರಿಸ್ ಬಿಟ್ಟು ಮುಂದೆ ಓಡಿದ್ದಾರೆ. ಈ ವೇಳೆ ಜಂಪಾ ಮಂಕಡ್ ರನೌಟ್ ಮಾಡಿದ್ದಾರೆ. ಇದನ್ನೂ ಓದಿ: ಬುಮ್ರಾ ಈಸ್ ಬ್ಯಾಕ್ – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ
ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಹಲವು ಮಂಕಡ್ ರನೌಟ್ ಕೂಡ ಮಾಡಿ ಅಂಪೈರ್‌ಗಳು ಔಟ್ ಎಂಬ ತೀರ್ಮಾನ ನೀಡಿದ್ದಾರೆ. ಆದರೆ ಇಲ್ಲಿ ಅಂಪೈರ್ ನಾಟೌಟ್ ನೀಡಿ ಚರ್ಚೆಗೆ ಗ್ರಾಸವಾಗಿದೆ.
ಮಂಕಡ್ ಔಟ್:
ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರಿಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್ ಎಂದೇ ಪರಿಗಣಿಸಲಾಗುವುದಾಗಿ ಐಸಿಸಿ ನಿಯಮ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್
Live Tv
[brid partner=56869869 player=32851 video=960834 autoplay=true]
ಲಂಡನ್: ವಿಶ್ವಕಪ್ ಕ್ರಿಕೆಟಿನ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್ ಗಳಿಂದ ಪಂದ್ಯ ಗೆದ್ದರೂ ಆಸೀಸ್ ಬೌಲರ್ ಮೇಲೆ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿ ಬಂದಿದೆ.
ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಆ್ಯಡಂ ಜಂಪಾ ಅವರು ಬೌಲ್ ಮಾಡುವ ಸಮಯದಲ್ಲಿ ತೋರಿದ ನಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಚೆಂಡು ವಿರೂಪಗೊಳಿಸಿದ ಆರೋಪ ಮಾಡುತ್ತಿದ್ದಾರೆ.
ಭಾರತದ ಇನ್ನಿಂಗ್ಸ್ 24ನೇ ಓವರ್ ಆರಂಭಕ್ಕೂ ಮುನ್ನ ಜಂಪಾ ಬಾಲನ್ನು ತೆಗೆದುಕೊಂಡು ಜೇಬಿಗೆ ಕೈ ಹಾಕಿದ್ದಾರೆ. ಒಂದು ಬಾರಿ ಜೇಬಿಗೆ ಕೈ ಹಾಕಿದರೆ ಯಾವುದೇ ಅನುಮಾನ ಬರುತ್ತಿರಲಿಲ್ಲ. ಆದರೆ ಜಂಪಾ ಎರಡು ಬಾರಿ ಜೇಬಿಗೆ ಕೈ ಹಾಕಿದ್ದರಿಂದ ಭಾರತದ ಅಭಿಮಾನಿಗಳು ಈ ನಡೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಜಂಪಾ ಓವರ್ ಹಾಕುವ ಮೊದಲು ಶಿಖರ್ ಧವನ್ ಭರ್ಜರಿಯಾಗಿ ಆಡುತ್ತಿದ್ದರು. ಜಂಪಾ ಅವರ ಓವರ್ ಬಳಿಕ ಶಿಖರ್ ಧವನ್ ದೊಡ್ಡ ಹೊಡೆತವನ್ನು ಹೊಡೆಯಲು ಕಷ್ಟವಾಗುತಿತ್ತು ಎಂದು ಟ್ವಿಟ್ಟರಿಗರು ಆರೋಪಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕ ಆ್ಯರೋನ್ ಫಿಂಚ್ ಪ್ರತಿಕ್ರಿಯಿಸಿ, ನಾನು ಫೋಟೋ ನೋಡಿಲ್ಲ. ಪ್ರತಿ ಪಂದ್ಯದ ವೇಳೆ ಜಂಪಾ ಹಿಸೆಯಲ್ಲಿ ಹ್ಯಾಂಡ್ ವಾರ್ಮರ್ಸ್ ಇರುತ್ತದೆ. ಅದನ್ನೇ ಬಳಸಿರಬಹುದು ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸಿಸ್ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸಿಕ್ಕಿ ಬಿದ್ದು ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿದರೆ, ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 316 ರನ್ ಗಳಿಗೆ ಆಲೌಟ್ ಆಯ್ತು. ಭಾರತದ ಬ್ಯಾಟ್ಸ್ ಮನ್ ಗಳು ಕೊನೆಯ 10 ಓವರ್ ಗಳಲ್ಲಿ 116 ರನ್ ಚಚ್ಚಿದರೆ ಕೊನೆಯ 11 ಓವರ್ ಗಳಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡಿತ್ತು.
40 ಓವರ್ ಗಳಿಸಿದಾಗ ಭಾರತ 2 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು. ಅಂತಿಮವಾಗಿ 50 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಟೀಂ ಇಂಡಿಯಾ ಪರ ಶಿಖರ್ ಧವನ್ 117 ರನ್, ರೋಹಿತ್ ಶರ್ಮಾ 57 ರನ್, ವಿರಾಟ್ ಕೊಹ್ಲಿ 82 ರನ್, ಹಾರ್ದಿಕ್ ಪಾಂಡ್ಯ 48 ರನ್ ಹೊಡೆದರು.
ಆಸ್ಟ್ರೇಲಿಯಾ ಪರ ವಾರ್ನರ್ 56 ರನ್, ಸ್ಮಿತ್ 69 ರನ್, ಕ್ಯಾರಿ 55 ರನ್ ಹೊಡೆದರು. ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ತಲಾ 3 ವಿಕೆಟ್ ಪಡೆದರೆ ಚಹಾಲ್ 2 ವಿಕೆಟ್ ಪಡೆದರು.