Tag: Adam Pasha

  • ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ – ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಎನ್‍ಸಿಬಿ ವಶಕ್ಕೆ

    ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ – ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಎನ್‍ಸಿಬಿ ವಶಕ್ಕೆ

    – ಮುಳುವಾಯ್ತಾ ಅನಿಕಾ ಜೊತೆಗಿನ ನಂಟು?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಅವರನ್ನ ಎನ್‍ಸಿಬಿ (ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ವಿಭಾಗದ ಎನ್‍ಸಿಬಿ ಅಧಿಕಾರಿಗಳು ಆದಂ ಪಾಷಾ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ ಪೆಡ್ಲರ್ ಅನಿಕಾಳಿದಂದ ಆದಂ ಡ್ರಗ್ಸ್ ಖರೀದಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಆದಂ ಪಾಷಾಗೆ ಎನ್‍ಸಿಬಿ ಸಮನ್ಸ್ ನೀಡಿತ್ತು. ಈ ಹಿಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಆದಂ ಪಾಷಾ, ಅನಿಕಾ ತಮಗೆ ಪರಿಚಯ ಎಂದು ಹೇಳಿಕೊಂಡಿದ್ದರು. ಆಗಸ್ಟ್ 19ರಂದು ಎನ್.ಸಿ.ಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದ ಅನಿಕಾ ಜೊತೆಗೆ ಆದಂ ಪಾಷಾಗೆ ಸಂಪರ್ಕವಿದ್ದು ಡ್ರಗ್ಸ್ ಖರೀದಿಸಿರುವ ಬಗ್ಗೆ ಪಕ್ಕಾ ಮಾಹಿತಿಗಳನ್ನ ಆಧರಿಸಿದ ಎನ್‍ಸಿಬಿ ಪಾಷಾರನ್ನ ವಶಕ್ಕೆ ಪಡೆದಿದೆ. ಇದನ್ನೂ ಓದಿ:  ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

    ಅನಿಕಾ ಬಂಧನದ ಬಳಿಕ ಆದಂ ಪಾಷಾಗೆ ಅನಿಕಾ ಜೊತೆ ನಂಟಿದ್ದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಈ ಬಗ್ಗೆ ಮಾತನಾಡಿದ್ದ ಪಾಷಾ ನನಗೆ ಅನಿಕಾ ಪರಿಚಯವಿರುವುದು ನಿಜ. ಆದ್ರೆ ಆಕೆ ಡ್ರಗ್ ಡೀಲರ್ ಎಂಬುದು ಗೊತ್ತಿರಲಿಲ್ಲ ಎಂದಿದ್ದರು. ಎನ್‍ಸಿಬಿ ಮುಂದೆ ಹಾಜಾರಾಗುವಂತೆ ಪಾಷಾಗೆ ನೋಟಿಸ್ ಸಹ ನೀಡಲಾಗಿತ್ತು. ಅದರಂತೆ ಇಂದು ಎನ್.ಸಿ.ಬಿ ಮುಂದೆ ಹಾಜರಾಗಿದ್ದ ಆದಂ ಪಾಷಾ ವಿಚಾರಣೆ ನಡೆಸಿದ ಅಧಿಕಾರಿಗಳು ಅಂತಿಮವಾಗಿ ಪಾಶಾರನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

    ಅನಿಕಾ ಜೊತೆ ಆದಂ ನಂಟು: ಒಂದು ವರ್ಷದ ಹಿಂದೆ ಕಮ್ಮನಹಳ್ಳಿಯ ಕ್ಲಬ್ ನಲ್ಲಿ ಅನಿಕಾ ಪರಿಚಯ ಆಗಿದ್ದಳು. ನಾನು ಡ್ಯಾನ್ಸರ್ ಆಗಿದ್ದರಿಂದ ಡ್ಯಾನ್ಸ್ ಕ್ಲಬ್ ಹೋದಾಗ ಅನಿಕಾ ಸಿಕ್ಕಿದ್ದಳು ಆಗಿನಿಂದ ಪರಿಚಯ ಆಗಿದ್ದಳು. ಆಫ್ರಿಕನ್ ಮ್ಯೂಸಿಕ್ ಕ್ಲಬ್‍ಗೆ ಹೋದಾಗ ನನಗೆ ಅನಿಕಾ ಪರಿಚಯವಾಗಿದ್ದಳು. ಆದರೆ ಅವಳು ಆಗ ನಿಜ ಹೆಸರು ಹೇಳಿರಲಿಲ್ಲ. ಅವಳ ಹೆಸರನ್ನು ನಿಕಿ ಎಂದು ಹೇಳಿದ್ದಳು. ಎಲ್ಲರೂ ಕ್ಲಬ್‍ಗೆ ಬರುವುದು ಮಾಮೂಲಿ ಆಗಿದ್ದರಿಂದ ನಾನು ತಲೆಕೆಡೆಸಿಕೊಳ್ಳಲಿಲ್ಲ. ನೀವು ಏನು ಮಾಡುತ್ತೀರಿ ಏನು ಎತ್ತ ಏನನ್ನೂ ಕೇಳಲಿಲ್ಲ ಎಂದು ಆದಂ ಹೇಳಿಕೊಂಡಿದ್ದರು. ಇದನ್ನೂ ಓದಿ:  ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ಸಪ್ಲೈ – ಅಧಿಕಾರಿಗಳು ಬಂಧಿಸಿದಾಗಲೂ ನಶೆಯಲ್ಲಿದ್ದ ಅನಿಕಾ

    ಒಂದೊಂದು ಬಾರಿ ಕ್ಯಾಬ್‍ಗೂ ಹಣವಿಲ್ಲದಿದ್ದಾಗ ಅನಿಕಾ ನಮಗೆ ಹಣ ನೀಡಿ ಕಳುಹಿಸುತ್ತಿದ್ದಳು. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ನಾನು ಯಾವುದಕ್ಕೂ ಹೆದರಿಕೊಳ್ಳುವುದಿಲ್ಲ. ಸಿನಿಮಾ ಸೆಲೆಬ್ರಿಟಿಗಳ ಜೊತೆ ನನಗೆ ನಂಟಿಲ್ಲ. ಹಾಗಾಗಿ ಯಾರು ಅನಿಕಾ ಜೊತೆ ಬರುತ್ತಿದ್ದರು ಎಂಬುದು ಗೊತ್ತಿಲ್ಲ. ನಾನು ಕ್ಲಬ್ ನಲ್ಲಿ ಸಾಲ್ಸಾ ಡ್ಯಾನ್ಸ್ ಮಾಡಲು ಹೋಗುತ್ತಿದ್ದೆ ಎಂದು ತಿಳಿಸಿದ್ದರು.

    ಅವಳೊಂದಿಗೆ ಯಾರು ಇರುತ್ತಿದ್ದರು ಎಂದು ಸಹ ನಾನು ನೋಡಿಲ್ಲ. ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಿ ಬರುತ್ತಿದ್ದೆ ಅಷ್ಟೆ. ನಾನ್ಯಾಕೆ ಬೇರೆಯವರನ್ನು ನೋಡಬೇಕು. ನಟಿ ನಯನ ಮನೆಯಲ್ಲಿ ಕೊನೆಯ ಸೆಲೆಬ್ರೆಟಿ ಪಾರ್ಟಿಯಾಗಿತ್ತು. ನಂತರ ಯಾವುದೇ ಪಾರ್ಟಿಗೆ ನಾನು ಹೋಗಿಲ್ಲ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳನ್ನ ತಳ್ಳಿ ಹಾಕಿದ್ದರು.

    ಯಾರು ಈ ಲೇಡಿ ಡ್ರಗ್ ಡೀಲರ್ ಅನಿಕಾ?: ಅನಿಕಾ ಮೂರು ನಕಲಿ ನೇಮ್‍ಗಳನ್ನು ಇಟ್ಟುಕೊಂಡಿದ್ದಳು. ಅನಿಕಾ ಡಿ, ಅನಿ ಮತ್ತು ಬಿಮನಿ ಎಂಬ ಮೂರು ಹೆಸರಿನಿಂದ ಪರಿಚಯಿಸಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಬಿಮನಿ ಎಂಬ ಹೆಸರು ಬಳಸುತ್ತಿದ್ದಳು ಎಂಬ ಮಾಹಿತಿ ಲಭಿಸಿದೆ. ಜೊತೆಗೆ ಈಕೆ ತಮಿಳುನಾಡಿನವಳಾಗಿದ್ದು, 24 ವರ್ಷ ವಯಸ್ಸಿನವಳಾಗಿದ್ದಾಳೆ.

    ಅನಿಕಾ ತಮಿಳುನಾಡಿನ ಸೇಲಂ ಸಮೀಪದ ಯರ್ಕಾಡ್ ಮೂಲದವಳು. ಅನಿಕಾ ತಂದೆ ದಿನೇಶ್‍ಗೆ ಮೂವರು ಮಕ್ಕಳಿದ್ದು, ಅನಿಕಾಳೇ ದೊಡ್ಡವಳು. ಅನಿಕಾಗೆ ಒಬ್ಬಳು ತಂಗಿ, ಒಬ್ಬ ತಮ್ಮ ಇದ್ದು ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಿಕಾ ಯರ್ಕಾಡ್‍ನ ಶೆವ್ರಾಯ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಹೋಟೆಲ್ ಮ್ಯಾನೇಜ್‍ಮೆಂಟ್ ಡಿಗ್ರಿಯ ಎರಡನೇ ವರ್ಷದಲ್ಲಿ ಫೇಲ್ ಆಗಿ ವಿದ್ಯಾಭ್ಯಾಸವನ್ನು ಬಿಟ್ಟಿದ್ದಾಳೆ ಎನ್ನಲಾಗಿದೆ.

    ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಅನಿಕಾ, ಕೆಲಸ ಸಿಗದೇ ಡ್ರಗ್ ಜಾಲ ಸೇರಿಕೊಂಡಳು. ನಗರದ ದೊಡ್ಡಗುಬ್ಬಿಯಲ್ಲಿ ಐಶ್ವರ್ಯ ನಿಲಯದಲ್ಲಿ ವಾಸವಾಗಿದ್ದು, ಇಲ್ಲಿಂದಲೇ ಡ್ರಗ್ ದಂಧೆ ನಡೆಸುತ್ತಿದ್ದಳು. ಮುಂಬೈನ ಡ್ರಗ್ ಪೆಡ್ಲರ್ ಕೊಟ್ಟ ಮಾಹಿತಿ ಮೇರೆಗೆ ಈಕೆ ಮನೆಯ ಮೇಲೆ ದಾಳಿ ಮಾಡಿದಾಗ, ಎಂಡಿಎಂಎ ಎಂಬ ಮಾದಕ ವಸ್ತು ಸಮೇತ ಸಿಕ್ಕಿಬಿದ್ದು ಅರೆಸ್ಟ್ ಆಗಿದ್ದಾಳೆ.

     

  • ಡ್ರಗ್ ಡೀಲರ್ ಅನಿಕಾ ಜೊತೆ ನಂಟು ಇರೋದು ನಿಜ- ಆದಂ ಪಾಷಾ

    ಡ್ರಗ್ ಡೀಲರ್ ಅನಿಕಾ ಜೊತೆ ನಂಟು ಇರೋದು ನಿಜ- ಆದಂ ಪಾಷಾ

    ಬೆಂಗಳೂರು: ಡ್ರಗ್ ಡೀಲರ್ ಅನಿಕಾ ಜೊತೆ ಸಂಪರ್ಕ ಹೊಂದಿರುವುದು ನಿಜ ಎಂದು ಬಿಗ್ ಬಾಸ್ ಸ್ಪರ್ಧಿ ಆದಂ ಪಾಷಾ ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಒಂದು ವರ್ಷದ ಹಿಂದೆ ಕಮ್ಮನಹಳ್ಳಿಯ ಕ್ಲಬ್ ನಲ್ಲಿ ಅನಿಕಾ ಪರಿಚಯ ಆಗಿದ್ದಳು. ನಾನು ಡ್ಯಾನ್ಸರ್ ಆಗಿದ್ದರಿಂದ ಡ್ಯಾನ್ಸ್ ಕ್ಲಬ್ ಹೋದಾಗ ಅನಿಕಾ ಸಿಕ್ಕಿದ್ದಳು ಆಗಿನಿಂದ ಪರಿಚಯ ಆಗಿದ್ದಳು. ಆಫ್ರಿಕನ್ ಮ್ಯೂಸಿಕ್ ಕ್ಲಬ್‍ಗೆ ಹೋದಾಗ ನನಗೆ ಅನಿಕಾ ಪರಿಚಯವಾಗಿದ್ದಳು. ಆದರೆ ಅವಳು ಆಗ ನಿಜ ಹೆಸರು ಹೇಳಿರಲಿಲ್ಲ. ಅವಳ ಹೆಸರನ್ನು ನಿಕಿ ಎಂದು ಹೇಳಿದ್ದಳು. ಎಲ್ಲರೂ ಕ್ಲಬ್‍ಗೆ ಬರುವುದು ಮಾಮೂಲಿ ಆಗಿದ್ದರಿಂದ ನಾನು ತಲೆಕೆಡೆಸಿಕೊಳ್ಳಲಿಲ್ಲ. ನೀವು ಏನು ಮಾಡುತ್ತೀರಿ ಏನು ಎತ್ತ ಏನನ್ನೂ ಕೇಳಲಿಲ್ಲ ಎಂದು ತಿಳಿಸಿದ್ದಾರೆ.

    ಒಂದೊಂದು ಬಾರಿ ಕ್ಯಾಬ್‍ಗೂ ಹಣವಿಲ್ಲದಿದ್ದಾಗ ಅನಿಕಾ ನಮಗೆ ಹಣ ನೀಡಿ ಕಳುಹಿಸುತ್ತಿದ್ದಳು. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ನಾನು ಯಾವುದಕ್ಕೂ ಹೆದರಿಕೊಳ್ಳುವುದಿಲ್ಲ. ಸಿನಿಮಾ ಸೆಲೆಬ್ರಿಟಿಗಳ ಜೊತೆ ನನಗೆ ನಂಟಿಲ್ಲ. ಹಾಗಾಗಿ ಯಾರು ಅನಿಕಾ ಜೊತೆ ಬರುತ್ತಿದ್ದರು ಎಂಬುದು ಗೊತ್ತಿಲ್ಲ. ನಾನು ಕ್ಲಬ್ ನಲ್ಲಿ ಸಾಲ್ಸಾ ಡ್ಯಾನ್ಸ್ ಮಾಡಲು ಹೋಗುತ್ತಿದ್ದೆ ಎಂದು ತಿಳಿಸಿದ್ದಾರೆ.

    ಅವಳೊಂದಿಗೆ ಯಾರು ಇರುತ್ತಿದ್ದರು ಎಂದು ಸಹ ನಾನು ನೋಡಿಲ್ಲ. ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಿ ಬರುತ್ತಿದ್ದೆ ಅಷ್ಟೆ. ನಾನ್ಯಾಕೆ ಬೇರೆಯವರನ್ನು ನೋಡಬೇಕು. ನಟಿ ನಯನ ಮನೆಯಲ್ಲಿ ಕೊನೆಯ ಸೆಲೆಬ್ರೆಟಿ ಪಾರ್ಟಿಯಾಗಿತ್ತು. ನಂತರ ಯಾವುದೇ ಪಾರ್ಟಿಗೆ ನಾನು ಹೋಗಿಲ್ಲ ಎಂದು ತಿಳಿಸಿದ್ದಾರೆ.

  • ಅಂತದೇನಾಯ್ತು..?- ಬಿಗ್‍ಬಾಸ್ ಶೋನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ

    ಅಂತದೇನಾಯ್ತು..?- ಬಿಗ್‍ಬಾಸ್ ಶೋನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ

    ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್. ಅಭಿನಯ ಚಕ್ರವರ್ತಿ ಸುದೀಪ್ ಸಾರಥ್ಯದಲ್ಲಿ ಮೂಡಿ ಬರುವ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಪ್ರತಿದಿನ ಮನರಂಜನೆಯನ್ನು ನೀಡುತ್ತಿರುತ್ತಾರೆ. ಐದು ಸರಣಿಗಳನ್ನು ಯಶಸ್ವಿಯಾಗಿ ಪೂರ್ಣ ಮಾಡಿರುವ ಬಿಗ್‍ಬಾಸ್ ಈ ಬಾರಿ ಸ್ಪೆಶಲ್ ವ್ಯಕ್ತಿ ಆಡಂ ಪಾಶಾ ಮನೆಗೆ ಪ್ರವೇಶ ಮಾಡುವ ಅವಕಾಶವನ್ನು ನೀಡಿದೆ. ಕಳೆದು ಮೂರು ವಾರಗಳಿಂದಲೂ ಒಮ್ಮೆಯೂ ಭಾವುಕರಾಗದ ಆಡಂ ಪಾಶಾ ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಮೂರು ದಿನಗಳಿಂದ ಬಿಗ್‍ಬಾಸ್ ಮನೆಯಲ್ಲಿ ದೀಪಾವಳಿ ಆಚರಿಸಲಾಗುತ್ತಿತ್ತು. ಹಬ್ಬದ ಪ್ರಯುಕ್ತ ವಿಶೇಷ ಟಾಸ್ಕ್ ಗಳನ್ನು ನೀಡುವ ಮೂಲಕ ಮನೆಯಲ್ಲಿ ದೀಪಾವಳಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿ ಟಾಸ್ಕ್ ಗೆಲುವಿಗಾಗಿ ಎಲ್ಲ ಸ್ಪರ್ಧಿಗಳಿಗೆ ಹೊಸ ಬಟ್ಟೆ, ಹಬ್ಬದೂಟ ಮತ್ತು ಪಟಾಕಿಗಳನ್ನು ನೀಡಲಾಗಿತ್ತು. ಸಂಜೆ ಎಲ್ಲರು ಹೊಸ ಬಟ್ಟೆ ತೊಟ್ಟಿದ್ದ ಸ್ಪರ್ಧಿಗಳಿಗೆ ವಿಶೇಷ ಸಂದೇಶಗಳು ಬಂದಿದ್ದವು. ಈ ಸಂದೇಶ ನನಗೆ ಬಂದಿದೆ ಅಂತ ಊಹಿಸಿ ಸರಿಯಾಗಿದ್ದವರಿಗೆ ಅವರ ಪ್ರೀತಿ ಪಾತ್ರರಿಂದ ಬಂದಿರುವ ಉಡೂಗೊರೆಯನ್ನ ಸಹ ಪಡೆದುಕೊಂಡರು.

    ಆಡಂ ಕಣ್ಣೀರಿಗೆ ಕಾರಣವೇನು?
    ಎಲ್ಲ ಅಭ್ಯರ್ಥಿಗಳಿಗೆ ಸಂದೇಶ ಕಳುಹಿಸಲಾಗಿತ್ತು. ಅದ್ರೆ ಆಡಂ ಪಾಶಾರಿಗೆ ಯಾರು ದೀಪಾವಳಿಯ ಸಂದೇಶ ಕಳುಹಿಸಿರಲಿಲ್ಲ. ಹೀಗಾಗಿ ಎಲ್ಲ ಸ್ಪರ್ಧಿಗಳು ತಮ್ಮ ಕುಟುಂಬಸ್ಥರು ನೀಡಿದ ಗಿಫ್ಟ್ ನಿಂದ ಸಂತೋಷದಲ್ಲಿದ್ದ ಕ್ಷಣದಲ್ಲಿ ಆಡಂ ಒಂದು ಕ್ಷಣ ಭಾವುಕರಾದರು. ಈ ವೇಳೆ ಸಹ ಸ್ಪರ್ಧಿ ನಟಿ ಕವಿತಾ ಗೌಡ ತಮಗೆ ಬಂದಿರುವ ಗಿಫ್ಟ್ ನೀಡುವ ಮೂಲಕ ಆಡಂ ದುಃಖದಲ್ಲಿ ಭಾಗಿಯಾದರು.

    ಏನದು ಗಿಫ್ಟ್:
    ಕವಿತಾರ ಬೆಸ್ಟ್ ಫ್ರೆಂಡ್ ನೂತನ್ ಎಂಬವರು ಇಸ್ರೇಲ್ ನಿಂದ ತಂದಿರುವ ಲಾಕೆಟ್ ನ್ನು ಬಿಗ್‍ಬಾಸ್ ಮನೆಗೆ ಕಳುಹಿಸಲಾಗಿತ್ತು. ಅದೇ ಲಾಕೆಟ್ ನ್ನು ಕವಿತಾ ಆಡಂಗೆ ನೀಡಿದರು. ನಾನು ಈ ಲಾಕೆಟ್ ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೇನೆ. ಆಡಂಗೆ ಕುಟುಂಬಸ್ಥರು ಎಲ್ಲಿದ್ದಾರೆ? ಏನು ಎಂಬುದು ನನಗೆ ಗೊತ್ತಿಲ್ಲ. ಸದ್ಯ ಆಡಂಗಾಗಿ ಯಾವ ಸಂದೇಶ ಅಥವಾ ಗಿಫ್ಟ್ ಬಂದಿಲ್ಲ. ಹಾಗಾಗಿ ನನ್ನ ಅದೃಷ್ಟದ ಲಾಕೆಟ್ ಆಡಂಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

    ಗಿಫ್ಟ್ ಪಡೆದ ಆಡಂ, ಬಿಗ್‍ಬಾಸ್ ಮನೆಗೆ ಬರುವಾಗ ಎಮೆರ್ಜೆನ್ಸಿ ನಂಬರ್ ಕೊಡಿ ಅಂದಾಗ ನಾನು ನನ್ನ ಅಕ್ಕನ ನಂಬರ್ ಕೊಟ್ಟು ಬಂದೆ. ಆದ್ರೆ ಈವರೆಗೂ ನನ್ನನ್ನು ಕುಟುಂಬಸ್ಥರು ಒಪ್ಪಿಕೊಂಡಿಲ್ಲ. ಎಲ್ಲರಿಗೂ ಗಿಫ್ಟ್ ಸಿಗುತ್ತಿರುವಾಗ ನನಗೆ ಸಣ್ಣ ಜಲಸ್ ಆಯಿತು. ನಾನು ಎಂದೂ ಹೊರಗಡೆ ಇರುವ ನನ್ನ ಕುಟುಂಬದ ಬಗ್ಗೆ ಮಾತಾಡಿಲ್ಲ. ಇಂದು ಈ ಕಾರ್ಯಕ್ರಮದಿಂದ ಹೊಸ ಕುಟುಂಬ ನನಗೆ ಸಿಕ್ಕಿದೆ ಎಂದು ಆಡಂ ಖುಷಿ ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಿಗ್‍ಬಾಸ್‍ನ ಸ್ಪೆಷಲ್ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು

    ಬಿಗ್‍ಬಾಸ್‍ನ ಸ್ಪೆಷಲ್ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು

    ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್‍ಬಾಸ್’ ಸೀಸನ್ 6 ಭಾನುವಾರ ಆರಂಭವಾಗಿದ್ದು, ಸಾಮಾನ್ಯ ಸ್ಪರ್ಧಿಗಳು ಸೇರಿದಂತೆ 18 ಮಂದಿ ಬಿಗ್‍ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

    ಈ ಬಾರಿ ಬಿಗ್‍ಬಾಸ್ ನಲ್ಲಿ ಒಂದು ವಿಶೇಷ ಇದ್ದು, ಅದು ಏನೆಂದರೆ ಬಿಗ್ ಮನೆಯಲ್ಲಿ ಎಲ್ಲ ರೀತಿ ಜನರಿಗೂ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ಬಾರಿ ತೃತೀಯ ಲಿಂಗಿಯರಿಗೂ ಅವಕಾಶ ಮಾಡಿಕೊಟ್ಟಿದೆ. ಇದು ಈ ಬಾರಿಯ ಬಿಗ್‍ಬಾಸ್ ಶೋನ ವಿಶೇಷವಾಗಿದೆ.

    9ನೇ ಸ್ಪರ್ಧಿಯಾಗಿ ವಿಭಿನ್ನ ಶೈಲಿಯ ನೃತ್ಯ ಮಾಡುವ ಆಡಮ್ ಪಾಶಾ ದೊಡ್ಡ ಮನೆಗೆ ಪ್ರವೇಶ ಪಡೆದಿದ್ದಾರೆ. ಡ್ರ್ಯಾಗ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಆಡಮ್ ಪಾಶಾ ಬೆಂಗಳೂರಿನ ಫಸ್ಟ್ ಡ್ರ್ಯಾಗ್ ಕ್ವೀನ್ ಹೆಗ್ಗಳಿಕೆ ಹೊಂದಿದ್ದಾರೆ. ಆಡಮ್ ಪಾಶಾ ಬೆಂಗಳೂರಿನಲ್ಲಿ ಹುಟ್ಟಿದ್ದು, ಇಂಗ್ಲೆಂಡ್ ನಲ್ಲಿ ಬೆಳೆದಿದ್ದಾರೆ. ಇವರಿಗೆ ಈಗ 35 ವರ್ಷವಾಗಿದ್ದು, ತಮ್ಮ 13ನೇ ವಯಸ್ಸಿನಲ್ಲಿ ತಾವು ತೃತೀಯ ಲಿಂಗಿ ಅನ್ನೋದು ಗೊತ್ತಾಗಿದೆ. ಇದೀಗ ತೃತೀಯ ಲಿಂಗಿಯೊಬ್ಬರು  ‘ಬಿಗ್ ಬಾಸ್’ ಮನೆಗೆ  ಎಂಟ್ರಿಕೊಟ್ಟಿರುವುದು ಇದೇ ಮೊದಲು.

    ಬಿಗ್‍ಬಾಸ್ ವೇದಿಕೆಯಲ್ಲಿ ಆಡಮ್ ಪಾಶಾ ಮಾತು
    ನನ್ನನ್ನು ಡ್ರ್ಯಾಗ್ ಕ್ವೀನ್ ಅಂತ ಕರೆಯುತ್ತಾರೆ. ಯಾಕೆಂದರೆ ನಾನು ನೋಡಲು ಹುಡುಗನ ತರ ಇದ್ದೀನಿ. ಆದರೆ ನಾನು ಹುಡುಗ ಅಲ್ಲ. ನಾನು ವೇದಿಕೆಯ ಮೇಲೆ ಹುಡುಗಿಯಾಗಿ ಹೋಗುತ್ತೇನೆ. ಹುಡುಗಿಯ ರೀತಿ ಡ್ಯಾನ್ಸ್ ಮಾಡಿ ಎಲ್ಲರನ್ನು ನಗಿಸಿ ಬರುತ್ತೇನೆ. ನಾನು 2018ರಲ್ಲಿ ಬೆಂಗಳೂರಿಗೆ ಬಂದಿದ್ದೆ. ಬ್ಯಾಂಕಾಕ್ ನಲ್ಲಿ ಡ್ರ್ಯಾಗ್ ಕ್ವೀನ್ ಶಾಲೆ ಇದೆ. ಅಲ್ಲಿ ನಾನು ಅಭಿನಯಿಸುವುದು, ಡ್ಯಾನ್ಸ್ ಮಾಡುವುದನ್ನು ಕಲಿತಿದ್ದೇನೆ. ಈಗ ನಾನು ಟ್ರೈನಿ ಕೂಡ ಆಗಿದ್ದೇನೆ. ನಾನು ಯೂರೋಪ್ ಮತ್ತು ಇಂಗ್ಲೆಂಡ್ ನಲ್ಲಿ ಡ್ಯಾನ್ಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ನನ್ನಂತವರಿಗೆ ಅವಕಾಶ ಕೊಟ್ಟಿದ್ದಕ್ಕೆ ವಾಹಿನಿಗೆ ಧನ್ಯವಾದಗಳು. ಸಾಮಾನ್ಯ ಜನರ ಮಧ್ಯೆ ನಮ್ಮಂತವರು ಇರುತ್ತಾರೆ. ನಾವು ಎಲ್ಲಾ ಕೆಲಸ ಮಾಡುತ್ತೇವೆ ಎಂದು ಜನರಿಗೆ ತೋರಿಸುವುದೇ ನಮ್ಮ ಉದ್ದೇಶವಾಗಿದೆ.

    ಇತ್ತೀಚೆಗೆ ಸುಪ್ರೀಂ ಕೋರ್ಟ್ ತೃತೀಯ ಲಿಂಗಗಳಿಗೆ ಅಂತ ಸೆಕ್ಷನ್ 377 ಕಾಯ್ದೆಯನ್ನು ಜಾರಿಗೆ ತಂದಿದೆ. ನಮ್ಮಂತವರು ನಾನು ಈ ರೀತಿ ಇದ್ದೇನೆ ಎಂದು ಮನೆಯಿಂದ ಹೊರಗೆ ಬರಲು ಭಯಪಡುತ್ತಾರೆ. ನಾನು ಧೈರ್ಯವಾಗಿ ಬಂದಿದ್ದೇನೆ. ನನ್ನನ್ನು ನೋಡಿ ನಮ್ಮ ಸಮುದಾಯದವರು ಇನ್ನು ಮುಂದೆ ಧೈರ್ಯವಾಗಿ ಮನೆಯಿಂದ ಹೊರಗೆ ಬರುತ್ತಾರೆ.  ನಮ್ಮನ್ನು ನಾವು ಪ್ರೀತಿಸದಿದ್ದರೆ ಬೇರೆಯವರು ನಮ್ಮನ್ನು ಪ್ರೀತಿಸುವುದಿಲ್ಲ ಎಂದು ಹೇಳಿದ್ದಾರೆ.

    ಕುಟುಂಬ:
    ನನಗೆ ಕುಟುಂಬ ಇಲ್ಲ, 2010ರಲ್ಲಿ ಅಮ್ಮ ನಿಧರಾದರು. ನಾನು ಅಮ್ಮ ಮೃತಪಟ್ಟ ನಂತರ ಬ್ಯಾಂಕಾಕಿಗೆ ಹೋದೆ. ಯಾಕೆಂದರೆ ನಮ್ಮ ತಂದೆಗೆ ಒಬ್ಬ ಮಗಬೇಕಿತ್ತು. ನಾನು ಗೆ ಅಂತ ಗೊತ್ತಿದ್ದರೂ, ಹುಡುಗನ ರೀತಿ ಇರಲು ಹೇಳುತ್ತಿದ್ದರು. ನನ್ನಿಂದ ನಮ್ಮ ತಂದೆ ಸಂತಸದಿಂದ ಇರುತ್ತಿರಲಿಲ್ಲ. ನನಗೂ ನನ್ನ ತಂದೆಯ ಮಧ್ಯೆ ತುಂಬಾ ಅಂತರ ಇತ್ತು. ಆದ್ದರಿಂದ ನಾನು ಬೆಂಗಳೂರು ಬಿಟ್ಟು ಬ್ಯಾಂಕಾಕಿಗೆ ಹೋದೆ. ನನಗೆ ಇಬ್ಬರು ಸಹೋದರಿಯರು ಇದ್ದಾರೆ.

    https://www.facebook.com/ColorsSuper/videos/2032446550134671/

    ಒಮ್ಮೆ ನನ್ನ ಅಕ್ಕ ಫೋನ್ ಮಾಡಿ ತಂದೆಗೆ ಆರೋಗ್ಯ ಸರಿಯಿಲ್ಲ ಬಾ ಎಂದು ಕರೆದರು. ನಾನು ತಕ್ಷಣ ಬೆಂಗಳೂರಿಗೆ ಬಂದೆ ಆದರೆ ನಮ್ಮ ತಂದೆಯವರಿಗೆ ಕ್ಯಾನ್ಸರ್ ಕೊನೆಯ ಹಂತ ತಲುಪಿತ್ತು. ನಮ್ಮ ತಂದೆ ಸಾಯುವ ಸ್ಥಿತಿಯಲ್ಲಿ ಇದ್ದಾಗಲೂ, ನೀನು ಹಿಜಡಾ ಯಾಕೆ ನನ್ನನ್ನು ನೋಡಲು ಬಂದೆ ಎಂದು ಬೈದರು. ಇತ್ತ ನನ್ನ ಅಕ್ಕ ನನ್ನ ಬಳಿ ಹೆಬ್ಬೆಟ್ಟು ಮಾಡಿಕೊಂಡು ಆಸ್ತಿಯಲ್ಲವನ್ನು ಮಾರಾಟ ಮಾಡಿ ಮೋಸ ಮಾಡಿ ಹೋದರು.

    ನನ್ನನ್ನು ಒಳಗಿನ ಸ್ಪರ್ಧಿಗಳು ಒಪ್ಪಿಕೊಳ್ಳಬೇಕು ಎಂದು ಭಯಸುತ್ತೇನೆ ಎಂದು ಹೇಳಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv