Tag: Adalaj Stepwell

  • ವಿಶ್ವಕಪ್‌ ಪಂದ್ಯಕ್ಕೂ ಮುನ್ನ ರಂಗೇರಲಿದೆ ಮೋದಿ ಕ್ರೀಡಾಂಗಣ – ಕಾರ್ಯಕ್ರಮಗಳ ಪಟ್ಟಿ ರಿಲೀಸ್‌

    ವಿಶ್ವಕಪ್‌ ಪಂದ್ಯಕ್ಕೂ ಮುನ್ನ ರಂಗೇರಲಿದೆ ಮೋದಿ ಕ್ರೀಡಾಂಗಣ – ಕಾರ್ಯಕ್ರಮಗಳ ಪಟ್ಟಿ ರಿಲೀಸ್‌

    ಅಹಮದಾಬಾದ್: ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ (BCCI) ಸಮಾರೋಪ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನೂ ರೂಪಿಸಿದ್ದು, ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಸೂಪರ್‌ ಸಂಡೇ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಭಾರತ (Ind vs Aus) ನಡುವಣ ಫೈನಲ್‌ ಪಂದ್ಯದ ವೇಳೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತ ಮಾಹಿತಿಯನ್ನು ಬಿಸಿಸಿಐ ತನ್ನ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಆಸೀಸ್‌ ಫಾರ್ಮ್‌ ಬಗ್ಗೆ ನೋ ಟೆನ್ಷನ್‌, ನಮ್ಮ ಶಕ್ತಿ ಏನೆಂಬುದು ನಾಳೆ ಗೊತ್ತಾಗುತ್ತೆ: ರೋಹಿತ್‌ ಶರ್ಮಾ

    ಲೋಹದ ಹಕ್ಕಿಗಳ ಕಲರವ:
    ಪಂದ್ಯದ ಟಾಸ್​ ಆದ 5 ನಿಮಿಷದಲ್ಲಿ ಅಂದರೆ 1.35ರಿಂದ 1.50ರ ವರೆಗೆ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನ (Narendra Modi Stadium) ಬಾನಂಗಳದಲ್ಲಿ ಲೋಹದ ಹಕ್ಕಿಗಳು ತಮ್ಮ ಚಮತ್ಕಾರ ತೋರಿಸಲಿವೆ. ಆಗಸದಲ್ಲೇ ವಿವಿಧ ಬಣ್ಣಗಳ ಚಿತ್ತಾರ ಬಿಡಿಸಿ ಗಣ್ಯರು ಹಾಗೂ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ. ಎರಡೂ ದಿನಗಳಿಂದಲೂ ರಿಹರ್ಸಲ್‌ ನಡೆಸಿರುವ ಸೂರ್ಯಕಿರಣ್ ತಂಡ ಫೈನಲ್‌ ಶೋಗೆ ಸನ್ನದ್ಧವಾಗಿದೆ.

    ಡ್ರಿಂಕ್ಸ್ ಬ್ರೇಕ್ ವೇಳೆ ಸಂಗೀತ ರಸಮಂಜರಿ:
    ಪಂದ್ಯದ ಮೊದಲ ಇನ್ನಿಂಗ್ಸ್​ನ ಡ್ರಿಂಕ್ಸ್ ಬ್ರೇಕ್ ವೇಳೆ ಆದಿತ್ಯ ಗಧ್ವಿ ಅವರಿಂದ ಗಾಯನ ಪ್ರದರ್ಶನ ನಡೆಯಲಿದೆ. ಮೊದಲ ಇನ್ನಿಂಗ್ಸ್‌ ಮುಗಿದ ಬಳಿಕ ಸಿಗುವ ಸುಮಾರು 30 ನಿಮಿಷಗಳ ಸಮಯದಲ್ಲಿ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಅಕಾಸ ಸಿಂಗ್ ಮತ್ತು ತುಷಾರ್ ಜೋಶಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಇರಲಿದೆ. ಇದನ್ನೂ ಓದಿ: ವಿಶ್ವ ಮಹಾಸಮರಕ್ಕೆ ಕ್ಷಣಗಣನೆ – ಅಡಾಲಾಜ್ ಸ್ಟೆಪ್‌ವೆಲ್‌ನಲ್ಲಿ ನಾಯಕರ ಪ್ರೀ ಫೋಟೋಶೂಟ್

    2ನೇ ಇನ್ನಿಂಗ್ಸ್‌ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಶೋ:
    ಫೈನಲ್​ ಪಂದ್ಯದ 2ನೇ ಇನ್ನಿಂಗ್ಸ್‌ನ ಡ್ರಿಂಗ್ಸ್‌ ಬ್ರೇಕ್‌ ವೇಳೆ ವಿಶಿಷ್ಠ ಶೈಲಿಯ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

    2023ರ ಐಸಿಸಿ ಏಕದಿನ ವಿಶ್ವಕಪ್‌ ಉದ್ಘಾಟನೆ ವೇಳೆ ಬಿಸಿಸಿಐ ಯಾವುದೇ ಸಮಾರಂಭ ಮಾಡಿರಲಿಲ್ಲ. ಇದರಿಂದ ವಿಶ್ವದ ಶ್ರೀಮಂತರ ಕ್ರಿಕೆಟ್‌ ಮಂಡಳಿ ವಿರುದ್ಧ ಭಾರೀ ಟೀಕೆಗಳು ಕೇಳಿಬಂದಿತ್ತು. ಇದನ್ನೂ ಓದಿ: 1.30 ಲಕ್ಷ‌ ಅಭಿಮಾನಿಗಳನ್ನ ದಿಗ್ಭ್ರಮೆಗೊಳಿಸುತ್ತೇವೆ – ಟೀಂ ಇಂಡಿಯಾ ಸೋಲಿಸುವ ಎಚ್ಚರಿಕೆ ನೀಡಿದ ಪ್ಯಾಟ್‌ ಕಮ್ಮಿನ್ಸ್

  • 1.30 ಲಕ್ಷ‌ ಅಭಿಮಾನಿಗಳನ್ನ ದಿಗ್ಭ್ರಮೆಗೊಳಿಸುತ್ತೇವೆ – ಟೀಂ ಇಂಡಿಯಾ ಸೋಲಿಸುವ ಎಚ್ಚರಿಕೆ ನೀಡಿದ ಪ್ಯಾಟ್‌ ಕಮ್ಮಿನ್ಸ್

    1.30 ಲಕ್ಷ‌ ಅಭಿಮಾನಿಗಳನ್ನ ದಿಗ್ಭ್ರಮೆಗೊಳಿಸುತ್ತೇವೆ – ಟೀಂ ಇಂಡಿಯಾ ಸೋಲಿಸುವ ಎಚ್ಚರಿಕೆ ನೀಡಿದ ಪ್ಯಾಟ್‌ ಕಮ್ಮಿನ್ಸ್

    ಅಹಮದಾಬಾದ್‌: 13ನೇ ಆವೃತ್ತಿಯ ಏಕದಿನ ವಿಶ್ವಕಪ್‌ (World Cup) ಟೂರ್ನಿಗೆ ಕ್ಷಣಗಣನೆ ಬಾಕಿಯಿದ್ದು, ಸೂಪರ್‌ ಸಂಡೇ ಕದನಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಟೀಂ ಇಂಡಿಯಾ (Team India) ತಂಡವನ್ನು ಸೋಲಿಸುವ ಎಚ್ಚರಿಕೆ ನೀಡಿದ್ದಾರೆ.

    ವಿಶ್ವಕಪ್‌ ಪಂದ್ಯಕ್ಕೂ ಮುನ್ನ ನಡೆದ ಪ್ರೀ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿರುವ ಕಮ್ಮಿನ್ಸ್‌, ಫೈನಲ್‌ (World Cup Final) ಪಂದ್ಯದಲ್ಲಿ 1.30 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಷ್ಟೂ ಆತಿಥೇಯ ಪ್ರೇಕ್ಷಕರ ಬಾಯಿ ಮುಚ್ಚಿಸುವುದೇ ತಂಡದ ಬಹುದೊಡ್ಡ ಗುರಿ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ವಿಶ್ವ ಮಹಾಸಮರಕ್ಕೆ ಕ್ಷಣಗಣನೆ – ಅಡಾಲಾಜ್ ಸ್ಟೆಪ್‌ವೆಲ್‌ನಲ್ಲಿ ನಾಯಕರ ಪ್ರೀ ಫೋಟೋಶೂಟ್

    ಆತಿಥೇಯರ ಎದುರು ಫೈನಲ್‌ ಆಡುತ್ತಿರುವ ಕಾರಣ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಬೆಂಬಲ ನೂರರಷ್ಟು ಆತಿಥೇಯರ ತಂಡದ ಪರವಾಗಿಯೇ ಇರಲಿದೆ. ಅಂತೆಯೇ ಈ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಜಯದ ನಾಗಾಲೋಟದಲ್ಲಿ ಫೈನಲ್‌ಗೆ ತಲುಪಿದೆ. ಸಹಜವಾಗಿಯೇ ಅಭಿಮಾನಿಗಳ ಬೆಂಬಲ ಭಾರತ ತಂಡದ ಪರವಾಗಿ ಇರುತ್ತದೆ. ಹೀಗಾಗಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಬಾಯಿ ಮುಚ್ಚಿಸುವಂತಹ ಆಟವಾಡಿದರೆ ಅದಕ್ಕಿಂತಲೂ ತೃಪ್ತಿಕರ ಅನುಭವ ಮತ್ತೊಂದು ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

    ಟೀಂ ಇಂಡಿಯಾ ಇಲ್ಲಿಯವರೆಗೆ ಅಜೇಯವಾಗಿ ಉತ್ತಮ ಕ್ರಿಕೆಟ್‌ ಆಡುತ್ತಾ ಬಂದಿದೆ. ಆದ್ರೆ ನಾವು ಅವರಿಗೆ ಹೇಗೆ ಶಾಕ್‌ ನೀಡಬೇಕೆಂಬುದು ತಿಳಿದಿದೆ. ಕಳೆದ 2 ವರ್ಷಗಳಲ್ಲಿ ಅವರೊಂದಿಗೆ ಸಾಕಷ್ಟು ಬಾರಿ ಸರಣಿ ಆಡಿದ್ದೇವೆ ಎಂದು ಹೇಳಿದ್ದಾರೆ.

    ಶಮಿ ದೊಡ್ಡ ಶಕ್ತಿ: ಇದೇ ವೇಳೆ ಮೊಹಮ್ಮದ್‌ ಶಮಿ ಬೌಲಿಂಗ್‌ ಪ್ರದರ್ಶನದ ಕುರಿತು ಮಾತನಾಡಿರುವ ಪ್ಯಾಟ್‌ ಕಮ್ಮಿನ್ಸ್‌, ಶಮಿ ಟೀಂ ಇಂಡಿಯಾದ ದೊಡ್ಡ ಶಕ್ತಿ ಎಂದು ಹೊಗಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲೇ ಮೊಹಮ್ಮದ್‌ ಶಮಿ ಒಟ್ಟು 23 ವಿಕೆಟ್‌ಗಳನ್ನ ಪಡೆದುಕೊಂಡಿದ್ದಾರೆ. ಈ ಪೈಕಿ ಒಂದೇ ವಿಶ್ವಕಪ್‌ನಲ್ಲಿ 3 ಬಾರಿ 5 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಮಾತಿನಲ್ಲೇ ತಿವಿದ ವಿಚ್ಛೇದಿತ ಪತ್ನಿ – ತೆರೆಯ ಹಿಂದೆ ಶಮಿಯ ಬದುಕು ಘೋರ!

    5 ಬಾರಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡದ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ 3 ವಿಕೆಟ್‌ಗಳಿಂದ ಮಣಿಸಿ ದಾಖಲೆಯ 8ನೇ ಬಾರಿ ಫೈನಲ್‌ಗೆ ಕಾಲಿಟ್ಟಿದೆ. ಇನ್ನೂ ಲೀಗ್‌ ಹಂತದಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎದುರು ಸೋತಿದ್ದ ಆಸ್ಟ್ರೇಲಿಯಾ, ಇನ್ನುಳಿದ 7 ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು. ಆದ್ರೆ ಆರಂಭದಿಂದಲೂ ಭಾರತ ಒಂದೂ ಪಂದ್ಯವನ್ನೂ ಸೋಲದೇ ಸತತ 10 ಪಂದ್ಯಗಳನ್ನೂ ಗೆದ್ದಿರುವ ಹಿಟ್‌ಮ್ಯಾನ್‌ ಸೈನ್ಯ ಫೈನಲ್‌ ಪಂದ್ಯವನ್ನೂ ಗೆದ್ದು ಟ್ರೋಫಿ ಎತ್ತಿ ಹಿಡಿಯುವ ಗುರಿ ಹೊಂದಿದೆ.