Tag: Ada Sharma

  • ಸೀರೆಯುಟ್ಟು ಕಾರ್ಟ್‍ವೀಲ್ ಫ್ಲಿಪ್ ಮಾಡಿದ ಅದಾ ಶರ್ಮಾ

    ಸೀರೆಯುಟ್ಟು ಕಾರ್ಟ್‍ವೀಲ್ ಫ್ಲಿಪ್ ಮಾಡಿದ ಅದಾ ಶರ್ಮಾ

    ಬೆಂಗಳೂರು: ಸೀರೆಯುಟ್ಟ ಅದಾ ಶರ್ಮಾ ಕಡಲ ತೀರದಲ್ಲಿ ಕಾರ್ಟ್‍ವೀಲ್ ಫ್ಲಿಪ್ ಮಾಡಿದ್ದಾರೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    ಹಾಟ್ ಫೋಟೋ ಶೂಟ್‍ಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಅದಾ ಶರ್ಮಾ. ಇದೀಗ ಸಮುದ್ರದ ತಟದಲ್ಲಿ ಕಾರ್ಟ್‍ವೀಲ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಕಾರ್ಟ್‍ವೀಲ್ ಮಾಡಿರುವುದರಲ್ಲಿಯೂ ಒಂದು ವಿಶೇಷತೆ ಇದೆ. ಸೀರೆಯನ್ನು ತೊಟ್ಟು ಕಾರ್ಟ್‍ವೀಲ್ ಮಾಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆ ಮತ್ತು ಉತ್ತಮ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ನಟಿಮಣಿಯರಲ್ಲಿ ಅದಾ ಶರ್ಮಾ ಕೊಂಚ ವಿಭಿನ್ನವಾಗಿದ್ದಾರೆ. ಇತ್ತೀಚೆಗೆ ಇವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಹಾಟ್ ಫೋಟೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ತಮ್ಮ ಲೆಟೆಸ್ಟ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋಗಳು ಸಖತ್ ವೈರಲ್ ಆಗಿದ್ದವು. ಫೋಟೋಗಳ ಜೊತೆಗೆ ತಮ್ಮ ವಿಭಿನ್ನವಾದ ವಿಡಿಯೋಗಳ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

    ಅದಾ ಶರ್ಮಾ 16 ವರ್ಷದವರಿದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2008ರಲ್ಲೇ ಅದಾ ಅವರ ಬಣ್ಣದ ಜಗತ್ತಿನ ಪಯಣ ಆರಂಭವಾಗಿತ್ತು. ವಿಕ್ರಂ ಭಟ್ ಅವರ ಸಿನಿಮಾ ಮೂಲಕ ಅದಾ ಬಾಲಿವುಡ್‍ಗೆ ಕಾಲಿಟ್ಟಿದ್ದಾರೆ. ಇದೀಗ ತಮ್ಮ ಉತ್ತಮ ನಟನೆಯ ಮೂಲಕವಾಗಿ ರಂಜಿಸುತ್ತಿದ್ದಾರೆ.

     

    View this post on Instagram

     

    A post shared by Adah Sharma (@adah_ki_adah)

    ತಮ್ಮ ಹಾಟ್ ಫೋಟೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ, ಈ ನಟಿ ತಮ್ಮ ಸಖತ್ ಡಿಫರೆಂಟ್ ಫಿಟ್ನೆಸ್ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಮೆಚ್ಚಿ ಕಮೆಂಟ್‍ಗಳ ಸುರಿಮಳೆಗೈಯುತ್ತಿದ್ದಾರೆ.

  • ಬೆರಳು ಗಾಯವಾಗಿದ್ದಕ್ಕೆ ನಟಿಯಿಂದ ಮಂಕಿಮಾಸ್ಕ್ ಧರಿಸಿ ಡ್ಯಾನ್ಸ್: ವಿಡಿಯೋ ವೈರಲ್

    ಬೆರಳು ಗಾಯವಾಗಿದ್ದಕ್ಕೆ ನಟಿಯಿಂದ ಮಂಕಿಮಾಸ್ಕ್ ಧರಿಸಿ ಡ್ಯಾನ್ಸ್: ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಅದಾ ಶರ್ಮಾ ಬೆರಳು ನೋವನ್ನು ಮರೆಯಲು ಮಂಕಿಮಾಸ್ಕ್ ಧರಿಸಿ ಮುಕಾಬುಲಾ ಹಾಡಿಗೆ ಸ್ಟೆಪ್ ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ವೈರಲ್ ಆಗಿದೆ.

    ಈ ವಿಡಿಯೋದಲ್ಲಿ ಅದಾ ಶರ್ಮಾ, ಪ್ರಭುದೇವ್ ಅವರು ಡಾನ್ಸ್ ಮಾಡಿರುವ ಮುಕಾಬುಲಾ ಹಾಡಿಗೆ ಸೀರೆಯನ್ನು ತೊಟ್ಟು ಜೊತೆಗೆ ಮಂಕಿ ಮಾಸ್ಕ್ ಅನ್ನು ಧರಿಸಿ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ಮಾಡಿದ್ದ ವಿಡಿಯೋವನ್ನು ಅದಾ ಶರ್ಮಾ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿ, ನನ್ನ ಕೈಗಳು ನಿಧಾನವಾಗಿ ಸರಿಯಾಗುತ್ತಿದೆ. ಪ್ರೀತಿ, ಆಶೀರ್ವಾದ ನೀಡಿದ ಎಲ್ಲರಿಗೂ ಧನ್ಯವಾದಗಳು ನಿಮ್ಮ ಪ್ರೀತಿ ನನಗೆ ಶಕ್ತಿ ನೀಡುತ್ತಿದೆ ಎಂದು ಅದಾ ಶರ್ಮಾ ಬರೆದುಕೊಂಡಿದ್ದಾರೆ.

    ಬೆರಳಿನ ನೋವು ಜಾಸ್ತಿಯಾಗಿದೆ. ಹಾಗಾಗಿ ಲಂಡನ್ ನಲ್ಲಿರುವ ವ್ಯಕ್ತಿಯೊಬ್ಬರು ಮಂಕಿ ಮಾಸ್ಕ್ ನೀಡಿದ್ದು, ನೋವನ್ನು ಮರೆಯಲು ಮಂಕಿ ಮಾಸ್ಕ್ ಹಾಕಿ ಡಾನ್ಸ್ ಮಾಡಿದ್ದೇನೆಂದು ಅದಾ ಹೇಳಿದ್ದಾರೆ. ಇದು ಪ್ರಭುದೇವ್ ಅವರ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ. ಈ ಹಿಂದೆ ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟವೆಂದು ಅದಾ ಹೇಳಿದ್ದಾರೆ.

    ಈ ಡ್ಯಾನ್ಸ್ ವಿಡಿಯೋವಿಗೆ ಕ್ರೇಜಿ ಅದಾ, ಬ್ಯೂಟಿ, ಅಸ್ಸಮ್ ಡ್ಯಾನ್ಸ್, ಫುಲ್ ಕ್ರೇಜಿ ಗರ್ಲ್, ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ 1.34 ಲಕ್ಷ ಲೈಕ್ಸ್ ಪಡೆದುಕೊಂಡಿದ್ದು, 5.81 ಲಕ್ಷ ವ್ಯೂ ಕಂಡಿದೆ.

    https://www.instagram.com/p/BoYVnJwHrVY/?taken-by=adah_ki_adah

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv