Tag: Ad

  • ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಯಶ್

    ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಯಶ್

    ಕೆಜಿಎಫ್ 2 (KGF2 ) ಸಿನಿಮಾದ ನಂತರ ಯಶ್ (Yash) ಅವರ ಮುಂದಿನ ಸಿನಿಮಾ ಬಗ್ಗೆ ಹಲವಾರು ಬಾರಿ ಚರ್ಚೆ ಮಾಡಲಾಗಿದೆ. ಈವರೆಗೂ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ಚಿತ್ರದ ಕೆಲಸ ನಡೆದಿದೆ, ಸಮಯ ಬಂದಾಗ ತಿಳಿಸುವೆ ಎನ್ನುತ್ತಲೇ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಲೇ ಬಂದಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಮಸ್ತ್ ಮಸೇಜ್ ನೀಡಿದ್ದಾರೆ.

    ಸದ್ಯ ಯಶ್, ತಂಪು ಪಾನೀಯವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿ ಅವರು ಖಡಕ್ ಡೈಲಾಗ್ ಹೊಡೆದಿದ್ದಾರೆ. ‘ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿ ಮಾತಿನ ದಾಳಿ ಮಾಡ್ತಾರೆ. ಇದು ಮಾಡು, ಅದು ಬೇಡ ಅಂತಾರೆ. ಹೇಳಿದ್ದು ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್​ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ, ಮಾತಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರು’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಸಂದೇಶವನ್ನೇ ನೀಡಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಈ ಜಾಹೀರಾತಿನಲ್ಲಿ ಅವರ ಲುಕ್, ಕಾನ್ಸೆಪ್ಟ್, ಗೆಟಪ್ ಹಾಗೂ ಕೊನೆಯಲ್ಲಿ ಹುಡುಗಿಗೊಂದು ಕಳುಹಿಸುವ ಸಂದೇಶ ಎಲ್ಲವೂ ಸೂಪರ್. ಅವರು ಹೊಡೆದ ಡೈಲಾಗ್ ಅನ್ನು ಕೇಳುವುದೇ ಹಿತ. ಥೇಟ್ ಸಿನಿಮಾದ ಟೀಸರ್ ನಂತೆಯೇ ಈ ಜಾಹೀರಾತು ಮೂಡಿ ಬಂದಿದೆ. ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ದಾಖಲೆ ರೀತಿಯಲ್ಲಿ ಆ ಜಾಹೀರಾತನ್ನು ನೋಡಿದ್ದಾರೆ ಅಭಿಮಾನಿಗಳು.

    ಕೆಜಿಎಫ್ 2 ಸಿನಿಮಾದ ನಂತರ ತೆರೆಯ ಮೇಲೆ ಅಥವಾ ಬೇರೆ ವೇದಿಕೆಗಳ ಮೇಲೆ ಯಶ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಲೇ ಇದ್ದರು. ಜಾಹೀರಾತು ಚಿತ್ರದ ಮೂಲಕ ಕೊನೆಗೂ ಯಶ್ ದರ್ಶನ ನೀಡಿದ್ದಾರೆ. ಮತ್ತೆ ಅಭಿಮಾನಿಗಳನ್ನು ರಂಜಿಸಿದ್ದಾರೆ. ಡೈಲಾಗ್ ಹೊಡೆದು ಚೆಪ್ಪಾಳೆ ಸಂಪಾದಿಸಿದ್ದಾರೆ.

  • ವಾಣಿಜ್ಯ ಬಳಕೆಗೆ ತಮ್ಮ ಹೆಸರು, ಧ್ವನಿ ಬಳಸದಂತೆ ರಜನಿಕಾಂತ್ ಎಚ್ಚರಿಕೆ ನೋಟಿಸ್

    ವಾಣಿಜ್ಯ ಬಳಕೆಗೆ ತಮ್ಮ ಹೆಸರು, ಧ್ವನಿ ಬಳಸದಂತೆ ರಜನಿಕಾಂತ್ ಎಚ್ಚರಿಕೆ ನೋಟಿಸ್

    ಭಾರತೀಯ ಸಿನಿಮಾ ರಂಗದ ಖ್ಯಾತ ನಟ ರಜನಿಕಾಂತ್ (Rajinikanth), ತಮ್ಮ ಹೆಸರನ್ನು ವಾಣಿಜ್ಯ ಬಳಕೆಗೆ ಬಳಸದಂತೆ ಸಾರ್ವಜನಿಕವಾಗಿ ಎಚ್ಚರಿಕೆ ನೋಟಿಸ್ ನೀಡಿದ್ದಾರೆ. ಕೇವಲ ತಮ್ಮ ಹೆಸರು ಮಾತ್ರವಲ್ಲ, ತಮ್ಮ ಸ್ಟೈಲ್ (Style), ಸಿನಿಮಾದ ತುಣುಕು, ಧ್ವನಿ (Voice) ಹಾಗೂ ಮ್ಯಾನರಿಸಂ ಅನ್ನು ಬಳಸದಂತೆ ಅವರು ಸಾರ್ವಜನಿಕವಾಗಿ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ತಗೆದುಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

    ರಜನಿಕಾಂತ್ ಅರಿವಿಗೆ ಬಾರದಂತೆ ಅವರು ಫೋಟೋ, ವಿಡಿಯೋ ತುಣುಕು, ಧ್ವನಿ ಮತ್ತು ವಿವಿಧ ಸ್ಟೈಲ್ ನ ಚಿತ್ರಗಳನ್ನು ವಾಣಿಜ್ಯ ಬಳಕೆಗಾಗಿ ಬಳಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ನೋಟಿಸ್ ಅನ್ನು ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ. ರಜನಿಕಾಂತ್ ಅವರ ಪರವಾನಿಗೆ ತಗೆದುಕೊಂಡು ಬಳಸುವಂತೆಯೂ ಅವರು ಮನವಿ ಮಾಡಿದ್ದಾರೆ. ಅಲ್ಲದೇ, ತಮ್ಮ ಗೌರವಕ್ಕೆ ಧಕ್ಕೆ ತರುವಂತೆ ಕೆಲವು ಕಡೆ ಬಳಕೆ ಆಗಿರುವ ಕುರಿತೂ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ

    ಈ ಹಿಂದೆ ಇಂಥದ್ದೊಂದು ಸಾರ್ವಜನಿಕ ನೋಟಿಸ್ ಅನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಕೂಡ ನೀಡಿದ್ದರು. ನಾನಾ ಜಾಹೀರಾತುಗಳಲ್ಲಿ ಅಮಿತಾಭ್ ಅವರನ್ನು ಬಳಕೆ ಮಾಡಿದ್ದರ ವಿರುದ್ಧ ಕಿಡಿಕಾರಿದ್ದರು. ವಾಣಿಜ್ಯ ಉದ್ದೇಶ ಇಟ್ಟುಕೊಂಡು ಅಮಿತಾಭ್ ಫೋಟೋ, ಧ್ವನಿ ಮತ್ತು ಸಿನಿಮಾದ ತುಣುಕುಗಳನ್ನು ಬಳಸಿದವರು ವಿರುದ್ಧ ಚಾಟಿ ಬೀಸಿದ್ದರು. ಕಾನೂನು ಕ್ರಮಕ್ಕೂ ಅವರು ಮುಂದಾಗಿದ್ದರು. ಇದೀಗ ರಜನಿಕಾಂತ್ ಅದೇ ಹಾದಿಯನ್ನು ಹಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ಪ ಸರಿ, ಮಕ್ಕಳು ತಪ್ಪು ಸರಕಾರಕ್ಕೆ ಟಾಂಗ್ ಕೊಟ್ಟ ನಟ ಉಪೇಂದ್ರ

    ಅಪ್ಪ ಸರಿ, ಮಕ್ಕಳು ತಪ್ಪು ಸರಕಾರಕ್ಕೆ ಟಾಂಗ್ ಕೊಟ್ಟ ನಟ ಉಪೇಂದ್ರ

    ಸಿನಿಮಾದವರು ಏನೇ ಮಾಡಿದರೂ ಅದು ತಪ್ಪು ಎಂದು ಖಂಡಿಸುವ ಹಲವರಿಗೆ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ ನಟ ಉಪೇಂದ್ರ. ಇತ್ತೀಚಿನ ದಿನಗಳಲ್ಲಿ ಸಿನಿಮಾದ ಅನೇಕ ನಟ ನಟಿಯರು ಜೂಜು, ತಂಬಾಕು ವಸ್ತುಗಳು ಸೇರಿದಂತೆ ನಾನಾ ರೀತಿಯ ಜಾಹೀರಾತುಗಳಿಗೆ ರೂಪದರ್ಶಿಗಳಾಗುತ್ತಿದ್ದಾರೆ. ಈ ನಡೆಯನ್ನು ಅನೇಕರು ವಿರೋಧಿಸುತ್ತಿದ್ದಾರೆ. ಇಂತಹ ವಿರೋಧಿ ಮನಸ್ಸುಗಳಿಗೆ ಉಪೇಂದ್ರ ಉತ್ತರಿಸಿದ್ದಾರೆ. ಈ ಮೂಲಕ ಸರಕಾರಕ್ಕೂ ಅವರು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ರಮ್ಮಿ ಆಟವೊಂದರ ಜಾಹೀರಾತಿನಲ್ಲಿ ಕಿಚ್ಚ ಸುದೀಪ್ ಅವರು ನಟಿಸಿದ್ದರು ಎನ್ನುವ ಕಾರಣಕ್ಕಾಗಿ ಭಾರೀ ವಿರೋಧ ವ್ಯಕ್ತವಾಯಿತು. ಈ ಆಟದಿಂದಾಗಿ ಹಲವರು ಮನೆ ಮಠ ಕಳೆದುಕೊಳ್ಳುತ್ತಿದ್ದಾರೆ ಸಾಮಾಜಿಕ ಜವಾಬ್ದಾರಿ ಇರುವವರು ಈ ರೀತಿ ಮಾಡಬಾರದು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ವಿರೋಧಿಸಿದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ನಿನ್ನೆಯಷ್ಟೇ ತಂಬಾಕು ಉತ್ಪನ್ನವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅಕ್ಷಯ್ ಕುಮಾರ್ ನಾನು ಅಂತ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬಾರದಿತ್ತು. ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಕ್ಷಮೆ ಕೋರುವೆ  ಎಂದಿದ್ದರು. ಮುಂದೆಂದೂ ಅಂತಹ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅಶ್ವಾಸನೆಯನ್ನೂ ಅವರು ಕೊಟ್ಟಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಇವೆಲ್ಲವನ್ನೂ ಮುಂದಿಟ್ಟುಕೊಂಡು ಉಪೇಂದ್ರ ಫೇಸ್ ಬುಕ್ ನಲ್ಲಿ ‘ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋರು ತಪ್ಪು, ಕುಡಿಯೋದು ತಪ್ಪು, ಜೂಜಿಗೆ ಜಾಹೀರಾತು ನೀಡೋದು ತಪ್ಪು. ಆದರೆ, ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರಕಾರ ಸರಿ. ನಾಯಕ ಸಂಸ್ಕೃತಿಯ ರಾಜಕೀಯ ಗುಂಗಿನ ಸಮಾಜದಲ್ಲಿ  ಯಾವತ್ತೂ ಅಪ್ಪ ಸರಿ ಮಕ್ಕಳು ತಪ್ಪು’ ಎಂದು ಬರೆಯುವ ಮೂಲಕ ಸರಕಾರಕ್ಕೆ ಚಾಟಿ ಬೀಸಿದ್ದಾರೆ.

  • ಮೋಸ್ಟ್ ಬ್ಯಾಚುಲರ್ ಹುಡುಗಿ ನಿಧಿ ಅಗರ್ವಾಲ್ ಕಾಂಡೋಮ್ ಕಂಟಕ

    ಮೋಸ್ಟ್ ಬ್ಯಾಚುಲರ್ ಹುಡುಗಿ ನಿಧಿ ಅಗರ್ವಾಲ್ ಕಾಂಡೋಮ್ ಕಂಟಕ

    ಕ್ಷಿಣ ಭಾರತದ ಹೆಸರಾಂತ ನಟಿ ನಿಧಿ ಅಗರ್ವಾಲ್ ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಈ ಹಿಂದೆ ಕ್ರಿಕೆಟಿಗ ರಾಹುಲ್ ಜತೆ ಸುತ್ತಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಹೆಚ್ಚು ಸದ್ದು ಮಾಡಿದ್ದರು. ಇದೀಗ ಕಾಂಡೋಮ್ ವಿಷಯವಾಗಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಸದಾ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ, ಬೋಲ್ಡ್ ಮಾತುಗಳಿಂದಲೇ ಅಭಿಮಾನಿಗಳನ್ನು ಸೆಳೆದಿರುವ ನಿಧಿ ಅಗರ್ವಾಲ್, ಇದೀಗ ಕಾಂಡೋಮ್ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ವಿಡಿಯೋವನ್ನು ಅವರು ಇನ್ಸ್ಟಾ ಪೇಜ್ ನಲ್ಲಿ ಹಾಕಿದ್ದಾರೆ. ಆ ಜಾಹೀರಾತಿನಲ್ಲಿ ಅವರು ಕಾಂಡೋಮ್ ಮತ್ತು ಸೆಕ್ಸನಾ ಪರಾಕಾಷ್ಠೆಯ ಬಗ್ಗೆ ಕಲರ್ ಕಲರ್ ಆಗಿ ಮಾತನಾಡಿದ್ದಾರೆ. ಈ ಮಾತುಗಳೇ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ. ಮತ್ತು ಅಭಿಮಾನಿಗಳು ಕೂಡ ಮಾತಿನ ಗೆರೆ ದಾಟಿಕೊಂಡು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

     

    View this post on Instagram

     

    A post shared by Nidhhi Agerwal ???? (@nidhhiagerwal)

    ಕಾಂಡೋಮ್ ಬಳಸಿದರೆ ಲೈಂಗಿಕ ಪರಾಕಾಷ್ಠೆಅನುಮಾನವಿಲ್ಲದೇ ಉತ್ತುಂಗಕ್ಕಿರುತ್ತದೆ ಎನ್ನುವುದು ಜಾಹೀರಾತಿನ ಒಟ್ಟಾರೆ ಸಾರಾಂಶ. ಅದನ್ನೇ ನಿಧಿ ಅಗರ್ವಾಲ್ ಹೇಳಿದ್ದಾರೆ. ಹಾಗಾಗಿ ಅವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಜಾಹೀರಾತಿನ ವಿಡಿಯೋವನ್ನು ಅವರು ಪೋಸ್ಟ್ ಮಾಡುತ್ತಿದ್ದಂತೆಯೇ, ‘ಇದು ನಿಮ್ಮ ಸ್ವಂತ ಅನುಭವವೇ?’ ಎಂದು ಕೆಲವರು ಕೇಳಿದ್ದರೆ, ‘ನಿಮಗೆ ಇನ್ನೂ ಮದುವೆಯೇ ಆಗಿಲ್ಲ. ಅದು ಹೇಗೆ ಇಂತಹ ವಿಷಯ ತಿಳಿಯುವುದಕ್ಕೆ ಸಾಧ್ಯ’ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ನೀವು ಯಾವಾಗ ಕಾಂಡೋಮ್ ಬಳಸಿದ್ದೀರಿ. ನಿಮ್ಮ ಅನುಭವದ ವಿಡಿಯೋ ಮಾಡಿ’ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ಇಂತಹ ಅನೇಕ ಪ್ರಶ್ನೆಗಳನ್ನು ಕೇಳಿರುವ ನೆಟ್ಟಿಗರ ಮಾತು ಕೇಳಿ ಸ್ವತಃ ನಿಧಿ ಬೆಚ್ಚಿಬಿದ್ದಿದ್ದಾರೆ. ಒಂದು ರೀತಿಯಲ್ಲಿ ಅವರಿಗೆ ಮುಜಗರ ತರುವಂತಹ ಪ್ರಶ್ನೆಗಳನ್ನು ಹಾಕಿದ್ದರಿಂದ ನಿಧಿ ಅವುಗಳಿಗೆ ಉತ್ತರಿಸಿದೇ ಚಡಪಡಿಸುತ್ತಿದ್ದಾರೆ. ಮತ್ತೇ ಇಂತಹ ಜಾಹೀರಾತುಗಳಲ್ಲಿ ನಟಿಸದಂತೆ ಕೆಲ ಅಭಿಮಾನಿಗಳು ಸಲಹೆ ನೀಡಿದ್ದರೆ, ಓಪನ್ ಆಗಿ ಮಾತನಾಡಿದ್ದಕ್ಕೆ ಕೆಲವರು ಬೆನ್ನೂ ತಟ್ಟಿದ್ದಾರೆ.

  • ಅಭಿನಂದನ್‍ರನ್ನು ಎಳೆದುತಂದು ಪಾಕ್‌ನಿಂದ ಜಾಹೀರಾತು – ರೊಚ್ಚಿಗೆದ್ದ ಸಾನಿಯಾ ಮಿರ್ಜಾ

    ಅಭಿನಂದನ್‍ರನ್ನು ಎಳೆದುತಂದು ಪಾಕ್‌ನಿಂದ ಜಾಹೀರಾತು – ರೊಚ್ಚಿಗೆದ್ದ ಸಾನಿಯಾ ಮಿರ್ಜಾ

    ನವದೆಹಲಿ: ವಿಶ್ವಕಪ್ ಪಂದ್ಯದ ಮೊದಲು ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮುಂದಿಟ್ಟು ಭಾರತದ ಕಾಲೆಳೆದಿದ್ದಕ್ಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರೊಚ್ಚಿಗೆದ್ದಿದ್ದಾರೆ.

    ಭಾರತ ಹಾಗೂ ಪಾಕಿಸ್ತಾನ ಜಾಹೀರಾತನ್ನು ನೋಡಿದ ಸಾನಿಯಾ ಮಿರ್ಜಾ ತಮ್ಮ ಟ್ವಿಟ್ಟರಿನಲ್ಲಿ ರೊಚ್ಚಿ ಗೆದ್ದಿದ್ದಾರೆ. ಸಾನಿಯಾ ತಮ್ಮ ಟ್ವಿಟ್ಟರಿನಲ್ಲಿ, “ಎರಡು ಕಡೆ ಅವಮಾನಕರ ವಿಷಯದೊಂದಿಗೆ ಜಾಹೀರಾತು ತಯಾರಾಗಿದೆ. ಸ್ವಲ್ಪ ಗಂಭೀರವಾಗಿ ನಡೆದುಕೊಳ್ಳಿ. ಈ ಪಂದ್ಯಕ್ಕೆ ಪ್ರಚಾರ ನೀಡುವ ಯಾವುದೇ ಅವಶ್ಯಕತೆ ಇಲ್ಲ. ಈಗಾಗಲೇ ಈ ಪಂದ್ಯಕ್ಕೆ ಪ್ರಚಾರ ಸಿಕ್ಕಿದೆ. ಇದು ಕೇವಲ ಕ್ರಿಕೆಟ್ ಪಂದ್ಯ” ಎಂದು ಟ್ವೀಟ್ ಮಾಡಿದ್ದಾರೆ.

    ವಿಂಗ್‍ಕಮಾಂಡರ್ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯನ್ನು ತೋರಿಸಿರುವ ಪಾಕಿಸ್ತಾನ ಮಾಧ್ಯಮ, ತಂಡ ಆಡುವ 11ರ ಬಳಗದ ಬಗ್ಗೆ ಪ್ರಶ್ನೆ ಮಾಡಿತ್ತು. ಈ ವೇಳೆ ಟೀ ಕುಡಿಯುತ್ತ ಆತ ಅಭಿನಂದನ್ ಅವರು ಹೇಳಿದಂತೆ ಮಾಹಿತಿ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಆತನನ್ನು ಕಳುಹಿಸಲು ಒಪ್ಪಿ ತೆರಳಲು ಸೂಚಿಸುತ್ತದೆ. ಆದರೆ ಈ ವೇಳೆ ಕಪ್ ವಾಪಸ್ ನೀಡುವಂತೆ ಹೇಳಿ ಕಾಲೆಳೆಯುವ ಪ್ರಯತ್ನ ನಡೆಸಿತ್ತು.

    ಸ್ಟಾರ್ ಸ್ಪೋಟ್ಸ್ ವಾಹಿನಿ ಕೂಡ ಜಾಹೀರಾತನ್ನು ಮಾಡಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಈ ವಿಡಿಯೋದಲ್ಲಿ ಭಾರತದ ಅಭಿಮಾನಿ ತಮ್ಮನ್ನು ತಾವೇ ಪಾಕಿಸ್ತಾನದ ತಂದೆ ಎಂದು ಪಾಕ್ ಅಭಿಮಾನಿಗೆ ಹೇಳುತ್ತಾರೆ. ಈ ವಿಡಿಯೋವನ್ನು ಸ್ಟಾರ್ ಸ್ಪೋಟ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಅದಕ್ಕೆ, ಈ ತಂದೆಯ ದಿನಾಚರಣೆಯಂದು ವಿಶ್ವಕಪ್ ಪಂದ್ಯ ವೀಕ್ಷಿಸಿ ಬಾಪ್ ರೇ ಬಾಪ್ ಎಂದು ಹೇಳುತ್ತೀರಾ ಎಂದು ಟ್ವೀಟ್ ಮಾಡಿದೆ.

    ಜೂನ್ 16 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಪುಲ್ವಾಮಾ ದಾಳಿಯ ಬಳಿಕ ಹಲವು ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಭಾಗವಹಿಸಬಾರದು, ವಿಶ್ವಕಪ್ ಟೂರ್ನಿಯಿಂದಲೇ ಭಯೋತ್ಪಾದನೆಗೆ ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ರೈಲ್ವೆ ತಾಣದಲ್ಲಿ ಅಶ್ಲೀಲ ಜಾಹೀರಾತು ಎಂದು ದೂರು ಕೊಟ್ಟು ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ!

    ರೈಲ್ವೆ ತಾಣದಲ್ಲಿ ಅಶ್ಲೀಲ ಜಾಹೀರಾತು ಎಂದು ದೂರು ಕೊಟ್ಟು ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ!

    ಬೆಂಗಳೂರು: ರೈಲ್ವೆ ಟಿಕೆಟ್ ಬುಕ್ಕಿಂಗ್ ವೇಳೆ ಆಪ್‍ನಲ್ಲಿ ಅಶ್ಲೀಲ ಹಾಗೂ ಅಸಭ್ಯ ಜಾಹೀರಾತು ತೋರಿಸಿದಕ್ಕೆ ವ್ಯಕ್ತಿಯೊಬ್ಬ ರೈಲ್ವೆ ಇಲಾಖೆ ವಿರುದ್ಧ ಟ್ವಿಟ್ಟರಿನಲ್ಲಿ ಕಿಡಿಕಾರಿದ್ದಾನೆ. ಈ ಟ್ವೀಟ್‍ಗೆ ರೈಲ್ವೆ ಇಲಾಖೆ ಪ್ರತಿಕ್ರಿಯಿಸಿದ್ದು, ಸದ್ಯ ಜನರು ವ್ಯಕ್ತಿಯನ್ನೇ ಟ್ರೋಲ್ ಮಾಡಲು ಶುರು ಮಾಡುತ್ತಿದ್ದಾರೆ.

    ಪ್ರಯಾಣಿಕ ಆನಂದ್ ಕುಮಾರ್ ರೈಲ್ವೆ ಆಪ್‍ನಲ್ಲಿ ಟಿಕೆಟ್ ಬುಕ್ ಮಾಡುವಾಗ ಕಾಣಿಸಿಕೊಳ್ಳುವ ಅಶ್ಲೀಲ ಜಾಹೀರಾತುಗಳ ಫೋಟೋ ಸ್ಕ್ರೀನ್‍ಶಾಟ್ ತೆಗೆದು ಅದನ್ನು ತನ್ನ ಟ್ವಿಟ್ಟರಿನಲ್ಲಿ ಹಾಕಿ ಪಿಯೂಷ್ ಗೋಯಲ್, ರೈಲ್ವೆ ಮಂತ್ರಿಗೆ ಟ್ಯಾಗ್ ಮಾಡಿದ್ದಾನೆ.

    ತನ್ನ ಟ್ವಿಟ್ಟರಿನಲ್ಲಿ ಸ್ಕ್ರೀನ್‍ಶಾಟ್ ಫೋಟೋ ಹಾಕಿ ಅದಕ್ಕೆ, “ನಾನು ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಆಪ್‍ನಲ್ಲಿ ಅಸಭ್ಯ ಹಾಗೂ ಅಶ್ಲೀಲ ಜಾಹೀರಾತುಗಳು ತೋರಿಸುತ್ತದೆ. ಇದರಿಂದ ನನಗೆ ಸಾಕಷ್ಟು ಕಿರಿಕಿರಿ ಹಾಗೂ ಮುಜುಗರ ಆಗುತ್ತಿದೆ. ಈ ವಿಚಾರವನ್ನು ಗಮನಿಸಿ ಎಂದು ಪಿಯೂಷ್ ಗೋಯಲ್, ರೈಲ್ವೆ ಮಂತ್ರಿ ಹಾಗೂ ಐಆರ್ ಸಿಟಿಸಿ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾನೆ.

    https://twitter.com/anandk2012/status/1133685801655476224?ref_src=twsrc%5Etfw%7Ctwcamp%5Etweetembed%7Ctwterm%5E1133685801655476224&ref_url=https%3A%2F%2Fwww.indiatoday.in%2Ftrending-news%2Fstory%2Fman-trolls-irctc-for-vulgar-ads-on-the-railway-app-their-savage-reply-has-twitter-in-splits-1537801-2019-05-29

    ವ್ಯಕ್ತಿಯ ಟ್ವೀಟ್‍ಗೆ ಐಆರ್ ಸಿಟಿಸಿ, ನಮ್ಮ ವೆಬ್‍ಸೈಟ್ ನಲ್ಲಿ ಜಾಹೀರಾತಿಗಾಗಿ ಗೂಗಲಿನ ಆಡ್ ಸರ್ವಿಸ್ ಬಳಕೆ ಆಗುತ್ತಿದೆ. ಈ ಜಾಹೀರಾತು ಬಳಕೆದಾರರನ್ನು ಟಾರ್ಗೆಟ್ ಮಾಡಲು ಕುಕ್ಕೀಸ್ ಬಳಸುತ್ತದೆ. ಬಳಕೆದಾರನ ಬ್ರೌಸರ್ ಹಿಸ್ಟರಿಯನ್ನು ಗಮನಿಸಿಕೊಂಡು ಅದಕ್ಕೆ ಸಂಬಂಧಪಟ್ಟ ಜಾಹೀರಾತನ್ನು ಮಾತ್ರ ಪ್ರಕಟಿಸುತ್ತದೆ. ಇಂತಹ ಜಾಹೀರಾತು ಬರದೇ ಇರಲು ದಯವಿಟ್ಟು ನಿಮ್ಮ ಬ್ರೌಸರ್ ಹಾಗೂ ಹಿಸ್ಟರಿಯನ್ನು ಡಿಲೀಟ್ ಮಾಡಿ ಎಂದು ಟ್ವೀಟ್ ಮಾಡಿದೆ.

    ಭಾರತೀಯ ರೈಲ್ವೇಯ ಈ ಟ್ವೀಟ್ ಅನ್ನು 20 ಸಾವಿರ ಜನ ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತನ್ನ ತಪ್ಪಿಗೆ ಐಆರ್ ಟಿಸಿಯನ್ನು ದೂರಬೇಡ. ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಿಯಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಡಿಜಿಟಲ್ ವ್ಯವಹಾರದಲ್ಲಿ ಗ್ರಾಹಕನ ಆಸಕ್ತಿ ಏನು ಎನ್ನುವುದನ್ನು ಕಂಪನಿಗಳೇ ಗುರುತಿಸುತ್ತವೆ. ಬಳಕೆದಾರ ಯಾವೆಲ್ಲ ತಾಣಗಳಿಗೆ ಭೇಟಿ ನೀಡಿದ್ದಾನೆ. ಆತನಿಗೆ ಏನು ಇಷ್ಟ ಇತ್ಯಾದಿ ಮಾಹಿತಿಗಳನ್ನು ಸರ್ಚ್ ಎಂಜಿನ್ ಕಂಪನಿಗಳು ಬ್ರೌಸರ್ ಹಿಸ್ಟರಿ ಮೂಲಕ ಪಡೆದುಕೊಳ್ಳುತ್ತದೆ. ಈ ಮೂಲಕ ಗ್ರಾಹಕನಿಗೆ ಇಷ್ಟ ಇರುವ ವಿಚಾರವನ್ನು ತೋರಿಸುತ್ತದೆ.