Tag: Actresses

  • ಬೀದಿ ನಾಯಿಗಳನ್ನು ಕಾಪಾಡಲು ತಂಡವನ್ನೇ ಕಟ್ಟಿದ ಸಂಯುಕ್ತಾ

    ಬೀದಿ ನಾಯಿಗಳನ್ನು ಕಾಪಾಡಲು ತಂಡವನ್ನೇ ಕಟ್ಟಿದ ಸಂಯುಕ್ತಾ

    ಬೆಂಗಳೂರು: ದೇಶವೇ ಲಾಕ್ ಡೌನ್ ಆಗಿರುವುದರಿಂದ ಜನರು ಹೊರಗೆ ಬರುವುದು ವಿರಳವಾಗಿದ್ದು, ಹೀಗಾಗಿ ಪ್ರಾಣಿ ಪಕ್ಷಿಗಳು ಅನ್ನ, ನೀರು ಇಲ್ಲದೆ ಪರದಾಡುತ್ತಿವೆ. ಹಲವು ನಟ, ನಟಿಯರು ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಹಾಗೂ ಬಡವರಿಗೆ ಸಹಾಯ ಮಾಡುವ ಮೂಲಕ ಸ್ಪಂದಿಸುತ್ತಿದ್ದಾರೆ. ಆದರೆ ಪ್ರಾಣಿಗಳು ಮಾತ್ರ ನರಳುತ್ತಿವೆ. ಹೀಗಾಗಿ ನಟಿ ಸಂಯುಕ್ತಾ ಹೊರನಾಡು ಪ್ರಾಣಿಗಳತ್ತ ಲಕ್ಷ್ಯ ಹರಿಸಿದ್ದಾರೆ.

    ಹೋಮ್ ಕ್ವಾರೆಂಟೈನ್‍ನಿಂದಾಗಿ ಹಲವು ನಟ, ನಟಿಯರು ಮನೆಯಲ್ಲೇ ಉಳಿದುಕೊಂಡಿದ್ದು, ಕುಟುಂಬದೊಂದಿಗೆ ಹಾಗೂ ತಮ್ಮ ಮುಂದಿನ ಸಿನಿಮಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದರೆ ಸಂಯುಕ್ತಾ ಹೊರನಾಡು ಅವರು ಇನ್ನೂ ಒಂದು ಹೆಜ್ಜೆ ಮುಂದೆ ಬೀದಿ ನಾಯಗಳಿಗೆ ಆಹಾರ ನೀಡುವುದರಲ್ಲಿ ನಿರತರಾಗಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪ್ರಾಣಿಗಳು ಅದರಲ್ಲೂ ನಾಯಿ ಎಂದರೆ ಸಂಯುಕ್ತ ಅವರಿಗೆ ಪಂಚ ಪ್ರಾಣ, ಅವರೂ ಒಂದು ನಾಯಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ಗುಂಡ ಎಂದು ನಾಮಕರಣ ಮಾಡಿದ್ದು, ಅದರ ಜೊತೆಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಇದರ ಜೊತೆಗೆ ಇದೀಗ ಬೀದಿ ನಾಯಿಗಳನ್ನು ಕಾಪಾಡಲು ಮುಂದಾಗಿದ್ದಾರೆ.

    ಕೊರೊನಾ ಭೀತಿಯಿಂದಾಗಿ ದೇಶವೇ ಲಾಕ್‍ಡೌನ್ ಅಗಿದ್ದು, ಬಹುತೇಕರು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಪ್ರಾಣಿ, ಪಕ್ಷಿಗಳು ಆಹಾರ ನೀರು ಇಲ್ಲದೆ ಪರಿತಪಿಸುತ್ತಿವೆ. ಇದನ್ನು ಕಂಡ ನಟಿ ಸಂಯುಕ್ತಾ ಹೊರನಾಡು, ಬೀದಿ ನಾಯಿಗಳಿಗೆ ಬಿಸ್ಕೆಟ್ ಹಾಗೂ ತಿಂಡಿಯನ್ನು ಹಾಕಿ ಮಾನವೀಯತೆ ಮೆರೆದಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಸಂಯುಕ್ತಾ ಹೊರನಾಡು ಶುಕ್ರವಾರ ಹೊರಗಡೆ ಬಂದಿದ್ದಾರೆ. ಈ ವೇಳೆ ಬೀದಿ ನಾಯಿಗಳು ಆಹಾರವಿಲ್ಲದೆ ಪರದಾಡುವುದನ್ನು ನೋಡಿದ್ದಾರೆ. ತಕ್ಷಣವೇ ಬಿಸ್ಕೆಟ್ ತಿನ್ನಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದೊಂದು ವಾರದಿಂದ ನಾಯಿಗಳು ಆಹಾರವಿಲ್ಲದೆ ಪರದಾಡುತ್ತಿರುವುದನ್ನು ಕಂಡು ಹೃದಯಕ್ಕೆ ತುಂಬಾ ಘಾಸಿಯುಂಟಾಗಿತ್ತು. ಹೀಗಾಗಿ ಕೆಲವು ನಾಯಿಗಳಿಗೆ ನಾನು ಆಹಾರ ತಿನ್ನಿಸಿದೆ. ಅಲ್ಲದೆ ಟಾಸ್ಕ್ ಫೋರ್ಸ್‍ನಲ್ಲಿ ಭಾಗವಾಗಿಸಿದ್ದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ಈ ನಿಟ್ಟಿನಲ್ಲಿ ನಮ್ಮ ತಂಡ ಫುಲ್ ಆ್ಯಕ್ಟಿವ್ ಆಗಿದ್ದು, ತುಂಬಾ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಂಯುಕ್ತಾ ಹೊರನಾಡು ಲೈಫು ಇಷ್ಟೇನೆ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿದ್ದು, ನಂತರ ಬರ್ಫಿ, ಒಗ್ಗರಣೆ, ನೀನೆ ಬರಿ ನೀನೆ, ಜಿಗರ್‍ಥಂಡ, ಸರ್ಕಾರಿ ಕೆಲಸ ದೇವರ ಕೆಲಸ, ದಯವಿಟ್ಟು ಗಮನಿಸಿ, ದಿ ವಿಲನ್ ಹಾಗೂ ಇತ್ತೀಚೆಗೆ ನಾನು ಮತ್ತು ಗುಂಡ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಲ ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.

  • ಹೈ ಪ್ರೊಫೈಲ್ ಸೆಕ್ಸ್ ದಂಧೆ – ಒಬ್ಬಳು ಅರೆಸ್ಟ್, ಮೂವರು ನಟಿಮಣಿಯರ ರಕ್ಷಣೆ

    ಹೈ ಪ್ರೊಫೈಲ್ ಸೆಕ್ಸ್ ದಂಧೆ – ಒಬ್ಬಳು ಅರೆಸ್ಟ್, ಮೂವರು ನಟಿಮಣಿಯರ ರಕ್ಷಣೆ

    – ಖಚಿತ ಮಾಹಿತಿ ಮೇರೆಗೆ ದಾಳಿ

    ಮುಂಬೈ: ತ್ರಿಸ್ಟಾರ್ ಹೋಟೆಲ್‍ನಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ಸೆಕ್ಸ್ ದಂಧೆಯ ಮೇಲೆ ಮುಂಬೈ ಪೊಲೀಸರು ದಾಳಿ ಮಾಡಿ ಒಬ್ಬಳು ಸೆಕ್ಸ್ ದಂಧೆ ಸೂತ್ರಧಾರಿಯನ್ನು ಅರೆಸ್ಟ್ ಮಾಡಿ ಓರ್ವ ಅಪ್ರಾಪ್ತೆ ಸೇರಿದಂತೆ ಮೂವರು ನಟಿಮಣಿಯರನ್ನು ರಕ್ಷಣೆ ಮಾಡಿದ್ದಾರೆ.

    ಅಂಧೇರಿ ಪೂರ್ವದಲ್ಲಿರುವ ಐಶಾರಾಮಿ ತ್ರಿಸ್ಟಾರ್ ಹೋಟೆಲ್ ನಲ್ಲಿ ಹೈ ಪ್ರೊಫೈಲ್ ಸೆಕ್ಸ್ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮುಂಬೈನ ಎಸ್‍ಎಸ್ ಬ್ರಾಂಚ್ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಈ ದಂಧೆಗೆ ಸೂತ್ರಧಾರಿಯಾದ 29 ವರ್ಷದ ಮಹಿಳೆ ಪ್ರಿಯಾ ಶರ್ಮಾಳನ್ನು ಅರೆಸ್ಟ್ ಮಾಡಿರುವ ಪೊಲೀಸರು, ಮೂವರು ಯುವ ನಟಿಯರನ್ನು ರಕ್ಷಣೆ ಮಾಡಿದ್ದಾರೆ.

    ಈ ಸೆಕ್ಸ್ ರಾಕೆಟ್‍ನ ಸೂತ್ರಧಾರಿ ಪ್ರಿಯಾ ಶರ್ಮಾ ಮುಂಬೈನ ಪೂರ್ವ ಕಾಂದಿವಲಿಯಲ್ಲಿ ಪ್ರಿಯಾ ಶರ್ಮಾ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದು, ಆಕೆ ಈ ರೀತಿಯ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯನ್ನು ಅಧಾರವಾಗಿ ಇಟ್ಟುಕೊಂಡು ದಾಳಿ ಮಾಡಿದ ಪೊಲೀಸರು ಹೈ ಪ್ರೊಫೈಲ್ ಸೆಕ್ಸ್ ದಂಧೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಿಯಾ ಶರ್ಮಾ ಯುವ ನಟಿಯರನ್ನು ಟಾರ್ಗೆಟ್ ಮಾಡಿ ಅವರಿಗೆ ಹಣದ ಆಮಿಷವೊಡ್ಡಿ ಅವರನ್ನು ಸೆಕ್ಸ್ ದಂಧೆಗೆ ತಳ್ಳಲು ಯತ್ನಿಸುತ್ತಿದ್ದಳೆಂದು ಮೂಲಗಳಿಂದ ತಿಳಿದು ಬಂದಿದೆ. ಅದೇ ರೀತಿಯಲ್ಲಿ ಈ ಮೂವರು ಯುವ ನಟಿಯರನ್ನು ಸೆಕ್ಸ್ ದಂಧೆಗೆ ಸಹಕರಿಸುವಂತೆ ಒತ್ತಾಯ ಮಾಡಿ ಇಲ್ಲಿಗೆ ಕರೆತಂದಿದ್ದಾಳೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ರೇವಾಳೆ ಮಾಹಿತಿ ನೀಡಿದ್ದಾರೆ.

    ಪೊಲೀಸರಿಂದ ರಕ್ಷಿಸಲಾದ ಮೂವರಲ್ಲಿ, ಒಬ್ಬಾಕೆ ನಟಿ ಮತ್ತು ಸಿಂಗರ್ ಆಗಿದ್ದು, ಈಕೆ ಸಾವಧಾನಾ ಇಂಡಿಯಾ ಟಿವಿಯ ಕ್ರೈಂ ಶೋನಲ್ಲಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಹೇಳಲಾಗಿದೆ. ಮತ್ತೊಬ್ಬಾಕೆ ಮರಾಠಿ ಸಿನಿಮಾದ ನಟಿ ಎಂದು ಗುರುತಿಸಲಾಗಿದ್ದು, ಓರ್ವ ಅಪ್ರಾಪ್ತೆ ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದಳು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

  • ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    – ಕೃತ್ಯದಲ್ಲಿ ಬಿ ಗ್ರೇಡ್ ಬಾಲಿವುಡ್ ನಟಿಯರೂ ಭಾಗಿ
    – ಸಹಕರಿಸಿದ್ದಕ್ಕೆ ಎನ್‍ಜಿಒಗಳಿಗೆ ಸರ್ಕಾರದ ಗುತ್ತಿಗೆ

    ಭೋಪಾಲ್: ಮಧ್ಯಪ್ರದೇಶದ ಮಾಜಿ ರಾಜ್ಯಪಾಲರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು, ಗಣ್ಯ ವ್ಯಕ್ತಿಗಳನ್ನು ಬಾಲಿವುಡ್‍ನ ಕೆಲವು ಬಿ-ಗ್ರೇಡ್ ನಟಿಯರು ಸೇರಿದಂತೆ 40ಕ್ಕೂ ಅಧಿಕ ಕಾಲ್ ಗರ್ಲ್ಸ್‌ ಸೇರಿ ಹನಿಟ್ರ್ಯಾಪ್ ಎಸಗಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

    ಈ ಕೃತ್ಯಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜ್ಯ ರಾಜ್ಯಪಾಲರು ಸೇರಿದಂತೆ ಹಲವು ಅಧಿಕಾರಿಗಳು ಗಣ್ಯ ವ್ಯಕ್ತಿಗಳು ಬಲಿಪಶುಗಳಾಗಿದ್ದಾರೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ರಾಜಿ ಮಾಡಿಕೊಳ್ಳುವ ವೇಳೆ ಹಾಗೂ ಸೆಕ್ಸ್ ನಡೆಸುವ ವೇಳೆ ಚಿತ್ರೀಕರಿಸಿರುವ 92 ಎಚ್‍ಡಿ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಈವರೆಗೆ ಎರಡು ಲ್ಯಾಪ್‍ಟಾಪ್‍ಗಳು ಮತ್ತು ಹಲವಾರು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬ್ಲ್ಯಾಕ್‍ಮೇಲ್ ಹಾಗೂ ಸುಲಿಗೆ ದಂಧೆ ಆರೋಪದ ಮೇಲೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ.

    ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸಂಜೀವ್ ಶಮಿ ನೇತೃತ್ವದ ಪೊಲೀಸರ ವಿಶೇಷ ತನಿಖಾ ತಂಡ(ಎಸ್‍ಐಟಿ)ವು ಕಾಲ್ ಗರ್ಲ್ಸ್‌ ಚಿತ್ರೀಕರಿಸಿದ ಸ್ಥಳದಲ್ಲಿ ವಿಡಿಯೋಗಳನ್ನು ಹೊಂದಿರುವ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಈ ಪ್ರಕರಣದ ತನಿಖೆ ನಡೆಸಲು ಡಿ.ಶ್ರೀನಿವಾಸ್ ಅವರ ಜಾಗಕ್ಕೆ ಸಂಜೀವ್ ಶಮಿಯವರನ್ನು ನೇಮಿಸಲಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‍ವರ್ಗಿಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರವು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಕುರಿತು ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.

    ಹನಿಟ್ರ್ಯಾಪ್ ಹೇಗೆ?
    ಈ ಹನಿಟ್ರ್ಯಾಪ್ ಕಿಂಗ್‍ಪಿನ್ ಶ್ವೇತಾ ಸ್ವಾಪ್ನಿಲ್ ಜೈನ್ ಆಗಿದ್ದು, ಈಕೆ ಉನ್ನತ ಅಧಿಕಾರಿಗಳು, ಮಂತ್ರಿಗಳು ಹಾಗೂ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿ, ಆರಂಭದ ಸಂವಾದದ ನಂತರ ಅವರನ್ನು ಲೈಂಗಿಕತೆಗೆ ಆಹ್ವಾನಿಸುತ್ತಿದ್ದಳು. ಇದಕ್ಕಾಗಿ ಅಥಿತಿ ಗೃಹ ಅಥವಾ 5 ಸ್ಟಾರ್ ಹೋಟೆಲ್‍ಗಳಿಗೆ ಆಹ್ವಾನಿಸುತ್ತಾಳೆ. ವ್ಯಕ್ತಿಯು ಒಂದು ಬಾರಿ ಲೈಂಗಿಕತೆ ನಡೆಸಿದ ನಂತರ ಆ ವಿಡಿಯೋವನ್ನು ಮೊಬೈಲ್ ಅಥವಾ ಸೀಕ್ರೆಟ್ ಕ್ಯಾಮರಾ ಮೂಲಕ ಚಿತ್ರೀಕರಿಸಲಾಗುತ್ತದೆ. ಈ ಕುರಿತು ಶ್ವೇತಾಳ ಪತಿ ಸ್ವಾಪ್ನಿಲ್ ಜೈನ್ ನಿಂದ 6 ಹಾರ್ಡ್ ಡಿಸ್ಕ್ ಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಲ್ಲದೆ, ಕೆಲವು ಬಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮುಂಬೈ ಅಥವಾ ದೆಹಲಿಗೆ ಅಧಿಕೃತ ಪ್ರವಾಸಕ್ಕೆಂದು ತೆರಳಿದಾಗ ಅವರನ್ನು ಟಾರ್ಗೆಟ್ ಮಾಡಿ ಅವರ ಬೇಡಿಕೆಗೆ ಅನುಗುಣವಾಗಿ ಕೆಲ ಮಾಡೆಲ್ ಹುಡುಗಿಯರು ಹಾಗೂ ಬಾಲಿವುಡ್ ನಟಿಯರನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಎಸ್‍ಐಟಿ ಅಧಿಕಾರಿಗಳು ಇಂತಹ ವಿಡಿಯೋಗಳನ್ನು ವಶಪಡಿಸಿಕೊಂಡ ನಂತರ ಯಾವ ನಟಿ ಎಂದು ಬಹಿರಂಗವಾಗಲಿದೆ.

    ವಿಚಾರಣೆಯ ಸಮಯದಲ್ಲಿ ಶ್ವೇತಾ ಈ ಕುರಿತು ಮಾಹಿತಿ ನೀಡಿ, ಒಮ್ಮೆ ಮಂತ್ರಿ ಅಥವಾ ಕಾರ್ಯದರ್ಶಿ ಹನಿ ಟ್ರ್ಯಾಪ್‍ನಲ್ಲಿ ಸಿಕ್ಕಿಬಿದ್ದಾಗ ನಾನು ನಡೆಸುತ್ತಿರುವ ಎನ್‍ಜಿಓಗೆ ಸರ್ಕಾರದ ಕಾಂಟ್ರ್ಯಾಕ್ಟ್ ಕೊಡಿಸುವ ಪ್ರಯತ್ನ ನಡೆಸಿದ್ದೆ. ಪತಿ ನಡೆಸುತ್ತಿರುವ ಎನ್‍ಜಿಓಗೆ ಭೋಪಾಲ್ ಮುನ್ಸಿಪಲ್ ಕಾರ್ಪೋರೇಶನ್‍ನಿಂದ 8 ಕೋಟಿ ರೂ.ಗಳ ಗುತ್ತಿಗೆ ನೀಡಲಾಗಿದೆ ಎಂದು ಶ್ವೇತಾ ಒಪ್ಪಿಕೊಂಡಿದ್ದಾಳೆ. ಪಿಡಬ್ಲ್ಯೂಡಿ, ವಸತಿ, ಸಮಾಜ ಕಲ್ಯಾಣ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳ ಗುತ್ತಿಗೆಗಳನ್ನು ನೀಡಲಾಗಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿಯೊಬ್ಬರು ಪೋಶ್ ಭೋಪಾಲ್‍ನ ಮಿನಾಲ್ ರೆಸಿಡೆನ್ಸಿಯಲ್ಲಿ ಒಂದು ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾಳೆ.

    ಶ್ವೇತಾ ಜೈನ್ ಜೊತೆಗೆ ಎಸ್‍ಐಟಿ ಬಂಧಿಸಲ್ಪಟ್ಟ ಮತ್ತೊಬ್ಬ ಮಹಿಳೆ ಆರತಿ ದಯಾಳ್ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಬಹಿರಂಗಪಡಿಸಿದ್ದು, ನಾನೂ ಸಹ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಸಂಪರ್ಕದಲ್ಲಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಅಧಿಕಾರಿಗಳು ನನಗೆ ಒಂದು ಫ್ಲ್ಯಾಟ್‍ನ ವ್ಯವಸ್ಥೆ ಸಹ ಮಾಡಿದ್ದರು ಎಂದು ಸಹ ಒಪ್ಪಿಕೊಂಡಿದ್ದಾಳೆ. ಆರತಿ ಈ ಫ್ಲ್ಯಾಟ್ ಆಕ್ರಮಿಸಿಕೊಂಡ ನಂತರ ಅದನ್ನೇ ಅಕ್ರಮಗಳ ಅಡ್ಡ ಮಾಡಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರ್ಕಾರದ ಉನ್ನತ ಎಂಜಿನಿಯರ್‍ಗಳು ರಾಜಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿನ ಫ್ಲ್ಯಾಟ್‍ನ ಕೋಣೆಗಳಲ್ಲಿ ಸಹ ರಹಸ್ಯ ಕ್ಯಾಮರಾಗಳನ್ನು ಅಳವಡಿಸುತ್ತಿದ್ದೆವು. ಸ್ಟಿಂಗ್ ಆಪರೇಷನ್ ನಡೆಸಲು ಕಾಲ್ ಗಲ್ರ್ಸ್ ನೇಮಿಸಿಕೊಳ್ಳುತ್ತಿದ್ದೆವು. ಮಂತ್ರಿಗಳನ್ನು ಸೆಳೆಯಲು ಕೆಲವು ಸಂದರ್ಭಗಳಲ್ಲಿ ಬಿ ಗ್ರೇಡ್ ಬಾಲಿವುಡ್ ನಾಯಕಿಯರು ಹಾಗೂ ಮಾಡೆಲ್‍ಗಳನ್ನು ತೊಡಗಿಸಿಕೊಳ್ಳುತ್ತಿದ್ದೆವು ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.

    ದಂಧೆಯ ಮಾಸ್ಟರ್ ಮೈಂಡ್ ಶ್ವೇತಾಳಂತೆಯೇ ಆರತಿ ಸಹ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಂದ ಹೆಚ್ಚು ಹಣ ಪಡೆಯಲು ಎನ್‍ಜಿಓವನ್ನು ಸ್ಥಾಪಿಸಿದ್ದಳು. ವಿರಳ ಸಂದರ್ಭಗಳಲ್ಲಿ ಮಾತ್ರ ಸ್ಪೈ ಕ್ಯಾಮರಾ ಬಳಸುತ್ತಿದ್ದೆವು, ಹೆಚ್ಚಿನ ಸಂದರ್ಭಗಳಲ್ಲಿ ಎನ್‍ಜಿಓ ಮೂಲಕ ಸರ್ಕಾರದ ಹಣವನ್ನು ಸುಲಭವಾಗಿ ವರ್ಗಾಯಿಸುವಾಗ ಕ್ಯಾಮರಾ ಬಳಸುತ್ತಿದ್ದೆವು ಎಂದು ಇಬ್ಬರು ತಿಳಿಸಿದ್ದಾರೆ.

    ಲ್ಯಾಬ್‍ಗಳಲ್ಲಿ ವಿಡಿಯೋಗಳನ್ನು ಪರೀಕ್ಷಿಸಿದ ನಂತರ, ಬ್ಲ್ಯಾಕ್‍ಮೇಲ್ ಮಾಡಿದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಈ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಈ ಹನಿ ಟ್ರ್ಯಾಪ್ ಪ್ರಕರಣದ ಸೂತ್ರಧಾರೆ ಶ್ವೇತಾ ಜೈನ್ 2013 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಳು.

  • ನಟಿಯರ ಬಗ್ಗೆ ಗಾಯಕ ಎಸ್‍ಪಿಬಿ ಶಾಕಿಂಗ್ ಹೇಳಿಕೆ

    ನಟಿಯರ ಬಗ್ಗೆ ಗಾಯಕ ಎಸ್‍ಪಿಬಿ ಶಾಕಿಂಗ್ ಹೇಳಿಕೆ

    ಹೈದಾರಾಬಾದ್: ಬಹುಭಾಷಾ ಗಾಯಕ, ನಟ ಎಸ್‍ಪಿ ಬಾಲಸುಬ್ರಮಣ್ಯಂ ಅವರು ಕಾರ್ಯಕ್ರಮವೊಂದರಲ್ಲಿ ನಟಿಯರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

    ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಎಸ್‍ಪಿಬಿ ಅವರು ನಟಿಯರು ಧರಿಸುವ ಉಡುಪಿನ ಬಗ್ಗೆ ಪ್ರಶ್ನಿಸಿದ್ದಾರೆ. ನಟಿಯರು ತಾವು ಧರಿಸುವ ಉಡುಪಿನಿಂದ ಅವರಿಗೆ ಕೆಲಸ ಸಿಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಹೇಳುವ ಮೂಲಕ ನಟಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಈಗಿನ ಕಾಲದಲ್ಲಿ ನಟಿಯರಿಗೆ ಸಿನಿಮಾ ಕಾರ್ಯಕ್ರಮಗಳಲ್ಲಿ ಯಾವ ರೀತಿಯ ಉಡುಪು ಧರಿಸಬೇಕು ಎಂದು ತಿಳಿದಿಲ್ಲ. ನಟಿಯರ ವರ್ತನೆ ನೋಡಿ ಇದು ಅವರ ಮುಗ್ಧತೆ ಎಂದು ತಿಳಿದುಕೊಳ್ಳಬೇಕೋ? ಅಥವಾ ಮೈ ಕಾಣುವಂತಹ ಬಟ್ಟೆ ಧರಿಸಿದ್ದರೆ ಮಾತ್ರ ನಾಯಕರು ಹಾಗೂ ನಿರ್ದೇಶಕರು ಸಿನಿಮಾಗಳಲ್ಲಿ ಅವಕಾಶ ನೀಡುತ್ತಾರೆ ಎಂದು ಅವರು ಭಾವಿಸುತ್ತಾರೋ? ಗೊತ್ತಿಲ್ಲ ಎಂದು ಎಸ್‍ಪಿಬಿ ಅವರು ಹೇಳಿದ್ದಾರೆ.

    ನನ್ನ ಈ ಹೇಳಿಕೆಗೆ ನಟಿಯರು ನನ್ನ ಮೇಲೆ ಕೋಪ ಮಾಡಿಕೊಂಡರು ಪರವಾಗಿಲ್ಲ. ಏಕೆಂದರೆ ಇಲ್ಲಿ ಸಾಕಷ್ಟು ಜನರಿಗೆ ತೆಲುಗು ತಿಳಿಯಲ್ಲ. ಹಾಗಾಗಿ ಅವರಿಗೆ ನನ್ನ ಹೇಳಿಕೆ ಅರ್ಥವಾಗಿರುವುದಿಲ್ಲ ಎಂದು ಹೇಳಿದ್ದಾರೆ.

    ಎಸ್‍ಪಿ ಬಾಲಸುಬ್ರಮಣ್ಯಂ ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಅತಿ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎಸ್‍ಪಿಬಿ ಒಟ್ಟು 16 ಭಾಷೆಯಲ್ಲಿ 40,000 ಹಾಡನ್ನು ಹಾಡಿದ್ದಾರೆ. ಎಸ್‍ಪಿಬಿ ಅವರಿಗೆ ಅತ್ಯುತ್ತಮ ಗಾಯಕನಾಗಿ ಒಟ್ಟು 6 ನ್ಯಾಷನಲ್ ಫಿಲ್ಮ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಾಲಿವುಡ್ ಹಾಡುಗಳಿಗೂ ಕೂಡ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv