Tag: Actresses

  • ಯಾರು, ಎಲ್ಲಿ ಮತದಾನ ಮಾಡಲಿದ್ದಾರೆ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು

    ಯಾರು, ಎಲ್ಲಿ ಮತದಾನ ಮಾಡಲಿದ್ದಾರೆ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು

    ನಾಳೆ ಬೆಳಗ್ಗೆ 7 ಗಂಟೆಯಿಂದಲೇ ಕರ್ನಾಟಕ ವಿಧಾನಸಭೆ (Assembly) ಮತದಾನ ಪ್ರಕ್ರಿಯೆ ಶುರುವಾಗಲಿದೆ. ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎನ್ನುವ ಉದ್ದೇಶದಿಂದ ಚುನಾವಣೆ ಆಯೋಗವು ನಾನಾ ತಂತ್ರಗಳು ಹೆಣೆದಿದೆ. ಮತದಾರರ ಜಾಗೃತಿಗಾಗಿ ಸ್ಯಾಂಡಲ್ ವುಡ್ (Sandalwood) ನಟ ನಟಿಯರನ್ನು ಚುನಾವಣಾ ಪ್ರಚಾರ ರಾಯಭಾರಿಗಳನ್ನಾಗಿ ನೇಮಕ ಮಾಡಿದೆ. ಅಲ್ಲದೇ, ನೇರವಾಗಿಯೇ ಕೆಲ ಸಿಲೆಬ್ರಿಟಿಗಳು (Celebrities) ಚುನಾವಣೆ ಅಖಾಡಕ್ಕೂ ಇಳಿದಿದ್ದಾರೆ. ಹೀಗಾಗಿ ಚುನಾವಣೆ ಕಣದಲ್ಲಿ ಸ್ಯಾಂಡಲ್ ವುಡ್ ನಟ (Actors), ನಟಿಯರ (Actresses) ಹವಾ ಕೂಡ ಜೋರಾಗಿದೆ.

    ಕನ್ನಡ ಚಿತ್ರೋದ್ಯಮದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರು ಬೆಂಗಳೂರಿನಲ್ಲೇ ವಾಸವಾಗಿದ್ದರಿಂದ ಯಾರು, ಯಾವ ಕ್ಷೇತ್ರದಲ್ಲಿ ಮತದಾನ (Voting) ಮಾಡಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು. ಯಾರು, ಯಾವ ಕ್ಷೇತ್ರದಲ್ಲಿ ಇದ್ದಾರೆ ಎನ್ನುವುದು ಕೆಲವರಿಗೆ ಮಾತ್ರ ಗೊತ್ತಿದ್ದರೆ, ಇನ್ನೂ ಕೆಲವರಿಗೆ ಆ ಕುರಿತು ಕುತೂಹಲವೂ ಇದ್ದೇ ಇದೆ. ಇದನ್ನೂ ಓದಿ:ಮಗು ಬಡಿದ ಪ್ರಕರಣ : ಪತಿಯ ವಿರುದ್ಧ ದೂರು ನೀಡಿದ ಕಿರುತೆರೆ ನಟಿ

    ನಟ ಯಶ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರೆ, ಸುದೀಪ್ ಪುಟ್ಟೇನಹಳ್ಳಿ, ಶಿವರಾಜ್ ಕುಮಾರ್ ಬ್ಯಾಟರಾಯನ ಪುರ (ರಾಚೇನಹಳ್ಳಿ), ರವಿಚಂದ್ರನ್ ರಾಜಾಜಿನಗರ, ಉಪೇಂದ್ರ ಕತ್ರಿಗುಪ್ಪೆ, ಧ್ರುವ ಸರ್ಜಾ ತ್ಯಾಗರಾಜನಗರ(ಶಾಸ್ರ್ತಿ ನಗರ), ರಾಘವೇಂದ್ರ ರಾಜ್ ಕುಮಾರ್  ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಸದಾಶಿವನಗರ, ರಾಧಿಕ ಪಂಡಿತ್ ದೇವಯ್ಯ ಪಾರ್ಕ್, ಸುಧಾರಾಣಿ ಮಲ್ಲೇಶ್ವರಂ, ರಕ್ಷಿತಾ ಪ್ರೇಮ್ ಚಂದ್ರ ಲೇಔಟ್ ಪ್ರೇಮ್ ಚಂದ್ರ ಲೇಔಟ್ ನಲ್ಲಿ ತಮ್ಮ ಮತದಾನ ಮಾಡಲಿದ್ದಾರೆ.

    ಅಮೂಲ್ಯ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ನೆನಪಿರಲಿ ಪ್ರೇಮ್ ಆರ್ ಆರ್ ನಗರ,  ರಚಿತಾ ರಾಮ್ ಆರ್ ಆರ್ ನಗರ, ಮೇಘನಾ ಸರ್ಜಾ ಜೆಪಿ ನಗರ, ತಾರಾ ಜೆ ಪಿ ನಗರ, ದ್ವಾರಕೀಶ್ ಬೊಮ್ಮನಹಳ್ಳಿ, ಸೃಜನ್ ಲೋಕೇಶ್  ಕತ್ರಿಗುಪ್ಪೆ, ಅಜಯ್ ರಾವ್ ರಾಜಾಜಿನಗರ, ಬಿ.ಸರೋಜದೇವಿ ಮಲ್ಲೇಶ್ವರಂ, ಹರ್ಷಿಕಾ ಪೂಣಚ್ಚ ಕೆ ಆರ್ ಪುರ, ಪೂಜಾ ಗಾಂಧಿ  ಕತ್ರಿಗುಪ್ಪೆ, ಯೋಗರಾಜ್ ಭಟ್ ಗಿರಿ ನಗರ, ಅನಂತ್ ನಾಗ್  ಮಲ್ಲೇಶ್ವರಂ ಮತ ಕೇಂದ್ರಗಳಲ್ಲಿ ತಮ್ಮ ಮತದಾನ ಮಾಡಲಿದ್ದಾರೆ.

    ಚಂದನ್ ಶೆಟ್ಟಿ ನಾಗರಭಾವಿಯಲ್ಲಿ ಮತದಾನ ಮಾಡಿದರೆ, ಕಾರುಣ್ಯ ರಾಮ್ ಆರ್ ಆರ್ ನಗರ, ಅವಿನಾಶ್  ಆರ್ ಆರ್ ನಗರ, ಜಗ್ಗೇಶ್ ಮಲ್ಲೇಶ್ವರಂ, ಶರಣ್ ಹೊಸಕೆರೆಹಳ್ಳಿ, ದುನಿಯಾ ವಿಜಯ್ ಕತ್ತಿಗುಪ್ಪೆ,  ಸಾಧು ಕೋಕಿಲ ನಾಗರಭಾವಿ, ಅರ್ಜುನ್ ಜನ್ಯ ಹೆಬ್ಬಾಳ, ಶ್ರೀಮುರುಳಿ ವಸಂತನಗರ, ವಿಜಯ್ ರಾಘವೇಂದ್ರ ಯಲಹಂಕ, ಸಪ್ತಮಿಗೌಡ ಜೆ ಪಿ ನಗರ, ರಮೇಶ್ ಅರವಿಂದ್ ಪದ್ಮನಾಭ ನಗರ, ಮಾಲಾಶ್ರೀ ಶಿವಾಜಿನಗರದಲ್ಲಿ ಮತ ಚಲಾವಣೆ ಮಾಡಲಿದ್ದಾರೆ.

    ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ಶ್ರುತಿ ಹೊಸಕೆರೆ ಹಳ್ಳಿ,  ಭಾರತಿ ಜಯನಗರ, ಅನಿರುದ್ದ್ ಜಯನಗರ, ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಜೆ ಪಿ ನಗರ, ಪ್ರಶಾಂತ್ ನೀಲ್ ವಸಂತನಗರದಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಲಿದ್ದಾರೆ.

    ಇತರ ಜಿಲ್ಲೆಗಳಲ್ಲಿ ಮತದಾನ ಮಾಡುವ ಸಿನಿ ಗಣ್ಯರು

    ರಿಷಬ್ ಶೆಟ್ಟಿ ಕೆರಾಡಿ, ಕುಂದಾಪುರ, ರಕ್ಷಿತ್ ಶೆಟ್ಟಿ ಉಡುಪಿ, ರಾಜ್ ಬಿ ಶೆಟ್ಟಿ ಉಡುಪಿ, ನಿಖಿಲ್ ಕುಮಾರಸ್ವಾಮಿ ಕೇತಗನಹಳ್ಳಿ (ಬಿಡದಿ), ಡಾಲಿ ಧನಂಜಯ ಅರಸೀಕೆರೆ, ಅಶಿಕಾ ರಂಗನಾಥ್ ತುಮಕೂರು, ಚಿಕ್ಕಣ್ಣ ಮೈಸೂರು, ಲೀಲಾವತಿ ಸೋಲದೇವನಹಳ್ಳಿ, ವಿನೋದ್ ರಾಜ್ ಸೋಲದೇವನ ಹಳ್ಳಿ, ದೊಡ್ಡಣ್ಣ ಬಿದರುಕಲ್ಲು ಮತದಾನ ಮಾಡಲಿದ್ದಾರೆ.

  • ಚಿತ್ರರಂಗದ ಉದಯೋನ್ಮುಖ ಮೇಕಪ್ ಕಲಾವಿದೆ ಶ್ವೇತ ಸುಧಿ

    ಚಿತ್ರರಂಗದ ಉದಯೋನ್ಮುಖ ಮೇಕಪ್ ಕಲಾವಿದೆ ಶ್ವೇತ ಸುಧಿ

    ತ್ತೀಚಿನ ದಿನಗಳಲ್ಲಿ ಮೇಕಪ್ ಇಲ್ಲದೆ ಹೊರಗೆ ಹೋಗುವವರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಸಿನಿಮಾ ಸೀರಿಯಲ್ ಆರ್ಟಿಸ್ಟ್ ಮೇಕಪ್ ಇಲ್ಲದೇ ಹೊರಗೆ ಕಾಲಿಡೋದಿಲ್ಲ ಅನ್ನೋದಂತು ಸುಳ್ಳಲ್ಲ. ಸ್ಟಾರ್ ನಟ-ನಟಿಯರಂತೂ ಪರ್ಸನಲ್ ಮೇಕಪ್ ಕಲಾವಿದರನ್ನ ತಮ್ಮ ಜೊತೆ ಇಟ್ಟುಕೊಂಡಿರುತ್ತಾರೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಮೇಕಪ್ ಕಲಾವಿದರಿಗೂ ಬೇಡಿಕೆ ಹೆಚ್ಚಾಗುತ್ತಿದ್ದು. ಮೇಕಪ್ ಕೋರ್ಸ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈಗಾಗಲೇ ಹಲವಾರು ಮೇಕಪ್ ಕಲಾವಿದರು ತಮ್ಮದೇ ವಿಭಿನ್ನ ಸ್ಟೈಲ್ ಮೂಲಕ ಖ್ಯಾತಿಯನ್ನು ಗಳಿಸುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಉದಯೋನ್ಮುಖ ಮೇಕಪ್ ಕಲಾವಿದೆ ಶ್ವೇತ ಸುಧಿ.

    ಮೇಕಪ್ ಕಲಾವಿದೆಯಾಗಿ ಹೆಸರು ಮಾಡಬೇಕೆಂಬ ಕನಸಿಟ್ಟುಕೊಂಡು ಮೇಕಪ್ ಕೋರ್ಸ್ ಮಾಡಿ ಹಂತ ಹಂತವಾಗಿ ಬೆಳೆಯುತ್ತಿರುವ ಪ್ರತಿಭೆ ಶ್ವೇತ ಸುಧಿ. ಮೂಲತಃ ಬೆಂಗಳೂರಿನ ದೇವನಹಳ್ಳಿಯವರಾದ ಇವರು, ಮೇಕಪ್ ಲೋಕದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿರುವ ಕಲಾವಿದೆ. ಮೇಕಪ್ ಪ್ಯಾಷನ್ ಸೆಳೆತಕ್ಕೆ ಒಳಗಾಗಿ ಖಾಸಗಿ ಕಂಪನಿಯ ಕೆಲಸ ಬಿಟ್ಟು ಮೇಕಪ್ ಕೋರ್ಸ್ ಮುಗಿಸಿ ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಮೂರುವರೆ ವರ್ಷದಿಂದ ಸ್ವತಂತ ಮೇಕಪ್ ಕಲಾವಿದೆಯಾಗಿ ಸಿನಿಮಾ ಹಾಗೂ ಸೀರಿಯಲ್ ಆರ್ಟಿಸ್ಟ್ ಗಳ ನೆಚ್ಚಿನ ಮೇಕಪ್ ಕಲಾವಿದೆಯಾಗಿ ಖ್ಯಾತಿಗಳಿಸಿಕೊಂಡಿದ್ದಾರೆ ಶ್ವೇತ ಸುಧಿ.

    ಇಂದು ತಮ್ಮದೇ ಐಡೆಂಟಿಟಿ ಹೊಂದಿರುವ ಶ್ವೇತ ಸುಧಿ ಆರಂಭಿಕ ದಿನಗಳು ಸುಲಭದ ಹಾದಿಯಾಗಿರಲಿಲ್ಲ. ಈ ಕುರಿತು ಶ್ವೇತ ಸುಧಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೇಕಪ್ ಕೋರ್ಸ್ ಮುಗಿಸಿದ ನಂತರ ಕೆಲಸ ಸಿಗುತ್ತೆ, ಗ್ರಾಹಕರು ಸಿಗುತ್ತಾರೆ ಎಂಬ ಗ್ಯಾರಂಟಿ ಇರೋದಿಲ್ಲ. ಆರಂಭಿಕ ದಿನಗಳಲ್ಲಿ ನನ್ನ ಜೊತೆ ಕೋರ್ಸ್ ಮಾಡಿದವರೆಲ್ಲ ಬೇರೆ ಪ್ರೊಫೆಷನ್ ನೋಡಿಕೊಂಡರು. ಆದರೆ ನನಗೆ ಇದೇ ಪ್ರೊಫೆಷನ್ ನಲ್ಲಿ ಬೆಳೆಯಬೇಕು ಎಂಬ ಆಸೆ ಇತ್ತು. ಅಲ್ಲೊಂದು ಇಲ್ಲೊಂದು ಆಫರ್ ಸಿಕ್ಕಾಗ ನಾನೇ ಟ್ರಾವೆಲ್ ಮಾಡಿಕೊಂಡು ಹೋಗಿ ಮೇಕಪ್ ಮಾಡಿ ಅವರು ಕೊಟ್ಟಷ್ಟು ಹಣ ತೆಗೆದುಕೊಳ್ಳುತ್ತಿದ್ದೆ. ಹಾಗಂತ ಗುಣಮಟ್ಟದಲ್ಲಿ ನಾನು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಉತ್ತಮ ಗುಣಮಟ್ಟದ ಮೇಕಪ್ ಕಿಟ್ ಗಳನ್ನೇ ಬಳಸುತ್ತಿದ್ದೆ. ಒಂದಷ್ಟು ತಿಂಗಳುಗಳ ಏಳುಬೀಳಿನ ನಂತರ ನನ್ನ ಕೆಲಸದ ಗುಣಮಟ್ಟ ನೋಡಿ ಆಫರ್ ಗಳು ಬರಲಾರಂಭಿಸಿದವು. ಈಗ ವರ್ಷದಲ್ಲಿ ಮುನ್ನೂರು ದಿನವಾದರೂ ಬಿಡುವಿಲ್ಲದೆ ಕೆಲಸ ಮಾಡುತ್ತೇನೆ ಎಂದು ತಾವು ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾರೆ ಶ್ವೇತ ಸುಧಿ.

    ಸಿನಿಮಾ, ಸೀರಿಯಲ್ ಆರ್ಟಿಸ್ಟ್ ಗಳಿಗಷ್ಟೇ ಮೇಕಪ್ ಮಾಡಬೇಕು ಎಂದೇನೂ ಆಸೆಯಿಲ್ಲ. ಒಟ್ಟಿನಲ್ಲಿ ಮೇಕಪ್ ಮಾಡುತ್ತಿರಬೇಕು ಹೊಸ ಹೊಸ ಪ್ರಯತ್ನ ಮಾಡಬೇಕು ಎನ್ನೋದಷ್ಟೇ ನನ್ನ ಆಸೆ ಎನ್ನುವ ಇವರು, ತಮ್ಮದೇ ಸಿಗ್ನೇಚರ್ ಲುಕ್ ಕ್ರಿಯೇಟ್ ಮಾಡಬೇಕು ಎಂಬ ಬಹುದೊಡ್ಡ ಕನಸಿಟ್ಟುಕೊಂಡಿದ್ದಾರೆ. ಇನ್ನು ಬಿಡುವಿಲ್ಲದೆ ಕೆಲಸದ ನಡುವೆಯೂ ಮೇಕಪ್ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ತರಗತಿಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. ನಿರಂತರ ಕಲಿಕೆ, ತಾಳ್ಮೆ, ಹೊಸತನದಿಂದ ಸ್ವತಂತ್ರ ಮೇಕಪ್ ಕಲಾವಿದೆಯಾಗಿ ಹೆಸರು ಗಳಿಸಿರುವ ಶ್ವೇತ ಸುಧಿ ಇಂದು ಚಿತ್ರರಂಗದ ಬೇಡಿಕೆಯ ಮೇಕಪ್ ಕಲಾವಿದೆಯಾಗಿ ಬೆಳೆಯುತ್ತಿದ್ದಾರೆ.

  • ನಟಿಮಣಿಯರ ಮಾಲ್ಡಿವ್ಸ್ ಟ್ರಿಪ್ ರಹಸ್ಯ ರಿವೀಲ್ – ಷರತ್ತುಗಳು ಅನ್ವಯ, ರೆಸಾರ್ಟ್‍ಗಳಿಂದ ಫ್ರೀ ಟಿಕೆಟ್

    ನಟಿಮಣಿಯರ ಮಾಲ್ಡಿವ್ಸ್ ಟ್ರಿಪ್ ರಹಸ್ಯ ರಿವೀಲ್ – ಷರತ್ತುಗಳು ಅನ್ವಯ, ರೆಸಾರ್ಟ್‍ಗಳಿಂದ ಫ್ರೀ ಟಿಕೆಟ್

    ಬೆಂಗಳೂರು: ಮಾಲ್ಡಿವ್ಸ್ ಕಡಲ ಕಿನಾರೆಯಲ್ಲಿ ನಟಿ ಮಣಿಯರ ದಂಡೇ ಕಾಣುತ್ತಿದ್ದು, ಬಹುತೇಕ ನಟಿಯರ ಸಾಮಾಜಿಕ ಜಾಲತಾಣಗಳಲ್ಲಿ ಅವೇ ಚಿತ್ರಗಳು ತುಂಬಿಕೊಂಡಿವೆ. ತುಂಡುಡುಗೆ ತೊಟ್ಟು ಪೋಸ್ ನೀಡಿದ ಚಿತ್ರಗಳು ಹುಡುಗರ ಹಾರ್ಟ್ ಬ್ರೇಕ್ ಮಾಡಿವೆ. ಇದರೊಂದಿಗೆ ಉಳಿದೆಲ್ಲ ಪ್ರವಾಸಿ ತಾಣಗಳನ್ನು ಬಿಟ್ಟು ಇದ್ದಕ್ಕಿಂತೆ ಎಲ್ಲ ನಟಿಯರು ಮಾಲ್ಡಿವ್ಸ್ ಗೆ ತೆರಳು ಕಾರಣವೇನು ಎಂಬ ಯೋಚನೆ ಸಹ ತಲೆಯಲ್ಲಿ ಓಡುತ್ತಿದೆ. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ, ಇಲ್ಲಿದೆ ನೋಡಿ ಅಸಲಿ ಸತ್ಯ.

     

    View this post on Instagram

     

    A post shared by Shanvi sri (@shanvisri)

    ಬಹುತೇಕ ನಟಿಯರ ಸಾಮಾಜಿಕ ಜಾಲತಾಣಗಳಲ್ಲಿ ಶುಭ್ರ ಆಕಾಶ, ನೀಲಿ ನೀರಿನ ಸಮುದ್ರ, ತುಂಡುಡುಗೆ ತೊಟ್ಟು ಮರಳಿನ ಮೇಲೆ ಮಲಗಿ ಸೂರ್ಯನ ಕಾಂತಿಗೆ ಮೈವೊಡ್ಡಿದ ಚಿತ್ರಗಳು ರಾರಾಜಿಸುತ್ತಿವೆ. ಇದೇನು ಎಂದೂ ಇಲ್ಲದ ಮಾಲ್ಡಿವ್ಸ್ ಪ್ರೇಮ ಇದ್ದಕ್ಕಿದ್ದಂತೆ ಇಷ್ಟೋಂದು ಪ್ರಮಾಣದಲ್ಲಿ ನಟಿ ಮಣಿಯರಿಗೆ ಬಂದಿದ್ದೇಕೆ ಎಂಬುದು ಹಲವರ ಪ್ರಶ್ನೆಯಾಗಿತ್ತು ಸಹ.

    ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು, ಇದರ ಹಿಂದೆ ಮಾಲ್ಡಿವ್ಸ್ ಪ್ರವಾಸೋದ್ಯಮದ ಕೆಲಸ ಕಾಣತೊಡಗಿದೆ. ಅಂದರೆ ಈ ನಟಿಮಣಿಯರು ಮಾಲ್ಡಿವ್ಸ್ ನಲ್ಲಿ ಮಜಾ ಮಾಡುತ್ತಿರುವುದು ಇವರ ಸ್ವಂತ ಖರ್ಚಿನಿಂದಲ್ಲ ಬದಲಿಗೆ ರೆಸಾರ್ಟ್ ಮಾಲೀಕರ ಕರಾಮತ್ತಿನಿಂದ. ಹೌದು ದ್ವೀಪ ರಾಷ್ಟ್ರವಾಗಿರುವ ಮಾಲ್ಡಿವ್ಸ್ ಮೂಲ ಆದಾಯ ಪ್ರವಾಸೋದ್ಯಮ. ಆದರೆ ಕೊರೊನಾ ವೈರಸ್‍ನಿಂದಾಗಿ ಎಲ್ಲ ಕ್ಷೇತ್ರಗಳಂತೆ ಪ್ರವಾಸೋದ್ಯಮದ ಮೇಲೂ ಹೊಡೆತ ಬಿದ್ದಿದೆ. ಇತ್ತೀಚೆಗೆ ವಿದೇಶಿ ಪ್ರವಾಸಕ್ಕೆ ಅನುಮತಿ ನೀಡಿದರೂ ಕೊರೊನಾ ಹಿನ್ನೆಲೆ ಯಾರೂ ಹೋಗುತ್ತಿಲ್ಲ. ಹೀಗಾಗಿ ಅಲ್ಲಿನ ಟೂರಿಸಂ ನೆಲಕಚ್ಚಿದೆ.

    ಕುಂಠಿತವಾಗಿರುವ ಪ್ರವಾಸೋದ್ಯಮವನ್ನು ಮೇಲೆತ್ತಲೇಬೇಕು ಎಂಬ ಉದ್ದೇಶದಿಂದ ಅಲ್ಲಿನ ರೆಸಾರ್ಟ್ ಮಾಲೀಕರು ಇನ್ನಿಲ್ಲದ ಪ್ಲಾನ್ ಮಾಡಿದ್ದಾರೆ. ಇದರ ಭಾಗವಾಗಿ ಕಂಡಿದ್ದು, ನಮ್ಮ ಭಾರತೀಯ ಸಿನಿಮಾ ನಟ, ನಟಿಯರು. ಜಾಹೀರಾತುಗಳು ವರ್ಕೌಟ್ ಆಗಲ್ಲ ಎಂಬುದನ್ನು ಅರಿತ ಮಾಲೀಕರು ಮ್ಯಾನೇಜರ್, ಪಿಆರ್ ಗಳ ಮೂಲಕ ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್ ಹೀಗೆ ವಿವಿಧ ಭಾಷೆಗಳ ಸಿನಿಮಾಗಳ ನಟಿಯರನ್ನು ಸಂಪರ್ಕಿಸಿ ಮಾಲ್ಡಿವ್ಸ್ ಗೆ ಆಹ್ವಾನಿಸಿದ್ದಾರೆ. ಈ ಗುಟ್ಟನ್ನು ಬಾಲಿವುಡ್ ನಟರೊಬ್ಬರು ರಟ್ಟು ಮಾಡಿದ್ದು, ಬಾಲಿವುಡ್‍ನಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

     

    View this post on Instagram

     

    A post shared by disha patani (paatni) (@dishapatani)

    ಆಫರ್ ಏನು?
    ಡಜನ್‍ಗಟ್ಟಲೇ ನಟಿಯರನ್ನು ಆಹ್ವಾನಿಸಿರುವ ರೆಸಾರ್ಟ್ ಮಾಲೀಕರು ತಾರೆಯರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಆಫರ್ ಮಾಡಿದ್ದಾರೆ. ಪ್ರಯಾಣ ವೆಚ್ಚ, ಊಟ-ವಸತಿ, ಶಾಪಿಂಗ್ ಸೇರಿದಂತೆ ಎಲ್ಲವನ್ನೂ ಆಯೋಜಕರೇ ಒದಗಿಸಿ ತಂಡೋಪತಂಡವಾಗಿ ನಟಿಮಣಿಯರನ್ನು ಕರೆಸಿಕೊಂಡಿದ್ದಾರೆ. ಇದರೊಂದಿಗೆ ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ. ಈ ಮೂಲಕ ಪ್ರವಾಸೋದ್ಯಮ ಮೇಲೆತ್ತಲು ಪ್ರಯತ್ನಿಸಿದ್ದಾರೆ.

     

    View this post on Instagram

     

    A post shared by Sonakshi Sinha (@aslisona)

    ಷರತ್ತುಗಳು ಏನ್ ಗೊತ್ತಾ?
    ನಟಿ ಮಣಿಯರಿಗೆ ಊಟ, ವಸತಿ, ಶಾಪಿಂಗ್ ಜೊತೆಗೆ ಪ್ರತ್ಯೇಕ ಫೋಟೋಗ್ರಾಫರ್‍ಗಳನ್ನೂ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಷರತ್ತುಗಳನ್ನೂ ವಿಧಿಸಿದ್ದಾರೆ. ಪ್ರತಿ ದಿನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ 2-3 ಫೋಟೋ ಅಪ್‍ಲೋಡ್ ಮಾಡಬೇಕು. ಪ್ರತಿ ಚಿತ್ರಗಳಲ್ಲಿಯೂ ಹಾಟ್, ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು. ಇದರ ಜೊತೆಗೆ ಪ್ರತಿ ಫೋಟೋಗೆ ಲೊಕೇಶನ್ ಜೊತೆಗೆ ರೆಸಾರ್ಟ್ ಹೆಸರು ಹಾಕಬೇಕು. ಆದರೆ ಈ ಗುಟ್ಟು ಯಾರಿಗೂ ತಿಳಿಯಬಾರದು. ಈ ಮೂಲಕ ಮಾಲ್ಡಿವ್ಸ್ ಕೊರೊನಾ ಫ್ರೀ, ಇಲ್ಲಿ ಮಸ್ತ್ ಮಜಾ ಮಾಡಬಹುದು. ಕೊರೊನಾ ಬಂದ ನಂತರ ಮೊದಲ ವಿದೇಶ ಪ್ರವಾಸ ಎಂಬುದನ್ನು ಸಾಬೀತು ಪಡಿಸಬೇಕು ಎಂದು ನಟಿಮಣಿಯರಿಗೆ ತಿಳಿಸಿದ್ದಾರೆ. ಈ ಎಲ್ಲ ಷರತ್ತುಗಳಿಗೆ ಒಪ್ಪಿರುವ ತಾರೆಯರು ತಂಡೋಪತಂಡವಾಗಿ ತೆರಳಿ, ಮಜಾ ಮಾಡುತ್ತಿದ್ದಾರೆ. ಜೊತೆಗೆ ಹಾಟ್ ಫೋಟೋಗಳನ್ನು ಹಾಕುತ್ತಿದ್ದಾರೆ.

    ಯಾರೆಲ್ಲ ಹೋಗಿದ್ದಾರೆ?
    ಸ್ಯಾಂಡಲ್‍ವುಡ್, ಬಾಲಿವುಡ್ ಸೇರಿದಂತೆ ಹಲವು ಮಂದಿ ಸಿನಿಮಾ ಕಲಾವಿದರು ಮಾಲ್ಡಿವ್ಸ್‍ಗೆ ತೆರಳಿದ್ದಾರೆ. ಈ ಪೈಕಿ ಖರ್ಚು ಮಾಡಿ ಹೋದವರು ಮತ್ತು ಉಚಿತವಾಗಿ ಹೋದವರ ಬಗ್ಗೆ ವಿವರ ಸಿಕ್ಕಿಲ್ಲ. ಆದರೆ ಸ್ಯಾಂಡಲ್‍ವುಡ್‍ನ ಶಾನ್ವಿ ಶ್ರೀವಾಸ್ತವ್, ಪ್ರಣಿತಾ, ಬಾಲಿವುಡ್‍ನ ರಾಕುಲ್ ಪ್ರೀತ್ ಸಿಂಗ್ ತಾಪ್ಸಿ ಪನ್ನು, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಇಲಿಯಾನಾ, ಮೌನಿ ರಾಯ್, ಟಾಲಿವುಡ್‍ನ ಸಮಂತಾ, ಕಾಜಲ್ ಅಗರ್‍ವಾಲ್ ಹೀಗೆ ಸಾಲು ಸಾಲು ನಟಿಯರು ವಿಮಾನ ಹತ್ತಿದ್ದಾರೆ.

     

    View this post on Instagram

     

    A post shared by Rakul Singh (@rakulpreet)

  • ಹೈ ಟೆಕ್ ವೇಶ್ಯಾವಾಟಿಕೆ- ಓರ್ವ ಸಿನಿಮಾ ನಟಿ ಅರೆಸ್ಟ್, ಮೂವರು ಧಾರಾವಾಹಿ ನಟಿಯರ ರಕ್ಷಣೆ

    ಹೈ ಟೆಕ್ ವೇಶ್ಯಾವಾಟಿಕೆ- ಓರ್ವ ಸಿನಿಮಾ ನಟಿ ಅರೆಸ್ಟ್, ಮೂವರು ಧಾರಾವಾಹಿ ನಟಿಯರ ರಕ್ಷಣೆ

    – ಗ್ರಾಹಕರ ಸೋಗಿನಲ್ಲಿ ವೇಶ್ಯಾವಾಟಿಕೆ ಅಡ್ಡೆಗೆ ನುಗ್ಗಿದ ಪೊಲೀಸರು
    – ಮೂವರಿಗೆ 10.50 ಲಕ್ಷ ವ್ಯವಹಾರ ಕುದುರಿಸಿದ್ದ ಪೊಲೀಸರು
    – 5 ಸ್ಟಾರ್ ಹೋಟೆಲ್‍ನಲ್ಲಿ ಹೈ ಟೆಕ್ ಸೆಕ್ಸ್ ದಂಧೆ

    ಮುಂಬೈ: ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ಓರ್ವ ಸಿನಿಮಾ ನಟಿಯನ್ನು ಬಂಧಿಸಿದ್ದಾರೆ. ಅಲ್ಲದೆ ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ.

    ಗ್ರಾಹಕರ ಸೋಗಿನಲ್ಲಿ ಹೋಗಿ ಮುಂಬೈನ ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಅಪರಾಧ ವಿಭಾಗದ 11ನೇ ಯುನಿಟ್ ಪೊಲೀಸರು ದಾಳಿ ನಡೆಸಿದ್ದು, ಓರ್ವ ಸಿನಿಮಾ ನಟಿಯನ್ನು ಬಂಧಿಸಿದ್ದಾರೆ. ಅಲ್ಲದೆ ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ. ನಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಉಳಿದ ಮೂವರು ನಟಿಯರು ವಿವಿಧ ಧಾರಾವಾಹಿಗಳಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಟಿಯರು ಹಾಗೂ ಬೆಳ್ಳಿ ಡ್ಯಾನ್ಸ್ ಮಾಡುವ ಹುಡುಗಿಯರು ಸೆಕ್ಸ್ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ನಕಲಿ ಗ್ರಾಹಕರನ್ನು ಕಳುಹಿಸಿದ್ದು, ಮೂವರು ಮಹಿಳೆಯರಿಗೆ 10.50 ಲಕ್ಷ ರೂ. ವ್ಯವಹಾರ ಕುದುರಿಸಿ ನಟಿ ಮಣಿಯರಿಗೆ ಪೊಲೀಸರು ಬಲೆ ಬೀಸಿದ್ದಾರೆ.

    ಬಳಿಕ ಹಿರಿಯ ಇನ್‍ಸ್ಪೆಕ್ಟರ್ ಮಹೇಶ್ ತವಾಡೆ ಅವರ ನೇತೃತ್ವದ ತಂಡ ಗೋರೆಗಾಂವ್‍ನ 5 ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಟಿಯರನ್ನು ಬಂಧಿಸಿದ್ದಾರೆ. ಐಪಿಸಿ ಹಾಗೂ ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ವನ್ರಾಯ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

  • ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ

    ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ

    ಮೈಸೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾಕೆ ಶಾಸಕ ಜಮೀರ್ ಅಹ್ಮದ್‍ನನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇವಲ ಕೆಲ ಸ್ಯಾಂಡಲ್‍ವುಡ್ ನಟಿಯರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರಶಾಂತ್ ಸಂಬರಗಿ ನೇರವಾಗಿ ಹೆಸರಿಸಿರುವ ಶಾಸಕ ಜಮೀರ್ ಅಹ್ಮದ್‍ನನ್ನು ಬಂಧಿಸಿ ಯಾಕೆ ವಿಚಾರಣೆ ನಡೆಸುತ್ತಿಲ್ಲ, ಇದರ ಹಿಂದಿನ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

    ಪ್ರಶಾಂತ್ ಸಂಬರಗಿ ಹಲವರ ಹೆಸರು ಹೇಳಿದ್ದಾರೆ. ಈ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಹೆಸರು ಸಹ ಇದೆ. ಈ ವರೆಗೆ ಜಮೀರ್ ಅಹಮ್ಮದ್ ರನ್ನ ಯಾಕೆ ಬಂಧಿಸಿಲ್ಲ. ಇದರ ಹಿಂದಿನ ಉದ್ದೇಶವೇನು? ತನಿಖಾಧಿಕಾರಿಗಳಿಗೆ ಪ್ರಶಾಂತ್ ಸಂಬರಗಿ ಆರೋಪಗಳ ಮೇಲೆ ಅನುಮಾನಗಳಿದ್ದರೆ ಅವರನ್ನೂ ತನಿಖೆಗೆ ಒಳಪಡಿಸಿ. ಅವರ ಆರೋಪಗಳಿಗೆ ಪೂರಕ ದಾಖಲೆಗಳಿದ್ದರೆ ಅದನ್ನು ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಿ ಎಂದು ಹೇಳಿದ್ದಾರೆ.

     

    ಪ್ರಶಾಂತ್ ಸಂಬರಗಿ ಯಾರ್ಯಾರ ಹೆಸರು ಹೇಳಿದ್ದಾರೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ಯಾರೋ ಒಬ್ಬಿಬ್ಬರು ಸಿನಿಮಾ ನಟಿಯರನ್ನು ಕೂಡಿ ಹಾಕಿ ವಿಚಾರಣೆ ನಡೆಸಿ ಕಳುಹಿಸಿದರೆ ಸರಿ ಆಗುವುದಿಲ್ಲ. ಈ ಪ್ರಕರಣ ಹೊರ ಬಂದಿದ್ದೇ ಇಂದ್ರಜಿತ್ ಲಂಕೇಶ್ ಅವರ ಧೈರ್ಯದ ನಿರ್ಧಾರದಿಂದ. ಹೀಗಾಗಿ ಅವರು ಹೇಳಿದ ಎಲ್ಲ ವಿಚಾರ ಹಾಗೂ ಮಜಲುಗಳಿಂದ ತನಿಖೆಯಾಗಬೇಕು ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

    ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದೂ ಸಹಜ. ಆದರೆ ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಎಂದು ಹೇಳಿದ್ದಾರೆ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದು ಪ್ರತಾಪ್ ಸಿಂಹ ಹೇಳಿದರು.

     

    ಇದು ಶಾಲಾ, ಕಾಲೇಜುಗಳಿಗೂ ಹಬ್ಬುತ್ತಿದ್ದು, ವಿದ್ಯಾರ್ಥಿಗಳು ಡ್ರಗ್ಸ್ ದಾಸರಾಗುತ್ತಿದ್ದಾರೆ. ಇದನ್ನು ಸೇವಿಸಿದರೆ ವಾಸನೆ ಸಹ ಬರುವುದಿಲ್ಲ. ಹೀಗಾಗಿ ಯುವಕರು ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಈ ಸಮಾಜದ ಪಿಡುಗನ್ನು ತೊಲಗಿಸಲು ಸಮಗ್ರ ತನಿಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

  • ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ರೂ ಶಿಸ್ತು ಕ್ರಮ: ಡಿಸಿಎಂ ಕಾರಜೋಳ

    ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ರೂ ಶಿಸ್ತು ಕ್ರಮ: ಡಿಸಿಎಂ ಕಾರಜೋಳ

    ಬಾಗಲಕೋಟೆ: ರಾಗಿಣಿ-ಪಾಗಿಣಿ ನನಗೆ ಗೊತ್ತಿಲ್ಲ. ಯಾರೇ ತಪ್ಪು ಮಾಡಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದರೂ, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ರಾಜಕಾರಣಿಗಳ ಮಕ್ಕಳಿರಲಿ, ಅಧಿಕಾರಿಗಳ ಮಕ್ಕಳೇ ಇರಲಿ, ಯಾರ ಮಕ್ಕಳಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಡ್ರಗ್ಸ್ ವಿವಾದದಲ್ಲಿ ಸಿಲುಕಿದವರ ಮೇಲೆ ಈಗಾಗಲೇ ಕ್ರಮ ಶುರುವಾಗಿದೆ. ತನಿಖೆ ನಡೆಯುತ್ತಿದೆ, ತನಿಖೆ ಮುಗಿಯುವವವರೆಗೆ ನಾವೇನೂ ಹೇಳಲು ಸಾಧ್ಯವಿಲ್ಲ. ತನಿಖೆ ಮುಗಿಯುವ ವರೆಗೂ ವಿಷಯವನ್ನು ಗೌಪ್ಯವಾಗಿ ಇಡಲಾಗುತ್ತದೆ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಎಲ್ಲರಿಗೂ ಮಾಹಿತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಕಾರಜೋಳ ತಿಳಿಸಿದರು.

    ಇದು ಕೇವಲ ಕಾನೂನಿನಿಂದ ಬಗೆ ಹರಿಯುವ ಸಮಸ್ಯೆ ಅಲ್ಲ, ತನಿಖೆ ನಡೆಯುತ್ತಿದೆ. ಗೌಪ್ಯತೆ ಕಾಪಾಡಬೇಕಾಗುತ್ತದೆ. ಜನರಿಗೆ ಈ ಬಗ್ಗೆ ತಿಳುವಳಿಕೆ ಬರಬೇಕು. ಇಂತಹ ಚಟುವಟಿಕೆಗಳಿಂದ ಜೀವಕ್ಕೆ ಕುತ್ತು ಬರುತ್ತೆ. ಈ ರೀತಿ ನಡೆಯದಂತೆ ಇಡೀ ಸಮಾಜ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.

    ಡ್ರಗ್ಸ್ ಮಾಫಿಯಾದಿಂದ ಮೈತ್ರಿ ಸರ್ಕಾರ ಕೆಡವಿದರು ಎಂಬ ಕುಮಾರಸ್ವಾಮಿಯವರ ಆರೋಪದ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಆರೋಪದಲ್ಲಿ ಸತ್ಯಾಂಶ ಇಲ್ಲ. ಅವರ ಆರೋಪ ಕೇವಲ ರಾಜಕೀಯ ಪ್ರೇರಿತ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.

  • ಅಕ್ಕನ ಕುರಿತು ಮಾತಾಡಿದ್ದು ದುಃಖ ತಂದಿದೆ- ಕಣ್ಣೀರು ಹಾಕಿದ ಇಂದ್ರಜಿತ್

    ಅಕ್ಕನ ಕುರಿತು ಮಾತಾಡಿದ್ದು ದುಃಖ ತಂದಿದೆ- ಕಣ್ಣೀರು ಹಾಕಿದ ಇಂದ್ರಜಿತ್

    – ಅವರ ಸಿದ್ಧಾಂತವೇ ಬೇರೆ, ಅವರದ್ದು ಸೈದ್ಧಾಂತಿಕ ಕೊಲೆ
    – ಚಿರು ಸರ್ಜಾ ಕುರಿತ ಹೇಳಿಕೆ ವಾಪಸ್ ಪಡೆದಿದ್ದೇನೆ

    ಬೆಂಗಳೂರು: ನನ್ನ ಅಕ್ಕ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಕುರಿತು ಹೇಳಿಕೆ ನೀಡಿರುವುದು ತುಂಬಾ ನೋವು ತಂದಿದೆ ಎಂದು ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ್ದಾರೆ.

    ಈ ಕುರಿತು ಅವರ ನಿವಾಸದಲ್ಲಿ ಮಾತನಾಡಿರುವ ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ನೀಡಿರುವುದು ತುಂಬಾ ದುಃಖ ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.

    ಈ ಹಿಂದೆ ಒಬ್ಬ ನಟನ ಕುರಿತು ನಾನು ಹೇಳಿಕೆ ನೀಡಿದೆ. ಆದ್ರೆ ಸಾವಿನ ಬಳಿಕ ಈ ರೀತಿ ಹೇಳಬಾರದು ಎಂದು ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದೇನೆ. ನಮ್ಮಕ್ಕನ ಸಾವು ಸಾವಲ್ಲವೇ, ನಮಗೂ ತಾಯಿ ಇಲ್ಲವೇ, ಅವರು ಕ್ಯಾನ್ಸರ್ ರೋಗಿ, ಅವರಿಗೆ ನೋವಾಗುವುದಿಲ್ಲವೇ, ನಮ್ಮಕ್ಕನನ್ನು ಸಿದ್ಧಾಂತ ದೃಷ್ಟಿಯಿಂದ ಹಲವರು ಒಪ್ಪದಿರಬಹುದು. ಆದರೆ ಒಂದು ಸಾವು ತರುವಷ್ಟೂ ಸಿದ್ಧಾಂತ ಕ್ರೂರಿಯಾ ಎಂದು ಪ್ರಮೋದ್ ಮುತಾಲಿಕ್ ಹೆಸರನ್ನು ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ.

    ಸಿಸಿಬಿ ಪೊಲೀಸರ ಮೊದಲ ವಿಚಾರಣೆ ವೇಳೆ ಇಂದು ಮತ್ತಷ್ಟು ಸ್ಟೋಟಕ ಮಾಹಿತಿಗಳೊಂದಿಗೆ ಬರುವುದಾಗಿ ಹೇಳಿಕೆ ನೀಡಿದ್ದರು. ಎರಡನೇ ಹಂತದ ವಿಚಾರಣೆಯಲ್ಲಿ ನಟ- ನಟಿಯರ ಡ್ರಗ್ಸ್ ಡೀಲ್ ಸಂಬಂಧ ಟೆಕ್ನಿಕಲ್ ಎವಿಡೆನ್ಸ್ ಸಮೇತ ಹಾಜರಾಗುವುದಾಗಿ ಇಂದ್ರಜಿತ್ ಹೇಳಿದ್ದರು. ಅದರಂತೆ ಇಂದು ಇಂದ್ರಜಿತ್ ಹಾಜರಾಗುತ್ತಿದ್ದಾರೆ.

    ಸಾಕ್ಷ್ಯಾಧಾರಗಳನ್ನು ಏನೇನು ಕೊಟ್ಟಿದ್ದೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತನಿಖೆಗೆ ಸಹಾಯವಾಗಲು ಸಾಕಷ್ಟು ದಾಖಲೆ ಹಾಗೂ ಮಾಹಿತಿಗಳನ್ನು ನೀಡಿದ್ದೇನೆ. ಪೂರಕವಾಗಿ ಇನ್ನೂ ಹೆಚ್ಚಿನ ಮಾಹಿತಿ ಬೇಕಿರುವುದರಿಂದ ಇಂದು ಕರೆದಿದ್ದಾರೆ. ಹೀಗಾಗಿ ಮಾಹಿತಿ ನೀಡಲು, ಸಾಕ್ಷ್ಯಾಧಾರ ನೀಡಲು ತೆರಳುತ್ತಿದ್ದೇನೆ.

    ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತದೆ ಎಂಬು ಹೇಳಲಾಗುತ್ತಿದೆ. ಆದರೆ ಈ ಹಿಂದೆ ಕೆಟ್ಟ ಹೆಸರು ಬರುತ್ತಿತ್ತು. ಇದನ್ನು ಸರಿ ಪಡಿಸುವ ಉದ್ದೇಶದಿಂದ, ಚಿತ್ರರಂಗವನ್ನು ಸ್ವಚ್ಛಗೊಳಿಸಬೇಕಿದೆ. ಇದರಲ್ಲಿ ಇತ್ತೀಚಿನ ನಟ, ನಟಿಯರು ಭಾಗಿಯಾಗಿದ್ದಾರೆ. ಈ ಕುರಿತು ಫಿಲ್ಮ್ ಚೇಂಬರ್ ಎಲ್ಲ ನಟ, ನಟಿಯರನ್ನು ಕರೆಸಿ ಎಚ್ಚರಿಕೆ, ಸಲಹೆ ನೀಡಿದ್ದರೆ ಈ ಮಟ್ಟಕ್ಕೆ ದೊಡ್ಡದಾಗುತ್ತಿರಲಿಲ್ಲ. ಇದಾವುದನ್ನೂ ವಾಣಿಜ್ಯ ಮಂಡಳಿ ಮಾಡಲಿಲ್ಲ. ಈ ರೀತಿ ಸ್ವಚ್ಛವಾಗುವುದರಿಂದ ಮುಂದೆ ಬರುವ ಯುವ, ನಟ, ನಟಿಯರಿಗೆ ಸಹಕಾರಿಯಾಗಲಿದೆ. ಹನಿಟ್ರ್ಯಾಪ್ ವಿಚಾರ ಬಂದಾಗಲೂ ಯಾರೂ ಕರೆಸಿ ಮಾತನಾಡಲಿಲ್ಲ ಎಂದು ದೂರಿದ್ದಾರೆ.

    ತನಿಖಾಧಿಕಾರಿಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ, ನಿಮಗೆ ಗೊತ್ತಿದ್ದರೆ ನೀವೂ ಬಂದು ಹೇಳಿ, ಒಟ್ಟಿನಲ್ಲಿ ಚಿತ್ರರಂಗ ಸ್ವಚ್ಛವಾಗಬೇಕು. ನಮಗೆ ಸಪೋರ್ಟ್ ಬೇಕು ರಕ್ಷಣೆ ಅಗತ್ಯ ನನಗಿಲ್ಲ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಇಂದ್ರಜಿತ್ ಲಂಕೇಶ್ ಮನೆಯಿಂದ ಸಿಸಿಬಿ ಕಚೇರಿಗೆ ಹೊರಟಿದ್ದು, ಸ್ಯಾಂಡಲ್‍ವುಡ್ ಡ್ರಗ್ಸ್ ಡೀಲ್ ಸಂಬಂಧ ಮಹತ್ವದ ದಾಖಲೆಗಳನ್ನು ಇಂದ್ರಜಿತ್ ರೆಡಿ ಮಾಡಿಕೊಂಡಿದ್ದು, ಸಿಡಿ, ಫೋಟೋ, ದಾಖಲೆಗಳ ಜೊತೆಗೆ ಎಲ್ಲೆಲ್ಲಿ ಡೀಲ್ ನಡೆಯುತ್ತಿದೆ. ಯಾವ ಸ್ಟಾರ್ ನಟರು ಎಲ್ಲಿ ಸೇರುತ್ತಾರೆ ಎಂಬುವರ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಇಂದ್ರಜಿತ್ ಲಂಕೇಶ್ ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ.

  • ಈ ಹಿಂದೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?: ಇಂದ್ರಜಿತ್

    ಈ ಹಿಂದೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?: ಇಂದ್ರಜಿತ್

    – ಚಿತ್ರರಂಗದ ದೊಡ್ಡವರ ಮಕ್ಕಳು ಡ್ರಗ್ಸ್ ದಂಧೆಯಲ್ಲಿ ಭಾಗಿ
    – ಪೊಲೀಸರು ಕೇಳಿದರೆ ಹೆಸರನ್ನು ಬಹಿರಂಗ ಪಡಿಸುವೆ

    ಬೆಂಗಳೂರು: ಮೂರನೇ ಪೀಳಿಗೆಯ ಮತ್ತು ಇತ್ತೀಚಿಗೆ ಬಂದ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿತ್ತು. ಎಲ್ಲಿ ಎಲ್ಲಿ ಯಾವ ಯಾವ ತೋಟದಲ್ಲಿ, ರೆಸಾರ್ಟಿನಲ್ಲಿ ಮತ್ತು ರಾಜಕಾರಣಿಗಳ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂಬುದು ಎಲ್ಲ ಗೊತ್ತಿತ್ತು ಎಂದು ನಟ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು, ಹಿರಿಯ ನಟರು ಮತ್ತು ನಿರ್ಮಾಪಕರ ಈ ವಿಚಾರದ ಬಗ್ಗೆ ಮಾತನಾಡಿ ಶಾಕ್ ಆಗಿದ್ದು ಉಂಟು. ಇದರ ಬಗ್ಗೆ ಹಿರಿಯ ನಟರಾದ ನನ್ನ ಸ್ನೇಹಿತರು ನೋವನ್ನು ವ್ಯಕ್ತಪಡಿಸಿದ್ದಾರೆ. ನಾನು ಇವತ್ತು ಮೀಡಿಯಾ ಮುಂದೆ ಬರಲು ಕಾರಣ ಸುದ್ದಿವಾಹಿನಿಯಲ್ಲಿ ಇಡೀ ಚಿತ್ರರಂಗವೇ ಡ್ರಗ್ಸ್ ಮಾಫಿಯಾದಲ್ಲಿ ಇದೆ ಎಂದು ತೋರಿಸುತ್ತಿರುವುದು ನನಗೆ ನೋವಾಗಿದೆ ಎಂದರು.

    ಇದರಲ್ಲಿ ಪೂರ್ತಿ ಚಿತ್ರರಂಗವಿಲ್ಲ. ಇದರಲಿಲ್ಲ ಮೂರನೇ ಪೀಳಿಗೆಯ ನಟ-ನಟಿಯರು, ಹಿರಿಯ ನಿರ್ದೇಶಕರ ಮಕ್ಕಳು, ಹಿರಿಯ ನಟರ ಮಕ್ಕಳು ಮತ್ತು ರಾಜಕಾರಣಿಗಳ ಮಕ್ಕಳು ದುಡ್ಡು ಇರುವವರು ಭಾಗಿಯಾಗಿದ್ದಾರೆ. ದೊಡ್ಡ ದೊಡ್ಡ ಶ್ರೀಮಂತರು ಬೆನ್ಜ್, ಜಾಗ್ವಾರ್ ಕಾರಿನಲ್ಲಿ ಹುಡುಗಿಯರನ್ನು ಕರೆತಂದು ಈ ರೀತಿ ಮಾಡುತ್ತಿದ್ದಾರೆ. ಇಡೀ ಚಿತ್ರರಂಗ ಇದರಲ್ಲಿ ಭಾಗಿಯಾಗಿಲ್ಲ. ಇದನ್ನು ಮೀಡಿಯಾ ತೋರಿಸಬೇಕು. ಇತ್ತೀಚೆಗೆ ಖ್ಯಾತಿ ಪಡೆದ ನಟಿಯರು, ಈಗ ಬೆಳೆಯುತ್ತಿರುವ ಕೆಲ ನಟಿಯರು ಪಾರ್ಟಿಯಲ್ಲಿ ಮಾತ್ರವಲ್ಲದೇ ಶೂಟಿಂಗ್ ಸಮಯದಲ್ಲೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.

    ಬಾಲಿವುಡ್ ಮಾದರಿಯಲ್ಲಿ ಇಲ್ಲೂ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಪ್ರಚಾರ, ಮೋಜು, ನಶೆಗಾಗಿ ಮತ್ತು ಸಿನಿಮಾ ಅವಕಾಶಕ್ಕಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಹನಿಟ್ಯ್ರಾಪ್ ಕೂಡ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರು ಕಮಿಷನರ್ ಕೂಡ ಇದರ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕೆಲ ನಟಿಯರು ಏಕಾಏಕಿ ರಾತ್ರೋ ರಾತ್ರಿ ಜಾಗ್ವಾರ್ ಕಾರು, ಮನೆ ಎಲ್ಲವನ್ನು ಖರೀದಿಸಿದ್ದಾರೆ ಎಂದು ಹೇಳಿದ್ದರು. ಆದರೆ ಅವರ ಹೆಸರು ಹೇಳಲಿಲ್ಲ. ಅವರಿಗೆ ಅವರ ಹೆಸರು ಗೊತ್ತಿದೆ. ತನಿಖೆ ಆಗಿದೆ ಆದರೆ ಬಹಿರಂಗಪಡಿಸಿಲ್ಲ. ಇದರಲ್ಲಿ ರಾಜಕೀಯ ಒತ್ತಡವಿದೆ ಎಂದು ಲಂಕೇಶ್ ದೂರಿದ್ದಾರೆ.

    ಒಂದು, ಎರಡು ಸಿನಿಮಾ ಮಾಡಿದ ನಟಿಯರು, ಹಿರಿಯ ನಟರ ಮಕ್ಕಳ ಜೊತೆ, ರಾಜಕಾರಣಿಗಳ ಮಕ್ಕಳ ಜೊತೆ ಪಾರ್ಟಿ ಮಾಡುತ್ತಾರೆ. ಇದರಿಂದ ಅವರ ಆರೋಗ್ಯಕ್ಕೂ ತೊಂದರೆಯಿದೆ. ಈ ಹಿಂದೆ ಕೂಡ ಒಬ್ಬ ನಟ ತೀರಿಹೋದರು ಅವರ ಮರಣೋತ್ತರ ಪರೀಕ್ಷೇಯೇ ಆಗಲಿಲ್ಲ. ಯಾಕೇ ಆಗಲಿಲ್ಲ? ರಾಜಕೀಯ ಒತ್ತಡವಿದೆಯೇ, ಪೊಲೀಸರಿಗೆ ಒತ್ತಡವಿತ್ತಾ? ಈ ಹಿಂದಿನಿಂದಲೂ ರೇವ್ ಪಾರ್ಟಿಗಳು ನಡೆಯುತ್ತಿವೆ. ಅದಕ್ಕೆ ತನಿಖೆಯಾಗಬೇಕು ಎಂದು ಹೇಳುತ್ತಿದ್ದೇನೆ ಎಂದರು.

    ಇನ್ನೊಂದು ತಮಾಷೆಯ ವಿಚಾರವೆಂದರೆ, ಇದರಲ್ಲಿ ಭಾಗಿಯಾಗಿರುವವರೇ ಇಂದು ಈ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪತ್ರಕರ್ತರು ಅವರನ್ನೇ ಪ್ರಶ್ನೆ ಕೇಳುತ್ತಾರೆ. ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳ ಬಳಿ ಹೆಸರಿದೆ ಅವರು ಬಹಿರಂಗಪಡಿಸಬೇಕಿದೆ. ಚಿತ್ರರಂಗದ ಕೆಲ ಹಿರಿಯರಿಗೂ ಈ ವಿಚಾರ ಗೊತ್ತಿದೆ. ಆದರೆ ಅವರು ಯಾಕೆ ಮಾತಾನಾಡುತ್ತಿಲ್ಲ. ಇದರ ಬಗ್ಗೆ ನಾನು ಬಹಿರಂಗ ಪಡಿಸಲು ಬೆಂಬಲಬೇಕಿದೆ. ಪೊಲೀಸ್ ಇಲಾಖೆ ಇದರ ಬಗ್ಗೆ ನನ್ನ ಕೇಳಿದರೆ ನಾನು ಹೇಳುತ್ತೇನೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.

  • ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

    ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

    – ಸೌಂದರ್ಯ ಹೆಚ್ಚಿಸಿಕೊಳ್ಳಲು ಡ್ರಗ್ಸ್ ಹಿಂದೆ ಬಿದ್ದಿದ್ದ ನಟಿಯರು

    ಬೆಂಗಳೂರು: ಡ್ರಗ್ಸ್ ಕಸ್ಟಮರ್ಸ್ ಗಳಲ್ಲಿ ನಟರಿಗಿಂತ ನಟಿಯರೇ ಹೆಚ್ಚು ಎಂಬ ಸ್ಫೋಟಕ ಮಾಹಿತಿಯನ್ನು ಬಂಧಿತ ಡ್ರಗ್ ಡೀಲರ್ ಅನೂಪ್ ಬಾಯ್ಬಿಟ್ಟಿದ್ದಾನೆ.

    ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ದಂಧೆಯ ಘಾಟು ಜೋರಾಗಿ ಬರುತ್ತಿದೆ. ಗುರುವಾರ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ ಮೂವರು ಹೈಟೆಕ್ ಡ್ರಗ್ ಪೆಡ್ಲರ್ ಗಳು ವಿಚಾರಣೆ ವೇಳೆ ಒಂದೇ ಒಂದೇ ಭಯಾನಕ ಸತ್ಯವನ್ನು ಹೊರಹಾಕುತ್ತಿದ್ದಾರೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ನಟಿಯರು ಡ್ರಗ್ಸ್ ಹಿಂದೆ ಬಿದ್ದಿದ್ದರು ಎಂಬ ಮಾಹಿತಿ ಲಭ್ಯವಾಗುತ್ತಿದೆ.

    ಮೂವರು ಡ್ರಗ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದಿರುವ ಎನ್‍ಸಿಬಿ ಅಧಿಕಾರಿಗಳು ದಿನ ಒಬ್ಬರಂತೆ ಡ್ರಿಲ್ ಮಾಡುತ್ತಿದ್ದಾರೆ. ಶುಕ್ರವಾರ ಕಿಂಗ್‍ಪಿನ್ ಅನಿಕಾಳನ್ನು ವಿಚಾರಣೆ ಮಾಡಲಾಗಿತ್ತು. ಅನಿಕಾ ತಾನು ಆರು ವರ್ಷದಿಂದ ಡ್ರಗ್ ಡೀಲರ್ ಆಗಿದ್ದು, ಕಾಲೇಜಿನಲ್ಲೇ ಡ್ರಗ್ ಸಪ್ಲೇ ಮಾಡುತ್ತಿದ್ದೆ. ಜೊತೆಗೆ ಸದ್ಯ ಕನ್ನಡದ ಸ್ಟಾರ್ ನಟಿ ತನ್ನ ಸಹಪಾಠಿ ಎಂಬ ವಿಚಾರವನ್ನು ಹೇಳಿದ್ದಳು. ಈಗ ಅನೂಪ್, ನಟರಿಗಿಂತ ನಟಿಯರೇ ಹೆಚ್ಚು ಡ್ರಗ್ ಖರೀದಿ ಮಾಡುತ್ತಿದ್ದರು ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.

    ಗುರುವಾರ ಅನಿಕಾ, ಅನೂಪ್ ಮತ್ತು ರೀಜೇಸ್‍ನನ್ನು ಎನ್‍ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಡ್ರಗ್ ಡೀಲರ್ಸ್ ಗಳು ಹಲವಾರು ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಯಾಂಡಲ್‍ವುಡ್‍ನ ಹಲವು ನಟಿಯರಿಗೆ ಎನ್‍ಸಿಬಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ.

  • ಕಣ್ಣಿಗೆ ಕಾಣುವ ದೇವರಿಗೆ ಸ್ಯಾಂಡಲ್‍ವುಡ್ ತಾರೆಯರ ಸ್ಪೆಷಲ್ ಪೋಸ್ಟ್

    ಕಣ್ಣಿಗೆ ಕಾಣುವ ದೇವರಿಗೆ ಸ್ಯಾಂಡಲ್‍ವುಡ್ ತಾರೆಯರ ಸ್ಪೆಷಲ್ ಪೋಸ್ಟ್

    ಬೆಂಗಳೂರು: ಅಮ್ಮ ಎಂದರೆ ಮಕ್ಕಳ ಪಾಲಿಗೆ ಕಣ್ಣಿಗೆ ಕಾಣುವ ದೇವರು. ಕುಟುಂಬಕ್ಕಾಗಿ ಹಗಲಿರುಳು ಶ್ರಮಿಸುವ ಜೀವ ಎಂದರೆ ಅಮ್ಮ. ಇಂದು ನಮ್ಮನ್ನು ಭೂಮಿಗೆ ತಂದ ದೇವರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದ್ದು, ಎಲ್ಲರೂ ತಮ್ಮ ತಾಯಿಯಂದಿರಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ವಿಶೇಷ ದಿನವನ್ನು ಸ್ಯಾಂಡಲ್‍ವುಡ್ ಕಲಾವಿದರೂ ಕೂಡ ಖುಷಿಯಿಂದ ಆಚರಿಸಿದ್ದು, ತಮ್ಮ ಮುದ್ದಿನ ಅಮ್ಮಂದಿರ ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಮಾಡಿ ತಾಯಿ ಪ್ರೀತಿಗೆ ಸಾಟಿಯಿಲ್ಲ ಎಂದಿದ್ದಾರೆ.

    https://www.instagram.com/p/B__lO4Op_7J/

    ಚಂದನವನದ ನಟ, ನಟಿಯರು ತಮ್ಮ ಅಮ್ಮಂದಿರ ಜೊತೆಗಿರುವ ಕ್ಯೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಅಲ್ಲದೇ ಕೆಲವರು ಅಮ್ಮನನ್ನು ವರ್ಣಿಸಿ ಕವಿತೆ ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ನವರಸ ನಾಯಕ ಜಗ್ಗೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಶ್ರೀಮುರುಳಿ, ರಾಘವೇಂದ್ರ ರಾಜ್‍ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಮೇಶ್ ಅರವಿಂದ್, ನಟಿ ರಕ್ಷಿತಾ, ಪ್ರಣಿತಾ, ಹರಿಪ್ರಿಯಾ, ರಚಿತಾ ರಾಮ್ ಹೀಗೆ ಹಲವು ಕಲಾವಿದರು ಅಮ್ಮಂದಿರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಾಯಿಯಂದಿರ ದಿನದ ಶುಭಾಷಯ ಕೋರಿದ್ದಾರೆ.

    https://www.instagram.com/p/B__mMJDphN-/

    ಪೋಸ್ಟ್ ನಲ್ಲಿ ಏನಿದೆ?
    ನವರಸ ನಾಯಕ ಜಗ್ಗೇಶ್ ಅಮ್ಮನನ್ನು ಜಗತ್ತಿಗೆ ಹೋಲಿಸಿ, ಅಮ್ಮನ ಪ್ರೀತಿಯನ್ನು ವರ್ಣಿಸಿದ್ದಾರೆ. “ಅಮ್ಮಂದಿರ ದಿನದ ಶುಭಾಶಯಗಳು. ಸನಾತನ ಧರ್ಮದಲ್ಲಿ ಅಮ್ಮನನ್ನು ಜಗತ್ತಿಗೆ ಹೋಲಿಸಲಾಗಿದೆ. ಜಗತ್ತು ಪಂಚಭೂತದಿಂದ ಸೃಷ್ಟಿಯಾಗಿದೆ. ಹಾಗೆ ತಾಯಿಯ ಒಡಲು ಪಂಚಭೂತಗಳಿಂದ ಅಂದರೆ “ಅಗ್ನಿ, ವಾಯು, ಜಲ, ಭೂಮಿ, ಆಕಾಶ” (ಅಗ್ನಿ ಅಮ್ಮನ ಬೆಚ್ಚನೆಯ ಮಡಿಲು, ವಾಯು ಅಮ್ಮನ ಉಸಿರು ದೇಣಿಗೆ, ಜಲ ಅಮ್ಮನ ಎದೆಹಾಲು, ಭೂಮಿ ಅಮ್ಮ ಜನ್ಮಕೊಟ್ಟ ಉದರ, ಆಕಾಶ ಅವಳು ಕೊಟ್ಟ ಪ್ರೀತಿಯ ಎತ್ತರ) ಇಂಥ ದೇವತೆಗೆ ನಾವೇನು ಮರಳಿಕೊಟ್ಟರು ಸಾಸಿವೆಯ ಸಹಸ್ರ ಕಣದ ಧೂಳಿಗೆ ಸಮ. ಇಂದು ಮಾತ್ರ ನೆನೆಯುವ ಬದಲು ಸಾಯುವವರೆಗೂ ಆರಾಧಿಸಿ ಅಮ್ಮನನ್ನ” ಎಂದು ಅಮ್ಮನನ್ನು, ಅಮ್ಮನ ಪ್ರೀತಿಯನ್ನು ವರ್ಣಿಸಿ, ತಮ್ಮ ಕೈಮೇಲೆ ಇರುವ ತಮ್ಮ ಅಮ್ಮನ ಟ್ಯಾಟು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    https://www.instagram.com/p/B__qwEYHWny/

    ಕಿಚ್ಚ ಸುದೀಪ್ ಅವರು ಅಮ್ಮಂದಿರ ದಿನಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. “ಜೀವ ಕೊಟ್ಟ ನನ್ನ ಹೆತ್ತ ತಾಯಿಗೆ, ಜೀವನ ಕೊಟ್ಟ ನನ್ನ ಕನ್ನಡ ತಾಯಿಗೆ, ಅನ್ನ ಕೊಟ್ಟ ಭೂತಾಯಿಗೆ, ತಮ್ಮ ಹೃದಯಗಳಲ್ಲಿ ಪ್ರೀತಿಯ ಸ್ಥಾನ ಕೊಟ್ಟು, ನನ್ನನ್ನು ಅಕ್ಕರೆಯಿಂದ ಬೆಳೆಸುತ್ತಿರುವ ಎಲ್ಲಾ ಮಾತೃಹೃದಯಿ ಸ್ವರೂಪ ಅಭಿಮಾನಿ ತಾಯಂದಿರಿಗೆ ನಾನು ಸದಾ ಋಣಿ. ವಿಶ್ವದ ಎಲ್ಲಾ ಅಮ್ಮಂದಿರಿಗೆ ಈ ಕಿಚ್ಚನ ಶುಭಾಶಯಗಳು” ಎಂದು ಬರೆದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

    https://www.instagram.com/p/B__vHRbg-yh/

    ಅಮ್ಮ ನೀನು ನಮಗಾಗಿ ಎಂದು ಪುನೀತ್ ರಾಜ್‍ಕುಮಾರ್ ಪವರ್‍ಫುಲ್ ವಿಶ್ ಜೊತೆ ಅಮ್ಮನ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಡಿನ ಸಾಲುಗಳನ್ನು ಬರೆದು ಅಮ್ಮನ ಪ್ರೀತಿ ವರ್ಣಿಸಿ ಶುಭಕೋರಿದ್ದಾರೆ. ತಾಯಿನೇ ಎಲ್ಲಾ ಬದಲಾಗೋದಿಲ್ಲ ಯುಗ ಉರುಳಿ ಕಳೆದೋದರೂ ಎಂದು ಶಿವಣ್ಣ ಅಮ್ಮನನ್ನು ನೆನೆದು ಫೋಟೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/CAAKFOsAI0X/

    ಇತ್ತ ನಟಿ ರಕ್ಷಿತಾ ಪ್ರೇಮ್ ಅಮ್ಮನೊಂದಿಗೆ ಇರುವ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡು ಹ್ಯಾಪಿ ಮದರ್ಸ್ ಡೇ ಎಂದು ವಿಶ್ ಮಾಡಿದ್ದಾರೆ. ನಟಿ ರಚಿತಾ ರಾಮ್ ಅವರು ಕೂಡ ಅಮ್ಮನ ಜೊತೆ ಇರುವ ಬಾಲ್ಯದ ಫೋಟೋ, ಈಗಿನ ಫೋಟೋಗಳನ್ನ ಅಪ್ಲೋಡ್ ಮಾಡಿ ಲವ್ ಯು ಅಮ್ಮ ಎಂದಿದ್ದಾರೆ.

    https://www.instagram.com/p/CAALa3agmPk/