Tag: actress

  • ಸ್ವಚ್ಛತಾ ಆಂದೋಲನಕ್ಕೆ ನಟಿ ಶುಭ ಪೂಂಜಾ ಚಾಲನೆ

    ಸ್ವಚ್ಛತಾ ಆಂದೋಲನಕ್ಕೆ ನಟಿ ಶುಭ ಪೂಂಜಾ ಚಾಲನೆ

    ಬೆಂಗಳೂರು: ಕರ್ನಾಟಕ-ತಮಿಳುನಾಡಿನ ಗಡಿ ಅತ್ತಿಬೆಲೆಯಲ್ಲಿ ರಾಷ್ಟ್ರೀಯ ಸ್ವಚ್ಛತಾ ಆಂದೋಲನಕ್ಕೆ ಸ್ಯಾಂಡಲ್ ವುಡ್ ನಟಿ ಶುಭ ಪೂಂಜಾ ಇಂದು ಚಾಲನೆ ನೀಡಿದ್ದಾರೆ.

    ಸ್ವಚ್ಛತಾ ರಾಯಭಾರಿಯಾಗಿರೋ ನಟಿ ಅತ್ತಿಬೆಲೆ ಪೊಲೀಸರ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ರು. ಬಳಿಕ ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ರು.

    ಅತ್ತಿಬೆಲೆ ಪುರಸಭೆ ಜಯಕರ್ನಾಟಕ ಸಂಘಟನೆ, ಅತ್ತಿಬೆಲೆ ಪೊಲೀಸ್ ಪುರಸಭೆ ಸದಸ್ಯರು ಹಾಗು ಶಾಲಾ ಮಕ್ಕಳು ಸ್ವಚ್ಛತಾ ಜಾಥಾದಲ್ಲಿ ಭಾಗಿಯಾಗಿದ್ದರು. ನಂತರ ನಟಿ ಶುಭ ಪೂಂಜಾರಿಂದ ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಜಾಥಾ ನಡೆಸಲಾಯಿತು.

  • ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ಬೆಂಗಳೂರು: ಬಿಡದಿ ಧ್ಯಾನಪೀಠ ಮಠದ ನಿತ್ಯಾನಂದ ಸ್ವಾಮಿಗೆ 7 ವರ್ಷ ಹಿಂದಿನ ರಾಸಲೀಲೆ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ.

    2010ರಲ್ಲಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ನಿತ್ಯಾನಂದ ಸ್ವಾಮಿಯೇ ಎಂಬುದು ಇದೀಗ ಖಚಿತವಾಗಿದೆ. ಸ್ವಾಮಿ ನಿತ್ಯಾನಂದ ಅವರೇ ರಾಸಲೀಲೆ ಸಿಡಿಯಲ್ಲಿರೋದು ಅನ್ನೋ ವಿಚಾರವನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ದೃಢಪಡಿಸಿದೆ. ಈಗ ಇದೇ ಎಫ್‍ಎಸ್‍ಎಲ್ ವರದಿ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ.

    2010ರಲ್ಲಿ ಅಂದಿನ ಸಿಐಡಿ ಡಿವೈಎಸ್‍ಪಿ ಚರಣ್ ರೆಡ್ಡಿ ಈ ವರದಿ ಸಲ್ಲಿಕೆ ಮಾಡಿದ್ದರು. ಸಿಐಡಿ ಸಿಡಿಯಲ್ಲಿರುವುದು ನಿತ್ಯಾನಂದ ಎಂದು ಖಚಿತ ಪಡಿಸಿಕೊಳ್ಳಲು ಸಿಡಿಯನ್ನ ದೆಹಲಿಯ ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಸಿಡಿಯಲ್ಲಿರುವುದು ನಾನಲ್ಲ ಅಂತ ನಿತ್ಯಾನಂದ ಸ್ವಾಮಿ ವಾದ ಮಂಡಿಸಿದ್ದರು. ಆದರೆ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಸಿಡಿಯಲ್ಲಿರುವುದು ನಿತ್ಯಾನಂದ ಅವರೇ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಕ್ಕಿದಂತಾಗಿದೆ.

    ಇದರಿಂದಾಗಿ ಪ್ರಕರಣದಲ್ಲಿ ನಿತ್ಯಾನಂದಗೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಿದ್ದು, ಇದೀಗ ಸ್ವಾಮೀಜಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

    ವಿಶ್ವಾದಾದ್ಯಂತ ಸ್ವಾಮಿ ನಿತ್ಯಾನಂದ ಅವರಿಗೆ ಲಕ್ಷಾಂತರ ಮಂದಿ ಭಕ್ತಾದಿಗಳಿದ್ದು, 2010ರಲ್ಲಿ ಸ್ವಾಮೀಜಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾರೆಂಬ ಸುದ್ದಿ ವಿಶ್ವದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ನಡೆಸಲು ಆದೇಶ ನೀಡಿತ್ತು.

  • ಕುತೂಹಲಕ್ಕೆ ಕಾರಣವಾಯ್ತು ಅಮೂಲ್ಯ-ಜಗದೀಶ್ ದಂಪತಿಯ ಆದಿಚುಂಚನಗಿರಿ ಭೇಟಿ

    ಕುತೂಹಲಕ್ಕೆ ಕಾರಣವಾಯ್ತು ಅಮೂಲ್ಯ-ಜಗದೀಶ್ ದಂಪತಿಯ ಆದಿಚುಂಚನಗಿರಿ ಭೇಟಿ

    ಮಂಡ್ಯ: ಚಿತ್ರ ನಟಿ ಅಮೂಲ್ಯ ಪತಿ ಜಗದೀಶ್ ರೊಂದಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಅಮವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

    ಅಮವಾಸ್ಯೆಯಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ಸಿದ್ಧಿಸುತ್ತೆ ಎಂಬ ನಂಬಿಕೆಯಿದೆ. ಹೀಗಾಗಿ ಅಮೂಲ್ಯ ಮತ್ತು ಪತಿ ಜಗದೀಶ್ ಈ ಹಿಂದೆಯೂ ಜೊತೆಯಲ್ಲಿ ಆದಿಚುಂಚನಗಿರಿ ಕ್ಷೇತ್ರಕ್ಕೆ ಬಂದು ಅಮವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಕಳೆದ ಏಪ್ರಿಲ್ 26 ರಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ದರು. ಅದೇ ದಿನ ಅಮೂಲ್ಯ ಮತ್ತು ಜಗದೀಶ್ ಜೊತೆಯಾಗಿ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ದರು. ಇದೀಗ ಮತ್ತೆ ಅಮೂಲ್ಯ ಪತಿಯೊಂದಿಗೆ ಅಮವಾಸ್ಯೆ ಪೂಜೆ ಸಲ್ಲಿಸುತ್ತಿದ್ದಾರೆ.

    ಇದನ್ನೂ ಓದಿ: ಅಮೂಲ್ಯ-ಜಗದೀಶ್, ಹೆಚ್‍ಡಿಕೆ ದಂಪತಿಯಿಂದ ಆದಿಚುಂಚನಗಿರಿಯಲ್ಲಿ ವಿಶೇಷ ಪೂಜೆ

    ಸತತ ಮೂರು ಬಾರಿ ಅಮವಾಸ್ಯೆ ಪೂಜೆ ಸಲ್ಲಿಸಿದ್ರೆ ನಮ್ಮ ಬೇಡಿಕೆ ಫಲಿಸುತ್ತೆ ಎಂಬ ಅಗಾಧ ನಂಬಿಕೆ ಕಾಲಭೈರವೇಶ್ವರ ಸ್ವಾಮಿ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಎಲ್ಲರೂ ತಮ್ಮ ಪತ್ನಿ ಸಮೇತರಾಗಿ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ, ರಾಜಕೀಯವಾಗಿ ಇಷ್ಟಾರ್ಥ ಸಿದ್ಧಿಸುವಂತೆ ಸತತ ಮೂರು ಬಾರಿ ಅಮವಾಸ್ಯೆ ಪೂಜೆ ಸಲ್ಲಿಸಿದ್ದರು, ಇದೀಗ ಅಮೂಲ್ಯ ತಮ್ಮ ಪತಿಯೊಂದಿಗೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಅಮವಾಸ್ಯೆ ಪೂಜೆ ಸಲ್ಲಿಸುತ್ತಿರೋದು ಕುತೂಹಲಕ್ಕೆ ಕಾರಣವಾಗಿದೆ.

  • ನ್ಯಾಯ ಸಿಕ್ಕರೆ ರಾಯಚೂರಿಗೆ 108 ತೆಂಗಿನಕಾಯಿ ಒಡೆಯುತ್ತೇನೆ: ನಟಿ ಪೂಜಾ ಗಾಂಧಿ

    ನ್ಯಾಯ ಸಿಕ್ಕರೆ ರಾಯಚೂರಿಗೆ 108 ತೆಂಗಿನಕಾಯಿ ಒಡೆಯುತ್ತೇನೆ: ನಟಿ ಪೂಜಾ ಗಾಂಧಿ

    ರಾಯಚೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿರುವ ನಟಿ ಪೂಜಾ ಗಾಂಧಿ ತಮಗೆ ನ್ಯಾಯ ಸಿಕ್ಕರೆ ತಾನು ನಿಂತ ಕ್ಷೇತ್ರ ರಾಯಚೂರು ನಗರಕ್ಕೆ 101 ತೆಂಗಿನಕಾಯಿ ಒಡೆಯುವುದಾಗಿ ಹೇಳಿದ್ದಾರೆ.

    ವಿಚಾರಣೆ ಹಿನ್ನೆಲೆ ರಾಯಚೂರಿನ ಜೆಎಂಎಫ್ ಸಿ ಎರಡನೇ ನ್ಯಾಯಾಲಯಕ್ಕೆ ಹಾಜರಾಗಿ ಹೊರ ಬಂದ ಬಳಿಕ ಮಾತನಾಡಿದ ಅವರು, ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ನಟ ಉಪೇಂದ್ರ ಹೊಸ ಪಕ್ಷ ಕಟ್ಟಿರುವುದಕ್ಕೆ ಶುಭ ಕೋರಿದ ನಟಿ, ಅವರನ್ನು ಬೆಂಬಲಿಸುವುದಾಗಿ ಹೇಳಿದರು.

    ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 4 ಕ್ಕೆ ಮುಂದೂಡಲಾಗಿದ್ದು, ಅಂದೇ ಅಂತಿಮ ತೀರ್ಪು ಹೊರಬರಲಿದೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಪೂಜಾಗಾಂಧಿ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಅನುಮತಿ ಪಡೆಯದೇ ಪ್ರಚಾರಕ್ಕೆ ವಾಹನ ಬಳಸಿದ್ದ ಹಿನ್ನೆಲೆ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಡಿಸೆಂಬರ್ 4ಕ್ಕೆ ಅಂತಿಮ ತೀರ್ಪು ಹೊರಬೀಳಲಿದೆ.

  • ಪ್ರಸಿದ್ಧ ನಟಿಮಣಿಗೆ ಪ್ರೀತಿಸುವಂತೆ ಪೀಡಿಸುತ್ತಿದವನ ಬಂಧನ

    ಪ್ರಸಿದ್ಧ ನಟಿಮಣಿಗೆ ಪ್ರೀತಿಸುವಂತೆ ಪೀಡಿಸುತ್ತಿದವನ ಬಂಧನ

    ಬೆಂಗಳೂರು: ಖ್ಯಾತ ನಟಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕನೊಬ್ಬನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

    ಉದಯೋನ್ಮಕ ನಟಿ ರೆಬೋ ಮೋನಿಕಾ ಜಾನ್ ಗೆ ಸ್ನೇಹಿತ ಫ್ರಾಂಕ್ಲಿನ್ ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರತಿ ಭಾನುವಾರ ಚರ್ಚ್ ಗೆ ಪ್ರಾರ್ಥನೆ ಮಾಡಲು ಮೋನಿಕಾ ಹೋಗುತ್ತಿದ್ದರು. ಚರ್ಚ್ ಗೆ ಹೋಗುತ್ತಿದ್ದ ನಟಿಯನ್ನು ಯುವಕ ಒಂದು ವರ್ಷದಿಂದ ಫಾಲೋ ಮಾಡುತ್ತಿದ್ದ.

    ಪ್ರಾರ್ಥನೆ ಮಾಡಲು ಬರುತ್ತಿದವ ನಟಿಯ ಜೊತೆ ಪರಿಚಯ ಮಾಡಿಕೊಂಡ ಫ್ರಾಂಕ್ಲಿನ್ ಬಳಿಕ ಪ್ರೀತಿಸುವಂತೆ, ಮದುವೆಯಾಗುವಂತೆ ಪೀಡಿಸುತ್ತಿದ್ದನು. ಆದರೆ ಇದನ್ನು ನಿರಾಕರಣೆ ಮಾಡಿ ಒಮ್ಮೆ ನಟಿ ಯುವಕನಿಗೆ ಎಚ್ಚರಿಕೆ ನೀಡಿದ್ದರು.

    ಯುವಕ ನಟಿಯ ಫೋನ್ ನಂಬರ್ ಕಲೆಕ್ಟ್ ಮಾಡಿ ಆಕೆಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದನು. ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನನ್ನು ಮದುವೆಯಾಗಬೇಕು ಎಂದು ಮೆಸೇಜ್ ಮಾಡುತ್ತಿದ್ದನು. ನಟಿಯ ಫೋನ್ ನಂಬರ್ ಮಾತ್ರವಲ್ಲದೆ ಆಕೆಯ ಕುಟುಂಬದ ಮಾಹಿತಿ, ಫೋನ್ ನಂಬರ್ ಕೂಡ ಕಲೆಕ್ಟ್ ಮಾಡಿದ್ದನು.

    ನಟಿಯ ಮಾತನ್ನು ಕೇಳದೆ ಮದುವೆಯಾಗುವಂತೆ ಪೀಡಿಸುತ್ತಿದ್ದರಿಂದ ಬೇಸತ್ತ ಮೋನಿಕಾ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದರು. ನಟಿ ಕೊಟ್ಟ ದೂರು ಆಧರಿಸಿ 28 ವರ್ಷದ ಫ್ರಾಂಕ್ಲಿನ್ ವಿಸಿಲ್‍ನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

    ಮೋನಿಕಾ ಜೇಕಬ್ ‘ಇಂಟೇ ಸ್ವರ್ಗರಾಜ್ಯಂ’ ಅನ್ನೋ ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನಷ್ಟು ಚಲನಚಿತ್ರಗಳಲ್ಲಿ ನಟನೆ ಪ್ರಾರಂಭ ಮಾಡಿದ್ದಾರೆ. ಫ್ರಾಂಕ್ಲಿನ್ ಬಸವನಗುಡಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾನೆ.

     

  • ವೆಬ್‍ಸೈಟ್‍ನಲ್ಲಿ ನಟ, ನಟಿಯರ ಅಶ್ಲೀಲ ಫೋಟೋ – ಬೆಂಗ್ಳೂರಲ್ಲಿ ಕಾಮುಕ ವಶ

    ವೆಬ್‍ಸೈಟ್‍ನಲ್ಲಿ ನಟ, ನಟಿಯರ ಅಶ್ಲೀಲ ಫೋಟೋ – ಬೆಂಗ್ಳೂರಲ್ಲಿ ಕಾಮುಕ ವಶ

    ಬೆಂಗಳೂರು: ಟಾಲಿವುಡ್‍ನ ನಟಿಯರ ಫೋಟೋ, ವೀಡಿಯೋಗಳನ್ನು ಅಶ್ಲೀಲವಾಗಿ ತೋರಿಸಿ ಆಪ್‍ಲೋಡ್ ಮಾಡ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕಾಮುಕ ವ್ಯಕ್ತಿಯನ್ನು ದಾಸರಿ ಪ್ರದೀಪ್ ಎನ್ನಲಾಗಿದ್ದು, ಈತ ಸುಮಾರು 30 ವೈಬ್‍ಸೈಟ್‍ಗಳಿಗೆ ನಿರ್ವಹಣೆ ಮಾಡುತ್ತಿದ್ದನು. ಅಲ್ಲದೇ ಮನಬಂದಂತೆ ನಟಿಯರ ಬಗ್ಗೆ ಅಸಭ್ಯವಾಗಿ ಆಪ್‍ಲೋಡ್ ಮಾಡ್ತಿದ್ದ ಎನ್ನಲಾಗುತ್ತಿದೆ.

    ನಟಿಯರ ದೂರಿನ ಮೇರೆಗೆ ಎಚ್ಚೆತ್ತ ಹೈದ್ರಾಬಾದ್ ಸೈಬರ್ ಕ್ರೈಂ ಪೊಲೀಸರು ನಿನ್ನೆ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ ಆರೋಪಿ ಪ್ರದೀಪ್‍ನನ್ನು ವಶಕ್ಕೆ ಪಡೆದಿದ್ದು ಇಂದು ಹೈದ್ರಾಬಾದ್‍ನ ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.

     

  • ನಟಿ ಪ್ರಿಯಾಮಣಿ- ಮುಸ್ತಫಾ ಮದುವೆ ಡೇಟ್ ಫಿಕ್ಸ್

    ನಟಿ ಪ್ರಿಯಾಮಣಿ- ಮುಸ್ತಫಾ ಮದುವೆ ಡೇಟ್ ಫಿಕ್ಸ್

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್ ಆಗಿದೆ. ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ಇದೇ ತಿಂಗಳು 23 ರಂದು ವಿವಾಹವಾಗಲಿದ್ದಾರೆ.

    ಕಳೆದ ವರ್ಷ ಮೇ 27ರಂದು ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರಿಯಾಮಣಿ ತನ್ನ ಬಹುಕಾಲದ ಗೆಳೆಯ ಹಾಗೂ ಮುಂಬೈ ಮೂಲದ ಮುಸ್ತಫಾ ಜೊತೆ ಉಂಗುರ ಬದಲಿಸಿಕೊಂಡಿದ್ದರು. ಇದೀಗ ಅದ್ಧೂರಿಯಾಗಿ ಮದುವೆಯಾಗದೆ ರಿಜಿಸ್ಟ್ರರ್ ಮ್ಯಾರೇಜ್ ಆಗೋದಕ್ಕೆ ನಿರ್ಧರಿಸಿದ್ದಾರೆ.

    ಆಗಸ್ಟ್ 23 ಕ್ಕೆ ವಿವಾಹ ನೊಂದಣಿ ಮಾಡಿಸಿ 24 ರಂದು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಚಿತ್ರರಂಗದ ಗಣ್ಯರಿಗೆ ಮತ್ತು ಎರಡೂ ಕುಟುಂಬದ ಬಂಧುಗಳಿಗೆ ಪಾರ್ಟಿ ಕೊಡುವ ಸಾಧ್ಯತೆ ಇದೆ ಎಂಬುವುದಾಗಿ ತಿಳಿದುಬಂದಿದೆ.

    ಮೂಲತಃ ಬೆಂಗಳೂರಿನವರಾದ ಪ್ರಿಯಾಮಣಿ, ಅರಬಿಂದೋ ಮೆಮೋರಿಯಲ್ ಸ್ಕೂಲ್, ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದರು. ಸಿಸಿಎಲ್ ಪಂದ್ಯಾವಳಿಯ ಸಂದರ್ಭದಲ್ಲಿ ಪ್ರಿಯಾಮಣಿ ಅವರಿಗೆ ಮುಸ್ತಫಾ ರಾಜಾ ಜೊತೆ ಪರಿಚಯವಾಗಿ ಬಳಿಕ ಪ್ರೀತಿಗೆ ತಿರುಗಿತ್ತು.

     

  • ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೋರಿದ ಬಿಗ್ ಬಾಸ್ ಸಂಜನಾ

    ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೋರಿದ ಬಿಗ್ ಬಾಸ್ ಸಂಜನಾ

    ಬೆಂಗಳೂರು: ಇನ್ನು ಮುಂದೆ ಇದೆ ನಿನಗೆ ಹಬ್ಬ…! ಒಂದು ಆರು ತಿಂಗಳು ಗಾಂಧಿನಗರದ ಕಡೆ ತಲೆಹಾಕಿ ಮಲಗ್ಬೇಡ..! ಹೀಗೆ ನಾನಾ ರೀತಿಯ ಟ್ರಾಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಸಂಜನಾ ವಿರುದ್ಧ ಠೇಂಕರಿಸುತ್ತಿದ್ದು, ಇದೀಗ ನಟಿ ಸಂಜನಾ ಐ ಆಮ್ ಸಾರಿ ಅಂದಿದ್ದಾರೆ.

    ಅಷ್ಟಕ್ಕು ಬಿಗ್‍ಬಾಸ್ ಸಂಜನಾ ಮೇಲೆ ದರ್ಶನ್ ಅಭಿಮಾನಿಗಳು ಈ ರೀತಿ ಗದಾಪ್ರಹಾರ ಮಾಡಲು ಕಾರಣ ಖಾಸಗಿ ವಾಹಿನಿಯ ರಿಯಾಲಿಟಿ ಶೋಗೆ ಸಂಜನಾ ನೀಡಿದ ಸಂದರ್ಶನ.

    ಸ್ಟಾರ್ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುವ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಸಂಜನಾಗೆ ಸ್ಯಾಂಡಲ್ ವುಡ್‍ನಲ್ಲಿ `ಬಿಲ್ಡಪ್’ ಅಂದ್ರೆ ಯಾರು ಎಂದು ಕೇಳಿದಾಗ ದರ್ಶನ್ ಎಂದು ಹೇಳಿದ್ದರು. ಈ ಉತ್ತರಕ್ಕೆ ದರ್ಶನ್ ಫ್ಯಾನ್ಸ್ ಕೆಂಡಾಮಂಡಲರಾಗಿದ್ದರು. ಸಂಜನಾ ಕ್ಷಮೆ ಕೆಳಬೇಕು ಇಲ್ಲದಿದ್ರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂದು ಗುಡುಗಿದ್ದರು.

    ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಜನಾ ವಿರುದ್ಧ ತೀವ್ರ ಖಂಡನೆ ವ್ಯಕ್ತವಾದ ಬಳಿಕ ನಟಿ ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.

    I Am Sorry.. ದರ್ಶನ್ ಸರ್ ಫ್ಯಾನ್ಸ್ ಗೆ ಅಥವಾ ಅವರಿಗೆ ಬೇಜಾರು ಮಾಡುವ ಯಾವ ಉದ್ದೇಶ ಇರಲಿಲ್ಲ. ಅಕುಲ್ ನನ್ನನ್ನು Rapid Fire Round ನಲ್ಲಿ ಬಿಲ್ಡಪ್ ಅನ್ನೋ ಪದ ಕೇಳಿದ್ರು. ನಾನು ಸ್ಪಷ್ಟವಾಗಿ ಹೇಳಿದ್ದೀನಿ. ಅವರ ಸಿನಿಮಾಗಳಲ್ಲಿ ತುಂಬಾ ಬಿಲ್ಡಪ್ ಇರತ್ತೆ ಅಂತ ಹೇಳಿದ್ದೀನಿ. ಅದು ಇಷ್ಟು ಸೀರಿಯಸ್ ಆಗತ್ತೆ ಅಂತ ಗೊತ್ತಿರಲಿಲ್ಲ. I Am Extremely Sorry.. ಬೇಜಾರು ಮಾಡೋ ಉದ್ದೇಶ ಇರಲಿಲ್ಲ. ನನ್ನಿಂದ ಬೇಜಾರಾಗಿದ್ದರೆ I Am Sorry..

    https://twitter.com/DarshanFanz/status/891260777650208769

  • ನೇಣು ಬಿಗಿದ ಸ್ಥಿತಿಯಲ್ಲಿ ಜಗ್ಗಾ ಜಾಸೂಸ್ ನಟಿ ಬಿದಿಶಾ ಬೆಜ್ಜುರುವಾ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಜಗ್ಗಾ ಜಾಸೂಸ್ ನಟಿ ಬಿದಿಶಾ ಬೆಜ್ಜುರುವಾ ಶವ ಪತ್ತೆ

    ಗುರ್‍ಗಾಂವ್: ನಗರದ ಪೊಶ್ ಸುಶಾಂತ್ ಬಡವಾಣೆಯ ಮನೆಯೊಂದರಲ್ಲಿ ಬಾಲಿವುಡ್‍ನ ಉದಯನ್ಮೋಕ ನಟಿ ಬಿದಿಶಾ ಬೆಜ್ಜುರವಾ ಶವ ಪತ್ತೆಯಾಗಿದೆ.

    ಮೂಲತಃ ಅಸ್ಸಾಂ ರಾಜ್ಯದ ಬಿದಿಶಾ ಬಾಲಿವುಡ್‍ನಲ್ಲಿ ಸಹ ನಟಿಯಾಗಿ ನಟಿಸುತ್ತಿದ್ದರು ಮತ್ತು ಅಸ್ಸಾಮಿ ಭಾಷೆಯ ಸಿನಿಮಾಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿದ್ರು. ಸೋಮವಾರ ಬೆಳಗ್ಗೆ ಬಿದಿಶಾ ವಾಸವಿದ್ದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಬಿದಿಶಾರ ತಂದೆಯ ದೂರಿನನ್ವಯ ಬಿದಿಶಾರ ಪತಿ ನಿಶೀತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

    ಕೆಲವು ದಿನಗಳ ಹಿಂದೆಯೇ ಬಿದಿಶಾ ಮುಂಬೈನಿಂದ ಗುರಗಾಂವ್ ಬಂದಿದ್ದರು. ಇನ್ನು ಇತ್ತೀಚಿಗಷ್ಟೇ ಬಿದಿಶಾ ಬಾಡಿಗೆ ಮನೆ ಮಾಡಿ ಪತಿಯೊಂದಿಗೆ ವಾಸವಾಗಿದ್ದರು.

    ಬಿದಿಶಾ ತಂದೆ ಆಕೆಗೆ ಕರೆ ಮಾಡಿದಾಗ ಮಗಳು ಕಾಲ್ ರಿಸೀವ್ ಮಾಡಿರಲಿಲ್ಲ. ಇದ್ರಿಂದ ಅನುಮಾನಗೊಂಡ ತಂದೆ ಪೊಲೀಸರಿಗೆ ಕರೆಮಾಡಿ ಮಗಳ ಲೋಕಲ್ ವಿಳಾಸ ತಿಳಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಹೋದಾಗ ನಟಿಯ ಶವ ಮನೆಯ ಸೀಲಿಂಗ್ ಫ್ಯಾನ್‍ನಲ್ಲಿ ನೇತಾಡುತ್ತಿತ್ತು ಎಂದು ಉಪ ಪೊಲೀಸ್ ಆಯುಕ್ತ ದೀಪಕ್ ಸಹರನ್ ತಿಳಿಸಿದ್ದಾರೆ.

    ಬಿದಿಶಾ ಮತ್ತು ನಿಶೀತ್ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಮದುವೆಯ ನಂತರ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಅನುಮಾನಗೊಂಡ ನಟಿಯ ತಂದೆ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ನಟಿಯ ಫೇಸ್‍ಬುಕ್, ಕಾಲ್ ರೆಕಾರ್ಡ್ ಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ದೀಪಕ್ ಸಹರನ್ ಹೇಳಿದ್ದಾರೆ.

    ಬಿದಿಶಾ ಇತ್ತೀಚಿಗೆ ತೆರೆಕಂಡ ರಣ್‍ಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಅಭಿನಯದ `ಜಗ್ಗಾ ಜಾಸೂಸ್’ ಸಿನಿಮಾದಲ್ಲಿ ನಟಿಸಿದ್ದರು. ಹಾಗೆಯೇ ಬಿದಿಶಾ ಗಾಯಕಿಯಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ರು.

     

  • ಲಿವಿಂಗ್ ಟುಗೆದರ್ ಬಳಿಕ ಕೈಕೊಟ್ಟ ಪ್ರಿಯಕರ – ನಟಿ ಕಮ್ ಮಾಡೆಲ್‍ಗೆ ದೋಖಾ?

    ಲಿವಿಂಗ್ ಟುಗೆದರ್ ಬಳಿಕ ಕೈಕೊಟ್ಟ ಪ್ರಿಯಕರ – ನಟಿ ಕಮ್ ಮಾಡೆಲ್‍ಗೆ ದೋಖಾ?

    – ಆಕೆ ಮಾಡೆಲ್ ಅಲ್ಲ, ವೇಶ್ಯಾವಾಟಿಕೆಯಿಂದ ಹಣ ಸಂಪಾದಿಸ್ತಿದ್ದಾಳೆ
    – ನನ್ನ ವಿರುದ್ಧ ಆರೋಪ ಸುಳ್ಳು: ಯುವಕನಿಂದ ದೂರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಲಿವಿಂಗ್ ಟುಗೆದರ್ ಬಳಿಕ ನಟಿ ಕಮ್ ಮಾಡೆಲ್ ಆಗಿರುವ ಯುವತಿಗೆ ಪ್ರಿಯಕರ ಕೈಕೊಟ್ಟು ಪರಾರಿಯಾಗಿದ್ದಾನೆ ಎಂದು ನಟಿಯಿಂದ ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತ ಯುವಕನೂ ಯುವತಿಯ ವಿರುದ್ಧ ದೂರು ನೀಡಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ಯುವತಿ ದೂರಿನಲ್ಲಿ ಏನಿದೆ? ಯಶವಂತಪುರದ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಉಲ್ಲಾಸ್ ಜೊತೆ ನನಗೆ ಪ್ರೀತಿ ಇತ್ತು. ಕಳೆದ ಒಂದು ವರ್ಷದಿಂದ ನಾವಿಬ್ಬರು ಸ್ನೇಹಿತರಾಗಿದ್ದೇವು. 8 ತಿಂಗಳ ಹಿಂದೆ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. 2 ತಿಂಗಳ ಹಿಂದೆ ಉಲ್ಲಾಸ್ ಮತ್ತು ನಾನು ಲಿವಿಂಗ್ ಟುಗೆದರ್ ಆಗಿ ಒಂದೇ ಮನೆಯಲ್ಲಿ ವಾಸವಾಗಿದ್ದೇವು. ಆದರೆ ಆದರೆ ಈಗ ನನ್ನನ್ನು ಮದುವೆಯಾಗುದಿಲ್ಲ ಎಂದು ಉಲ್ಲಾಸ್ ಹೇಳಿದ್ದು ನನಗೆ ಮೋಸವಾಗಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಜೂನ್ 2ರಂದು ಸ್ವಂತ ಊರು ಮೈಸೂರಿಗೆ ಹೋಗಿದ್ದ ಉಲ್ಲಾಸ್, ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಗೆಳೆಯ ಪ್ರೀತಂ ಎಂಬಾತನೊಂದಿಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ನಟಿ ಉಲ್ಲಾಸ್ ಪಟೇಲ್ ವಿರುದ್ಧ ರೇಪ್, ವಂಚನೆ ದೂರು ದಾಖಲಿಸಿದ್ದಾರೆ.

    ನಟಿ ವಿರುದ್ಧ ದೂರು ದಾಖಲು: ಇತ್ತ ನಟಿ ದೂರು ದಾಖಲಿಸುತ್ತಿದ್ದಂತೆ ಉಲ್ಲಾಸ್ ಕೂಡ ಯುವತಿಯ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ಯುವತಿ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದು, ಹಿಂದೆ ನಾವು ಸ್ನೇಹಿತರಾಗಿದ್ದೇವು. ಇವಳು ವೇಶ್ಯಾವಾಟಿಕೆ ಮಾಡುತ್ತಿದ್ದು, ಇವಳ ಖಾತೆಗೆ ಹಣಗಳು ಜಮೆ ಆಗುತ್ತಿದೆ. ನಟಿ ನನ್ನ ವಿರುದ್ಧ ಆಧಾರವಿಲ್ಲದೇ ದೂರು ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.

    ಆಕೆ ನಕಲಿ ತಾಳಿ ಕಟ್ಟಿಕೊಂಡು ಸುಳ್ಳು ಹೇಳುತ್ತಿದ್ದಾಳೆ. ಹಣಕ್ಕಾಗಿ ನನಗೆ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾಳೆ. ಆಕೆಯ ಡೈರಿಯಲ್ಲಿ ಎಲ್ಲ ಮಾಹಿತಿ ಇದೆ ಎಂದು ಉಲ್ಲಾಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.