Tag: actress

  • ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಟಿ ಭಾವನಾ ಬಿಜೆಪಿಗೆ ಸೇರ್ಪಡೆ!

    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಟಿ ಭಾವನಾ ಬಿಜೆಪಿಗೆ ಸೇರ್ಪಡೆ!

    ಬೆಂಗಳೂರು: ಕಾಂಗ್ರೆಸ್ ತೊರೆದಿರೋ ನಟಿ ಭಾವನಾ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಭಾವನಾ, ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಬಿಜೆಪಿ ಪಕ್ಷಕ್ಕೆ ಸೇರುವ ಕುರಿತು ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುರುಳೀಧರ್ ರಾವ್ ಜೊತೆ ಮಾತುಕತೆ ನಡೆಸಿದ್ದರು. ಬಳಿಕ ಮುರುಳೀಧರ್ ರಾವ್ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

    ಈ ಹಿಂದೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಆಜಾನ್ ಮಾಡುವಾಗ ಪ್ರತಿಭಟಿಸಿ ವೇದಿಕೆಯಿಂದಲೇ ಭಾವನಾ ಹೊರ ನಡೆದಿದ್ದರು.

  • ಹಾವಿನ ಜೊತೆ ನಟಿಸಲು ಹೋಗಿ ಪ್ರಾಣ ಕಳೆದುಕೊಂಡ ನಟಿ!

    ಹಾವಿನ ಜೊತೆ ನಟಿಸಲು ಹೋಗಿ ಪ್ರಾಣ ಕಳೆದುಕೊಂಡ ನಟಿ!

    ಕೋಲ್ಕತ್ತಾ: ನಟಿಯೊಬ್ಬರು ಲೈವ್ ಆಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಹಸ್ನಾಬಾದ್ ನಲ್ಲಿ ನಡೆದಿದೆ.

    ಕಾಲಿದಾಸಿ ದೇವಿ (50) ಮೃತ ದುರ್ದೈವಿ. ಬುಧವಾರ ಈ ಘಟನೆ ನಡೆದಿದ್ದು, ಹಾವಿನ ದೇವತೆಯಾದ `ಮಾ ಮನಸಾ’ ಪಾತ್ರದಲ್ಲಿ ನಟಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ದೇವಿ ಅವರು ಪ್ರತಿ ವರ್ಷವೂ ಪ್ಲಾಸ್ಟಿಕ್ ಹಾವಿನೊಡನೆ ಅಭಿನಯಿಸುತ್ತಿದ್ದರು. ಆದರೆ ಈ ಬಾರಿ ಅವರು ಎರಡು ಜೀವಂತ ಹಾವುಗಳೊಂದಿಗೆ ಪಾತ್ರವನ್ನು ನಿರ್ವಹಿಸಲು ನಿರ್ಧರಿಸಿದ್ದರು.

    ಅದೇ ರೀತಿ ಹಾವಿನೊಂದಿಗೆ ಅಭಿನಯಿಸುವ ವೇಳೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ದೇವಿ ಅವರು ಕುಸಿದು ಬಿದ್ದಿದ್ದಾರೆ. ನಂತರ ಸ್ಥಳಿಯ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅವರನ್ನು ಸಹನಟರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಹಾವು ಕಚ್ಚಿದ ತಕ್ಷಣ ಸಕಾಲಕ್ಕೆ ವೈದ್ಯಕೀಯ ನೆರವು ಒದಗಿಸಿದ್ದರೆ, ಆಕೆಯ ಜೀವವನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಥಿಯೇಟರ್ ನ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಪೊಲೀಸರು ಜೀವಂತ ಹಾವಿನೊಂದಿಗೆ ಅಭಿನಯಿಸಲು ನೀವು ಹೇಗೆ ಅನುಮತಿ ನೀಡಿದ್ದೀರಿ ಎಂದು ಅವರನ್ನು ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ ಹಾವುಗಳನ್ನು ಜೀವಂತವಾಗಿ ಪ್ರದರ್ಶನಕ್ಕೆ ಬಳಸುವ ಮೊದಲು ಅವುಗಳ ವಿಷಪೂರಿತ ಹಲ್ಲುಗಳನ್ನು ತೆಗೆದು ಹಾಕಲಾಗುತ್ತದೆ. ಜೊತೆಗೆ ಅದನ್ನು ದೃಢ ಪಡಿಸಿಕೊಂಡ ನಂತರ ಹಾವುಗಳನ್ನು ಬಳಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    ಸ್ಥಳೀಯ ವೈದ್ಯರು ಆಕೆಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಆದ್ದರಿಂದ ಆಕೆ ಮೃತಪಟ್ಟಿದ್ದಾಳೆ ಅವರನ್ನು ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ರಾಮನಗರ: ಕರ್ನಾಟಕ ವಿಧಾನ ಸಭಾ ಚುನಾವಣೆ ದಿನೆದಿನೇ ರಂಗೇರುತ್ತಿದ್ದು, ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ  ಸ್ಯಾಂಡಲ್‍ ವುಡ್‍ನ ನಟ-ನಟಿಯರು ಕಾಂಗ್ರೇಸ್ ಅಭ್ಯರ್ಥಿ ಎಚ್.ಎಂ ರೇವಣ್ಣ ಪರ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದಾರೆ.

    ನಟರಾದ ಅನೂಪ್ ರೇವಣ್ಣ, ಬಿಗ್ ಬಾಸ್ ವಿನ್ನರ್ ಪ್ರಥಮ್, ಕೋಟೆ ಪ್ರಭಾಕರ್, ನಟಿಯರಾದ ಮಯೂರಿ, ರೂಪಿಕಾ ಹಾಗೂ ನಿರ್ದೇಶಕ ಆರ್. ಚಂದ್ರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ರೇವಣ್ಣ ಪರ ಮತಯಾಚನೆ ನಡೆಸಿದ್ದಾರೆ.

    ನಗರದ ಮಂಗಳವಾರ ಪೇಟೆಯಿಂದ ಭೈರಾಪಟ್ಟಣದವರೆಗೆ ರೋಡ್ ಶೋ ನಡೆಸಿದ್ದು, ಇದೇ ವೇಳೆ ಮಾತನಾಡಿದ ಪ್ರಥಮ್, ಚನ್ನಪಟ್ಟಣದಲ್ಲಿ ಸತತವಾಗಿ 20 ವರ್ಷಗಳಿಂದ ಯೋಗೇಶ್ವರ್ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಈ ಬಾರಿ ಅವರು ರಾಜಕೀಯದಿಂದ ವಿಶ್ರಾಂತಿ ಪಡೆಯಲಿ, ಇನ್ನೂ ಎಚ್.ಡಿ ಕುಮಾರಸ್ವಾಮಿಯವರು ಎರಡೂ ಕಡೆ ಸ್ಪರ್ಧಿಸಿರುವುದರಿಂದ ಹಣ ಪೋಲಾಗಲಿದೆ. ಈ ಬಾರಿ ಎಚ್.ಎಂ ರೇವಣ್ಣಗೆ ಒಂದು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

    ಇನ್ನು ಈ ಬಗ್ಗೆ ಮಾತನಾಡಿದ ನಟಿ ಮಯೂರಿ ಕೂಡಾ ರೇವಣ್ಣರನ್ನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

  • ನಾಯಕ-ನಾಯಕಿ ಇಲ್ಲದೇನೆ ಶುರುವಾಯ್ತು ಕೋಟಿಗೊಬ್ಬ-3 ಶೂಟಿಂಗ್!

    ನಾಯಕ-ನಾಯಕಿ ಇಲ್ಲದೇನೆ ಶುರುವಾಯ್ತು ಕೋಟಿಗೊಬ್ಬ-3 ಶೂಟಿಂಗ್!

    ಬೆಂಗಳೂರು: ಕಿಚ್ಚ ಸುದೀಪ್ ನಟಿಸುತ್ತಿರುವ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣ ಶುರುವಾಗಿದೆ. ವಿಶೇಷವೆನೆಂದರೆ ಈ ಚಿತ್ರಕ್ಕೆ ನಾಯಕಿ ಇನ್ನೂ ಆಯ್ಕೆಯಾಗಿಲ್ಲ. ಅಲ್ಲದೇ ಸುದೀಪ್ ಇಲ್ಲದೆಯೇ ಈ ಚಿತ್ರದ ಚಿತ್ರೀಕರಣವನ್ನು ಚಿತ್ರತಂಡ ಶುರು ಮಾಡಿದೆ.

    ಕೋಟಿಗೊಬ್ಬ-2 ಚಿತ್ರದ ಯಶಸ್ಸಿನ ನಂತರ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಶನ್‍ನಲ್ಲಿ ಈ ಸಿನಿಮಾ ಬರುತ್ತಿದೆ. ಕೋಟಿಗೊಬ್ಬ-3 ಸಿನಿಮಾ ಸೆಟ್ಟೇರಿ ಎರಡು ತಿಂಗಳಾಯಿತು. ಆದರೆ ನಾಯಕಿ ಮಾತ್ರ ಇನ್ನೂ ಫಿಕ್ಸ್ ಆಗಿಲ್ಲ.

    ಇನ್ನೂ ನಿರ್ದೇಶಕ ಶಿವಕಾರ್ತಿಕ್, ಹೀರೋ-ಹೀರೋಯಿನ್ ಇಲ್ಲದೇ ಇದ್ದರೂ ಪರವಾಗಿಲ್ಲ ಎಂದು ಸಿನಿಮಾದ ಬೇರೆ ಬೇರೆ ದೃಶ್ಯಗಳನ್ನ ಚಿತ್ರೀಕರಿಸೋಕೆ ಮುಂದಾಗಿದ್ದಾರೆ. ಚಿತ್ರದ ಶೂಟಿಂಗ್ ಸರಿಯಾದ ಸಮಯಕ್ಕೆ ಮುಗಿಯಬೇಕೆಂದು ಕಿಚ್ಚ ಸುದೀಪ್ ಇಲ್ಲದೇ ಇರುವ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಲು ನಿರ್ಧರಿಸಿದೆ.

    ಈ ಸಿನಿಮಾಕ್ಕೆ ಕಿಚ್ಚ ಸುದೀಪ್ ಕಥೆ ಬರೆದಿದ್ದು, ಹೆಬ್ಬುಲಿ ನಂತರ ಅರ್ಜುನ್ ಜನ್ಯ ಸುದೀಪ್ ಚಿತ್ರಕ್ಕೆ ಮತ್ತೆ ಸಂಗೀತ ನೀಡುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಕ್ಯಾಮರಾಮೆನ್ ಆಗಿ ಶೇಖರ್ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸದ್ಯಕ್ಕೆ ಕಿಚ್ಚ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಲ್ಲಿ ಮೂಗೂತಿ ಸುಂದರಿ ಶ್ರತಿ ಜತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ‘ದಿ ವಿಲನ್’ನಲ್ಲಿ ಬ್ರಿಟನ್ ಬೆಡಗಿ ಏಮಿ ಜಾಕ್ಸನ್ ಜತೆ ಡ್ಯೂಯೆಟ್ ಹಾಡಿದ್ದಾರೆ.

    ಪೈಲ್ವಾನ್ ಇನ್ನೂ ಶುರುವಾಗಿಲ್ಲ, ಇದೀಗ ಕೋಟಿಗೊಬ್ಬ-3 ಚಿತ್ರಕ್ಕಾಗಿ ನಾಯಕಿಗಾಗಿ ಹುಡುಕಾಡುತ್ತಿದ್ದಾರೆ.

  • ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

    ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

    ಬೆಂಗಳೂರು: ಕೆಲ ದಿನಗಳ ಹಿಂದೆ ಟಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಆರೋಪಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಶ್ರೀ ರೆಡ್ಡಿಗೆ ಕನ್ನಡದ ನಟಿ ಕವಿತಾ ರಾಧೇಶಾಮ್ ವಿಡಿಯೋ ರಿಲೀಸ್ ಮಾಡಿ ತಿರುಗೇಟು ನೀಡಿದ್ದಾರೆ.

    ಈ ಸಂಬಂಧ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಮಾಡಿರುವ ನಟಿ ರಾಧೇಶಾಮ್, ಟಾಲಿವುಡ್ ನ ಸ್ಟಾರ್ ನಟರ ಹೆಸರು ಹೇಳಿಕೊಂಡು ಕೆಲವರು ಪ್ರಚಾರ ಪಡೆಯುತ್ತಿದ್ದಾರೆ. ಅಲ್ಲದೇ ಅರಬೆತ್ತಲೆ ಪ್ರತಿಭಟನೆ ನಡೆಸಿರುವ ಘಟನೆಯೂ ಸಹ ಸ್ಕ್ರೀಪ್ಟ್ ರೀತಿಯಲ್ಲೇ ಇದೆ. ಆದರೆ ಅವರಿಗೆ ಪ್ರತಿಭಟನೆ ಸಹ ಸರಿಯಾಗಿ ಮಾಡಲು ಬಂದಿಲ್ಲ ಎಂದು ಆರೋಪಿಸಿದ್ದಾರೆ.

    ತಮ್ಮ ಫೇಸ್‍ಬುಕ್ ಆರಂಭದಲ್ಲೇ ತಾವು ಈ ವಿಡಿಯೋ ಮಾಡುತ್ತಿರುವ ಕುರಿತು ಸ್ಪಷ್ಟನೆ ನೀಡಿರುವ ರಾಧೇಶಾಮ್, ತಾನು ಸದ್ಯ ಬಾಲಿವುಡ್ ಚಿತ್ರಗಳಲ್ಲಿ ನಟನೇ ಮಾಡುತ್ತಿದ್ದು, ಕನ್ನಡ ಸೇರಿದಂತೆ ಹಲವು ದಕ್ಷಿಣ ಭಾರತದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಸ್ನೇಹಿತರು ನನ್ನನ್ನು ಬೌಲ್ಡ್ ನಟಿ ಎಂದು ಕರೆಯುತ್ತಾರೆ. ಇದು ಎಷ್ಟು ಸತ್ಯ ಎಂದು ತಿಳಿಯಲು ಈ ವಿಡಿಯೋ ಮಾಡಿರುವುದಾಗಿ ತಿಳಿಸಿದ್ದಾರೆ.

    ಟಾಲಿವುಡ್ ಚಿತ್ರರಂಗ ಪವನ್ ಕಲ್ಯಾಣ್ ಸ್ಟಾರ್ ನಟ. ಇಂತಹ ನಟರ ಹೆಸರು ಬಳಕೆ ಮಾಡಿಕೊಂಡು ಕೆಲವರು ಪ್ರಚಾರ ಪಡೆಯುತ್ತಿದ್ದಾರೆ. ಉತ್ತರ ಭಾರತ ನಟಿಯರು ಎಲ್ಲದಕ್ಕೂ ಸಿದ್ಧರಿದ್ದು, ಅದ್ದರಿಂದಲೇ ಅವರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ ಎಂದು ಹೇಳಿರುವ ಕುರಿತು ರಾಧೇಶಾಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಹಲವು ಸೌತ್ ನಟಿಯರು ಬಾಲಿವುಡ್ ನಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಆದರೆ ನಟನೆ ಮಾಡಲು ಬಾರದ ಇಂತಹ ನಟಿಯರು ಈ ರೀತಿ ಮಾಡುತ್ತಿದ್ದಾರೆ. ಮುಖ್ಯವಾಗಿ ಬೆತ್ತಲೆ ಪ್ರತಿಭಟನೆ ಎಂದರೆ ಖಾಸಗಿ ಅಂಗಾಂಗಳನ್ನು ಮುಚ್ಚಿಕೊಳ್ಳುವುದು ಅಲ್ಲ. ಇದನ್ನು ನಾನು ಮಾಡಿ ತೋರಿಸುತ್ತೇನೆ ಎಂದು ವಿಡಿಯೋದಲ್ಲೇ ಬೆತ್ತಲೆಯಾಗಿದ್ದಾರೆ.

    ಮುಖ್ಯವಾಗಿ ಶ್ರೀ ರೆಡ್ಡಿ ಅವರು ನಟ ಪವನ್ ಕಲ್ಯಾಣ್ ಅವರ ಬಗ್ಗೆ ಮಾಡಿರುವ ಆರೋಪಗಳ ಕುರಿತು ಕಿಡಿಕಾರಿರುವ ರಾಧೇಶಾಮ್, ತಾವು ಇದುವರೆಗೂ ನಟಿರುವ ಎಲ್ಲಾ ಸಿನಿಮಾ ರಂಗಗಳಲ್ಲೂ ಯಾವುದೇ ನಿರ್ದೇಶಕ, ನಿರ್ಮಾಪಕ ಈ ರೀತಿ ಮಾಡಿಲ್ಲ. ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುವುದು ಅವರ ನೈಜ ಮುಖವಾಡವನ್ನು ಬಿಚ್ಚಿಡುತ್ತದೆ ಎಂದು ಹೇಳಿದ್ದಾರೆ.

    ನಟಿ ಕವಿತಾ ರಾಧೇಶಾಮ್ ಕನ್ನಡ ರಾಗಿಣಿ ಐಪಿಎಸ್ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಜಾಗ್ವಾರ್, ಖತರ್ನಾಕ್ ಸಿನಿಮಾದಲ್ಲೂ ನಟಿಸಿದ್ದರು. ಸದ್ಯ ಕನ್ನಡ ಮತ್ತೊಂದು ಹೆಸರಿಡದ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    https://www.facebook.com/actresskavita/videos/1974854692555542/

    https://twitter.com/actresskavita/status/982883007932530688

  • ಬಾಹುಬಲಿ ಸ್ಟಾರ್ ನಟನ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀ ರೆಡ್ಡಿಯಿಂದ ಫೋಟೋ ರಿಲೀಸ್

    ಬಾಹುಬಲಿ ಸ್ಟಾರ್ ನಟನ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀ ರೆಡ್ಡಿಯಿಂದ ಫೋಟೋ ರಿಲೀಸ್

    ಹೈದರಾಬಾದ್: ಟಾಲಿವುಡ್ ಫಿಲ್ಮ್ ಚೇಂಬರ್ ಮುಂದೇ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ನಟಿ ಶ್ರೀ ರೆಡ್ಡಿ, ಸದ್ಯ ಖ್ಯಾತ ನಿರ್ಮಾಪಕರ ಪುತ್ರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

    ಖ್ಯಾತ ತೆಲುಗು ನಿರ್ಮಾಪಕ ಸುರೇಶ್ ಬಾಬು ಅವರ ಪುತ್ರ ಹಾಗೂ ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸರ್ಕಾರದ ಫಿಲ್ಮ್ ಸ್ಟುಡಿಯೊವೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಖಾಸಗಿ ಮಾಧ್ಯಮೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹಾಗೂ ಅಭಿರಾಮ್ ನಡುವಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮ್ಮ ಆರೋಪಕ್ಕೆ ಸಾಕ್ಷಿಗಳನ್ನು ನೀಡಿದ್ದಾರೆ. ನಾನು ಹೇಳುತ್ತಿದ್ದ ವಿಷಯಗಳನ್ನು ಕೇವಲ ಸುಳ್ಳು ಎಂದು ಪ್ರತಿಪಾದಿಸುತ್ತಿದ್ದ ಹಲವರು ಈ ಫೋಟೋಗಳನ್ನು ಒಮ್ಮೆ ನೋಡಿ. ಅಭಿರಾಮ್ ನನ್ನ ಮುಖದ ಮೇಲೆ ಕೀಸ್ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಾನು ಈ ಫೋಟೋಗಳನ್ನು ರಿವಿಲ್ ಮಾಡುತ್ತಿರಲಿಲ್ಲ. ಆದರೆ ಆತನಿಗೆ ತನ್ನ ಕೃತ್ಯದ ಬಗ್ಗೆ ಸ್ವಲ್ಪವೂ ನಾಚಿಕೆ ಇಲ್ಲ. ಅದ್ದರಿಂದಲೇ ಇವುಗಳನ್ನು ಬಹಿರಂಗ ಪಡಿಸುತ್ತಿದ್ದೇನೆ. ಇದನ್ನು ನೋಡಿದ ಬಳಿಕವಾದರೂ ನನ್ನ ಹೋರಾಟಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.

    https://twitter.com/srireddyleaks/status/983927302475034624

    ನಟಿ ಶ್ರೀ ರೆಡ್ಡಿ ಈ ಫೋಟೋಗಳನ್ನು ಬಹಿರಂಗಗೊಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಹಲವು ಸಿನಿಮಾ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ತನ್ನ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದರು. ಅಂತಹ ಫೋಟೋ ಕಳುಹಿಸಿದ ಬಳಿಕವೂ ತನಗೆ ಸಿನಿಮಾದಲ್ಲಿ ಅವಕಾಶ ನೀಡಿರಲಿಲ್ಲ ಎಂದು ಶ್ರೀ ರೆಡ್ಡಿ ಆರೋಪಿಸಿದ್ದರು. ಆದರೆ ಆ ಸಂದರ್ಭದಲ್ಲಿ ಯಾರ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ.

  • ಶೂಟಿಂಗ್ ವೇಳೆ ಅಸ್ವಸ್ಥ – ಪಾರುಲ್ ಯಾದವ್ ಆಸ್ಪತ್ರೆಗೆ ದಾಖಲು

    ಶೂಟಿಂಗ್ ವೇಳೆ ಅಸ್ವಸ್ಥ – ಪಾರುಲ್ ಯಾದವ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಪಾರುಲ್ ಯಾದವ್‍ಗೆ ಆರೋಗ್ಯದಲ್ಲಿ ಮತ್ತೊಮ್ಮೆ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬಟರ್ ಫ್ಲೈ ಸಿನಿಮಾ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಪಾರುಲ್ ಆರೋಗ್ಯದಲ್ಲಿ ಸಮಸ್ಯೆ ಕಾಣಸಿಕೊಂಡಿದ್ದು, ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾರುಲ್ ಯಾದವ್ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಟರ್ ಫ್ಲೈ ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು, ಪಾರುಲ್ ಯಾದವ್ ಸಿನಿಮಾ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದರು. ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಟರ್ ಫ್ಲೈ ಸಿನಿಮಾ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ.

    https://www.facebook.com/varunmediastation/videos/2040856136180141/

  • ನಡುರಸ್ತೆಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಟಾಲಿವುಡ್ ನಟಿ!

    ನಡುರಸ್ತೆಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಟಾಲಿವುಡ್ ನಟಿ!

    ಹೈದರಾಬಾದ್: ಟಾಲಿವುಡ್ ನಟಿಯೊಬ್ಬರು ಫಿಲ್ಮ್ ಚೆಂಬರ್ ವಿರುದ್ಧ ನಡುರಸ್ತೆಯಲ್ಲಿ ಅರೆಬೆತ್ತಲೆಯಾಗುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ಹೈದರಾಬಾದ್ ನಗರದ ಫಿಲ್ಮ್ ನಗರದಲ್ಲಿ ನಡೆದಿದೆ.

    ಟಾಲಿವುಡ್‍ನ ಕೆಲ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಶ್ರೀ ರೆಡ್ಡಿ ಅಲ್ಲಿನ ಫಿಲ್ಮ್ ಚೆಂಬರ್ ವಿರುದ್ಧ ನಡುರಸ್ತೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

    ಇಂದು ಹೈದರಾಬಾದ್ ನಗರದ ಫಿಲ್ಮ ಚೆಂಬರ್ ಮುಂದೇ ಆಗಮಿಸಿದ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಟಾಲಿವುಡ್ ಹಿರೋಯಿನ್ ಆಗಿ ಗುರುತಿಸಿಕೊಂಡಿದ್ದರು ತಮಗೇ ಸಿನಿಮಾ ನಟರ ಆಸೋಸಿಯೇಷನ್ ಸಂಸ್ಥೆಯಲ್ಲಿ ಸದಸ್ಯತ್ವ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಪ್ರತಿಭಟನೆ ಬಳಿಕವೂ ಸಂಸ್ಥೆ ತಮಗೆ ಸದಸ್ಯತ್ವ ನೀಡದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಟಿ ಶ್ರೀ ರೆಡ್ಡಿ ಟಾಲಿವುಡ್ ಅಂಗಳದಲ್ಲಿನ ಕಾಸ್ಟಿಂಗ್ ಕೋಚ್ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

    https://www.youtube.com/watch?v=5TiflmioJDA

     

  • ನಟಿಯ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ ನಿರ್ಮಾಪಕ ಅರೆಸ್ಟ್

    ನಟಿಯ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ ನಿರ್ಮಾಪಕ ಅರೆಸ್ಟ್

    ಮುಂಬೈ: ನಟಿಯ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಕ್ಕೆ ನಿರ್ಮಾಪಕನೊಬ್ಬ ಅರೆಸ್ಟ್ ಆಗಿದ್ದಾನೆ.

    ಭೋಜ್ಪುರಿ ಚಿತ್ರ ನಿರ್ಮಾಪಕನನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಘಟನೆ ನಡೆದು ಒಂದು ತಿಂಗಳಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಂಧಿತನನ್ನು ಉಪೇಂದ್ರ ಕುಮಾರ್ ವರ್ಮಾ ಎಂದು ಗುರುತಿಸಲಾಗಿದ್ದು, ಅಂಧೇರಿಯ ಸಲೂನ್ ನಲ್ಲಿ ಈತ ಸಿಕ್ಕಿಬಿದ್ದಿದ್ದಾನೆ.

    ಈತ ಶಾರ್ಟ್ ಫಿಲ್ಮ್ ಗಳನ್ನು ನಿರ್ಮಾಣ ಮಾಡುತ್ತಿದ್ದನು. ಕೇವಲ ಮೂರೇ ದಿನಗಳಲ್ಲಿ ಉಪೇಂದ್ರ ಕುಮಾರ್ ಶಾರ್ಟ್ ಫಿಲ್ಮ್ ಚಿತ್ರೀಕರಣ ಮುಗಿಸಿದ್ದನು. ಅದರಲ್ಲಿ ಅಭಿನಯಿಸಿದ್ದ ನಟಿಯ ನಗ್ನ ವಿಡಿಯೋವನ್ನು ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಬಾತ್ ರೂಮಿನಿಂದ ನಾಯಕಿ ಟವಲ್ ಉಟ್ಟು ಬರುವ ದೃಶ್ಯವಿತ್ತು. ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ನಟಿಯ ಟವಲ್ ಕಳಚಿ ಬಿದ್ದಿತ್ತು. ಈ ದೃಶ್ಯವನ್ನು ಆರೋಪಿ ರೆಕಾರ್ಡ್ ಮಾಡಿದ್ದಾನೆ.


    ಆ ದೃಶ್ಯವನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದ ಉಪೇಂದ್ರ ಕುಮಾರ್, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಇದು ನಟಿಗೆ ಗೊತ್ತಿರಲಿಲ್ಲ. ಕೆಲ ದಿನಗಳ ಬಳಿಕ ಆಕೆಯ ಸ್ನೇಹಿತೆಯರು ಈ ವೈರಲ್ ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಆರೋಪಿ ಆ ವಿಡಿಯೋವನ್ನು ಮೊದಲು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದನು. ಆಗ ಅದನ್ನು ಒಂದು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ನಂತರ ಪೋರ್ನ್ ಸೈಟ್ ಗಳಲ್ಲೆಲ್ಲ ಈ ವಿಡಿಯೋ ವೈರಲ್ ಆಗಿತ್ತು. ನಂತರ ನಟಿ ಆತನ ವಿರುದ್ಧ ಜನವರಿ 28 ರಂದು ದೂರು ದಾಖಲಿಸಿದ್ದರು. ಈಗ ಆರೋಪಿ ನಿರ್ಮಾಪಕನನ್ನು ಬಂಧಿಸಲಾಗಿದೆ. ಪೊಲೀಸರು ಸೈಬರ್ ಪೊಲೀಸರ ಸಹಾಯ ಪಡೆದು ಆ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾರೆ.

  • ಕಾಂಗ್ರೆಸ್ ನಲ್ಲಿ ಬರ್ತ್, ಡೆತ್ ಸರ್ಟಿಫಿಕೇಟಿದ್ದರೆ ಸಾಕು, ಪ್ರಧಾನಿಯಾಗ್ಬಹುದು- ನಟಿ ತಾರಾ

    ಕಾಂಗ್ರೆಸ್ ನಲ್ಲಿ ಬರ್ತ್, ಡೆತ್ ಸರ್ಟಿಫಿಕೇಟಿದ್ದರೆ ಸಾಕು, ಪ್ರಧಾನಿಯಾಗ್ಬಹುದು- ನಟಿ ತಾರಾ

    ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಡೆತ್ ಸರ್ಟಿಫಿಕೇಟ್, ಬರ್ತ್ ಸರ್ಟಿಫಿಕೇಟ್ ಇದ್ರೆ ಸಾಕು ಪ್ರಧಾನಿ, ಪಕ್ಷದ ಅಧ್ಯಕ್ಷ ಆಗಬಹುದು ಎಂದು ನಟಿ, ವಿಧಾನ ಪರೀಷತ್ ಸದಸ್ಯೆ ತಾರಾ ಹೇಳಿದ್ದಾರೆ.

    ಬೆಳಗಾವಿ ಮಿಲೇನಿಯಮ್ ಗಾರ್ಡನ್ ನಲ್ಲಿ ಎಬಿವಿಪಿ ಏರ್ಪಡಿಸಿದ್ದ ರಂಗ್‍ದೇ ಬಸಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ಹೇಳಿಕೆ ನೀಡಿದ್ದಾರೆ. ನೆಹರು ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ನಂತರ ಇಂದಿರಾ ಗಾಂಧಿಯಿಂದ ಡೆತ್ ಸರ್ಟಿಫಿಕೇಟ್ ಪಡೆದು ರಾಜೀವ್ ಗಾಂಧಿ ಸಹ ಪ್ರಧಾನಿಯಾಗಿದ್ದರು. ರಾಜೀವ್ ಗಾಂಧಿಯ ಡೆತ್ ಸರ್ಟಿಫಿಕೇಟ್ ಪಡೆದು ಸೊನಿಯಾ ಗಾಂಧಿ ಸಹ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದೀಗ ಸೋನಿಯಾ ಗಾಂಧಿಯಿಂದ ಬರ್ತ್ ಸರ್ಟಿಫಿಕೇಟ್ ಪಡೆದ ರಾಹುಲ್ ಸಹ ಎಐಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ ಅಂದ್ರು.

    ಆದರೆ ಈ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿ ಇಲ್ಲ. ಇಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ದೇಶದ ಪ್ರಧಾನಿ ಆಗಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಧರ್ಮ ಒಡೆಯುವ ಸಂಸ್ಕೃತಿ ಆರಂಭವಾಗಿದ್ದು, ಇದರ ವಿರುದ್ಧ ಎಬಿವಿಪಿ ಜಾಗೃತಿ ಮೂಡುವ ಅವಶ್ಯಕತೆ ಇದೆ ಎಂದು ತಾರಾ ಕರೆ ನೀಡಿದ್ರು.