Tag: actress

  • ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

    ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

    ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಂತಾನೇ ಗುರುತಿಸಿಕೊಳ್ಳುವ ಅನುಶ್ರೀ ನಿರೂಪಣೆ ವೇಳೆ ಒಂದು ಕ್ಷಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಖಾಸಗಿ ವಾಹಿನಿಯ ಡಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಮಾಡುವುದು ಎಲ್ಲರಿಗೂ ಗೊತ್ತಿದೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ತಮ್ಮ ಮುದ್ದು ಸಹೋದರನನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾರೆ.

    ಸ್ವರ್ಧಿಗಳಾದ ಸೂರಜ್, ಶ್ರಾವ್ಯಾ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಮೂವರು ಜಾಲಿಡೇಸ್ ಸಿನಿಮಾದ ಸ್ನೇಹತ್ವ ಸಾರುವ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದ್ದರು. ಡ್ಯಾನ್ಸ್ ಮಧ್ಯೆ ತೀರ್ಪುಗಾರರ ನೆಚ್ಚಿನ ಸ್ನೇಹಿತರ ಫೋಟೋ ಸಹ ತೋರಿಸಿದರು. ರಕ್ಷಿತಾರ ಸ್ನೇಹಿತೆ ಪ್ರಶಾಂತಿ, ವಿಜಯ್ ರಾಘವೇಂದ್ರ ಗೆಳೆಯ ಕುಮಾರ್, ಅರ್ಜುನ್ ಜನ್ಯಾರ ಗೆಳೆಯ ಪ್ರಕಾಶ್ ಎಲ್ಲರ ಫೋಟೋಗಳನ್ನು ಡಿಸ್ ಪ್ಲೇ ಮಾಡಲಾಯಿತು. ಕೊನೆಗೆ ಅನುಶ್ರೀಯವರ ಫ್ರೆಂಡ್ ಬದಲಾಗಿ ತಮ್ಮ ಅಭಿಜಿತ್ ಫೋಟೋ ತೋರಿಸಲಾಯಿತು.

    ತೀರ್ಪುಗಾರರು ಎಲ್ಲರೂ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡರು. ಕೊನೆಗೆ ಅನುಶ್ರೀ ತಮ್ಮನ ಬಗ್ಗೆ ಕೇಳಲಾಯಿತು. ಆ ವೇಳೆ ಭಾವುಕಾರದ ಅನುಶ್ರೀ, ಇವನು ನನ್ನ ಕನಸು, ತುಂಬಾ ವರ್ಷಗಳ ಹಿಂದೆ ಸೂಟ್‍ಕೇಸ್ ಹಿಡಿದುಕೊಂಡು ಬೆಂಗಳೂರಿಗೆ ಬಂದೆ. ನಾನು ಇಲ್ಲಿ ದುಡಿಯುತ್ತಿದ್ದರೆ, ಅಲ್ಲಿ ಅವನು ನನ್ನ ತಾಯಿಯನ್ನು 13 ವರ್ಷಗಳಿಂದ ಚೆನ್ನಾಗಿ ನೋಡಿಕೊಂಡಿದ್ದಾನೆ. ನಾನು ಏನು ಮಾಡಲು ಸಾಧ್ಯವಾಗಿಲ್ಲವೋ, ಅವೆಲ್ಲವನ್ನು ಅವನು ಇಂದು ಸಾಧಿಸಿದ್ದಾನೆ. ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆಯಾಗಿ ತನ್ನ ಕಾಲ ಮೇಲೆ ನಿಂತುಕೊಂಡಿದ್ದಾನೆ. ದೇವರು ನನಗೆ ನೀಡಿರುವ ಎಲ್ಲ ಆಯಸ್ಸನ್ನು ಆತನಿಗೆ ನೀಡಲಿ ಎಂದು ಕೇಳಿಕೊಂಡು ಒಂದು ಕ್ಷಣ ಭಾವುಕರಾದ್ರು.

    ಕಾರ್ಯಕ್ರಮಗಳಲ್ಲಿ ತಮ್ಮ ಪಟಾಕಿ ಮಾತುಗಳಿಂದ ಎಲ್ಲರನ್ನು ನಗಿಸುವ ಅನುಶ್ರೀ ಕಣ್ಣೀರು ಹಾಕಿದ್ದರಿಂದ ಒಂದು ಕ್ಷಣ ತೀರ್ಪುಗಾರರು ಸೇರಿದಂತೆ ವೀಕ್ಷಕರು ಸಹ ಭಾವುಕರಾದರು. ಅದರಂತೆ ನಟಿ ರಕ್ಷಿತಾ ತಮ್ಮ ಸ್ನೇಹದ ಗೆಳೆತಿ ಪ್ರಶಾಂತಿಯವರ ಬಗ್ಗೆ ಹೇಳುವಾಗ ಕಣ್ಣಂಚಲಿ ಕಣ್ಣೀರು ಬಂತು.

  • ಬಾಲಿವುಡ್ ನಟಿಯಿಂದ ಬೆಂಗ್ಳೂರು ಯುವಕನಿಗೆ ಆನ್‍ಲೈನ್‍ನಲ್ಲಿ ವಂಚನೆ!

    ಬಾಲಿವುಡ್ ನಟಿಯಿಂದ ಬೆಂಗ್ಳೂರು ಯುವಕನಿಗೆ ಆನ್‍ಲೈನ್‍ನಲ್ಲಿ ವಂಚನೆ!

    ಬೆಂಗಳೂರು: ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಸೀಝನ್ 11ರ ಕಂಟೆಸ್ಟೆಂಟ್ ಒಬ್ಬಳು ಬೆಂಗಳೂರು ಯುವಕನಿಗೆ ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಬಾಲಿವುಡ್ ನಟಿ ಭಂದಗೀ ಕಲ್ರಾರ ಮೇಲೆ ಈ ವಂಚನೆ ಆರೋಪ ಕೇಳಿಬಂದಿದೆ. ಭಂದಗೀ ಇನ್‍ಸ್ಟಾಗ್ರಾಂನಲ್ಲಿ ಐ ಫೋನ್ ಎಕ್ಸ್ 1 ಲಕ್ಷದ ಮೊಬೈಲ್ ನ್ನು 68,000 ರೂ. ಮಾರಾಟ ಮಾಡುವುದಾಗಿ ಜಾಹಿರಾತು ನೀಡಿದ್ದಳು.

    ಈ ಇನ್‍ಸ್ಟಾಗ್ರಾಂ ಪೋಸ್ಟ್ ನೋಡಿ ಬೆಂಗಳೂರಿನ ಯುವಕ ಯುವರಾಜ್ ನಟಿ ಭಂದಗೀ ಜೊತೆ ಚಾಟ್ ಮಾಡಿದ್ದನು. ನಂತರ ಯುವರಾಜ್ ಐ ಪೋನ್ ಎಕ್ಸ್ ಮೊಬೈಲ್ ಅನ್ನು ನಟಿ ಭಂದಗೀ ಬಳಿ ಕೊಂಡುಕೊಂಡಿದ್ದ. ಅಲ್ಲದೇ ಅಡ್ವಾನ್ಸ್ ಆಗಿ 13 ಸಾವಿರ ರೂ. ಹಣವನ್ನು ಕೂಡ ನೀಡಿದ್ದನು. ಇದಾದ ಬಳಿಕ ಬ್ಲೂ ಡಾರ್ಟ್ ಕೋರಿಯರ್ ಮೂಲಕ ನಟಿ ಪಾರ್ಸಲ್ ಕಳುಹಿಸಿದ್ದಳು.

    ಯುವರಾಜ್ ಉಳಿದ ಹಣ 48 ಸಾವಿರ ರೂ. ನೀಡಿ ಕೊರಿಯರ್ ಪಡೆದುಕೊಂಡಿದ್ದನು. ಬಳಿಕ ಯುವರಾಜ್ ಕೋರಿಯರ್ ಶಾಪ್ ಮುಂದೆಯೆ ಬಾಕ್ಸ್ ಒಪನ್ ಮಾಡಿದ್ದನು. ಆದ್ರೆ ಈ ವೇಳೆ ಬಾಕ್ಸ್ ನಲ್ಲಿ ನಕಲಿ ಮೊಬೈಲ್ ಇರುವುದು ಪತ್ತೆಯಾಗಿದೆ.

    ಸದ್ಯ ನಟಿ ಭಂದಗೀ ಕಲ್ರಾ ಮತ್ತು ಬ್ಲೂ ಡಾರ್ಟ್ ವಿರುದ್ಧ ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದಾನೆ.

     

  • ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ

    ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ

    ಮುಂಬೈ: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ ಹಿರಿಯ ನಟಿ ರೀಟಾ ಬಾದುರಿ ನಿಧನರಾಗಿದ್ದಾರೆ.

    ರೀಟಾ ಅವರ ನಿಧನವಾಗಿರುವ ವಿಷಯವನ್ನು ಹಿರಿಯ ನಟ ಶಿಶಿರ್ ಶರ್ಮಾ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಬಹಳ ದುಃಖದಿಂದ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ರೀಟಾ ಬಾದುರಿ ಅವರು ನಮ್ಮೊಂದಿಗೆ ಇಲ್ಲ. ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅವರು ನಮಗೆಲ್ಲಾ ತಾಯಿಯಾಗಿದ್ದರು. ಅವರು ನಮಗೆ ತುಂಬಾ ನೆನಪಾಗುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.

    ಮೂಲಗಳ ಪ್ರಕಾರ ರೀಟಾ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೀಟಾ ಎರಡು ದಿನಕ್ಕೆ ಒಂದು ಬಾರಿ ಆಸ್ಪತ್ರೆಗೆ ಹೋಗುತ್ತಿದ್ದರು ಎನ್ನಲಾಗಿದೆ. ರೀಟಾ ಈ ನಡುವೆ ‘ನಿಮಕಿ ಮುಖಿಯಾ’ದಲ್ಲಿ ಇಮರತಿ ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸೆಟ್‍ನಲ್ಲಿ ಕೆಲಸವಿಲ್ಲದ ಸಮಯದಲ್ಲಿ ರೀಟಾ ವಿಶ್ರಾಂತಿ ಪಡೆಯುತ್ತಿದ್ದರು. ರೀಟಾ ಅವರಿಗೆ 62 ವರ್ಷಗಳಾಗಿದ್ದು, ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಶೂಟಿಂಗ್ ಶೆಡ್ಯೂಲ್ ನಿರ್ಧರಿಸಲಾಗುತ್ತಿತ್ತು ಎಂದು ವರದಿಯಾಗಿದೆ.

    ವಯಸ್ಸಾದ ಕಾಲದಲ್ಲಿ ಬರುವ ಕಾಯಿಲೆಗಳಿಂದ ಹೆದರಿ ಕೆಲಸ ಬಿಡಲು ಆಗುತ್ತಾ?. ನನಗೆ ಕೆಲಸ ಮಾಡಲು ಹಾಗೂ ನನ್ನನ್ನು ನಾನು ಬ್ಯುಸಿಯಾಗಿಡಲು ಇಷ್ಟಪಡುತ್ತೇನೆ. ನನಗೆ ಎಲ್ಲ ಸಮಯದಲ್ಲೂ ನನ್ನ ಕಾಯಿಲೆ ಬಗ್ಗೆ ಯೋಚಿಸುತ್ತಾ ಇರೋದಕ್ಕೆ ಇಷ್ಟವಿಲ್ಲ. ಹಾಗಾಗಿ ನಾನು ಯಾವಗಲೂ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ನನ್ನನ್ನು ಅರ್ಥ ಮಾಡಿಕೊಳ್ಳುವ ಹಾಗೂ ಸಪೋರ್ಟ್ ಮಾಡುವ ಶೂಟಿಂಗ್ ತಂಡ ಸಿಕ್ಕಿದ್ದು ಅದೃಷ್ಟ ಎಂದು ರೀಟಾ ಈ ಹಿಂದೆ ಹೇಳಿದ್ದರು.

    ರೀಟಾ ‘ಸಾರಾ ಬಾಯಿ ವಸ್‍ರ್ಸ್ ಸಾರಾ ಬಾಯಿ’, ‘ಅಮಾನತ್’, ‘ಏಕ್ ನಯೀ ಪೆಹೆಚಾನ್’ ಹಾಗೂ ‘ಬೈಬಲ್ ಕೀ ಕಹಾನೀಯಾ’ ಎಂಬ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಮೇಲೆ ಪೊಲೀಸರ ದಾಳಿ- ನಟಿಯ ರಕ್ಷಣೆ

    ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಮೇಲೆ ಪೊಲೀಸರ ದಾಳಿ- ನಟಿಯ ರಕ್ಷಣೆ

    ಹೈದರಾಬಾದ್: ಹೈ ಪ್ರೊಫೈಲ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಮುಂಬೈ ಮೂಲದ 24 ವರ್ಷದ ಡಬ್ಬಿಂಗ್ ನಟಿಯೊಬ್ಬರನ್ನು ರಕ್ಷಿಸಿದ್ದಾರೆ.

    ನಗರದ ಬಂಜಾರ್ ಹಿಲ್ಸ್ ನಲ್ಲಿರುವ ಹೋಟೆಲ್ ಮೇಲೆ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿದ್ದರು. ಜನಾರ್ದನ್ ರಾವ್ ಎಂಬ ವ್ಯಕ್ತಿ ವೇಶ್ಯಾಗೃಹ ಸಂಘಟಕ ಹಾಗೂ ಬಂಧಿತ ಆರೋಪಿ. ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ನಟಿಯೊಬ್ಬರನ್ನು ರಕ್ಷಿಸಲಾಗಿದೆ. ಹಾಗೆಯೇ ಈ ಪ್ರಕರಣ ಸಂಬಂಧಿತ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಕ್ಷಣೆ ಮಾಡಿರುವ ನಟಿ ಮೂಲತಃ ಆಗ್ರಾ ನಿವಾಸಿಯಾಗಿದ್ದು, ಮುಂಬೈನಲ್ಲಿ ಡಬ್ಬಿಂಗ್ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಜನಾರ್ದನ್ ರಾವ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಈ ಹಿಂದೆಯೂ ಕೂಡ ನಟಿಯನ್ನು ತನ್ನ ಬಣ್ಣದ ಮಾತಿನಿಂದ ಮರುಳುಮಾಡಿ ಹೈದರಾಬಾದ್ ಸುತ್ತಮುತ್ತ ಮಾಂಸ ದಂಧೆಯಲ್ಲಿ ತೊಡಗಿಸಿದ್ದನು. ಅಲ್ಲದೇ ಆರೋಪಿ ರಾವ್ ಹಾಗೂ ಪರಾರಿಯಾಗಿರುವ ಉಳಿದ ಆರೋಪಿಗಳು ಮುಂಬೈ ಹಾಗೂ ಇತರೇ ರಾಜ್ಯದ ಯುವತಿಯರನ್ನು ವಾರದ ಒಪ್ಪಂದ ಮೇಲೆ 1 ಲಕ್ಷ ರೂ.ಗಳನ್ನು ನೀಡಿ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು ಹಾಗೂ ವೇಶ್ಯಾಗೃಹಕ್ಕೆ ಬರುವ ಗ್ರಾಹಕರಿಂದ ತಲಾ 20,000 ಪಡೆಯುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

  • ಗೆಸ್ಟ್ ಹೌಸ್‍ಗೆ ಒಬ್ಳೇ ಬಾ ಅಂತಾ ಕರೀತಿದ್ರು: ನಟಿ ಆಮನಿ

    ಗೆಸ್ಟ್ ಹೌಸ್‍ಗೆ ಒಬ್ಳೇ ಬಾ ಅಂತಾ ಕರೀತಿದ್ರು: ನಟಿ ಆಮನಿ

    ಹೈದರಾಬಾದ್: ವೃತ್ತಿ ಜೀವನದ ಆರಂಭದಲ್ಲಿ ನನಗೂ ಸಹ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಎಂದು ಕನ್ನಡದ ‘ಅಪ್ಪಾಜಿ’ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಆಮನಿ ಹೇಳಿದ್ದಾರೆ.

    ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಆಮನಿ, ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಕುರಿತ ತಮ್ಮ ಅನುಭವದ ಬಗ್ಗೆ ಮಾತನಾಡಿದ್ದಾರೆ. ಮೊದಲು ಫೋಟೋ ನೋಡಿ ಸಿನಿಮಾ ಚಾನ್ಸ್ ನೀಡುತ್ತಿದ್ದರು. ಆದರೆ ಬಳಿಕ ಫೋನ್ ಮಾಡಿ ಗೆಸ್ಟ್ ಹೌಸ್ ಗೆ ಬನ್ನಿ ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ.

    ಮೊದಲು ಅವರು ಕರೆಯುತ್ತಿದ್ದ ಉದ್ದೇಶ ತಿಳಿಯುತ್ತಿರಲಿಲ್ಲ, ಆದರೆ ಅವರು ಅಮ್ಮನ ಜೊತೆ ಬರಬೇಡ ಎಂದು ಸೂಚನೆ ನೀಡಿ ಒಬ್ಬಳನ್ನೇ ಕರೆಯುತ್ತಿದ್ದ ವೇಳೆ ಅವರ ಉದ್ದೇಶ ನನಗೆ ಅರ್ಥವಾಗುತ್ತಿತ್ತು. ಇಂತಹ ಘಟನೆಗಳು ಸಾಮಾನ್ಯವಾಗಿ ಹೊಸ ಸಂಸ್ಥೆಗಳಲ್ಲಿ ಮಾತ್ರ ನಡೆಯುತ್ತದೆ. ತಮಿಳು ಚಿತ್ರ ರಂಗದಲ್ಲೂ ಇಂತಹ ಘಟನೆಗಳು ನಡೆದಿದೆ. ದೊಡ್ಡ ದೊಡ್ಡ ಬ್ಯಾನರ್ ಹೊಂದಿರುವ ಸಂಸ್ಥೆಗಳಲ್ಲಿ ಇಂತಹ ಅನುಭವ ಎದುರಿಸಿಲ್ಲ, ಸಣ್ಣ ಸಂಸ್ಥೆಗಳಲ್ಲಿ ಮಾತ್ರ ಇಂತಹವುಗಳು ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ವೃತ್ತಿ ಜೀವನದ ಆರಂಭದಲ್ಲಿ ಹೀರೋಯಿನ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಆಮನಿ ಅವರು, ಮದುವೆಯ ಬಳಿಕ ಕೆಲ ಕಾಲ ಬಣ್ಣದ ಬದುಕಿಗೆ ಬ್ರೇಕ್ ನೀಡಿದ್ದರು. ಆದರೆ ಕೆಲ ಸಮಯದ ಬಳಿಕ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಸದ್ಯ ಪೋಷಕ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಲ್ಲಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ನಟಿ ಶ್ರೀ ರೆಡ್ಡಿ ಪ್ರತಿಭಟನೆಯ ಬಳಿಕ ಹಲವು ನಟಿಯರು ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ತುಟಿ ಬಿಚ್ಚಿದ್ದರು.

  • ವೈರಲ್ ಆಯ್ತು ದರ್ಶನ್ ಜೊತೆ ನಟಿ ತೆಗೆದುಕೊಂಡ ಸೆಲ್ಫಿ!

    ವೈರಲ್ ಆಯ್ತು ದರ್ಶನ್ ಜೊತೆ ನಟಿ ತೆಗೆದುಕೊಂಡ ಸೆಲ್ಫಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋಕೆ ಬರೀ ಫ್ಯಾನ್ಸ್ ಮಾತ್ರವಲ್ಲ ಹೀರೋಯಿನ್ಸ್ ಕೂಡ ಮುಗಿಬೀಳುತ್ತಿದ್ದಾರೆ. ದರ್ಶನ್ ಜೊತೆ ನಟಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆ ಫೋಟೋ ಸೆನ್ಸೇಷನ್ ಸೃಷ್ಟಿಸಿದೆ.

    ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಟಿ ದರ್ಶನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇತ್ತೀಚೆಗೆ ರ‍್ಯಾಬೋ ಚಿತ್ರದ ನಟಿ ಆಶಿಕಾ ರಂಗನಾಥ್ ಅವರು ದರ್ಶನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸುದ್ದಿಯಾಗಿದ್ರು. ಈಗ ಮುಂಬೈ ಮೂಲದ ಬೆಡಗಿ ತಾನ್ಯಹೋಪ್ ಸಾರಥಿ ಜೊತೆ ಸೆಲ್ಫಿ ತೆಗೆದುಕೊಂಡು ಇದೀಗ ಸುದ್ದಿಯಲ್ಲಿದ್ದಾರೆ.

    ಈ ಫೋಟೋ ನೋಡಿದ ಮೇಲೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ದರ್ಶನ್ ಜೊತೆ ಸೆಲ್ಫಿ ತೆಗೆದುಕೊಂಡವರು ಯಾರು? ಫೋಟೋ ತೆಗೆದುಕೊಂಡಿದ್ದೆಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಜಮಾನ ಶೂಟಿಂಗ್‍ನ ಬ್ರೇಕ್ ಟೈಮ್‍ನಲ್ಲಿ ತಾನ್ಯ, ದರ್ಶನ್ ಅವರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

    ಯಜಮಾನ ಸಿನಿಮಾದಲ್ಲಿ ತಾನ್ಯಹೋಪ್, ದರ್ಶನ್ ಜೊತೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಫ್ರೇಮ್‍ನಲ್ಲಿ ಯಜಮಾನ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್- ತಾನ್ಯ ಜೋಡಿಯ ಈ ಕ್ಯೂಟ್ ಸೆಲ್ಫಿ ಸಖತ್ ವೈರಲ್ ಆಗಿದೆ.

  • ಅವನು, ಅವಳಾಗಿ ಭಾರತದ ಸಿನಿಮಾ ಇತಿಹಾಸದಲ್ಲಿಯೇ ದಾಖಲೆ ಬರೆದ ಕಾಜಲ್!

    ಅವನು, ಅವಳಾಗಿ ಭಾರತದ ಸಿನಿಮಾ ಇತಿಹಾಸದಲ್ಲಿಯೇ ದಾಖಲೆ ಬರೆದ ಕಾಜಲ್!

    ಉಡುಪಿ: ರಂಗಭೂಮಿ ನಾಟಕ- ರೆಡಿಯೋ ಜಾಕಿಯಾಗಿ ಕೆಲಸ ಮಾಡಿದ್ದ ತೃತೀಯ ಲಿಂಗಿ ಕಾಜಲ್ ಈಗ ಸ್ಯಾಂಡಲ್‍ವುಡ್ ಗೆ ಜಂಪ್ ಮಾಡಿದ್ದಾರೆ. ಲವ್ ಬಾಬಾ ಎನ್ನುವ ಚಿತ್ರಕ್ಕೆ ನಾಯಕಿ ನಟಿಯಾಗಿ ಆಯ್ಕೆಯಾಗುವ ಮೂಲಕ ಭಾರತದ ಸಿನಿಮಾ ಇತಿಹಾಸದಲ್ಲೇ ದಾಖಲೆ ಬರೆದಿದ್ದಾರೆ.

    ಒಂದಾದ ಮೇಲೆ ಒಂದು ಪೋಸ್‍ನಲ್ಲಿ ಫೋಟೋ ಶೂಟ್ ಮಾಡಿಕೊಂಡಿರುವ ಕಾಜಲ್, ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದಾರೆ. ಕಳೆದ 10 ವರ್ಷದಿಂದ ಉಡುಪಿಯಲ್ಲಿ ಹಲವಾರು ಕೆಲಸ ಮಾಡಿಕೊಂಡಿದ್ದಾರೆ. ಹುಟ್ಟಿದಾಗ ಪುರುಷರಂತೆ, ನಂತರ ಸ್ತ್ರೀಯಂತೆ ಸ್ವಭಾವದಲ್ಲಿ ಬದಲಾವಣೆಯಾಗಿದೆ. ಮಂಗಳಮುಖಿಯಾಗಿದ್ದವರು ಆಪರೇಷನ್ ಮಾಡಿಸಿಕೊಂಡು ಯುವತಿಯಾಗಿ ಪರಿವರ್ತನೆಗೊಂಡಿದ್ದರು. ಉಡುಪಿಯಲ್ಲಿ ಬ್ಯೂಟಿ ಪಾರ್ಲರ್, ಮೆಹಂದಿ ಹಾಕುವುದು, ರೆಡಿಯೋ ಜಾಕಿಯಾಗಿ ಕೆಲಸ ಮಾಡಿಕೊಂಡಿದ್ದ ಈಕೆಗೆ ಈಗ ಸಿನಿಮಾವೊಂದರಿಂದ ಆಫರ್ ಬಂದಿದೆ.

    ಮೈಸೂರು ಮೂಲದ ಚಂದನ್ ಗೌಡ ಅವರು `ಲವ್ ಬಾಬಾ’ ಎನ್ನುವ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತೃತೀಯ ಲಿಂಗಿ ಕಾಜಲ್ ಅವರನ್ನು ನಾಯಕಿಯನ್ನಾಗಿ ಸೆಲೆಕ್ಟ್ ಮಾಡಿದ್ದಾರೆ. ಮೂರು ಹೀರೋಗಳ ಜೊತೆ ಕಾಜಲ್ ನಟನೆ ಮಾಡಲಿದ್ದಾರೆ. ಆರಂಭದಲ್ಲಿ ಮುಂಬೈನಲ್ಲಿ ಲೈವ್ ಬ್ಯಾಂಡ್ ಡಾನ್ಸರ್ ಆಗಿದ್ದ ಇವರು ನಂತರ ಉಡುಪಿಗೆ ಬಂದು ಬ್ಯೂಟಿಷಿಯನ್ ಕೆಲಸ ಮಾಡಿದ್ದಾರೆ. ಮಂಗಳೂರಿನ ಸಾರಂಗ್ ಎಫ್‍ಎಂನಲ್ಲಿ ನಿರೂಪಕಿಯಾಗಿ, ಉಡುಪಿಯ ರಂಗಭೂಮಿ ತಂಡದ ನಾಟಕದಲ್ಲಿ ನಟನೆ ಮಾಡಿದ್ದಾರೆ. ಇದೀಗ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

    ನಮ್ಮದು ಜೀವನವೇ ಕಷ್ಟ. ನಟನೆ ನನಗೆ ಕಷ್ಟ ಅಂತ ಅನಿಸಿಯೇ ಇಲ್ಲ. ನಾಟಕದಲ್ಲಿ ನಟಿಸಿದ್ದರಿಂದ ಫಿಲಂನಲ್ಲಿ ನಟಿಸೋದು ಕಷ್ಟವಾಗುವುದಿಲ್ಲ. ನನ್ನಂತ ಟ್ರಾನ್ಸ್ ಜಂಡರ್ ಗೆ ಅವಕಾಶ ಕೊಟ್ಟ ನಿರ್ದೇಶಕರಿಗೆ ನಾನು ಚಿರಋಣಿ. ಬಾರ್ ನಲ್ಲಿ ಡಾನ್ಸ್ ಮಾಡಿ ನನ್ನ ವೃತ್ತಿ ಆರಂಭಿಸಿದ್ದೆ. ಈಗ ಈ ಫೀಲ್ಡ್. ಬೇರೆ ಬೇರೆ ಅವಕಾಶಗಳು ಸಿಕ್ಕರೆ ನಾನು ಅವುಗಳಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಕಾಜಲ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

    ಯುವಕರ ತಂಡ ಈ ಚಿತ್ರವನ್ನು ಕಟ್ಟಲು ಹೊರಟಿದೆ. ಚಿತ್ರಕ್ಕೆ ಸಂಗೀತ, ಛಾಯಾಗ್ರಹಣವನ್ನು ಹೊಸಬರ ತಂಡ ಮಾಡುತ್ತಿದ್ದು, ಈ ಚಿತ್ರ ವಿಭಿನ್ನ ಕಥೆಯನ್ನು ಹೊಂದಿದೆ. ಮಕ್ಕಳಿಂದ ಹಿರಿಯರ ತನಕ ಕಥೆ ಇಷ್ಟವಾಗುತ್ತದೆ ಎಂದು ನಿರ್ದೇಶಕ ಚಂದನ್ ಗೌಡ ಹೇಳಿದ್ದಾರೆ. ಒಬ್ಬ ನಾಯಕ ನಟನಾಗಿ ಅಬ್ದುಲ್ ರೆಹಮಾನ್, ಕಾಮಿಡಿಗೆ ರವಿ ಬಣ್ಣ ಹಚ್ಚಲಿದ್ದಾರೆ.

    ಸುಮಾರು ಅರ್ಧ ಕೋಟಿ ರೂ. ಬಜೆಟ್‍ನಲ್ಲಿ ಚಿತ್ರ ರೆಡಿ ಮಾಡುತ್ತಿದ್ದು, ಮೈಸೂರಿನ ಯುವಕರ ತಂಡ `ಲವ್ ಬಾಬಾ’ದ ಹಿಂದೆ ಇದೆ. ಮಂಗಳೂರು, ಬೆಂಗಳೂರು, ಮೈಸೂರಲ್ಲಿ ಚಿತ್ರೀಕರಣವಿರುತ್ತದೆ. ನಾಲ್ಕು ಸಾಂಗ್ ಇರುವ ಕಾಮಿಡಿ, ಲವ್ ಹಾಗೂ ಡ್ರಾಮ ಮೂವಿ ಇದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಹೀರೋಯಿನ್ ಆಗಿ ನಟಿಸುತ್ತಿದ್ದು, ಇದು ದಾಖಲೆಯಾಗಲಿದೆ. ಈ ಚಿತ್ರದ ಮೂಲಕ ಲವ್ ಬಾಬಾ ಚಿತ್ರ ತಂಡ ಹೊಸ ಪ್ರಯೋಗ ಮಾಡಲು ಹೊರಟಿದೆ.

  • ಪ್ಯಾಂಟ್ ಧರಿಸದ್ದಕ್ಕೆ ಬಾಲಿವುಡ್ ನಟಿಯ ತಂಗಿಯನ್ನು ಹೊರಹಾಕಿದ ರೆಸ್ಟೋರೆಂಟ್ ಸಿಬ್ಬಂದಿ- ವಿಡಿಯೋ ವೈರಲ್

    ಪ್ಯಾಂಟ್ ಧರಿಸದ್ದಕ್ಕೆ ಬಾಲಿವುಡ್ ನಟಿಯ ತಂಗಿಯನ್ನು ಹೊರಹಾಕಿದ ರೆಸ್ಟೋರೆಂಟ್ ಸಿಬ್ಬಂದಿ- ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮ್ ತಂಗಿ ಸುರೀಲಿ ಗೌತಮ್ ಪ್ಯಾಂಟ್ ಧರಿಸಲಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ಆಕೆಯನ್ನು ಹೊರಗೆ ಹಾಕಿದ ಘಟನೆ ಸರ್ಬಿಯಾದಲ್ಲಿ ನಡೆದಿದೆ.

    ಸುರೀಲಿ ತನ್ನ ಸಹೋದರಿ ಯಾಮಿ ಜೊತೆ ಸರ್ಬಿಯಾಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಗೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ಸುರೀಲಿ ಅವರಿಗೆ ಪ್ರವೇಶ ನಿರಾಕರಿಸಿದ್ದಾರೆ.

    ನಟಿ ಯಾಮಿ ಗೌತಮ್ ತನ್ನ ಸಹೋದರಿಯನ್ನು ಯಾಕೆ ರೆಸ್ಟೋರೆಂಟ್‍ನಿಂದ ಹೊರ ಹಾಕಿದ್ದಾರೆ ಎಂದು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.

    ಯಾಮಿ ತನ್ನ ಸಹೋದರಿಯನ್ನು, ಮೊದಲೇ ಮಾತನಾಡಿಕೊಂಡಂತೆ ನೀನು ರೆಸ್ಟೋರೆಂಟ್‍ನಲ್ಲಿ ಏಕೆ ಇಲ್ಲ. ನೀನು ಈ ಬಾರಿನಲ್ಲಿ ಏನು ಮಾಡುತ್ತಿದ್ದೀಯಾ? ಎಂದು ಪ್ರಶ್ನಿಸಿದ್ದಾರೆ. ಆಗ ಸುರೀಲಿ ನಾನು ಪ್ಯಾಂಟ್ ಧರಿಸಿಲ್ಲ ಎಂದು ಉತ್ತರಿಸಿದ್ದಾರೆ. ನೀನು ಪ್ಯಾಂಟ್ ಧರಿಸಿದ ಕಾರಣ ರೆಸ್ಟೋರೆಂಟ್ ಸಿಬ್ಬಂದಿ ನಿನ್ನನ್ನು ಹೊರಹಾಕಿದ್ದಾರಾ” ಎಂದು ಯಾಮಿ ಹಾಸ್ಯ ಮಾಡಿದ್ದಾರೆ.

    ಸದ್ಯ ಯಾಮಿ ಗೌತಮ್ ಸಹೋದರಿ ಸುರೀಲಿ ಗೌತಮ್ ‘ಬ್ಯಾಟಲ್ ಆಫ್ ಸಾರಾಗರಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರವನ್ನು ರಾಜ್‍ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ.

    ನನ್ನ ತಂಗಿಯ ಮೊದಲ ಸಿನಿಮಾಕ್ಕಾಗಿ ನಾನು ತುಂಬಾ ಉತ್ಸಾಹದಲ್ಲಿದ್ದೇನೆ. ಆಕೆಯ ಮೊದಲ ಸಿನಿಮಾವನ್ನು ನಿರ್ದೇಶಕ ರಾಜ್‍ಕುಮಾರ್ ಸಂತೋಷಿ ನಿರ್ದೇಶಿಸುತ್ತಿದ್ದಾರೆ ಎಂದು ಯಾಮಿ ಗೌತಮ್ ಹೇಳಿಕೊಂಡಿದ್ದರು.

  • ಶಾರೂಖ್ ಖಾನ್ ಜೊತೆ ನಟಿಸಲ್ಲ ಎಂದ ಬಾಲಿವುಡ್‍ ಸ್ಟಾರ್ ನಟಿ!

    ಶಾರೂಖ್ ಖಾನ್ ಜೊತೆ ನಟಿಸಲ್ಲ ಎಂದ ಬಾಲಿವುಡ್‍ ಸ್ಟಾರ್ ನಟಿ!

    ಮುಂಬೈ: ಬಾಲಿವುಡ್ ಬಾದಶಾ ಶಾರೂಖ್ ಖಾನ್ ಜೊತೆ ನಟಿಸಲು ಸಾಕಷ್ಟು ನಟಿಯರು ಕಾಯುತ್ತಿರುತ್ತಾರೆ. ಆದರೆ ಈಗ ಬಾಲಿವುಡ್ ಖ್ಯಾತ ನಟಿ ಶಾರೂಖ್ ಖಾನ್ ಜೊತೆ ನಟಿಸಲು ನಿರಾಕರಿಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತದೆ.

    ಶಾರೂಖ್ ಖಾನ್ ಈಗ ‘ಝೀರೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಗಗನಯಾತ್ರಿ ರಾಕೇಶ್ ಶರ್ಮಾ ಅವರ ಜೀವನಾಧರಿತ ಸಿನಿಮಾಗಿದ್ದು, ಆ ಸಿನಿಮಾಗೆ ‘ಸೆಲ್ಯೂಟ್’ ಹೆಸರನ್ನು ಇಡಲಾಗಿದೆ. ಈ ಚಿತ್ರಕ್ಕಾಗಿ ಬೆಬೋ ಕರೀನಾ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ ಕರೀನಾಗೆ ಶಾರೂಖ್ ಜೊತೆ ನಟಿಸಲು ಆಸಕ್ತಿಯಿಲ್ಲ ಎಂದು ಹೇಳಲಾಗುತ್ತಿದೆ.

    ಇತ್ತೀಚಿಗಷ್ಟೇ ‘ವೀರ್ ದಿ ವೆಡ್ಡಿಂಗ್’ ಪ್ರಚಾರದಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ಖಾನ್, “ನಾನು ಈಗ ಹೊಸದನ್ನು ಮಾಡಲು ಇಷ್ಟಪಡುತ್ತೇನೆ. ಬೇರೆ ಏನಾದರೂ ಮಾಡಬೇಕು ಎನ್ನಿಸುತ್ತದೆ. ನಾನು ಈಗ ದೊಡ್ಡ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಳ್ಳುವುದ್ದಿಲ್ಲ. ನಾನು ಈಗ ಬೇರೆ ರೀತಿಯಲ್ಲೇ ಯೋಚಿಸುತ್ತಿದ್ದೇನೆ” ಎಂದು ಉತ್ತರಿಸಿದ್ದರು. ಕರೀನಾ ಅವರು ಶಾರೂಖ್ ಜೊತೆ ಸ್ಕ್ರೀನ್ ಶೇರ್ ಮಾಡದೇ ಇರುವ ವಿಚಾರ ಸೂಚ್ಯವಾಗಿ ಈ ರೀತಿ ಹೇಳಿದ್ದಾರೆ ಎನ್ನವ ಮಾತು ಈಗ ಬಾಲಿವುಡ್‍ನಲ್ಲಿ ಹರಿದಾಡುತ್ತಿದೆ.


    ಕರೀನಾ ಕಪೂರ್ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಅನುಮಾನದ ಬೆನ್ನಲ್ಲೇ ಶಾರೂಖ್ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯ ರೈ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಹೆಸರು ಕೇಳಿಬರುತ್ತಿದೆ.

    ಸದ್ಯ ಐಶ್ವರ್ಯ ಈಗ ‘ಫನೇ ಖಾನ್’ ಚಿತ್ರದಲ್ಲಿ ನಟಿಸುತ್ತಿದ್ದು, ಜೊತೆಗೆ ‘ರಾತ್ ಔರ್ ದಿನ್’ ಹಾಗೂ ‘ವೋ ಕೋನ್ ತೀ’ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳಿಂದ ಬಿಡುವು ಸಿಕ್ಕರೆ ಅವರು ಶಾರೂಖ್ ಖಾನ್ ಜೊತೆ ನಟಿಸಲು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

    ಮತ್ತೊಂಡೆದೆ ದೀಪಿಕಾ ಪಡುಕೋಣೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಚಿತ್ರದ ಸ್ಕ್ರಿಪ್ಟ್ ಗಳನ್ನು ನಿಧಾನವಾಗಿ ಪರಿಶೀಲಿಸಿ ಸಹಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ‘ಸಪ್ನಾ ದೀದೀ’ ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಚಿತ್ರದ ನಟ ಇರ್ಫಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಬೈಕಿನಲ್ಲಿ ಶೂಟಿಂಗ್‍ಗೆ ತೆರಳ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಟಿ

    ಬೈಕಿನಲ್ಲಿ ಶೂಟಿಂಗ್‍ಗೆ ತೆರಳ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಟಿ

    ಲಕ್ನೋ: ಶೂಟಿಂಗ್‍ಗೆ ಬೈಕಿನಲ್ಲಿ ಹೋಗುವಾಗ ಕಾರು ಬೈಕಿಗೆ ಡಿಕ್ಕಿ ಹೊಡೆದು ಭೋಜ್‍ಪುರಿ ನಟಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಉತ್ತರ ಪ್ರದೇಶದ ಚಿಟ್ವೌನಿ ಗ್ರಾಮದ ಬಾಲಿಯಾದಲ್ಲಿ ನಡೆದಿದೆ.

    ಮನಿಶಾ ರೈ(45) ಅಪಘಾತದಲ್ಲಿ ಮೃತಪಟ್ಟ ಭೋಜ್‍ಪುರಿ ನಟಿ. ಮನೀಶಾ ತನ್ನ ಆಸೋಸಿಯೆಟ್ ಸಂಜೀವ್ ಮಿಶ್ರಾ ಜೊತೆ ಬೈಕಿನಲ್ಲಿ ಶೂಟಿಂಗ್‍ಗೆ ತೆರಳುತ್ತಿದ್ದರು. ಈ ವೇಳೆ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಮನೀಶಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಎಸ್‍ಐ ಎಸ್‍ಪಿ ಗಂಗೂಲಿ ತಿಳಿಸಿದ್ದಾರೆ.

    ಇನ್ನೂ ಈ ಅಪಘಾತದಲ್ಲಿ ಸಂಜೀವ್ ಮಿಶ್ರಾ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಗಂಗೂಲಿ ಹೇಳಿದ್ದಾರೆ.

    ಸದ್ಯ ಮನೀಶಾ ರೈ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಮನೀಶಾ ರೈ ಕಿರುಚಿತ್ರದ ನಾಯಕಿಯಾಗಿದ್ದು, ಕೋಬರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.