Tag: actress

  • ಬೆಂಗ್ಳೂರಲ್ಲಿ ನಟಿ ಮೇಲೆ ಆಟೋ ಚಾಲಕ ಹಲ್ಲೆಗೆ ಯತ್ನ

    ಬೆಂಗ್ಳೂರಲ್ಲಿ ನಟಿ ಮೇಲೆ ಆಟೋ ಚಾಲಕ ಹಲ್ಲೆಗೆ ಯತ್ನ

    ಬೆಂಗಳೂರು: ಡಬಲ್ ಚಾರ್ಜ್ ತೆಗೆದುಕೊಳ್ಳಬೇಡ. ಸರಿಯಾದ ಚಾರ್ಜ್ ತೆಗೆದುಕೋ ಎಂದು ಹೇಳಿದ್ದಕ್ಕೆ ನಟಿ ಮೇಲೆ ಆಟೋ ಚಾಲಕ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಉತ್ತರಹಳ್ಳಿ ಬಳಿ ನಡೆದಿದೆ.

    ಬ್ಲಡ್ ಸ್ಟೋರಿ ಚಿತ್ರದ ನಾಯಕಿ ಮೇಲೆ ಆಟೋ ಚಾಲಕ ಹಲ್ಲೆ ಮಾಡಲು ಯತ್ನಿಸಿದ್ದಾರೆ. ವಸೂಲಿ ಬಗ್ಗೆ ನಾಯಕಿ ಆಟೋ ಚಾಲಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಿಟ್ಟುಗೊಂಡ ಚಾಲಕ ನಾಯಕಿಯನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೇ ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

    ಸದ್ಯ ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡೋದಾಗಿ ಹೇಳಿ ನಟಿಗೆ ಲಕ್ಷಾಂತರ ರೂ. ವಂಚನೆ

    ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡೋದಾಗಿ ಹೇಳಿ ನಟಿಗೆ ಲಕ್ಷಾಂತರ ರೂ. ವಂಚನೆ

    ಬೆಂಗಳೂರು: ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡುವುದಾಗಿ ಹೇಳಿ ಕಿರುತೆರೆ ನಟಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ರಘು ಚಂದ್ರಪ್ಪ ಹಾಗೂ ಸಂಗೀತಾ ಹಣ ಪಡೆದು ವಂಚಿಸಿದ್ದು, ಸುಶ್ಮಿತಾ ಅಧ್ಯಕ್ಷ ಗಾದಿಗೆ ಆಸೆ ಬಿದ್ದು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಸುಶ್ಮಿತಾ ಕನ್ನಡದ ಹಲವು ಧಾರವಾಹಿಗಳಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ. ಸುಶ್ಮಿತಾ ಅಲ್ಲದೇ ಸರೋಜ ಎನ್ನುವವರಿಗೂ ವಂಚನೆಯಾಗಿದೆ.

    ರಘು ಹಾಗೂ ಸಂಗೀತಾ ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ಹೇಳಿ ಸುಶ್ಮಿತಾ ಅವರಿಗೆ ವಂಚಿಸಿದ್ದಾರೆ. ಹಣ ಕೇಳಿದರೆ ರಘು ನಟಿ ಸುಶ್ಮಿತಾ ಹಾಗೂ ಸರೋಜ ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದಾನೆ. ಸದ್ಯ ಸರೋಜ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ 420, 418, ಹಾಗೂ 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ದೂರಿನಲ್ಲಿ ಏನಿದೆ?
    ನನಗೆ ನನ್ನ ಚಿಕ್ಕಮ್ಮನ ಮಗಳ ಕಡೆಯಿಂದ ಪರಿಚಯವಾದ ರಘು ಚಂದ್ರಪ್ಪ ನನ್ನನ್ನು ಹಾಗೂ ನನ್ನ ಸ್ನೇಹಿತೆ ಸುಶ್ಮಿತಾ ಗೆ ಆದಿಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಾಧ್ಯಾಕ್ಷರನ್ನಾಗಿ ಮಾಡುತ್ತೇನೆಂದು ನಂಬಿಸಿದ್ದಾನೆ. ಅಲ್ಲದೇ ನನ್ನ ಬಳಿ 1 ಲಕ್ಷ ರೂ. ಹಣವನ್ನು ಪಡೆದು, ಸುಶ್ಮಿತಾ ಅವರಿಂದ 3,50,000 ರೂ. ಹಣವನ್ನು ಪಡೆದು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿದ್ದಾನೆ. ಸಶನಿವಾರ ರಘು ಬಿಡಿಎ ಕಾಂಪ್ಲೆಕ್ಸ್ ಬಳಿ ಬರಲು ಹೇಳಿದ್ದನು. ಆಗ ನಾನು ಹಾಗೂ ನನ್ನ ಸ್ನೇಹಿತೆ ಸುಶ್ಮಿತಾ ಹೋದಾಗ ಬಿಡಿಎ ಕಾಂಪ್ಲೆಕ್ಸ್ ಬಳಿ ಇದ್ದ ರಘು ಹಾಗೂ ಆತನ ಸ್ನೇಹಿತೆ ಸಂಗೀತ ಇಬ್ಬರು ಹಣ ನೀಡದೇ ಪ್ರಾಣ ಬೆದರಿಕೆ ಹಾಕಿದ್ದಾರೆ. ಸದ್ಯ ರಘು ಹಾಗೂ ಸಂಗೀತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೋಟೆಲ್‍ನಲ್ಲಿ ನಟಿಯ ಮೃತದೇಹ ಪತ್ತೆ

    ಹೋಟೆಲ್‍ನಲ್ಲಿ ನಟಿಯ ಮೃತದೇಹ ಪತ್ತೆ

    ಕೋಲ್ಕತ್ತಾ: ನಟಿಯೊಬ್ಬರ ಮೃತದೇಹ ಪಶ್ಚಿಮ ಬಂಗಾಳದ ಸಿಲಿಗುರಿ ಹೋಟೆಲ್‍ನಲ್ಲಿ ಪತ್ತೆಯಾಗಿದೆ.

    ಪಾಯೆಲ್ ಚಕ್ರವರ್ತಿ, ಮಂಗಳವಾರ ಸಂಜೆ ಸಿಲಿಗುರಿ ಚರ್ಚ್ ರೋಡಿನ ಹೋಟೆಲ್‍ವೊಂದರಲ್ಲಿ ರೂಮ್ ಬುಕ್ ಮಾಡಿದ್ದರು. ನಂತರ ಅಲ್ಲಿಂದ ಬುಧವಾರ ಬೆಳಗ್ಗೆ ಗ್ಯಾಂಗ್ಟೋಕ್ ಹೋಗಲು ನಿರ್ಧರಿಸಿದ್ದರು. ಆದರೆ ಅವರು ಹೋಟೆಲ್‍ಗೆ ಬಂದಾಗಿನಿಂದ ರೂಮಿನ ಬಾಗಿಲು ಹಾಕಿಕೊಂಡಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

    ಹೋಟೆಲ್ ಸಿಬ್ಬಂದಿಯವರು ಪಾಯೆಲ್ ಇದ್ದ ರೂಮಿನ ಬಾಗಿಲನ್ನು ಸಾಕಷ್ಟು ಬಾರಿ ತಟ್ಟಿದ್ದಾರೆ. ಆದರೆ ಪಾಯೆಲ್ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಆಕೆಯ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಇತ್ತೀಚೆಗೆ ಪಾಯೆಲ್ ತನ್ನ ಪತಿಯಿಂದ ವಿಚ್ಛೇದನ ಪಡೆದು ಮಗನ ಜೊತೆ ವಾಸವಿದ್ದರು. ಸದ್ಯ ಪಾಯೆಲ್ ಮೃತಪಟ್ಟಿರುವ ವಿಷಯವನ್ನು ಕೋಲ್ಕತ್ತಾದಲ್ಲಿರುವ ಅವರ ಕುಟುಂಬಕ್ಕೆ ತಿಳಿಸಲಾಗಿದೆ. ಪಾಯೆಲ್ ಬಂಗಾಳಿಯ ‘ಕೇಲೋ’, ‘ಕಾಕ್‍ಪಿಟ್’ ಹಾಗೂ ಹಲವಾರು ಧಾರವಾಹಿಯಲ್ಲಿ ನಟಿಸಿದ್ದಾರೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪ್ರಾಥಮಿಕ ತನಿಖೆ ಪ್ರಕಾರ ಪಾಯೆಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಶಂಕೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದುವೆ ಬಿಟ್ಟು ಮಕ್ಳು ಮಾಡ್ಕೋ ಎಂದು ಸಲ್ಮಾನ್‍ಗೆ ನಟಿ ಸಲಹೆ: ವಿಡಿಯೋ

    ಮದುವೆ ಬಿಟ್ಟು ಮಕ್ಳು ಮಾಡ್ಕೋ ಎಂದು ಸಲ್ಮಾನ್‍ಗೆ ನಟಿ ಸಲಹೆ: ವಿಡಿಯೋ

    ಮುಂಬೈ: ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬಾಚ್ಯೂಲರ್ ಸಲ್ಮಾನ್ ಖಾನ್ ಅವರಿಗೆ ನಟಿ ರಾಣಿ ಮುಖರ್ಜಿ ಮದುವೆ ಬಿಟ್ಟು ಮಕ್ಳು ಮಾಡಿಕೋ ಎಂದು ಕಾರ್ಯಕ್ರಮವೊಂದರಲ್ಲಿ ಸಲಹೆ ನೀಡಿದ್ದಾರೆ.

    ಸಲ್ಮಾನ್ ಖಾನ್ ಖಾಸಗಿ ವಾಹಿನಿಯಲ್ಲಿ ‘ದಸ್ ಕಾ ದಮ್’ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಈ ಕಾರ್ಯಕ್ರಮದ ಕೊನೆಯ ಎಪಿಸೋಡ್ ಅಂದರೆ ಗ್ರಾಂಡ್ ಫಿನಾಲೆಯಲ್ಲಿ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಹಾಗೂ ನಟಿ ರಾಣಿ ಮುಖರ್ಜಿ ಆಗಮಿಸಿದ್ದರು.

    ಈ ಕಾರ್ಯಕ್ರಮದ ಪ್ರೋಮೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವಿಡಿಯೋದಲ್ಲಿ ನಟಿ ರಾಣಿ ಮುಖರ್ಜಿ ತನ್ನ ಗೆಳೆಯ ಹಾಗೂ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್‍ಗೆ ಮದುವೆ ಬಿಟ್ಟು ಮಕ್ಕಳು ಮಾಡಿಕೋ ಎಂದು ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲೇ ಸಲ್ಮಾನ್‍ಗೆ ಸಲಹೆ ನೀಡಿದ್ದಾರೆ.

    ಸಲ್ಮಾನ್ ಖಾನ್ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ಹಾಗೂ ರಾಣಿ ಮುಖರ್ಜಿ ಭಾಗವಹಿಸಿದ್ದು, ಈ ಎಪಿಸೋಡ್ ಜನರಿಗೆ ಸಾಕಷ್ಟು ಮನರಂಜನೆ ನೀಡಲಿದೆ. ಈ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ಹಾಗೂ ರಾಣಿ ಮುಖರ್ಜಿ ಹೊರತುಪಡಿಸಿ ಹಾಸ್ಯನಟ ಸುನೀಲ್ ಗ್ರೋವರ್ ಕೂಡ ಭಾಗವಹಿಸಿದ್ದಾರೆ.

    ಈ ಹಿಂದೆ ರಾಣಿ ಮುಖರ್ಜಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್-11 ಶೋನಲ್ಲಿ ಭಾಗವಹಿಸಿದ್ದರು. ಆ ಸಮಯದಲೂ ಕೂಡ ರಾಣಿ ಮುಖರ್ಜಿ ತನ್ನ ಗೆಳೆಯ ಸಲ್ಮಾನ್ ಖಾನ್‍ಗೆ ಮದುವೆ ಬಿಟ್ಟು ಮಕ್ಕಳು ಮಾಡಿಕೋ ಎಂದು ಸಲಹೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡದ ಹುಡುಗಿಯರಿಗೆ ಒಡೆಯನಿಂದ ಸ್ಪೆಷಲ್ ಆಫರ್

    ಕನ್ನಡದ ಹುಡುಗಿಯರಿಗೆ ಒಡೆಯನಿಂದ ಸ್ಪೆಷಲ್ ಆಫರ್

    ಬೆಂಗಳೂರು: `ಒಡೆಯ’ ಚಿತ್ರತಂಡ ಕನ್ನಡದ ಹುಡುಗಿಯರಿಗೆ ಒಂದು ವಿಶೇಷ ಆಫರ್ ನೀಡುವ ಮೂಲಕ ಹೊಸಬರಿಗೆ ನಟ ದರ್ಶನ್ ಜೊತೆ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದೆ.

    ದರ್ಶನ್ ಅವರ ನಟನೆಯ 52ನೇ ಚಿತ್ರ `ಒಡೆಯ’. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಈ ಚಿತ್ರಕ್ಕಾಗಿ ನಟಿಯ ಆಯ್ಕೆ ನಡೆಯುತ್ತಿದೆ. ಕಳೆದ ಒಂದು ವಾರದಿಂದ ನಟಿ ಆಯ್ಕೆ ಪ್ರಕ್ರಿಯೆಯಲ್ಲಿ ಚಿತ್ರತಂಡ ತೊಡಗಿದೆ. ಆದರೆ ಇನ್ನು ದರ್ಶನ್ ಜೊತೆ ಅಭಿನಯಿಸುವ ನಾಯಕಿ ಅಂತಿಮವಾಗಿಲ್ಲ.

    ಈ ಸಿನಿಮಾ ಬಣ್ಣದ ಲೋಕದ ಕನಸು ಹೊತ್ತು ಚಿಕ್ಕದೊಂದು ಅವಕಾಶಕ್ಕಾಗಿ ಕಾಯುತ್ತಿರುವ ಹುಡುಗಿಯರಿಗಾಗಿ ಒಂದು ಅವಕಾಶ ನೀಡಿದೆ. ಅಂದರೆ ಈ ಸಿನಿಮಾದಲ್ಲಿ ಅಭಿನಯಿಸಲು ನಮ್ಮ ಕನ್ನಡ ಮಣ್ಣಿನ ಹುಡುಗಿಯೇ ಆಗಿರಬೇಕು. ಅಷ್ಟೇ ಅಲ್ಲದೇ ಈ ಸಿನಿಮಾಗೆ ವರ್ಕ್ ಮಾಡುವ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಕನ್ನಡದವರೇ ಆಗಿರಬೇಕು ಅಂತ ದರ್ಶನ್ ಅವರು ಹೇಳಿದ್ದಾರಂತೆ.

    ಹೌದು, ದುಡ್ಡು ಹಾಕೋರು ಕನ್ನಡದವರು, ಸಿನಿಮಾನ ನಿರ್ಮಾಣ ಮಾಡುವವರು ಕನ್ನಡದವರು. ಆದ್ದರಿಂದ ನಾವ್ಯಾಕೆ ಪರಭಾಷಾ ನಟಿಯರಿಗೆ ಮಣೆ ಹಾಕಬೇಕು ಅನ್ನೋದು ದರ್ಶನ್ ಮೊದಲ ಪ್ರಶ್ನೆಯಾಗಿದ್ದು, ತಮ್ಮ ಜೊತೆ ತೆರೆ ಹಂಚಿಕೊಳ್ಳುವರು ಕನ್ನಡದ ಹುಡುಗಿ ಆಗಿರಬೇಕು ಅಂತ ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಬಹುತೇಕ ನಟಿಯರು ಕನ್ನಡದವರಾಗಿದ್ದು, ರಮ್ಯಾ, ರಕ್ಷಿತಾ, ರಾಧಿಕಾರಿಂದ ಹಿಡಿದು ಪ್ರಣೀತಾ, ರಚಿತಾವರೆಗೂ ಹಲವು ಕನ್ನಡದ ಬೆಡಗಿಯರು ದರ್ಶನ್ ಜೊತೆ ತೆರೆಹಂಚಿಕೊಂಡು ಸ್ಟಾರ್ ಹೀರೋಯಿನ್‍ಗಳಾಗಿ ಮಿಂಚಿದ್ದಾರೆ. ಇದೀಗ ಮತ್ತೊಬ್ಬ ಕನ್ನಡತಿಗೆ ದಚ್ಚು ಜೊತೆ ಅಭಿನಯಿಸಲು ಅವಕಾಶ ಸಿಗುತ್ತಿದೆ.

    `ಒಡೆಯ’ ಸಿನಿಮಾ ಬಿಗ್ ಬಜೆಟ್‍ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಪ್ರತಿಯೊಂದು ಸೀನಿನಲ್ಲೂ 10-15 ಜನ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾಶೆಣೈ, ಪಂಕಜ್, ಯಶಸ್ ಸೂರ್ಯ, ಶರತ್ ಲೋಹಿತಾಶ್ವ, ಅವಿನಾಶ್, ಸೇರಿದಂತೆ ಹಲವರನ್ನ ಚಿತ್ರಕ್ಕೆ ಆಯ್ಕೆಮಾಡಲಾಗಿದೆ.

    `ಒಡೆಯ’ ಸಿನಿಮಾವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀಧರ್ ದರ್ಶನ್ ಜೊತೆಗೆ `ಬುಲ್ ಬುಲ್’ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದ ನಂತರ ಮತ್ತೆ ಈ ಜೋಡಿ ಒಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಳ್ಳೆ ಚಾನ್ಸ್ ಸಿಗುತ್ತೆ, ಪೂಜೆ ನಡೆಸಿ, ಮಗು ಬಲಿ ಕೊಡ್ಬೇಕು- ನಟಿಗೆ ಸಹ ನಿರ್ಮಾಪಕನಿಂದ ಮೋಸ

    ಒಳ್ಳೆ ಚಾನ್ಸ್ ಸಿಗುತ್ತೆ, ಪೂಜೆ ನಡೆಸಿ, ಮಗು ಬಲಿ ಕೊಡ್ಬೇಕು- ನಟಿಗೆ ಸಹ ನಿರ್ಮಾಪಕನಿಂದ ಮೋಸ

    ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಸಹ ನಿರ್ಮಾಪಕ ಸಹನಟಿಗೆ ಲಕ್ಷ ಲಕ್ಷ ಹಣ ಪಂಗನಾಮ ಹಾಕಿರುವ ಆರೋಪ ಕೇಳಿ ಬರುತಿದೆ.

    ನಟಿ ಚೇತನಾರಿಗೆ ಸಹ ನಿರ್ಮಾಪಕ ನಾಗೇಶ್ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಮಂಜಿನಹನಿ” ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅಭಿನಯಿಸಿದ್ದ ಚಲನಚಿತ್ರವಾಗಿದ್ದು, ಈ ಚಿತ್ರವನ್ನು ಸ್ವತಃ ರವಿಚಂದ್ರನ್ ಅವರೇ ನಟಿಸಿ, ನಿರ್ದೇಶಿಸುತ್ತಿದ್ದರು.

    ಮೊದಲಿಗೆ ಸಂದೇಶ್ ನಾಗರಾಜ್ ಮಂಜಿನಹನಿ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ನಂತರ ಕಾರಣಾಂತರಗಳಿಂದ ಚಿತ್ರದಿಂದ ಸಂದೇಶ್ ನಾಗರಾಜ್ ಹೊರಬಂದಿದ್ದರು. 2013ರಲ್ಲಿ ಮಂಜಿನಹನಿ ಸಿನಿಮಾ ಸೆಟ್ಟೇರಿತ್ತು. ನಂತರ ಆರ್ಥಿಕ ಸಮಸ್ಯೆಗಳಿಂದ ಶೂಟಿಂಗ್ ಶುರುವಾಗದೇ ಚಿತ್ರ ನಿಂತು ಹೋಗಿತ್ತು. ಸಂದೇಶ್ ನಾಗರಾಜ್ ರಿಂದ ಸಿನಿಮಾ ಖರೀದಿಸಿ ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ಮಾಣಕ್ಕೆ ಮುಂದಾಗಿದ್ದರು. 2015ರಲ್ಲಿ ರವಿಚಂದ್ರನ್ ನಿರ್ಮಾಣದಲ್ಲಿ ಮತ್ತೆ ಮಂಜಿನಹನಿ ಚಿತ್ರೀಕರಣ ಶುರುವಾಯಿತು. ಈ ವೇಳೆ ಹೊಸಕೋಟೆ ಮೂಲದ ನಾಗೇಶ್ ಸಿನಿಮಾಗೆ ಸಹ ನಿರ್ಮಾಪಕ ಆಗಿದ್ದಾರೆ.

    ನಟಿ ಚೇತನಾಗೆ ಮಂಜಿನಹನಿ ಸಿನಿಮಾದಲ್ಲಿ ನಾಯಕನ ತಂಗಿಯ ಪಾತ್ರಕ್ಕೆ ನಾಗೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ನಟಿ ಚೇತನಾಗೂ ಸಹ ನಿರ್ಮಾಪಕ ನಾಗೇಶ್‍ಗೂ ಪರಿಚಯವಾಗಿತ್ತು. ಕೆಲ ದಿನಗಳ ನಂತರ ಮತ್ತೆ ಮಂಜಿನಹನಿ ಸಿನಿಮಾದ ಚಿತ್ರೀಕರಣ ನಿಂತುಹೋಯಿತು. ಈ ವೇಳೆ ನಾಗೇಶ್, ನಟಿ ಚೇತನಾ ನಂಬರ್ ಗೆ ಮೆಸೇಜ್ ಮಾಡಲು ಶುರುಮಾಡಿದ. ಮನು ಎಂಬ ಹೆಸರಿನಲ್ಲಿ ನಾಗೇಶ್ ನಟಿಗೆ ವಾಟ್ಸಾಪ್‍ನಲ್ಲಿ ಮೆಸೇಜ್ ಮಾಡಿ, ನೀನು ಸಿನಿಮಾರಂಗದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಯಬೇಕು. ನೀನು ಒಳ್ಳೆ ಹೆಸರು ಮಾಡಬೇಕಾದರೆ ಗೌರಿ ಎಂಬಾಕೆಯನ್ನು ಭೇಟಿಯಾಗು ಎಂದು ಹೇಳಿದ್ದನು.

    ಮೊಬೈಲಿನಲ್ಲಿ ಗೌರಿಯೊಂದಿಗೆ ನಟಿ ಚೇತನ ಮಾತನಾಡಿ, ನಿನ್ನ ಹೆಸರಲ್ಲಿ ಪೂಜೆ ಮಾಡಿಸಬೇಕು. ನಿನಗೆ ದೋಷವಿದೆ. ಪೂಜೆ ಮಾಡಿ ಮಗುವನ್ನು ಬಲಿ ಕೊಡಬೇಕು ಎಂದು ಹೇಳಿದ್ದಳು. ಅಲ್ಲದೇ ನಾಗೇಶ್ ಕೂಡ ನಿನ್ನ ಹೆಸರಲ್ಲಿ ನಾವು ಪೂಜೆ ಮಾಡ್ತಿವಿ, ನಿನಗೆ ಒಳ್ಳೆ ಹೆಸರು ಬರತ್ತೆ, ಒಳ್ಳೆ ಅವಕಾಶಗಳು ಬರತ್ತೆ ಎಂದು ನಂಬಿಸಿದ್ದನು. ನಾಗೇಶ್ ಕಳೆದ 3 ವರ್ಷಗಳಿಂದ ನಟಿಯಿಂದ ಸುಮಾರು ಎಂಟೂವರೆ ಲಕ್ಷ ಹಣ ಪೀಕಿದ್ದಾನೆ.

    ನಾಗೇಶ್ ಕಳೆದ ಆಗಸ್ಟ್ 1ರಂದು ವೀಣಾ ಅಕೌಂಟ್ ನಂಬರ್ ಗೆ ಮತ್ತೆ 50 ಸಾವಿರ ಜಮಾ ಮಾಡಿಸಿಕೊಂಡಿದ್ದಾನೆ. ನಂತರ ನಟಿಯ ಫೋನ್ ಕರೆಗೂ ಸಿಗದೇ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಮೋಸ ಹೋದ ಸಹನಟಿ ಚೇತನಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಸಹ ನಿರ್ಮಾಪಕ ನಾಗೇಶ್ ಹಾಗೂ ಗೌರಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತನ್ನ ನೆಚ್ಚಿನ ನಟಿ ಯಾರೆಂದು ಹೇಳಿ ಮುಗುಳ್ನಕ್ಕ ಸಲ್ಮಾನ್ ಖಾನ್

    ತನ್ನ ನೆಚ್ಚಿನ ನಟಿ ಯಾರೆಂದು ಹೇಳಿ ಮುಗುಳ್ನಕ್ಕ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬ್ಯೂಸಿ ಆಗಿದ್ದರೂ, ಕಿರುತೆರೆಯಲ್ಲಿಯೂ ರಿಯಾಲಿಟಿ ಶೋಗಳ ನಿರೂಪಣೆಯನ್ನು ಮಾಡುತ್ತಿದ್ದಾರೆ. ಖಾಸಗಿ ಚಾನೆಲ್ ನ ಕಾರ್ಯಕ್ರಮದ ನಿರೂಪಣೆ ವೇಳೆ ಸಲ್ಮಾನ್ ಸದ್ಯದ ತಮ್ಮ ನೆಚ್ಚಿನ ನಟಿ ಯಾರೆಂದು ಹೇಳಿ ನಾಚಿ ನೀರಾಗಿದ್ದಾರೆ.

    ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ನಟ ಧರ್ಮೇಂದ್ರ ಮತ್ತು ಪುತ್ರ ಬಾಬಿ ಡಿಯೋಲ್ ಆಗಮಿಸಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಬಾಬಿ ಕೆಲವ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಈ ಹಿಂದೆ ಮತ್ತು ಇಂದು ನಿಮ್ಮ ನೆಚ್ಚಿನ ನಟಿ ಯಾರೆಂದು ಪ್ರಶ್ನಿಸಿದರು. ಮಧುಬಾಲಾ ನನ್ನ ನೆಚ್ಚಿನ ನಟಿ, ಇಂದು ಎಲ್ಲರಿಗೂ ಇಷ್ಟವಾಗುತ್ತಿರುವ ಕತ್ರಿನಾ ಕೈಫ್ ಅಚ್ಚುಮೆಚ್ಚಿನ ನಟಿ ಎಂದು ಹೇಳಿ ಮುಗಳ್ನಕ್ಕರು.

    ಸಲ್ಮಾನ್ ಮತ್ತು ಕತ್ರಿನಾ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಬಹಳ ವರ್ಷಗಳ ಹಿಂದೆ ಹರಿದಾಡುತ್ತಿತ್ತು. ವೈಯಕ್ತಿಕ ಕಾರಣಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಬ್ರೇಕಪ್ ಬಳಿಕ ಸಲ್ಮಾನ್ ಹೆಸರು ರೋಮ್ಯಾನಿಯಾ ಬೆಡಗಿ ಲುಲಿಯಾ ವಂಟೂರ್ ಜೊತೆ ಕೇಳ ಬರತೊಡಗಿತು. ಇತ್ತ ಕತ್ರಿನಾ ಹೆಸರು ಸಹ ರಣ್‍ಬೀರ್ ಕಪೂರ್ ಜೊತೆ ಕೇಳಿ ಬಂತು. ಇದಕ್ಕೆ ಸಾಕ್ಷಿ ಎಂಬಂತೆ ಕತ್ರಿನಾ ಮತ್ತು ರಣ್‍ಬೀರ್ ನಡುವಿನ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ರೋಮ್ಯಾನಿಯಾ ತೊರೆದು ಭಾರತಕ್ಕೆ ಬಂದಿರುವ ಲುಲಿಯಾ ಸಹ ಸಲ್ಮಾನ್ ಮತ್ತು ಕುಟುಂಬಸ್ಥರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

    ಬ್ರೇಕಪ್ ಬಳಿಕ ಕತ್ರಿನಾ ‘ಬಾಡಿಗಾರ್ಡ್’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್ ಜೊತೆ ಹೆಜ್ಜೆ ಹಾಕಿದ್ದರು. ಬಾಡಿಗಾರ್ಡ್ ನಂತರ ‘ಏಕ್ ಥಾ ಟೈಗರ್’ ನಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದರು. ಸಿನಿಮಾ ಸಹ ಬಾಕ್ಸ್ ಆಫೀಸ್ ನ್ನು ಕೊಳ್ಳೆ ಹೊಡೆದಿತ್ತು. ಇದಾದ ಬಳಿಕ ಸಲ್ಮಾನ್ ಮತ್ತು ಕತ್ರಿನಾ ಹತ್ತಿರ ಆಗುತ್ತಿದ್ದಾರೆಂದು ಎಂಬ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಹರಿದಾಡಲಾರಂಭಿಸಿತು. ಏಕ್ ಥಾ ಟೈಗರ್ ಸೂಪರ್ ಹಿಟ್ ಆದ ಬಳಿಕ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಕತ್ರಿನಾ ಜೊತೆಯಾದ್ರು.

    ಟೈಗರ್ ಜಿಂದಾ ಹೈ ಚಿತ್ರದ ಚಿತ್ರೀಕರಣ ವಿದೇಶದಲ್ಲಿ ನಡೆದಿದ್ದರಿಂದ ಸಲ್ಮಾನ್ ಮತ್ತು ಕತ್ರಿನಾ ಖಾಸಗಿಯಾಗಿ ಸಾಕಷ್ಟು ಸಮಯ ಜೊತೆಯಾಗಿ ಕಳೆದಿದ್ದರಿಂದ ಇಬ್ಬರ ನಡುವಿನ ಮುನಿಸು ಮಾಯವಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಲುಲಿಯಾ ವಂಟೂರ್ ದೂರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಲ್ಮಾನ್ ಮತ್ತು ಕತ್ರಿನಾ ಮತ್ತೊಮ್ಮೆ ‘ಭಾರತ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಭಾರತ್ ಮುಂದಿನ ವರ್ಷ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಯ ಗುಂಡೇಟಿಗೆ ಖ್ಯಾತ ನಟಿ, ಗಾಯಕಿ ಬಲಿ!

    ಪತಿಯ ಗುಂಡೇಟಿಗೆ ಖ್ಯಾತ ನಟಿ, ಗಾಯಕಿ ಬಲಿ!

    ಇಸ್ಲಾಮಾಬಾದ್: ಪತಿಯ ಗುಂಡೇಟಿಗೆ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಬಲಿಯಾದ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಖ್ವಾದಲ್ಲಿ ನಡೆದಿದೆ.

    ರೇಷ್ಮಾ ಪತಿಯ ನಾಲ್ಕನೇ ಪತ್ನಿಯಾಗಿದ್ದು, ತನ್ನ ಸಹೋದರನ ಜೊತೆ ಹಾಕಿಮ್‍ಬಾದ್‍ನಲ್ಲಿ ವಾಸಿಸುತ್ತಿದ್ದಳು. ಅಲ್ಲಿಗೆ ಬಂದ ಪತಿ ರೇಷ್ಮಾ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ವರದಿಯಾಗಿದೆ.

    ರೇಷ್ಮಾ ಹಾಗೂ ಪತಿಯ ನಡುವೆ ಮೈಮನಸ್ಸು ಉಂಟಾಗಿತ್ತು. ಈ ಕಾರಣದಿಂದಾಗಿ ರೇಷ್ಮಾ ತನ್ನ ಸಹೋದರನ ಮನೆಯಲ್ಲೇ ವಾಸಿಸುತ್ತಿದ್ದಳು. ನಂತರ ಅಲ್ಲಿಗೆ ಬಂದ ಪತಿ ರೇಷ್ಮಾ ಮೇಲೆ ಗುಂಡು ಹಾರಿಸಿದ್ದಾನೆ. ಅಲ್ಲದೇ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

    ರೇಷ್ಮಾ ‘ಪಾಶ್ತೋ’ ಹಾಡಿನಿಂದ ಹೆಚ್ಚು ಜನಪ್ರಿಯಗೊಂಡಿದ್ದು, ‘ಜೋಬಲ್ ಗೋಲುನಾ’ ಚಿತ್ರದಲ್ಲಿ ನಟಿಸಿದ್ದರು. ಪಾಕಿಸ್ತಾನದ ಖೈಬರ್ ಫಕ್ತುಂಖ್ವಾದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆಯುತ್ತಿರುವ ಹಿಂಸಾಚಾರದ 15ನೇ ಪ್ರಕರಣ ಇದಾಗಿದ್ದು, ಈ ಹಿಂದೆ ಫೆಬ್ರವರಿ 3 ರಂದು ವೇದಿಕೆಯ ನಟಿ ಸನ್ಬುಲ್ ರನ್ನು ಗುಂಡು ಹಾರಿಸಲಾಯಿತ್ತು.

     

  • ಮೈಸೂರು ಅರಮನೆಯೊಳಗೆ ಫೋಟೋ ಶೂಟ್ ಮಾಡಿಸಿಕೊಂಡ ನಿಧಿ ಸುಬ್ಬಯ್ಯ!

    ಮೈಸೂರು ಅರಮನೆಯೊಳಗೆ ಫೋಟೋ ಶೂಟ್ ಮಾಡಿಸಿಕೊಂಡ ನಿಧಿ ಸುಬ್ಬಯ್ಯ!

    ಬೆಂಗಳೂರು/ಮೈಸೂರು: ಸ್ಯಾಂಡಲ್ ವುಡ್ ನಟಿ ನಿಧಿ ಸುಬ್ಬಯ್ಯ ಅವರು ಮೈಸೂರು ಅರಮನೆಯೊಳಗೆ ಫೋಟೋ ತೆಗೆಸಿಕೊಂಡು ಇದೀಗ ವಿವಾದಕ್ಕೀಡಾಗಿದ್ದಾರೆ.

    ದರ್ಬಾರ್ ಸಭಾಂಗಣದಲ್ಲಿ ಕುಳಿತು ನಟಿ ನಿಧಿ ಸುಬ್ಬಯ್ಯ ಫೊಟೋಗೆ ಪೋಸ್ ಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ ನಿಷೇಧಿತ ಪ್ರದೇಶದಲ್ಲಿ ತೆಗೆಸಿಕೊಂಡಿರುವ ಫೋಟೋವನ್ನು ತಮ್ಮ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ನಟಿ ತಮ್ಮ ಇನ್ ಸ್ಟಾಗ್ರಾಂನಲ್ಲೊ ಫೋಟೋ ಹಾಕುತ್ತಿದ್ದಂತೆಯೇ ಫಾಲೋವರ್ಸ್ ಎಚ್ಚರಿಕೆ ಕೂಡ ನೀಡಿದ್ದಾರೆ. ಇದು ವಿವಾದ ಸೃಷ್ಟಿ ಮಾಡುವ ಫೋಟೋ, ಈ ಜಾಗದಲ್ಲಿ ಫೋಟೋ ನಿಷೇಧಿಸಿದೆ ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.

    ಈ ಹಿಂದೆಯೂ ಕೂಡ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪುತ್ರನ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅರಮನೆ ಆಡಳಿತ ಮಂಡಳಿಗೆ ಸೂಪರ್ ಸ್ಟಾರ್ ರಜನೀಕಾಂತ್ ಲಿಂಗಾ ಸಿನಿಮಾ ಶೂಟಿಂಗ್ ಮನವಿ ಮಾಡಿದ್ರು ಅವಕಾಶ ಕೊಟ್ಟಿರಲಿಲ್ಲ. ಒಟ್ಟಿನಲ್ಲಿ ಮೈಸೂರು ಅರಮನೆಯಲ್ಲಿ ಫೋಟೊ ಶೂಟ್ ಗೆ ನಿಷೇಧವಿದೆ. ಹೀಗಾಗಿ ಜನಸಾಮಾನ್ಯರಿಗೆ ಇಲ್ಲದ ಅವಕಾಶವನ್ನು ನಟಿಗೆ ನಿಡಿದ್ದಾರಾ? ಮೈಸೂರು ಅರಮನೆ ಆಡಳಿತ ಮಂಡಳಿಗೆ ಗೊತ್ತಿದ್ರು ಸುಮ್ಮನಿದ್ರಾ ಎಂಬಂತಹ ಪ್ರಶ್ನೆಗಳು ಎದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=ANMeYM-DFo0

    https://www.youtube.com/watch?v=goaJUdW4YmY

    https://www.youtube.com/watch?v=QihwQO5Cg5c

  • ಸ್ಯಾಂಡಲ್‍ವುಡ್ ನಿರ್ದೇಶಕನಿಂದ ಹಿರಿಯ ನಟಿಗೆ ದೋಖಾ!

    ಸ್ಯಾಂಡಲ್‍ವುಡ್ ನಿರ್ದೇಶಕನಿಂದ ಹಿರಿಯ ನಟಿಗೆ ದೋಖಾ!

    ಬೆಂಗಳೂರು: ಕಿರುತೆರೆಯ ಹಿರಿಯ ನಟಿ ಮಂಜುಳಮ್ಮ ಅವರಿಗೆ ನಿರ್ದೇಶಕ ನವೀನ್ ರೈ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅವಕಾಶಗಳನ್ನು ಕೊಡಿಸುವದಾಗಿ ಹೇಳಿ ನವೀನ್ ರೈ ಲಕ್ಷಾಂತರ ರೂಪಾಯಿಯನ್ನ ಪಡೆದುಕೊಂಡಿದ್ದರು. ಆದರೆ ನವೀನ್ ರೈ ಯಾವುದೇ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅವಕಾಶಗಳನ್ನ ಕೊಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜುಳಮ್ಮ ತಾವು ನೀಡಿದ ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಕೆಲ ಹುಡುಗರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮಂಜುಳಮ್ಮ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಲ್ಲಿನ ವೀಣೆ ಧಾರಾವಾಹಿ ಶೂಟಿಂಗ್ ವೇಳೆ ಮಂಜುಳಮ್ಮ ಅವರಿಗೆ ನವೀನ್ ರೈ ಪರಿಚಯ ಮಾಡಿಕೊಂಡಿದ್ದನು. ಚಂದನವನದಲ್ಲಿ ತನಗೆ ಎಲ್ಲರೂ ಪರಿಚಯ ಸ್ಟಾರ್ ನಟರ ಸಿನಿಮಾದಲ್ಲಿ ಪೋಷಕ ಪಾತ್ರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಒಡವೆ ಹಾಗು 15 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ ಎಂದು ಮಂಜುಳಮ್ಮ ಆರೋಪಿಸುತ್ತಿದ್ದಾರೆ.