Tag: actress

  • ತಾಪ್ಸಿ ಪನ್ನು ಹೇಳಿದ ದೇಹದ ಭಾಗದ ಅರ್ಥ ತಿಳಿಯಲು ಗೂಗಲ್ ಮೊರೆ ಹೋದ್ರು!

    ತಾಪ್ಸಿ ಪನ್ನು ಹೇಳಿದ ದೇಹದ ಭಾಗದ ಅರ್ಥ ತಿಳಿಯಲು ಗೂಗಲ್ ಮೊರೆ ಹೋದ್ರು!

    – ನಿನ್ನ ಬಾಡಿ ಪಾರ್ಟ್ಸ್ ನಂಗಿಷ್ಟ ಎಂದವನಿಗೆ ತಾಪ್ಸಿ ತಿರುಗೇಟು

    ಮುಂಬೈ: ದಕ್ಷಿಣ ಭಾರತ ಚಿತ್ರರಂಗವಲ್ಲದೇ, ಬಾಲಿವುಡ್ ಕ್ಷೇತ್ರದಲ್ಲೂ ಖ್ಯಾತಿ ಪಡೆದಿರುವ ಬಹುಭಾಷಾ ನಟಿ ತಾಪ್ಸಿ ಪನ್ನು ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದ ವ್ಯಕ್ತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡಿದ್ದಾರೆ. ತಿರುಗೇಟು ನೀಡುವ ವೇಳೆ ಅವರು ಬಳಸಿದ ಪದದ ಅರ್ಥ ತಿಳಿಯಲು ಜನ ಗೂಗಲ್ ಮೊರೆ ಹೋಗಿದ್ದಾರೆ.

    ಸದಾ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿರುವ ತಾಪ್ಸಿ ಅವರಿಗೆ, ‘ನಿನ್ನ ಬಾಡಿ ಪಾರ್ಟ್ಸ್ ನಂಗಿಷ್ಟ’ ಎಂದು ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದ. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ತಾಪ್ಸಿ ‘ವಾವ್ ಐ ಲೈಕ್ ದೆಮ್ ಟೂ, ನಿಮ್ಮ ಇಷ್ಟದ ಭಾಗ ಯಾವುದು? ನನಗೆ cerebrum ಇಷ್ಟ’ ಎಂದು ರೀ ಟ್ವೀಟ್ ಮಾಡಿದ್ದರು.

    ಇತ್ತ ತಾಪ್ಸಿ ಅವರ ಖಡಕ್ ಉತ್ತರವನ್ನು ಕಂಡು ಹಲವು ಮಂದಿ ಶಾಕ್ ಆಗಿದ್ದರೆ, ಮತ್ತು ಕೆಲವರು ಸೆರೆಬ್ರಮ್ ಎಂಬ ಪದದ ಅರ್ಥ ತಿಳಿಯದೇ ಗೂಗಲ್ ಮಾಡಿದ್ದಾರೆ. ಸೋಮವಾರ ಭಾರತೀಯರು ಗೂಗಲ್‍ನಲ್ಲಿ ಹೆಚ್ಚು ಹುಡುಕಾಟ ನಡೆಸಿದ ಪದಗಳ ಪಟ್ಟಿಯಲ್ಲಿ ಸೆರೆಬ್ರಮ್ ಕೂಡ ಸ್ಥಾನ ಪಡೆದಿದೆ.

    ಗೂಗಲ್ ಸರ್ಚ್ ನಲ್ಲಿ ಸೆರೆಬ್ರಮ್ ಪದದ ಹುಡುಕಾಟ ನಡೆಸಿದ ವೇಳೆ ಉಂಟಾಗಿರುವ ಬದಲಾವಣೆಯ ಫೋಟೋವನ್ನು ಟ್ವೀಟ್ ಮಾಡಿರುವ ರಾಹುಲ್ ಎಂಬವರು ಹೆಚ್ಚಿನ ಜನರು ಈ ಪದದ ಅರ್ಥ ತಿಳಿಯಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ.

    ಅಂದಹಾಗೆ ‘ಸೆರೆಬ್ರಮ್’ ಮೆದುಳಿನಲ್ಲಿ ಅತ್ಯಂತ ಪ್ರಮುಖ ಭಾಗವಾಗಿದ್ದು, ಇದನ್ನು ಕನ್ನಡದಲ್ಲಿ ಮುಮ್ಮಿದುಳು, ಪ್ರಧಾನ ಮೆದುಳು ಎಂದು ಕರೆಯುತ್ತಾರೆ. ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದ ವ್ಯಕ್ತಿಗೆ ತಾಪ್ಸಿ ಸೂಕ್ತವಾಗಿಯೇ ಉತ್ತರಿಸಿ ತಿರುಗೇಟು ನೀಡಿದ್ದು, ತಾಪ್ಸಿ ಅವರ ಬುದ್ಧಿವಂತಿಕೆ ಉತ್ತರ ಕಂಡು ಟ್ವೀಟಿಗರು ಮೆಚ್ಚಿಕೊಂಡಿದ್ದಾರೆ.

    ಈ ಹಿಂದೆಯೂ ತಾಪ್ಸಿ ಹಲವು ಬಾರಿ ತಮ್ಮ ಖಡಕ್ ಟ್ವೀಟ್‍ಗಳಿಂದ ಎದುರಾಳಿಗಳಿಗೆ ತಿರುಗೇಟು ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ  ಟ್ರೋಲ್ ಮಾಡಿದವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ‘ತಾಪ್ಸಿ ಬಾಲಿವುಡ್ ಕಂಡ ಅತ್ಯಂತ ಕೆಟ್ಟ ನಟಿ. ಆಕೆ ಎರಡು ಮೂರು ಚಿತ್ರಗಳ ನಂತರ ಬಾಲಿವುಡ್ ನಲ್ಲಿ ಉಳಿಯುವುದಿಲ್ಲ’ ಟ್ರೋಲ್ ಮಾಡಿದ್ದ ವ್ಯಕ್ತಿಗೆ ತಿರುಗೇಟು ನೀಡಿದ್ದ ತಾಪ್ಸಿ, ನಾನು ಈಗಾಗಲೇ ಮೂರು ಚಿತ್ರಗಳಲ್ಲಿ ನಟಿಸಿದ್ದು, ಇನ್ನು ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾಗಿ ಹೇಳಿದ್ದರು.

    https://twitter.com/akshit4u/status/1075035119734280192

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

    ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸಿದ್ದೇನೆ: ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನ ಮನಸಾರೆ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಅವರು ತನ್ನ ದೊಡ್ಡ ಜವಾಬ್ದಾರಿಯೊಂದನ್ನು ನಿಭಾಯಿಸಲು ದಿಗಂತ್ ಗೆ ಹಸ್ತಾಂತರಿಸಿದ್ದೇನೆ ಅಂತ ಹೇಳಿದ್ದಾರೆ.

    ದಿಗಂತ್- ಐಂದ್ರಿತಾ ಮದುವೆಯ ಬಗ್ಗೆ ಟ್ವೀಟ್ ಮಾಡಿದ ತುಪ್ಪದ ಬೆಡಗಿ, ನಾನು ಯಾವತ್ತೂ ನಿನ್ನ ಹಿಂದೆ ಇರುತ್ತೇನೆ ಬೇಬಿ. ಇಂದು ನೀನು ನಿನ್ನ ಜೀವನದ ಒಂದು ವಿಶೇಷ ಘಟ್ಟಕ್ಕೆ ಕಾಲಿಡುತ್ತಿದ್ದಿಯಾ. ಇದಕ್ಕೆ ನಾನು ತುಂಬು ಹೃದಯದಿಂದ ಶುಭ ಕೋರುತ್ತಿದ್ದೇನೆ ಅಂತ ತಿಳಿಸಿದ್ದಾರೆ.

    ಅಲ್ಲದೇ ನೀನೊಬ್ಬಳು ಉತ್ತಮ ಮಗಳು, ನಟಿ ಹಾಗೂ ಇಂದಿನಿಂದ ಅತ್ಯುತ್ತಮ ಪತ್ನಿಯಾಗಲಿದ್ದಿ. ಒಟ್ಟಿನಲ್ಲಿ ಇಂದಿನವರೆಗೆ ನಾನು ನಿನ್ನ ಬಾಡಿಗಾರ್ಡ್ ಆಗಿದ್ದೆ. ಆದ್ರೆ ಇಂದು ನನ್ನ ಜವಾಬ್ದಾರಿಯನ್ನು ದಿಗಂತ್ ಗೆ ಹಸ್ತಾಂತರಿಸುತ್ತಿದ್ದೇನೆ ಅಂತ ಬರೆದುಕೊಂಡಿದ್ದಾರೆ.

    ಸ್ಯಾಂಡಲ್‍ವುಡ್‍ನ ಹಾಟ್ ಪೇರ್‍ಗಳ ಸಾಲಿನಲ್ಲಿ ಮೊದಲಿಗೆ ಕೇಳಿ ಬರುವ ಹೆಸರು ದೂದ್‍ಪೇಡಾ ನಟ ದಿಗಂತ್ ಹಾಗೂ ಬೆಂಗಾಲಿ ಚೆಲುವೆ ಐಂದ್ರಿತಾ ರೇ. `ಮನಸಾರೆ’ ಅವರು ಇಷ್ಟಪಟ್ಟು ಲವ್ ಮಾಡಲು ಆರಂಭಿಸಿದ ಬರೋಬ್ಬರಿ 8 ವರ್ಷದ ಬಳಿಕ ಮದುವೆಯಾಗುತ್ತಿದ್ದಾರೆ.

    ನಂದಿಬೆಟ್ಟದ ತಪ್ಪಲಲ್ಲಿರುವ ಡಿಸ್ಕವರಿ ವಿಲೇಜ್‍ನಲ್ಲಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿದೆ. ಐಂದ್ರಿತಾ ಅವರ ಮನೆಯಂಗಳದಲ್ಲೇ ಬೆಳೆದಿರುವ ಅರಿಶಿಣದಿಂದ ಮದ್ವೆ ಶಾಸ್ತ್ರ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಎರಡೂ ಕುಟುಂಬಗಳ ಸದಸ್ಯರು ಮತ್ತು ಸ್ಟಾರ್‍ಪೇರ್‍ನ ಆಪ್ತರಷ್ಟೇ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಮಧುಮಗಳು ಐಂದ್ರಿತಾ ಮಿಂಚಿದರೆ, ನೀಲಿ ಶಾಲು, ಬಿಳಿಪಂಚೆಯಲ್ಲಿ ದಿಗಂತ್ ಕಂಗೊಳಿಸಿದ್ದರು.

    ಇಂದು ಸಂಜೆ ನಂದಿಬೆಟ್ಟದ ತಪ್ಪಲಿನಲ್ಲಿ ಐಂದ್ರಿತಾ, ದಿಗಂತ್ ಜೋಡಿ ಸಪ್ತಪದಿ ತುಳಿಯಲಿದೆ. ಕುಟುಂಬದವರು ಮತ್ತು ಚಿತ್ರರಂಗದ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ಕೊಟ್ಟಿದ್ದಾರೆ. ಶೇರ್‍ಚಾಟ್ ಸಂಸ್ಥೆ ಐಂದ್ರಿತಾ, ದಿಗಂತ್ ಜೋಡಿಯ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಿವುಡ್ ನಟಿಯ ಆಸೆಯನ್ನು ನೆರವೇರಿಸಲಿದ್ದಾರೆ ವಿಜಯ್!

    ಬಾಲಿವುಡ್ ನಟಿಯ ಆಸೆಯನ್ನು ನೆರವೇರಿಸಲಿದ್ದಾರೆ ವಿಜಯ್!

    ಹೈದರಾಬಾದ್: ಟಾಲಿವುಡ್ ಹ್ಯಾಂಡ್ಸಮ್ ಹಂಕ್ ವಿಜಯ್ ದೇವರಕೊಂಡ ಬಾಲಿವುಡ್ ನಟಿಯ ಆಸೆಯನ್ನು ನೆರವೇರಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

    ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಆಸೆಯನ್ನು ನಟ ವಿಜಯ್ ದೇವರಕೊಂಡ ನೆರವೇರಿಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ನಟ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಜಾಹ್ನವಿ ಕಪೂರ್ ತಮ್ಮ ಈ ಆಸೆಯನ್ನು ವ್ಯಕ್ತಪಡಿಸಿದ್ದರು.

    ಈ ಕಾರ್ಯಕ್ರಮದಲ್ಲಿ ಜಾಹ್ನವಿ ದಕ್ಷಿಣ ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ಜೊತೆ ಸಿನಿಮಾವನ್ನು ಮಾಡುವ ಆಸೆಯನ್ನು ವ್ಯಕ್ತಪಡಿಸಿದರು. ಆಗ ಕರಣ್ ಸೂಪರ್ ಸೆಕ್ಸಿ ಸೌತ್ ಇಂಡಿಯನ್ ಸ್ಟಾರ್ ಎಂದು ವಿಜಯ್ ದೇವರಕೊಂಡ ಅವರನ್ನು ಹೊಗಳಲು ಶುರು ಮಾಡಿದರು.

    ಕರಣ್ ಹಾಗೂ ಜಾಹ್ನವಿ ಮಾತುಗಳನ್ನು ಕೇಳಿ ವಿಜಯ್ ಲಾಟ್ಸ್ ಆಫ್ ಲವ್ ಎಂದು ಪ್ರತಿಕ್ರಿಯಿಸಿದರು. ಇದಾದ ಬಳಿಕ ವಿಜಯ್ ತಾವು ಬಾಲಿವುಡ್‍ಗೆ ಎಂಟ್ರಿ ನೀಡುತ್ತಿದ್ದೇನೆ ಎಂದು ಹೇಳಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು. ಕರಣ್ ಜೋಹರ್ ಹಾಗೂ ಜಾಹ್ನವಿ ಕಪೂರ್ ಜೊತೆ ಚಿತ್ರ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ವಿಜಯ್ ಬಾಲಿವುಡ್‍ಗೆ ಎಂಟ್ರಿ ನೀಡುವ ಹೇಳಿಕೆ ನೀಡಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಹೊರಹಾಕುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕೆಲವು ವಾರಗಳ ಹಿಂದೆ ವಿಜಯ್ ನಿರ್ದೇಶಕ ಕರಣ್ ಅವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಯ್‍ಫ್ರೆಂಡ್ ಗೆ ಕರೆ ಮಾಡಿ ಖ್ಯಾತ ನಟಿ ನೇಣಿಗೆ ಶರಣು..?

    ಬಾಯ್‍ಫ್ರೆಂಡ್ ಗೆ ಕರೆ ಮಾಡಿ ಖ್ಯಾತ ನಟಿ ನೇಣಿಗೆ ಶರಣು..?

    ಚೆನ್ನೈ: ತಮಿಳು ನಟಿಯೊಬ್ಬರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ವಾಲಾಸರವಕ್ಕಂನಲ್ಲಿ ನಡೆದಿದೆ.

    ರಿಯಾಮಿಕ್ಕ(26) ನೇಣಿಗೆ ಶರಣಾದ ನಟಿ. ರಿಯಾಮಕ್ಕ ತನ್ನ ಸಹೋದರ ಪ್ರಕಾಶ್ ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನ. 28ರಂದು ತನ್ನ ಸಹೋದರನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ರಿಯಾಮಿಕ್ಕ ಮಂಗಳವಾರ ರಾತ್ರಿ ಮನೆಗೆ ತಡವಾಗಿ ಬಂದಿದ್ದಳು. ಆಕೆ ಜೀವಂತವಾಗಿದ್ದಾಗ ನಾನು ಆಕೆಯನ್ನು ಕಡೆಯ ಬಾರಿ ನೋಡಿದ್ದು. ನಾನು ಆಕೆಯನ್ನು ಕೊನೆಯ ಬಾರಿ ನೋಡಿದಾಗ ಆಕೆ ತುಂಬಾ ಸುಸ್ತಾಗಿದ್ದಳು ಎಂದು ಸಹೋದರ ಪ್ರಕಾಶ್ ತಿಳಿಸಿದ್ದಾರೆ.

    ಮಂಗಳವಾರ ತಡರಾತ್ರಿ ರಿಯಾಮಿಕ್ಕ ತನ್ನ ಬಾಯ್‍ಫ್ರೆಂಡ್ ದಿನೇಶ್ ಗೆ ಕರೆ ಮಾಡಿದ್ದರು. ಆದ್ರೆ ದಿನೇಶ್ ಕರೆ ಸ್ವೀಕರಿಸಲಿಲ್ಲ. ಬುಧವಾರ ರಿಯಾಮಿಕ್ಕಳ ಕರೆ ನೋಡಿದ ದಿನೇಶ್, ಆಕೆಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ರಿಯಾಮಿಕ್ಕ ಯಾವುದೇ ಕರೆ ಸ್ವೀಕರಿಸಲಿಲ್ಲ. ಇದರಿಂದ ಗಾಬರಿಗೊಂಡ ದೀನೇಶ್ ಆಕೆಯ ಮನೆಗೆ ಹೋಗಿ ಪ್ರಕಾಶ್ ಬಳಿ ರಿಯಾಮಿಕ್ಕ ಬಗ್ಗೆ ಕೇಳಿದ್ದಾನೆ ಎಂದು ವರದಿಯಾಗಿದೆ.

    ದಿನೇಶ್ ಹಾಗೂ ಪ್ರಕಾಶ್, ನಟಿ ರಿಯಾಮಿಕ್ಕ ರೂಮಿನ ಬಾಗಿಲು ತಟ್ಟಿದ್ದಾರೆ. ಆದರೆ ರಿಯಾಮಿಕ್ಕ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಪ್ರಕಾಶ್ ಕಿಟಿಕಿಯನ್ನು ಒಡೆದು ನೋಡಿದ್ದಾನೆ. ಈ ವೇಳೆ ರಿಯಾಮಿಕ್ಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಪೊಲೀಸರು ದೂರು ಸ್ವೀಕರಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಆಕೆಯ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಿಯಾಮಿಕ್ಕ ಅವರಿಗೆ ಕಾಲಿವುಡ್‍ನಲ್ಲಿ ಸಾಕಷ್ಟು ಸಿನಿಮಾಗಳಿತ್ತು. ಆದರೆ ಅವರು ತುಂಬಾ ಒತ್ತಡದಲ್ಲಿದ್ದರು. ಕೆಲಸದ ಒತ್ತಡದಿಂದ ರಿಯಾಮಿಕ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಕೀಯ ದಾರಿ ತೋರಿದ ಅಂಬಿಯನ್ನೇ ಮರೆತ್ರಾ ರಮ್ಯಾ?

    ರಾಜಕೀಯ ದಾರಿ ತೋರಿದ ಅಂಬಿಯನ್ನೇ ಮರೆತ್ರಾ ರಮ್ಯಾ?

    ಮಂಡ್ಯ: ಮಾಜಿ ಸಂಸದೆ ರಮ್ಯಾ ವಿರುದ್ಧ ನಟ ಅಂಬರೀಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬಿ ಅಂತಿಮ ದರ್ಶನ ಪಡೆಯಲು ಮಂಡ್ಯಕ್ಕೆ ಬಾರದ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ಅಂಬರೀಶ್ ಅವರು ರಮ್ಯಾಗೆ ರಾಜಕೀಯವಾಗಿ ದಾರಿ ತೋರಿಸಿದ್ದಾರೆ. ಹೀಗಾಗಿ ಅಂಬಿ ಅಂತಿಮ ದರ್ಶನಕ್ಕಾದರೂ ರಮ್ಯಾ ಮಂಡ್ಯಕ್ಕೆ ಬರಬೇಕಿತ್ತು. ಅಲ್ಲದೇ ಓರ್ವ ಮಂಡ್ಯದ ಮಗಳಾಗಿ ರಮ್ಯಾ ಮಂಡ್ಯಕ್ಕೆ ಆಗಮಿಸಬೇಕಿತ್ತು. ಆದರೆ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಅಂಬರೀಶ್ ವಿರುದ್ಧವೇ ಇನ್ನೂ ದ್ವೇಷ ಸಾಧಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

    ಅಂಬಿ ನಿಧನರಾಗಿ ಒಂದು ದಿನಕಳೆದರೂ ಅಂತಿಮ ದರ್ಶನಕ್ಕೆ ರಮ್ಯಾ ಬಂದಿಲ್ಲ. ಘಟಾನುಘಟಿ ನಾಯಕರು, ಸಿನಿಮಾ ತಾರೆಯರು ಬಂದು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ರಮ್ಯಾ ಅವರೆಲ್ಲರಿಗಿಂತ ಬ್ಯುಸಿ ಇದ್ದಾರಾ ಎಂದು ಪ್ರಶ್ನಿಸುವ ಮೂಲಕ ಅಂಬಿ ಅಭಿಮಾನಿಗಳು ರಮ್ಯಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

    ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ರಮ್ಯಾ ಗೆಲುವಲ್ಲಿ ಅಂಬರೀಶ್ ಪ್ರಮುಖ ಪಾತ್ರ ವಹಿಸಿದ್ದರು. ಅಂಬಿಯಂತೆ ರಮ್ಯಾ ಕೂಡ ಚಿತ್ರರಂಗ, ರಾಜಕೀಯ ಎರಡೂ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಅಲ್ಲದೇ ಇಬ್ಬರೂ ಮಂಡ್ಯದವರೇ. ಹೀಗಾಗಿ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತಂದಾಗ ರಮ್ಯಾ ಕೂಡ ತವರು ಜಿಲ್ಲೆಗೆ ಬಂದು ಅಂತಿಮ ದರ್ಶನ ಪಡೆಯುತ್ತಾರೆ ಅಂತ ಅಭಿಮಾನಿಗಳು ನಂಬಿದ್ದರು.

    ಕಳೆದ ಎರಡು ವರ್ಷದಿಂದ ಮಂಡ್ಯ ಕಡೆ ಆಗಮಿಸದ ರಮ್ಯಾ, ಇದೀಗ ಅಂಬಿ ಕೊನೆಯುಸಿರೆಳೆದಾಗಲೂ ಅಂತಿಮ ದರ್ಶನ ಪಡೆಯಲು ಮಂಡ್ಯಕ್ಕೆ ಆಗಮಿಸದಿರುವುದು ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಕಾರಣರಾಗಿದ್ದಾರೆ.

    https://www.youtube.com/watch?v=EdRmEJPlhQ8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಟ್ವಿಸ್ಟ್- 1 ವರ್ಷದ ನಂತರ ನಟಿಯಿಂದ ದೂರು

    ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಟ್ವಿಸ್ಟ್- 1 ವರ್ಷದ ನಂತರ ನಟಿಯಿಂದ ದೂರು

    ಮಂಗಳೂರು: ಕಿರುತೆರೆ ನಟಿಯ ಅತ್ಯಾಚಾರ ಹಾಗೂ ಬ್ಲಾಕ್ ಮೇಲ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ಬೆಂಗಳೂರಿನ ದಯಾನಂದಸ್ವಾಮಿ ವಿರುದ್ಧ ಮಂಗಳೂರಿನಲ್ಲಿ ಎಫ್‍ಐಆರ್ ದಾಖಲಾಗಿದೆ. ಹುಣಸಮಾರನಹಳ್ಳಿ ಮಠದ ದಯಾನಂದಸ್ವಾಮಿ ವಿರುದ್ಧ ಕದ್ರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಂಗಳೂರಿನ ಜೆಎಂಎಫ್‍ಸಿ ಕೋರ್ಟ್ ಸೂಚನೆಯಡಿ ಎಫ್‍ಐಆರ್ ದಾಖಲಾಗಿದೆ.

    ದಯಾನಂದ ಸ್ವಾಮೀಜಿ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ದಯಾನಂದ ಸ್ವಾಮಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಅಲ್ಲದೇ ವಿಡಿಯೋ ಮಾಡಿ ನಟಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಚಿಕ್ಕಮಗಳೂರಿನ ತೀರ್ಥಹಳ್ಳಿ ಮೂಲದ ಕಿರುತೆರೆ ನಟಿಯಿಂದ ದೂರು ದಾಖಲಾಗಿದ್ದು, ಮಂಗಳೂರು ಮೂಲಕ ಬೆಂಗಳೂರಿಗೆ ಕರೆದೊಯ್ದಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖವಾಗಿದೆ.

    ಏನಿದು ಪ್ರಕರಣ?
    ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ದಯಾನಂದ ಸ್ವಾಮಿ ರಾಸಲೀಲೆಯಲ್ಲಿ ನಟಿ ಕಾವ್ಯ ಆಚಾರ್ಯ ಭಾಗಿಯಾಗಿದ್ದರು. ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ರಾಸಲೀಲೆ ರಹಸ್ಯ ವಿಡಿಯೋವನ್ನು 2014 ಜನವರಿ 4 ರಂದು ಮಾಡಲಾಗಿತ್ತು. ನಂತರ ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟಿ ಮೇಘನಾ ರಾಜ್ ರಿಂದ 50 ತಳಿಯ ಡಾಗ್ ಶೋ ಉದ್ಘಾಟನೆ

    ನಟಿ ಮೇಘನಾ ರಾಜ್ ರಿಂದ 50 ತಳಿಯ ಡಾಗ್ ಶೋ ಉದ್ಘಾಟನೆ

    ಬೆಂಗಳೂರು: ಒಂದಕ್ಕಿಂತ ಒಂದು ಕ್ಯೂಟ್, ಒಂದಕ್ಕಿಂತ ಒಂದು ಛಬ್ಬಿ. ನೋಡತ್ತಿದ್ರೆ ನೋಡುತ್ತಾನೇ ಇರಬೇಕು ಅನಿಸುತ್ತೆ. ಡಾಗ್ ಶೋ ದಲ್ಲಿ ಶ್ವಾನಗಳ ತುಂಟಾಟ ನೋಡೋದೇ ಚೆಂದ.

    ಹೌದು. ನಗರದಲ್ಲಿ ಪೆಟ್ಸ್ ಪ್ರಿಯರಿಗೆಂದೇ ಡಾಗ್ ಶೋ ಏರ್ಪಡಿಸಲಾಗಿತ್ತು. ಅಂತರಾಷ್ಟ್ರೀಯ ಶ್ವಾನಗಳ ಪ್ರದರ್ಶನದಲ್ಲಿ ಸುಮಾರು 50 ತಳಿಯ 450 ರಿಂದ 500 ಶ್ವಾನಗಳು ಭಾಗವಹಿಸಿದ್ದವು. ನಟಿ ಮೇಘನಾ ರಾಜ್ ಅವರು ಡಾಗ್ ಶೋ ಉದ್ಘಾಟಿಸಿದರು.

    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಉದ್ಘಾಟಕಿ ಮೇಘನಾ ರಾಜ್, ಇದು ನನ್ನ ಮೊದಲನೆ ಡಾಗ್ ಶೋ. ಹೀಗಾಗಿ ಬಹಳ ಕುತೂಹಲವಿತ್ತು. ಯಾಕಂದ್ರೆ ನಾನು ಯಾವತ್ತೂ ಯಾವ ಡಾಗ್ ಶೋಗೂ ಬಂದಿಲ್ಲ. ಪ್ರಾಣಿಗಳು ಹೇಗೆ ನಡೆದುಕೊಳ್ಳುತ್ತವೆ ಹಾಗೆಯೇ ಅವುಗಳಿಗೆ ಹೇಗೆ ತರಬೇತಿ ನೀಡುತ್ತಾರೆ ಎಂಬುದರ ಬಗ್ಗೆ ಬಹಳ ಕುತೂಹಲ ಇತ್ತು. ನಾವು ಮನೆ ಮಂದಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಮನೆಯ ಶ್ವಾನಗಳನ್ನು ನೋಡಿಕೊಳ್ಳಬೇಕಾಗುತ್ತದೆ ಅಂತ ಹೇಳಿದ್ರು.

    ಡಾಗ್ ಶೋದಲ್ಲಿ ಭಾಗವಹಿಸಿದ ಧನಪಾಲ್ ಗೌಡ ಅವರು ಗ್ರೇಟ್ ಡೇನ್ ತಳಿಯ ಶ್ವಾನದ ಬಗ್ಗೆ ವಿವರಿಸಿದ್ದಾರೆ. ಈ ಶ್ವಾನ ಮೂಲತಃ ಜರ್ಮನಿಯದ್ದಾಗಿದೆ. ಇದಕ್ಕೆ ಪ್ರತಿದಿನ ರಾಯಲ್ ಕೆನನರ್ ಅನ್ನೋ ಫುಡ್ ಬರುತ್ತೆ, ಅದನ್ನು ನೀಡಬೇಕು. ಅದರ ಜೊತೆಗೆ ಚಿಕನ್ ನೀಡುತ್ತಾರೆ. ಸದ್ಯ ಇದು ಮನೆಯಲ್ಲಿ ಫ್ಯಾಶನ್ ಆಗಿ ಸಾಕುತ್ತಾರೆ.

    ಈ ಶೋದಲ್ಲಿ ಉತ್ತರ ಕರ್ನಾಟಕದ ಫೇಮಸ್ ಮುಧೋಳ ನಾಯಿ ಎಲ್ಲರ ಗಮನ ಸೆಳೆಯಿತು. ವಿಶೇಷ ತಳಿಯ ಶ್ವಾನಗಳಾದ ಜರ್ಮನ್ ಶೆಫರ್ಡ್, ಡಾಬರ್ ಮನ್, ರಿಟ್ರೈವರ್, ಗೋಲ್ಡನ್ ರಿಟ್ರೈವರ್, ಬಾಕ್ಸರ್, ಗ್ರೇಟ್ ಡೇನ್, ಕಾಕರ್‍ಗಳು ಕೂಡ ನಾವೇನು ಕಮ್ಮಿಯಿಲ್ಲವೆಂಬಂತೆ ಫೋಸ್ ಕೊಡ್ತು. ಗಾರ್ಡನ್ ಸಿಟಿ ಜನರು ಈ ಶೋಗೆ ಫೀದಾ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕನ್ನಡ, ತೆಲುಗು ನಂತ್ರ ತಮಿಳಿನ ಸೂಪರ್​ಸ್ಟಾರ್ ಜೊತೆ ರಶ್ಮಿಕಾ ನಟನೆ!

    ಕನ್ನಡ, ತೆಲುಗು ನಂತ್ರ ತಮಿಳಿನ ಸೂಪರ್​ಸ್ಟಾರ್ ಜೊತೆ ರಶ್ಮಿಕಾ ನಟನೆ!

    ಬೆಂಗಳೂರು: ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ನಟಿಸಿ ಚಾರ್ಮ್ ಕ್ರಿಯೇಟ್ ಮಾಡಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಕಾಲಿವುಡ್‍ನಿಂದ ಬುಲಾವ್ ಬಂದಿದೆ. ಹೀಗಾಗಿ ಈಗಾಗಲೇ ಸ್ಯಾಂಡಲ್‍ವುಡ್ ಹಾಗೂ ಟಾಲಿವುಡ್ ಅಂಗಳದಲ್ಲಿ ಮಿಂಚಿರುವ ರಶ್ಮಿಕಾ ಕಾಲಿವುಡ್‍ಗೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.

    ಅಲ್ಲು ಅರ್ಜುನ್, ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳು ಬರುತ್ತಿರುವಾಗಲೇ ರಶ್ಮಿಕಾ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿ ಕೇಳಿಬರುತ್ತಿದೆ. ಇಳೆಯ ದಳಪತಿ ವಿಜಯ್ ಮುಂದಿನ ಸಿನಿಮಾಗೆ ರಶ್ಮಿಕಾನೇ ನಾಯಕಿ ಎಂಬ ವಿಚಾರ ಕೇಳಿ ಬರುತ್ತಿದೆ.

    ರಶ್ಮಿಕಾಗೆ ಇಳೆಯದಳಪತಿ ಟೀಂ ಕಡೆಯಿಂದ ಬುಲಾವ್ ಬಂದಿದೆ. ವಿಜಯ್ ಅಭಿನಯದ 63ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣರನ್ನು ಸೆಲೆಕ್ಟ್ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಸದ್ಯ ನಾಯಕಿಯ ಆಯ್ಕೆಯಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ವಿಜಯ್ ಹಾಗೂ ರಶ್ಮಿಕಾ ಜೋಡಿಯಾಗುತ್ತಿರುವ ಸುದ್ದಿ ಕೇಳಿ ವಿಜಯ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಆದರೆ ಚಿತ್ರತಂಡ ರಶ್ಮಿಕಾನೇ ನಾಯಕಿ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

    ‘ಥೇರಿ’ ಹಾಗೂ ‘ಮರ್ಸೆಲ್’ ಸಿನಿಮಾ ನಂತರ ನಿರ್ದೇಶಕ ಆಟ್ಲೀಕುಮಾರ್ ಹಾಗೂ ವಿಜಯ್ ಮತ್ತೆ ಒಂದಾಗಿದ್ದಾರೆ. ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ, ಆದರೆ ಹ್ಯಾಟ್ರಿಕ್ ಬಾರಿಸೋಕೆ ರೆಡಿಯಾಗಿರುವ ವಿಜಯ್ ಹಾಗೂ ಆಟ್ಲೀಕುಮಾರ್ ಬಗ್ಗೆ ನಿರೀಕ್ಷೆ ಗರಿಗೆದರಿವೆ. ಸದ್ಯ `ಸರ್ಕಾರ್’ ಸಿನಿಮಾ ಮೂಲಕ ವಿಜಯ್ ಕೇಕೆ ಹಾಕುತ್ತಿದ್ದಾರೆ. ಇದರ ನಡುವೆ 63ನೇ ಚಿತ್ರದ ನಾಯಕಿ ರಶ್ಮಿಕಾ ಎನ್ನುವುದು ಕಾಲಿವುಡ್ ಅಂಗಳದಲ್ಲಿ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಿರ್ದೇಶಕ ಗುರುಪ್ರಸಾದ್ ವಿರುದ್ಧ ಸಿಡಿದ ಸಂಗೀತಾ ಭಟ್ ಪತಿ

    ನಿರ್ದೇಶಕ ಗುರುಪ್ರಸಾದ್ ವಿರುದ್ಧ ಸಿಡಿದ ಸಂಗೀತಾ ಭಟ್ ಪತಿ

    ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಹೇಳಿಕೆಗೆ ನಟಿ ಸಂಗೀತಾ ಭಟ್ ಪತಿ ಸುದರ್ಶನ್ ಭಟ್  2ನೇ ಸಲ ಚಿತ್ರೀಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ್ ನೀಡಿದ್ದ ಹೇಳಿಕೆಗೆ ಸಂಗೀತಾ ಭಟ್ ಪತಿ ಸುದರ್ಶನ್ ಭಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಗುರುಪ್ರಸಾದ್ ಯಾವ ಕಾರಣಕ್ಕಾಗಿ 2ನೇ ಸಲ ಚಿತ್ರದ ಸನ್ನಿವೇಷದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಅವರು ಉದ್ದೇಶ ಪೂರ್ವಕವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

    ಸದ್ಯದ ಪರಿಸ್ಥಿತಿಯಲ್ಲಿ ಸಂಗೀತಾ ಚಿತ್ರರಂಗವನ್ನು ಬಿಟ್ಟಿದ್ದಾಳೆ. ಅವಳು ಯಾವುದೇ ಪಬ್ಲಿಸಿಟಿಗಾಗಿ ಮೀಟೂ ಆರೋಪ ಮಾಡಿಲ್ಲ. ಅದರ ಅವಶ್ಯಕತೆಯೂ ಆಕೆಗೆ ಇಲ್ಲ. ಆಕೆಯ ದಾರಿಯೇ ಈಗ ಬೇರೆಯಾಗಿದೆ. ಚಿತ್ರರಂಗದಲ್ಲಿದ್ದಾಗ ಆದಂತಹ ಘಟನೆಗಳ ಕುರಿತು ಅವಳು ಮಾತನಾಡಿದ್ದಳೆ ಹೊರತು, ಯಾರನ್ನು ನಿರ್ದಿಷ್ಟವಾಗಿ ಗುರುತಿಸಿ ಆಪಾದನೆ ಮಾಡಿಲ್ಲ. ಗುರುಪ್ರಸಾದ್ ಸುಮ್ಮನೆ ಆಕೆಯನ್ನು ಎಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

    2ನೇ ಚಿತ್ರದಲ್ಲಿ ನಟಿಸಲು ಸಂಗೀತಾ ಗುರುಪ್ರಸಾದ್ ಬಳಿ ಹೋಗಿರಲಿಲ್ಲ. ಖಾಸಗಿ ಕಾರ್ಯಕ್ರಮದಲ್ಲಿ ಅವರೇ ಬಂದು, ನನ್ನ ಚಿತ್ರದಲ್ಲಿ ನಟಿಯಾಗಿ ಆಯ್ಕೆ ಮಾಡು ಎಂದು ಕೇಳಿದ್ದರು. ಈ ಮೊದಲು ಚಿತ್ರದಲ್ಲಿ ಆ ಸನ್ನಿವೇಷ ಇರಲಿಲ್ಲ. ನಂತರ ಇದನ್ನು ಗುರುಪ್ರಸಾದ್ ಸೇರಿಸಿದ್ದರು.

    ನಮ್ಮೆಲ್ಲರ ಸಮ್ಮುಖದಲ್ಲೇ ಆ ಸನ್ನಿವೇಷ ಚಿತ್ರಿಕರಿಸಲಾಗಿತ್ತು. ಆದರೆ ಆ ಬಗ್ಗೆ ನಾವು ಯಾವುತ್ತೂ ಚಕಾರ ಎತ್ತಿರಲಿಲ್ಲ. ಆದರೆ ಅವರು ಅದನ್ನೇ ಮಾಧ್ಯಮಗಳಲ್ಲಿ ಬಿಂಬಿಸುತ್ತಿದ್ದಾರೆ. ನಾವೆಲ್ಲಾ ಕಲಾವಿದರು, ಈ ರೀತಿಯ ಕೀಳು ಮಟ್ಟದಲ್ಲಿ ನಾವು ಯೋಚನೆ ಮಾಡುವುದಿಲ್ಲ. ಸಂಗೀತಾರ ಚಿತ್ರದ ಸನ್ನವೇಷವನ್ನು ಹೇಳುವ ಮೂಲಕ ಅವರ ಕೀಳು ಮಟ್ಟವನ್ನು ತೋರಿಸಿದ್ದಾರೆ ಎಂದು ಸುದರ್ಶನ್ ದೂಷಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/u4enQ9slDcc

  • ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು

    ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು

    ಬೆಂಗಳೂರು: ಚಿತ್ರರಂಗದಲ್ಲಿ ಹೆಸರು ಮಾಡಲು 15 ವರ್ಷ ಕಷ್ಟಪಡಬೇಕು. ಆದರೆ ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ಪ್ರಚಾರಕ್ಕಾಗಿ ಒಬ್ಬರ ಹೆಸರನ್ನ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ತಿಳಿಸಿದ್ದಾರೆ.

    ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಅಭಿಯಾನ ಮೀಟೂ. ಆದರೆ ಅದನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ತೊಂದರೆ ಅನುಭವಿಸಿದ ಹೆಣ್ಣು ಮಕ್ಕಳು ಅಭಿಯಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇಡ ಅಂದರೆ ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡಲ್ಲ. ನಿಮಗೆ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ಹರ್ಷಿಕಾ ಪೂಣಚ್ಚ ಖಡಕ್ ಆಗಿ ಹೇಳಿಕೆ ನೀಡಿದರು.

    ಇದೇ ವೇಳೆ ತಮ್ಮ ಮೀಟೂ ಅನುಭವದ ಕುರಿತು ಮಾಹಿತಿ ನೀಡಿದ ಪೂಣಚ್ಚ, ನನಗೂ ಬಾಲಿವುಡ್ ರಂಗದಿಂದ ಆಫರ್ ಬಂದಿತ್ತು. ಇದರಲ್ಲಿ ಲೈಂಗಿಕ ಕಿರುಕುಳ ನೀಡುವ ವಿಷಯ ಕಂಡು ಬಂತು. ಅದ್ದರಿಂದ ನಾನು ಆ ಸಿನಿಮಾವನ್ನು ಬಿಟ್ಟು ಬಂದೆ. ನಮಗೆ ಚಿತ್ರರಂಗದಲ್ಲಿ ಒಂದೇ ಸಿನಿಮಾ ಎಂದು ಏನು ಇಲ್ಲ. ಜೀವನದಲ್ಲಿ ನಮಗೇ ಸಾಕಷ್ಟು ಅವಕಾಶಗಳಿದೆ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುತ್ತೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಾನು 2 ವರ್ಷ, 10 ವರ್ಷದ ಹಿಂದಿನ ಮಾತು ಹೇಳುತ್ತಿಲ್ಲ. ಅದ್ದರಿಂದ ಇದು ತಪ್ಪು ಎಂದು ಅನಿಸುತ್ತಿದೆ ಎಂದರು.

    ಚಿತ್ರರಂಗದ ಪರ ನಿಲ್ಲುತ್ತೇನೆ: ಸಿನಿಮಾ ರಂಗ ಎಂಬುವುದು ನಮಗೇ ಊಟ ನೀಡುವ ಕ್ಷೇತ್ರ. ನಮ್ಮ ಕನಸು ನನಸಾಗುವುದು ಇಲ್ಲಿ, ಹರ್ಷಿಕಾ ಪೂಣಚ್ಚ ಎಂಬ ಹೆಸರು ಜನರಿಗೆ ತಿಳಿದಿರುವುದು ಸಿನಿಮಾದಿಂದಲೇ. ಅದ್ದರಿಂದ ನಾನು ಅಷ್ಟು ಬೇಗ ಇದನ್ನು ಬಿಟ್ಟುಕೊಡುವುದಿಲ್ಲ. ನಾನು ಸಿನಿಮಾ ಕ್ಷೇತ್ರದ ಪರವೇ ನಿಲುತ್ತೇನೆ. ಅಡ್ವಾಂಟೇಜ್ ಕೊಟ್ಟರೆ ಮಾತ್ರ ತೆಗೆದುಕೊಳುತ್ತಾರೆ. ನೀವು ಕೊಡಲ್ಲ ಎಂದು ತಿಳಿದ ಮರು ಕ್ಷಣ ಅವರು ಸುಮ್ಮನಾಗುತ್ತಾರೆ ಎಂದರು.

    ಕೆಲ ನಟಿಯರು ವಿದೇಶಕ್ಕೆ ಹೋಗಿ ಗಣವ್ಯಕ್ತಿಗಳಿಂದ ಉಪಯೋಗ ಪಡೆದುಕೊಳುತ್ತಾರೆ. ಸಿನಿಮಾ ಬೇಕು, ಪ್ರಚಾರ ಬೇಕು ಎಂದು ಹೇಳುತ್ತೀರಾ? ಸಿನಿಮಾ ಕೊಡುವವರ ಬಗ್ಗೆಯೇ ಯಾಕೆ ಮಾತಾಡ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಚಿತ್ರರಂಗದಲ್ಲಿ ಅವಕಾಶಗಳ ಕೊರತೆ ಇರುವುದರಿಂದ ಅವಕಾಶಕ್ಕಾಗಿ ಈ ರೀತಿ ಆಗುತ್ತದೆ. ಅದ್ದರಿಂದ ಸಿನಿಮಾ ಕೊಟ್ಟು ಲೈಫ್ ಕೊಟ್ಟವರಿಗೆ ಏಕೆ ಹೀಗೆ ಮಾಡುತ್ತಿದ್ದಾರೆ. ಈ ಹೇಳಿಕೆ ನೀಡಿದ ಬಳಿಕ ನನಗೆ ಬೆದರಿಕೆ ಕರೆಗಳು ಕೂಡ ಬಂದಿದೆ. ಆದರೆ ನಾನು ಏನು ನಡೆದರೂ ಸಿನಿಮಾ ರಂಗದ ಪರವೇ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಈ ಫೇಮಸ್ ನಟಿಯ ಅರ್ಧ ಬೆತ್ತಲೆ ದೃಶ್ಯ ಚಿತ್ರೀಕರಿಸುತ್ತಿದ್ದರು. ಇದು ಇರಬೇಕಾದ್ದು ಹೀಗಲ್ಲ. ಅಲ್ವಾ? ನಾನು ಒಬ್ಬ ನಟಿಯಾಗಿ ನನಗೂ ಈ ಥರ ಹಲವರು ಕೇಳಿದ್ದಾರೆ. ಅದನ್ನ ನಾನು ಅಷ್ಟೇ ವಿನಮ್ರತೆಯಿಂದ ಆಗಲೇ ನನ್ನ ಆದ್ಯತೆಗಳು, ನನ್ನ ಮೌಲ್ಯಗಳು ಏನು ಅನ್ನೋದನ್ನ ಸ್ಪಷ್ಟಪಡಿಸಿದ್ದೇನೆ. ಈಗ 10 ವರ್ಷಗಳ ಬಳಿಕ ಯಾವುದೇ ಚಿತ್ರರಂಗದ ಯಾವೊಬ್ಬ ವ್ಯಕ್ತಿಯೂ ನನ್ನತ್ತ ಬೆರಳು ಮಾಡಿ ತೋರಿಸುವುದಿಲ್ಲ. ಏಕೆಂದರೆ ನಾನು ಪ್ಯೂರ್ ಮತ್ತು ಕ್ಲೀನ್ ಆಗಿದ್ದೆ. ನಾನು ಮಾಡಿದ ಕೆಲಸಗಳು ಕ್ಲೀನ್ ಆಗಿದ್ದವು. ಇದರಿಂದ ನನಗೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳ ಜೊತೆ ದೊಡ್ಡ ಪ್ರಾಜೆಕ್ಟ್‍ಗಳು ಕೈತಪ್ಪಿರಬಹುದು. ಆದರೆ ನಾನು ಸಂತೋಷವಾಗಿದ್ದೇನೆ. ಜನರ ಜೊತೆಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದೇನೆ ಎಂದು ಟ್ವೀಟ್ ಮಾಡಿ ತಮ್ಮ ಹೇಳಿಕೆ ಸಮರ್ಥನೆ ನೀಡಿದ್ದಾರೆ.

    ಗಂಡಸರೂ ಮೀಟೂ ಅಭಿಯಾನವನ್ನು ಶುರು ಮಾಡಲು ಸರಿಯಾದ ಸಮಯ ಬಂದಿದೆ. ಏಕೆಂದರೆ ನಟಿಯರು ನಟರ ಹೆಸರು ಬಳಸಿ ಪ್ರಚಾರ ಪಡೆದು ಬಳಿಕ ಕೈಕೊಟ್ಟ ಹಲವರನ್ನು ನಾನು ನೋಡಿದ್ದೇನೆ. ಇಷ್ಟು ದಿನ ಸಹ ನಟಿಯರ ಬಗ್ಗೆ ಮಾತನಾಡಬಾರದು ಎಂದು ಸುಮ್ಮನಿದ್ದೆ. ಆದರೆ ಇಂದು ಕೆಲ ನಟಿಯರು ನಮಗೇ ಅನ್ನ ಕೊಟ್ಟ ಚಿತ್ರರಂಗವನ್ನು ನಗೆಪಾಟಲು ಮಾಡಲು ಮುಂದಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://twitter.com/actressharshika/status/1055764883029942272

    https://twitter.com/actressharshika/status/1055764774506516481

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=iCz49tD85ZI