Tag: actress

  • ನಟಿಯ ಮನೆಗೆ ನುಗ್ಗಿ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಮದ್ವೆಗೆ ಒತ್ತಾಯ

    ನಟಿಯ ಮನೆಗೆ ನುಗ್ಗಿ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಮದ್ವೆಗೆ ಒತ್ತಾಯ

    ಚೆನ್ನೈ: ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಿರುತೆರೆಯ ನಟಿಯ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿರುವ ಘಟನೆ ಚೆನ್ನೈನ ವಡಪಳನಿಯಲ್ಲಿ ಗುರುವಾರ ನಡೆದಿದೆ.

    ಕಿರುತೆರೆ ನಟಿ ರಿತಿಕಾ ಅವರ ಮನೆಗೆ ತೆರಳಿದ ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ನಟಿ ರಿತಿಕಾ ತಮ್ಮ ತಂದೆ ಸುಬ್ರಹ್ಮಣಿ ಜೊತೆ ವಡಪಳನಿಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾಗ ಭರತ್ ಮನೆಗೆ ನುಗ್ಗಿ ಮದುವೆಯ ಪ್ರಸ್ತಾಪ ಮಾಡಿದ್ದಾನೆ. ಈಗ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ನಡೆದಿದ್ದೇನೆ?
    ರಿತಿಕಾ ತಮಿಳಿನ ‘ರಾಜಾರಾಣಿ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಡಬ್‍ಸ್ಮಾಶ್, ಟಿಕ್‍ಟಾಕ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಖ್ಯಾತಿ ಪಡೆದಿದ್ದಾರೆ. ಇವರ ಅಭಿನಯಕ್ಕೆ ಮನಸೋತ ಭರತ್ ಮದುವೆಯಾಗಲು ಬಯಸಿದ್ದಾನೆ.

    ಗುರುವಾರ ನೇರವಾಗಿ ರಿತಿಕಾ ಅಪಾರ್ಟ್‌ಮೆಂಟ್‌ಗೆ ಹೋಗಿದ್ದು, ಬಾಗಿಲು ಬಡಿದಿದ್ದಾನೆ. ಆಗ ರಿತಿಕಾರ ತಂದೆ ಸುಬ್ರಹ್ಮಣಿ ಬಾಗಿಲು ತೆರೆದಿದ್ದಾರೆ. ಬಾಗಿಲು ತೆರೆದ ತಕ್ಷಣ ಮನೆಗೆ ನುಗ್ಗಿ ರಿತಿಕಾರನ್ನು ನನಗೆ ಕೊಟ್ಟು ಮದುವೆ ಮಾಡಬೇಕು ಎಂದು ತಂದೆಯ ಬಳಿ ಮನವಿ ಮಾಡಿಕೊಂಡಿದ್ದಾನೆ.

    ಯುವಕನ ಮಾತು ಕೇಳಿ ಅವರ ತಂದೆ ಶಾಕ್ ಆಗಿದ್ದಾರೆ. ಬಳಿಕ ಇಬ್ಬರ ನಡುವೆ ವಾದ ನಡೆದಿದೆ. ಆಗ ಭರತ್ ಕೋಪಕೊಂಡು ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಲೇ ಬೇಕು ಎಂದು ಹಠ ಹಿಡಿದಿದ್ದಾನೆ. ಇವರ ಜಗಳವನ್ನು ನೆರೆಹೊರೆಯವರು ಕೇಳಿಸಿಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಭರತ್‍ನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ.

    ಬಂಧಿತ ಭರತ್ ಗೋಬಿಚೆಟ್ಟಿ ಪಾಳ್ಯದ ನಿವಾಸಿಯಾಗಿದ್ದು, ಈತ ಇಂಜಿನಿಯರಿಂಗ್ ಮಾಡಿ ಉದ್ಯೋಗ ಹುಡುಕಿಕೊಂಡು ಚೆನ್ನೈಗೆ ಬಂದಿದ್ದನು. ಭರತ್ ಗುರುವಾರ ತಮ್ಮ ಊರಿಗೆ ಹೋಗಲು ತಯಾರಾಗಿದ್ದು, ನಂತರ ರಿತಿಕಾ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಿತಿಕಾ ಎಂದರೆ ನನಗೆ ತುಂಬಾ ಇಷ್ಟ, ನಾನು ಅವರನ್ನು ಪ್ರೀತಿಸುತ್ತಿದ್ದೇನೆ. ಹೀಗಾಗಿ ಅವರನ್ನೇ ಮದುವೆಯಾಗಲು ಇಚ್ಛಿಸಿದ್ದೆ ಎಂದು ಭರತ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

  • ಫೋಟೋಶೂಟ್‍ಗೆ ಹೋದ ನಟಿ – ನನ್ನ ಜೊತೆ ಮಲಗು ಎಂದ ಫೋಟೋಗ್ರಾಫರ್

    ಫೋಟೋಶೂಟ್‍ಗೆ ಹೋದ ನಟಿ – ನನ್ನ ಜೊತೆ ಮಲಗು ಎಂದ ಫೋಟೋಗ್ರಾಫರ್

    ಚೆನ್ನೈ: ರಷ್ಯನ್ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಮಾಡೆಲ್ ಕಮ್ ಫೋಟೋಗ್ರಾಫ‌ರ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಆರೋಪಿಯನ್ನು ರೂಪೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ನನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳನ್ನು ಅಪ್ಲೋಡ್ ಮಾಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದರು. ನಟಿಯ ದೂರಿನ ಆಧಾರದ ಮೇರೆಗೆ ಫೋಟೋಗ್ರಾಫ‌ರ್‌ನನ್ನು ಪೊಲೀಸರು ಬಂಧಿಸಿದ್ದಾರೆ.


    ಏನಿದು ಪ್ರಕರಣ?
    ಆರೋಪಿ ಕುಮಾರ್ ಜಾಹೀರಾತು ಸಂಸ್ಥೆ ನಡೆಸುತ್ತಿದ್ದನು. ನಟಿ ಇತ್ತೀಚೆಗೆ ರಾಘವ ರಾಲೆನ್ಸ್ ನಟಿಸಿರುವ ‘ಕಾಂಚನ 3’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ರಿ ಡ್ಜಾವಿ ಅಲೆಕ್ಸಾಂಡ್ರಾ ಅವರು ರಾಘವ ಅವರ ಗೆಳತಿಯ ರೋಸಿ ಪಾತ್ರ ಮಾಡಿದ್ದಾರೆ. ಆರೋಪಿ ಕುಮಾರ್ ಪಬ್‍ನಲ್ಲಿ ನಟಿಯನ್ನು ಭೇಟಿಯಾಗಿದ್ದು, ಅಲ್ಲಿ ಅವಕಾಶ ಕೊಡಿಸುತ್ತೇನೆ, ನೀವು ಜಾಹೀರಾತುಗಳಿಗಾಗಿ ಫೋಟೋಶೂಟ್ ಮಾಡಿಸಿಕೊಳ್ಳಿ ಎಂದು ಕೇಳಿದ್ದಾನೆ. ಅದಕ್ಕೆ ನಟಿ ಒಪ್ಪಿಕೊಂಡಿದ್ದು, ನುಂಗಂಬಾಕ್ಕಂ ಪ್ರದೇಶದಲ್ಲಿನ ಹೋಟೆಲ್‍ನಲ್ಲಿ ಫೋಟೋಶೂಟ್ ಮಾಡಲು ನಿರ್ಧರಿಸಿದ್ದರು.

    ಈ ವೇಳೆ ರೂಪೇಶ್ ಹಲವು ಭಂಗಿಗಳಲ್ಲಿ ನನ್ನ ಫೋಟೋಗಳನ್ನು ತೆಗೆದಿದ್ದಾನೆ. ನಂತರ ಆ ಫೋಟೋಗಳನ್ನು ನನ್ನ ವಾಟ್ಸಪ್ ಕಳುಹಿಸಿ, ನನ್ನ ಜೊತೆ ಮಲಗಬೇಕು ಎಂದು ಕೇಳಿದ್ದಾನೆ. ಅದಕ್ಕೆ ನಾನು ನಿರಾಕರಿಸಿದೆ. ಒಂದು ವೇಳೆ ನೀನು ಸಹಕರಿಸದಿದ್ದರೆ ನಿನ್ನ ಫೋಟೋಗಳನ್ನು ಮಾರ್ಪ್ ಮಾಡಿ ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆವೊಡ್ಡಿದ್ದಾನೆ. ಅಷ್ಟೇ ಅಲ್ಲದೇ ಮೆಸೇಜ್, ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

    ನಟಿ ನೀಡಿದ ದೂರಿ ಅನ್ವಯ ವಿವಿಧ ಐಪಿಸಿ ಸೆಕ್ಷನ್ ಅಡಿ ಮತ್ತು ಐಟಿ ಕಾಯ್ಡೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮಾಡಿದೆವು. ಆಗ ರೂಪೇಶ್ ಬೆದರಿಕೆವೊಡ್ಡಿರುವುದು ಖಚಿತವಾಗಿದೆ. ಹೀಗಾಗಿ ಆತನನ್ನು ಬಂಧಿಸಿ ಪುಝಾಲ್ ಜೈಲಿಗೆ ಕಳುಹಿಸಿದ್ದೇವೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಶೂಟಿಂಗ್ ವೇಳೆ ನಟಿಯ ಐಫೋನ್ ಎಗರಿಸಿದ ಕಳ್ಳರು

    ಶೂಟಿಂಗ್ ವೇಳೆ ನಟಿಯ ಐಫೋನ್ ಎಗರಿಸಿದ ಕಳ್ಳರು

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಚಿತ್ರದ ಶೂಟಿಂಗ್ ವೇಳೆ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ನಟಿ ಚಾಂದಿನಿ ಅಂಚನ್ ಕಳ್ಳರು ಐಫೋನ್ ಎಗರಿಸಿದ್ದಾರೆ.

    ಚಾಂದಿನಿ ಅಂಚನ್ ಹೋಮ್ ಮಿನಿಸ್ಟರ್ ಚಿತ್ರದ ಲೀಡ್ ರೋಲ್‍ನಲ್ಲಿ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಕಳೆದ 22ರಂದು ಚಾಂದಿನಿ ಅಂಚನ್ ಅವರ ಭಾಗದ ಚಿತ್ರೀಕರಣ ಕಬ್ಬನ್ ಪಾರ್ಕಿನಲ್ಲಿ ನಡೆಯುತ್ತಿತ್ತು. ಅಕ್ಕನ ಚಿತ್ರೀಕರಣದ ಭಾಗವನ್ನು ನೋಡಲು ನಟಿ ಹಾಗೂ ಮಾಡೆಲ್ ಸುಷ್ಮಿತಾ ಅಂಚನ್ ಅಲ್ಲಿಗೆ ಆಗಮಿಸಿದ್ದರು.

    ಸುಷ್ಮಿತಾ ಅಂಚನ್ ತನ್ನ ಸಹೋದರಿ ಚಾಂದಿನಿ ನಟನೆಯನ್ನು ನೋಡುತ್ತಾ ಕಬ್ಬನ್ ಪಾರ್ಕಿನ ಸೆಂಟ್ರಲ್ ಲೈಬ್ರರಿ ಮುಂದೆ ನಿಂತಿದ್ದರು. ಈ ವೇಳೆ ಕಳ್ಳರು ನಟಿ ಸುಷ್ಮಿತಾ ಕೈಯಲ್ಲಿದ್ದ ಐಫೋನ್ ಕಸಿದು ಅಲ್ಲಿಂದ ಪರಾರಿಯಾಗಿದ್ದಾರೆ.

    ಸುಷ್ಮಿತಾ ಅಂಚನ್, ನಟಿ ಹಾಗೂ ಮಾಡೆಲ್ ಆಗಿದ್ದು, ಲೂಸ್ ಮಾದ ಯೋಗೇಶ್ ಅಭಿನಯದ ‘ಪುಂಡ’ ಚಿತ್ರದಲ್ಲಿ ಅಭಿನಯಿಸಿದ್ದರು. ಅಲ್ಲದೆ ಮಿಸ್ ಗ್ಲೋರಿ ಇಂಡಿಯಾ 2019 ಸ್ಪರ್ಧೆಯಲ್ಲಿ ಮಿಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿಯನ್ನು ಪಡೆದಿದ್ದರು.

    ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಸಭ್ಯವಾಗಿ ವರ್ತಿಸಿದ್ದಲ್ಲದೆ 7 ವಾಹನಗಳ ಮೇಲೆ ಕಾರು ಹರಿಸಿದ್ದ ನಟಿ ಅರೆಸ್ಟ್

    ಅಸಭ್ಯವಾಗಿ ವರ್ತಿಸಿದ್ದಲ್ಲದೆ 7 ವಾಹನಗಳ ಮೇಲೆ ಕಾರು ಹರಿಸಿದ್ದ ನಟಿ ಅರೆಸ್ಟ್

    ಮುಂಬೈ: ಅಸಭ್ಯವಾಗಿ ವರ್ತಿಸಿದ್ದಲ್ಲದೆ ಪಾರ್ಕ್ ಮಾಡಿದ್ದ 7 ವಾಹನಗಳ ಮೇಲೆ ಕಾರು ಹರಿಸಿ ದಾಂಧಲೆ ಎಬ್ಬಿಸಿದ್ದ ಪ್ರಸಿದ್ಧ ನಟಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಏ.2ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿತ್ತು. ಪ್ರಕರಣ ಸಂಬಂಧ ನಟಿ ರೂಹಿ ಹಾಗೂ ಆಕೆಯ ಇಬ್ಬರು ಗೆಳೆಯರಾದ ರಾಹುಲ್ ಹಾಗೂ ಸ್ವಪ್ನಿಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

    ಘಟನೆ ವಿವರ:
    ರೂಹಿ, ರಾಹುಲ್ ಹಾಗೂ ಸ್ವಪ್ನಿಲ್ ರಾತ್ರಿ ಪಾರ್ಟಿ ಮುಗಿಸಿ ವಾಪಸ್ಸಾಗುತ್ತಿದ್ದರು. ಹೀಗೆ ಹಿಂದಿರುಗುತ್ತಿದ್ದಾಗ ಮೂವರಿಗೆ ವಾಶ್ ರೂಮ್ ಹೋಗುವಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಅವರು ತಮ್ಮ ದಾರಿಯಲ್ಲೇ ಸಿಗುವ ಪ್ರಸಿದ್ಧ ರೆಸ್ಟೋರೆಂಟ್ ಬಳಿ ಕಾರು ನಿಲ್ಲಿಸಿದ್ದಾರೆ. ಆದ್ರೆ ಅದಾಗಲೇ ತಡವಾಗಿದ್ದು ಸಿಬ್ಬಂದಿ ರೆಸ್ಟೋರೆಂಟ್ ಮುಚ್ಚಿದ್ದರು. ಈ ವೇಳೆ ಈ ಮೂವರು ತಮಗೆ ವಾಶ್ ರೂಮ್ ಗೆ ಹೋಗಬೇಕು. ಬಾಗಿಲು ತೆರೆಯಿರಿ ಎಂದು ಹೇಳಿದ್ದಾರೆ. ಆದ್ರೆ ರೆಸ್ಟೋರೆಂಟ್ ಸಿಬ್ಬಂದಿ ಇವರ ಮಾತಿಗೆ ಸಮ್ಮತಿ ಸೂಚಿಸಿರಲಿಲ್ಲ. ಅಲ್ಲದೆ ಈಗಾಗಲೇ ನಾವು ರೆಸ್ಟೋರೆಂಟ್ ಕ್ಲೋಸ್ ಮಾಡಿದ್ದು ತೆರೆಯಲ್ಲ ಎಂದು ಹೇಳಿ ನಿರಾಕರಿಸಿದ್ದಾರೆ.

    ಸಿಬ್ಬಂದಿ ನಿರಾಕರಿಸಿದ್ದರಿಂದ ಸಿಟ್ಟುಕೊಂಡ ಮೂವರು ಸಿಬ್ಬಂದಿ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಹಲ್ಲೆ ನಡೆಸಿ ರೆಸ್ಟೋರೆಂಟ್ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಇದರಿಂದ ಬೆದರಿದ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ ಕ್ಯಾರೇ ಎನ್ನದ ಈ ಮೂವರು ಕುಡಿದ ಮತ್ತಿನಲ್ಲಿ ತಮ್ಮ ಹುಚ್ಚಾಟವನ್ನು ಮುಂದುವರಿಸಿದ್ದಾರೆ. ಅಲ್ಲದೆ ರೆಸ್ಟೋರೆಂಟ್ ಎದುರು ಪಾರ್ಕ್ ಮಾಡಿದ್ದ 4 ದ್ವಿಚಕ್ರವಾಹನಗಳು ಹಾಗೂ ಮೂರು ಕಾರುಗಳಿಗೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಹಾನಿ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    https://www.instagram.com/p/BvuVX81nxkJ/?utm_source=ig_embed

  • 50 ಯೂಟ್ಯೂಬ್ ಚಾನೆಲ್‍ನಲ್ಲಿ ನಟಿಯ ಅಶ್ಲೀಲ ವಿಡಿಯೋ ಅಪ್ಲೋಡ್

    50 ಯೂಟ್ಯೂಬ್ ಚಾನೆಲ್‍ನಲ್ಲಿ ನಟಿಯ ಅಶ್ಲೀಲ ವಿಡಿಯೋ ಅಪ್ಲೋಡ್

    ಹೈದರಾಬಾದ್: ತೆಲುಗು ನಟಿ ಪೂನಂ ಕೌರ್ ಅವರ ಅಶ್ಲೀಲ ವಿಡಿಯೋಗಳನ್ನು ಕಿಡಿಗೇಡಿಗಳು 50 ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಬಗ್ಗೆ ಪೂನಂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ನಕಲಿ ವಿಡಿಯೋಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಈ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಎಂದು ಬುಧವಾರ ಪೂನಂ ಕೌರ್ ಸಿಟಿ ಪೊಲೀಸ್ ಕಮಿಷನರ್ ಬಳಿಕ ದೂರು ದಾಖಲಿಸಿದ್ದರು.

    ಹಣ ಪಡೆಯುವ ಸಲುವಾಗಿ ಕಿಡಿಗೇಡಿಗಳು 50 ಯೂಟ್ಯೂಬ್ ಚಾನೆಲ್‍ನಲ್ಲಿ ನನ್ನ ನಕಲಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಪೂನಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೂನಂ ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ಪೊಲೀಸರು ಕಿಡಿಗೇಡಿಗಳ ವಿರುದ್ಧ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪೂನಂ ‘ಶೌರ್ಯಂ’, ‘ವಿನಾಯಾಕುಡು’ ಹಾಗೂ ‘ಗಣೇಶ್ ಜಸ್ಟ್ ಗಣೇಶ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ‘ಬಂಧು-ಬಳಗ’ ಚಿತ್ರ ಸೇರಿದಂತೆ ತಮಿಳು, ಮಲೆಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ.

  • ಭೀಕರ ಅಪಘಾತದಲ್ಲಿ ಕಿರುತೆರೆ ನಟಿಯರಿಬ್ಬರ ದುರ್ಮರಣ

    ಭೀಕರ ಅಪಘಾತದಲ್ಲಿ ಕಿರುತೆರೆ ನಟಿಯರಿಬ್ಬರ ದುರ್ಮರಣ

    ಹೈದರಾಬಾದ್: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೆಲುಗು ಕಿರುತೆರೆಯ ನಟಿಯರಿಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಕಿರುತೆರೆ ನಟಿ ಭಾರ್ಗವಿ(20) ಮತ್ತು ಅನುಷಾ ರೆಡ್ಡಿ(21) ಮೃತ ದುರ್ದೈವಿಗಳು. ಚೆವೆಲ್ಲಾದಲ್ಲಿನ ಅಪ್ಪರೆಡ್ಡಿ ಬಸ್ ನಿಲ್ದಾಣದ ಬಳಿ ಈ ಅಪಘಾತ ನಡೆದಿದ್ದು, ಇಬ್ಬರು ನಟಿಯರು ಧಾರಾವಾಹಿಯ ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಧಾರಾವಾಹಿಯ ಮುಂದಿನ ದೃಶ್ಯಗಳನ್ನು ಶೂಟಿಂಗ್ ಮಾಡಲು ತಂಡದೊಂದಿಗೆ ಅನಂತಗಿರಿ ಅರಣ್ಯಕ್ಕೆ ಹೋಗಿದ್ದರು. ಅಲ್ಲಿ ಕೆಲವು ದೃಶ್ಯಗಳ ಶೂಟಿಂಗ್ ಮುಗಿಸಿ ಮಂಗಳವಾರ ರಾತ್ರಿ ಹೈದರಾಬಾದಿಗೆ ಹಿಂದಿರುಗುತ್ತಿದ್ದರು. ಚಾಲಕ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

    ಪರಿಣಾಮ ಅನುಷಾ ಮತ್ತು ಭಾರ್ಗವಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತ ಭಾರ್ಗವಿ ತೆಲಂಗಾಣ ನಿವಾಸಿಯಾಗಿದ್ದು, ‘ಮುತ್ಯಾಲ ಮುಗ್ಗು’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.

  • ಚಿತ್ರ ನಟಿ ಖುಷ್ಬೂರಿಂದ ಯುವಕನಿಗೆ ಕಪಾಳ ಮೋಕ್ಷ

    ಚಿತ್ರ ನಟಿ ಖುಷ್ಬೂರಿಂದ ಯುವಕನಿಗೆ ಕಪಾಳ ಮೋಕ್ಷ

    ಬೆಂಗಳೂರು: ನಗರದಲ್ಲಿ ಪ್ರಚಾರದ ವೇಳೆ ನಟಿ, ಎಐಸಿಸಿ ವಕ್ತಾರೆ ಖುಷ್ಬೂ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

    ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಖುಷ್ಬೂ ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಯ್ಸಳನಗರದಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಯುವಕನೊಬ್ಬ ಖುಷ್ಬೂ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಖುಷ್ಬೂ, ತಕ್ಷಣ ತಿರುಗಿ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಕೂಡಲೇ ಮಧ್ಯೆ ಬಂದ ಪೊಲೀಸರು ಕೂಡಾ ಯುವಕನಿಗೆ ಹೊಡೆದು ವಶಕ್ಕೆ ಪಡೆದಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಈ ಕುರಿತು ನಾನು ಖುಷ್ಬೂ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಆಗ ಅವರು ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ಕಪಾಳಕ್ಕೆ ಹೊಡೆದೆ ಎಂದು ಹೇಳಿದ್ದಾರೆ. ಸಾವಿರಾರು ಜನ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಇಂತಹ ಕಿಡಿಗೇಡಿ ಕೃತ್ಯಗಳು ಸಾಮಾನ್ಯವಾಗಿರುತ್ತದೆ. ಆ ಯುವಕ ಯಾರು ಎಂದು ನಮಗೆ ತಿಳಿದಿಲ್ಲ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರು ಸೆಂಟ್ರಲ್‍ನಿಂದ ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ ಮೋಹನ್ ಕಣಕ್ಕಿಳಿದಿದ್ದಾರೆ.

  • ಒಂದು ರಾತ್ರಿ ಕಾಂಪ್ರಮೈಸ್ ಮಾಡ್ಕೋ ಎಂದ ನಿರ್ಮಾಪಕ- ಜಾಣತನ ಮೆರೆದ  ನಟಿ

    ಒಂದು ರಾತ್ರಿ ಕಾಂಪ್ರಮೈಸ್ ಮಾಡ್ಕೋ ಎಂದ ನಿರ್ಮಾಪಕ- ಜಾಣತನ ಮೆರೆದ ನಟಿ

    ಮುಂಬೈ: ಒಂದು ರಾತ್ರಿ ಕಾಂಪ್ರಮೈಸ್ ಮಾಡಿಕೋ ಎಂದು ಹೇಳಿದ ನಿರ್ಮಾಪಕನಿಗೆ ಮರಾಠಿ ಚಿತ್ರದ ನಟಿ ಶ್ರುತಿ ಮರಾಠೆ ಜಾಣತನದ ಉತ್ತರ ನೀಡಿದ್ದು, ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಹ್ಯುಮನ್ಸ್ ಆಫ್ ಮುಂಬೈ ಬಗ್ಗೆ ಮಾತನಾಡಿದ ನಟಿ ಶ್ರುತಿ, ಚಿತ್ರಕ್ಕೆ ಆಡಿಶನ್ ಮಾಡುವಾಗ ಆದಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ನಿರ್ಮಾಪಕ ಮಾಡಿದ ಇಂಟರ್ ವ್ಯೂವ್ ನಲ್ಲಿ ಶ್ರುತಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕ, “ಕಾಂಪ್ರಮೈಸ್”, ಹಾಗೂ “ಒಂದು ರಾತ್ರಿ” ಎಂಬ ಪದಗಳನ್ನು ಬಳಸಲು ಶುರು ಮಾಡಿದ್ದರು.

    ನಿರ್ಮಾಪಕನ ಮಾತನ್ನು ಅರ್ಥ ಮಾಡಿಕೊಂಡ ಶ್ರುತಿ, ಈ ವಿಷಯವನ್ನು ಸುಮ್ಮನೆ ಬಿಡದೆ ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಿದ್ದಾರೆ. ನಾನು ನಿಮ್ಮ ಜೊತೆ ಮಲಗಬೇಕೆಂದರೆ, ನೀವು ನಾಯಕ ನಟನನ್ನು ಯಾರ ಜೊತೆ ಮಲಗಿಸುತ್ತಿದ್ದೀರಾ? ಎಂದು ಮರುಪ್ರಶ್ನೆ ಕೇಳಿದ್ದಾರೆ. ಶ್ರುತಿ  ಪ್ರಶ್ನೆಗೆ ನಿರ್ಮಾಪಕ ದಂಗಾಗಿದ್ದಾನೆ.

    ನಿರ್ಮಾಪಕನ ಜೊತೆ ಮಾತನಾಡಿದ ನಂತರ ಶ್ರುತಿ, ಈ ವಿಷಯವನ್ನು ಅಲ್ಲಿದ್ದವರಿಗೆ ತಿಳಿಸಿದ್ದಾರೆ. ಬಳಿಕ ಚಿತ್ರತಂಡ ಆ ವ್ಯಕ್ತಿಯನ್ನು ಚಿತ್ರದಿಂದ ಹೊರ ನಡೆಯಲು ತಿಳಿಸಿದ್ದಾರೆ. ಆ ದಿನ ನಾನು ಧೈರ್ಯವಾಗಿ ಇರಲು ನನಗೆ ಒಂದು ನಿಮಿಷ ಸಾಕಾಗಿತ್ತು. ಆ ದಿನ ನಾನು ನನ್ನ ಒಬ್ಬಳಿಗಾಗಿ ಧ್ವನಿ ಎತ್ತಿಲಿಲ್ಲ. ನಾನು ಪ್ರತಿ ಮಹಿಳೆಯರಿಗಾಗಿ ಧ್ವತಿ ಎತ್ತಿದೆ ಎಂದು ನಟಿ ಶ್ರುತಿ ಹೇಳಿದ್ದಾರೆ.

    ಶ್ರುತಿ ಮರಾಠಯ ‘ತಪ್ತಪದಿ’ ಹಾಗೂ ‘ರಾಮಾ ಮಾಧವ್’ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಬಾಲಿವುಡ್‍ನಲ್ಲಿ ‘ಬುದಿಯಾ ಸಿಂಗ್- ಬಾರ್ನ್ ಟು ರನ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಷ್ಟೇ ಅಲ್ಲದೇ ‘ರಾಧಾ ಕಿ ಬಾವರಿ’ ಹಾಗೂ ‘ಲಗ್ನಬಾಮಬಲ್’ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

     

    View this post on Instagram

     

    “I’ve been in this industry since I was 16 years old. Over the years I’ve been celebrated in the limelight & shamed behind the camera. People have a misconception that actors lead a comfortable life & always feel good about themselves–that’s not true. Whether we like it or not, whether we feel right or not, we have to be the best versions of ourselves. There are no ‘bad days’. I remember, early on in my career, for a south film, I was asked to wear a bikini–I agreed without thinking twice. Questions like, ‘How are you going to shoot it?’ or ‘Is it required?’ didn’t even cross my mind. I was getting an opportunity to be in a film & that’s all that mattered! Years later when I gained popularity in a Marathi show, people looked me up & stumbled upon the bikini scene. I was trolled for the way I looked & how it was shot. Do you know how much that damages your self-esteem? I put myself out there without any barriers–but I wasn’t accepted; I was objectified. I still continued working as if it didn’t bother me. But I had a dream. I’d worked so hard & was finally moving forward, I wasn’t going to let it go–just because someone else had a problem, they weren’t in my shoes & would never know what it felt like. Slowly, I made myself tougher. Once I met a producer who’d offered me a lead role. At first he was professional, but soon he began using the words, ‘compromise’ & ‘one night’. I couldn’t let this slip so I asked him, ‘If you want me to sleep with you, who are you making the hero sleep with?’ He was stunned. I immediately informed others of his behaviour & they asked him to leave the project. All it took was one minute of being fearless–that day, I didn’t just stand up for me… I stood up for every woman who’s been objectified & judged for simply being who she is; for simply being ambitious. Why should the archaic rules of society & today’s so-called modern world stop me? My clothes don’t define me–my talent does, my hard work does, my success does & I think it’s high time, people realise that.” —– HoB with #FlipOnErosNow brings to you stories of people who have dealt with uncertainties and insecurities that life throws your way and have emerged triumphant

    A post shared by Humans of Bombay (@officialhumansofbombay) on

  • ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಮೋಸ

    ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಮೋಸ

    ಬೆಂಗಳೂರು: ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಸಹ ನಿರ್ದೇಶಕನೊಬ್ಬ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಪ್ರಭು ಮೋಸ ಮಾಡಿದ ಸಹನಿರ್ದೇಶಕ. ಮೋಸ ಹೋದ ಯುವತಿ ಧಾರಾವಾಹಿಗಳಲ್ಲಿ ಸಹ ನಟಿಯಾಗಿ ನಟನೆ ಮಾಡಿಕೊಂಡಿದ್ದಳು. ಧಾರಾವಾಹಿ ನಟನೆ ಮಾಡುವಾಗ ಸಹ ನಿರ್ದೇಶಕನಾಗಿ ಪ್ರಭು ಪರಿಚಯನಾಗಿದ್ದು, ಆತನೇ ಯುವತಿಗೆ ಮೋಸ ಮಾಡಿ ತಲೆಮರಿಸಿಕೊಂಡಿದ್ದಾನೆ.

    ಧಾರವಾಹಿಗಳಲ್ಲಿ ಸಹನಟಿಯಾಗಿ ನಟಿಸುತ್ತಿದ್ದ ಯುವತಿಗೆ, ಸ್ಯಾಂಡಲ್‍ವುಡ್‍ನ ಮೇರು ನಟಿಯಾಗಿ ಮಾಡುತ್ತೀನಿ. ಕಡಿಮೆ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡೋದಕ್ಕೆ ಅವಕಾಶ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಜೊತೆಗೆ ಒಳ್ಳೆಯ ಸಿನಿಮಾಗಳಲ್ಲಿ ಅವಕಾಶ ಮಾಡಿಕೊಡುತ್ತೀನಿ ನಂಬಿ ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿ ಸಹ ನಿರ್ದೇಶಕ ಪ್ರಭು ಎಸ್ಕೇಪ್ ಆಗಿದ್ದಾನೆ. ಪ್ರಭು ನನ್ನ ರೀತಿಯಲ್ಲಿ ಹಲವರಿಗೆ ಅಮಿಷಗಳ್ನೊಡ್ಡಿ ಮೋಸ ಮಾಡಿದ್ದಾನೆಂದು ಸಹನಟಿ ಆರೋಪಿಸಿದ್ದಾಳೆ.

    ಯುವತಿ ಜೋಕಾಲಿ, ತಂಗಾಳಿ, ಸೇರಿ ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾಳೆ. ತನಗಾದ ಅನ್ಯಾಯ ಹಾಗೂ ವಂಚನೆ ಬಗ್ಗೆ ಯುವತಿ ಸಹ ನಿರ್ದೇಶಕನೆಂದು ನಂಬಿಸಿದ್ದ ಪ್ರಭು ವಿರುದ್ಧ ಯುವತಿ ಕೋತ್ತನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಪೊಲೀಸರು ವಂಚಕ ಪ್ರಭುವನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ. ಮೇರು ನಟಿ ಆಗುವಾಸೆಗೆ ಯುವತಿ ತನ್ನ ಬಳಿ ಇದ್ದ ಒಡವೆ ಹಾಗೂ ಹಣವನ್ನು ಕೊಟ್ಟು ಕೈ ಸುಟ್ಟಿಕೊಂಡಿದ್ದು ಕಳೆದುಕೊಂಡ ಹಣ ಒಡವೆಗಾಗಿ ಪರಿತಪಿಸುತ್ತಿದ್ದಾಳೆ.

  • ಡ್ರಂಕ್ ಆ್ಯಂಡ್ ಡ್ರೈವ್ – ಪೊಲೀಸ್ ಕೆನ್ನೆಗೆ ಬಾರಿಸಿದ ನಟಿ ವಿರುದ್ಧ ಎಫ್‍ಐಆರ್

    ಡ್ರಂಕ್ ಆ್ಯಂಡ್ ಡ್ರೈವ್ – ಪೊಲೀಸ್ ಕೆನ್ನೆಗೆ ಬಾರಿಸಿದ ನಟಿ ವಿರುದ್ಧ ಎಫ್‍ಐಆರ್

    ಮುಂಬೈ: ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಕೆನ್ನೆಗೆ ಬಾರಿಸಿದ್ದು ಮತ್ತು ಡ್ರಂಕ್ ಆ್ಯಂಡ್ ಡ್ರೈವ್ ಆರೋಪದಡಿಯಲ್ಲಿ ನಟಿ ರೂಹಿ ಸಿಂಗ್ ಸೇರಿದಂತೆ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಟಿ ರೂಹಿ ಸಿಂಗ್ ಗೆಳೆಯರಾದ ರಾಹುಲ್ ಸಿಂಗ್ ಮತ್ತು ಸ್ವಪ್ನಿಲ್ ಸಿಂಗ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೂಹಿ ಸಿಂಗ್ ನೋಟಿಸ್ ನೀಡಲಾಗಿದೆ.

    ಸೋಮವಾರ ರಾತ್ರಿ ರೂಹಿ ಸಿಂಗ್ ತನ್ನ ನಾಲ್ವರು ಗೆಳೆಯರೊಂದಿಗೆ ಪಬ್ ನಿಂದ ಮನೆಗೆ ಹಿಂದಿರುಗಿತ್ತಿದ್ದರು. ತಡರಾತ್ರಿ ಬಾಂದ್ರಾದಲ್ಲಿರುವ ಮಾಲ್ ಬಳಿ ಕಾರ್ ನಿಲ್ಲಿಸಿದ್ದಾರೆ. ಶೌಚಾಲಯ ಬಳಸಬೇಕೆಂದು ಮಾಲ್ ಒಳಗಡೆ ಹೋಗಲು ಪ್ರಯತ್ನಿಸಿದ್ದಾರೆ. ತಡರಾತ್ರಿಯಾದ ಹಿನ್ನೆಲೆಯಲ್ಲಿ ಮಾಲ್ ಭದ್ರತಾ ಸಿಬ್ಬಂದಿ ನಟಿಗೆ ಪ್ರವೇಶ ನಿರಾಕರಿಸಿದ್ದಾರೆ. ಪ್ರವೇಶ ನಿರಾಕರಿಸಿದ್ದರಿಂದ ನಟಿ ಮತ್ತು ಸಿಬ್ಬಂದಿ ನಡುವೆ ಜಗಳ ನಡೆದಿದೆ.

    ಜಗಳ ವಿಕೋಪ ತಿರುಗುತ್ತಿದ್ದಂತೆ ಮಾಲ್ ಸಿಬ್ಬಂದಿ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ರೂಹಿ, ರಾಹುಲ್ ಮತ್ತು ಸ್ವಪ್ನಿಲ್ ಕರ್ತವ್ಯನಿರತ ಇಬ್ಬರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಮಾಲ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ರೂಹಿ ಮತ್ತು ಇಬ್ಬರು ಗೆಳೆಯರಿಗೆ ಅಲ್ಲಿಂದ ತೆರಳಲು ಅನುಮತಿ ನೀಡಿ, ರಾಹುಲ್ ಹಾಗೂ ಸ್ವಪ್ನಿಲ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪೊಲೀಸರಿಂದ ಅನುಮತಿ ಪಡೆದು ಕಾರಿನಲ್ಲಿ ಹೊರಟ ರೂಹಿ ನಿಲ್ಲಿಸಲಾಗಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಸಂಬಂಧ ಅತಿ ವೇಗ ಮತ್ತು ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಮದು ಡಿಸಿಪಿ ಪರಮಜಿತ್ ಸಿಂಗ್ ತಿಳಿಸಿದ್ದಾರೆ.

    ಈ ಕುರಿತು ಸ್ಪಷ್ಟನೆ ನೀಡಿರುವ ರೂಹಿ ಸಿಂಗ್, ಈ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ರೂಹಿ ಸಿಂಗ್ ಎಂದು ತೋರಿಸಲಾಗುತ್ತಿರುವ ಆ ಮಹಿಳೆ ನಾನಲ್ಲ. ಆ ಮಹಿಳೆ ನನ್ನ ಹೆಸರನ್ನು ಬಳಸಿಕೊಂಡಿದ್ದರಿಂದ ಈ ಗೊಂದಲ ಉಂಟಾಗಿದೆ. ಹಾಗಾಗಿ ಯಾರು ಸುಳ್ಳು ಸುದ್ದಿಗಳತ್ತ ಗಮನ ಕೊಡಬೇಡಿ ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ.

    https://www.youtube.com/watch?v=ksupG4Urfug