Tag: actress

  • ರಾಮ್ ಗೋಪಾಲ್ ವರ್ಮಾರಿಂದ ನಟಿಯ ಬಿಕಿನಿ ಫೋಟೋ ಶೇರ್

    ರಾಮ್ ಗೋಪಾಲ್ ವರ್ಮಾರಿಂದ ನಟಿಯ ಬಿಕಿನಿ ಫೋಟೋ ಶೇರ್

    ಹೈದರಾಬಾದ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ನೀಲಿತಾರೆಯ ಅರೆನಗ್ನ ಫೋಟೋವನ್ನ ಶೇರ್ ಮಾಡುವ ಮೂಲಕ ಆ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

    ವರ್ಮಾ ಅವರು ಟ್ವಿಟ್ಟರ್‌ನಲ್ಲಿ ಅಮೆರಿಕನ್ ನೀಲಿ ತಾರೆ ಮಿಯಾ ಮಲ್ಕೋವಾ ಅವರ ಬಿಕಿನಿ ಫೋಟೋವನ್ನ ಹಂಚಿಕೊಂಡಿದ್ದಾರೆ. ಮೊದಲಿಗೆ ನಟಿ ಬೀಚಿನಲ್ಲಿ ಬಿಕಿನಿ ಧರಿಸಿ ಮಲಗಿರುವ ಫೋಟೋ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಜೊತೆಗೆ ಈ ಫೋಟೋಗೆ ಕ್ಯಾಪ್ಶನ್ ಕೊಡಿ ಎಂದು ಬರೆದಿದ್ದರು.

    ವರ್ಮಾ ಅವರು ಆ ಟ್ವಿಟನ್ನು ಟ್ಯಾಗ್ ಮಾಡಿ “ಆಯತಾಕಾರದ ಪ್ರೀತಿಯ ತ್ರಿಕೋನ ವಕ್ರರೇಖೆ” ಎಂದು ಬರೆದುಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾಗೆ ನಟಿ ಮಿಯಾ ಮಲ್ಕೋವಾ ಪರಿಚಯವಿದೆ. ಈ ಹಿಂದೆ ‘ಗಾಡ್ ಸೆಕ್ಸ್ ಮತ್ತು ಟ್ರೂತ್’ ಸಾಕ್ಷ್ಯಚಿತ್ರ ಮಾಡಿದ್ದರು.

    ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಅವರು ‘ಕಮ್ಮ ರಾಜ್ಯಂಲೋ ಕಡಪ ರೆಡ್ಡಲು’ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಪವನ್ ಕಲ್ಯಾಣ್ ಅವರಂತೆ ಕಾಣಿಸುವಂತಹ ನಟನೊಬ್ಬನನ್ನ ಕರೆತಂದಿದ್ದಾರೆ. ಇತ್ತೀಚೆಗಷ್ಟೆ ನಕಲಿ ಪವನ್ ಕಲ್ಯಾಣ್ ಅವರ ಲುಕ್ ಕೂಡ ಬಿಡುಗಡೆ ಮಾಡಿದ್ದರು.

  • ಬಾತ್‍ಟಬ್‍ನಲ್ಲಿ ಕುಳಿತು ಹಾಟ್ ಫೋಟೋ ಕ್ಲಿಕ್ಕಿಸಿಕೊಂಡ ದಿಶಾ ಪಠಾಣಿ

    ಬಾತ್‍ಟಬ್‍ನಲ್ಲಿ ಕುಳಿತು ಹಾಟ್ ಫೋಟೋ ಕ್ಲಿಕ್ಕಿಸಿಕೊಂಡ ದಿಶಾ ಪಠಾಣಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟರ್ ಎಂಎಸ್ ಧೋನಿ ಅವರ ಬಯೋಪಿಕ್ ‘ದ ಅನ್‍ಟೋಲ್ಡ್ ಸ್ಟೋರಿ’ ಸಿನಿಮಾ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿರುವ ನಟಿ ದಿಶಾ ಪಠಾಣಿ ಸದ್ಯಕ್ಕೆ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆಗಿದ್ದಾರೆ.

    ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗಿಂದ ತಮ್ಮ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿ ನೀಡುತ್ತಲೇ ಬಂದಿರುವ ನಟಿ ದಿಶಾ ಪಠಾಣಿ, ಇದೀಗ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

    https://www.instagram.com/p/B0-Nc3UARfr/

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದಿಶಾ ಪಠಾಣಿ ಅವರು ಬಿಕಿನಿ ತೊಟ್ಟ ಹಾಟ್ ಫೋಟೊಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹರಿಯಬಿಟ್ಟಿದ್ದರು. ಇದೀಗ ದಿಶಾ ‘ಬಾತ್ ಟಬ್’ನಲ್ಲಿ ಕುಳಿತು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಬ್ಲಾಕ್ ಡ್ರೆಸ್‍ನಲ್ಲಿ ದಿಶಾ ಪಠಾಣಿ ಮಿಂಚಿದ್ದು, ಮತ್ತೊಂದು ಫೋಟೋದಲ್ಲಿ ಅವರು ಧರಿಸಿದ್ದ ಉಂಗುರ ಹಾಗೂ ಆಭರಣ ಹೈಲೆಟ್ ಆಗಿವೆ. ಬಾಲಿವುಟ್ ಹಾಟ್ ನಟಿ ದಿಶಾ ಅವರ ಫೋಟೋ ನೋಡಿರುವ ಅಭಿಮಾನಿಗಳು ತಮ್ಮದೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

    ಇತ್ತೀಚೆಗೆ ರಿಲೀಸ್ ಆಗಿ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಮನ ಗೆದ್ದ ಸಲ್ಮಾನ್ ಖಾನ್ ನಾಯಕತ್ವದ ‘ಭಾರತ್’ ಚಿತ್ರದಲ್ಲಿ ದಿಶಾ ಅವರು ‘ರಾಧಾ’ ಪಾತ್ರದಲ್ಲಿ ಮಿಂಚಿದ್ದಾರೆ. ದಿಶಾ ಪಠಾಣಿ ಅವರು ಸದ್ಯಕ್ಕೆ ಮೋಹಿತ್ ಸೂರಿ ನಿರ್ದೇಶನದ ‘ಮಲಾಂಗ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    https://www.instagram.com/p/B0-Ms8HgTFn/

  • Plz ನನ್ನ ಜೊತೆ ಸೆಕ್ಸ್ ಮಾಡ್ತೀರಾ – ನಟಿಗೆ ವ್ಯಕ್ತಿ ಮೆಸೇಜ್

    Plz ನನ್ನ ಜೊತೆ ಸೆಕ್ಸ್ ಮಾಡ್ತೀರಾ – ನಟಿಗೆ ವ್ಯಕ್ತಿ ಮೆಸೇಜ್

    ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಮಹಿಳೆಯರಿಗೆ ಮತ್ತು ನಟಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಬಾಲಿವುಡ್ ನಟಿ, ಗಾಯಕಿಯೊಬ್ಬರಿಗೆ ಅಸಭ್ಯವಾಗಿ ವ್ಯಕ್ತಿಯೊಬ್ಬ ಮೆಸೇಜ್ ಮಾಡಿದ್ದಾನೆ.

    ನಟಿ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ ಫೇಸ್‍ಬುಕ್ ಮೂಲಕ ವ್ಯಕ್ತಿಯೊಬ್ಬ ಅಸಭ್ಯವಾಗಿ ಸಂದೇಶ ಕಳುಹಿಸಿದ್ದಾನೆ. ಈ ಮೆಸೇಜಿನ ಸ್ಕ್ರೀನ್‍ಶಾಟ್ ತೆಗೆದು ನಟಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ವ್ಯಕ್ತಿ ನಟಿಗೆ “ಕೃಷ್ಣಮೂರ್ತಿ ಅವರೇ ನೀವು ನನ್ನೊಂದಿಗೆ ಸೆಕ್ಸ್ ಮಾಡುತ್ತೀರಾ” ಎಂದು ಅಸಭ್ಯವಾಗಿ ಮೆಸೇಜ್ ಮಾಡಿದ್ದಾನೆ.

    ನಟಿ ಸುಚಿತ್ರಾ ಅವರು “ರಾಷ್ಟ್ರೀಯ ಅಪರಾಧ ತಡೆಗಟ್ಟುವಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಾಗಿ ವ್ಯಕ್ತಿ ತನ್ನ ಬಳಿ ಹೇಳಿಕೊಂಡಿದ್ದಾನೆ. ಆದರೆ ಈತ ಮಹಿಳೆಯರಿಗೆ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾನೆ. ಹೀಗಾಗಿ ದಯವಿಟ್ಟು ಇದರ ಬಗ್ಗೆ ಗಮನಹರಿಸಿ” ಎಂದು ನಟಿ ಆತನ ಫೇಸ್‍ಬುಕ್ ಖಾತೆಯನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ದೂರಿದ್ದಾರೆ.

    ಸುಚಿತ್ರಾ ಅವರ ಟ್ವೀಟ್‍ಗೆ ಮುಂಬೈ ಪೊಲೀಸರು ಪ್ರತಿಕ್ರಿಯಿಸಿದ್ದು, “ನಾವು ನಿಮ್ಮನ್ನು ಹಿಂಬಾಲಿಸುತ್ತಿದ್ದೇವೆ. ದಯವಿಟ್ಟು ನೀವು ನಿಮ್ಮ ದೂರವಾಣಿ ವಿವರಗಳನ್ನು ನೀಡಿ” ಎಂದು ರೀಟ್ವೀಟ್ ಮಾಡಿದ್ದಾರೆ. ಇದಕ್ಕೆ ತಕ್ಷಣ “ನಿಮ್ಮ ಶೀಘ್ರ ಪ್ರತಿಕ್ರಿಯೆಗೆ ಧನ್ಯವಾದಗಳು, ಕೇವಲ ನಿಮ್ಮ ಗಮನಕ್ಕೆ ತರಲು ಮಾತ್ರ ಈ ಬಗ್ಗೆ ತಿಳಿಸಿದೆ. ಇದರಿಂದ ನಾನು ಯಾವುದೇ ಬೆದರಿಕೆಗೆ ಒಳಗಾಗುವುದಿಲ್ಲ. ಆತ ನನ್ನಂತ ಅನೇಕರಿಗೆ ಈ ರೀತಿಯಾಗಿ ಮೆಸೇಜ್ ಮಾಡಿದರೆ ಸಾಮಾಜಿಕ ಜಾಲತಾಣಗಳಲ್ಲಿರುವ ಬೇರೆ ಯುವತಿಯ ಪರಿಸ್ಥಿತಿ ಏನು? ಎಂದು ಪೊಲೀಸರಿಗೆ ಮತ್ತೆ ಟ್ವೀಟ್ ಮಾಡಿದ್ದಾರೆ.

    ಇದಕ್ಕೆ ಮತ್ತೆ ಪೊಲೀಸರು “ಮೇಡಂ ನಾವು ಈಗಾಗಲೇ ಆ ಖಾತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಜೊತೆಗೆ ನೀವು ನೀಡಿದ ಮಾಹಿತಿಯನ್ನು ಸೈಬರ್ ಕ್ರೈಂ ವಿಭಾಗಕ್ಕೂ ರವಾನೆ ಮಾಡಿಸಿದ್ದೇವೆ. ಮುಂದೆ ನಿಮಗೆ ಏನಾದರೂ ಸಮಸ್ಯೆಯಾದರೆ 100 ನಂಬರಿಗೆ ಫೋನ್ ಮಾಡಿ ಅಥವಾ ಟ್ವೀಟ್ ಮಾಡಿ” ಎಂದು ಪೊಲೀಸರು ಧೈರ್ಯ ತುಂಬಿದ್ದಾರೆ.

    ನಟಿ ಸುಚಿತ್ರಾ ಕೃಷ್ಣಮೂರ್ತಿ ಕಿರುತೆಯಲ್ಲಿ ನಟಿಸಿದ್ದು, ಜೊತೆಗೆ ಕೆಲವು ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಇವರು ಗಾಯಕಿ ಕೂಡ ಆಗಿದ್ದಾರೆ.

  • ನಟಿಯ ಮೇಲೆ ನಿರಂತರ ಅತ್ಯಾಚಾರ

    ನಟಿಯ ಮೇಲೆ ನಿರಂತರ ಅತ್ಯಾಚಾರ

    ಭೋಪಾಲ್: 24 ವರ್ಷದ ನಟಿಯೊಬ್ಬರಿಗೆ ಮದುವೆಯಾಗುವುದಾಗಿ ಭರವಸೆ ಕೊಟ್ಟು ಬ್ಯೂಟಿ ಕ್ಲಿನಿಕ್ ಮಾಲೀಕ ನಿರಂತರವಾಗಿ 4 ವರ್ಷದಿಂದ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

    ಸಂತ್ರಸ್ತೆ ಒಂದು ತಿಂಗಳ ಹಿಂದೆ ಆರೋಪಿ ನಟನ ಮೇಲೆ ಅತ್ಯಾಚಾರದ ದೂರನ್ನು ದಾಖಲಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಮುಂಬೈ ಪೊಲೀಸರು ಶೂನ್ಯ ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಈ ಕೇಸ್ ಎಂಪಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಆ ಪೊಲೀಸ್ ಠಾಣೆಗೆ ಕೇಸನ್ನು ವರ್ಗಾವಣೆ ಮಾಡಿದ್ದಾರೆ. ಅವರು ಆರೋಪಿಯ ವಿರುದ್ಧ ಅತ್ಯಾಚಾರ ಮತ್ತು ಚೀಟಿಂಗ್ ಕೇಸನ್ನು ದಾಖಲಿಸಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ಮುಂಬೈ ಮೂಲದವಳಾಗಿದ್ದು, ಮಾಡೆಲ್ ಕ್ಷೇತ್ರದಲ್ಲಿ ಮತ್ತು ಸಿನಿಮಾದಲ್ಲಿ ಸಣ್ಣ-ಪುಟ್ಟ ಪಾತ್ರವನ್ನು ಮಾಡಿಕೊಂಡಿದ್ದರು. ನಾಲ್ಕು ವರ್ಷಗಳಿಂದ ಆರೋಪಿ ಮತ್ತು ತನಗೆ ಪರಿಚಯವಿದೆ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಅಭಿನೇತ್ ಎಂದು ಗುರುತಿಸಲಾಗಿದ್ದು, ಈತ ಚುನಭಟ್ಟಿ ಪ್ರದೇಶದ ನಿವಾಸಿಯಾಗಿದ್ದಾನೆ. ಅದೇ ಪ್ರದೇಶದಲ್ಲಿ ಬ್ಯೂಟಿ ಕ್ಲಿನಿಕ್ ನಡೆಸುತ್ತಿದ್ದನು. ಇಬ್ಬರು ಸ್ನೇಹಿತರಾಗಿದ್ದು, ಆರೋಪಿ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಭೋಪಾಲ್‍ನಲ್ಲಿ ಸಂತ್ರಸ್ತೆಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾನೆ. ಒಂದು ದಿನ ಎಂಪಿ ನಗರ ಪ್ರದೇಶದ ಹೋಟೆಲ್‍ಗೆ ಕರೆದುಕೊಂಡು ಹೋಗಿ ಮದುವೆಯಾಗುವ ಭರವಸೆ ನೀಡಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದಾನೆ. ನಂತರ ಗೋವಾ ಸೇರಿದಂತೆ ಅನೇಕ ಕಡೆ ಕರೆದುಕೊಂಡು ಹೋಗಿ ಹಲವು ಬಾರಿ ನಿರಂತರವಾಗಿ ನಾಲ್ಕು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಇತ್ತೀಚೆಗೆ ಸಂತ್ರಸ್ತೆ ಮದುವೆಯಾಗುವಂತೆ ಕೇಳಿದ್ದಾಳೆ. ಆಗ ಆರೋಪಿ ಅಭಿನೇತ್ ವಿವಾಹವಾಗಲು ನಿರಾಕರಿಸಿದ್ದಾನೆ. ನಂತರ ಸಂತ್ರಸ್ತೆ ಸಮ್ತಾ ನಗರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

    ಸದ್ಯಕ್ಕೆ ನಾವು ಶೂನ್ಯ ಎಫ್‍ಐಆರ್ ಆಧಾರದ ಮೇರೆಗೆ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ. ನಾಲ್ಕು ವರ್ಷಗಳ ಹಿಂದೆ ಹೋಗಿದ್ದ ಹೋಟೆಲ್‍ಗೆ ಹೋಗಿ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸದ್ಯದಲ್ಲೇ ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತೇವೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

    ಶೂನ್ಯ ಎಫ್‍ಐಆರ್?
    ಅಪರಾಧ ನಡೆದ ಸ್ಥಳ ಬೇರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದರೂ ಸಂತ್ರಸ್ತರು ನೀಡುವ ದೂರಿನ ಮೇರೆಗೆ ಎಲ್ಲಿ ಬೇಕಾದರೂ ಝೀರೋ ಎಫ್‍ಐಆರ್ ದಾಖಲಿಸಬಹುದು. ಆ ನಂತರ ಆ ಪ್ರಕರಣವನ್ನು ನಿರ್ದಿಷ್ಟ ಪೊಲೀಸ್ ಠಾಣೆಗೆ ವರ್ಗಾಯಿಸಬಹುದು. ಸಂತ್ರಸ್ತರನ್ನು ನಮ್ಮ ಪೊಲೀಸ್ ಠಾಣೆಯಲ್ಲ ಎಂದು ಅಲ್ಲಿಂದಿಲ್ಲಿಗೆ ಅಲೆದಾಡುವುದನ್ನು ತಪ್ಪಿಸಲು ಗೃಹ ಇಲಾಖೆ ವ್ಯವಸ್ಥೆ ಜಾರಿಗೆ ತಂದಿದೆ.

  • ಸಾಮಾಜಿಕ ಜಾಲತಾಣದಲ್ಲಿ ನಟಿಯ ಪೋಸ್ಟ್‌‌ಗೆ ಅಶ್ಲೀಲ ಕಮೆಂಟ್ -ವ್ಯಕ್ತಿ ಅರೆಸ್ಟ್

    ಸಾಮಾಜಿಕ ಜಾಲತಾಣದಲ್ಲಿ ನಟಿಯ ಪೋಸ್ಟ್‌‌ಗೆ ಅಶ್ಲೀಲ ಕಮೆಂಟ್ -ವ್ಯಕ್ತಿ ಅರೆಸ್ಟ್

    ಕೋಲ್ಕತ್ತಾ: ಸಾಮಾಜಿಕ ಜಾಲತಾಣದಲ್ಲಿ ಬೆಂಗಾಳಿ ನಟಿಯ ಪೋಸ್ಟ್‌‌ಗೆ ನಿಂದಿಸಿದಲ್ಲದೆ, ಅಶ್ಲೀಲವಾಗಿ ಕಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಅರುನಿಮಾ ಗೋಶ್ ದೂರು ನೀಡಿದ್ದ ನಟಿಯಾಗಿದ್ದು, ಮುಕೇಶ್ ಶಾ ಬಂಧನಕ್ಕೊಳಗಾದ ವ್ಯಕ್ತಿ. ಮುಕೇಶ್ ಶಾ ದಕ್ಷಿಣ ಕೋಲ್ಕತ್ತಾದ ಗರ್ಫಾ ನಿವಾಸಿಯಾಗಿದ್ದು, ಅಶ್ಲೀಲವಾಗಿ ಕಮೆಂಟ್ ಮಾಡಿದ್ದಕ್ಕೆ ಭಾನುವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಆರೋಪಿ ಮುಕೇಶ್ ಶಾ ಮೇ 30ರಿಂದ ನಟಿ ಅರುನಿಮಾ ಅವರ ಪೋಸ್ಟ್‌‌ಗೆ ನಿಂದಿಸುತ್ತಾ, ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದನು. ಅಲ್ಲದೆ ಮುಕೇಶ್ ಮಯಾಂಕ್ ಹೆಸರಿನಲ್ಲಿ ನಕಲಿ ಖಾತೆ ಕೂಡ ತೆರೆದಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಮುಕೇಶ್ ಶಾ ಯಾಕೆ ಈ ರೀತಿ ಮಾಡಿದ್ದಾನೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಮುಕೇಶ್ ಮಾನಸಿಕವಾಗಿ ಸರಿಯಾಗಿ ಇದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟಿ ಅರುನಿಮಾ, ನಾನು ಇಂತಹ ವಿಷಯಗಳನ್ನು ನಿರ್ಲಕ್ಷಿಸುತ್ತೇನೆ. ಆದರೆ ನಾನು ಎಲ್ಲಿ ಹೋದರೂ ಆತ ನನ್ನ ಹಿಂದೆ ಬರುತ್ತಿರುವುದನ್ನು ಗಮನಿಸಿದೆ. ಹಾಗಾಗಿ ಕೋಲ್ಕತ್ತಾ ಪೊಲೀಸರಿಗೆ ಸಂಪರ್ಕಿಸಿ ದೂರು ನೀಡಿದೆ ಎಂದು ಹೇಳಿದ್ದಾರೆ.

  • 7 ವರ್ಷದಿಂದ ನಟಿ ಮೇಲೆ ನಿರಂತರ ಅತ್ಯಾಚಾರ – ಕಿರುತೆರೆ ನಟ ಅರೆಸ್ಟ್

    7 ವರ್ಷದಿಂದ ನಟಿ ಮೇಲೆ ನಿರಂತರ ಅತ್ಯಾಚಾರ – ಕಿರುತೆರೆ ನಟ ಅರೆಸ್ಟ್

    – ಎಂಜಿನಿಯರಿಂಗ್ ಓದುತ್ತಿದ್ದಾಗ ಸಲುಗೆ
    – ಖಾಸಗಿ ಫೋಟೋ ಅಪ್ಲೋಡ್ ಮಾಡ್ತೀನಿ
    – ಮುಖಕ್ಕೆ ಆ್ಯಸಿಡ್ ಹಾಕ್ತೀನಿ
    – ಯುವತಿಗೆ ದೂರು ನೀಡದಂತೆ ಬೆದರಿಕೆ

    ಚಿಕ್ಕಬಳ್ಳಾಪುರ: 7 ವರ್ಷಗಳ ನಂತರ ಮೈಸೂರು ಮೂಲದ ನಟನ ವಿರುದ್ಧ ಬೆಂಗಳೂರಿನ ನಟಿ ಅತ್ಯಾಚಾರ ದೂರು ನೀಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಲ್ಲಿ ನಟಿಸಿರುವ ನಟಿ ಕಿರುತೆರೆಯಲ್ಲಿ ನಟ ಹಾಗೂ ಪ್ರೊಡೆಕ್ಷನ್ ಮ್ಯಾನೆಜರ್ ಆಗಿರುವ ತೇಜಸ್ ಗೌಡ ಅಲಿಯಾಸ್ ಅಭಿಗೌಡ ವಿರುದ್ಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ತಾನು 2012ರಲ್ಲಿ ಚಿಕ್ಕಬಳ್ಳಾಪುರ ನಗರ ಹೊರವಲಯದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಾಗ ತನ್ನ ಸಹಪಾಠಿಯಾಗಿದ್ದ ತೇಜಸ್ ಗೌಡ ತನ್ನನ್ನು ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ಸಲುಗೆಯಿಂದ ವರ್ತಿಸಿದ್ದ. ಆ ಸಮಯದಲ್ಲಿ ತನ್ನೊಂದಿಗೆ ತನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ. ಇದನ್ನು ನಾನು ವಿರೋಧಿಸಿದ್ದಕ್ಕೆ, ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮತ್ತೆ ಆನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ.

    ಇದೇ ರೀತಿ ಅವಕಾಶ ಸಿಕ್ಕಾಗಲೆಲ್ಲಾ ನನ್ನ ಜೊತೆ ಅಭಿಗೌಡ ದೈಹಿಕ ಸಂಪರ್ಕ ಬೆಳೆಸುತ್ತಿದ್ದನು. ನಂತರ ಇಬ್ಬರು ಖಾಸಗಿ ವಾಹಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆವು. ಆ ಸಮಯದಲ್ಲಿ ನನಗೆ ಬೇರೋಬ್ಬರ ಜೊತೆ ಸಂಬಂಧ ಇದೆ ಹೇಳಿ ತುಂಬಾ ಗಲಾಟೆ ನಡೆಸಿ ನನ್ನ ಮೇಲೆ ಹಲ್ಲೆ ನಡೆಸಿದ್ದ. ಆಗಲೂ ನಾನು ಆತನ ವಿರುದ್ಧ ದೂರು ನೀಡಿರಲಿಲ್ಲ. ಒಂದು ವಾರದ ನಂತರ ಅಂದರೆ ಡಿಸೆಂಬರ್ 2018ರಲ್ಲಿ ನಾನು ರೂಮಿನಲ್ಲಿದ್ದಾಗ ಮತ್ತೆ ಬಂದು ನಿನ್ನನ್ನು ಮದುವೆಯಾಗವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದರಿಂದ ನಾನು ಗರ್ಭಿಣಿಯಾದೆ.

    ನಾನು ಗರ್ಭಿಣಿಯಾಗಿದ್ದೇನೆ ಎಂಬ ವಿಷಯ ತೇಜಸ್‍ಗೆ ತಿಳಿಸಿದರೆ, ನೀನು ಯಾರೊಂದಿಗೋ ಇದ್ದು ಗರ್ಭಿಣಿಯಾಗಿದ್ದೀಯಾ. ನನ್ನ ಜೊತೆ ಯಾಕೆ ಹೇಳುತ್ತೀಯಾ ಎಂದು ಗಲಾಟೆ ಮಾಡಿ ಮಾತ್ರೆ ತಿನ್ನು ಸರಿ ಹೋಗುತ್ತೆ ಎಂದು ಹೇಳಿ ಬೈದಿದ್ದಾನೆ. ನಂತರ ನಾನು ಬೆಂಗಳೂರು ನಗರದ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿಕೊಂಡಿರುತ್ತೇನೆ. ಇಷ್ಟೆಲ್ಲ ಆದರೂ ಅಭಿಗೌಡ ನನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಈಗ ಆತ ಬೇರೆ ಹುಡುಗಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ.

    ಈ ಬಗ್ಗೆ ನಾನು ಗಲಾಟೆ ಮಾಡಿದ್ದಕ್ಕೆ ಏನ್ ಮಾಡಿಕೊಳ್ಳುತ್ತಿಯೋ ಮಾಡಿಕೋ. ಎಲ್ಲವನ್ನು ನಾನು ಎದುರಿಸುತ್ತೇನೆ. ನೀನೇನಾದರೂ ದೂರು ಕೊಟ್ಟರೆ ನಮ್ಮಿಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ. ನೀನು ಸೀರಿಯಲ್‍ನಲ್ಲಿ ನಟಿಸೋಕೆ ಆಗದಂತೆ ಮುಖಕ್ಕೆ ಆ್ಯಸಿಡ್ ಹಾಕಿ ಸಾಯಿಸುತ್ತೇನೆ ಎಂದು ಹೆದರಿಸಿದ್ದಾನೆ. ಹೀಗಾಗಿ 2012ರಿಂದಲೂ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಮಾಡಿ ಈಗ ನನಗೆ ಮೋಸ ಮಾಡಿ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿರುವ ಅಭಿಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ತೇಜಸ್ ಗೌಡ ಅಲಿಯಾಸ್ ಅಭಿಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಕಾರಿನ ಮೇಲೆ ಬಿದ್ದ ಮೆಟ್ರೋ ಕಾಮಗಾರಿಯ ಕಾಂಕ್ರಿಟ್- ಅಪಾಯದಿಂದ ನಟಿ ಪಾರು

    ಕಾರಿನ ಮೇಲೆ ಬಿದ್ದ ಮೆಟ್ರೋ ಕಾಮಗಾರಿಯ ಕಾಂಕ್ರಿಟ್- ಅಪಾಯದಿಂದ ನಟಿ ಪಾರು

    ತಿರುವನಂತಪುರ: ಮಲಯಾಳಂ ನಟಿ ಪ್ರಯಾಣ ಮಾಡುತ್ತಿದ್ದ ಕಾರಿನ ಮೇಲೆ ಕಾಮಗಾರಿಯ ಕಾಂಕ್ರಿಟ್ ಬಿದ್ದು ಅವಘಡ ಸಂಭವಿಸಿದೆ. ಆದರೆ ಅದೃಷ್ಟವಶಾತ್ ನಟಿ ಅಪಾಯದಿಂದ ಪಾರಾಗಿದ್ದಾರೆ.

    ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಮಲಯಾಳಂ ನಟಿ ಅರ್ಚನಾ ಕವಿ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ನಟಿ ತಮ್ಮ ಟ್ವಿಟ್ಟರ್ ನಲ್ಲಿ ಕಾರಿನ ಫೋಟೋಗಳನ್ನ ಪೋಸ್ಟ್ ಮಾಡಿ ಮೆಟ್ರೋ ಅಧಿಕಾರಿಗಳಿಗೆ ಮತ್ತು ಕೊಚ್ಚಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

    “ನಾವು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದೇವೆ. ಕಾರಿನಲ್ಲಿ ಏರ್ ಪೋರ್ಟ್ ಗೆ ಹೋಗುತ್ತಿದ್ದ ವೇಳೆ ಕಾರಿನ ಮೇಲೆ ಮೆಟ್ರೋ ಕಾಮಗಾರಿಯ ಕಾಂಕ್ರಿಟ್ ಬಿದ್ದವು. ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮೆಟ್ರೋ ಅಧಿಕಾರಿಗಳು ಮತ್ತು ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು. ಕಾರಿಗೆ ಡ್ಯಾಮೇಜ್ ಆಗಿದೆ. ಹೀಗಾಗಿ ಕಾರಿನ ಮಾಲೀಕರಿಗೆ ಪರಿಹಾರ ನೀಡಬೇಕು. ಮುಂದಿನ ದಿನದಲ್ಲಿ ಈ ರೀತಿ ಅವಘಡ ಸಂಭವಿಸಿದಂತೆ ಜಾಗೃತಿವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

    ನಟಿ ಅರ್ಚನಾ ಕವಿ ಟ್ವೀಟ್‍ಗೆ ಮೆಟ್ರೋ ಅಧಿಕಾರಿಗಳು ‘ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಕಾರು ಚಾಲಕನ ಜೊತೆ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡ ಸಂಭವಿಸದಂತೆ ಸುರಕ್ಷಿತವಾಗಿ ಕ್ರಮ ಕೈಗೊಳ್ಳುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಟಿ ಅರ್ಚನಾ ಕವಿ ‘ಹನಿ ಬಿ’, ‘ಪಟ್ಟಂ ಪೋಲೆ, ‘ನಾಡೋಡಿಮನಂ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ತಮಿಳಿನ ‘ಅರವಾನ್’, ‘ಜ್ಞಾನ ಕಿರುಕ್ಕುನ್’ ಅಂತಹ ಚಿತ್ರದಲ್ಲೂ ಅಭಿನಯಿಸಿದ್ದಾರೆ.

  • ನಟಿ ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ

    ನಟಿ ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ

    ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

    ರಾಧಿಕಾ ಅವರ ತಂದೆ ದೇವರಾಜ್ ಅವರು ಕಿಡ್ನಿ ಹಾಗೂ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಎನ್‍ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ರಾಧಿಕಾ ತಂದೆ ದೇವರಾಜ್ ನಿಧನರಾಗಿದ್ದಾರೆ.

    ದೇವರಾಜ್ ಮೃತದೇಹವನ್ನು ರಾಧಿಕಾ ಅವರ ಕುಟುಂಬ ಇಂದು ಮಂಗಳೂರಿಗೆ ಕೊಂಡೊಯ್ಯಲಿದ್ದು, ಮಂಗಳೂರಿನಲ್ಲೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಿದ್ದಾರೆ ಎನ್ನಲಾಗಿದೆ.

    ಸದ್ಯ ರಾಧಿಕಾ ಅವರು ಭೈರಾದೇವಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಭೈರಾದೇವಿ ಸಿನಿಮಾದಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಅಭಿನಯಿಸುತ್ತಿದ್ದು, ಅನುಪ್ರಭಾಕರ್ ರಮೇಶ್‍ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನ ಶ್ರೀಜಯ್ ನಿರ್ದೇಶನವಿದ್ದು ಬೆಂಗಳೂರು, ವಾರಣಾಸಿ, ಊಟಿ ಸೇರಿದಂತೆ ಹಲವು ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ನಡೆಯುತ್ತಿದೆ.

    ಕೌಟುಂಬಿಕ ಕಥಾಹಂದರ ಕಥೆಯ ಈ ಚಿತ್ರದಲ್ಲಿ ರಾಧಿಕಾ ಭೈರಾದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ರಾಧಿಕಾ ಮಗಳು ಶಮಿಕಾ ಕೆ. ಸ್ವಾಮಿ ಕ್ಲ್ಯಾಪ್ ಮಾಡುವ ಮೂಲಕ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಮೂಡಿಬರುವ ಮೂರನೇ ಚಿತ್ರ ಭೈರಾದೇವಿ ಗೆ ಚಾಲನೆ ದೊರಕಿತ್ತು.

  • ನಟಿ ಹರಿಪ್ರಿಯಾ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ‘ಸೂಜಿದಾರ’ ನಿರ್ದೇಶಕ

    ನಟಿ ಹರಿಪ್ರಿಯಾ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ‘ಸೂಜಿದಾರ’ ನಿರ್ದೇಶಕ

    ಬೆಂಗಳೂರು: ಸೂಜಿದಾರ ಚಿತ್ರದಲ್ಲಿ ತಮ್ಮ ಪಾತ್ರವನ್ನು ಸರಿಯಾಗಿ ಬಿಂಬಿಸಿಲ್ಲ, ಅಲ್ಲದೇ ತಮ್ಮ ಜೊತೆ ಚರ್ಚಿಸದೇ ನಿರ್ದೇಶಕರು ಕಥೆಯನ್ನು ತಿರುಚಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಸೂಜಿದಾರ ಚಿತ್ರತಂಡ ಹರಿಪ್ರಿಯಾ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹರಿಪ್ರಿಯಾ ಅವರು ಅನಗತ್ಯವಾಗಿ ನಮ್ಮ ಹಾಗೂ ಚಿತ್ರತಂಡದ ಮೇಲೆ ಆರೋಪ ಮಾಡುತ್ತಿದ್ದಾರೆ. ಚಿತ್ರ ತೆರೆಕಂಡ ಮೂರೇ ದಿನಕ್ಕೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ. ಅಲ್ಲದೇ ಅವರ ಹೇಳಿಕೆಯಿಂದಾಗಿ ಕಳೆದ ಮೂರು ದಿನಗಳಿಂದ ಚಿತ್ರದ ಕಲೆಕ್ಷನ್ ಕೂಡ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಹರಿಪ್ರಿಯಾ ಅವರು ಚಿತ್ರದ ಬಗ್ಗೆ ನೀಡಿರುವ ಹೇಳಿಕೆ ಖಂಡನಾರ್ಹವಾದದ್ದು, ನಮ್ಮ ಫೋನ್ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲ. ಚಿತ್ರತಂಡದ ವಿರುದ್ಧ ನಟಿ ಹರಿಪ್ರಿಯಾ ಅವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದು, ಅವರಿಂದ ಸಿನಿಮಾಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

    ನಟಿ ಹರಿಪ್ರಿಯಾ ಅವರಿಗೆ ಬಹುಶಃ ಇಗೋ ಸಮಸ್ಯೆ ಇರಬಹುದು. ಚಿತ್ರತಂಡ ನಡೆಸಿದ ಯಾವುದೇ ಸುದ್ದಿಗೋಷ್ಠಿಗೂ ಅವರು ಬಂದು ಬೆಂಬಲ ನೀಡಿಲ್ಲ. ಆದರೆ ಚಿತ್ರ ಉತ್ತಮ ಗಳಿಕೆ ಮಾಡುತ್ತಿರುವ ವೇಳೆಯೇ ಇಂತಹ ಆರೋಪ ಮಾಡಿದ್ದಾರೆ. ಇದರಿಂದ ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಿದೆ. ಅಲ್ಲದೇ ನಮ್ಮ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಚಿತ್ರದ ನಿರ್ಮಾಪಕರಿಗೆ ಹೆಚ್ಚು ನಷ್ಟ ಆಗಿದೆ ಎಂದಿದ್ದಾರೆ.

    ಇದೇ ವೇಳೆ ಹರಿಪ್ರಿಯಾ ಅವರ ಆರೋಪಕ್ಕೆ ಸ್ಪಷ್ಟ ನೀಡಿರುವ ನಿರ್ದೇಶಕರು, ಸಿನಿಮಾ ಕಥೆಯನ್ನೂ ನಾವು ತಿರುಚಿಲ್ಲ. ಚಿತ್ರದ ಬೇರೆ ಪಾತ್ರಗಳು ಹೈಲೈಟ್ ಆಗಿರುವುದು ಅವರಿಗೆ ಸಮಸ್ಯೆ ಆಗಿದೆ. ನಮ್ಮ ಚಿತ್ರತಂಡ ಹೊಸಬರ ತಂಡವಾಗಿದ್ದು, ಆದ್ದರಿಂದಲೇ ಅಸಡ್ಡೆ ತೋರಿದ್ದಾರೆ. ಆದ್ದರಿಂದ ತಮ್ಮ ಹೇಳಿಕೆಯ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದರು.

    ಒಂದೊಮ್ಮೆ ಸಿನಿಮಾ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಚಿತ್ರತಂಡ ನಮ್ಮ ಎದುರು ಪ್ರಸ್ತಾಪ ಮಾಡಿ ಬಗೆಹರಿಸಕೊಳ್ಳಬಹುದಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿವಾದ ಮಾಡಿದ್ದಾರೆ. ಸಿನಿಮಾ ಒಪ್ಪಿಕೊಳ್ಳುವ ಮುನ್ನ ಸಿನಿಮಾ ಕಥೆ ಹೇಳಿದ್ದೇವೆ. ಚಿತ್ರದ ಸ್ಕ್ರಿಪ್ಟ್ ಮಾದರಿಯನ್ನು ನೀಡಿದ್ದೇವೆ. ಕಳೆದ ವರ್ಷ ವರಮಹಾಲಕ್ಷಿ ಹಬ್ಬದಲ್ಲಿ ಅವರಿಗೆ ಚಿತ್ರತಂಡದ ಬಗ್ಗೆ ವೈಮನಸ್ಸು ಆರಂಭವಾಗಿತ್ತು. ಅವರ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ಬಂದಿತ್ತು. ಆ ಬಳಿಕ ನಾವು ಚಿತ್ರದ ಎಲ್ಲಾ ಪಾತ್ರಧಾರಿಗಳ ಪರಿಚಯಿಸುವ ಪೋಸ್ಟರ್ ರಿಲೀಸ್ ಮಾಡಿದ್ದೇವು. ಇದರಿಂದ ಅವರಿಗೆ ಇರುಸು ಮುರಿಸು ಆಗಿದೆ. ಚಿತ್ರದ ಪೋಸ್ಟರ್ ನಲ್ಲಿ ಅವರು ಒಬ್ಬರೇ ಇರಬೇಕು ಎಂಬ ಆಸೆ ಇತ್ತು. ಅದಕ್ಕಾಗಿಯೇ ಸಿನಿಮಾ ಪ್ರೆಸ್ ಮೀಟ್‍ಗೆ ಬರಬೇಕಾದರೆ ಸಹ ನಟಿ ಚೈತ್ರಾ ಬರಬಾರದು ಎಂದು ತಿಳಿಸಿದ್ದರು ಎಂದು ಆರೋಪಿಸಿದರು.

    ಇತ್ತೀಚಿಗಷ್ಟೇ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಆಡಿಯೋ ಲಾಂಚ್ ವೇಳೆ ಹರಿಪ್ರಿಯಾ ಚಿತ್ರತಂಡದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದನ್ನು ಓದಿ : ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಹರಿಪ್ರಿಯಾ

  • ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಹರಿಪ್ರಿಯಾ

    ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಹರಿಪ್ರಿಯಾ

    ಬೆಂಗಳೂರು: ನಟಿ ಹರಿಪ್ರಿಯಾ ನಟನೆಯ ‘ಸೂಜಿದಾರ’ ಸಿನಿಮಾ ಇತ್ತೀಚೆಗೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು, ಆದರೆ ಸಿನಿಮಾ ನೋಡಿದ ಹರಿಪ್ರಿಯಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಈ ಬಗ್ಗೆ ಹರಿಪ್ರಿಯಾ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    ಹರಿಪ್ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವಿವರವಾಗಿ ಬರೆದುಕೊಂಡಿದ್ದು ಮಾಹಿತಿ ನೀಡಿದ್ದಾರೆ. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವ ಹರಿಪ್ರಿಯಾ ಅವರು ಈ ಬಾರಿ ಹೆಚ್ಚು ಬೇಸರಗೊಂಡಿದ್ದಾರೆ.

    ಸೂಜಿದಾರ ಸಿನಿಮಾ ಕುರಿತು ಅಭಿಮಾನಿಗಳು ಬಹಳ ಬೇಸರವನ್ನು ವ್ಯಕ್ತಪಡಿಸಿದ್ದು, ಸಿನಿಮಾ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದವರಿಗೆ ನಿರಾಸೆಯಾಗಿದೆ. ನಿಜ ಹೇಳಬೇಕೆಂದರೆ ನನಗೂ ಮೊದಲ ಬಾರಿ ಸಿನಿಮಾ ನೋಡಿದ ವೇಳೆ ಇದೇ ಅಭಿಪ್ರಾಯ ಮೂಡಿತ್ತು. ಆದರೆ ಮೊದಲು ನನಗೆ ಚಿತ್ರತಂಡ ಹೇಳಿದ ಕಥೆ ಇದಾಗಿರಲಿಲ್ಲ. ಅನಗತ್ಯವಾಗಿ ಕೆಲ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸಿದ್ದಾರೆ. ಆದರೆ ನಿರ್ಮಾಪಕರ ಒಳಿತಿಗಾಗಿ ನಾನು ಸುಮ್ಮನಾದೆ. ಉತ್ತಮ ಚಿತ್ರವನ್ನು ಮಾಡುವುದು ಚಿತ್ರತಂಡದ ಬಯಕೆ ಆಗಿದ್ದು, ಆದರೆ ಏನಾಯಿತು ನೋಡಿ. ನನ್ನ ಕಡೆಯಿಂದ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತಿದ್ದು, ಇಂತಹ ತಪ್ಪನ್ನು ಮತ್ತೆ ಮಾಡಲ್ಲ. ಮುಂದಿನ ಸಿನಿಮಾಗಳಲ್ಲಿ ನೀವು ಮೆಚ್ಚಿಕೊಳ್ಳುವಂತಹ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ.

    ಹರಿಪ್ರಿಯಾ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು, ಸಿನಮಾದಲ್ಲಿ ನಿಮ್ಮ ಪಾತ್ರದ ನಿರ್ವಹಣೆ ಉತ್ತಮವಾಗಿದ್ದು, ನಿಮ್ಮ ಅಭಿನಯ ಉತ್ತಮವಾಗಿದೆ. ನಾವು ನಿಮ್ಮನ್ನು ನೋಡಲು ಚಿತ್ರಮಂದಿರಕ್ಕೆ ಹೋಗುತ್ತೇವೆ. ನಿಮಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದಿದ್ದಾರೆ.

     

    View this post on Instagram

     

    Hey ppl … Sorry … Sorry and Sorry again… My regular fan interaction Sunday turned out to be a thought provoking one instead. Today, a lot of fans and well wishers came home to take selfies as usual but they told me they felt really bad about Soojidhara. They expected to see more of me in Soojidaara and when I wasn’t seen much they had to walk out of the theatre…!!! Frankly speaking that was not the story I was told … they added some unwanted stuff… I was disappointed when I first watched the movie but kept quiet … all I wanted was to support a theatre team to make a full fledged feature film… but look what happened… I am extremely sorry from my end… will not repeat the mistake again … Will make sure I entertain you more in the coming cinemas of mine ????????

    A post shared by Hariprriya (@iamhariprriya) on