Tag: actress

  • ಮತ್ತೆ ಮೀಟೂ ಬಗ್ಗೆ ಶ್ರುತಿ ಹರಿಹರನ್ ಮಾತು

    ಮತ್ತೆ ಮೀಟೂ ಬಗ್ಗೆ ಶ್ರುತಿ ಹರಿಹರನ್ ಮಾತು

    – ಮೀಟೂ ಅನುಭವವಾದ್ರೆ ಚಪ್ಪಲಿ ಕೈಗೆ ಬರಲಿ

    ಬೆಂಗಳೂರು: ನಟಿ ಶ್ರುತಿ ಹರಿಹರನ್ ಮತ್ತೆ ಮೀಟೂ ಬಗ್ಗೆ ಮಾತನಾಡಿದ್ದು, ಯುವತಿಯರು ಹಾಗೂ ಮಹಿಳೆಯರ ಜೊತೆಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ನಗರದ ಖಾಸಗಿ ಹೋಟೆಲ್‌ನಲ್ಲಿ ಫೇಸ್‌ಬುಕ್ ವತಿಯಿಂದ ಹಿರಿಯ ಪತ್ರಕರ್ತೆ ಬರ್ಖಾ ದತ್ ನೇತೃತ್ವದಲ್ಲಿ ‘ವಿ ದಿ ವುಮೆನ್’ ಎಂಬ ಸಂವಾದವನ್ನು ಇಂದು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರುತಿ ಹರಿಹರನ್ ಮೀಟೂ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಪುತ್ರಿಯ ವಿಡಿಯೋ ಪೋಸ್ಟ್ ಮಾಡಿ ಭಾವನಾತ್ಮಕ ಸಾಲು ಬರೆದ ಶ್ರುತಿ ಹರಿಹರನ್

    ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಮೀಟೂ ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ನಾನು ಯಾವುತ್ತೂ ಮುಜುಗರ ಪಟ್ಟುಕೊಂಡಿಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಶ್ರುತಿ ಹರಿಹರನ್ ತಿಳಿಸಿದ್ದಾರೆ.

    ಮೀಟೂ ವಿಚಾರದಿಂದಾಗಿ ಸಿನಿಮಾ ಅವಕಾಶಗಳು ಕಡಿಮೆಯಾಯಿತು. ಇದಕ್ಕೆ ಖಂಡಿತ ವಿಷಾದವಿಲ್ಲ. ಘಟನೆಯಿಂದಾಗಿ ಇಲ್ಲಿಯವರೆಗೂ ಯಾವುದೇ ಸಿನಿಮಾ ಅವಕಾಶ ಬಂದಿಲ್ಲ. ಇದರ ಬಗ್ಗೆ ನನಗೆ ಚಿಂತೆ ಇಲ್ಲ. ಈ ಒಂದು ವರ್ಷದಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯಲು ಅವಕಾಶ ಸಿಕ್ಕಿತು. ಮಗಳು ಹಾಗೂ ಪತಿಯ ಜೊತೆಗೆ ಸಂತೋಷವಾಗಿದ್ದೇನೆ ಎಂದರು. ಇದನ್ನೂ ಓದಿ: ಡಬಲ್ ಸಂಭ್ರಮದಲ್ಲಿ ಶ್ರುತಿ ಹರಿಹರನ್

    ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಂದಿದ್ದು ಹೆಚ್ಚು ಖುಷಿಕೊಟ್ಟಿದೆ. ಪ್ರಶಸ್ತಿ ಬಂದಿರುವುದಕ್ಕೆ ಮತ್ತೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ. ಮೀಟೂನಂತಹ ಪ್ರಕರಣಗಳಲ್ಲಿ ಸಾಕ್ಷಿ ಇರುವುದಿಲ್ಲ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಧೈರ್ಯದಿಂದ ಹೋರಾಡಬೇಕು ಎಂದು ತಿಳಿಸಿದರು.

    ಇದೇ ಕಾರ್ಯಕ್ರದಲ್ಲಿ ಮಾತನಾಡಿದ ಶ್ರುತಿ ಹರಿಹರನ್ ತಾಯಿ, ನಿಮಗೆ ಮೀಟೂ ಅನುಭವ ಆದರೆ ಸುಮ್ಮನೆ ಇರಬೇಡಿ. ಸುಂದರ ಚಪ್ಪಲಿ ಕೈಗೆ ಎತ್ತಿಕೊಳ್ಳಿ ಎಂದು ಸಂವಾದದಲ್ಲಿ ಸೇರಿದ್ದ ಮಹಿಳೆಯರಿಗೆ ತಿಳಿಸಿದರು.

  • ಸರಿಯಾದ ಸಮಯಕ್ಕೆ ಸಿಗದ ಅಂಬುಲೆನ್ಸ್ – ನವಜಾತ ಶಿಶು ಜೊತೆ ನಟಿ ಸಾವು

    ಸರಿಯಾದ ಸಮಯಕ್ಕೆ ಸಿಗದ ಅಂಬುಲೆನ್ಸ್ – ನವಜಾತ ಶಿಶು ಜೊತೆ ನಟಿ ಸಾವು

    ಮುಂಬೈ: ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗದ್ದಕ್ಕೆ ನವಜಾತ ಶಿಶು ಜೊತೆ ಮರಾಠಿ ನಟಿ ಮೃತಪಟ್ಟ ಘಟನೆ ಭಾನುವಾರ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ.

    ಪೂಜಾ ಜುಂಜರ್(25) ಮೃತಪಟ್ಟ ನಟಿ. ಪೂಜಾ ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡಿದೆ. ಹೀಗಾಗಿ ವೈದ್ಯರು ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಸಿಗದ್ದಕ್ಕೆ ಪೂಜಾ ಮೃತಪಟ್ಟಿದ್ದಾಳೆ.

    ಅಕ್ಟೋಬರ್ 20 ಬೆಳಗ್ಗೆ 6.30ಕ್ಕೆ ಮುಂಬೈಯಿಂದ 590ಕಿ.ಮೀ ದೂರದಲ್ಲಿರುವ ಮರಾಠ್‍ವಾಡಾದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಮೊದಲು ಪೂಜಾಳನ್ನು ಗೋರೆಗಾಂವ್‍ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಭಾನುವಾರ ನಸುಕಿನ ಜಾವ ಸುಮಾರು 2 ಗಂಟೆಗೆ ಪೂಜಾ ಮಗುವಿಗೆ ಜನ್ಮ ನೀಡಿದ್ದರು ಎಂದಿದ್ದಾರೆ.

    ಪೂಜಾ ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಶಿಶು ಮೃತಪಟ್ಟಿದೆ. ವೈದ್ಯರು ಪೂಜಾಳನ್ನು ಗೋರೆಗಾಂವ್‍ನಿಂದ 40 ಕಿ.ಮೀ ದೂರದಲ್ಲಿ ಇರುವ ಹಿಂಗೋಲಿ ಸಿವಿಲ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಆಕೆಯ ಕುಟುಂಬಸ್ಥರಿಗೆ ಸಲಹೆ ನೀಡಿದ್ದರು.

    ವೈದ್ಯರ ಮಾತನ್ನು ಕೇಳಿ ಕುಟುಂಬಸ್ಥರು ಅಂಬುಲೆನ್ಸ್ ಗಾಗಿ ಸಾಕಷ್ಟು ಹುಡುಕಾಡಿದ್ದಾರೆ. ಬಳಿಕ ಪೂಜಾಳನ್ನು ಸಿವಿಲ್ ಆಸ್ಪತ್ರೆಗೆ ತಲುಪಿಸಲು ಕುಟುಂಬಸ್ಥರು ಖಾಸಗಿ ಅಂಬುಲೆನ್ಸ್ ತರುವಲ್ಲಿ ಸಫಲರಾದರು. ಆದರೆ ಅಷ್ಟರಲ್ಲಿ ಪೂಜಾ ಮೃತಪಟ್ಟಿದಾಳೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪೂಜಾ ಸಂಬಂಧಿಕರ ಹೇಳಿಕೆಯನ್ನು ಪಡೆಯುತ್ತಿದ್ದಾರೆ. ಪೂಜಾ ಎರಡು ಮರಾಠಿ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾಳೆ.

  • ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ಮುಂಬೈ: ಭಾರತ ತಂಡದ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಅವರು ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಮನೀಶ್ ಪಾಂಡೆ ಹಾಗೂ ಆಶ್ರಿತಾ ಸುಮಾರು ದಿನಗಳಿಂದ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಿಸೆಂಬರ್ 2ರಂದು 30 ವರ್ಷದ ಮನೀಶ್, 26 ವರ್ಷದ ಆಶ್ರಿತಾ ಜೊತೆ ಮುಂಬೈನಲ್ಲಿ ಮದುವೆ ಆಗಲಿದ್ದಾರೆ.

    2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶ್ರಿತಾ ‘ಇಂದ್ರಜಿತ್’, ‘ಒರು ಕಣ್ಣಿಯುನ್ ಮೂನು ಕಲಾವಾನಿಕಲಂ’, ‘ಉದಯಂ ಎನ್.ಎಚ್4’ ಸೇರಿದಂತೆ ಹಲವು ಚಿತಗಳಲ್ಲಿ ನಟಿಸಿದ್ದಾರೆ. ಬ್ಯೂಟಿ ಕಾಂಪಿಟೇಶನ್ ಭಾಗವಹಿಸಿದ ಆಶ್ರಿತಾ ಜಾಹೀರಾತುಗಳಲ್ಲಿಯೂ ಅಭಿನಯಿಸಿದ್ದಾರೆ.

    ಮನೀಶ್ ಕರ್ನಾಟಕದ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ಪಂದ್ಯದಲ್ಲಿ ಮನೀಶ್ ಮಿಡಿಲ್ ಆರ್ಡರ್ ನಲ್ಲಿ ಆಡುತ್ತಾರೆ. ಜೊತೆಗೆ ಮನೀಶ್ ಐಪಿಎಲ್ ಪಂದ್ಯಗಳಲ್ಲೂ ಮಿಂಚಿದ್ದಾರೆ. ಮನೀಶ್ ಈಗ ಕರ್ನಾಟಕ ಕ್ರಿಕೆಟ್ ತಂಡದ ನಾಯಕನಾಗಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲೂ ಆಡುತ್ತಿದ್ದಾರೆ.

    ಮನೀಶ್ ಹಾಗೂ ಆಶ್ರಿತಾ ಮದುವೆಯಲ್ಲಿ ಕೇವಲ ಆತ್ಮೀಯ ಸ್ನೇಹಿತರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದು, ಎರಡು ದಿನಗಳ ಕಾಲ ಈ ಮದುವೆ ನಡೆಯಲಿದೆ. ಮನೀಶ್ ಮದುವೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಭಾಗವಹಿಸುವ ಸಾಧ್ಯತೆಯಿದೆ.

  • ಪ್ರಿಯಕರನೊಂದಿಗೆ ಸ್ಯಾಂಡಲ್‍ವುಡ್ ನಟಿ ನಿಶ್ಚಿತಾರ್ಥ

    ಪ್ರಿಯಕರನೊಂದಿಗೆ ಸ್ಯಾಂಡಲ್‍ವುಡ್ ನಟಿ ನಿಶ್ಚಿತಾರ್ಥ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ‘ಆ ದಿನಗಳು’ ಸಿನಿಮಾ ನಟಿ ಅರ್ಚನಾ ವೇದಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ತಮ್ಮ ಗೆಳೆಯನ ಜೊತೆಗೆ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಅರ್ಚನಾ ಅವರು ಜಗದೀಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಇವರು ಹೆಲ್ತ್ ಕೇರ್ ಕಂಪನಿಯೊಂದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದರು. ನಂತರ ಎರಡೂ ಕುಟುಂಬವು ಒಪ್ಪಿ ಅರ್ಚನಾ ಮತ್ತು ಜಗದೀಶ್ ನಿಶ್ಚಿತಾರ್ಥವನ್ನು ಹೈದರಾಬಾದಿನ ರಾಡಿಸನ್ ಹೋಟೆಲಿನಲ್ಲಿ ಅದ್ಧೂರಿಯಾಗಿ ಮಾಡಿದ್ದಾರೆ.

    ಗುರು-ಹಿರಿಯರು ನಿಶ್ಚಯ ಮಾಡಿದ್ದ ಮುಹೂರ್ತದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಅರ್ಚನಾ ಹಾಗೂ ಜಗದೀಶ್ ಎಂಗೇಜ್ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಬಂದು ಶುಭಾಶಯ ತಿಳಿಸಿದ್ದಾರೆ. ತಮ್ಮ ಫೇಸ್‍ಬುಕ್ ಪೇಜಿನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಅರ್ಚನಾ ಅವರು ತಮ್ಮ ಮದುವೆ ದಿನಾಂಕವನ್ನು ಮಾತ್ರ ಇದುವರೆಗೂ ಬಹಿರಂಗಪಡಿಸಿಲ್ಲ.

    ನಟಿ ಅರ್ಚನಾ ಕನ್ನಡದಲ್ಲಿ ‘ಮೈತ್ರಿ’ ‘ಮಿಂಚು’ ಮತ್ತು ‘ಮೇಘ ವರ್ಷಿಣಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅಲ್ಲದೇ ತೆಲುಗಿನ ಬಿಗ್ ಬಾಸ್ ಸೀಸನ್ ಒಂದರಲ್ಲೂ ಅರ್ಚನಾ ಪಾಲ್ಗೊಂಡಿದ್ದರು.

     

  • ಪುತ್ರಿಯ ವಿಡಿಯೋ ಪೋಸ್ಟ್ ಮಾಡಿ ಭಾವನಾತ್ಮಕ ಸಾಲು ಬರೆದ ಶ್ರುತಿ ಹರಿಹರನ್

    ಪುತ್ರಿಯ ವಿಡಿಯೋ ಪೋಸ್ಟ್ ಮಾಡಿ ಭಾವನಾತ್ಮಕ ಸಾಲು ಬರೆದ ಶ್ರುತಿ ಹರಿಹರನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ತಮ್ಮ ಪುತ್ರಿಯ ವಿಡಿಯೋವನ್ನು ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಶ್ರುತಿ ಹರಿಹರನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ, ಸ್ವಲ್ಪ ದೂರ ನಡೆಯಲು ಅಥವಾ ಓಡಾಡಲು ಒಂದು ದಿನ ನಾನು ಕೊಚ್ಚೆ ಗುಂಡಿಗಳನ್ನು ಜಿಗಿಯುತ್ತೇನೆ. ಒಂದು ದಿನ ರಸ್ತೆ ದಾಟುತ್ತೇನೆ ಅಥವಾ ಬಾಹ್ಯಾಕಾಶದಲ್ಲಿ ನಡೆಯಬಹುದು. ಒಂದು ದಿನ ನಾನು ಪರ್ವತವನ್ನು ಅಳೆಯುತ್ತೇನೆ ಅಥವಾ ಬ್ಯಾಲೆ ಕಾಪ್ರ್ಸ್ ಸೇರುತ್ತೇನೆ. ಒಂದು ದಿನ ನಾನು ಬಿಗಿಹಗ್ಗದ ಮೇಲೆ ನಡೆಯುತ್ತೇನೆ ಅಥವಾ ಸಾಗರ ತಳದಲ್ಲಿ ಈಜುತ್ತೇನೆ. ಒಂದು ದಿನ ಈ ಪಾದಗಳು ಕೆಲಸಗಳನ್ನು ಮಾಡುತ್ತವೆ. ಇದು ಸ್ವರ್ಗಕ್ಕೆ ಮಾತ್ರ ತಿಳಿದಿದೆ. ಆದರೆ ಇಂದು ಅವರು ಸಂತೋಷವಾಗಿದ್ದಾರೆ. ಸಂತೋಷ, ಅವರ ಎಲ್ಲಾ ಕಾಲ್ಬೆರಳುಗಳನ್ನು ಅಲುಗಿಸುತ್ತವೆ. ತಿಳಿದಿಲ್ಲ… ಆತ್ಮೀಯ ಜೆ. ನಿಮ್ಮೊಂದಿಗೆ ಎರಡು ತಿಂಗಳುಗಳು ಸಂಪೂರ್ಣ ಹುಚ್ಚುತನವಾಗಿದೆ, ಈ ರೀತಿಯ ಪ್ರೀತಿಯನ್ನು ಎಂದಿಗೂ ತಿಳಿದಿರಲಿಲ್ಲ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    https://www.instagram.com/p/B3HExcyJ44W/

    ಶ್ರುತಿ ಹರಿಹರನ್ ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಈವರೆಗೂ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪುತ್ರಿಯ ಕಾಲುಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ಹರಿಹರನ್ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ”ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಶ್ರುತಿ ಅವರು ತಾವೂ ಗರ್ಭಿಣಿ ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

    ಮಗುವಿಗೆ ಜನ್ಮ ನೀಡಿದ ದಿನವೇ ಶ್ರುತಿ ಹರಿಹರನ್ ಅವರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿತ್ತು. ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ನಟಿ ಶ್ರುತಿ ಹರಿಹರನ್ ಅಭಿನಯದ `ನಾತಿಚರಾಮಿ’ ಸಿನಿಮಾ ಬರೋಬ್ಬರಿ 5 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಎಡಿಟಿಂಗ್ ಹಾಗೂ ಸಿನಿಮಾ ನಟಿ ಶೃತಿ ಹರಿಹರನ್ ಅವರಿಗೆ ವಿಶೇಷ ಅಭಿನಯದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿತ್ತು.

    ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಶ್ರುತಿ ಡ್ಯಾನ್ಸ್ ಮಾಸ್ಟರ್ ಮತ್ತು ಪ್ರಸಿದ್ಧ ಕಲರಿ ಪಟ್ಟು ಕಲಾವಿದರಾಗಿರುವ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.

    ಶ್ರುತಿ ದೂರಿನಲ್ಲಿ ಮದುವೆಯಾಗಿದೆ ಎಂದು ನಮೂದಿಸುವ ಮೊದಲು ರಾಮ್ ಕುಮಾರ್ ಜೊತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಹೇಳಿಕೊಂಡಿರಲಿಲ್ಲ. ಶ್ರುತಿ ಹರಿಹರನ್ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ `ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಒಟ್ಟಾಗಿ ಅಭಿನಯಿಸಿದ್ದರು.

  • ‘ಶಿವಾರ್ಜುನ’ನಿಗಾಗಿ ವಾಯ್ಸ್ ಡಬ್ ಮಾಡಿದ ತಾರಾ ಪುತ್ರ ಶ್ರೀಕೃಷ್ಣ!

    ‘ಶಿವಾರ್ಜುನ’ನಿಗಾಗಿ ವಾಯ್ಸ್ ಡಬ್ ಮಾಡಿದ ತಾರಾ ಪುತ್ರ ಶ್ರೀಕೃಷ್ಣ!

    ಬೆಂಗಳೂರು: ಎಂ.ಬಿ. ಮಂಜುಳಾ ಶಿವಾರ್ಜುನ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಶಿವಾರ್ಜುನ. ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಟಿಸಿರೋ ವಿಚಾರ ಗೊತ್ತೇ ಇದೆ. ಇದರಲ್ಲಿ ತಾರಾ ಕೂಡಾ ಬಹುಮುಖ್ಯವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕಾಗಿ ನಟಿ ತಾರಾ ಅವರ ಮುದ್ದಿನ ಮಗ ಶ್ರೀಕೃಷ್ಣ ಈ ಚಿತ್ರಕ್ಕಾಗಿ ಮೊದಲ ಬಾರಿ ವಾಯ್ಸ್ ಡಬ್ ಮಾಡಿದ್ದಾನೆ.

    ತಾರಾ ಅವರೇ ಮಗ ಶ್ರೀಕೃಷ್ಣನನ್ನು ಕೂರಿಸಿಕೊಂಡು ಡಬ್ಬಿಂಗ್ ಕಾರ್ಯವನ್ನು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ. ಈ ಸಿನಿಮಾಗಾಗಿ ಪುಟ್ಟ ಶ್ರೀಕೃಷ್ಣ ತೊದಲು ಮಾತುಗಳ ಮೂಲಕ ಲೀಲಾಜಾಲವಾಗಿಯೇ ಡೈಲಾಗ್ ಹೇಳುತ್ತಾ ಡಬ್ ಮಾಡಿದ್ದಾನೆ. ತಾರಾ ದಶಕಗಳಿಂದಲೂ ಸಿನಿಮಾ ರಂಗದ ಭಾಗವಾಗಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು. ಅವರ ಮಗ ಕೂಡಾ ಭವಿಷ್ಯದಲ್ಲಿ ಚಿತ್ರರಂಗಕ್ಕೇ ಪಾದಾರ್ಪಣೆ ಮಾಡೋ ಲಕ್ಷಣವೂ ಈ ಮೂಲಕ ಗೋಚರಿಸಿದೆ. ಮಗನ ಮೊದಲ ತೊದಲು ನುಡಿಗಳ ಡಬ್ಬಿಂಗ್ ಕಾರ್ಯದ ಸಂದರ್ಭದಲ್ಲಿ ತಾರಾ ಅವರ ಮುಖದಲ್ಲಿದ್ದ ಖುಷಿಯೇ ಅದನ್ನು ಸೂಚಿಸುವಂತಿದೆ.

    ಶಿವಾರ್ಜುನ ನಿಶ್ಚಿತಾ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ. ಮಂಜುಳಾ ಶಿವಾರ್ಜುನ್ ನಿರ್ಮಾಣ ಮಾಡಿರುವ ಮೊದಲ ಚಿತ್ರ. ಚಿತ್ರರಂಗದಲ್ಲಿ ಬಹುಕಾಲದಿಂದಲೂ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಶಿವಾರ್ಜುನ್ ಪಾಲಿನ ಮೊದಲ ಹೆಜ್ಜೆಯೂ ಹೌದು. ಆರಂಭದಲ್ಲಿ ಶೀರ್ಷಿಕೆಯೇ ಇಲ್ಲದೇ ಚಿತ್ರೀಕರಣ ಶುರು ಮಾಡಿ ನಂತರ ನಿರ್ಮಾಪಕ ಶಿವಾರ್ಜನ್ ಹೆಸರನ್ನೇ ಕಥೆಗೆ ಪೂರಕವಾಗಿರೋದರಿಂದ ಶೀರ್ಷಿಕೆಯಾಗಿಡಲಾಗಿದೆ. ಇತ್ತೀಚೆಗಷ್ಟೇ ತೆರೆ ಕಂಡು ಗೆದ್ದಿದ್ದ ಸಿಂಗ ಚಿತ್ರದಲ್ಲಿ ತಾರಾ ಚಿರು ಅಮ್ಮನಾಗಿ ಮನೋಜ್ಞ ಅಭಿನಯ ನೀಡಿದ್ದರು. ಇದೀಗ ಶಿವಾರ್ಜುನ ಚಿತ್ರದಲ್ಲಿಯೂ ತಾರಾ ಸಾಥ್ ಕೊಟ್ಟಿದ್ದಾರೆ. ಇದಕ್ಕೆ ವಾಯ್ಸ್ ಡಬ್ ಮಾಡೋ ಮೂಲಕ ತಾರಾ ಪುತ್ರ ಶ್ರೀಕೃಷ್ಣನೂ ಜೊತೆಯಾಗಿದ್ದಾನೆ.

    ಈ ಹಿಂದೆ ಧೈರ್ಯಂ, ಲೌಡ್ ಸ್ಪೀಕರ್ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಶಿವತೇಜಸ್ ಶಿವಾರ್ಜುನನ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೊಂದು ರಗಡ್ ಕಥೆ ಹೊಂದಿರೋ ಚಿತ್ರ ಅನ್ನೋದಕ್ಕೆ ಚಿರಂಜೀವಿ ಸರ್ಜಾರ ಕೆಲ ಗೆಟಪ್ಪುಗಳೇ ಸಾಕ್ಷಿಯಂತಿವೆ. ಆಕ್ಷನ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿರೋ ಈ ಚಿತ್ರಕ್ಕೆ ಹೆಚ್.ಸಿ ವೇಣು ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಸುರಾಗ್ ಸಂಗೀತ, ರವಿವರ್ಮಾ, ವಿನೋದ್, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಸಿಂಗ ಚಿತ್ರದ ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಚಿರಂಜೀವಿ ಸರ್ಜಾ ಇದೀಗ ಮತ್ತೊಮ್ಮೆ ಆಕ್ಷನ್ ಮೂಡಿನಲ್ಲಿ ಎಲ್ಲ ವರ್ಗದ ಪ್ರೇಕ್ಷಕರನ್ನೂ ಮುದಗೊಳಿಸೋ ಇರಾದೆಯೊಂದಿಗೆ ಅಡಿಯಿರಿಸುತ್ತಿದ್ದಾರೆ.

  • ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ: ಊರ್ಮಿಳಾ

    ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ: ಊರ್ಮಿಳಾ

    ಮುಂಬೈ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು ಸದ್ಯ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ ಎಂದು ಹೇಳಿದ್ದಾರೆ.

    ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಮಾಧ್ಯಮಗಳು ಈ ರೀತಿಯ ವರದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಊರ್ಮಿಳಾ ಮನವಿ ಮಾಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಜೋರಾಗಿದೆ. ಇದರ ನಡುವೆಯೇ ಊರ್ಮಿಳಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಅವರು ಶಿವಸೇನೆಯ ನಾಯಕ ಮಿಲಿಂದ್ ನರ್ವೆಕರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿತ್ತು.

    ಊರ್ಮಿಳಾ ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಯಾಗಿದ್ದರು. ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದರು. ಆ ಬಳಿಕ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ವಿಧಾನಸಭೆಯ ಚುನಾವಣೆಗೆ 2 ತಿಂಗಳು ಸಮಯವಷ್ಟೇ ಇರುವ ಸಂದರ್ಭದಲ್ಲಿ ಪಕ್ಷದಲ್ಲಿ ಕಾಂಗ್ರೆಸ್ ನಾಯಕರ ರಾಜೀನಾಮೆ ಭಾರೀ ಸುದ್ದಿಯಾಗಿದೆ. ಇದರ ನಡುವೆಯೇ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಇತರೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಮಾತುಕತೆಯನ್ನು ನಡೆಸಿದೆ.

  • ಅಪಾರ್ಟ್‌ಮೆಂಟ್‌ನಿಂದ ಜಿಗಿದು ನಟಿ ಆತ್ಮಹತ್ಯೆ

    ಅಪಾರ್ಟ್‌ಮೆಂಟ್‌ನಿಂದ ಜಿಗಿದು ನಟಿ ಆತ್ಮಹತ್ಯೆ

    ಮುಂಬೈ: ನಟಿಯೊಬ್ಬಳು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಮಹಾರಾಷ್ಟ್ರದ ಒಶಿವಾರಾದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ನಟಿಯನ್ನು ಪರ್ಲ್ ಪಂಜಾಬಿ ಎಂದು ಗುರುತಿಸಲಾಗಿದೆ. ಪರ್ಲ್ ಮಹತ್ವಾಕಾಂಕ್ಷಿ ನಟಿ ಹಾಗೂ ಮಾಡೆಲ್ ಆಗಿದ್ದು, ಬಾಲಿವುಡ್‍ನಲ್ಲಿ ಎಂಟ್ರಿ ಕೊಡಲು ಬಹಳ ಪ್ರಯತ್ನಿಸುತ್ತಿದ್ದಳು. ಆದರೆ ಪರ್ಲ್ ಇದರಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ಇದರಿಂದ ಆಕೆ ಮನನೊಂದಿದ್ದಳು.

    ಈ ಬಗ್ಗೆ ಪ್ರತಿಕ್ರಿಯಿಸಿದ ಸೆಕ್ಯೂರಿಟಿ ಗಾರ್ಡ್ ಬಿಪಿನ್ ಕುಮಾರ್ ಠಾಕೂರ್, “ಈ ಘಟನೆ ರಾತ್ರಿ ಸುಮಾರು 12.15 ರಿಂದ 12.30 ನಡುವೆ ನಡೆದಿದೆ. ಈ ವೇಳೆ ಯಾವುದೋ ಶಬ್ಧವೊಂದು ಕೇಳಿಸಿತ್ತು. ರಸ್ತೆಯಲ್ಲಿ ಯಾರೋ ಕೂಗುತ್ತಿದ್ದಾರೆ ಎಂದು ನಾನು ಭಾವಿಸಿದೆ. ಬಳಿಕ ಏನಾಗಿದೆ ಎಂದು ಪರಿಶೀಲಿಸಲು ಅಲ್ಲಿಗೆ ಹೋದೆವು. ಆಗ ಅಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಅಲ್ಲದೆ ಅಪಾರ್ಟ್‌ಮೆಂಟ್‌ ನ ಮೂರನೇ ಮಹಡಿಯಲ್ಲೂ ಕೂಡ ಯಾವುದೋ ಶಬ್ಧ ಕೇಳಿಸುತ್ತಿತ್ತು” ಎಂದು ಹೇಳಿದ್ದಾರೆ.

    ನಟಿ ಪರ್ಲ್ ಪಂಜಾಬಿ ಬಾಲಿವುಡ್‍ನಲ್ಲಿ ಅವಕಾಶ ಸಿಗದ ಕಾರಣ ಮಾನಸಿಕವಾಗಿ ನೊಂದಿದ್ದಳು. ಅಲ್ಲದೆ ಪದೇ ಪದೇ ತನ್ನ ತಾಯಿಯ ಜೊತೆ ಜಗಳವಾಡುತ್ತಿದ್ದಳು. ಈ ಹಿಂದೆ ಕೂಡ ಆಕೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಸಮಯಕ್ಕೆ ಸರಿಯಾಗಿ ಯಾರಾದರೂ ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಬಗ್ಗೆ ಒಶಿವಾರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ‘ರಾಬರ್ಟ್’ ಗೆ ಜೋಡಿಯಾದ ಸೌತ್ ಸುಂದರಿ

    ‘ರಾಬರ್ಟ್’ ಗೆ ಜೋಡಿಯಾದ ಸೌತ್ ಸುಂದರಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ‘ರಾಬರ್ಟ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ಸಿನಿಮಾ ಅಂದರೆ ಸಾಕು ಅವರಿಗೆ ನಾಯಕಿಯಾಗಿ ಯಾರು ಬರುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಅವರ ಕುತೂಹಲಕ್ಕೆ ತೆರೆಬಿದ್ದಿದ್ದು, ರಾಬರ್ಟ್ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಟಾಲಿವುಡ್ ಬೆಡಗಿ ಆಯ್ಕೆಯಾಗಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿರುವ ನಟಿ ಮೆಹರಿನ್ ಪಿರ್ಜಾದಾ ಅವರು ರಾಬರ್ಟ್ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ನಾಯಕಿಯರ ಆಯ್ಕೆ ವಿಚಾರದಲ್ಲಿ ‘ರಾಬರ್ಟ್’ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಹೆಸರು ಕೂಡ ಕೇಳಿ ಬಂದಿತ್ತು. ಇದೀಗ ಮೆಹರಿನ್ ನಾಯಕಿಯಾಗಿ ಬರುವುದು ಬಹುತೇಕ ಖಚಿತವಾಗಿದೆ.

    ಸದ್ಯಕ್ಕೆ ‘ರಾಬರ್ಟ್’ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭವಾಗಲಿದೆ. ಈಗಾಗಲೇ ನಾಯಕಿ ಇಲ್ಲದೆ ಚಿತ್ರತಂಡ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಮುಂದಿನ ತಿಂಗಳು ನಟಿ ಮೆಹರಿನ್ ಚಿತ್ರತಂಡ ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಮೆಹರಿನ್ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ಚಿತ್ರತಂಡ ಎರಡನೇ ಹಂತದ ಚಿತ್ರೀಕರಣವನ್ನು ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಸಲು ಪ್ಲ್ಯಾನ್ ಮಾಡಿಕೊಂಡಿದ್ದೆ. ಅದಕ್ಕಾಗಿ ಸೆಟ್ ಕೂಡ ನಿರ್ಮಾಣವಾಗುತ್ತಿದೆ ಎಂದು ತಿಳಿದು ಬಂದಿದ್ದು, ಒಟ್ಟು 15 ದಿನಗಳಲ್ಲಿ ಶೂಟಿಂಗ್ ಮಾಡಿ ಮುಗಿಸಲು ಚಿತ್ರತಂಡ ಯೋಜನೆ ಮಾಡಿದೆ. ಈ ಸಿನಿಮಾದಲ್ಲಿ ಖಳನಟ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಅವರು ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಸಿನಿಮಾ ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.

  • ಮೆದುಳಿಲ್ಲದ ಸೌಂದರ್ಯ- ಸಣ್ಣ ಮಿಸ್ಟೆಕ್‍ನಿಂದ ಜಾಹ್ನವಿ ಫುಲ್ ಟ್ರೋಲ್

    ಮೆದುಳಿಲ್ಲದ ಸೌಂದರ್ಯ- ಸಣ್ಣ ಮಿಸ್ಟೆಕ್‍ನಿಂದ ಜಾಹ್ನವಿ ಫುಲ್ ಟ್ರೋಲ್

    ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಇದೀಗ ತಾನು ಮಾಡಿದ ಸಣ್ಣ ಮಿಸ್ಟೆಕ್ ನಿಂದ ಭಾರೀ ಟ್ರೋಲ್‍ಗೆ ಒಳಗಾಗಿದ್ದಾರೆ.

    ಜಾಹ್ನವಿ ಕಪೂರ್ ಇತ್ತೀಚೆಗೆ ದೆಹಲಿಯಲ್ಲಿ ನಡೆದ `ಕಾಲಿಂಗ್ ಸೆಹಮತ್’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಜಾಹ್ನವಿ ಬಿಡುಗಡೆ ಮಾಡುತ್ತಿರುವ ಪುಸ್ತಕವನ್ನು ಉಲ್ಟಾ ಹಿಡಿದುಕೊಂಡಿದ್ದಾರೆ. ಇದನ್ನು ನೆರೆದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಅಲ್ಲದೆ ಜಾಲತಾಣಿಗರು ಮಿಸ್ಟೆಕ್ ಮಾಡಿದ ಜಾಹ್ನವಿ ಕಾಲೆಳೆದಿದ್ದಾರೆ. ಮೆದುಳಿಲ್ಲದ ಸೌಂದರ್ಯ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಇದು ಮನುಷ್ಯ ಮಾಡಿದ ತಪ್ಪಲ್ಲ ಎಂದು ಹೇಳಿದ್ದಾರೆ. ಹೀಗೆ ಹಲವಾರು ಕಾಮೆಂಟ್ ಗಳ ಮೂಲಕ ಜಾಹ್ನವಿಯನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಧಿಕೃತವಾಗಿ ಜಾಹ್ನವಿ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಂತರ ಅವರು ಟ್ರೋಲ್ ಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾರೆ. ಆದರೆ ತನ್ನ ಮೇಲಾಗುತ್ತಿರುವ ಟ್ರೋಲ್ ಗಳಿಗೆ ಇದೂವರೆಗೂ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    https://www.instagram.com/p/B1gvoBqnGuC/?utm_source=ig_embed