Tag: actress

  • ಕಿರಿಕ್ ಬೆಡಗಿ ಮನೆಯಲ್ಲಿ ಐಟಿ ಬೇಟೆ – ದಾಳಿ ವೇಳೆ ಸಿಕ್ಕಿದ್ದು 25 ಲಕ್ಷ ಕ್ಯಾಶ್

    ಕಿರಿಕ್ ಬೆಡಗಿ ಮನೆಯಲ್ಲಿ ಐಟಿ ಬೇಟೆ – ದಾಳಿ ವೇಳೆ ಸಿಕ್ಕಿದ್ದು 25 ಲಕ್ಷ ಕ್ಯಾಶ್

    – ಎರಡೆರಡು ಪ್ಯಾನ್ ಕಾರ್ಡ್
    – ಒಂದೂವರೆ ಕೋಟಿಗೆ ಕಟ್ಟಿಲ್ಲ ತೆರಿಗೆ

    ಬೆಂಗಳೂರು: ನಟಿ ರಶ್ಮಿಕಾ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳು ಮನೆಯಲ್ಲಿದ್ದ 25 ಲಕ್ಷ ರೂಪಾಯಿ ಕ್ಯಾಶ್ ವಶಪಡಿಸಿಕೊಂಡಿದ್ದಾರೆ.

    ದಾಳಿ ವೇಳೆ ರಶ್ಮಿಕಾ ಮನೆಯಲ್ಲಿ 3.94 ಕೋಟಿ ರೂ. ಮೊತ್ತದ ಅಘೋಷಿತ ಆದಾಯ ಪತ್ತೆಯಾಗಿದೆ. 1.5 ಕೋಟಿ ರೂಪಾಯಿಗೆ ತೆರಿಗೆ ಕಟ್ಟಿಲ್ಲ. ಇಷ್ಟು ಮಾತ್ರವಲ್ಲದೆ ರಶ್ಮಿಕಾ ಹೆಸರಲ್ಲಿ ಎರಡು ಪ್ಯಾನ್ ಕಾರ್ಡ್ ಇರುವುದು ಕೂಡ ಬೆಳಕಿಗೆ ಬಂದಿದೆ. ಒಂದು ಪ್ಯಾನ್ ಕಾರ್ಡ್ ಮೂಲಕ 2016-17ರವರೆಗಷ್ಟೇ ಆದಾಯ ತೆರಿಗೆ ಸಲ್ಲಿಕೆ ಮಾಡಲಾಗಿದೆ. ರಶ್ಮಿಕಾ ತಂದೆ ಒಡೆತನದ ಕಲ್ಯಾಣ ಮಂಟಪದ ಬಗ್ಗೆಯೂ ಗುಮಾನಿಯಿದ್ದು, ಕಲ್ಯಾಣ ಮಂಟಪದ ವ್ಯವಹಾರದ ಬಗ್ಗೆಯೂ ಕೆಲ ಮಾಹಿತಿ ಮುಚ್ಚಿಟ್ಟ ಆರೋಪ ಕೇಳಿ ಬಂದಿದೆ.

    ಗುರುವಾರ ಮುಂಜಾನೆ 7:30ಕ್ಕೆ ರಶ್ಮಿಕಾ ಅಭಿಮಾನಿಗಳು ಎಂದು ಎಂಟ್ರಿ ಕೊಟ್ಟಿದ್ದ ಆಂಧ್ರಪ್ರದೇಶದ ಐಟಿ ಅಧಿಕಾರಿಗಳು, ಮನೆಯನ್ನು ಜಾಲಾಡಿ ದಾಖಲೆಗಳನ್ನು ಕಲೆಹಾಕಿದ್ದರು. ರಶ್ಮಿಕಾ ಮಂದಣ್ಣ ತಂದೆ ಒಡೆತನದ ಬೃಹತ್ ಬಂಗಲೆ, ಸೆರೆನಿಟಿ ಕಲ್ಯಾಣ ಮಂಟಪ, ಕಾಫಿ ತೋಟ, ಹೊಸದಾಗಿ ಖರೀದಿ ಮಾಡಿ ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್ ಬಂಕ್ ಜಾಗದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು.

    ಈ ಮಧ್ಯೆ ಗುರುವಾರ ಮಧ್ಯಾಹ್ನ ಐಟಿ ಅಧಿಕಾರಿಗಳ ತಂಡ ರಶ್ಮಿಕಾ ಮಂದಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೈದರಾಬಾದ್ ನಲ್ಲಿ ಶೂಟಿಂಗ್‍ನಲ್ಲಿ ನಿರತರಾಗಿದ್ದ ರಶ್ಮಿಕಾ ಮಂದಣ್ಣ ವಿಮಾನದಲ್ಲಿ ಮೈಸೂರಿಗೆ ಬಂದು ಬಳಿಕ ಕಾರಿನಲ್ಲಿ ಗುರುವಾರ ರಾತ್ರಿಯೇ ಮನೆಗೆ ಧಾವಿಸಿದ್ದರು. ಮನೆಗೆ ಬಂದ ರಶ್ಮಿಕಾ, ಮನೆಯಲ್ಲಿ ಐಟಿ ದಾಳಿಯಿಂದ ಶಾಕ್ ಆಗಿದ್ದ ತಂದೆ ಮದನ್ ಮಂದಣ್ಣ, ತಾಯಿ ಸುಮನ್ ನೋಡಿ ಆರಂಭದಲ್ಲಿ ವಿಚಲಿತರಾದರು. ಬಳಿಕ ಅಪ್ಪ ಅಮ್ಮನನ್ನು ಸಂತೈಸಿ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

    ಸತತ 29 ಗಂಟೆಗಳ ಬಳಿಕ ಐಟಿ ಅಧಿಕಾರಿಗಳ ತಲಾಶ್ ಬಳಿಕ 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ ನಲ್ಲಿ ಮಂದಣ್ಣ ಮನೆಯಲ್ಲಿ ಸಿಕ್ಕ ದಾಖಲೆಯನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

     

  • ಡೈರೆಕ್ಟರ್ ಜೊತೆ ಓಡೋಗಿ ಮದ್ವೆ- ತಾಯಿಯ ಅಂತ್ಯಕ್ರಿಯೆಗೂ ಬಾರದ ನಟಿ

    ಡೈರೆಕ್ಟರ್ ಜೊತೆ ಓಡೋಗಿ ಮದ್ವೆ- ತಾಯಿಯ ಅಂತ್ಯಕ್ರಿಯೆಗೂ ಬಾರದ ನಟಿ

    ಮಂಡ್ಯ: ಮಗಳು ನಿರ್ದೇಶಕನೊಂದಿಗೆ ಓಡಿ ಹೋಗಿದ್ದಕ್ಕೆ ಮನನೊಂದು ವಿಷ ತೆಗೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟಿ ವಿಜಯಲಕ್ಷ್ಮಿ ತಾಯಿ ಇಂದು ಕೊನೆಯುಸಿರೆಳೆದಿದ್ದಾರೆ. ಆದರೆ ನಟಿ ತಾಯಿಯ ಅಂತ್ಯಕ್ರಿಯೆಗೂ ಬಂದಿಲ್ಲ. ಇದನ್ನೂ ಓದಿ: ‘ನಮ್ಮನ್ನು ಬದುಕಲು ಬಿಡಿ’- ನಿರ್ದೇಶಕನ ಜೊತೆ ಓಡಿಹೋಗಿದ್ದ ನಟಿ ರಾಯಚೂರಿನಲ್ಲಿ ಪ್ರತ್ಯಕ್ಷ

    ಸವಿತಾ ಮೃತ ತಾಯಿ. ಕಳೆದ ಒಂದು ವಾರದ ಹಿಂದೆ ನಟಿ ವಿಜಯಲಕ್ಷ್ಮಿ ನಿರ್ದೇಶಕ ಆಂಜನಪ್ಪ ಜೊತೆ ಓಡಿ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ತಾಯಿ ಸವಿತಾ ಹಾಗೂ ಅಜ್ಜಿ ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ವಿಷ ತೆಗೆದುಕೊಂಡ ಪರಿಣಾಮ ವಿಜಯಲಕ್ಷ್ಮಿ ಅಜ್ಜಿ ಸಾವನ್ನಪ್ಪಿದ್ದರು. ಅಂದು ವಿಜಯಲಕ್ಷ್ಮಿ ಅಜ್ಜಿಯ ಅಂತ್ಯಸಂಸ್ಕಾರಕ್ಕೂ ಬಂದಿರಲಿಲ್ಲ. ಇದನ್ನೂ ಓದಿ: ನಿರ್ದೇಶಕನೊಂದಿಗೆ ನಟಿ ಪರಾರಿ- ತಾಯಿ ಆತ್ಮಹತ್ಯೆಗೆ ಯತ್ನ, ಅಜ್ಜಿ ಸಾವು

    ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ವಿಜಯಲಕ್ಷ್ಮಿ ತಾಯಿ ಸವಿತಾ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿ ಸಾವನ್ನಪ್ಪಿದರೂ ವಿಜಯಲಕ್ಷ್ಮಿ ಮಾತ್ರ ತಾಯಿಯ ಮುಖ ನೋಡಲು ಸಹ ಬಂದಿಲ್ಲ. ಸವಿತಾ ಅವರ ಅಂತ್ಯಕ್ರಿಯೆಯನ್ನು ಜಿಲ್ಲೆಯ ಮದ್ದೂರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಮಾಡಲಾಗಿದೆ.

    ಏನಿದು ಪ್ರಕರಣ?
    ಕನ್ನಡ ಚಿತ್ರರಂಗದಲ್ಲಿ ಸುಮಾರು 16 ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಇದೀಗ ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಎಂಬ ಸಿನಿಮಾಗಳಿಗೆ ಸಹಿ ಹಾಕಿ ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಜೊತೆ ಓಡಿ ಹೋಗಿದ್ದರು. ನಂತರ ನಟಿ ವಿಜಯಲಕ್ಷ್ಮಿ ರಾಯಚೂರಿನಲ್ಲಿ ಪತಿಯ ಜೊತೆ ಪ್ರತ್ಯಕ್ಷವಾಗಿದ್ದರು.

    ನಾನು ತುಂಗಭದ್ರಾ ಸಿನಿಮಾದಲ್ಲಿ ನಟಿಸುವಾಗ ಲವ್ ಮಾಡಿ ಮದುವೆ ಆಗಿದ್ದೇನೆ. ನನ್ನನ್ನು ಯಾರೂ ಕರೆದುಕೊಂಡು ಬಂದಿಲ್ಲ. ನಾನು ಪ್ರೀತಿಸಿ ಮದುವೆ ಆಗಿದ್ದೇನೆ. ನಮ್ಮ ಅಜ್ಜಿ ಸಾವನ್ನಪ್ಪಿಲ್ಲ, ನಮ್ಮ ತಾಯಿ ನಾಟಕ ಮಾಡುತ್ತಿದ್ದಾರೆ. ನಾವು ಗಂಗಾವತಿಯಲ್ಲಿ ಮದುವೆ ಆಗಿದ್ದೇವೆ. ನನ್ನ ತಾಯಿ ಸವಿತಾ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ವಿಜಯಲಕ್ಷ್ಮಿ, ಕಳೆದ 10 ವರ್ಷಗಳಿಂದ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ತಮ್ಮ ಸಾಕು ತಂದೆ ಸ್ವಾಮಿ ಅವರ ಪೋಷಣೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಟಿ ವಿಜಯಲಕ್ಷ್ಮಿ ಶಿವರಾಜ್‍ಕುಮಾರ್ ನಟನೆಯ ಆಯುಷ್ಮಾನುಭವ ಸೇರಿದಂತೆ 16 ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸಿದ್ದರು. ನಂತರ ತುಂಗಾಭಧ್ರಾ, ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ಬಂದಿದ್ದವು. ಈ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ಅರ್ಧದಷ್ಟು ಶೂಟಿಂಗ್ ಆಗಿದೆ.

     

  • ಪತಿಯಿಂದ ನಟಿಗೆ ವರದಕ್ಷಿಣೆ ಕಿರುಕುಳ

    ಪತಿಯಿಂದ ನಟಿಗೆ ವರದಕ್ಷಿಣೆ ಕಿರುಕುಳ

    ಬೆಂಗಳೂರು: ಪತಿಯಿಂದ ನನಗೆ ಕಿರುಕುಳವಾಗುತ್ತಿದೆ. ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾನೆ ಎಂದು ಪತಿಯ ವಿರುದ್ಧ ತಮಿಳು ನಟಿಯೊಬ್ಬರು ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ತಮಿಳು ನಟಿ ರಮ್ಯಾ ಪತಿಯ ವಿರುದ್ಧ ದೂರು ನೀಡಿದ್ದಾರೆ. ನಟಿ ರಮ್ಯಾಗೆ 2017ರಲ್ಲಿ ಕೊರಿಯೋಗ್ರಾಫರ್ ವರದರಾಜನ್ ಜೊತೆ ಮದುವೆಯಾಗಿತ್ತು. ವಿವಾಹದ ಸಂದರ್ಭದಲ್ಲಿ 25 ಲಕ್ಷ ಮೌಲ್ಯದ ಸೈಟ್, ಚಿನ್ನಾಭರಣ ಮತ್ತು ನಗದನ್ನು ಕೊಡಲಾಗಿತ್ತು.

    ಇತ್ತೀಚೆಗೆ ಡ್ಯಾನ್ಸ್ ಅಕಾಡೆಮಿ ತೆರೆಯಲು ಮತ್ತಷ್ಟು ಹಣ ತರುವಂತೆ ಪತಿ ಮತ್ತು ಪತಿಯ ಕುಟುಂಬದವರು ಪೀಡಿಸಲಾರಂಭಿಸಿದ್ದಾರೆ. ಮದುವೆಯಾದ ಬಳಿಕ ನನ್ನ ಮನೆಗೆ ಕರೆದುಕೊಂಡು ಹೋಗದೆ ಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಕೋ ಡ್ಯಾನ್ಸರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

    ನಟಿ ರಮ್ಯಾ ತಮಿಳಿನ ‘ಮಾಂಡಾ ಮಾಯಿಲ’ ರಿಯಾಲಿಟಿ ಶೋನಲ್ಲಿ ವಿಜೇತರಾಗಿದ್ದರು. ಸದ್ಯಕ್ಕೆ ವರದಕ್ಷಿಣೆ ಕೇಸ್‍ನಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಇನ್‍ಸ್ಟಾದಲ್ಲಿ ನಗ್ನ ಫೋಟೋ ಹಂಚಿಕೊಂಡ ಖ್ಯಾತ ನಟಿ

    ಇನ್‍ಸ್ಟಾದಲ್ಲಿ ನಗ್ನ ಫೋಟೋ ಹಂಚಿಕೊಂಡ ಖ್ಯಾತ ನಟಿ

    ಮುಂಬೈ: ಖ್ಯಾತ ನಟಿ, ನಿರೂಪಕಿ ಪದ್ಮಾ ಲಕ್ಷ್ಮಿ ತಮ್ಮ ಇನ್‍ಸ್ಟಾದಲ್ಲಿ ನಗ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಪದ್ಮಾ ಲಕ್ಷ್ಮಿ ಟಾಪ್‍ಲೆಸ್ ಫೋಟೋವನ್ನು ಇನ್‍ಸ್ಟಾದಲ್ಲಿ ಹಾಕಿ ಅದಕ್ಕೆ, “ಹೊಸ ವರ್ಷ, ಆದರೆ ನಾನು ಮೊದಲಿನಂತೆಯೇ ಇದ್ದೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

     

    View this post on Instagram

     

    New year, same me ???? (@vogueindia) #bts

    A post shared by Padma Lakshmi (@padmalakshmi) on

    ಬೆಳ್ಳಿತೆರೆಯಿಂದ ದೂರವಿರುವ ಪದ್ಮಾ ಲಕ್ಷ್ಮಿ ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪದ್ಮಾ ಸಕ್ರಿಯರಾಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    ಕಳೆದ ವಾರ ಪದ್ಮಾ ಸಂಪೂರ್ಣ ನಗ್ನವಾಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿತ್ತು.

  • ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ

    ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ

    ಮುಂಬೈ: ಭಾರತದ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಇಂದು ತುಳು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದಾರೆ. ಐಪಿಎಲ್‍ನಲ್ಲಿ ಮನೀಶ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ. ಹಾಗಾಗಿ ಮನೀಶ್ ಮದುವೆಯ ಫೋಟೋವನ್ನು ಮೊದಲು ಸನ್‍ರೈಸರ್ಸ್ ಹೈದರಾಬಾದ್ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ವರದಿಗಳ ಪ್ರಕಾರ ಮದುವೆಯ ಆಚರಣೆ ಇನ್ನೂ ಎರಡು ದಿನಗಳ ಕಾಲ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದಾರೆ. ಈ ಹಿಂದೆ ಮನೀಶ್ ಪಾಂಡೆ ಹಾಗೂ ಆಶ್ರಿತಾ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ಮದುವೆಯಾಗುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ.

    2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶ್ರಿತಾ ‘ಇಂದ್ರಜಿತ್’, ‘ಒರು ಕಣ್ಣಿಯುನ್ ಮೂನು ಕಲಾವಾನಿಕಲಂ’, ‘ಉದಯಂ ಎನ್.ಎಚ್4’ ಸೇರಿದಂತೆ ಹಲವು ಚಿತಗಳಲ್ಲಿ ನಟಿಸಿದ್ದಾರೆ. ಬ್ಯೂಟಿ ಕಾಂಪಿಟೇಶನ್ ಭಾಗವಹಿಸಿದ ಆಶ್ರಿತಾ ಜಾಹೀರಾತುಗಳಲ್ಲಿಯೂ ಅಭಿನಯಿಸಿದ್ದಾರೆ.

    ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ಅವರ ನಾಯಕತ್ವದಲ್ಲಿ ತಮಿಳುನಾಡಿನ ತಂಡದ ವಿರುದ್ಧ ಕರ್ನಾಟಕ ತಂಡ ಜಯಗಳಿಸಿದೆ. ಈ ಪಂದ್ಯದಲ್ಲಿ ಮನೀಶ್ 60 ರನ್‍ಗಳನ್ನು ಗಳಿಸಿದ್ದಾರೆ.

  • ‘ಪರೀಕ್ಷೆಗೆ ಓದಲು ಬಿಡಿ ಅಕ್ಕ’: ದಿಶಾ ಬಿಕಿನಿ ಫೋಟೋಗೆ ಅಭಿಮಾನಿ ಕಮೆಂಟ್

    ‘ಪರೀಕ್ಷೆಗೆ ಓದಲು ಬಿಡಿ ಅಕ್ಕ’: ದಿಶಾ ಬಿಕಿನಿ ಫೋಟೋಗೆ ಅಭಿಮಾನಿ ಕಮೆಂಟ್

    ನವದೆಹಲಿ: ನಟಿ ದಿಶಾ ಪಟಾಣಿ ಸದಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೋಲ್ಡ್ ಮತ್ತು ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ದಿಶಾ ಬಿಕಿನಿ ತೊಟ್ಟಿರುವ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ದಿಶಾ ಕಪ್ಪು ಬಣ್ಣದ ಬಿಕಿನಿ ಧರಿಸಿಕೊಂಡು, ಫೌಂಟೇನ್ ಕೊರೆವ ಚಳಿಯಲ್ಲಿ ಕುಳಿತುಕೊಂಡು ಕ್ಯಾಮೆರಾಗೆ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ದಿಶಾ ಪಟಾನಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ದಿಶಾರ ಹಾಟ್ ನೋಡಿದ ಸಾವಿರಾರು ಅಭಿಮಾನಿಗಳು, ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದೀರಾ, ನಿಮ್ಮ ಲುಕ್ ಚೆನ್ನಾಗಿದೆ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://www.instagram.com/p/B5aNA7HgAZx/?utm_source=ig_embed

    ಅದರಲ್ಲಿ ಅಭಿಮಾನಿಯೊಬ್ಬ “ಅಕ್ಕ ನನಗೆ ಪರೀಕ್ಷೆ ನಡೆಯುತ್ತಿದೆ. ಓದಲು ಬಿಡಿ” ಎಂದು ಕಮೆಂಟ್ ಮಾಡಿದ್ದಾನೆ. ಇದುವರೆಗೂ ಈ ಫೋಟೋ 18 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ 14 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

    ದಿಶಾ ಪಟಾಣಿ ಬಿಕಿನಿ ಧರಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಸಲ್ಮಾನ್ ಅಭಿನಯದ ‘ಭಾರತ್’ ಸಿನಿಮಾದಲ್ಲಿ ದಿಶಾ ಅಭಿನಯಿಸಿದ್ದರು. ಸದ್ಯಕ್ಕೆ ತಮ್ಮ ಗೆಳೆಯ ಟೈಗರ್ ಶ್ರಾಫ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ.

    https://www.instagram.com/p/B5P-_d4gJRe/

  • ಶೂಟಿಂಗ್ ವೇಳೆ ನಟಿಗೆ ಹೃದಯಾಘಾತ

    ಶೂಟಿಂಗ್ ವೇಳೆ ನಟಿಗೆ ಹೃದಯಾಘಾತ

    ಮುಂಬೈ: ಕಿರುತೆರೆ ನಟಿ ಮತ್ತು ರೂಪದರ್ಶಿ ಗೆಹನಾ ವಸಿಷ್ಠ ಅವರಿಗೆ ಚಿತ್ರೀಕರಣದ ವೇಳೆ ಹೃದಯಾಘಾತವಾಗಿದ್ದು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾದ ಪೌಷ್ಠಿಕಕಾಂಶದ ಆಹಾರ ಮತ್ತು ವಿಶ್ರಾಂತಿ ಇಲ್ಲದೇ ಇದ್ದುದ್ದರಿಂದ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗೆಹನಾ ವಸಿಷ್ಠ ವೆಬ್ ಸರಣಿಯೊಂದರಲ್ಲಿ ಬಿಡುವಿಲ್ಲದೆ ನಿರಂತರವಾಗಿ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಎರಡು ದಿನ ಯಾವುದೇ ಪೌಷ್ಠಿಕ ಆಹಾರ ಸೇವಿಸಿರಲಿಲ್ಲ. ಶೂಟಿಂಗ್ ತಂಡದವರು ಕೂಡ ಊಟವನ್ನು ಕೊಡದೆ ಬರೀ ಜ್ಯೂಸ್ ಕೊಟ್ಟಿದ್ದರು ಎಂದು ತಿಳಿದು ಬಂದಿದೆ. ಇದರಿಂದಾಗಿ ಶೂಟಿಂಗ್ ವೇಳೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮುಂಬೈನ ರಕ್ಷಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಉಸಿರಾಟಕ್ಕಾಗಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

    ಕಳೆದ 48 ಗಂಟೆಗಳಿಂದ ಸೂಕ್ತ ಪೌಷ್ಠಿಕ ಆಹಾರ ಸೇವಿಸಿರಲಿಲ್ಲ. ಜೊತೆಗೆ ಕೆಲವು ಔಷಧಿಗಳು ಹಾಗೂ ಎನರ್ಜಿ ಡ್ರಿಂಕ್ ಒಟ್ಟಿಗೆ ಕುಡಿದ ಕಾರಣ ಹೃದಯಾಘಾತವಾಗಿದೆ. ಸದ್ಯಕ್ಕೆ ಗೆಹನಾ ಅವರಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗೆಹನಾ ವಸಿಷ್ಠ ಅವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಸುಮಾರು 70ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ಮೋದಿಗೆ ಬೆದರಿಕೆ ಹಾಕಿದ್ದ ಗಾಯಕಿಯನ್ನು ಬೆಂಬಲಿಸಲು ನಟಿಯಿಂದ ನಗ್ನ ಫೋಟೋ ಶೇರ್

    ಮೋದಿಗೆ ಬೆದರಿಕೆ ಹಾಕಿದ್ದ ಗಾಯಕಿಯನ್ನು ಬೆಂಬಲಿಸಲು ನಟಿಯಿಂದ ನಗ್ನ ಫೋಟೋ ಶೇರ್

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ್ದ ಗಾಯಕಿಯನ್ನು ಬೆಂಬಲಿಸಲು ಮುಂಬೈ ಮೂಲದ ಪಾಕಿಸ್ತಾನಿ- ಆಫ್ಘಾನಿ ನಟಿ ತನ್ನ ನಗ್ನ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾಳೆ.

    ಮಂಗಳವಾರ ನಟಿ ಮಲೀಶಾ ಹಿನಾ ಖಾನ್, ಗಾಯಕಿ ರಬಿ ಫಿರ್ಜಾದಾಳನ್ನು ಬೆಂಬಲಿಸಲು ತನ್ನ ನಗ್ನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ. ಇತ್ತೀಚೆಗೆ ರಬಿ ಫಿರ್ಜಾದಾಳ ನಗ್ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗಳು ನಡೆದಿತ್ತು. ರಬಿಳನ್ನು ಬೆಂಬಲಿಸಲು ಮಲೀಶಾ ಹೊಸದೊಂದು ಟ್ವಿಟ್ಟರ್ ಖಾತೆ ತೆರೆದು ಅದರಲ್ಲಿ ತಮ್ಮ ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಇದನ್ನೂ ಓದಿ: ಪ್ರೈವೇಟ್ ಫೋಟೋ ಲೀಕ್ – ಮೋದಿಗೆ ಬೆದರಿಕೆ ಹಾಕಿದ್ದ ಗಾಯಕಿ ಚಿತ್ರರಂಗ ಬಿಡಲು ನಿರ್ಧಾರ

    ಕೆಲ ದಿನಗಳ ಸಾಮಾಜಿಕ ಜಾಲತಾಣಗಳಲ್ಲಿ ರಬಿಳ ಪ್ರೈವೇಟ್ ಫೋಟೋಗಳು ಲೀಕ್ ಆಗಿತ್ತು. ಫೋಟೋ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆ ಜನರು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಆಗ ರಬಿ ತನ್ನ ಟ್ವಿಟ್ಟರಿನಲ್ಲಿ, “ನಾನು ರಬಿ ಫಿರ್ಜಾದಾ ಶೋಗಳನ್ನು ತ್ಯಜಿಸುತ್ತಿದ್ದೇನೆ. ಅಲ್ಲಾ ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಲಿ ಮತ್ತು ನನ್ನ ಪರವಾಗಿ ಜನರನ್ನು ನಿಲ್ಲುವಂತೆ ಮಾಡಲಿ” ಎಂದು ಟ್ವೀಟ್ ಮಾಡಿದ್ದಳು. ಈ ಬಗ್ಗೆ ರಬಿ ಫೆಡೆರಲ್ ಇನ್‍ವೆಸ್ಟಿಗೇಶನ್ ಏಜೆನ್ಸಿಗೆ ದೂರು ನೀಡಿದ್ದಳು ಎನ್ನಲಾಗಿತ್ತು.

    ಸೆಪ್ಟೆಂಬರ್ ತಿಂಗಳಿನಲ್ಲಿ ರಬಿ ಲಹೋರ್ ನಲ್ಲಿರುವ ತನ್ನ ಬ್ಯೂಟಿ ಪಾರ್ಲರ್ ನಲ್ಲಿ ಹೆಬ್ಬಾವು ಮತ್ತು ಮೊಸಳೆ ಜೊತೆ ವಿಡಿಯೋ ಮಾಡಿ ಮೋದಿಗೆ ನಿಂದಿಸಿದ್ದಳು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ರಬಿ ಫಿರ್ಜಾದಾವಿರುದ್ಧ ದೂರು ದಾಖಲಾಗಿತ್ತು.

    ಹೆಬ್ಬಾವು ಮತ್ತು ಮೊಸಳೆಯನ್ನು ಹಿಡಿದು ವಿಡಿಯೋ ಮಾಡಿದ್ದ ರಬಿ, ನಾನು ಕಾಶ್ಮೀರಿ ಮಹಿಳೆ, ಭಾರತಕ್ಕಾಗಿ ನಾವು ಹಾವುಗಳೊಂದಿಗೆ ಸಿದ್ಧವಾಗಿದ್ದೇವೆ. ಈ ಉಡುಗೊರೆಗಳು ನಿಜಕ್ಕೂ ಮೋದಿಯವರಿಗೆ. ನೀವು ಕಾಶ್ಮೀರಿಗಳಿಗೆ ತೊಂದರೆ ನೀಡುತ್ತಿದ್ದೀರಿ. ಆದ್ದರಿಂದ ನಾನು ನಿಮಗಾಗಿ ಈ ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಿದ್ದೇನೆ. ನೀವು ನರಕದಲ್ಲಿ ಸಾಯಲು ಸಿದ್ಧರಾಗಿ. ನನ್ನ ಸ್ನೇಹಿತರು ನರಕದಲ್ಲಿ ನಿಮ್ಮ ಜೊತೆ ಹಬ್ಬವನ್ನು ಮಾಡುತ್ತಾರೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಳು.

    ಇದಾದ ಬಳಿಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆತ್ಮಹತ್ಯೆ ಬಾಂಬರ್ ರೀತಿಯಲ್ಲಿ ಉಡುಪು ಧರಿಸಿರುವ ಫಿರ್ಜಾದಾ, `ಮೋದಿ ಹಿಟ್ಲರ್’ ಹಾಗೂ `ಕಾಶ್ಮೀರದ ಭೇಟಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಳು.

  • ನಟಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಕ್ರಿಕೆಟಿಗ ಕೆ.ಎಲ್ ರಾಹುಲ್

    ನಟಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಕ್ರಿಕೆಟಿಗ ಕೆ.ಎಲ್ ರಾಹುಲ್

    ಮುಂಬೈ: ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಲ್ ರಾಹುಲ್ ಬಾಲಿವುಡ್ ನಟಿ, ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಅವರ ಜೊತೆಗಿರುವ ರೊಮ್ಯಾಂಟಿಕ್ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಮಂಗಳವಾರ ಅಥಿಯಾ ತಮ್ಮ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಕೆ.ಎಲ್ ರಾಹುಲ್ ಅವರ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ. ರಾಹುಲ್ ಫೋಟೋ ಹಾಕಿ ಅದಕ್ಕೆ, “ಹ್ಯಾಪಿ ಬರ್ತ್ ಡೇ” ಎಂದು ಬರೆದು ಕೋತಿಯ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದರು.

    ಪೋಸ್ಟ್ ಮಾಡಿದ ಫೋಟೋದಲ್ಲಿ ರಾಹುಲ್, ಅಥಿಯಾರನ್ನು ನೋಡುತ್ತಿರುತ್ತಾರೆ. ಅಥಿಯಾ ನಾಚಿಕೊಂಡು ನಗುತ್ತಿರುತ್ತಾರೆ. ಹಲವು ದಿನಗಳಿಂದ ರಾಹುಲ್ ಹಾಗೂ ಅಥಿಯಾ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಫೋಟೋ ನೋಡಿದ ಮೇಲೆ ನೆಟ್ಟಿಗರ ಕುತೂಹಲ ಹೆಚ್ಚಾಗಿದೆ.

    ಇತ್ತೀಚೆಗೆ ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ರಾಹುಲ್ ಹಾಗೂ ಅಥಿಯಾ ತಮ್ಮ ಸ್ನೇಹಿತರ ಜೊತೆಗೆ ಡಿನ್ನರ್‌ಗೆ ಹೋಗಿದ್ದರು. ಈ ವೇಳೆ ಇಬ್ಬರು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಡಿನ್ನರ್ ಮುಗಿದ ನಂತರ ರಾಹುಲ್ ಹಾಗೂ ಅಥಿಯಾ ಒಂದೇ ಕಾರಿನಲ್ಲಿ ಹೊರಟು ಹೋದರು.

    ಅಥಿಯಾ ಶೆಟ್ಟಿ ‘ಹೀರೋ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ 2015ರಲ್ಲಿ ರಿಲೀಸ್ ಆಗಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ಮಿಸಿದ್ದರು. ಆದರೆ ಈ ಚಿತ್ರ ಅಷ್ಟಾಗಿ ಯಶಸ್ಸು ಕಂಡಿಲ್ಲ.

  • ‘ನೀನು ಒಬ್ಬಳೇ ಬಾ’ – ನಟನ ವಿರುದ್ಧ ಸೂರ್ಯವಂಶ ನಟಿಯಿಂದ ಮೀಟೂ ಬಾಂಬ್

    ‘ನೀನು ಒಬ್ಬಳೇ ಬಾ’ – ನಟನ ವಿರುದ್ಧ ಸೂರ್ಯವಂಶ ನಟಿಯಿಂದ ಮೀಟೂ ಬಾಂಬ್

    ಮುಂಬೈ: ಕನ್ನಡ ಕವಚ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿನಯಿಸಿರುವ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಅವರು ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.

    ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ನನಗೂ ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ನಾನು ಒಬ್ಬರು ನಿರ್ಮಾಪಕರು ಹೇಳಿದರು ಎಂದು ಒಬ್ಬ ನಟನನ್ನು ಭೇಟಿಯಾಗಲು ಹೋಗಿದ್ದೆ. ಅಲ್ಲಿ ಆತ ನೀನು ಒಬ್ಬಳೇ ಬಾ ಎಂದು ಕರೆದಿದ್ದರು ಎಂದು ಹೇಳಿದ್ದಾರೆ.

    ಈ ಹಿಂದೆ ನಿರ್ಮಾಪಕರೊಬ್ಬರು ನಿನಗೆ ಒಂದು ಚಿತ್ರದಲ್ಲೇ ಅವಕಾಶ ನೀಡುತ್ತೇನೆ ಎಂದು ಹೇಳಿದ್ದರು. ನಾನು ಒಪ್ಪಿದ್ದೆ ಅವರು ಹೇಳಿದಂತೆ ಒಬ್ಬ ನಟನನ್ನು ಭೇಟಿಯಾಗಲು ಹೋಗಿದ್ದೆ. ಆಗ ಆ ನಟ ನೀನು ಯಾರ ಜೊತೆ ಬಂದಿದ್ದೀಯಾ ಎಂದು ಕೇಳಿದರು. ನಾನು ನನ್ನ ಡ್ರೈವರ್ ಜೊತೆ ಬಂದಿದ್ದೇನೆ ಎಂದು ಹೇಳಿದೆ. ಅದಕ್ಕೆ ಆತ ನಾನು 15, 16 ವರ್ಷದವನಲ್ಲ. ನಾಳೆ ಬರುವಾಗ ಒಬ್ಬಳೇ ಬಾ ಎಂದು ಕರೆದಿದ್ದರು. ಆದರೆ ನಾನು ನಾಳೆ ಫ್ರೀ ಇಲ್ಲ ಎಂದು ಹೇಳಿ ಬಂದೆ ಎಂದು ಹೇಳಿದ್ದಾರೆ.

    ವಾಪಸ್ ಬಂದ ನಂತರ ನಾನು ನಿರ್ಮಾಪಕರಿಗೆ ಕರೆ ಮಾಡಿ ನೀವು ನನ್ನ ಪ್ರತಿಭೆ ನೋಡಿ ಸಿನಿಮಾದಲ್ಲಿ ಅವಕಾಶ ಕೊಡಿ. ಅದನ್ನು ಬಿಟ್ಟು ಬೇರೆ ರೀತಿಯಲ್ಲಿ ನನಗೆ ಅವಕಾಶ ನೀಡುವುದು ಬೇಡ ಎಂದು ಹೇಳಿದೆ. ಆ ನಂತರ ನಾನು ಅ ಚಿತ್ರದಲ್ಲಿ ಅಭಿನಯ ಮಾಡಲಿಲ್ಲ. ಆ ನಟನ ಜೊತೆಯೂ ಮುಂದೆ ಯಾವ ಚಿತ್ರದಲ್ಲೂ ನಟಿಸಲಿಲ್ಲ ಎಂದು ಹೇಳಿದ್ದಾರೆ.

    ಬಹುಭಾಷಾ ನಟಿಯಾಗಿರುವ ಇಶಾ ಕೊಪ್ಪಿಕರ್ ಕನ್ನಡದಲ್ಲೂ ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ಡಾ ವಿಷ್ಣುವರ್ದನ್ ಅಭಿನಯದ ಸೂಪರ್ ಹಿಟ್ ಚಿತ್ರ ಸೂರ್ಯವಂಶ, ಡಾ. ರವಿಚಂದ್ರನ್ ಅಭಿನಯದ ಬ್ಲಾಕ್ ಬಾಸ್ಟರ್ ಚಿತ್ರ ಒ ನನ್ನ ನಲ್ಲೇ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಇತ್ತೀಚಿಗೆ ಬಿಡುಗಡೆಯಾದ ಡಾ ಶಿವರಾಜ್ ಕುಮಾರ್ ಅಭಿನಯದ ಕವಚ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ.

    2000 ರ ಫಿಜಾ ಚಿತ್ರದೊಂದಿಗೆ ಬಾಲಿವುಡ್‌ನಲ್ಲಿ ಪಾದಾರ್ಪಣೆ ಮಾಡುವ ಮೊದಲು ಇಶಾ ಕೊಪ್ಪಿಕರ್ ಹಲವಾರು ಪ್ರಾದೇಶಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ದರ್ನಾ ಮನ ಹೈ, ಹಮ್ ತುಮ್ ಮತ್ತು 36 ಚೀನಾ ಟೌನ್ ನಂತಹ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದಾರೆ. ಏಕ್ ವಿವಾಹ್ ಐಸಾ ಭೀ, ಗರ್ಲ್ ಫ್ರೆಂಡ್ ಮತ್ತು ಕೃಷ್ಣ ಕಾಟೇಜ್ ಮುಂತಾದ ಚಿತ್ರಗಳಲ್ಲಿ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ.