Tag: actress

  • ಆನ್‍ಲೈನ್‍ಲ್ಲಿ ನಡತೆಯ ಬಗ್ಗೆ ಟೀಕೆ – 22ನೇ ವಯಸ್ಸಿಗೆ ಜಪಾನಿಸ್ ನಟಿ ಸಾವು

    ಆನ್‍ಲೈನ್‍ಲ್ಲಿ ನಡತೆಯ ಬಗ್ಗೆ ಟೀಕೆ – 22ನೇ ವಯಸ್ಸಿಗೆ ಜಪಾನಿಸ್ ನಟಿ ಸಾವು

    ಟೋಕಿಯೊ: ಸಾಮಾಜಿಕ ಜಾಲತಾಣದಲ್ಲಿ ತನ್ನ ನಡತೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಜಪಾನಿಸ್ ನಟಿ ಹಾಗೂ ವೃತ್ತಿಪರ ಕುಸ್ತಿಪಟು ಸಾವನ್ನಪ್ಪಿದ್ದಾರೆ.

    ಸಾವನ್ನಪ್ಪಿದ ನಟಿಯನ್ನು 22 ವರ್ಷದ ಹಾನಾ ಕಿಮುರಾ ಎಂದು ಗುರುತಿಸಲಾಗಿದೆ. ಈಕೆ ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಜಪಾನಿಸ್‍ನ ಜನಪ್ರಿಯ ವೆಬ್ ಸೀರೀಸ್ ‘ಟೆರೇಸ್ ಹೌಸ್’ ನಲ್ಲಿ ನಟಿಸುತ್ತಿದ್ದರು. ಜೊತೆಗೆ ಈಕೆ ವೃತ್ತಿಪರ ಕುಸ್ತಿಪಟು ಆಗಿದ್ದರು. ಆದರೆ ಆನ್‍ಲೈನ್ ಅಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಹಾನಾ ಕಿಮುರಾಳ ಕುಸ್ತಿ ಸಂಸ್ಥೆ, ಆಕೆಯ ಸಾವಿಗೆ ನಿಖರವಾದ ಕಾರಣ ನಮಗೂ ಗೊತ್ತಿಲ್ಲ. ಆಕೆ ತುಂಬ ಪ್ರತಿಭಾನ್ವಿತ ನಟಿ ಮತ್ತು ಕುಸ್ತಿಪಟು. ಬಹಳ ಗಟ್ಟಿ ಮನಸ್ಸು ಇದ್ದ ಹುಡುಗಿ ಎಂದು ಹೇಳಿದ್ದಾರೆ. ಜೊತೆಗೆ ಅವಳು ಸಾಯುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳಿಗೆ ಗುಡ್‍ಬಾಯ್ ಎಂಬ ಪೋಸ್ಟ್ ಅನ್ನು ಹಾಕಿಕೊಂಡಿದ್ದಾಳೆ ಎಂದು ಕುಸ್ತಿ ಸಂಸ್ಥೆ ತಳಿಸಿದೆ.

    ಈ ಬಗ್ಗೆ ಜಪಾನಿನ ಲೋಕಲ್ ಸುದ್ದಿ ವಾಹಿನಿಯೊಂದು ವರದಿ ಮಾಡಿದ್ದು, ಹಾನಾ ಕಿಮುರಾ ಟೆರೇಸ್ ಹೌಸ್‍ ನಲ್ಲಿ ಮಾಡಿದ ಪಾತ್ರವನ್ನು ಗುರಿಯಾಗಿ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಕೆಯ ನಡತೆಯ ಬಗ್ಗೆ ಕೆಟ್ಟದಾಗ ಟ್ರೋಲ್ ಮಾಡಲಾಗಿತ್ತು. ಈ ಕಾರಣದಿಂದ ಆಕೆ ಮನನೊಂದು ಸಾವನ್ನಪ್ಪಿರಬಹುದು ಎಂದು ಹೇಳಿದೆ. ಆದರೆ ಆಕೆ ಶನಿವಾರ ಸಾವನ್ನಪ್ಪಿದ್ದು, ಹಾನಾ ಯಾಕೆ ಸಾವನ್ನಪ್ಪಿದಳು ಎಂದು ನಿಖರ ಕಾರಣ ತಿಳಿದು ಬಂದಿಲ್ಲ.

    ಈ ಬಗ್ಗೆ ನೆಟ್‍ಫ್ಲಿಕ್ಸ್ ಮತ್ತು ಜಪಾನ್‍ನ ಫ್ಯೂಜಿ ಟೆಲಿವಿಷನ್ ಕೂಡ ಸುದ್ದಿ ಪ್ರಸಾರ ಮಾಡಿದ್ದು, ನಟಿ ಹಾನಾ ಕಿಮುರಾ ಸಾವನ್ನಪ್ಪಿದರು ಎಂದು ಹೇಳಲು ದುಖಃವಾಗುತ್ತಿದೆ. ಜಪಾನಿನ ಮಹಿಳಾ ಕುಸ್ತಿಪಟು ಆಗಿದ್ದ ಹಾನಾ ಸಾವಿಗೆ ಗೌರವ ಸಿಗಲಿ. ಅವಳ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಆಕೆಯ ಸಾವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಎರಡು ಮಾಧ್ಯಮಗಳು ಹೇಳಿವೆ.

    https://www.instagram.com/p/CAf_XFcJ8jQ/

    ಹಾನಾ ತಾನು ಸಾಯುವುದಕ್ಕೂ ಮುನ್ನಾ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದು, ಇದರಲ್ಲಿ ಒಂದು ಬೆಕ್ಕಿನ ಜೊತೆ ಫೋಟೋ ಹಾಕಿ ‘ಐ ಲವ್ ಯು, ಖುಷಿಯಾದ ಜೀವನ, ನನ್ನನ್ನು ಕ್ಷಮಿಸು’ ಎಂದು ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಆಕೆ ಸಾವು ದೃಢಪಟ್ಟ ಕೂಡಲೇ ಮಾಧ್ಯಮವೊಂದು ಆಕೆಯ ಶವದ ಫೋಟೋವನ್ನು ಪ್ರಸಾರ ಮಾಡಿದೆ. ಆದರ ಜೊತೆಗೆ ಆಕೆ ಕೊನೆಯದಾಗಿ ಗುಡ್‍ಬಾಯ್ ಎಂದು ಪೋಸ್ಟ್ ಮಾಡಿದ್ದಾಳೆ ಎಂದು ಹೇಳಿದೆ.

    https://www.instagram.com/p/BwHSq4HnBDF/

    ಜಪಾನ್‍ನಲ್ಲಿ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿ ಇಬ್ಬರು ಕೆ-ಪಾಪ್ ಸಿಂಗರ್‍ಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾಲಿಗೆ ಹಾನಾ ಕಿಮೂರಾ ಅವರು ಸೇರಿದ್ದಾರೆ. ಆದರೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಪಾನಿನ ಸೈಬರ್ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಲಾಕ್‍ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ

    ಲಾಕ್‍ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಅನೇಕ ಮದುವೆ, ಸಭೆ, ಸಮಾರಂಭಗಳು ಮುಂದೂಡಿಕೆಯಾಗಿವೆ. ಆದರೂ ಅನೇಕ ನಟ-ನಟಿಯರು ಸರಳವಾಗಿ ಮದುವೆಯಾಗಿದ್ದಾರೆ. ಇದೀಗ ಕಿರುತೆರೆ ನಟಿಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ನಟಿ ಸುಪ್ರಿಯಾ ರಾವ್ ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಪ್ರಿಯಾ ಎನ್ನುವುದಕ್ಕಿಂತ ‘ಮಗಳು ಜಾನಕಿ’ ಧಾರಾವಾಹಿಯ ನಟಿ ಸಂಜನಾ ಎಂದರೆ ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಸುಪ್ರಿಯಾ ರಾವ್ ಮಗಳು ಜಾನಕಿ ಧಾರಾವಾಹಿಯಲ್ಲಿ ಸಂಜನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸದ್ಯಕ್ಕೆ ಲಾಕ್‍ಡೌನ್‍ನಿಂದ ಯಾವುದೇ ಸೀರಿಯಲ್ ಪ್ರಸಾರವಾಗುತ್ತಿಲ್ಲ.

    ಸುಪ್ರಿಯಾ ಅವರು ಮೂಲತಃ ಶಿವಮೊಗ್ಗದವರು. ಇವರು ತಮ್ಮ ಬಹುಕಾಲ ಗೆಳೆಯ ವಿಜಯ್ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರು ಪ್ರೀತಿಯ ವಿಚಾರವನ್ನು ಎರಡು ಕುಟುಂಬದಲ್ಲಿ ಹೇಳಿದ್ದಾರೆ. ನಂತರ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಅದರಂತೆಯೇ ಲಾಕ್‍ಡೌನ್‍ನಿಂದ ಸರಳವಾಗಿ ವಿವಾಹವಾಗಿದ್ದಾರೆ .

    ಪತಿ ವಿಜಯ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆ ಚಿತ್ರದುರ್ಗದಲ್ಲಿ ಗುರು-ಹಿರಿಯ ಸಮ್ಮುಖದಲ್ಲಿ ಸರಳವಾಗಿ ನಡೆದಿದೆ. ಲಾಕ್‍ಡೌನ್‍ನಿಂದಾಗಿ ಕೇವಲ ಆಪ್ತರು ಮತ್ತು ಸಂಬಂಧಿಕರು ಇವರ ಮದುವೆಯಲ್ಲಿ ಭಾಗಿಯಾಗಿದ್ದು,  ನವ ಜೋಡಿಗೆ ಶುಭಾ ಹಾರೈಸಿದ್ದಾರೆ.

  • ಕನ್ನಡದ ನಟರೊಬ್ಬರು ಮಹಿಳೆಯನ್ನು ನಾಯಿ, ನರಿ, ಕ್ರಿಮಿ ಕೀಟ ಎನ್ನುತ್ತಾರೆ: ಚೇತನ್

    ಕನ್ನಡದ ನಟರೊಬ್ಬರು ಮಹಿಳೆಯನ್ನು ನಾಯಿ, ನರಿ, ಕ್ರಿಮಿ ಕೀಟ ಎನ್ನುತ್ತಾರೆ: ಚೇತನ್

    ಬೆಂಗಳೂರು: ಕನ್ನಡ ಚಲನಚಿತ್ರದ ನಟರೊಬ್ಬರು ಮಹಿಳೆಯನ್ನು ನಾಯಿ, ನರಿ, ಕ್ರಿಮಿ, ಕೀಟ ಎನ್ನುತ್ತಾರೆ ಎಂದು ಆ ದಿನಗಳು ಖ್ಯಾತಿಯ ನಟ ಚೇತನ್ ಅವರು ಟ್ವೀಟ್ ಮಾಡಿದ್ದಾರೆ.

    ಚೇತನ್ ಅವರು ಮಾಡಿರುವ ಟ್ವೀಟ್ ಬಹಳ ವೈರಲ್ ಆಗುತ್ತಿದ್ದು, ಚೇತನ್ ಅವರು ಯಾರಿಗೇ ಈ ಮಾತನ್ನು ಹೇಳಿದ್ದಾರೆ ಎಂದು ಸಖತ್ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುವ ನಟ ಚೇತನ್ ಇತ್ತೀಚೆಗಷ್ಟೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಸುದೀಪ್ ಎಂದು ಕಿಚ್ಚ ಸುದೀಪ್ ಅವರ ಕುರಿತು ಟ್ವೀಟ್ ಮಾಡಿದ್ದರು.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಚೇತನ್, ಕನ್ನಡ ಚಲನಚಿತ್ರ ನಟರೊಬ್ಬರು ಮಹಿಳೆಯನ್ನು ಪದೇ ಪದೇ ನಾಯಿ, ನರಿ, ಕ್ರಿಮಿ ಕೀಟ ಎಂದು ಅನುಮೋದಿಸುತ್ತಾರೆ. ನಂತರ ಅವರು ಹಾಡೊಂದರಲ್ಲಿ ನಟಿಸುವಾಗ ಅಲ್ಲಿ ಪ್ರಣಯದ ಹೆಸರಿನಲ್ಲಿ ನಾಯಕಿಯ ಕೂದಲನ್ನು ಎಳೆಯುತ್ತಾರೆ. ನಾಯಕಿಯನ್ನು ಕರೆಂಟ್ ಶಾಕ್ ಮತ್ತು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕುತ್ತಾರೆ. ಅಲ್ಲದೆ ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಿಸುವುದು ಕಿರುಕುಳ ಎಂದು ಬರೆದುಕೊಂಡಿದ್ದಾರೆ.

    ನಿನ್ನೆ ಅವರು ಧಾರ್ಮಿಕತೆಯನ್ನು ವೈಭವೀಕರಿಸುವ ಮುಖೇನ ಅಂಬೇಡ್ಕರ್ ಜಯಂತಿ ಶುಭಾಶಯಗಳನ್ನು ಬರೆಯುತ್ತಾರೆ. ಕಾಯಿಲೆ, ಅಜ್ಞಾನ ಮತ್ತು ವಿಪರ್ಯಾಸ ಎಂದು ಚೇತನ್ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ. ಇಗ ಚೇತನ್ ಅವರ ಟ್ವೀಟ್ ಭಾರೀ ಚರ್ಚೆಯಾಗುತ್ತಿದ್ದು, ಈ ಟ್ವೀಟ್‍ಗಳನ್ನು ಚೇತನ್ ನಟ ಧ್ರುವ ಸರ್ಜಾ ವಿರುದ್ಧವೇ ಮಾಡಿರಬಹುದಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

    ಈ ಅನುಮಾನ ಮೂಡಲು ಕಾರಣ, 2018ರಲ್ಲಿ ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿದ್ದರು. ಈ ಸಮಯದಲ್ಲಿ ಮಾವನ ಬೆನ್ನಿಗೆ ನಿಂತಿದ್ದ ಧ್ರುವ ಮಾಧ್ಯಮಗಳ ಮುಂದೇ ನಾಯಿ, ನರಿ, ಕ್ರಿಮಿ ಕೀಟಗಳು ಹೇಳಿದ್ದನ್ನೆಲ್ಲ ನಾನು ಕೇಳುವುದಿಲ್ಲ ಎಂದು ಶ್ರುತಿ ವಿರುದ್ಧ ಮತ್ತು ಆಕೆಯ ಬೆಂಬಲಕ್ಕೆ ನಿಂತಿದ್ದ ಚೇತನ್ ವಿರುದ್ಧ ಕಿಡಿಕಾರಿದ್ದರು.

    ಜೊತೆಗೆ ಇತ್ತೀಚೆಗೆ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಧ್ರುವ ನಟಿಯಗೆ ಬೆದರಿಕೆ ಹಾಕುವುದು ಮತ್ತು ಎಳೆದಾಡುವ ದೃಶ್ಯಗಳು ಇವೆ ಹಾಗೂ ನಿನ್ನೆ ನಡೆದ ಅಂಬೇಡ್ಕರ್ ಜಯಂತಿಗೆ ನಟ ಧ್ರುವ ಕೂಡ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಈ ಮೂರು ವಿಷಯಗಳನ್ನು ಆಧಾರವಾಗಿ ಇಟ್ಟುಕೊಂಡು ಚೇತನ್ ಈ ರೀತಿ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    https://twitter.com/chetan_club/status/1250271598373769218

    ಈಗ ಚೇತನ್ ಅವರ ಟ್ವೀಟ್‍ಗೆ ಪರ ಮತ್ತು ವಿರೋಧವಾಗಿ ಚರ್ಚೆ ನಡೆಯುತ್ತಿದ್ದು, ಕೆಲವರು ಈ ಮಾತನನ್ನು ಇವರು ಡಾಲಿ ಧನಂಜಯ್ ಅವರಿಗೆ ಹೇಳಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಧ್ರುವಗೆ ಹೇಳಿದ್ದಾರೆ ಎಂದು ಹೇಳಿದ್ದಾರೆ. ಈ ರೀತಿ ಟ್ವೀಟ್ ಮಾಡುವುದು ಸರಿಯಲ್ಲ ಸಿನಿಮಾದ ಪಾತ್ರವೇ ಬೇರೆ ಹಾಗೇ ನಿಜ ಜೀವನವೇ ಬೇರೆ ಎಂದು ಕೆಲವರು ಕಮೆಂಟ್ ಮಾಡಿ ಚೇತನ್ ವಿರುದ್ಧ ಕಿಡಿಕಾರಿದ್ದಾರೆ.

  • ಹಾರರ್ ಮೂವಿ ಖ್ಯಾತಿಯ ನಟಿ ಕೊರೊನಾಗೆ ಬಲಿ

    ಹಾರರ್ ಮೂವಿ ಖ್ಯಾತಿಯ ನಟಿ ಕೊರೊನಾಗೆ ಬಲಿ

    ಲಂಡನ್: ಕೊರೊನಾ ವೈರಸ್‍ಗೆ ಈಗಾಗಲೇ ಭಾರತದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಇದೀಗ ಬ್ರಿಟನ್‍ನ ಹಾರರ್ ಸಿನಿಮಾ ಖ್ಯಾತಿಯ ನಟಿಯೊಬ್ಬರು ಕೊರೊನಾ ವೈರಸ್‍ನಿಂದಾಗಿ ಮೃತಪಟ್ಟಿದ್ದಾರೆ.

    ಹಿಲರಿ ಹೀತ್ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ. ಇವರಿಗೆ 74 ವರ್ಷ ವಯಸ್ಸಾಗಿತ್ತು. ಹಿಲರಿ ಹೀತ್ ಕೊರೊನಾ ವೈರಸ್‍ನಿಂದ ಮೃತಪಟ್ಟಿರುವ ಬಗ್ಗೆ ಅವರ ದತ್ತು ಮಗ ಅಲೆಕ್ಸ್ ವಿಲಿಯಮ್ಸ್ ಸ್ಪಷ್ಟಪಡಿಸಿದ್ದಾರೆ.

    ತಾಯಿ ಹಿಲರಿ ಹೀತ್ ಕೊರೊನಾ ವೈರಸ್‍ನಿಂದಲೇ ಸಾವನ್ನಪ್ಪಿದ್ದಾರೆ ಎಂದು ಅಲೆಕ್ಸ್ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ನಟಿ ಹಿಲರಿ ಹೀತ್ ಅವರು ಹಾರರ್ ಸಿನಿಮಾ ‘ವಿಚ್‍ಫೈಂಡರ್ ಜನರಲ್’ ಮೂಲಕ ತುಂಬಾ ಖ್ಯಾತಿ ಪಡೆದಿದ್ದರು. ಹಿಲರಿ ಹೀತ್ ಅವರು ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ‘ಆನ್ ಆವ್‍ಫುಲ್ ಬಿಗ್ ಅಡ್ವೇಂಚರ್’, ‘ನಿಲ್ ಬೈ ಮೌತ್’ ಸೇರಿ ಇನ್ನೂ ಕೆಲವು ಸಿನಿಮಾಗಳಿಗೆ ಅವರು ಸಹ ನಿರ್ಮಾಪಕರಾಗಿದ್ದರು.

  • ಲಾಕ್‍ಡೌನ್ ಅವಧಿಯಲ್ಲಿ 5 ಕೆಜಿ ತೂಕ ಇಳಿಸಿದ ಕಂಗನಾ

    ಲಾಕ್‍ಡೌನ್ ಅವಧಿಯಲ್ಲಿ 5 ಕೆಜಿ ತೂಕ ಇಳಿಸಿದ ಕಂಗನಾ

    ಶಿಮ್ಲಾ: ಕೊರೊನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಸಿನಿಮಾ, ಕಿರುತೆರೆ ನಟ, ನಟಿಯರು ಸೇರಿಂದರೆ ಕ್ರೀಡಾಪಟುಗಳು ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಹಾರ್ಡ್ ವರ್ಕೌಟ್ ಮೂಲಕ 5 ಕೆಜಿ ತೂಕ ಇಳಿಸಿದ್ದಾರೆ.

    33 ವರ್ಷದ ಕಂಗನಾ ರಣಾವತ್ ಸದ್ಯ ಕುಟುಂಬದೊಂದಿಗೆ ಮನಾಲಿಯಲ್ಲಿದ್ದಾರೆ. ಲಾಕ್‍ಡೌನ್‍ನಲ್ಲಿ ತಮ್ಮ ಕುಟುಂಬಕ್ಕೆ ಸಮಯವನ್ನು ನೀಡುವುದರ ಜೊತೆಗೆ, ಫಿಟ್‍ನೆಸ್‍ನ ಬಗ್ಗೆಯೂ ಅವರು ವಿಶೇಷ ಗಮನ ಹರಿಸುತ್ತಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ಕಂಗನಾ ಅವರು 5 ಕೆಜಿ ತೂಕವನ್ನು ಇಳಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಕಂಗನಾ ತಮ್ಮ ಟ್ರೇನರ್ ಸಹಾಯದಿಂದ ಮನೆಯಲ್ಲಿ ಹಾರ್ಡ್ ವರ್ಕೌಟ್ ಮಾಡುತ್ತಿದ್ದಾರೆ.

    https://www.instagram.com/p/B-wvGjClR9v/

    ಟೀಂ ಕಂಗನಾ ರಣಾವತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕಂಗನಾ ಅವರ ಫಿಟ್ನೆಸ್ ತರಬೇತಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ ‘ಕಂಗನಾ ಅವರಿಂದ ಸ್ಫೂರ್ತಿ ಪಡೆಯಿರಿ, ಪ್ರೇರೇಪಿತವಾಗಿರಿ. ಸೋಮಾರಿತನವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ’ ಎಂದು ಬರೆಯಲಾಗಿದೆ.

    ಕಂಗನಾ ರಣಾವತ್ ಅವರು ‘ಧಾಕಡ್’ ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ಧಾಕಡ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿರುವ ಕಂಗನಾ 20 ಕೆಜಿ ತೂ ಇಳಿಸಬೇಕಾಗಿದೆ. ಕಂಗನಾ ಅವರು ಹಿಂದಿನ ವಿಡಿಯೋದಲ್ಲಿ ತಾನು 52 ಕೆಜಿ ತೂಕ ಇರುವುದಾಗಿ ಹೇಳಿದ್ದರು. ಆದರೆ ಈಗ ಅವರ ತೂಕ 70 ಕೆಜಿ ತಲುಪಿದ್ದು, ಅದನ್ನು ಕಡಿಮೆ ಮಾಡಿಕೊಳ್ಳಲು ಹಾರ್ಡ್ ವರ್ಕೌಟ್ ನಡೆಸಿದ್ದಾರೆ.

    https://www.instagram.com/p/B9UJvsLB3lZ/

    ಕಂಗನಾ ಅವರು ‘ತಲೈವಿ’ ಚಿತ್ರದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಪಾತ್ರ ನಿರ್ವವಹಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಕಂಗನಾ ತಮ್ಮ ಮುಂದಿನ ಚಿತ್ರ ‘ಧಾಕಡ್’ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.

    ‘ಧಾಕಡ್’ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ಎಡ್ ಮೇಕರ್ ರಜನೀಶ್ ಘಾಯ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಇದೇ ವರ್ಷ ದೀಪಾವಳಿಯಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು.

  • ಲಾಕ್‍ಡೌನ್ ನಡುವೆಯೂ ಸಪ್ತಪದಿ ತುಳಿದ ನಟ, ನಟಿ

    ಲಾಕ್‍ಡೌನ್ ನಡುವೆಯೂ ಸಪ್ತಪದಿ ತುಳಿದ ನಟ, ನಟಿ

    – ಮಾಸ್ಕ್ ಧರಿಸಿ ಮದುವೆಯಾದ ಜೋಡಿ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಭೀತಿಯ ನಡುವೆಯೇ ಶಿವಮೊಗ್ಗದಲ್ಲಿ ಸಿನಿಮಾ ಜೋಡಿಯೊಂದು ಸಪ್ತಪದಿ ತುಳಿದಿದೆ.

    ಚಲನಚಿತ್ರ ನಟ ನಟಿಯರಾಗಿರುವ ಅರ್ನವ್ ವಿನ್ಯಾಸ್ ಮತ್ತು ವಿಹಾನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಲೆನಾಡಿನ ತವರೂರು ಎಂದೇ ಕರೆಸಿಕೊಳ್ಳುವ ಶಿವಮೊಗ್ಗದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾರೆ. ಅಂದಹಾಗೆ ಅರ್ನವ್ ವಿನ್ಯಾಸ್ ಹೊಂಬಣ್ಣ ಎಂಬ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ಮಿಂಚಿದ್ದು, ಅದೇ ರೀತಿ ಹೀರೋಯಿನ್ ವಿಹಾನಾ ನೆನಪುಗಳು ಎಂಬ ಚಲನಚಿತ್ರದಲ್ಲಿ ನಟಿಸಿ, ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

    ಮಂಡ್ಯ ಮೂಲದ ನಟ ಅರ್ನವ್ ವಿನ್ಯಾಸ್, ಶಿವಮೊಗ್ಗದ ವಿಹಾನಾ ಅವರನ್ನು ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಇಂದು ಕೇವಲ ಈ ಇಬ್ಬರ ಕುಟುಂಬಸ್ಥರ ಬೆರಳೆಣಿಕೆಯಷ್ಟು ಜನರ ನಡುವೆಯೇ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

    ಶಿವಮೊಗ್ಗದ ಹೊರವಲಯದಲ್ಲಿರುವ ಸೋಶಿಯಲ್ ಹಾರ್ಬರ್ ಎಂಬ ಸುಂದರ ಪ್ರಕೃತಿಯ ಮಧ್ಯೆ ಈ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಾಸ್ಕ್ ಧರಿಸಿಯೇ ವಿವಾಹವಾಗಿದ್ದಾರೆ. ಅಲ್ಲದೆ ಕೇವಲ ಮನೆ ಸದಸ್ಯರ ಹಾಜರಿ ನಡುವೆ ಮದುವೆ ಶಾಸ್ತ್ರ ನೆರವೇರಿಸಲಾಗಿದ್ದು, ವಾಲಗ ಮತ್ತು ವಿಡಿಯೋದವರು ಕೂಡ ಮಾಸ್ಕ್ ಧರಿಸಿಯೇ ಹಾಜರಗಿದ್ದರು. ಬೆರಳೆಣಿಕೆಯಷ್ಟು ತಮ್ಮ ಕುಟುಂಬದವರ ಜೊತೆ ಈ ಸ್ಯಾಂಡಲ್‍ವುಡ್ ತಾರೆಯರು ಹೊಸ ಜೀವನವನ್ನು ಆರಂಭಿಸಿದ್ದಾರೆ.

  • ಅನುಮಾನಾಸ್ಪದವಾಗಿ ಬೆಡ್ ಮೇಲೆ ನಟಿಯ ಮೃತದೇಹ ಪತ್ತೆ

    ಅನುಮಾನಾಸ್ಪದವಾಗಿ ಬೆಡ್ ಮೇಲೆ ನಟಿಯ ಮೃತದೇಹ ಪತ್ತೆ

    – ಮನೆಯಿಂದ ಹೊರ ಬರದಿದ್ದಾಗ ನೆರೆಹೊರೆಯವರಿಂದ ಮಾಹಿತಿ

    ಹೈದರಾಬಾದ್: ಅನುಮಾನಸ್ಪದ ರೀತಿಯಲ್ಲಿ ತೆಲುಗಿನ ಕಿರುತೆರೆ ನಟಿಯೊಬ್ಬರ ಮೃತದೇಹ ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿರುವ ಘಟನೆ ಹೈದರಾಬಾದ್‍ನ ಯೆಲ್ಲರೆಡ್ಡಿಗುಡ ಪ್ರದೇಶದಲ್ಲಿ ಕಂಡು ಬಂದಿದೆ.

    ವಿ.ಶಾಂತಿ (32) ಮೃತ ನಟಿ. ಗುರುವಾರ ಬೆಳಗ್ಗೆ ಯೆಲ್ಲರೆಡ್ಡಿಗುಡದ ಎಂಜಿನಿಯರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಟಿ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿರುವ ತನ್ನ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ವಿ.ಶಾಂತಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬಂದಿಲ್ಲ. ಇದರಿಂದ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಎಸ್‍.ಆರ್.ನಗರ ಪೊಲೀಸರು ಸ್ಥಳಕ್ಕೆ ಬಂದು ಅಪಾರ್ಟ್‌ಮೆಂಟ್ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಬೆಡ್ ಮೇಲೆ ಶಾಂತಿಯ ಮೃತದೇಹ ಪತ್ತೆಯಾಗಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮೃತ ಶಾಂತಿ ವಿಶಾಖಪಟ್ಟಣಂ ಮೂಲದವರಾಗಿದ್ದು, ತೆಲುಗಿನ ಅನೇಕ ಸೀರಿಯಲ್‍ಗಳಲ್ಲಿ ಕೆಲವು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ ನಟಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಕುಡಿದ ಮತ್ತಿನಲ್ಲಿ ಮೃತಪಟ್ಟಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಆದರೆ ನಟಿಯ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ನಟಿಯ ಮರಣೋತ್ತರ ಪರೀಕ್ಷೆಯ ವರದಿಯಿಂದ ಮಾತ್ರ ತಿಳಿಯಬೇಕಿದೆ.

  • ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಬೆಂಗಳೂರು: ಕೊರೊನಾ ವೈರಸ್ ಯಾವ ರೀತಿಯ ಅವಂತಾರ ಸೃಷ್ಟಿಸಿದೆ ಎಂಬುದು ತಿಳಿದೇ ಇದೆ. ಬಡವರು ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಸುಳಿಗೆ ಸಿಕ್ಕಿ ನಲುಗಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ನಟ, ನಟಿಯರು ಹಾಗೂ ಧನಿಕರು ಸಹಾಯಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ನೆರವಾಗುತ್ತಿದ್ದಾರೆ.

    ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿದುತ್ತಿದ್ದ ಮಂಗಳಮುಖಿಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಲ್ಲದೆ ಲಾಕ್‍ಡೌನ್ ಸುಳಿಗೆ ಹಲವು ದಿನಗೂಲಿ ಕಾರ್ಮಿಕರು ಸಹ ಸಿಲುಕಿಕೊಂಡಿದ್ದಾರೆ. ಅಂತಹವರಿಗೆ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

    ಮಂಗಳಮುಖಿಯರು ಹಾಗೂ ಬಡವರನ್ನು ಹುಡುಕಿಕೊಂಡು ಹೋಗಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದಾರೆ. ಈ ಮೂಲಕ ಅವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಸಹಾಯ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಸ್ವತಃ ಅವರೇ ಕೈಯಾರೇ ಹಂಚಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಮಾನವರು, ಇಂತಹ ಸಮಯದಲ್ಲಿ ದುರ್ಬಲರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಸ್ವಯಂ ಪ್ರೇರಣೆಯಿಂದ ಆಹಾರ ಪದಾರ್ಥ ವಿತರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ನಟಿ ರಾಧಿಕಾ ಕುಮಾರಸ್ವಾಮಿಯವರು ಮಾಗಡಿ ರೋಡ್, ಕೆಂಗೇರಿ, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ವಿತರಿಸಿದ್ದು, 1200ಕ್ಕೂ ಹೆಚ್ಚು ಮನೆಗಳಿಗೆ ಹಂಚಿಕೆ ಮಾಡಿದ್ದಾರೆ. ವಿಶೇಷವಾಗಿ ಮಂಗಳ ಮುಖಿಯರಿಗೆ ರಾಧಿಕಾ, ದಿನಸಿ ಹಂಚಿದ್ದಾರೆ.

    ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದು, ಪಿಎಂ ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂದಾಯ ಮಾಡಿದ್ದಾರೆ. ಇನ್ನೂ ಕೆಲವರು ನೇರವಾಗಿ ಸಿನಿಮಾ ದಿನಗೂಲಿ ಕಾರ್ಮಿಕರು ಹಾಗೂ ಬಡವರ ಖಾತೆಗೆ ನೇರವಾಗಿ ಹಣ ಹಾಕಿದ್ದಾರೆ. ಇನ್ನೂ ಹಲವರು ಅಗತ್ಯ ಇರುವವರ ಮನೆಗಳಿಗೆ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

  • ಲಾಕ್‍ಡೌನ್ ಇದ್ರೂ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ – ಪಿಲ್ಲರ್‌ಗೆ ಜಾಗ್ವಾರ್ ಕಾರು ಡಿಕ್ಕಿ

    ಲಾಕ್‍ಡೌನ್ ಇದ್ರೂ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ – ಪಿಲ್ಲರ್‌ಗೆ ಜಾಗ್ವಾರ್ ಕಾರು ಡಿಕ್ಕಿ

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಕೆಲ ನಟ-ನಟಿಯರು ಮನೆಯಲ್ಲಿ ಇರಿ, ಯಾರೂ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಮಧ್ಯೆ ಸ್ಯಾಂಡಲ್‍ವುಡ್ ನಟಿಯೊಬ್ಬರು ಲಾಕ್‍ಡೌನ್ ಇದ್ದರೂ ಜಾಲಿ ರೈಡ್ ಮಾಡಿ ಅಪಘಾತ ಮಾಡಿದ್ದಾರೆ.

    ನಟಿ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ ಮಾಡಲು ಹೋಗಿ ಅಪಘಾತ ಮಾಡಿದ್ದಾರೆ. ಇಂದು ನಸುಕಿನ ಜಾವ 3 ಗಂಟೆಗೆ ಈ ಘಟನೆ ನಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ಎಂದು ತಿಳಿದು ಬಂದಿದೆ.

    ಶರ್ಮಿಳಾ ಮಾಂಡ್ರೆ ಜಾಗ್ವರ್ ಕಾರಿನಲ್ಲಿ ತನ್ನ ಸ್ನೇಹಿತರ ಜೊತೆ ರಾತ್ರಿ ಹೊತ್ತಲ್ಲಿ ಜಾಲಿ ರೈಡ್ ಹೋಗಿದ್ದರು. ಆದರೆ ವಸಂತನಗರ ಅಂಡರ್ ಪಾಸ್ ಪಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಗಾಯವಾಗಿದೆ. ಇನ್ನೂ ಕಾರಿನಲ್ಲಿ ಒಬ್ಬ ಸ್ನೇಹಿತನಿಗೆ ಕೈ ಫ್ರಾಕ್ಚರ್ ಆಗಿದ್ದು, ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಷ್ಟೇ ಅಲ್ಲದೇ ಅಪಘಾತ ಮಾಡಿದ ಮೇಲೆ ನಟಿ ಶರ್ಮಿಳಾ ಮಾಂಡ್ರೆ ಸೀನ್ ಕ್ರಿಯೇಟ್ ಮಾಡಿದ್ದು, ಅಪಘಾತ ಆಗಿದ್ದು ಜಯನಗರ, ಜೆಪಿನಗರ ಎಂದು ಹೇಳಿದ್ದಾರೆ. ಆದರೆ ಜಾಗ್ವರ್ ಕಾರನ್ನು ಯಾರು ಡ್ರೈವ್ ಮಾಡುತ್ತಿದ್ದರು ಎಂಬುದು ತಿಳಿದುಬಂದಿಲ್ಲ.

    ಈ ಕುರಿತು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂಡರ್ ಪಾಸ್ ಪಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

  • ಕೊರೊನಾ ಎಫೆಕ್ಟ್‌ನಿಂದ ಸೆಲೆಬ್ರಿಟಿಗಳ ಸ್ಥಿತಿ ಹಿಂಗಾಗಿದೆ ನೋಡಿ

    ಕೊರೊನಾ ಎಫೆಕ್ಟ್‌ನಿಂದ ಸೆಲೆಬ್ರಿಟಿಗಳ ಸ್ಥಿತಿ ಹಿಂಗಾಗಿದೆ ನೋಡಿ

    ಮುಂಬೈ: ಕೊರೊನಾ ವೈರಸ್‍ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಜನರು ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಇತ್ತ ಸಿನಿಮಾ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳ ಶೂಟಿಂಗ್ ರದ್ದುಗೊಂಡಿವೆ. ಇದರಿಂದಾಗಿ ಸೆಲೆಬ್ರಿಟಿಗಳು ಸಹ ಮನೆಯಲ್ಲಿಯೇ ಇದ್ದು ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ.

    ಅನೇಕ ಸೆಲೆಬ್ರಿಟಿಗಳು ಕುಟುಂಬದ ದೈನಂದಿನ ಕೆಲಸದಲ್ಲಿ ತಮ್ಮನ್ನ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವರು ಅಡುಗೆಯಲ್ಲಿ ತಾಯಿಗೆ ಸಹಾಯ ಮಾಡುತ್ತಿದ್ದರೆ, ಕೆಲವರು ಸ್ವಚ್ಛತೆ ಹಾಗೂ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

    https://www.instagram.com/tv/B-AGMHJpQHM/?utm_source=ig_embed

    ಬಾಲಿವುಡ್ ನಟಿ ಹೀನಾ ಖಾನ್ ಅವರು ತಾವು ಮನೆಯ ಕೆಲಸ ಮಾಡಿದ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹೀನಾ ಖಾನ್ ನೆಲವನ್ನು ಸ್ವಚ್ಛಗೊಳಿಸಿದರೆ, ಸಹೋದರ ಪಾತ್ರೆ ತೊಳೆಯುತ್ತಾರೆ. ಅಷ್ಟೇ ಅಲ್ಲದೆ ಹೀನಾ ಅವರ ತಂದೆ ಬಾತ್‍ರೂಮ್‍ಅನ್ನು ಸ್ವಚ್ಛಗೊಳಿಸುತ್ತಾರೆ.

    ತಾಯಿ ಮನೆಯಲ್ಲಿ ಎಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎನ್ನುವುದನ್ನು ಈ ವಿಡಿಯೋ ತಿಳಿಸುತ್ತದೆ. ಮನೆಯಲ್ಲಿದ್ದು ವಿಶ್ರಾಂತಿ ಪಡೆಯುತ್ತಾರೆ ಎಂದು ಹೇಳುವುದು ಸುಲಭವಲ್ಲ ಎಂದು ಹೇಳುವ ಮೂಲಕ ತಾಯಿಯ ಸೇವೆಯನ್ನು ನೆನೆದಿದ್ದಾರೆ.

    https://www.instagram.com/p/B-ET0FsAFUa/?utm_source=ig_embed

    ಕಿರುತೆರೆ ನಟ ಕರಣ್ವೀರ್ ಬೊಹ್ರಾ ಅವರು ಪೊರಕೆ ಹಿಡಿದು ನಿಂತ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ಮನೆಯನ್ನು ಸ್ವಚ್ಛಗೊಳಿಸುತ್ತಾರೆ, ಮಕ್ಕಳಿಗೆ ಊಟ ಮಾಡಿಸುತ್ತಾರೆ. ಪತ್ನಿ ಎಷ್ಟೆಲ್ಲಾ ಕೆಲಸ ಮಾಡುತ್ತಾರೆ ಅಲ್ವಾ? ಇಂದು ನಾನು ಪತ್ನಿಯ ಕೆಲಸವನ್ನು ಹಂಚಿಕೊಂಡು ಆಕೆಗೆ ಸಹಾಯ ಮಾಡುತ್ತಿರುವೆ’ ಎಂದು ಬೊಹ್ರಾ ಬರೆದುಕೊಂಡಿದ್ದಾರೆ.

    ನಟಿ ಕರಿಷ್ಮಾ ತನ್ನಾ ಮನೆ ಕೆಲಸ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇಸ್ಟಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ‘ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವುದು ಉತ್ತಮ. ಹೀಗಾಗಿ ಇಂದು ನಾನು ಮ್ಯಾಗಿ ಮಾಡುತ್ತಿರುವೆ. ಅದಕ್ಕೆ ವಿವಿಧ ತರಕಾರಿ ಕಟ್ ಮಾಡಿ ಅದರಲ್ಲಿ ಹಾಕುತ್ತಿರುವೆ. ನನ್ನ ತಾಯಿಗೆ ಸಹಾಯ ಮಾಡುದಕ್ಕಾಗಿ ನಾನು ಕೆಲಸ ಮಾಡುತ್ತಿರುವೆ’ ಎಂದು ಕರಿಷ್ಮಾ ಹೇಳಿದ್ದಾರೆ. ಜೊತೆಗೆ ಮ್ಯಾಗಿ ತಯಾರಿಸಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    https://www.instagram.com/p/B-FBrGIn6rA/?utm_source=ig_embed

    ಕಿರುತೆರೆ ನಟ ಅರ್ಜುನ್ ಬಿಜ್ಲಾನಿ ಅವರು ತಮ್ಮ ಬಿಡುವಿನ ವೇಳೆ ಮಗನಿಗೆ ಚಿತ್ರಕಲೆ ಕಲಿಸಿದ್ದಾರೆ. ಅರ್ಜುನ್ ಬಿಜ್ಲಾನಿ ಪಾಠ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.