Tag: actress

  • ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ರೇಪ್ ಕೇಸ್ ದಾಖಲು

    ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ರೇಪ್ ಕೇಸ್ ದಾಖಲು

    – ಮದ್ವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ

    ಮುಂಬೈ: ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಅಕ್ಷಯ್ ವಿರುದ್ಧ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಮೋಸ ಮತ್ತು ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಮಿಥುನ್ ಪತ್ನಿ ಯೋಗಿತಾ ಬಾಲಿ ಅವರನ್ನ ಸಹ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ. ಫಿಲಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿಕೊಂಡಿರುವ ಮಾಡೆಲ್ ಕಂ ನಟಿ ಈ ದೂರು ದಾಖಲಿಸಿದ್ದಾರೆ.

    ಮಹಿಳೆಯ ದೂರಿನಲ್ಲೇನಿದೆ?: 2015ರಿಂದ ಮಹಾಅಕ್ಷಯ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದು, ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದನು. 2015ರಲ್ಲಿ ಮಹಾಅಕ್ಷಯ್ ತನ್ನನ್ನು ಮನೆಗೆ ಕರೆಸಿಕೊಂಡು ತಂಪು ಪಾನೀಯದಲ್ಲಿ ನಶೆ ಪದಾರ್ಥ ಮಿಕ್ಸ್ ಮಾಡಿದ್ದನು. ನಾನು ಜ್ಞಾನ ತಪ್ಪಿದಾಗ ಅತ್ಯಾಚಾರ ಎಸಗಿದ್ದನು. ಆದಾದ ಬಳಿಕ ಮದುವೆ ಆಗೋದಾಗಿ ಮಾತು ಸಹ ನೀಡಿದ್ದನು.

    ಕಳೆದ ನಾಲ್ಕು ವರ್ಷಗಳಿಂದ ಆತ ನನ್ನ ಜೊತೆ ಸಂಪರ್ಕದಲ್ಲಿದ್ದು, ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಈ ಅವಧಿಯಲ್ಲಿ ಗರ್ಭಿಣಿಯಾದ ವಿಷಯ ತಿಳಿಯುತ್ತಲೇ ಗರ್ಭಪಾತಕ್ಕೆ ಒತ್ತಾಯಿಸಿದನು. ಗರ್ಭಪಾತಕ್ಕೆ ಒಪ್ಪದಿದ್ದಾಗ ಮೋಸದಿಂದ ಮಾತ್ರೆ ನೀಡಿ ಅಬಾರ್ಷನ್ ಮಾಡಿಸಿದನು. ಗರ್ಭಿಣಿಯಾಗಿದ್ದ ವೇಳೆ ಮಹಾಅಕ್ಷಯ್ ನೀಡುತ್ತಿದ್ದ ಮಾತ್ರೆಗಳು ಗರ್ಭಪಾತಕ್ಕೆ ಎಂದು ಸಂತ್ರಸ್ತೆಗೆ ತಿಳಿದಿರಲಿಲ್ಲ. ದೂರು ಸಲ್ಲಿಸಿದ ಬಳಿಕ ಮಹಾಅಕ್ಷಯ್ ತಾಯಿ ಬೆದರಿಕೆ ಹಾಕಿದ್ದು, ಮಗನಿಂದ ದೂರ ಹೋಗುವಂತೆ ಒತ್ತಡ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾರೆ.

    ಎಫ್‍ಐಆರ್ ದಾಖಲು: ಸಂತ್ರಸ್ತೆಯ ದೂರಿನನ್ವಯ ಓಶಿವಾರ ಪೊಲೀಸ್ ಠಾಣೆಯಲ್ಲಿ ಮಹಾಅಕ್ಷಯ್ ಮತ್ತು ತಾಯಿ ಯೋಗಿತಾ ಬಾಲಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 376 (2) (ಎನ್) (ಮಹಿಳೆಯ ಮೇಲೆ ನಿರಂತರ ಅತ್ಯಾಚಾರ), 328 (ನಶೆ ಪದಾರ್ಥ ನೀಡಿ ಕಿರುಕುಳ), 417 (ಮೋಸ), 506 (ಬೆದರಿಕೆ), 313 (ಮಹಿಳೆಯ ಒಪ್ಪಿಗೆ ಇಲ್ಲದೇ ಗರ್ಭಪಾತ) ಮತ್ತು 34ರ ಪ್ರಕಾರ ಪ್ರಕರಣ ದಾಖಲಾಗಿದೆ.

    ದೆಹಲಿ ನ್ಯಾಯಾಲಯದ ಆದೇಶದ ಹಿನ್ನೆಲೆ ಮುಂಬೈನಲ್ಲಿ ಎಫ್‍ಐಆರ್ ದಾಖಲಾಗಿದೆ. ಸಂತ್ರಸ್ತೆ 2018ರಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. 2018ರಲ್ಲಿ ಮಹಾಅಕ್ಷಯ್ ವಿರುದ್ಧ ಅತ್ಯಾಚಾರ, ಗರ್ಭಪಾತ ಆರೋಪಗಳು ಕೇಳಿ ಬಂದಿದ್ದವು.

  • ಅನುಶ್ರೀ ವಿಚಾರಣೆ ನಡೆಸಿದ್ದ ಇನ್ಸ್‌ಪೆಕ್ಟರ್ ವರ್ಗಾವಣೆ – ಸ್ಥಳೀಯ ಶಾಸಕರ ಪ್ರಭಾವದ ಶಂಕೆ

    ಅನುಶ್ರೀ ವಿಚಾರಣೆ ನಡೆಸಿದ್ದ ಇನ್ಸ್‌ಪೆಕ್ಟರ್ ವರ್ಗಾವಣೆ – ಸ್ಥಳೀಯ ಶಾಸಕರ ಪ್ರಭಾವದ ಶಂಕೆ

    – ದೆಹಲಿಯಿಂದ್ಲೂ ಪೊಲೀಸರಿಗೆ ಒತ್ತಡ
    – 6 ಸಿಮ್ ಬಳಸ್ತಿದ್ದ ನಿರೂಪಕಿ

    ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದ ಇನ್ಸ್ ಪೆಕ್ಟರ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದ್ದು, ಇದರ ಹಿಂದೆ ಸ್ಥಳೀಯ ಶಾಸಕರೊಬ್ಬರ ಕೈವಾಡವಿದೆ ಎಂಬ ಮಾಹಿತಿ ಸಿಸಿಬಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ಮಂಗಳೂರು ಸಿಸಿಬಿ ಪೊಲೀಸರು ವರ್ಗಾವಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರು ಮೊದಲು ಡಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದರು. ಈ ವೇಳೆ ಕಿಶೋರ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಶಾಸಕರು ಒತ್ತಡ ಹಾಕಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮಂಡ್ಯದ ನಿಮಿಷಾಂಬ ದೇಗುಲಕ್ಕೆ ಅನುಶ್ರೀ ಭೇಟಿ – ವಿಶೇಷ ಪೂಜೆ ಸಲ್ಲಿಕೆ

    ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ ಬಿಡುವಂತೆ ಒತ್ತಾಯ ಹೇರಿದ್ದರು. ಆದರೆ ಶಾಸಕನ ಒತ್ತಾಯಕ್ಕೆ ಶಿವಪ್ರಕಾಶ್ ಮಣಿದಿರಲಿಲ್ಲ. ಹೀಗಾಗಿ ಇದೀಗ ಶಿವಪ್ರಕಾಶ್ ನೇತೃತ್ವದಲ್ಲೇ ನಡೆಯುತ್ತಿದ್ದ ಕಂಪ್ಲೀಟ್ ಡ್ರಗ್ಸ್ ಪ್ರಕರಣ ತನಿಖಾ ಉತ್ತುಂಗದಲ್ಲಿದ್ದಾಗ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ

    ಇಷ್ಟು ಮಾತ್ರವಲ್ಲದೆ ಅನುಶ್ರೀ ಬಚಾವ್ ಮಾಡಲು ದೆಹಲಿಯಿಂದಲೂ ಪ್ರಭಾವ ಬೀರಲಾಗುತ್ತಿದೆ. ದೆಹಲಿಯಲ್ಲಿರುವ ಪ್ರಭಾವಿ ನಾಯಕರು ಕೂಡ ಪ್ರಕರಣದಿಂದ ಅನುಶ್ರೀಯನ್ನು ಕೈಬಿಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ

    ಅನುಶ್ರೀ ದೂರವಾಣಿ ಕರೆಗಳ ಸಾಕ್ಷ್ಯ ಕೆದಕಿರುವ ಸಿಸಿಬಿಗೆ ಅಚ್ಚರಿಯಾಗಿದೆ. 6 ಸಿಮ್ ಬಳಸ್ತಿದ್ದ ಅನುಶ್ರೀ, ಸಿಸಿಬಿ ನೋಟಿಸ್ ಬೆನ್ನಲ್ಲೇ ನಾಲ್ವರು ಪ್ರಭಾವಿಗಳಿಗೆ ಫೋನ್ ಮಾಡಿದ್ದಾರೆ. ಮಾಜಿ ಸಿಎಂ, ಮಾಜಿ ಸಿಎಂ ಮಗ ಹಾಗೂ ಕರಾವಳಿ ಭಾಗದ ಪ್ರಭಾವಿ ರಾಜಕಾರಣಿಗೂ ಕರೆ ಮಾಡಿದ್ದರು. 3 ಪಕ್ಷಗಳ ಮೂವರು ನಾಯಕರಿಗೆ ಕಾಲ್ ಮಾಡಿದ್ದರು ಎಂದು ದೂರವಾಣಿ ಕರೆ ದಾಖಲೆ ಪರಿಶೀಲನೆ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

  • 3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

    3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

    ನವದೆಹಲಿ: ಮದುವೆಯಾದ ಎರಡು ವಾರದಲ್ಲೇ ಪತಿ ವಿರುದ್ಧ ದೂರು ನೀಡಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಇದೀಗ ವಿಚ್ಛೇದನ ನೀಡಲು ಮುಂದಾಗಿದ್ದಾರೆ.

    ಪತಿ ಸ್ಯಾಮ್ ಬಾಂಬೆ ತನಗೆ ಕಿರುಕುಳ ನೀಡಿ ಬೆದರಿಕೆ ಹಾಕುತ್ತಾನೆ ಎಂದು ಹೇಳಿ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಗೋವಾ ಪೊಲೀಸರು ಸ್ಯಾಮ್ ನನ್ನು ಬಂಧಿಸಿದ್ದರು.

    ಸ್ಯಾಮ್ ಹಾಗೂ ಪೂನಂ ಸೆಪ್ಟೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಕ್ಕೂ ಮೊದಲು ಇವರಿಬ್ಬರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಪತಿಯ ಕಿರುಕುಳದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪೂನಂ, ನಮ್ಮಿಬ್ಬರ ಸಂಬಂಧ ನಿಂದನೀಯವಾಗಿದೆ. ಅಲ್ಲದೆ ಆತ ತನಗೆ ಪ್ರಾಣಿಗಳಿಗೆ ಹೊಡೆದಂತೆ ಹೊಡೆಯುತ್ತಿದ್ದು, ಆತನ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯೊಂದಿಗೆ ಸಂಬಂಧ ಮುಂದುವರಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

    ನಮ್ಮ ಮಧ್ಯೆ ಆಗುತ್ತಿರುವ ಜಗಳ ತಾರಕ್ಕೇರಿತ್ತು. ಈ ವೇಳೆ ಆತ ನನಗೆ ಹೊಡೆಯಲು ಆರಂಭಿಸಿದನು. ನನ್ನನ್ನು ಉಸಿರುಗಟ್ಟುವಂತೆ ಮಾಡಿದ್ದು, ನಾನು ಸಾಯುತ್ತೇನೆ ಅಂತ ಭಾವಿಸಿದ್ದೆ. ನನ್ನ ಮುಖಕ್ಕೆ ಹೊಡೆದು, ಕೂದಲು ಹಿಡಿದು ಎಳೆದಾಡಿದನು. ಅಲ್ಲದೆ ತಲೆ ಹಿಡಿದು ಹಾಸಿಗೆಯ ಮೂಲೆಗೆ ಹೊಡೆದನು ಎಂದು ಪೂನಂ ದೂರಿದ್ದಾರೆ.

    ಇಷ್ಟು ಮಾತ್ರವಲ್ಲದೇ ಆತ ನನ್ನ ದೇಹದ ಮೇಲೆ ಮಂಡಿಯೂರಿ, ನನ್ನ ಮೇಲೆ ಹಲ್ಲೆ ಮಾಡಿದನು. ಈ ವೇಳೆ ನಾನು ಆತನ ಕೈಯಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಬಂದು ಪಾರಾದೆ ಎಂದಿದ್ದಾರೆ. ಡೇಟ್ ನಲ್ಲಿದ್ದ ವೇಳೆಯೂ ಕಿರುಕುಳ ನೀಡುತ್ತಿದ್ದ ಸ್ಯಾಮ್, ಮದುವೆಯಾದ ಬಳಿಕ ಆತನ ಜೊತೆಗಿನ ಸಂಬಂಧ ಸುಧಾರಿಸಬಹುದು ಎಂದು ನಂಬಿದ್ದೆ. ಹೀಗಾಗಿ ನಾನು ಆತನನ್ನು ಮದುವೆಯಾದೆ. ಆದರೆ ಆತ ಬದಲಾಗಿಲ್ಲ. ಪ್ರೀತಿ ಕುರುಡು ಎಂಬುದಕ್ಕೆ ನಾನು ಅತ್ಯುತ್ತಮ ಉದಾಹರಣೆ ಎಂದು ಪೂನಂ ಅಳಲು ತೋಡಿಕೊಂಡಿದ್ದಾರೆ.

    ಎರಡು ವಾರಗಳ ಹಿಂದೆ ಪೂನಂ ಪಾಂಡೆ ಮುಂಬೈನಲ್ಲಿ ಸ್ಯಾಮ್ ಬಾಂಬೆಯನ್ನು ವರಿಸಿದ್ದರು. ಆ ಬಳಿಕ ಗೋವಾದ ಕೆನಕೋನಾದಲ್ಲಿ ಪೂನಂ ಪಾಂಡೆ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಪೂನಂ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಸೋಮವಾರ ಪೊಲೀಸರು ಅರೆಸ್ಟ್ ಮಾಡಿದ್ದರು.

  • ಲಾಕ್‍ಡೌನ್ ವೇಳೆ ಪ್ರೀತಿ, ಮದ್ವೆ – ಸ್ವಂತ ಮನೆಯನ್ನೇ ದೋಚಿ ನಟಿ ಎಸ್ಕೇಪ್

    ಲಾಕ್‍ಡೌನ್ ವೇಳೆ ಪ್ರೀತಿ, ಮದ್ವೆ – ಸ್ವಂತ ಮನೆಯನ್ನೇ ದೋಚಿ ನಟಿ ಎಸ್ಕೇಪ್

    – ಪತಿಯ ಮನೆಯಲ್ಲಿದ್ದ ಹಣ, ಚಿನ್ನದ ಮೇಲೆ ಕಣ್ಣು
    – ಸಿಕ್ಕಿಬಿದ್ದ ಗಂಡ, ಪತ್ನಿ ನಾಪತ್ತೆ

    ಚೆನ್ನೈ: ತಮಿಳು ಕಿರುತೆರೆಯ ಖ್ಯಾತ ನಟಿ ಸುಚಿತ್ರಾ ಮತ್ತು ಆಕೆಯ ಪತಿ ತಮ್ಮ ಸ್ವಂತ ಮನೆಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಮಣಿಕಂಠನ್ ತನ್ನ ಪತ್ನಿ ಸುಚಿತ್ರಾ ಜೊತೆ ಸೇರಿಕೊಂಡು ಸ್ವಂತ ಮನೆಯನ್ನೇ ದೋಚಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ನಟಿ ಸುಚಿತ್ರಾ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದ ಸಂದರ್ಭದಲ್ಲಿ ಮಣಿಕಂಠನ್ ಎಂಬಾತನ ಜೊತೆ ಮದುವೆಯಾಗಿದ್ದಳು. ನಂತರ ನವದಂಪತಿ ಮಣಿಕಂಠನ್ ಮನೆಗೆ ಹೋಗಿದ್ದಾರೆ. ಅಲ್ಲಿ ಪೋಷಕರು ಮೊದಲಿಗೆ ಅವರ ಮದುವೆಯನ್ನು ಒಪ್ಪಿಕೊಂಡಿರಲಿಲ್ಲ. ನಂತರ ಎಲ್ಲರೂ ಒಪ್ಪಿಕೊಂಡು ಇಬ್ಬರನ್ನೂ ಮನೆಗೆ ಸೇರಿಸಿಕೊಂಡಿದ್ದಾರೆ.

    ಸುಚಿತ್ರಾ ಪತಿಯ ಮನೆಯಲ್ಲಿರುವ ಹಣ ಮತ್ತು ಆಭರಣಗಳನ್ನು ನೋಡಿ ಇಷ್ಟಪಟ್ಟಿದ್ದಳು. ಕೊರೊನಾದಿಂದ ಕೆಲಸವಿಲ್ಲದೇ ಇಬ್ಬರಿಗೂ ಹಣದ ಸಮಸ್ಯೆ ಎದುರಾಗಿದೆ. ಮನೆಯಲ್ಲಿ ಕೇಳಿದರೂ ಕೊಡುವುದಿಲ್ಲ ಎಂದು ಈ ಜೋಡಿ ಮಾಸ್ಟರ್ ಪ್ಲಾನ್ ಮಾಡಿದೆ. ಕೊನೆಗೆ ಮನೆಯಲ್ಲಿರುವ ಹಣ, ಒಡವೆಯನ್ನು ದೋಚಲೂ ಇಬ್ಬರು ನಿರ್ಧರಿಸಿದ್ದರು ಎಂದು ವರದಿಯಾಗಿದೆ.

    ಅದರಂತೆಯೇ ನನಗೆ ಕೆಲಸ ಇದೆ ಎಂದು ನಟಿ ಸುಚಿತ್ರಾ ಚೆನ್ನೈನಿಂದ ಹೋಗಿದ್ದಾಳೆ. ಇತ್ತ ಕಳ್ಳತನ ಮಾಡಲೂ ಪತಿ ಮಣಿಕಂಠನ್ ಮನೆಯಲ್ಲಿಯೇ ಉಳಿದುಕೊಂಡಿದ್ದನು. ನಂತರ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾನೆ. ಮನೆಯಲ್ಲಿ ಕಳ್ಳತನವಾದ ವಿಚಾರ ತಿಳಿದು ಮಣಿಕಂದನ್ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮಾಡಿದ ಪೊಲೀಸರಿಗೆ ಮನೆಯವರೇ ಕದ್ದಿರುವ ವಿಚಾರ ತಿಳಿದಿದೆ. ತಕ್ಷಣ ಮಣಿಕಂಠನ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರ ಬಳಿ ಮಣಿಕಂದನ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಸುಚಿತ್ರಾ ನಾಪತ್ತೆಯಾಗಿದ್ದಾಳೆ. ಸುಚಿತ್ರಾ ತಮಿಳು ಧಾರಾವಾಹಿಗಳ ಮೂಲಕ ಜನಪ್ರಿಯವಾದ ನಟಿ. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಧಾರಾವಾಹಿ ಚಿತ್ರೀಕರಣ ಸ್ಥಗಿತವಾಗಿತ್ತು. ಈ ಸಂದರ್ಭದಲ್ಲಿ ಮಣಿಕಂದನ್ ಪರಿಚಯವಾಗಿ ಇಬ್ಬರು ಪ್ರೀತಿಸಿ ಮದವೆಯಾಗಿದ್ದಾರೆ ಎಂದು ತಿಳಿದುಬಂದಿದೆ.

  • ಬಾತ್‍ರೂಮಿನಲ್ಲಿಯೇ ಧಾರಾವಾಹಿ ನಟಿ ನೇಣಿಗೆ ಶರಣು!

    ಬಾತ್‍ರೂಮಿನಲ್ಲಿಯೇ ಧಾರಾವಾಹಿ ನಟಿ ನೇಣಿಗೆ ಶರಣು!

    ಹೈದರಾಬಾದ್: ಇತ್ತೀಚೆಗೆ ಸೀರಿಯಲ್ ನಟ-ನಟಿಯರು ಆತ್ಮಹತ್ಯೆಯ ಮೊರೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಇದೇ ಸಾಲಿಗೆ ಇದೀಗ ತೆಲುಗಿನ ಧಾರಾವಾಹಿ ನಟಿ ಕೂಡ ಸೇರಿದ್ದಾರೆ.

    ಹೌದು. ತೆಲುಗಿನ ಸೀರಿಯಲ್ ಗಳಲ್ಲಿ ಅಭಿನಯಿಸುತ್ತಿದ್ದ ಶ್ರಾವಣಿ ಅವರು ಹೈದಾರಾಬಾದ್ ನ ಮಧುರಾನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ.

    ನಿನ್ನೆ ರಾತ್ರಿ ಶ್ರಾವಣಿ ಬಾತ್ ರೂಮಿಗೆ ತೆರಳಿದ್ದಾಳೆ. ಹೀಗೆ ಹೋದವಳು ಕೆಲ ಹೊತ್ತಾದರೂ ವಾಪಸ್ ಬರದಿದ್ದರಿಂದ ಅನುಮಾನಗೊಂಡ ಪೋಷಕರು ಬಾತ್ ರೂಮ್ ಬಾಗಿಲು ಒಡೆದಿದ್ದಾರೆ. ಈ ವೇಳೆ ಶ್ರಾವಣಿ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕುಟುಂಬದವರು ನಟಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ನಟಿಯ ಪೋಷಕರು ತಿಳಿಸಿದ್ದಾರೆ.

    ಕಳೆದ 8 ವರ್ಷಗಳಿಂದ ಶ್ರಾವಣಿ ತೆಲುಗಿನ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದರು. ಪ್ರಸ್ತುತ ಈಕೆ ಮಾನಸು ಮಮತಾ, ಮೌನ ರಾಗಂ ಧಾರಾವಾಹಿಗಳಲ್ಲಿ ಹಾಗೂ ಇತರೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು.

    ಈ ಮಧ್ಯೆ ಕೆಲ ವರ್ಷಗಳ ಹಿಂದೆ ಕಾಕಿನಾಡದ ಗೊಲ್ಲಾಪ್ರೊಲುವಿನ ದೇವರಾಜು ರೆಡ್ಡಿ ಎಂಬಾತನ ಪರಿಚಯವಾಗಿದೆ. ತನಗೆ ಪೋಷಕರು ಇಲ್ಲ ಎಂದು ಹೇಳಿಕೊಂಡಿರುವ ಈತ ಕೆಲ ದಿನಗಳ ಬಳಿಕ ಶ್ರಾವಣಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ನೊಂದ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

    ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರಾವಣಿ ಪೋಷಕರು ಎಸ್‍ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

  • ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು

    ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು

    ದಾವಣಗೆರೆ: ಡ್ರಗ್ಸ್ ಮಾಫಿಯಾದಲ್ಲಿ ಕೇವಲ ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರವಲ್ಲ ಯುವ ಪೀಳಿಯೇ ಇದೆ. ಈ ಡ್ರಗ್ಸ್ ಮಾಫಿಯಾವನ್ನು ನಮ್ಮ ಸರ್ಕಾರ ಬೇರು ಸಮೇತ ಕಿತ್ತು ಹಾಕಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರ ಡ್ರಗ್ಸ್ ಮಾಫಿಯಾದಲ್ಲಿಲ್ಲ. ಯುವ ಪೀಳಿಗೆಯೂ ಇದೆ. ನಮ್ಮ ಸರ್ಕಾರದ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲಿದೆ. ತನಿಖೆ ಪ್ರಗತಿಯಲ್ಲಿದ್ದು, ಪೊಲೀಸರು ಆಳವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    ನನ್ನ ಮಾತಿಗೆ ಈಗಲೂ ಬದ್ಧ
    ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸಿಎಂ ಯಡಿಯೂರಪ್ಪ ಜಾರಿ ಮಾಡಲಿದ್ದಾರೆ. ವರದಿ ನೀಡಿ ಒಂದು ತಿಂಗಳು ಮಾತ್ರ ಆಗಿದೆ. ಅದರ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸಿಎಂ ಬಳಿ ನಿಯೋಗ ಹೋಗಲಿದ್ದೇವೆ. ನಾಗಮೋಹನ್ ದಾಸ್ ವರದಿ ಸರ್ಕಾರದ ಮುಂದಿದೆ. ಕೋವಿಡ್ ಇರುವುದರಿಂದ ತಡೆಹಿಡಿಯಲಾಗಿದೆ. ಅದಷ್ಟು ಬೇಗ ಜಾರಿಗೊಳಿಸಲು ಸಭೆ ನಡೆಸಲಾಗುತ್ತಿದೆ. ಇಂದು ಸಭೆಯಲ್ಲಿ ಚರ್ಚೆ ಮಾಡಿ ಸರ್ಕಾರದ ಗಮನ ಸೆಳೆಯಲಿದ್ದೇವೆ. ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.

    ಈಗಾಗಲೇ ನ್ಯಾ.ನಾಗಮೋಹನ ದಾಸ್ ವರದಿ ನೀಡಿದ್ದಾರೆ. ಇದರಲ್ಲಿ ಶೇ.5ರಷ್ಟು ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆದರೆ ಅದು ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಆಗಬೇಕು. ಈ ಹಿಂದೆ ನಾನು ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಆಗಬೇಕು. ಅದು ಆಗದಿದ್ದರೆ, ಈ ಹಿಂದೆ ನಾನು ಮಾತು ನೀಡಿದಂತೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

  • ಡ್ರಗ್ಸ್‌ ಮಾಫಿಯಾ – ಬಂಧನ ಭೀತಿಯಿಂದ ಬೆಂಗಳೂರು ತೊರೆದ ಖ್ಯಾತ ನಟಿ

    ಡ್ರಗ್ಸ್‌ ಮಾಫಿಯಾ – ಬಂಧನ ಭೀತಿಯಿಂದ ಬೆಂಗಳೂರು ತೊರೆದ ಖ್ಯಾತ ನಟಿ

    ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸುತ್ತಿದ್ದಂತೆ ಖ್ಯಾತ ನಟಿ ಪರಾರಿಯಾಗಿದ್ದಾಳೆ.

    ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ ಮತ್ತು ಇಂದ್ರಜಿತ್‌ ಲಂಕೇಶ್‌ ನೀಡಿದ ಸಾಕ್ಷ್ಯಗಳ ಆಧಾರದ ಮೇಲೆ ಸಿಸಿಬಿ ಪೊಲೀಸರು ನಾಲ್ವರು ನಟಿಯರಿಗೆ ನೋಟಿಸ್‌ ನೀಡಲು ಮುಂದಾಗಿದ್ದರು.

     

    ಈ ಪಟ್ಟಿಯಲ್ಲಿ ಇಂದು ನಟಿ ರಾಗಿಣಿಗೆ ಸಮನ್ಸ್‌ ನೀಡಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ರಾಗಿಣಿಯ ಬಳಿಕ ಖ್ಯಾತ ನಟಿಗೂ ಸಮನ್ಸ್‌ ಜಾರಿ ಮಾಡಲು ಮುಂದಾಗಿದ್ದರು. ಇದನ್ನೂ ಓದಿ: ನಟಿ ರಾಗಿಣಿಗೆ ನೋಟಿಸ್ – ಸಿಸಿಬಿಯಿಂದ ಆಪ್ತ ಅರೆಸ್ಟ್‌

    ಈ ಸಂಬಂಧ ಆಕೆಯನ್ನು ಸಂಪರ್ಕಿಸಲು ಯತ್ನಿಸಿದಾಗ ಆಕೆ ಈಗ ಬೆಂಗಳೂರು ತೊರೆದಿದ್ದಾಳೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಈ ಖ್ಯಾತ ನಟಿ ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ಮೂಲಗಳ ಪ್ರಕಾರ ಬಂಧನ ಭೀತಿಯಿಂದ ನಟಿ ಮ್ಯಾನೇಜರ್‌ ಜೊತೆ ಕರ್ನಾಟಕವನ್ನು ತೊರೆದಿದ್ದು, ಪೊಲೀಸರು ಈಗ ಆಕೆಯ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

  • 19 ವರ್ಷದ ಧಾರಾವಾಹಿ ನಟಿಗೆ ತಂದೆಯಿಂದ್ಲೇ ಕೊಲೆ ಬೆದರಿಕೆ

    19 ವರ್ಷದ ಧಾರಾವಾಹಿ ನಟಿಗೆ ತಂದೆಯಿಂದ್ಲೇ ಕೊಲೆ ಬೆದರಿಕೆ

    – ರಕ್ಷಣೆಗಾಗಿ ಪೊಲೀಸರಲ್ಲಿ ಮನವಿ

    ಮುಂಬೈ: ಧಾರಾವಾಹಿ ಹಾಗೂ ಸಿನಿಮಾ ನಟಿ ತೃಪ್ತಿ ಶಂಖ್ದಾರ್‍ಗೆ ಆಕೆಯ ತಂದೆಯೇ ಕೊಲೆ ಬೆದರಿಕೆ ಹಾಕಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

    ಈ ಸಂಬಂಧ ಸ್ವತಃ ನಟಿಯೇ ವಿಡಿಯೋ ಮಾಡಿ ತನ್ನ ತಂದೆಯ ವಿರುದ್ಧ ಆರೋಪ ಮಾಡಿದ್ದಾಳೆ. ಅಲ್ಲದೆ ತನಗೆ ರಕ್ಷಣೆ ನೀಡುವಂತೆ ಆಕೆ ವಿಡಿಯೋ ಮೂಲಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾಳೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಹಿಂದಿಯ ‘ಕುಮ್ ಕುಮ್ ಭಾಗ್ಯ’ ಸೀರಿಯಲ್ ನಟಿ, ನನ್ನ ತಂದೆ ರಾಮ್ ರತನ್ ಶಂಖ್ದಾರ್ ಅವರಿಗೆ ಇಷ್ಟ ಬಂದ ಹುಡುಗನ ಜೊತೆ ಮದುವೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಾನು ಒಪ್ಪದಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ನನಗೆ ರಕ್ಷಣೆ ನೀಡಬೇಕು ಎಂದು ಬರೇಲಿ ಪೊಲೀಸರಲ್ಲಿ ಮನವಿ ಕೂಡ ಮಾಡಿಕೊಂಡಿದ್ದಾಳೆ.

    ನನ್ನನ್ನು ತಳ್ಳಿ, ಕೂದಲು ಹಿಡಿದು ಥಳಿಸಿದ್ದಾರೆ. ಅಲ್ಲದೆ ಫಿಲಂ ಇಂಡಸ್ಟ್ರಿಗೆ ಸೇರಿಕೊಳ್ಳಲು ಮುಂಬೈಗೆ ತೆರಳಿದ್ದಾಗ ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಗದರಿಸುತ್ತಿದ್ದಾರೆ ಅಂತ ಕೂಡ ತೃಪ್ತಿ ವಿಡಿಯೋದಲ್ಲಿ ಹೇಳಿಕೊಳ್ಳುವ ಮೂಲಕ ತಂದೆಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾಳೆ. ಈ ವಿಡಿಯೋವನ್ನು ತೃಪ್ತಿ ಮಂಗಳವಾರ ರಾತ್ರಿ ತನ್ನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾಳೆ. ಸದ್ಯ ತೃಪ್ತಿ ಇನ್ ಸ್ಟಾಗ್ರಾಂ ವಿಡಿಯೋ ಡಿಲೀಟ್ ಮಾಡಿದ್ದಾಳೆ.

    ಸದ್ಯ ತೃಪ್ತಿಗೆ 19 ವರ್ಷ ವಯಸ್ಸಾಗಿದ್ದು, ತಂದೆಯ ಬೆದರಿಕೆಯಿಂದ ಬೇಸತ್ತು ತನ್ನ ತಾಯಿಯ ಜೊತೆ ಮನೆ ಬಿಟ್ಟು ಬಂದಿದ್ದಾಳೆ. ತಂದೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಘಟನೆ ಬಗ್ಗೆ ಪ್ರತಿಕ್ರಿಯೆಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

    ತೃಪ್ತಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹಾಗೂ ಹಿಂದಿಯ ‘ಕುಮ್ ಕುಮ್ ಭಾಗ್ಯ’ ಸೀರಿಯಲ್ ನಲ್ಲಿ ನಟಿಸಿದ್ದಾಳೆ. ಇತ್ತ ಈ ಸಂಬಂಧ ನಮಗೆ ಯಾವುದೇ ರೀತಿಯ ಲಿಖಿತ ದೂರು ಬಂದಿಲ್ಲ. ಆದರೆ ಪ್ರಕರಣ ಕುರಿತು ತನಿಖೆ ಮಾಡುತ್ತೇವೆ ಎಂದು ಬರೇಲಿ ಪೊಲೀಸರು ತಿಳಿಸಿದ್ದಾರೆ.

  • ‘ನಿಮ್ಮ ಸ್ನೇಹಿತರನ್ನೂ ಕೂಡ ನಂಬಬೇಡಿ’ – ಫೇಸ್‍ಬುಕ್‍ ಲೈವ್ ಬಂದ ಮರುದಿನ ನಟಿ ಆತ್ಮಹತ್ಯೆ

    ‘ನಿಮ್ಮ ಸ್ನೇಹಿತರನ್ನೂ ಕೂಡ ನಂಬಬೇಡಿ’ – ಫೇಸ್‍ಬುಕ್‍ ಲೈವ್ ಬಂದ ಮರುದಿನ ನಟಿ ಆತ್ಮಹತ್ಯೆ

    – ನಿಮ್ಮ ಸಮಸ್ಯೆಗಳನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ

    ಮುಂಬೈ: ಗುರುವಾರಷ್ಟೆ ಬಾಲಿವುಡ್‍ನ ಕಿರುತೆರೆ ನಟ ಸಮೀರ್ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೀಗ ಭೋಜ್‍ಪುರಿ ನಟಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಸಮೀರ್ ಶರ್ಮಾ ಮೃತದೇಹ ಪತ್ತೆ

    ನಟಿ ಅನುಪಮಾ ಪಾಠಕ್ (40) ಆತ್ಮಹತ್ಯೆ ಮಾಡಿಕೊಂಡ ನಟಿ. ಮುಂಬೈನ ದಹಿಸರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಆಗಸ್ಟ್ 2 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಒಂದು ದಿನ ಮೊದಲು ಅನುಪಮಾ ಫೇಸ್‍ಬುಕ್‍ನಲ್ಲಿ ಲೈವ್ ಬಂದಿದ್ದು, ನನಗೆ ಮೋಸ ಆಗಿದೆ ಮತ್ತು ಯಾರನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಮಾತನಾಡಿದ್ದರು.

    “ನೀವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುವಿರಿ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯಾರಿಗಾದರೂ ಹೇಳಿದರೆ, ಆ ವ್ಯಕ್ತಿ ಅಥವಾ ಸ್ನೇಹಿತ ಸಮಸ್ಯೆಗಳಿಂದ ದೂರವಿರಲು ಹೇಳುತ್ತಾರೆ. ಆದರೆ ಅವರು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಆದ್ದರಿಂದ ನೀವು ಯಾರಿಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಬೇಡಿ. ನಿಮ್ಮ ಸಾವಿನ ನಂತರ ಅವರಿಗೆ ತೊಂದರೆಯಾಗುತ್ತದೆ. ಹೀಗಾಗಿ ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಂದ ದೂರವಿರಿ” ಎಂದು ನೋವಿನಿಂದ ಹೇಳಿದ್ದಾರೆ.

    ಅಲ್ಲದೇ, “ಜನರು ನಿಮ್ಮನ್ನು ಗೇಲಿ ಮಾಡುತ್ತಾರೆ ಮತ್ತು ಇತರರ ಮುಂದೆ ನಿಮ್ಮನ್ನು ಅಪಮಾನ ಮಾಡುತ್ತಾರೆ. ಆದ್ದರಿಂದ ನಿಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರನ್ನೂ ನಿಮ್ಮ ಸ್ನೇಹಿತ ಎಂದು ಕೂಡ ನಂಬಬೇಡಿ. ನಾನು ಇದನ್ನು ನನ್ನ ಜೀವನದಲ್ಲಿ ಕಲಿತಿದ್ದೇನೆ. ಜನರು ತುಂಬಾ ಸ್ವಾರ್ಥಿಗಳು ಮತ್ತು ಇತರರ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಆಗಸ್ಟ್ 1 ರಂದು ಫೇಸ್‍ಬುಕ್ ಲೈವ್ ವೀಡಿಯೊದಲ್ಲಿ ಹೇಳಿದ್ದಾರೆ.

    ಫೇಸ್‍ಬುಕ್ ಲೈವ್ ಬಂದ ಮರುದಿನ ಅಂದರೆ ಆಗಸ್ಟ್ 2 ರಂದು ನಟಿ ಅನುಪಮಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಪೊಲೀಸ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಒಂದು ಡೆತ್‍ನೋಟ್ ಕೂಡ ಪತ್ತೆಯಾಗಿದೆ.

    ನಟಿ ಮಲಾಡ್‍ನಲ್ಲಿರುವ ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದ್ದರು. 2019ರ ಡಿಸೆಂಬರ್‌ನಲ್ಲಿ ಮೆಚ್ಯೂರಿಟಿ ದಿನಾಂಕದ ಮುಗಿದಿದೆ. ಆದರೂ ಅದನ್ನು ವಾಪಸ್ ಕೊಟ್ಟಿಲ್ಲ. ಅಲ್ಲದೇ ಸ್ನೇಹಿತನೊಬ್ಬ ಲಾಕ್‍ಡೌನ್ ಸಮಯದಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದನು. ಅದನ್ನು ವಾಪಸ್ ಕೊಟ್ಟಿಲ್ಲ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಭೋಜ್‍ಪುರಿ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿ ಅನುಪಮಾ ನಟಿಸಿದ್ದಾರೆ. ಅನುಪಮಾ ಪಾಠಕ್ ಬಿಹಾರದ ಪೂರ್ನಿಯಾ ಜಿಲ್ಲೆಯವರಾಗಿದ್ದು, ಕೆಲಸಕ್ಕಾಗಿ ಮುಂಬೈನಲ್ಲಿ ನೆಲೆಸಿದ್ದರು. ಸದ್ಯಕ್ಕೆ ಪೊಲೀಸರಿಗೆ ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಮಗನೊಂದಿಗೆ ಬೋಟಿನಲ್ಲಿ ತೆರಳಿದ್ದ ನಟಿ- 6 ದಿನಗಳ ನಂತ್ರ ಶವವಾಗಿ ಪತ್ತೆ

    ಮಗನೊಂದಿಗೆ ಬೋಟಿನಲ್ಲಿ ತೆರಳಿದ್ದ ನಟಿ- 6 ದಿನಗಳ ನಂತ್ರ ಶವವಾಗಿ ಪತ್ತೆ

    – ಮಗನ ಜೀವ ಉಳಿಸಿ ನೀರಿನಲ್ಲಿ ಮುಳುಗಿದ ನಟಿ

    ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಕಣಿವೆಯಲ್ಲಿ ಮಗನೊಂದಿಗೆ ಬೋಟಿನಲ್ಲಿ ಹೋಗಿದ್ದಾಗ ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆಯಾಗಿದ್ದಾರೆ.

    ಹಾಲಿವುಡ್‍ನ ನಟಿ ನಯಾ ರಿವೇರಾ ಮೃತದೇಹ ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾದ ಕಣಿವೆಯಲ್ಲಿ ನಾಪತ್ತೆಯಾಗಿದ್ದರು. ಆದರೆ ಆರು ದಿನಗಳ ನಂತರ ಸೋಮವಾರ ರಿವೇರಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.

    ನಟಿ ನಯಾ ರಿವೇರಾ ಕಳೆದ ವಾರ ತಮ್ಮ ನಾಲ್ಕು ವರ್ಷದ ಮಗನೊಂದಿಗೆ ಬೋಟಿನಲ್ಲಿ ಹೋಗಿದ್ದ ವೇಳೆ ಬೋಟ್‍ ಮಗುಚಿ ಮುಳುಗಿದ್ದರು. ಸದ್ಯಕ್ಕೆ ರಿವೇರಾ ಅವರ ಮೃತದೇಹ ಪತ್ತೆಯಾಗಿದೆ. ಆದರೆ ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲಿ ಇದು ಆತ್ಮಹತ್ಯೆ ಅಲ್ಲ ಎಂದು ತಿಳಿದುಬಂದಿದೆ ಎಂದು ವೆಂಚುರಾ ಕಂಟ್ರಿ ಶೆರಿಫ್ ಬಿಲ್ ಅಯುಬ್ ತಿಳಿಸಿದ್ದಾರೆ.

    ಪತ್ತೆಯಾಗಿರುವ ಮೃತದೇಹದ ಬಟ್ಟೆ ಮತ್ತು ಸ್ಥಿತಿಯನ್ನು ನೋಡಿದರೆ ಅದು ನಟಿ ನಯಾ ರಿವೇರಾ ಶವ ಎಂದು ತಿಳಿಯುತ್ತದೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದರು.

    33 ವರ್ಷದ ರಿವೇರಾ ಲಾಸ್ ಏಂಜಲೀಸ್ ಸುತ್ತಾಡುವುದಕ್ಕೆ ಒಂದು ಗಂಟೆಯ ಅವಧಿಯವರೆಗೂ ಬೋಟ್‍ವೊಂದನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದರು. ಈ ವೇಳೆ ನಟಿ ತಮ್ಮ ಕಿರಿಯ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ನಂತರ ಆಕಸ್ಮಿಕವಾಗಿ ಬೋಟ್ ಮುಳುಗಿದೆ ಎನ್ನಲಾಗಿದೆ. ಬುಧವಾರ ಮಧ್ಯಾಹ್ನ ನಟಿ ರಿವೇರಾ ಬೋಟ್ ನಾಪತ್ತೆಯಾಗಿತ್ತು. ನಂತರ ಪೆಟ್ರೋಲ್ ಬೋಟ್‍ಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯಚರಣೆಯನ್ನು ನಡೆಸಿದಾಗ ಬೋಟ್ ಮತ್ತು ಮಗ ಪತ್ತೆಯಾಗಿದ್ದಾನೆ. ಆದರೆ ನಟಿ ರಿವೇರಾ ಮಾತ್ರ ಪತ್ತೆಯಾಗಿರಲಿಲ್ಲ ಎಂದು ಅಯುಬ್ ಹೇಳಿದ್ದಾರೆ.

    ಬೋಟ್ ಮುಳುಗುತ್ತಿದ್ದಾಗ ಅಮ್ಮ ನನ್ನನ್ನು ರಕ್ಷಿಸಿ ಬೋಟ್ ಮೇಲೆ ಹತ್ತಿಸಿದ್ದರು. ನಂತರ ನಾನು ಹಿಂದೆ ತಿರುಗಿ ನೋಡಿದಾಗ ಅವರು ನೀರಿನಲ್ಲಿ ಮುಳುಗುತ್ತಿದ್ದರು. ಕೊನೆಗೆ ನೀರಿನಲ್ಲಿ ಮುಳುಗುತ್ತಾ ಕಣ್ಮರೆಯಾಗುವುದನ್ನು ನೋಡಿದೆ ಎಂದು ಮಗ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಹೀಗಾಗಿ ನಟಿ ನಯಾ ರಿವೇರಾ ತಮ್ಮ ಮಗನ ಪ್ರಾಣ ಉಳಿಸಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

    “ಬಹುಶಃ ನಟಿ ಬೋಟಿನಲ್ಲಿ ಸುತ್ತಾಡುತ್ತಿದ್ದಾಗ ಕಣಿವೆಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದೆ. ಈ ವೇಳೆ ಬೋಟ್ ನಿಯಂತ್ರಣ ತಪ್ಪಿರುವ ಸಾಧ್ಯತೆ ಇದೆ. ಆಗ ತಮ್ಮ ಮಗನನ್ನು ಬೋಟ್ ಮೇಲೆ ಹತ್ತಿಸಿ ಕಾಪಾಡಿದ್ದಾರೆ. ಆದರೆ ತಮ್ಮನ್ನು ತಾವು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಯುಬ್ ತಿಳಿಸಿದ್ದಾರೆ.