Tag: actress

  • ಬಂಡೀಪುರ ಪ್ರವಾಸ ಮಾಡಿ ಗಿಡ ನೆಟ್ಟ ಪ್ರೇಮಲೋಕ ಚೆಲುವೆ ಜೂಹಿ ಚಾವ್ಲಾ

    ಬಂಡೀಪುರ ಪ್ರವಾಸ ಮಾಡಿ ಗಿಡ ನೆಟ್ಟ ಪ್ರೇಮಲೋಕ ಚೆಲುವೆ ಜೂಹಿ ಚಾವ್ಲಾ

    ಬೆಂಗಳೂರು: ಬುಹುಭಾಷಾ ನಟಿ, ಕಿಂದರಿಜೋಗಿ ಬೆಡಗಿ ಜೂಹಿ ಚಾವ್ಲಾ ಮೂಸೂರು ಸುತ್ತಮುತ್ತ ಪ್ರವಾಸ ಮಾಡಿ ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ನಟಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಶಾಂತಿ ಕ್ರಾಂತಿ ಚೆಲುವೆ ಜನಪ್ರಿಯ ಬಾಲಿವುಡ್ ನಟಿ ಜೂಹಿ ಚಾವ್ಲಾ ತಮ್ಮ ಕುಟುಂಬದವರೊಂದಿಗೆ ಇತ್ತೀಚೆಗೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡು ಹಿಂದಿರುಗಿದ್ದಾರೆ. ಈ ಬಗ್ಗೆ ಖುದ್ದು ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದೆ.

    ಎಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಅಣೆಕಟ್ಟೆಗೆ ಜೂಹಿ ತೆರಳಿದ್ದರು. ಅಲ್ಲಿನ ನಿಸರ್ಗ ತಾಣಗಳನ್ನು ವೀಕ್ಷಿಸಿದ ಬಳಿಕ ಕಾರಾಪುರ ಜಂಗಲ್ ಲಾಡ್ಜ್‌ನಲ್ಲಿ ತಂಗಿದ್ದರು. ನಂತರ ನಾಗರಹೊಳೆ ಸುತ್ತಮುತ್ತಲಿನ ಸುಂದರ ತಾಣಗಳನ್ನು ವೀಕ್ಷಿಸಿದ್ದ ಅವರು ಇಲ್ಲಿನ ಪರಿಸರದ ಭವ್ಯತೆಯನ್ನು ಹಾಡಿಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಬಂಡೀಪುರ ಪ್ರವಾಸದ ವೇಳೆ ರೆಸಾರ್ಟ್‍ನಲ್ಲಿ ಉಳಿದುಕೊಂಡಿದ್ದರು. ಪ್ರವಾಸದ ನೆನಪಿನಾರ್ಥವಾಗಿ ನಾವು ಉಳಿದುಕೊಂಡಿದ್ದ ರೇಸಾರ್ಟ್‍ನಲ್ಲಿ ಒಂದು ಗಿಡವನ್ನು ಸಹ ನೆಟ್ಟಿದ್ದೇವೆ ಎಂದು ಗಿಡ ನೆಡುತ್ತಿರುವ ವೀಡಿಯೋ ಶೇರ್ ಮಾಡಿದ್ದಾರೆ. ಕರ್ನಾಟಕದ ಕಬಿನಿ ನದಿಯ ಹೊರತಾಗಿ, ನಾಗರ ಹೊಳೆ ವನ್ಯಜೀವಿಗಳಿಗೆ ಮೀಸಲು ಇರುವ ಪ್ರದೇಶದಲ್ಲಿ ಟೈಗರ್ ಸಫಾರಿಗೆ ಹೋಗುತ್ತಿದ್ದೇವೆ ಎಂದು ಬರೆದುಕೊಂಡು ಅದರ ಒಂದು ಫೋಟೋವನ್ನು ಜೂಹಿ ಚಾವ್ಲಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Juhi Chawla (@iamjuhichawla)

    ಬಂಡೀಪುರ ಹಲವಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಹೀರುವಾಗ ಇಂತಹ ಅದ್ಭುತವಾದ ಭೌವ್ಯ ತಾಣಕ್ಕೆ ಬಾಲಿವುಡ್ ನಟರು, ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬರುತ್ತಿದ್ದಾರೆ. ಈ ಹಿಂದೆ ಹಲವು ನಟ-ನಟಿಯರು ಬಂದು ಹೋಗಿದ್ದಾರೆ. ಇಲ್ಲಿನ ಪ್ರಕೃತಿಯ ಸೊಬಗಿಗೆ ಮನಸೋತಿರುವುದು ಸ್ಥಳೀಯರಿಗೆ ಸಂತಸ ತರಿಸಿದೆ.

  • ವಿವಾಹವಾಗುವುದಾಗಿ ನಂಬಿಸಿ ನಟಿ ಮೇಲೆ ಪೈಲಟ್ ಅತ್ಯಾಚಾರ

    ವಿವಾಹವಾಗುವುದಾಗಿ ನಂಬಿಸಿ ನಟಿ ಮೇಲೆ ಪೈಲಟ್ ಅತ್ಯಾಚಾರ

    ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಮಾಡೆಲ್ ಕಮ್ ಟಿವಿ ನಟಿ ಮೇಲೆ ಪೈಲಟ್ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಸಬರ್ಬನ್ ಮುಂಬೈನ ಓಶಿವಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿವಾಹವಾಗುವುದಾಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಆರೋಪಿಸಿ ಕಳೆದ ವಾರ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ಪೈಲಟ್ ಮ್ಯಾಟ್ರಿಮೋನಿಯಲ್ ಸೈಟ್‍ನಲ್ಲಿ ಪರಿಚಯವಾಗಿದ್ದ. ಅಲ್ಲದೆ ವಿವಾಹವಾಗುವುದಾಗಿ ಭರವಸೆ ನೀಡಿದ್ದ ಎಂದು ನಟಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೈಲಟ್ ಭೋಪಾಲ್‍ನವನು ಸದ್ಯ ಮುಂಬೈನಲ್ಲಿ ವಾಸವಾಗಿದ್ದಾನೆ. ಪರಿಚಯವಾದ ಬಳಿಕ ಮೊಬೈಲ್‍ನಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಮಾತ್ರವಲ್ಲದೆ ಚಾಟ್ ಮಾಡಲು ಆರಂಭಿಸಿದ್ದಾರೆ.

    ಸುಮಾರು 10 ದಿನಗಳ ಹಿಂದೆ ಪೈಲಟ್ ಸಂತ್ರಸ್ತೆಯನ್ನು ಕರೆದು ಭೇಟಿಯಾಗಲು ಹಾಗೂ ಅವಳ ನಿವಾಸ ನೋಡುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾನೆ. ನಟಿ ಮುಂಬೈನಲ್ಲಿ ಒಬ್ಬಳೇ ವಾಸಿಸುತ್ತಿದ್ದು, ಪೈಲಟ್ ಬೇಡಿಕೆಗೆ ಒಪ್ಪಿ ಮನೆಗೆ ಕರೆದಿದ್ದಾಳೆ. ಆಗ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

    ಇದೆಲ್ಲ ನಡೆದ ಬಳಿಕ ಆರೋಪಿ ನಟಿಯನ್ನು ಮನೆಯವರಿಗೆ ಪರಿಚಯಿಸಿ, ವಿವಾಹದ ಬಗ್ಗೆ ಮಾತನಾಡುವುದಾಗಿ ತಿಳಿಸಿದ್ದಾನೆ. ಆದರೆ ಈ ವರೆಗೆ ಯಾವುದೇ ರೀತಿ ಸ್ಪಂದಿಸಿಲ್ಲ. ಆರೋಪಿ ವರ್ತನೆಯಿಂದ ಬೇಸತ್ತ ಟಿವಿ ನಟಿ, ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

  • ನಟಿ ರಾಧಿಕಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಯುವರಾಜ್ ಜೊತೆಗೆ ಸ್ವೀಟಿಗೂ ಕಂಟಕ ಫಿಕ್ಸಾ?

    ನಟಿ ರಾಧಿಕಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಯುವರಾಜ್ ಜೊತೆಗೆ ಸ್ವೀಟಿಗೂ ಕಂಟಕ ಫಿಕ್ಸಾ?

    ಬೆಂಗಳೂರು: ವಂಚಕ ಯುವರಾಜ್ ಪುರಾಣದ ಮತ್ತೊಂದು ಅಧ್ಯಾಯ ಬಯಲಾಗಿದ್ದು, ರಾಧಿಕಾ ಕುಮಾರಸ್ವಾಮಿ 15+60 ಲಕ್ಷ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ನಾನು ನಾಟ್ಯರಾಣಿ ಶಾಂತಲೆ ಸಿನಿಮಾ ಒಪ್ಪಿಕೊಂಡಿದ್ದೆ. ಯುವರಾಜ್ ಕಡೆಯಿಂದ 75 ಲಕ್ಷ ಕೂಡ ಬಂದಿತ್ತು. 15 ಲಕ್ಷ ಯುವರಾಜ್ ಕೊಟ್ಟಿದ್ದ, 60 ಲಕ್ಷ ಬೇರೆಯವರು ಹಾಕಿದ್ದು. ಕೇಳಿದ್ರೆ ನಮ್ಮ ಭಾವ ಹಾಕಿದ್ದು ಅಂತ ಯುವರಾಜ್ ಹೇಳಿರುವುದಾಗಿ ರಾಧಿಕಾ ತಿಳಿಸಿದ್ದರು.

    ರಾಧಿಕಾ ಅವರ ಈ ಹೇಳಿಕೆ ಬೆನ್ನತ್ತಿದ ಸಿಸಿಬಿಗೆ ಬೇರೆಯದ್ದೇ ಸತ್ಯ ಕಂಡಿದೆ. ರಾಧಿಕಾ ಖಾತೆಗೆ 60 ಲಕ್ಷ ಹಾಕಿದ್ದು ಯಾರು ಎಂಬ ಸೀಕ್ರೇಟ್ ಬಯಲಾಗಿದೆ. ರಾಧಿಕಾ ಖಾತೆಗೆ 60 ಲಕ್ಷ ಹಾಕಿದ್ದು ಯುವರಾಜ್ ಭಾವ ಅಲ್ಲ. ಸ್ವೀಟಿ ರಾಧಿಕಾಗೆ ಹಣ ಕೊಟ್ಟಿದ್ದು ಬೇರೆ ಯಾರು ಅಲ್ಲ ಯುವರಾಜ್‍ನಿಂದ ಮೋಸ ಹೋದ ಮೈಸೂರಿನ ರವಿ.

    ಸ್ಲಂ ಬೋರ್ಡ್ ಗೆ ಅಧ್ಯಕ್ಷ ಮಾಡ್ತೀನಿ ಅಂತ ರವಿಗೆ 6 ಕೋಟಿ ದೋಖಾ ಮಾಡಿದ್ದಾನೆ. 6 ಕೋಟಿಯಲ್ಲಿ 60 ಲಕ್ಷ ಹಣ ನಟಿ ರಾಧಿಕಾ ಖಾತೆಗೆ ವರ್ಗಾವಣೆಯಾಗಿದೆ. 6 ಕೋಟಿ ಕಳೆದುಕೊಂಡಿದ್ದ ಮೈಸೂರು ರವಿಯಿಂದ ಸಿಸಿಬಿಗೆ ದೂರು ನೀಡಲಾಗಿದೆ. ಸದ್ಯ ಈ ವಂಚನೆಯಲ್ಲಿ ರಾಧಿಕಾ ಭಾಗಿ ಬಗ್ಗೆ ಸಿಸಿಬಿ ಶಂಕೆ ವ್ಯಕ್ತಪಡಿಸಿದ್ದು, ನಟಿ ರಾಧಿಕಾಗೆ ಸಂಕಷ್ಟ ಎದುರಾಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ.

  • ನಟಿ ಸುಧಾರಾಣಿ ತಂದೆ ನಿಧನ

    ನಟಿ ಸುಧಾರಾಣಿ ತಂದೆ ನಿಧನ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್ ಗೋಪಾಲಕೃಷ್ಣ(93) ನಿಧನರಾಗಿದ್ದಾರೆ.

    ಗೋಪಾಲಕೃಷ್ಣ ಅವರು ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ಅವರು ನಗರದ ಮಲ್ಲೇಶ್ವರಂನ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

    ಇಂದು ಮಧ್ಯಾಹ್ನ ಸತ್ಯ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಸಂಸ್ಕಾರ ನೆರವೇರಿದೆ.

  • ಅಮ್ಮ ಆಗ್ತಿದ್ದಾರೆ ಕಿರುತೆರೆ ನಟಿ ಶಾಂಭವಿ

    ಅಮ್ಮ ಆಗ್ತಿದ್ದಾರೆ ಕಿರುತೆರೆ ನಟಿ ಶಾಂಭವಿ

    – 1+1=4

    ಬೆಂಗಳೂರು: ಕಿರುತೆರೆ ನಟಿ ಶಾಂಭವಿ ಅಮ್ಮ ಆಗುತ್ತಿರುವ ಖುಷಿಯ ವಿಚಾರವನ್ನ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಅವಳಿ ಮಕ್ಕಳಿಗೆ ಶಾಂಭವಿ ತಾಯಿಯಾಗುತ್ತಿರುವ ಶಾಂಭವಿ 1+1=4 ಅಂತ ಸಹ ಬರೆದುಕೊಂಡಿದ್ದಾರೆ.

    ಇನ್‍ಸ್ಟಾಗ್ರಾಂನಲ್ಲಿ ಎರಡು ಜೊತೆ ಪುಟ್ಟ ಮಗುವಿನ ಸಾಕ್ಸ್ ಮತ್ತು ಪತಿಯೊಂದಿಗಿನ ಸುಂದರವಾದ ಫೋಟೋಗಳನ್ನ ಅಪ್ಲೋಡ್ ಮಾಡಿಕೊಂಡಿರುವ ಶಾಂಭವಿ, ಅಮ್ಮ ಆಗೋಳಿದಿನಿ. ನಿಮ್ಮೆಲ್ಲರ ಹಾರೈಕೆಗಳು ಬೇಕು ಎಂದು ಕೇಳಿಕೊಂಡಿದ್ದಾರೆ. ಕಿರುತೆರೆ ಕಲಾವಿದರು ಸೇರಿದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ.

    ಖಾಸಗಿ ವಾಹಿನಿಯ ನಿಗೂಢ ರಾತ್ರಿ ಧಾರಾವಾಹಿಯಲ್ಲಿನ ಮಂದಾಕಿನಿ/ಪುಟ್ಟಿ ಪಾತ್ರದ ಮೂಲಕ ಮನೆ ಮಾತಾಗಿದ್ದ ಶಾಂಭವಿ, ಪಾರು, ಲಕ್ಷ್ಮಿ ಸೀರಿಯಲ್ ನಲ್ಲಿ ಮಿಂಚಿದ್ದಾರೆ. ನೆಗೆಟಿವ್ ಶೇಡ್ ರೋಲ್ ನಲ್ಲಿ ಕಾಣಿಸಿಕೊಂಡರು ತಮ್ಮ ಸೌಂದರ್ಯದ ಮೂಲಕ ಹೆಚ್ಚು ಸದ್ದು ಮಾಡಿದ್ದರು. ಇನ್ನೂ ಕನ್ನಡದ ಸ್ವಾತಿಮುತ್ತು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿ ನಟಿಯ ಗೆಳತಿ ಪಾತ್ರದಲ್ಲಿ ಶಾಂಭವಿ ಗಮನ ಸೆಳೆದಿದ್ದರು.

    ನಿಗೂಢ ರಾತ್ರಿಯಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರ ನಿರ್ವಹಿಸಿದ್ದ ಶಾಂಭವಿ, ಪಾರು ಸೀರಿಯಲ್ ನಲ್ಲಿ ಪಕ್ಕಾ ಮಾಡರ್ನ್ ದಿಶಾ ರೋಲ್ ನಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರೋ ಶಾಂಭವಿ, ಹೊಸ ಹೊಸ ಫೋಟೋಗಳ ಜೊತೆಯಲ್ಲಿ ಖಾಸಗಿ ಹಾಗೂ ವೃತ್ತಿ ಬದುಕಿನ ವಿಷಯಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.

  • ‘ದಿ ಡರ್ಟಿ ಪಿಕ್ಚರ್’ ಚಿತ್ರದ ನಟಿ ಆರ್ಯಾ ಬ್ಯಾನರ್ಜಿ ಶವವಾಗಿ ಪತ್ತೆ

    ‘ದಿ ಡರ್ಟಿ ಪಿಕ್ಚರ್’ ಚಿತ್ರದ ನಟಿ ಆರ್ಯಾ ಬ್ಯಾನರ್ಜಿ ಶವವಾಗಿ ಪತ್ತೆ

    – ಅನುಮಾನ ಹುಟ್ಟಿಸಿದೆ 35 ವರ್ಷದ ನಟಿಯ ಸಾವು

    ಮುಂಬೈ: ತಮಿಳು ಧಾರವಾಹಿಯ ನಟಿ ವಿಜೆ ಚಿತ್ರಾ ಮೃತಪಟ್ಟ ಬೆನ್ನಲ್ಲೇ ಇದೀಗ ಬೆಂಗಾಳಿ ನಟಿ ಆರ್ಯ ಬ್ಯಾನರ್ಜಿ ಮೃತದೇಹ ಅವರ ಮನೆಯಲ್ಲಿ ಪತ್ತೆಯಾಗಿದೆ.

    ಮೃತ ನಟಿಯನ್ನು ಆರ್ಯಾ ಬ್ಯಾನರ್ಜಿ(35) ಎಂದು ಗುರುತಿಸಲಾಗಿದೆ. ಇವರು ದಿವಂಗತ ಸಿತಾರ್ ವಾದಕ ಪಂಡಿತ್ ನಿಖಿಲ್ ಬ್ಯಾನರ್ಜಿಯ ಪುತ್ರಿ. 2010ರಲ್ಲಿ ಲವ್ ಸೆಕ್ಸ್ ಔರ್ ದೋಖಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಆರ್ಯಾ 2011ರಲ್ಲಿ ಡರ್ಟಿ ಪಿಕ್ಟರ್ ನಲ್ಲಿ ನಟಿಸಿದ್ದರು. ಬೆಂಗಾಳಿ ನಟಿಯಾದರೂ ಈಕೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿರಪರಿಚಿತರಾಗಿದ್ದರು.

    ಆರ್ಯಾ ಮೃತದೇಹದ ಮೇಲೆ ಯಾವುದೇ ಗಾಯಗಳಾದ ಗುರುತುಗಳಿಲ್ಲ. ಕೋಲ್ಕತ್ತಾದಲ್ಲಿರುವ ದೇವದತ್ತ ಎಂಬ ಹೆಸರಿನ ಮನೆಯಲ್ಲಿ ಈಕೆ ಒಂಟಿಯಾಗಿದ್ದರು. ಸದ್ಯ ನೆಲದ ಮೇಲೆ ಮಲಗಿದ್ದ ರೀತಿಯಲ್ಲಿ ಆರ್ಯಾ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ಒಳಗೆ ಹೋದಾಗ ನೆಲದ ಮೇಲೆ ರಕ್ತದ ಕಲೆಗಳು ಬಿದ್ದಿರುವುದು ಬೆಳಕಿಗೆ ಬಂದಿದೆ. ಘಟನೆಯ ನಿಖರ ಕಾರಣ ಮರಣೊತ್ತರ ವದಿ ಬಂದ ಬಳಿಕವಷ್ಟೇ ಗೊತ್ತಾಗಬೇಕಿದೆ ಎಂದು ಲೇಕ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆಗಿದ್ದ ಸಂದರ್ಭದಲ್ಲಿ ಆಕೆ ಮನೆಯಲ್ಲಿ ಒಬ್ಬಳೇ ಇದ್ದರು. ಇತ್ತೀಚೆಗೆ ಆ್ಯಪ್ ಮೂಲಕ ಆಹಾರ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದರು. ಅಲ್ಲದೆ ಮನೆಯಲ್ಲಿ ಸಾಕಿದ್ದ ನಾಯಿ ಜೊತೆ ತಮ್ಮ ಸಮಯ ಕಳೆಯುತ್ತಿದ್ದರು. ಈಕೆ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ನಟು ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜನಪ್ರಿಯ ಸೀರಿಯಲ್ ನಟಿ ವಿಜೆ ಚಿತ್ರಾ ಆತ್ಮಹತ್ಯೆ 

    ಶುಕ್ರವಾಗಿ ಬೆಳಗ್ಗಿನಿಂದ ಮನೆಗೆಲಸದವರು ನಟಿಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಅಲ್ಲದೆ ಮನೆ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿರಲಿಲ್ಲ. ಹೀಗಾಗಿ ಪೊಲೀಸರು ನಟಿ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ನಟಿಗೆ ಏನಾದರೂ ಸಮಸ್ಯೆ ಕಾಡಿತ್ತಾ ಹಾಗೂ ಆಕೆ ಕೊನೆಯ ಬಾರಿಗೆ ಆಹಾರ ಆರ್ಡರ್ ಯಾವಾಗ ಮಾಡಿದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫ್ರೆಶ್ ಆಗಿ ಬರ್ತೀನಿ ಅಂತ ಹೋದವ್ಳು ಮತ್ತೆ ಬರಲೇ ಇಲ್ಲ- ನಟಿ ಭಾವಿ ಪತಿ 

    ಲವ್ ಸೆಕ್ಸ್ ಔರ್ ದೋಖಾ ಹಾಗೂ ದಿ ಡರ್ಟಿ ಪಿಕ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ ಆರ್ಯಾ ಅವರು ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ಕೋರ್ಸ್ ಮಾಡಿದ್ದರು. ಇನ್ನು ಮುಂಬೈನಲ್ಲಿದ್ದ ವೇಲೆ ಹಲವಾರು ಮಾಡೆಲಿಂಗ್ ಕಾರ್ಯಕ್ರಮಗಳನ್ನು ಕೂಡ ಆರ್ಯಾ ನಿರ್ವಹಿಸಿದ್ದರು. ಸದ್ಯ ನಟಿಯ ಸಾವನ್ನಪ್ಪಿರುವುದು ಅಚ್ಚರಿಯ ಜೊತೆಗೆ ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.

  • ಜನಪ್ರಿಯ ಸೀರಿಯಲ್ ನಟಿ ವಿಜೆ ಚಿತ್ರಾ ಆತ್ಮಹತ್ಯೆ

    ಜನಪ್ರಿಯ ಸೀರಿಯಲ್ ನಟಿ ವಿಜೆ ಚಿತ್ರಾ ಆತ್ಮಹತ್ಯೆ

    – ಶೂಟಿಂಗ್ ಮುಗಿಸಿ ಬಂದು ನೇಣಿಗೆ ಶರಣು
    – ಹೋಟೆಲಿನಲ್ಲೇ ನಟಿ ಬದುಕಿಗೆ ವಿದಾಯ

    ಚೆನ್ನೈ: ತಮಿಳು ಸೀರಿಯಲ್ ನಟಿ ವಿಜೆ ಚಿತ್ರಾ(28) ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಚಾರ ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ.

    ಚಿತ್ರಾ ಅವರು ಜನಪ್ರಿಯ ತಮಿಳು ಕಾರ್ಯಕ್ರಮ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಲ್ಲೈ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು. ಇದೀಗ ಈಕೆಯ ಮೃತದೇಹ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಇವಿಪಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿ ಇಂದು ಮುಂಜಾನೆ 2.30ರ ಸುಮಾರಿಗೆ ಹೋಟೆಲ್ ಗೆ ಮರಳಿದ್ದರು. ಚಿತ್ರಾ ಅವರು ಕೆಲವು ತಿಂಗಳ ಹಿಂದೆ ಉದ್ಯಮಿ ಹೇಮಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯ ಅವರ ಜೊತೆಯೇ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

    ಚಿತ್ರಾ ಅವರು ಕಾರ್ಯಕ್ರಮ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತನ್ನ ಮುಲ್ಲೈ ಪಾತ್ರದ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದ ಚಿತ್ರಾ, ತನ್ನ ಫೋಟೋ ಹಾಗೂ ಕೆಲವೊಂದು ಪೋಸ್ಟ್ ಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅಲ್ಲದೆ ಕೆಲವೊಂದು ಕಾಮಿಡಿ ಪೋಸ್ಟ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

    ಒಟ್ಟಿನಲ್ಲಿ ಚಿತ್ರಾ ಆತ್ಮಹತ್ಯೆ ವಿಚಾರ ನೋವುಂಟು ಮಾಡಿದ್ದು, ಖಿನ್ನತೆಯೇ ಚಿತ್ರಾ ಸೂಸೈಡ್ ಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರಾ ಆತ್ಮಹತ್ಯೆಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬಿ ಮಿಡಿಯುತ್ತಿದ್ದಾರೆ.

  • ಸೆಕ್ಸ್ ವೀಡಿಯೋ ತೋರಿಸಿ ರೇಪ್ – ನಿರ್ದೇಶಕನ ವಿರುದ್ಧ ನಟಿ ದೂರು

    ಸೆಕ್ಸ್ ವೀಡಿಯೋ ತೋರಿಸಿ ರೇಪ್ – ನಿರ್ದೇಶಕನ ವಿರುದ್ಧ ನಟಿ ದೂರು

    – ದೂರವಾದ್ರೆ ಪೋರ್ನ್ ವೀಡಿಯೋ ಕಳಿಸಿ ಕಿರುಕುಳ

    ಮುಂಬೈ: ನಿರ್ದೇಶಕ ಆಯುಷ್ ತಿವಾರಿ ವಿರುದ್ಧ ಕಿರುತೆರೆ ಮತ್ತು ವೆಬ್ ಸಿರೀಸ್ ನಟಿ ಅತ್ಯಾಚಾರದ ಆರೋಪ ಮಾಡಿ ಮುಂಬೈನ ವಾರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ನಿರ್ದೇಶಕ ಆಯುಷ್ ತಿವಾರಿ ಸಹ ದೂರ ದಾಖಲಾದ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

    ನಿರ್ದೇಶಕ ಕೆಲವು ದಿನಗಳಿಂದ ತಮಗೆ ಪೋರ್ನ್ ವೀಡಿಯೋಗಳನ್ನ ತೋರಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ನಟಿ ದೂರಿನಲ್ಲಿ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟಿಯ ಹೇಳಿಕೆಯನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮುಂದಿನ ವಾರ ಆರೋಪಿ ನಿರ್ದೇಶಕರನ್ನ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇಬ್ಬರಿಗೂ ಎರಡು ವರ್ಷದ ಪರಿಚಯ: ಆಯುಷ್ ತಿವಾರಿ ವೆಬ್ ಸಿರೀಸ್ ನಲ್ಲಿ ನಟಿಸುವ ಅವಕಾಶ ನೀಡಿದ್ದರು. ನಂತರ ಮದುವೆ ಆಗೋದಾಗಿನಂಬಿಸಿ ಹಲವು ಬಾರಿ ರೇಪ್ ಮಾಡಿದ್ದಾರೆ ಎಂದು ನಟಿ ಹೇಳಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನಟಿ ಮತ್ತು ನಿರ್ದೇಶಕ ಕಳೆದು ಎರಡು ವರ್ಷಗಳಿಂದ ಪರಿಚಯಸ್ಥರು ಎಂಬುದು ತಿಳಿದು ಬಂದಿದೆ.

    ಸೆಕ್ಸ್ ವೀಡಿಯೋ ಕಳಿಸ್ತಿದ್ದ!: ಆಯುಷ್ ತಿವಾರಿ ಮದುವೆ ಆಗೋದಾಗಿ ನಟಿಯನ್ನ ನಂಬಿಸಿದ್ದನು. ಹಾಗಾಗಿ ಆಕೆಯನ್ನ ದೈಹಿಕವಾಗಿ ಬಳಸಿಕೊಂಡಿದ್ದನು. ನಟಿಗೆ ಸೆಕ್ಸ್ ವೀಡಿಯೋಗಳನ್ನ ಸಹ ತೋರಿಸುತ್ತಿದ್ದನು ನಟಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಆಯುಷ್ ನಿಂದ ದೂರವಾಗಿದ್ದರು. ಆದ್ರೂ ಆರೋಪಿ ನಟಿ ಮೊಬೈಲ್ ಗೆ ಅಶ್ಲೀರ ವೀಡಿಯೋಗಳನ್ನು ಕಳುಹಿಸುತ್ತಿದ್ದನು. ಹಲವು ಬಾರಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

    ಆಯುಷ್ ತಿವಾರಿಯಿಂದ ದೂರವಾದ ಬಳಿಕ ನಟಿ ಎಲ್ಲ ಘಟನೆಯನ್ನ ಸೋದರನಿಗೆ ಹೇಳಿದ್ದಾರೆ. ನಟಿ ಸೋದರ ಆಯುಷ್ ತಿವಾರಿಯನ್ನ ಭೇಟಿಯಾಗಿ ಮಾತಾಡಿದ್ದರು. ಆದ್ರೆ ಆಯುಷ್ ಮದುವೆಗೆ ಒಪ್ಪಿಲ್ಲ. ಕೊನೆಗೆ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಅತ್ತೆ ಮನೆಗೆ ಹೊರಟ ಬಿಗ್‍ಬಾಸ್ ಸ್ಪರ್ಧಿ

    ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಅತ್ತೆ ಮನೆಗೆ ಹೊರಟ ಬಿಗ್‍ಬಾಸ್ ಸ್ಪರ್ಧಿ

    – ವೀಡಿಯೋ ವೈರಲ್, ನಟಿ ವಿರುದ್ಧ ನೆಟ್ಟಿಗರ ಕಿಡಿ

    ಮುಂಬೈ: ನಟಿ, ಗಾಯಕಿ ಜಸ್ಲೀನ್ ಮಾಥಾರೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದೆ.

    ವಧು ರೀತಿಯಲ್ಲಿ ಡ್ರೆಸ್ ಮಾಡಿಕೊಂಡ ನಟಿ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಪೋಸ್ ನೀಡಿರುವ ವೀಡಿಯೋವನ್ನ ಜಸ್ಲೀನ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಧುವಿನಂತೆ ರೆಡ್ ದುಪ್ಪಟಾ, ರೆಡ್ ಟಾಪ್, ಬಿಂದಿ, ಆಭರಣ ಧರಿಸಿರುವ ಜಸ್ಲೀನ್, ಲೆಹೆಂಗಾ ಬದಲು ತಿಳಿ ನೀಲಿ ಬಣ್ಣದ ಶಾರ್ಟ್ಸ್ ಧರಿಸಿ ಅತ್ತೆಯ ಮನೆಗೆ ಹೊರಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಇದೀಗ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಚಾರಕ್ಕಾಗಿ ಭಾರತೀಯ ಸಂಸ್ಕ್ರತಿಗೆ ಧಕ್ಕೆಯುಂಟು ಮಾಡಿದ್ದೀರಿ. ಹಾಗಾಗಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಹಲವರು ನಟಿಯ ವೀಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಬಿಗ್‍ಬಾಸ್ ಸೀಸನ್ 12ರಲ್ಲಿ ಕಾಣಿಸಿಕೊಂಡಿದ್ದ ಜಸ್ಲೀನ್ ಹೆಚ್ಚು ಸದ್ದು ಮಾಡಿದ್ದರು. ಬಿಗ್‍ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜಸ್ಲೀನ್ ವೃತ್ತಿ ಮತ್ತು ಖಾಸಗಿ ಜೀವನದ ಮಾಹಿತಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

  • ದೀಪಾವಳಿಯಂದೇ ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ

    ದೀಪಾವಳಿಯಂದೇ ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ

    ಬೆಂಗಳೂರು: ನಟಿ ಮಯೂರಿ ದೀಪಾವಳಿ ದಿನದಂದೇ ಗುಡ್ ನ್ಯೂಸ್ ಒಂದನ್ನು ಬಹಿರಂಗಪಡಿಸಿದ್ದಾರೆ.

    ಮದುವೆ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದ ಮಯೂರಿ, ಇದೀಗ ತಾನು ತಾಯಿಯಾಗುತ್ತಿರುವ ವಿಚಾರ ಕೂಡ ತಿಳಿಸಿದ್ದಾರೆ. ಈಗಾಗಲೇ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಕೊಂಡಿದ್ದು, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಶುಭದಿನದಂದು ನಾವು ಪುಟ್ಟ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ಗೆ ಎಲ್ಲರೂ ಕಾಮೆಂಟ್ ಮಾಡಿ ಕಂಗ್ರಾಟ್ಸ್ ಹೇಳುತ್ತಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ಇದೇ ವರ್ಷ ಜೂನ್ 12ರಂದು ತನ್ನ ಬಹುಕಾಲದ ಗೆಳೆಯ ಅರುಣ್ ಜೊತೆ ಮಯೂರಿ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶುಭಲಗ್ನದಲ್ಲಿ ಮದುವೆಯಾಗಿದ್ದರು. ಅರುಣ್ ಮತ್ತು ಮಯೂರಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿಸಿ, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು.

     

    View this post on Instagram

     

    A post shared by mayuri (@mayurikyatari)

    ತನ್ನ ಮದುವೆ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಮಯೂರಿ, ಹೌದು ನಾನು ಮದುವೆಯಾದೆ ಎಂದು ಬರೆದು ಅವರ ಮದುವೆ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಮೊದಲು ಕಿರುತೆರೆಯ ಮೂಲಕ ನಟನೆಗೆ ಎಂಟ್ರಿಕೊಟ್ಟಿದ್ದ ಮಯೂರಿ ನಂತರ ಸಿನಿಮಾಗಳನ್ನು ಮಾಡಿ ಜನಮನ್ನಣೆ ಪಡೆದಿದ್ದರು. ನಟ ಅಜಯ್ ರಾವ್ ಅವರ ಜೊತೆ ‘ಕೃಷ್ಣ ಲೀಲಾ’ ಎಂಬ ಸಿನಿಮಾದಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು.