Tag: actress

  • ನಟಿ ಲೀಲಾವತಿ ಮನೆಗೆ ಭೇಟಿ ಕೊಟ್ಟ ನಟಿಯರು

    ನಟಿ ಲೀಲಾವತಿ ಮನೆಗೆ ಭೇಟಿ ಕೊಟ್ಟ ನಟಿಯರು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ಕಲಾವಿದೆ ಲೀಲಾವತಿ ಅವರ ಮನೆಗೆ ಸ್ಯಾಂಡಲ್‍ವುಡ್ ಸ್ಟಾರ್ ನಟಿಯರು ಭೇಟಿ ಕೊಟ್ಟಿದ್ದಾರೆ.

    ಮತ್ತೊಂದು ಅವಿಸ್ಮರಣೆಯ ದಿನ ಎಂದು ಬರೆದುಕೊಂಡು ಹಿರಿಯ ನಟಿ ಜೊತೆಗೆ ಕೆಲವು ಸಮಯ ಕಳೆದಿರುವ ಸುಂದರ ಕ್ಷಣಗಳನ್ನು ನಟಿ ಶ್ರುತಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಾದಕ ನೋಟದಿಂದ ನಿದ್ದೆಗೆಡಿಸಿದ ನಟಿ ಶುಭ್ರ ಅಯ್ಯಪ್ಪ

    ಕಳೆದ ಕೆಲವು ದಿನಗಳ ಹಿಂದೆ ನಟಿ ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಲೀಲಾವತಿ ಅವರ ಮನೆಗೆ ಭೇಟಿಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಭಾರತಿ ವಿಷ್ಣು ವರ್ಧನ್, ಹೇಮಾ ಚೌಧರಿ, ಶ್ರುತಿ ಮೂವರು ಸೇರಿ ಹೋಗಿದ್ದಾರೆ ಪಾರ್ಟಿ ಮಾಡಿದ್ದಾರೆ.

     

    View this post on Instagram

     

    A post shared by Shruthi (@shruthi__krishnaa)

    ಹೇಮಾ ಚೌಧರಿ, ಲೀಲಾವತಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಶ್ರುತಿ, ಲೀಲಾವತಿ ಅವರ ಮನೆಯಲ್ಲಿ ಬಿರಿಯಾನಿ ಮಾಡಿ, ಊಟವನ್ನು ಬಡಿಸಿದ್ದಾರೆ. ನಂತರ ಲೀಲಾವತಿ ಅವರು ಒಂದು ಹಾಡನ್ನು ಹಾಡಿದ್ದಾರೆ. ಕೊನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

  • ಬೇಬಿ ಹಾಡಿಗೆ ಹೆಜ್ಜೆ ಹಾಕಿದ ಯಥರ್ವ್, ಐರಾ- ವೀಡಿಯೋ ನೋಡಿ

    ಬೇಬಿ ಹಾಡಿಗೆ ಹೆಜ್ಜೆ ಹಾಕಿದ ಯಥರ್ವ್, ಐರಾ- ವೀಡಿಯೋ ನೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರ ಮುದ್ದು ಮಕ್ಕಳು ಗೂಗಲ್‍ಗೆ ಅವಾಜ್ ಹಾಕಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಈ ವಾರವನ್ನು ನಾವು ಸಂಗೀತದೊಂದಿಗೆ ಆರಂಭಿಸೋಣ. ಕಳೆದ ಎರಡು ವರ್ಷದಿಂದ, ನಾನು ಪಣ ತೊಟ್ಟಿರುವ ಸಂಗೀತ ಎಂದು ಬರೆದುಕೊಂಡು ಮಕ್ಕಳು ಗೂಗಲ್‍ಗೆ ಅವಾಜ್ ಹಾಕುತ್ತಾ ಬೇಬಿ ಸಾಂಗ್ ಹಾಕಿ ಎಂದು ಹೇಳುತ್ತಾ ಕುಣಿದಿದ್ದಾರೆ. ಈ ವೀಡಿಯೋವನ್ನು ನಟಿ ತಮ್ಮ ಇನ್‍ಸ್ಟಾಗ್ರಾಮ್ ಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ಹಂಚಿಕೊಳ್ಳುತ್ತಿದ್ದಂತೆ ಮುದ್ದುಮಕ್ಕಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಗ್ಗಟ್ಟು ಇಲ್ಲದೆ 3 ಪಾಲಿಕೆಯಲ್ಲಿ ಸೋಲು – ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಡಿಕೆಶಿ ಚಾರ್ಜ್‍ಶೀಟ್

     

    View this post on Instagram

     

    A post shared by Radhika Pandit (@iamradhikapandit)

    ವೀಡಿಯೋದಲ್ಲಿ ಏನಿದೆ?
    ಏ ಗೂಗಲ್ ಪ್ಲೇ ಬೇಬಿ ಶಾರ್ಕ್ ಸಾಂಗ್ ಎಂದು ಯಥರ್ವ್ ಮೊದಲು ಹೇಳುತ್ತಾನೆ. ಅಲೆಕ್ಸಾಗೆ ಕೇಳಿಸುವುದಿಲ್ಲ. ನಂತರ ಯಥರ್ವ್ ಜೋರಾಗಿ ಕಿರುಚುತ್ತಾ ಗೂಗಲ್‍ಗೆ ಅವಾಜ್ ಹಾಕಿದ್ದಾನೆ. ಏ ಗೂಗಲ್ ಪ್ಲೇ ಬೇಬಿ ಶಾರ್ಕ್ ಸಾಂಗ್ ಎಂದು. ಆಗ ತಕ್ಷಣ ಬೇಬಿ ಸಾಂಗ್ ಪ್ಲೇ ಆಗುತ್ತಿದ್ದಂತೆ ಯಥರ್ವ್ ಕುಣಿದು ಕುಪ್ಪಳಿಸಿದ್ದಾನೆ. ಈ ಮಧ್ಯೆ ಯಥರ್ವ್ ಜೊತೆಗೆ ಐರಾ ಬಂದು ಡಾನ್ಸ್ ಮಾಡುವುದಕ್ಕೆ ಶರುಮಾಡಿದ್ದಾಳೆ, ಅಕ್ಕ-ತಮ್ಮ ಇಬ್ಬರು ಜೊತೆಯಾಗಿ ಮುದ್ದಾಗಿ ಹೆಜ್ಜೆ ಹಾಕಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಸದ್ಯ ರಾಧಿಕಾ ಪಂಡಿತ್ ಸಿನಿಮಾದಿಂದ ದೂರ ಉಳಿದಿದ್ದು ಮಕ್ಕಳ ಲಾಲನೆ-ಪೋಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಮಕ್ಕಳ ಮುದ್ದಾದ ವೀಡಿಯೋವನ್ನು ಆಗಾಗ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.

  • ತುಂಡುಡುಗೆ ತೊಟ್ಟು ಕಡಲ ತೀರದಲ್ಲಿ ನಿಂತ ಶ್ವೇತಾ ಶ್ರೀವಾತ್ಸವ್

    ತುಂಡುಡುಗೆ ತೊಟ್ಟು ಕಡಲ ತೀರದಲ್ಲಿ ನಿಂತ ಶ್ವೇತಾ ಶ್ರೀವಾತ್ಸವ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ವೇತಾ ಶ್ರೀವಾತ್ಸವ್ ತುಂಡುಡುಗೆ ತೊಟ್ಟು ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಕಡಲ ತೀರದಲ್ಲಿ ನಿಂತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ಶೇರ್ ಮಾಡಿಕೊಂಡಿದ್ದಾರೆ.

    ಶ್ವೇತಾ ಶ್ರೀವಾತ್ಸವ್ ಕುಟುಂಬದ ಜೊತೆಗೆ ಪ್ರವಾಸ ಮಾಡುತ್ತಿದ್ದಾರೆ. ಅವರ ಪ್ರವಾಸದ ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತುಂಡುಡುಗೆಯನ್ನು ತೊಟ್ಟ ಶ್ವೇತಾ ಶ್ರೀವಾತ್ಸವ್ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಜನ್ಮದಿನಾಚರಣೆಯ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

    ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ಕೆಲವು ದಿನಗಳ ಹಿಂದೆ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೀಗ ಮಗಳು ಹಾಗೂ ಗಂಡನ ಜೊತೆ ಕಡಲ ತೀರದಲ್ಲಿ ಸಖತ್ ಎಂಜಾಯ್ ಮಾಡುತ್ತಾ ಕಾಲ ಕಳೆದಿದ್ದಾರೆ. ತಂಡುಡುಗೆ ತೊಟ್ಟು ಕಡಲ ತೀರದಲ್ಲಿ ಆಡುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Shwetha Srivatsav (@shwethasrivatsav)

    ಸ್ಯಾಂಡಲ್‍ವುಡ್ ಸ್ಟಾರ್‌ಗಳ ಪೈಕಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟಿಯರಲ್ಲಿ ಶ್ವೇತಾ ಶ್ರೀವಾತ್ಸವ್ ಅವರು ಸದಾ ಮುಂದಿರುತ್ತಾರೆ. ವಾರದಲ್ಲಿ 2-3 ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಜೊತೆ ಸಂಪರ್ಕದಲ್ಲಿರುತ್ತಾರೆ.

    ಮಗಳ ಲಾಲನೆ-ಪಾಲನೆ ಜೊತೆ ಅಭಿನಯವನ್ನೂ ಮುಂದುವರೆಸುತ್ತಿರುವ ನಟಿ ಶ್ವೇತಾ ಶ್ರೀವಾತ್ಸವ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಗುವಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಶ್ವೇತಾ, ಮಗಳು ಅಶ್ಮಿತಾ ಜೊತೆ ಫೋಟೋಶೂಟ್‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  • ಜನ್ಮದಿನಾಚರಣೆಯ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

    ಜನ್ಮದಿನಾಚರಣೆಯ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಸೆಲೆಬ್ರೆಷನ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದ ಕ್ವೀನ್ ಎಂದೇ ಕರೆಸಿಕೊಳ್ಳುವ ನಟಿ ಶ್ವೇತಾ ಶ್ರೀವಾತ್ಸವ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪತಿ ಅಮಿತ್ ಶ್ರೀವಾತ್ಸವ್ ಮತ್ತು ಮಗಳು ಅಶ್ಮಿತಾ ಶ್ರೀ ವಾತ್ಸವ್ ಜೊತೆಗೆ ಸೆಲೆಬ್ರೆಟ್ ಮಾಡಿದ್ದಾರೆ. ಸಂತೋಷದ ಕ್ಷಣಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡು ನಿಮ್ಮ ಶುಭಹಾರೈಕೆಗೆ ಪ್ರೀತಿಯ ಧನ್ಯವಾದಗಳು ಎಂದು ಬರೆದುಕೊಂಡು ಮುದ್ದಾದ ಕೆಲವು ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಅಂದರ್

     

    View this post on Instagram

     

    A post shared by Shwetha Srivatsav (@shwethasrivatsav)

    35ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸ್ಯಾಂಡಲ್‍ವುಡ್ ಸ್ಟಾರ್‍ಗಳ ಪೈಕಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟಿಯರಲ್ಲಿ ಶ್ವೇತಾ ಶ್ರೀವಾತ್ಸವ ಅವರು ಸದಾ ಮುಂದಿರುತ್ತಾರೆ. ವಾರದಲ್ಲಿ 2-3 ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಜೊತೆ ಸಂಪರ್ಕದಲ್ಲಿರುತ್ತಾರೆ. ಇದನ್ನೂ ಓದಿ: ಮಹಿಳೆಯರ ಲೇಟೆಸ್ಟ್ ಚೋಕರ್ ನೆಕ್ಲೆಸ್ ಡಿಸೈನ್‍ಗಳು

     

    View this post on Instagram

     

    A post shared by Shwetha Srivatsav (@shwethasrivatsav)

    ಮಗುವಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಶ್ವೇತಾ, ಮಗಳು ಅಶ್ಮಿತಾ ಜೊತೆ ಫೋಟೋಶೂಟ್‍ಗಳಲ್ಲಿ ಟ್ವಿನ್ನಿಂಗ್ ಮಾಡುತ್ತಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

  • ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಿಸಿದ ಅನಿತಾ ಭಟ್

    ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಿಸಿದ ಅನಿತಾ ಭಟ್

    ಬೆಂಗಳೂರು: ಟ್ರೋಲಿಗರ ವಿರುದ್ಧವಾಗಿ ಸ್ಯಾಂಡಲ್‍ವುಡ್ ನಟಿ ಅನಿತಾ ಭಟ್ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

    ನಟಿ ಮಾಡುವ ಟ್ವೀಟ್‍ಗೆ ಬ್ಯಾಡ್ ಕಮೆಂಟ್ ಮತ್ತು ಟ್ರೋಲ್ ಮಾಡುವ ಹಲವರ ವಿರುದ್ಧವಾಗಿ ಸೈಬರ್ ಕ್ರೈಂಗೆ ನಟಿ ದೂರು ನೀಡಿದ್ದಾರೆ. ಟ್ರೋಲರ್ಸ್ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಅದರಲ್ಲೂ ನಟಿಯರು ಅಂದ್ರೆ ಟಾರ್ಗೆಟ್ ಮಾಡುತ್ತಾರೆ. ಈ ಬಗ್ಗೆ ಅನಿತಾ ಭಟ್ ಯಲಹಂಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಈ ಕುರಿತಾಗಿ ಕಂಪ್ಲೆಂಟ್ ಕಾಫಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಏನಿದೆ?
    ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ anitha bhat ಎಂಬ ಖಾತೆಯನ್ನು ಹೊಂದಿದ್ದು, ಸದರಿ ಖಾತೆಯಿಂದ ಹಲವು ಟ್ವೀಟ್ ಗಳನ್ನು ಮಾಡಲಾಗಿದೆ. ಟ್ವೀಟ್‍ಗಳಿಗೆ ಯಾರೋ ಅಪರಿಚಿತ ಅಸಾಮಿ ಕೆಟ್ಟದಾಗಿ ಟ್ವೀಟ್ ಮಾಡುತ್ತಿದ್ದು, ಈ ರೀತಿಯಾಗಿ ಮಾಡುತ್ತಿರುವ ಸದರ ಆಸಾಮಿಯನ್ನು ಪತ್ತೆ ಮಾಡಿ ಠಾಣೆಗೆ ಕರೆಯಿಸಿ ಸೂಕ್ತ ತಿಳುವಳಿಕೆಯನ್ನು ನೀಡಿ ಇನ್ನೊಮಮ್ಮೆ ಹೀಗೆ ಮಾಡದ ಹಾಗೆ ಬಂದೋಬಸ್ತ್ ಮಾಡಿಕೊಡಬೇಕೆಂದು ದೂರಿನಲ್ಲಿದೆ. ಇದನ್ನೂ ಓದಿ: ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್

    ಈ ಹಿಂದೆ ಅನಿತಾ ಭಟ್ ಟ್ವೀಟ್‍ನಲ್ಲಿ, ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ವೀಕ್ಷಕರು ಗೋಡ್ಸೆ ಜಿಂದಾಬಾದ್ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದೇವಿ ಸೇವೆಗೆ ದುಬಾರಿ ಶುಲ್ಕ-ಭಕ್ತರ ಆಕ್ರೋಶ

    ನಟಿ ಮುಂದುವರಿದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು ಎಂದು ಅನಿತಾ ಭಟ್ ಹೇಳಿದ್ದಾರೆ. ಇದನ್ನೂ ಓದಿ: ಘೋಲ್ ಮೀನು ಹಿಡಿದು ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಮೀನುಗಾರ

    ಮುಂದೆ ನೆಗೆಟಿವ್ ಕಾಮೆಂಟ್ ಬರುತ್ತಿರುವುದನ್ನು ಗಮನಿಸಿದ ಅವರು, ನನ್ನ ಟ್ವಿಟ್ಟರ್, ಪೋಸ್ಟ್ ಮಾಡುವುದು ನನ್ನ ಆಯ್ಕೆ. ನನ್ನ ಅಭಿಪ್ರಾಯವನ್ನು ನಿಮ್ಮ ಕೆಟ್ಟ ಕಾಮೆಂಟ್‍ಗಳು ಬದಲಾಯಿಸುವುದಿಲ್ಲ. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಷ್ಟೊತ್ತಿಗೆ. ಎಷ್ಟು ಬೇಕಾದ್ರೂ ಗಂಟಲು ಹರ್ಕೊಳಿ ಹೋಗಿ ಎಂದು ಗರಂ ಆಗಿ ಉತ್ತರಿಸಿದ್ದರು. ಇದೀಗ ಟ್ರೋಲ್ ಮಾಡುವ ಮತ್ತು ಕೆಟ್ಟದಾಗಿ ಕಮೆಂಟ್ ಮಾಡುವರ ವಿರುದ್ಧ ದೂರು ದಾಖಲಿಸಿದ್ದಾರೆ.

  • ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಸಾಮಾಜಿಕ ಕಳಕಳಿಯುತವಾದ ಅವರ ಕೆಲವು ವಿಚಾರಧಾರೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇವರು ಇಂದು ಹೇಳಿರುವ ವಿಚಾರ ತುಂಬಾ ಗಂಭೀರ ಮತ್ತು ಜಾಗೃತಿಯನ್ನು ಮೂಡಿಸುತ್ತಿದೆ.

    ಮಹಿಳೆಯ ಮೇಲೆ ಪುರುಷನು ಮಾಡುವ ಪ್ರತಿಯೊಂದು ಅಪರಾಧಕ್ಕೂ ನಾವು ಯಾವಾಗಲೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತೇವೆ. ಅದು ಅತ್ಯಾಚಾರವಾಗಲಿ ಅಥವಾ ಆತ ನಿಮ್ಮನ್ನು ದೈಹಿಕವಾಗಿ ಅಥವಾ ಮೌಖಿಕವಾಗಿ ನಿಂದಿಸುತ್ತಿರಲಿ. ನಾವು ಇದನ್ನು ಆಗಾಗ್ಗೆ ಕೇಳುತ್ತೇವೆ. ಇದು ನಿಮ್ಮ ತಪ್ಪು, ನೀವು ಹಾಗೆ ಹೇಳಬಾರದಿತ್ತು, ನೀವು ಅದನ್ನು ಮಾಡಬಾರದಿತ್ತು ಅಂತ ಹೇಳುತ್ತಾರೆ.

     

    View this post on Instagram

     

    A post shared by Ramya/Divya Spandana (@divyaspandana)

    ನೀವು ಅದನ್ನು ಧರಿಸಬಾರದು, ತುಂಬಾ ಬಿಗಿಯಾಗಿ, ತುಂಬಾ ಚಿಕ್ಕದಾಗಿ, ತುಂಬಾ ಆಕರ್ಷಕವಾಗಿ, ತುಂಬಾ ಉದ್ದವಾಗಿ ಧರಿಸಬಾರದು ಅಂತಾರೆ. ತಡವಾಗಿ ಹೊರಗೆ ಹೋದ್ರೆ, ಹೊರಗೆ ಹೋಗಬಾರದಿತ್ತು, ನೀನು ಮೇಕಪ್ ಧರಿಸಬಾರದಿತ್ತು, ಏಕೆ ಕೆಂಪು ಲಿಪ್‌ ಸ್ಟಿಕ್, ಏಕೆ ಕಲರ್ ಫುಲ್, ನೀವು ಕಣ್ಣು ಮಿಟುಕಿಸಬಾರದಿತ್ತು ಅಂತಾರೆ. ನಿಮಗೆ ಇದು ಇರಬಾರದು, ಅದು ಇರಬಾರದು ಎಂದು ಏಕೆ ಹೇಳುತ್ತಾರೆ. ಏಕೆಂದರೆ ಪುರುಷರು ಪುರುಷರಾಗುತ್ತಾರೆ, ನಾವು ರಾಜಿ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕಾ? ಇಲ್ಲ ಇಲ್ಲ ಈ ಅಸಂಬದ್ಧತೆಗೆ ಪೂರ್ಣವಿರಾಮ ಹಾಕಬೇಕು ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ ಮಾತನಾಡಿ ಎಂದು ಬರೆದು ಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಒಂದು ಫೋಟೋವನ್ನು ಹಾಕಿಕೊಂಡಿದ್ದಾರೆ. ಇದನ್ನೂ ಓದಿ:  ಸೋನು ಸೂದ್ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್: ಅರವಿಂದ್ ಕೇಜ್ರಿವಾಲ್

    ಸಿನಿಮಾ, ರಾಜಕೀಯದಿಂದ ದೂರ ಇರುವ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ರಮ್ಯಾ ಅವರು ತಮ್ಮ ಕೆಲವು ವಿಚಾರ, ಅನಿಸಿಕೆ, ಜಾಗೃತಿ, ಸಾಮಾಜಿಕ ಕಳಕಳಿಯ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಬರೆದುಕೊಳ್ಳುತ್ತಿರುತ್ತಾರೆ. ಇದೀಗ ಮಹಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಿ ಧ್ವನಿಯನ್ನು ಎತ್ತಿದ್ದಾರೆ.

  • ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

    ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟಿ ಜಯಂತಿ(76) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಯಲ್ಪಡುವ ಜಯಂತಿ ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿ ಆಗಿದ್ದರು. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

    ಬನಶಂಕರಿಯ ಸ್ವಗ್ರಹದಲ್ಲಿ  ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಜಯಂತಿ ಅವರು ಬೆಳಗ್ಗೆ ಎದ್ದೇಳಲೇ ಇಲ್ಲ, ರಾತ್ರಿ ಹೇಗೆ ಈ ಘಟನೆ ಸಂಭವಿಸಿತು ಗೊತ್ತಿಲ್ಲ. ಬೆಳಗ್ಗೆ ಎದ್ದೇಳಿಸೋಕೆ ನೋಡಿದೆವು ನಮಗೆ ಆಗಲೇ ತಿಳಿದಿದ್ದು, ಹೃದಯಾಘಾತವಾಗಿರಬಹುದೇನೋ ಗೊತ್ತಿಲ್ಲ. ಮುಂದಿನ ಕಾರ್ಯಗಳ ಬಗ್ಗೆ ಈಗೇನೂ ಗೊತ್ತಾಗ್ತಾ ಇಲ್ಲ ಎಂದು  ಜಯಂತಿ ಪುತ್ರ ಕೃಷ್ಣ ಕುಮಾರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‍ನಲ್ಲಿ ಬೆಳೆದರು.

    ಜಯಂತಿಯ ತಾಯಿಯವರಿಗೆ ಇವರನ್ನು ಶಾಸ್ತ್ರೀಯ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ಬಯಕೆ ಇದ್ದುದ್ದರಿಂದ ಚಂದ್ರಕಲಾರವರ ನೃತ್ಯಶಾಲೆಗೆ ಸೇರಿಸಿದರು. ಇಲ್ಲಿ ಜಯಂತಿಯವರ ಸಹಪಾಠಿಯಾಗಿದ್ದ ಮನೋರಮಾರವರು ಮುಂದೆ ಪ್ರಖ್ಯಾತ ತಮಿಳು ನಟಿಯಾದರು. ಕನ್ನಡ ನಿರ್ದೇಶಕ ವೈ.ಆರ್.ಪುಟ್ಟಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನು ನೋಡಿ ತಮ್ಮ `ಜೇನು ಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಇಲ್ಲಿಂದ ಜಯಂತಿಯವರ ಅದೃಷ್ಟವೇ ಬದಲಾಯಿತು. ಕಮಲಾ ಕುಮಾರಿಗೆ ಜಯಂತಿ ಎಂದು ನಾಮಕರಣ ಮಾಡಿದ್ದು ಪುಟ್ಟಸ್ವಾಮಿಯವರೇ. ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ.

  • ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ

    ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ

    ಮುಂಬೈ: ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಖ್ಯಾತ ನಟಿ ಸುರೇಖಾ ಸಿಕ್ರಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ನಟಿ ಸುರೇಖಾ ಸಿಕ್ರಿ( 75) ವಯಸ್ಸಾಗಿತ್ತು. ಸುರೇಖಾ ಸಿಕ್ರಿಯವರು ಬಧಾಯಿ ಹೊ (Badhaai Ho) ಚಿತ್ರ ಹಾಗೂ ಬಾಲಿಕಾ ವಧು ಧಾರವಾಹಿಗಳ ಪಾತ್ರಗಳಿಂದ ಮನೆಮಾತಾಗಿದ್ದರು. ಸಿಕ್ರಿಯವರು ಕೆಲಕಾಲದಿಂದ ಅನಾರೋಗ್ಯಕ್ಕೀಡಾಗಿದ್ದರು. ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದನ್ನೂ ಓದಿ: ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ – ಅಧಿಕಾರಿಗಳಿಂದ ಶೋಭಾ ಮಾಹಿತಿ ಕಲೆ

    1978ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಅವರ ಮೊದಲ ಚಿತ್ರ- ಕಿಸ್ಸಾ ಕುರ್ಸಿ ಕಾ ನಂತರದಲ್ಲಿ ಅವರು ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ಸತತವಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಹೋದರು. ಅದೇ ಸಮಯದಲ್ಲಿ ಅವರು ಹಿಂದಿಯ ಧಾರವಾಹಿಗಳಲ್ಲೂ ಕಾಣಿಸಿಕೊಂಡರು. ತಮಸ್, ಮಮ್ಮೂ, ಜುಬೈದಾ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಧಾರವಾಹಿ ಬಾಲಿಕಾ ವಧು ಸಿಕ್ರಿಯವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. 2018ರಲ್ಲಿ ಆಯುಷ್ಮಾನ್ ಖುರಾನಾ ನಟಿಸಿದ ಬಧಾಯಿ ಹೊ ಚಿತ್ರದಲ್ಲಿ ಅಜ್ಜಿಯಾಗಿ ನಟಿಸಿದ ಅವರ ಪಾತ್ರ ಅಪಾರ ಜನಮೆಚ್ಚುಗೆ ಪಡೆದಿತ್ತು. ಇದನ್ನೂ ಓದಿ: ಸಾಲ ತೀರಿಸಲು ಕಿಡ್ನಿ ಮಾರಾಟಕ್ಕೆ ಮುಂದಾದ ದಂಪತಿ- 40 ಲಕ್ಷ ಕಳೆದುಕೊಂಡ್ರು

    ಸುರೇಖಾ ಸಿಕ್ರಿಯವರು 2019, 1995 ಹಾಗೂ1988ರಲ್ಲಿ ತಮ್ಮ ಅತ್ಯುತ್ತಮ ನಿರ್ವಹಣೆಗಾಗಿ ಉತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಇದರೊಂದಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ತಮ್ಮ ಕಿರುತೆರೆ ವೃತ್ತಿ ಬದುಕಿನ ಸಾಧನೆಗಾಗಿಯೂ ಅವರು ಇಂಡಿಯನ್ ಟೆಲಿ ಜ್ಯೂರಿ ಅವಾರ್ಡ್ ಅನ್ನು ಹಲವು ಬಾರಿ ಪಡೆದಿದ್ದಾರೆ. ಇದನ್ನೂ ಓದಿ: ಕಾಲಿಗೆ ಮಾಸ್ಕ್ ಸಿಕ್ಕಿಸಿಕೊಂಡು ಟ್ರೋಲ್ ಆದ ಸಚಿವ

  • ರಶ್ಮಿಕಾರನ್ನು ನೋಡಲು ತೆಲಂಗಾಣದಿಂದ ಬಂದು ಪೇಚಿಗೆ ಸಿಲುಕಿದ ಅಭಿಮಾನಿ..!

    ರಶ್ಮಿಕಾರನ್ನು ನೋಡಲು ತೆಲಂಗಾಣದಿಂದ ಬಂದು ಪೇಚಿಗೆ ಸಿಲುಕಿದ ಅಭಿಮಾನಿ..!

    ಮಡಿಕೇರಿ: ಕೊಡಗಿನ ಕುವರಿ, ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಬಂದ ಅಭಿಮಾನಿಯೋರ್ವ ಪೇಚಿಗೆ ಸಿಲುಕಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಅಭಿಮಾನಿಯನ್ನು ಆಕಾಶ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ತೆಲಂಗಾಣ ಮೂಲದವನಾಗಿರುವ ಈತ ತನ್ನ ನೆಚ್ಚಿನ ನಟಿಯನ್ನು ನೋಡಲು ಶುಕ್ರವಾರ ರಾತ್ರಿ ಕೊಡಗಿನ ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮಕ್ಕೆ ಬಂದಿದ್ದಾನೆ.

    ಮೈಸೂರಿನವರೆಗೆ ರೈಲಿನಲ್ಲಿ ಬಂದಿರುವ ಆಕಾಶ್, ಬಳಿಕ ವಿರಾಜಪೇಟೆಗೆ ತರಕಾರಿ ತೆಗೆದುಕೊಂಡು ಹೋಗುವ ಗೂಡ್ಸ್ ಆಟೋದಲ್ಲಿ ವಿರಾಜಪೇಟೆ ತಲುಪಿದ್ದಾನೆ. ಅಲ್ಲಿಂದ ವಿರಾಜಪೇಟೆ ನಗರದಿಂದ ಗೂಗಲ್ ಮ್ಯಾಪ್ ಹಾಕಿಕೊಂಡು ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಎಂಬವರಿಗೆ ಸೇರಿದ ಜಾಗ ಇದ್ದು, ಇಲ್ಲೇ ರಶ್ಮಿಕಾ ಮಂದಣ್ಣ ಮನೆ ಇರಬೇಕು ಅಂದುಕೊಂಡು ಆಟೋದಲ್ಲಿ ಗ್ರಾಮಕ್ಕೆ ಬಂದಿಳಿದಿದ್ದಾನೆ. ನಂತರ ಅಕ್ಕಪಕ್ಕದ ಜನರ ಬಳಿ ರಶ್ಮಿಕಾ ಮಂದಣ್ಣ ಮನೆ ಎಲ್ಲಿ ಎಂದು ವಿಚಾರಿಸಿ ಹುಡುಕಾಟ ನಡೆಸಿದ್ದಾನೆ. ಇದನ್ನೂ ಓದಿ: ಸಂಜೆ ತಿಂಡಿಗೆ ಮಾಡಿ ಬ್ರೆಡ್ ವಡೆ

    ಈತನ ನಡವಳಿಕೆ ಕಂಡ ಮಗ್ಗುಲ ಗ್ರಾಮಸ್ಥರು ವಿರಾಜಪೇಟೆ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಆತನನ್ನು ವಿಚಾರಿಸಿದಾಗ ಇಂಗ್ಲಿಷ್‍ನಲ್ಲಿ ಮಾತನಾಡಿದ್ದಾನೆ. ಅಲ್ಲದೆ ಆತ ನಾನು ಈಗಲೇ ರಶ್ಮಿಕಾ ಮಂದಣ್ಣನನ್ನು ಭೇಟಿಯಾಗಬೇಕೆಂದು ಬಂದಿದ್ದೇನೆ. ನಾನು ಅವರ ಅಪ್ಪಟ ಅಭಿಮಾನಿ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

    ಪೊಲೀಸರು ಆತನ ವಿಚಾರಣೆ ನಡೆಸಿ ಕೊರೋನಾ ಸಂದರ್ಭದಲ್ಲಿ ಹೀಗೆಲ್ಲ ಬರಬಾರದು ಎಂದು ಎಚ್ಚರಿಕೆ ನೀಡಿ ತೆಲಂಗಾಣಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

  • ಮುಖಕ್ಕೆ ಎಂಜಲು ಹಚ್ಚಿಕೊಳ್ಳುತ್ತೇನೆ: ಮಿಲ್ಕಿ ಬ್ಯೂಟಿ ತಮನ್ನಾ

    ಮುಖಕ್ಕೆ ಎಂಜಲು ಹಚ್ಚಿಕೊಳ್ಳುತ್ತೇನೆ: ಮಿಲ್ಕಿ ಬ್ಯೂಟಿ ತಮನ್ನಾ

    ಮುಂಬೈ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಸೌಂದರ್ಯದ ಗುಟ್ಟನ್ನು ಹೇಳಿದ್ದಾರೆ. ಆದರೆ ಕೋಮಲವಾದ ತಮ್ಮ ತ್ವಚೆಯ ಸೀಕ್ರೆಟ್‍ಅನ್ನು ಹೇಳಿ ಅಭಿಮಾನಿಗಳು ಆಶ್ಚರ್ಯವ್ಯಕ್ತಪಡಿಸಿದ್ದಾರೆ.

    ಸಿನಿರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ತಮನ್ನಾ ಭಾಟಿಯಾ ಅವರ ಬ್ಯೂಟಿ ಸೀಕ್ರೆಟ್ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ನುಣುಪಾದ ತ್ವಚೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಅಭಿಮಾನಿಗಳು ಮಾತ್ರ ನಟಿ ಮಣಿಯ ಸೌಂದರ್ಯದ ಗುಟ್ಟನ್ನು ಕೇಳಿ ಸಖತ್ ಶಾಖ್ ಆಗಿದ್ದಾರೆ.

     

    View this post on Instagram

     

    A post shared by Tamannaah Bhatia (@tamannaahspeaks)

    ಮೊಡವೆ ಸಮಸ್ಯೆ ಇತ್ತು. ಅದನ್ನು ಹೋಗಲಾಡಿಸಲು ತುಂಬ ರೀತಿಯ ಪ್ರಯತ್ನ ಮಾಡಿದೆ. ಕೊನೆಗೆ ನನ್ನ ಮುಖಕ್ಕೆ ನಾನು ಹಚ್ಚಿದ ಅತೀ ವಿಚಿತ್ರ ವಸ್ತು ಎಂದರೆ ಅದು ನನ್ನ ಎಂಜಲಾಗಿದೆ. ಮುಖ್ಯವಾಗಿ ಬೆಳಗಿನಜಾವದ ಸಮಯದಲ್ಲಿ ಬರುವ ಎಂಜಲನ್ನು ಮುಖಕ್ಕೆ ಹಚ್ಚಿಕೊಂಡಿದ್ದೇನೆ. ಕಾರಣ, ಅದಕ್ಕೆ ಮೊಡವೆಗಳನ್ನು ಒಣಗಿಸುವ ಸಾಮಥ್ರ್ಯವಿದೆ. ಈ ಬಗ್ಗೆ ಕೇಳುವುದಕ್ಕೆ ನಿಮಗೆಲ್ಲ ತುಂಬ ವಿಚಿತ್ರ ಎನಿಸಬಹುದು. ಆದರೆ ಇದು ತುಂಬ ಪರಿಣಾಮಕಾರಿಯಾಗಿದೆ. ಕೂದಲ ಆರೈಕೆ ಸಹ ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಮಾಡುತ್ತೇನೆ ಎಂದು ಮಿಲ್ಕಿ ಬ್ಯೂಟಿ ಹೇಳಿಕೊಂಡಿದ್ದಾರೆ.

     

    View this post on Instagram

     

    A post shared by Tamannaah Bhatia (@tamannaahspeaks)

    ತಮನ್ನಾಳ ಸೌಂದರ್ಯದ ಗುಟ್ಟನ್ನು ಕೇಳಿದ ಬಹುತೇಕರು ಇದನ್ನು ನಂಬುವುದಕ್ಕೂ ಸಿದ್ಧರಿಲ್ಲ. ಆದರೆ, ಇನ್ನೂ ಕೆಲವರು, ಇದು ನಿಜವಿದ್ದರೂ ಇರಬಹುದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಮಿಲ್ಕಿ ಬ್ಯೂಟಿಯ ಸೌಂದರ್ಯ ರಹಸ್ಯವನ್ನು ತಿಳಿದ ಅನೇಕ ಅಭಿಮಾನಿಗಳು ಹೀಗೂ ನಮ್ಮ ಸೌಂದರ್ಯ ಕಾಪಡಿಕೊಳ್ಳಬಹುದಾ ಎಂದು ಹೇಳುತ್ತಿದ್ದಾರೆ. ಸದ್ಯ ಸಿನಿಮಾ ಮತ್ತು ವೆಬ್ ಸಿರೀಸ್ ಮಾಡುವುದರಲ್ಲಿ ತಮನ್ನಾ ಸಖತ್ ಬ್ಯುಸಿ ಆಗಿದ್ದಾರೆ. ಗೋಪಿಚಂದ್ ಜೊತೆಗೆ ಸೀಟಿ ಮಾರ್, ನಿತಿನ್ ನಟನೆಯ ಮ್ಯಾಸ್ಟ್ರೋ, ಕನ್ನಡ ಲವ್ ಮಾಕ್‍ಟೇಲ್ ರಿಮೇಕ್ ಆದ ಗುತುರ್ಂದ ಸೀತಕಾಲಂ, ಸೇರಿದಂತೆ ಸಾಕಷ್ಟು ಸಿನಿಮಾಗಳು ತಮನ್ನಾ ಕೈಯಲ್ಲಿವೆ.