-ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ
ಬೆಂಗಳೂರು: ವಯೋಸಹಜವಾದ ಕಾಯಿಲೆಯಿಂದ ಇಂದು ತಾಯಿಯನ್ನು ಕಳೆದುಕೊಂಡಿರುವ ನಟಿ ವಿಜಯಲಕ್ಷ್ಮಿ ಅವರು ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ ಎಂದು ತಮ್ಮ ದುಃಖವನ್ನು ತೊಡಿಕೊಂಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೆನ್ನೈಯಲ್ಲಿ ಸಮಸ್ಯೆ ಆಗಿ ತಾಯಿ, ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದೇನೆ. ಅಕ್ಕ, ತಾಯಿ ನನ್ನ ಮಕ್ಕಳ ಸಮವಾಗಿದ್ದಾರೆ. ಬೆಳಗ್ಗೆ 12 ಗಂಟೆಗೆ ಅಮ್ಮನಿಗೆ ನೋಡಿ ಆಘಾತ ಆಯಿತು. ಕೂಡಲೇ ಹೋಟೆಲ್ ಅವರನ್ನು ಕರೆದು ನೋಡಿದಾಗ ಅವರು ಇನ್ನಿಲ್ಲ ಅಂತ ತಿಳಿಯಿತು. ಕೂಡಲೇ ಬಾ. ಮಾ ಹರೀಶ್ ಅವರಿಗೆ ತಿಳಿಸಿದೆ, ಅವರು ಬಂದು ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ತಾಯಿ ನಿಧನ

ಸಾಕಷ್ಟು ಹೊಡೆತ ತಿಂದಿದ್ದೇನೆ, ನೀವೆಲ್ಲ ಜೊತೆಗೆ ಇದ್ದೀರಾ. ಅನಾಥ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸುತ್ತೇವೆ. ನನ್ನ ಅಕ್ಕ ಉಷಾ ಅವರಿಗೆ ಚಿಕಿತ್ಸೆ ಕೊಡಬೇಕು. ನನ್ನ ಅಕ್ಕನಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಮಾತನಾಡೋದು ಒರಟು ಅನ್ನಿಸಬಹುದು. ಅಕ್ಕನಿಗೆ ಎಲ್ಲಾ ರೀತಿಯ ಸೇವೆ ನಾನು ಮಾಡುತ್ತಿದ್ದೇನೆ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್ ಮಾಡಿದ್ದು ರೈತರಲ್ಲ, ಮಧ್ಯವರ್ತಿಗಳು: ನಾರಾಯಣಗೌಡ

ಅಮ್ಮ ಬಿಟ್ಟು ಹೋದ ಮೇಲೆ ನಾನು ಬದಲಾಗುತ್ತೇನೆ. ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ ಇಲ್ಲೇ ಜೀವನ ಸಾಗಿಸುತ್ತೇನೆ. ಅಕ್ಕನಿಗೆ ಸಮಸ್ಯೆ ಆದ ಮೇಲೆ ಅಮ್ಮ ಮಾನಸಿಕವಾಗಿ ನೊಂದಿದ್ದರು. ನೀವೆಲ್ಲಾ ಇದ್ದೀರ, ನಾನು ಧೈರ್ಯವಾಗಿ ಇರುತ್ತೇನೆ ಎಂದು ಹೇಳುತ್ತಾ ತಾಯಿ ಅಗಲಿರುವ ನೋವನ್ನು ಹೇಳಿಕೊಂಡಿದ್ದಾರೆ.











ಇದನ್ನು ಗಮನಿಸಿದ್ದ ಉತ್ತರ ಕನ್ನಡ ಜಿಲ್ಲೆಯ ದೀಪಾ ತುಕರಾಮ್ ನಾಯ್ಕ ಅವರು, ಫೇಸ್ ಬುಕ್ ಮೂಲಕ ವಿಜಯಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಅವರ ಆಸ್ಪತ್ರೆ ಬಿಲ್ ಮೊತ್ತ 30,000 ರೂಪಾಯಿಯನ್ನು ತಾವೇ ಭರಿಸಿದ್ದರು. ನಂತರ ಹೊನ್ನಾವರದ ಕರ್ಕಿಯಲ್ಲಿದ್ದ ತಂದೆ ತುಕಾರಾಮ್ ಅವರಿಗೆ ಕರೆ ಮಾಡಿ ಮನೆಯ ವ್ಯವಸ್ಥೆ ಮಾಡಲು ತಿಳಿಸಿದ್ದರು. ಆದರಂತೆ ತುಕಾರಾಮ್ ಕರ್ಕಿಯಲ್ಲಿ ತಮ್ಮದೇ ವೆಚ್ಚದಲ್ಲಿ ನಾಲ್ಕು ಸಾವಿರ ರೂಪಾಯಿಗೆ ಬಾಡಿಗೆ ಮನೆ ಮಾಡಿ ಅವರ ಕುಟುಂಬವನ್ನು ತಮ್ಮದೇ ವೆಚ್ಚದಲ್ಲಿ ಆರು ದಿನಗಳ ಕಾಲ ನೋಡಿಕೊಂಡಿದ್ದಾರೆ. ಇದನ್ನೂ ಓದಿ:
ಬಂದಾಗಿನಿಂದ ಕಿರಿಕ್ ಮಾಡಿಕೊಂಡು ತಾಯಿ ಅಕ್ಕನನ್ನು ವಿಜಯಲಕ್ಷ್ಮಿ ಸರಿಯಾಗಿ ಗಮನಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಕರ್ಕಿಗೆ ಬಂದಾಗಿನಿಂದ ಕಿರಿಕ್ ಮಾಡಿಕೊಂಡಿದ್ದ ವಿಜಯಲಕ್ಷ್ಮಿ, ಹಾಸಿಗೆಯಲ್ಲಿಯೇ ಇರುವ ಅಕ್ಕ, ತಾಯಿಯನ್ನು ನೋಡಿಕೊಳ್ಳುತ್ತಿರಲಿಲ್ಲ. ಅಕ್ಕ, ತಾಯಿಯ ಶೌಚ, ಸ್ವಚ್ಛ ಮಾಡುವುದು, ಊಟ ಮಾಡಿಸುವುದು ಸಹ ತುಕಾರಾಮ್ ಅವರ ಮನೆಯವರು ಹಾಗೂ ಅವರ ಮನೆಯ ಕೆಲಸದವರು ಮಾಡಿದ್ದಾರೆ.
ವಿಜಯಲಕ್ಷ್ಮಿ ಪರಿಸ್ಥಿತಿ ನೋಡಿ, ತಾಯಿ ಮತ್ತು ಅಕ್ಕನನ್ನು ಇಲ್ಲಿಯೇ ಬಿಡಿ, ಇಲ್ಲಿ ಆಶ್ರಮ ಇದೆ ನಾನು ಇರುತ್ತೇನೆ ನೋಡಿಕೊಳ್ಳುತ್ತೇನೆ. ನೀವು ಬೆಂಗಳೂರಿಗೆ ಹೋಗಿ ಸಿನಿಮಾದಲ್ಲಿ ಅವಕಾಶ ಪಡೆದು ನಿಮ್ಮ ವೃತ್ತಿ ಮುಂದುವರಿಸುವಂತೆ ತುಕರಾಮ್ ಹೇಳಿದ್ದಾರೆ. ಆದರೆ ಆದಕ್ಕೆ ಒಪ್ಪದ ವಿಜಯಲಕ್ಷ್ಮಿ ನನ್ನ ತಾಯಿ, ಅಕ್ಕ ನನ್ನೊಂದಿಗೆ ಇರುತ್ತಾರೆ. ಅವರನ್ನು ಬಿಟ್ಟು ಇರುವುದಿಲ್ಲ ಎಂದು ತಾಯಿ ಮತ್ತು ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿದ್ದಾರೆ.













