Tag: actress

  • ನನಗೆ ಅಕ್ರಮ ಸಂಬಂಧ ಇಲ್ಲ- ಟ್ರೋಲಿಗರ ವಿರುದ್ಧ ಕುಟುಕಿದ ಸಮಂತಾ

    ನನಗೆ ಅಕ್ರಮ ಸಂಬಂಧ ಇಲ್ಲ- ಟ್ರೋಲಿಗರ ವಿರುದ್ಧ ಕುಟುಕಿದ ಸಮಂತಾ

    ಹೈದರಾಬಾದ್: ಟಾಲಿವುಡ್‍ನ ಕ್ಯೂಟ್ ಕಪಲ್ ಎಂದೇ ಕರೆಸಿಕೊಳ್ಳುತ್ತಿದ್ದ ಸಮಂತಾ, ನಾಗಚೈತನ್ಯ ವಿಚ್ಛೇದನ ಪಡೆದುಕೊಂಡು ದೂರವಾಗಿರುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಡಿವೋರ್ಸ್ ಆಗುತ್ತಿದ್ದಂತೆ ಈ ಜೋಡಿ ಕುರಿತಾಗಿ ಹಲವು ವಿಚಾರಗಳು ಹರಿದಾಡುತ್ತಿದ್ದವು. ಇದಕ್ಕೆ ಸಮಂತಾ ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲವಾಗಿ ತೆರೆ ಎಳೆದಿದ್ದಾರೆ.

    ನನ್ನ ಬಗ್ಗೆ ಹಲವು ರೂಮರ್‌ಗಳು ಹಬ್ಬಿವೆ. ನನಗೆ ಅಕ್ರಮ ಸಂಬಂಧ ಇತ್ತಂತೆ, ಮಕ್ಕಳು ಬೇಡ ಅಂದಿದ್ನಂತೆ, ಅಬಾರ್ಷನ್ ಮಾಡಿಸಿಕೊಂಡಿದ್ನಂತೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ವಿಚ್ಛೇದನ ಎಂಬುದೇ ನೋವಿನ ವಿಷಯವಾಗಿದೆ. ಅದರಿಂದ ಹೊರ ಬರಲು ಸಮಯ ಬೇಕಿದೆ. ಆದರೆ ಅದರ ನಡುವೆ ಈ ರೀತಿಯ ರೂಮರ್‌ಗಳು ಹಬ್ಬಿದೆ. ಆದರೆ ಇವುಗಳಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕ ಸಮಂತಾ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

    ಸಂಸಾರದ ಒಡೆಯಲು ಸಮಂತಾನೇ ಕಾರಣ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದರಿಂದ ಬೇಸರಗೊಂಡ ಸಮಂತಾ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮಹಿಳೆಯರು ಮಾತ್ರ ನಿರಂತರವಾಗಿ ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೆ, ಅದೇ ಪುರುಷ ಮಾಡಿದಾಗ ನೈತಿಕವಾಗಿ ಅವರನ್ನು ಪ್ರಶ್ನಿಸುವುದಿಲ್ಲ. ಹಾಗಿದ್ದರೆ ನಾವು ಸಮಾಜದಲ್ಲಿ ಮೂಲಭೂತ ನೈತಿಕತೆಯನ್ನು ಹೊಂದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

    ಅ.2 ರಂದು ಸಮಂತಾ ತಮ್ಮ ದಾಂಪತ್ಯದ ಬಗ್ಗೆ, ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಹೇಳುವ ಮೂಲಕವಾಗಿ ತಾವು ವಿಚ್ಛೇದನ ಪಡೆದುಕೊಳ್ಳುತ್ತಿರುವ ವಿಚಾರವನ್ನು ಅಭಿಮಾನಿಗಳಿಗೆ ಹೇಳಿದ್ದರು. ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ರೂಮರ್‌ಗಳಿಂದ ಬೇಸರಗೊಂಡ ಸಮಂತಾ ಇಂದು 2 ಪೋಸ್ಟ್ ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ : ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

    ಅಕ್ಕಿನೇನಿ ಕುಟುಂಬ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಮುಂದಾಗಿತ್ತು. ಆದರೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡಾ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ :  ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

  • ಮದುವೆ ಬಳಿಕ ಸತ್ಯ ಹೇಳಿದ ಯಾಮಿ ಗೌತಮ್

    ಮದುವೆ ಬಳಿಕ ಸತ್ಯ ಹೇಳಿದ ಯಾಮಿ ಗೌತಮ್

    ಮುಂಬೈ: ಕೆಲವು ದಿನಗಳಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಯಾಮಿ ಗೌತಮ್ ಮದುವೆಯಾದ ಬಳಿಕ ಒಂದು ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಅವರಿಗೆ ಇರುವ ಒಂದು ಕಾಯಿಲೆ ಕುರಿತಾಗಿ ಹೇಳಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ.

    ಇತ್ತೀಚೆಗೆ ಒಂದು ಫೋಟೋಶೂಟ್ ಮಾಡಲಾಯಿತು. ಸಾಮಾನ್ಯವಾಗಿ ನಮ್ಮ ಚರ್ಮದ ಸಮಸ್ಯೆಯನ್ನು ಮರೆಮಾಚುವ ಸಲುವಾಗಿ ಆ ಫೋಟೋಗಳನ್ನು ಪೋಸ್ಟ್​ ಪ್ರೊಡಕ್ಷನ್​ಗೆ ಕಳಿಸುತ್ತೇವೆ. ಆದರೆ ಈ ಬಾರಿ ಬೇರೆ ಆಲೋಚನೆ ಬಂತು. ನಾನೇಕೆ ಈ ಸಮಸ್ಯೆಯನ್ನು ಒಪ್ಪಿಕೊಳ್ಳಬಾರದು ಎನಿಸಿತು ಎಂದು ಯಾಮಿ ಗೌತಮ್ ಪೋಸ್ಟ್ ಮಾಡಿದ್ದಾರೆ.

    ಸತ್ಯವನ್ನು ನಿಮ್ಮೆದುರು ಒಪ್ಪಿಕೊಳ್ಳಲು ಧೈರ್ಯ ಮಾಡಿದ್ದೇನೆ. ನಾನು ಹದಿಹರೆಯದಲ್ಲಿ ಇರುವಾಗಲೇ ಈ ಸಮಸ್ಯೆ ಇರುವುದು ಗೊತ್ತಾಯಿತು. ಇನ್ನೂ ಇದು ವಾಸಿ ಆಗಿಲ್ಲ. ತುಂಬ ವರ್ಷಗಳಿಂದ ಇದನ್ನು ನಿಭಾಯಿಸುತ್ತಿದ್ದೇನೆ. ಆದರೆ ಇಂದು ನನ್ನ ನ್ಯೂನತೆಯನ್ನು ಒಪ್ಪಿಕೊಂಡು, ಭಯ ಮತ್ತು ಅಭದ್ರತೆಯನ್ನು ತೊಲಗಿಸುವ ಧೈರ್ಯ ಮಾಡಿದ್ದೇನೆ ಎಂದು ಯಾಮಿ ಗೌತಮ್ ಹೇಳಿದ್ದಾರೆ.

     

    View this post on Instagram

     

    A post shared by Yami Gautam Dhar (@yamigautam)

    ಕೆರಟೋಸಿಸ್ ಪಿಲಾರಸ್ (Keratosis-Pilaris) ಎಂಬ ಚರ್ಮದ ಸಮಸ್ಯೆ ಯಾಮಿ ಗೌತಮ್ ಅವರನ್ನು ಕಾಡುತ್ತಿದೆ. ಇದೇನೂ ಗಂಭೀರ ಸಮಸ್ಯೆ ಅಲ್ಲ. ಆದರೆ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಚರ್ಮದ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಈ ಗುಳ್ಳೆಗಳಿಂದ ಉರಿ, ತುರಿಕೆ, ನೋವು ಏನೂ ಇರುವುದಿಲ್ಲ. ಇದು ಕೆರಟೋಸಿಸ್ ಪಿಲಾರಸ್ ಲಕ್ಷಣ. ಹದಿಹರೆಯಲ್ಲಿ ಇದ್ದಾಗಲೇ ಯಾಮಿ ಗೌತಮ್ ಅವರಿಗೆ ಈ ಸಮಸ್ಯೆ ಕಾಣಿಸಿಕೊಂಡಿತು. ಅಂದಿನಿಂದ ಇದನ್ನು ಮುಚ್ಚಿಟ್ಟುಕೊಂಡೇ ಬಂದಿದ್ದ ಅವರು ಈಗ ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ:  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಯಾಮಿ ಗೌತಮ್

    ನಟಿಯರು ಚರ್ಮದ ಬಗ್ಗೆ ಕಾಳಜಿ ವಹಿಸುತ್ತಾರೆ. ಹಾಗಾಗಿ ಅವರು ಸ್ವಸ್ಥವಾದ ಚರ್ಮ ಹೊಂದಬೇಕಾಗಿರುವುದು ಅನಿವಾರ್ಯ. ಹಾಗಾಗಿ ಕೆರಟೋಸಿಸ್ ಪಿಲಾರಸ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾಮಿ ಗೌತಮ್ ಸಾಕಷ್ಟು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ಆ ಬಗ್ಗೆ ಅವರೀಗ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಬಹುಕಾಲದ ಗೆಳೆಯ ಆದಿತ್ಯ ಧಾರ್ ಜೊತೆ ನಾಲ್ಕು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯುಆರ್‍ಐ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ, ಆದಿತ್ಯ ಧಾರ್, ಯಾಮಿ ಗೌತಮ್ ಅವರ ಜೊತೆ ಸರಳ ಹಾಗೂ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ವಿವಾಹದ ಫೋಟೋವನ್ನು ಯಾಮಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಅವರಿಗೆ ಇರುವ ಕಾಯಿಲೆ ಕುರಿತಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

  • ಸಮಂತಾ, ನಾಗ ಚೈತನ್ಯ  DIVORCEಗೆ ಅಸಲಿ ಕಾರಣ ಬಯಲು

    ಸಮಂತಾ, ನಾಗ ಚೈತನ್ಯ DIVORCEಗೆ ಅಸಲಿ ಕಾರಣ ಬಯಲು

    ಹೈದರಾಬಾದ್: ಟಾಲಿವುಡ್‍ನ ಕ್ಯೂಟ್ ಕಪಲ್ ಸಮಂತಾ, ನಾಗ ಚೈತನ್ಯ ಡಿವೋರ್ಸ್ ಪಡೆದುಕೊಂಡಿರುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಇವರ ಮಧ್ಯೆ ಇದ್ದಕ್ಕಿದ್ದ ಹಾಗೇ ಬಿರುಕು ಮೂಡಲು ಕಾರಣವೇನು ಎಂದು ಅಭಿಮಾನಿಗಳು ಕೇಳುತ್ತಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅಂತೆ ಕಂತೆ ವಿಚಾರಗಳು ಹರಿದಾಡುತ್ತಿವೆ.

    ಸಮಂತಾ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮದುವೆ ನಂತರ ತೆರೆಕಂಡ ರಂಗಸ್ಥಲಂ, ಮಜಿಲಿ ಸೇರಿ ಅನೇಕ ಸಿನಿಮಾಗಳು ಯಶಸ್ಸು ಕಂಡಿವೆ. ಆದರೆ ನಾಗ ಚೈತನ್ಯ ವೃತ್ತಿ ಜೀವನದಲ್ಲಿ ಸಾಕಷ್ಟು ಸೋಲುಗಳನ್ನು ಕಾಣುತ್ತಿದ್ದಾರೆ. ಅವರ ನಟನೆಯ ಮಜಿಲಿ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಆದರೆ ಅಭಿಮಾನಿಗಳು ಸಿನಿಮಾ ಯಶಸ್ಸನ್ನು ಈ ಚಿತ್ರದಲ್ಲಿ ಮುಖ್ಯಪಾತ್ರ ಮಾಡಿದ ಸಮಂತಾಗೆ ನೀಡಿದರು. ಈ ರೀತಿಯ ಸಾಕಷ್ಟು ಘಟನೆಗಳು ನಡೆದಿವೆ ಎನ್ನಲಾಗುತ್ತಿದೆ. ದಿ ಫ್ಯಾಮಿಲಿ ಮ್ಯಾನ್ 2 ಯಶಸ್ಸಿನ ನಂತರ ಬಾಲಿವುಡ್ ಮಂದಿ ಸಮಂತಾ ಮನೆ ಬಾಗಿಲು ತಟ್ಟುತ್ತಿದ್ದಾರೆ. ಈ ವಿಚಾರದಲ್ಲಿ ನಾಗ ಚೈತನ್ಯ ಸಾಕಷ್ಟು ಹೊಟ್ಟೆಕಿಚ್ಚು ಮಾಡಿಕೊಳ್ಳುತ್ತಿದ್ದರು ಎಂದು ವರದಿ ಆಗಿದೆ.ಇದನ್ನೂ ಓದಿ : ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

    ನಾಗ ಚೈತನ್ಯಗೆ ಮಕ್ಕಳನ್ನು ಆಡಿಸುವ ಆಸೆ ಇತ್ತು. ಆದರೆ ಸಮಂತಾಗೆ ಇಷ್ಟು ಬೇಗ ಅದು ಇಷ್ಟವಿರಲಿಲ್ಲ ಎನ್ನುತ್ತಿವೆ ಮೂಲಗಳು. ಮಕ್ಕಳಾದ ನಂತರ ಅದರ ಪಾಲನೆಗೆ ಒಂದಷ್ಟು ವರ್ಷ ಹಿಡಿಯುತ್ತದೆ. ಆ ವೇಳೆಗೆ ಚಿತ್ರರಂಗದಲ್ಲಿ ಬೇಡಿಕೆ ಕುಗ್ಗಿರುತ್ತದೆ. ಈ ಕಾರಣಕ್ಕೆ ಕೆಲ ವರ್ಷ ಬಿಟ್ಟು ಮಗುವನ್ನು ಪಡೆಯುವ ಆಲೋಚನೆ ಸಮಂತಾ ಅವರದ್ದಾಗಿತ್ತು. ಈ ವಿಚಾರಕ್ಕೂ ಇಬ್ಬರ ನಡುವೆ ವಾಗ್ವಾದಗಳು ಏರ್ಪಟ್ಟಿವೆ ಎನ್ನಲಾಗಿದೆ. ಇದನ್ನೂ ಓದಿ :  ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

    ಮದುವೆ ಆದ ನಂತರದಲ್ಲಿ ಹೀರೋಯಿನ್‍ಗಳು ಬೋಲ್ಡ್ ಆಗಿ ತೆರೆಮೇಲೆ ಕಾಣಿಸಿಕೊಳ್ಳೋದು ತುಂಬಾನೇ ಅಪರೂಪ. ಕುಟುಂಬದ ಹಿರಿಯರೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಸಮಂತಾ ಇದಕ್ಕೆಲ್ಲ ಕೇರ್ ಮಾಡದೇ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಮಂತಾ ವೃತ್ತಿ ಜೀವನದ ದೃಷ್ಟಿಯಲ್ಲಿ ದಿ ಫ್ಯಾಮಿಲಿ ಮ್ಯಾನ್ 2 ಬಹಳ ಮಹತ್ವ ಪಡೆದುಕೊಂಡಿದೆ. ಈ ಕಾರಣಕ್ಕೆ ಅವರು ವೆಬ್ ಸೀರಿಸ್ ಒಪ್ಪಿಕೊಂಡಿದ್ದರು. ಇದಕ್ಕೆ ಕುಟುಂಬದವರ ವಿರೋಧವಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ವಿಚಾರವೇ ಈಗ ಡಿವೋರ್ಸ್‍ವರೆಗೆ ತಂದು ನಿಲ್ಲಿಸಿತು ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಸಮಂತಾ-ನಾಗ ಚೈತನ್ಯ ದಾಂಪತ್ಯ ಮುರಿದು ಬಿದ್ದಿದೆ. ಇದಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಈಗ ಈ ಜೋಡಿ ಬೇರೆಯಾಗಿ ಆಗಿದೆ. ಇಬ್ಬರ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಾಣಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.

  • ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

    ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ನಿನ್ನ ವಿಚ್ಛೇದ ಪಡೆದುಕೊಂಡಿರುವ ವಿಚಾರವಾನ್ನು ತಿಳಿಸಿದ್ದರು. ಆದರೆ ಇಂದು  ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನು ಮತ್ತೆ ಬದಲಾಯಿಸಿಕೊಂಡು ಸುದ್ದಿಯಲ್ಲಿದ್ದಾರೆ.

    ವಿಚ್ಛೇದನಕ್ಕೂ ತಿಂಗಳು ಮೊದಲು ಸಮಂತಾ ಅವರು ಅಕ್ಕಿನೇನಿ ಸರ್ ನೇಮ್ ಅನ್ನು ಸೋಶಿಯಲ್ ಮೀಡಿಯಾ ಖಾತೆಯಿಂದ ತೆಗೆದು ಹಾಕಿದ್ದರು. ಅಲ್ಲದೆ ಎಸ್ ಎಂದಷ್ಟೇ ಇಟ್ಟಿದ್ದರು. ಈ ಮೂಲಕ ವಿಚ್ಛೇದನ ಸುದ್ದಿ ಹುಟ್ಟಿಕೊಳ್ಳುವಂತೆ ಮಾಡಿದ್ದರು. ಈಗ ವಿಚ್ಛೇದನ ಪಡೆದ ಮರುದಿನ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಇಂದು ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ. ಎಸ್ ಎಂದು ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ. ಮದುವೆಗೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಅವರ ಹೆಸರು ಸಮಂತಾ ರುತ್ ಪ್ರಭು ಎಂಬುದಾಗಿ ಇತ್ತು.

    2017ರ ಅ.6ರಂದು ಹಿಂದೂ ಸಂಪ್ರದಾಯದ ಪ್ರಕಾರ ಇವರಿಬ್ಬರ ಮದುವೆ ನಡೆದಿತ್ತು. ಅ.7ರಂದು ಕ್ರೈಸ್ತ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಾಗಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ತೀವ್ರ ನಿರಾಸೆ ಉಂಟು ಮಾಡಿದೆ.

  • ನಾನು ಕರ್ನಾಟಕ ಬಿಟ್ಟು ಹೋಗಲ್ಲ,ಯಾರ ಕಣ್ಣಿಗೂ ಕಾಣಿಸಲ್ಲ: ವಿಜಯಲಕ್ಷ್ಮಿ

    ನಾನು ಕರ್ನಾಟಕ ಬಿಟ್ಟು ಹೋಗಲ್ಲ,ಯಾರ ಕಣ್ಣಿಗೂ ಕಾಣಿಸಲ್ಲ: ವಿಜಯಲಕ್ಷ್ಮಿ

    ಬೆಂಗಳೂರು: ಕೃತಜ್ಞತೆ ಇಲ್ಲದವಳ ರೀತಿಯಲ್ಲಿ ನನ್ನನ್ನು ಬಿಂಬಿಸುತ್ತಿದ್ದಾರೆ. ಯೋಗೇಶ್ ಖಾತೆಯಲ್ಲಿನ ಹಣ ನನ್ನ ಕೈಸೇರಿಲ್ಲ ಎಂದು ನಟಿ ವಿಜಯಲಕ್ಷ್ಮಿ ಕಣ್ಣೀರು ಹಾಕುತ್ತಾ ವೀಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ಜನರ ಎದುರಿನಲ್ಲಿ ನನ್ನನ್ನು ಕೆಟ್ಟವಳಂತೆ ಬಿಂಬಿಸುವ ಸಂಚು ನಡೆದಿದೆ. ಮೊನ್ನೆ ವಾಣಿಜ್ಯ ಮಂಡಳಿಗೆ ನನ್ನನ್ನು ಕರೆದಿದ್ದು. ಯೋಗೇಶ್ ಅಕೌಂಟ್‍ನಲ್ಲಿ ಇರುವ ಹಣವನ್ನು ಕೊಡುತ್ತೇವೆ ಅಂತ ಹೇಳಿದ್ದರು. ಇವತ್ತಿನವರೆಗೂ ನನಗೆ ಆ ಹಣ ಸಿಕ್ಕಿಲ್ಲ. ನಿನ್ನೆ ಯಾರೋ ಲಯನ್ ಜಯರಾಜ್ ಎಂಬುವವರು ವೀಡಿಯೋದಲ್ಲಿ ನನಗೆ ಬೈಯ್ಯುತ್ತಿದ್ದರು. ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದಾರೆ ಎಂದು ತಮಗಾಗಿರುವ ನೋವನ್ನು ಹೇಳಿಕೊಂಡಿದ್ದಾರೆ.ಇದನ್ನೂ ಓದಿ:  ಮತ್ತೆ ಹಳೆಯ ವಿಜಯಲಕ್ಷ್ಮಿಯಾಗಿ ತೆರೆ ಮೇಲೆ ಬರ್ತೇನೆ: ನಾಗಮಂಡಲ ನಟಿ

    ನಾನು ಭಿಕ್ಷುಕಿನೆ. ಪಾಪ ಆ ಹುಡುಗ ಭಿಕ್ಷುಕಿ ಎತ್ತಿದ್ದಾನೆ ನಿಮಗಾಗಿ ಎಂದಿದ್ದೀರ. ಆದರೆ ನನಗೆ ಬಂದಿರುವ ದುಡ್ಡನ್ನು ಯಾಕೆ ಇನ್ನುವರೆಗೂ ಬಂದಿಲ್ಲ. ನನ್ನ ಹುಚ್ಚಿ ಮಾಡುತ್ತಿದ್ದೀರ. ಅಭಿಮಾನಿಗಳು ನೋಡುತ್ತಿದ್ದಾರೆ. ಕೃತಜ್ಞತೆ ಇಲ್ಲದವಳ ರೀತಿಯಲ್ಲಿ ನನ್ನನ್ನು ಬಿಂಬಿಸುತ್ತಿದ್ದಾರೆ. ಈ ವೀಡಿಯೋ ಮೂಲಕ ನಾನು ಆಣೆ ಮಾಡಿ ಹೇಳುತ್ತೇನೆ. ಯೋಗೇಶ್ ಖಾತೆಯಲ್ಲಿನ ಹಣ ನನ್ನ ಕೈಸೇರಿಲ್ಲ. ಅದನ್ನು ನಾನು ತೆಗೆದುಕೊಳ್ಳುವುದೂ ಇಲ್ಲ. ನನ್ನ ಹೆಸರು ಹೇಳಿಕೊಂಡು ಜನರಿಂದ ಅವರು ಸಂಗ್ರಹಿಸಿದ ಹಣ ನನಗೆ ಬೇಕಿಲ್ಲ. ನನ್ನ ಖಾತೆಗೆ ಎಷ್ಟೋ ದುಡ್ಡು ಬಂದಿದೆ. ಅದು ಸಾಕು. ನನಗೆ ನೆಮ್ಮದಿ ಬೇಕು. ಅಕ್ಕನನ್ನು ಕರೆದುಕೊಂಡು ನಾನು ಎಲ್ಲಾದರೂ ಹೊರಟು ಹೋಗುತ್ತೇನೆ. ನಾನು ಕಣ್ಣಿಗೆ ಕಾಣದ ರೀತಿಯಲ್ಲಿ ಇದ್ದುಕೊಂಡು ಹೋರಾಟ ಮಾಡುತ್ತೇನೆ. ನಾನು ಕರ್ನಾಟಕ ಬಿಟ್ಟು ಹೋಗುತ್ತೇನೆ ಎಂದು ಈ ಹಿಂದಿನ ವೀಡಿಯೋದಲ್ಲಿ ಹೇಳಿದ್ದೇ. ಆದರೆ ನಾನು ಎಲ್ಲಿಗೂ ಹೋಗುವುದಿಲ್ಲ. ಯಾರ ಕಣ್ಣಿಗೂ ಕಾಣದ ಒಂದು ಜಾಗದಲ್ಲಿ ಕುಳಿತು ಹೊರಾಟ ಮಾಡುತ್ತೇನೆ. ಎಲ್ಲರೂ ನನ್ನನ್ನೂ ಟಾರ್ಚರ್ ಮಾಡುತ್ತಿದ್ದೀರ, ನನ್ನ ಮರ್ಯಾದೆಯನ್ನು ಕಳೆಯುತ್ತಿದ್ದೀರ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ

    ವಾಣಿಜ್ಯ ಮಂಡಳಿ ಕಡೆಯಿಂದ ಆತನ ವಿಷಯ ಬಂದಿದ್ದು. ಶುಕ್ರವಾರ (ಸೆ.1) ನಾನು ವಾಣಿಜ್ಯ ಮಂಡಳಿಗೆ ಹೋಗಿದ್ದೆನು. ದುಡ್ಡು ಕೊಡುವುದಾದರೆ ಅಂದೇ ಕೊಡಬಹುದಿತ್ತು. ಯಾಕೆ ಇನ್ನೂ ಕೊಟ್ಟಿಲ್ಲ? ಚೆನ್ನಾಗಿ ತಿಳಿದುಕೊಳ್ಳಿ. ಆ ದುಡ್ಡಿಗೋಸ್ಕರವೇ ನನಗೆ ಟಾರ್ಚರ್ ಮಾಡುತ್ತಿದ್ದಾರೆ ಎಂದು ಈ ಹಿಂದಿನ ವೀಡಿಯೋದಲ್ಲಿ ವಿಜಯಲಕ್ಷ್ಮಿ ಹೇಳಿದ್ದರು.

    ವಿಜಯಲಕ್ಷ್ಮಿ ತಮಗೆ ಅಭಿಮಾನಿಗಳು ಹಾಕಿರುವ ಹಣ ಇನ್ನು ನನ್ನ ಕೈಗೆ ಬಂದಿ ಸೇರಿಲ್ಲ. ನನ್ನ ಕುರಿತಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಅನ್ಯಾಯವಾಗುತ್ತಿದೆ ಎಂದು ಕಣ್ಣೀರು ಹಾಕುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹಲವು ವೀಡಿಯೋಗಳನ್ನು ಹರಿಬಿಟ್ಟಿದ್ದಾರೆ.

  • ಶ್ವೇತಾ ಚಂಗಪ್ಪ ಮಗನನ್ನು ನೋಡಲು ಮನೆಗೆ ಬಂದ ಕ್ರೇಜಿಸ್ಟಾರ್

    ಶ್ವೇತಾ ಚಂಗಪ್ಪ ಮಗನನ್ನು ನೋಡಲು ಮನೆಗೆ ಬಂದ ಕ್ರೇಜಿಸ್ಟಾರ್

    ಬೆಂಗಳೂರು: ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚಂಗಪ್ಪ ಅವರು ತಮ್ಮ ಪುತ್ರ ಜಿಯಾನ್, ಸ್ಯಾಂಡಲ್‍ವುಡ್ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಕಳೆದ ಮುದ್ದಾದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಜಿಯಾನ್ ಸಾಮಾನ್ಯವಾಗಿ ಜನರ ಬಳಿಗೆ ಹೋಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾನೆ. ಆದರೆ ರವಿ ಸರ್ ಜೊತೆ ತುಂಬಾ ಆರಾಮವಾಗಿದ್ದನು. ಅವರನ್ನು ರವಿ ಮಾಮ ಎಂದು ಕರೆದಿದ್ದಾನೆ. ಜಿಯಾನ್ ಹುಟ್ಟಿದ ದಿನ ರವಿ ಸರ್ ಬಂದಿದ್ದರು, ಈಗ 2 ವರ್ಷಗಳ ನಂತರ ಭೇಟಿಯಾಗಿದ್ದೇವೆ. ಜಿಯಾನ್‍ಗಾಗಿ ಚಾಕ್ಲೇಟ್‍ಗಳನ್ನು ತಂದಿದ್ದರು ಈ ವಿಶೇಷ ವೀಡಿಯೊವನ್ನು ಪೋಸ್ಟ್ ಮಾಡದೆ ಇರಲು ನನಗೆ ಸಾಧ್ಯವಾಗಲಿಲ್ಲ. ಸಮಯ ತೆಗೆದುಕೊಂಡು ಮನೆಗೆ ಬಂದು ಕೆಲವು ಸಮಯ ಕಳೆದಿದ್ದೀರಾ ರವಿ ಸರ್ ನಮ್ಮೆಲ್ಲರ ಪ್ರೀತಿ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಬರೆದುಕೊಂಡು ಮುದ್ದಾದ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Swetha Changappa (@swethachangappa)

    ವೀಡಿಯೋದಲ್ಲಿ ರವಿಚಂದ್ರನ್ ಅವರು ಜಿಯಾನ್‍ಗೆ ಚಾಕ್ಲೇಟ್ ನೀಡುತ್ತಿದ್ದಾರೆ. ಜಿಯಾನ್ ಮುದ್ದಾಗಿ ನಗುತ್ತಾ ಚಾಕ್ಲೇಟ್ ಅನ್ನು ರವಿಚಂದ್ರನ್ ಅವರಿಂದ ತೆಗೆದುಕೊಂಡು ತಾನು ತಿಂದು ರವಿಚಂದ್ರನ್ ಅವರ ಬಾಯಿಗೂ ಹಾಕಿ ಜೋರಾಗಿ ನಗುತ್ತಾ ಇರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

     

    View this post on Instagram

     

    A post shared by Swetha Changappa (@swethachangappa)

    ಶ್ವೇತಾ ಚಂಗಪ್ಪ ಕೆಲವು ದಿನಗಳ ಹಿಂದೆ ತಮ್ಮ ಮಗನ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದರು. ಮಗನ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಈಗಾಗಲೇ ಜಿಯಾನ್ ಸೆಲೆಬ್ರಿಟಿ ಕಿಡ್ ಆಗಿದ್ದು, ಸಾವಿರಾರು ಮಂದಿ ಫಾಲೋವರ್ಸ್ ಹೊಂದಿದ್ದಾನೆ.

  • ರಿಲೇಶನ್‍ಶಿಪ್‍ನಲ್ಲಿದ್ದಾಗ ಕಲಿಬೇಕು, ಮುಂದೆ ಹೋಗುತ್ತಿರಬೇಕು: ಸೋನಾಕ್ಷಿ ಸಿನ್ಹಾ

    ರಿಲೇಶನ್‍ಶಿಪ್‍ನಲ್ಲಿದ್ದಾಗ ಕಲಿಬೇಕು, ಮುಂದೆ ಹೋಗುತ್ತಿರಬೇಕು: ಸೋನಾಕ್ಷಿ ಸಿನ್ಹಾ

    ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆ, ರಿಲೇಶನ್‍ಶಿಪ್ ಬಗ್ಗೆ ಮಾತನಾಡಿದ್ದಾರೆ. ರಿಲೇಶಪ್‍ನಲ್ಲಿ ಇದ್ದಾಗ ಕಲಿಯೋದು, ಮುಂದೆ ಹೋಗೋದು ಮಾಡಬೇಕು ಎಂದು ಸೋನಾಕ್ಷಿ ಹೇಳಿದ್ದಾರೆ.

    ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೋನಾಕ್ಷಿ ಮದುವೆ ಯಾವಾಗ ಆಗುತ್ತಾರೆ ಎಂಬ ಪ್ರಶ್ನೆ ಆಗಾಗ ಕೇಳಿ ಬರುತ್ತಲಿರುತ್ತದೆ. ಈಗಾಗಲೇ ಸೋನಾಕ್ಷಿ ಡೇಟಿಂಗ್ ಮಾಡುತ್ತಿರುವ ವಿಚಾರ ಕೂಡ ಕೇಳಿ ಬಂದಿತ್ತು. ಈ ಎಲ್ಲ ಅಂತೆ-ಕಂತೆ, ರಿಲೇಶನ್‍ಶಿಪ್, ಮದುವೆ ಬಗ್ಗೆ ಏನು ಪರಿಕಲ್ಪನೆ ಇದೆ ಎಂಬುದನ್ನು ಅವರು ಇತ್ತೀಚೆಗೆ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ.

    ಪ್ರತಿಯೊಬ್ಬರೂ ವಿಭಿನ್ನವಾಗಿರುತ್ತಾರೆ. ತನ್ನದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಸಂಬಂಧಗಳಿಂದ ಕಲಿಯೋದು, ಮುಂದೆ ಹೋಗುವುದು ತುಂಬ ಮುಖ್ಯ. ನಮ್ಮನ್ನು ಯಾರು ಸಹಿಸಿಕೊಳ್ತಾರೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಾನು ಈ ವಿಷಯದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ನಾನು ರಿಲೇಶನ್‍ಶಿಪ್‍ನಲ್ಲಿದ್ದಾಗ ತುಂಬ ಚಿಕ್ಕವಳಾಗಿದ್ದೆ, ತುಂಬ ಕೆಲಸ ಮಾಡಲು ಆರಂಭಿಸಿದೆ, ಸಾಕಷ್ಟು ಹೊಸ ಜನರನ್ನು ಭೇಟಿ ಮಾಡಿದೆ. ಅವೆಲ್ಲವೂ ನಿಮ್ಮನ್ನು ವ್ಯಕ್ತಿಯಾಗಿ ಬದಲಿಸುತ್ತದೆ. ನೀವು ಹೀಗೆ ಮಾಡಬೇಕು, ಮಾಡಬಾರದು ಎಂದು ನಿಯಮ ಇಲ್ಲ. ನೀವು ನೀವಾಗಿ ಇರಿ. ನಿಮ್ಮನ್ನು ಪ್ರೀತಿಸುವವರನ್ನು ಕಂಡುಹಿಡಿಯಿರಿ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ. ಇದನ್ನೂ ಓದಿ:  ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

    ನೀನು ಒಳ್ಳೆಯ ಗುಣ-ನಡತೆಯಿರುವ ಹುಡುಗನೊಂದಿಗೆ ಡೇಟಿಂಗ್ ಮಾಡುವುದು ಸೂಕ್ತ ಎಂದು ಪಾಲಕರು ಸಲಹೆ ನೀಡಿದ್ದಾರೆ. ಬಾಲಿವುಡ್‍ನಲ್ಲಿ ಅಂಥ ಹುಡುಗರು ಸಿಗುವುದು ಕಷ್ಟ. ಅಷ್ಟೇ ಅಲ್ಲದೆ, ನಾನು ಒಬ್ಬ ಖ್ಯಾತನಾಮರೊಂದಿಗೆ ಡೇಟಿಂಗ್ ಮಾಡಿದ್ದೆ. ಆದರೆ ಈ ವಿಷಯ ಪ್ರಪಂಚಕ್ಕೆ ತಿಳಿದಿಲ್ಲ ಎಂದು ಸೋನಾಕ್ಷಿ ಸಿನ್ಹಾ ಅವರು ಆ ವ್ಯಕ್ತಿಯ ಹೆಸರು ಹೇಳದೇ ಮಾಹಿತಿ ಮಾತ್ರ ಹಂಚಿಕೊಂಡಿದ್ದಾರೆ. ಅವರು ಯಾರು ಎಂಬುದು ಮಾತ್ರ ಈಗ ಸೀಕ್ರೆಟ್ ಆಗಿ ಉಳಿದಿದೆ. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

  • ಕೊಡವ ಸಂಪ್ರದಾಯದಂತೆ ನಟಿ ಸೌಜನ್ಯ ಅಂತ್ಯಕ್ರಿಯೆ

    ಕೊಡವ ಸಂಪ್ರದಾಯದಂತೆ ನಟಿ ಸೌಜನ್ಯ ಅಂತ್ಯಕ್ರಿಯೆ

    ಮಡಿಕೇರಿ: ಕುಟುಂಬಸ್ಥರ ಆಕ್ರಂದನದ ಮಧ್ಯೆ ನಟಿ ಸೌಜನ್ಯ ಅವರ ಅಂತ್ಯಕ್ರಿಯೆ ಕೊಡಗಿನ ಸುಂಟಿಕೊಪ್ಪದ ಅಂದಗೋವೆಯಲ್ಲಿ ನಡೆದಿದೆ. ಸೌಜನ್ಯ ನೇಣು ಹಾಕಿಕೊಂಡೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಪೊಲೀಸರಿಗೆ ಮೌಖಿಕ ಮಾಹಿತಿ ಸಿಕ್ಕಿದೆ.

    ಮೃತ ದೇಹ ಸ್ವಗ್ರಾಮಕ್ಕೆ ಅಗಮಿಸುತ್ತಿರುವ ವೇಳೆಗೆ ಗ್ರಾಮಸ್ಥರ ಹಾಗೂ ಕುಟುಂಬ ಸದಸ್ಯರ ರೋದನೆ ಮುಗ್ಗಿಲು ಮುಟ್ಟಿತು. ನಟಿ ಸೌಜನ್ಯ ಮೃತ ದೇಹವನ್ನು ಚಿಕ್ಕಂಡ ಕುಟುಂಬದ ಐನ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವಿವಾಹಿತಳಾಗಿದ್ದ ಕಾರಣ ಕೊಡವ ಸಾಂಪ್ರದಾಯದಂತೆ ಬಾಳೆ ವಿವಾಹ ಮಾಡಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ: ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್

    ಈ ನಡುವೆ ನಟಿ ಸೌಜನ್ಯ ಮಾದಪ್ಪ ಗ್ರಾಮಕ್ಕೆ ಬಂದಾಗಲ್ಲೆಲ್ಲ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾನಾಡಿಸುತ್ತಿದ್ರು. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ದಿನಗಳನ್ನು ಗ್ರಾಮಸ್ಥರು ಅಂತಿಮ ಕ್ಷಣದ ಘಟನೆಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಚಪಾತಿ, ಪಲ್ಯ ಮಾಡಿದ್ದೆ, ತಿನ್ನೋಕೆ ಮಗಳೇ ಬರಲಿಲ್ಲ- ನಟಿ ಸೌಜನ್ಯ ತಾಯಿ ಕಣ್ಣೀರು

    ತಂದೆ ಪ್ರಭುಮಾದಪ್ಪ ಅವರು ಸೌಜನ್ಯ ಗೆಳೆಯ ವಿವೇಕ್ ಹಾಗೂ ಪಿಎ ಮಹೇಶ್ ಮೇಲೆ ಅನುಮಾನ ವ್ಯಕ್ತಪಡಿಸಿ ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‍ಐಆರ್ ಕೂಡ ದಾಖಲಾಗಿದೆ. ಆದರೆ, ಆರೋಪವನ್ನು ವಿವೇಕ್, ಪಿ ಮಹೇಶ್ ಅಲ್ಲಗೆಳೆದಿದ್ದಾರೆ. ಗೆಳೆಯ ವಿವೇಕ್ ಜೊತೆ ಮದುವೆ ಪೋಷಕರು ವಿರೋಧಿಸಿದ್ದರು. ಜೊತೆಗೆ, ಸಿನಿಮಾ, ಸೀರಿಯಲ್‍ಗಳಲ್ಲಿ ಅವಕಾಶ ಸಿಗದ ಕಾರಣ ಸೆಲೆಬ್ರಿಟಿ ಜೀವನ ನಡೆಸೋದು ಕಷ್ಟವಾಗಿ ಪೋಷಕರಿಂದ ಹಣ ಪಡೆಯುತ್ತಿದ್ದರು. ಈ ಬಗ್ಗೆ ಸೌಜನ್ಯಗೆ ಕೊರಗಿತ್ತು. ಆರೋಗ್ಯ ಸಮಸ್ಯೆಯೂ ಕಾಡ್ತಿತ್ತು ಅಂತ ಮೂಲಗಳು ತಿಳಿಸಿವೆ. ಸೌಜನ್ಯ ರೂಮ್‍ನಲ್ಲಿದ್ದ ಹಣ, ಮೊಬೈಲ್ ಎಲ್ಲ ಕಾಣೆಯಾಗಿದೆ. ಅವು ಸಿಕ್ಕರೆ ಮತ್ತಷ್ಟು ಸಾಕ್ಷ್ಯ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು

  • ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ

    ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮಿ ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ ಎಂದು ಹೇಳಿದ್ದಾರೆ.

    ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ವಿಜಯಲಕ್ಷ್ಮಿ, ಅಮ್ಮ ತೀರಿಹೋದ ತಕ್ಷಣ ಏನು ತೋಚಲಿಲ್ಲ, ಭಾಮಾ. ಹರೀಶ್ ನನಗೆ ಸಹಾಯ ಮಾಡಿದ್ದಾರೆ. ನನಗೆ ಅಳೋದು ಬಿಟ್ಟು ಬೇರೇನೂ ಗೊತ್ತಾಗಲಿಲ್ಲ. ಸಡನ್ನಾಗಿ ನನ್ನ ಅಕೌಂಟ್ ಬಗ್ಗೆ ಅನುಮಾನ ಬಂದುಬಿಡ್ತು. ಕಲಾವಿದರು ಎಲ್ಲ ಒಂದೇ ಕುಟುಂಬ. ಶಿವಣ್ಣ, ಯಶ್ ಹತ್ರನೂ ಮಾತನಾಡಿದ್ದೀನಿ, ಜಗದೀಶ್ ಮಾತನಾಡಿದ್ದು ಸ್ವಲ್ಪ ತಪ್ಪಾಯ್ತು. ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ, ಎಲ್ಲದಕ್ಕೂ ನಾವು ಭಿಕ್ಷೆ ಬೇಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ

    ಭಿಕ್ಷೆ ಅಂತ ಆದ್ರೂ ತಿಳಿದುಕೊಂಡು ಸಹಾಯ ಮಾಡಿ ಎಂದಿದ್ದ ವಿಜಯಲಕ್ಷ್ಮಿ ಅವರ ಮನವಿಗೆ ಸ್ಪಂದಿಸಿದ ಜನ 1 ರೂಪಾಯಿಯಿಂದ ಸಾವಿರದವರೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಒಟ್ಟು 6,92,350 ರೂಪಾಯಿ ಸಂದಾಯವಾಗಿದೆ. ಇದನ್ನೂ ಓದಿ:  ನಟಿ ವಿಜಯಲಕ್ಷ್ಮಿ ತಾಯಿ ನಿಧನ

    ವಿಜಯಲಕ್ಷ್ಮಿ ನೆರವಿಗೆ ಕನ್ನಡ ಚಿತ್ರರಂಗ ಬಂದಿಲ್ಲ ಎಂಬ ಲಾಯರ್ ಜಗದೀಶ್ ಹೇಳಿಕೆ ಹಿನ್ನಲೆ, ಲಾಯರ್ ಜಗದೀಶ್ ಬಗ್ಗೆ ನಿರ್ಮಾಪಕ ಸುರೇಶ್ ಕೆಂಡಾಮಂಡಲವಾಗಿದ್ದಾರೆ. ಚಿತ್ರರಂಗದ ಬಗ್ಗೆ ಮಾತಾಡೋಕೆ ಈ ಜಗದೀಶ್ ಯಾರು? ನಿಮ್ಮ ಕೇಸ್ ಮಾಡ್ಕೊಂಡು ಸುಮ್ಮನೆ ಇರಿ. ಸಿನಿಮಾ ಇಂಡಸ್ಟ್ರಿಯ ಮಾತಾಡೋ ಹಕ್ಕು ನಿಮಗಿಲ್ಲ. ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಹುಷಾರ್. ಚಿತ್ರರಂಗ ಹೇಗೆ ಬೆಳೆದು ಬಂದಿದೆ ಅಂತ ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

  • ಕೆಜಿಎಫ್ ಬೆಡಗಿ ಮೌನಿರಾಯ್‍ಗೆ ಮದುವೆ

    ಕೆಜಿಎಫ್ ಬೆಡಗಿ ಮೌನಿರಾಯ್‍ಗೆ ಮದುವೆ

    ಮುಂಬೈ: ಕೆಜಿಎಫ್ ಚಾಪ್ಟರ್ 1 ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದ ಮೌನಿ ರಾಯ್ ಅವರು ಸಾಕಷ್ಟು ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಮೌನಿ 2022ರ ಜನವರಿ ತಿಂಗಳಲ್ಲಿ ಬಾಯ್‍ಫ್ರೆಂಡ್ ಜೊತೆಗೆ ಮದುವೆ ಆಗಲಿದ್ದಾರಂತೆ. ಹೀಗೊಂದು ವಿಚಾರ ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ.

    ಮೌನಿ ರಾಯ್ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಅವರ ಪ್ರೇಮ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಜನವರಿಯಲ್ಲಿ ಮೌನಿ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಮೌನಿ ರಾಯ್ ಸೋದರ ಸಂಬಂಧಿ ವಿದ್ಯುತ್ ರಾಯ್‍ಸರ್ಕಾರ್ ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ – ನೆರೆ ಭೀತಿ

     

    View this post on Instagram

     

    A post shared by mon (@imouniroy)

    ದುಬೈ ಅಥವಾ ಇಟಲಿಯಲ್ಲಿ ಮದುವೆ ಆಗುವ ಆಲೋಚನೆ ನಟಿಯದ್ದು. ನಂತರ ಮೌನಿ ರಾಯ್ ಊರಾದ ಪಶ್ಚಿಮ ಬಂಗಾಳದ ಕೂಚ್ ಬೆಹರ್‍ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲು ಚಿಂತಿಸಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪ್ರೇಮ ವೈಫಲ್ಯ, ಯುವಕ ಸಾವು- ಆತ್ಮಹತ್ಯೆಯೋ, ಕೊಲೆಯೋ?

     

    View this post on Instagram

     

    A post shared by Suraj Nambiar (@nambiar13)

    ಸೂರಜ್ ಜತೆ ಮೌನಿ ಡೇಟಿಂಗ್ ನಡೆಸೋಕೆ ಆರಂಭಿಸಿ ಎರಡು ವರ್ಷ ಕಳೆದಿದೆ. 2019ರಲ್ಲಿ ಮೌನಿ ಮತ್ತು ಸೂರಜ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. 2020ರಲ್ಲಿ ಮೌನಿ ದುಬೈಗೆ ತೆರಳಿದ್ದರು. ಈ ವೇಳೆ ಕೆಲ ಸಮಯ ಅಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಜನವರಿಯಲ್ಲಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.