Tag: actress

  • ಪ್ರಿಯಾಂಕಾಗೆ ಸ್ವರ್ಗ ಎನಿಸುವ ಸ್ಥಳ ಯಾವುದು ಗೊತ್ತಾ?

    ಪ್ರಿಯಾಂಕಾಗೆ ಸ್ವರ್ಗ ಎನಿಸುವ ಸ್ಥಳ ಯಾವುದು ಗೊತ್ತಾ?

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ 2.1 ಕೋಟಿ ಮೊತ್ತದ ಎಂಗೇಜ್‍ಮೆಂಟ್ ರಿಂಗ್ ಹಾಗೂ ಅವರಿಗೆ ಸ್ವರ್ಗ ಎಂದು ಅನಿಸುವ ಸ್ಥಳದ ಕುರಿತಾಗಿ ಕುತೂಹಲಕರ ವಿಚಾರ ಹಂಚಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‍ನಲ್ಲಿ ಪತಿ ನಿಕ್ ಜೋನಾಸ್ ಜೊತೆ ಭರ್ಜರಿಯಾಗಿ ದೀಪಾವಳಿಯನ್ನು ಆಚರಿಸಿದ್ದ ಪ್ರಿಯಾಂಕಾ, ಪ್ರಸ್ತುತ ಕೆಲಸದ ಕಾರಣಕ್ಕೆ ದುಬೈಗೆ ತೆರಳಿದ್ದಾರೆ. ಅಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮ್ಮ ವೈಯಕ್ತಿಯ ಜೀವನದ ಹಲವು ಕುತೂಹಲಕರ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಸಂದರ್ಶನದಲ್ಲಿ ಇದುವರೆಗೆ ಸ್ವೀಕರಿಸಿದ ಅದ್ಭುತವಾದ ಆಭರಣ ಯಾವುದು ಎಂಬ ಪ್ರಶ್ನೆಗೆ ಪ್ರಿಯಾಂಕಾ ತಮಾಷೆ ಮಾಡುತ್ತಲೇ ಉತ್ತರ ಹೇಳಿದ್ದಾರೆ. ಇದನ್ನೂ ಓದಿ:   ಅಪ್ಪು ಸರ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ: ರಾಧಿಕಾ ಪಂಡಿತ್

    ನನಗೆ ನಿಶ್ಚಿತಾರ್ಥದ ಉಂಗುರ ಬಹಳ ವಿಶೇಷವಾದದ್ದು. ಅದು ನನಗೆ ಬಹಳ ಅನಿರೀಕ್ಷಿತವಾಗಿತ್ತು. ಜೊತೆಗೆ ಜೀವನದ ವಿಶೇಷಗಳಿಗೆಯ ನೆನಪಾಗಿದೆ. ಆದ್ದರಿಂದ ಅದು ತನಗೆ ಬಹಳ ಅತ್ಯಮೂಲ್ಯವಾದದ್ದಾಗಿದೆ. ಇದೇ ವೇಳೆ ನಿಮಗೆ ಯಾವ ಸ್ಥಳ ಸ್ವರ್ಗ ಎಂದೆನಿಸುತ್ತದೆ ಎಂಬ ಪ್ರಶ್ನೆಗೆ, ತಮ್ಮ ಮನೆಯೇ ಸ್ವರ್ಗ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ನೆಚ್ಚಿನವರ ಜೊತೆ ಇರುವುದು, ಮನೆಯಲ್ಲಿ ಇರುವುದು ನನಗೆ ಸ್ವರ್ಗದ ರೀತಿ ಭಾಸವಾಗುತ್ತದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

    ನಿಕ್ ಹಾಗೂ ಪ್ರಿಯಾಂಕಾ 2018ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದರು. ನಿಕ್ ರೇಡಿಯೋವೊಂದಕ್ಕೆ ಸಂದರ್ಶನ ನೀಡುತ್ತಾ, ಪ್ರಿಯಾಂಕಾಗೆ ನೀಡಿದ್ದ ಉಂಗುರದ ಬಗ್ಗೆ ಪ್ರಸ್ತಾಪಿಸಿದ್ದರು. ಅದನ್ನು ನೀಡಲು ತಮ್ಮ ಸೋದರರು ಬಹಳ ಸಹಾಯ ಮಾಡಿದ್ದರು ಎಂದು ಅವರು ತಿಳಿಸಿದ್ದರು. ಆ ಉಂಗುರದ ಬೆಲೆ ಸುಮಾರು 2.1 ಕೋಟಿ ರೂಪಾಯಿ ಎಂದು ಸುದ್ದಿಯಾಗಿದೆ.

  • ಹಾಟ್ ಬೆಡಗಿ ಪೂನಂ ಪಾಂಡೆ ಪತಿ ಅರೆಸ್ಟ್

    ಹಾಟ್ ಬೆಡಗಿ ಪೂನಂ ಪಾಂಡೆ ಪತಿ ಅರೆಸ್ಟ್

    ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿದ ಆರೋಪದ ಅಡಿ ಸ್ಯಾಮ್ ಬಾಂಬೆನನ್ನು ಪೊಲೀಸರು ಬಂಧಿಸಿದ್ದಾರೆ.

    ಪೂನಂ ಪಾಂಡೆ ಅವರ ತಲೆ, ಕಣ್ಣು ಮತ್ತು ಮುಖದ ಮೇಲೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಯಾಮ್ ಬಾಂಬೆ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

    ಈ ಹಿಂದೆ ಪತಿ, ನಿರ್ಮಾಪಕ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿ ನಟಿ ಜೈಲಿಗಟ್ಟಿದ್ದರು. ಇದೀಗ ಜೈಲಿನಿಂದ ಹೊರಬರುತ್ತಿದ್ದಂತೆಯೇ ಪೂನಂ ಮೇಲೆ ಮತ್ತೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

    2020ರ ಸೆಪ್ಟೆಂಬರ್ 11ರಂದು ಪೂನಂ ಪಾಂಡೆ ತನ್ನ ಗೆಳೆಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ಎರಡು ವಾರದಲ್ಲೇ ನನಗೆ ಕಿರುಕುಳ ನೀಡುತ್ತಿದ್ದಾನೆ, ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ನಟಿ ಪತಿ ವಿರುದ್ಧ ಗೋವಾದಲ್ಲಿ ದೂರು ನೀಡಿದ್ದರು. ಇದನ್ನೂ ಓದಿ: ಕಮಲಾ ನೆಹರು ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ನಾಲ್ವರು ಮಕ್ಕಳ ದಾರುಣ ಸಾವು

    ನಟಿ ಗೋವಾದ ಕೆನಕೋನಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿರುವುದಾಗಿ ಪೂನಂ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಹೀಗೆ ಬಂಧಿತನಾಗಿದ್ದ ಸ್ಯಾಮ್ ಹೈಕೋರ್ಟಿನಿಂದ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಮತ್ತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಈ ಬಾರಿ ಆತ ಕೆಟ್ಟದಾಗಿ ಹೊಡೆದಿದ್ದಾನೆ. ಪ್ರತಿ ಬಾರಿ ಅವನು ನನ್ನನ್ನು ಹೊಡೆದು ನಂತರ ಕ್ಷಮಿಸಿ ಎಂದು ಅಳಲು ಪ್ರಾರಂಭಿಸುತ್ತಾನೆ. ಈ ಬಾರಿಯೂ ಸ್ಯಾಮ್ ಅದೇ ರೀತಿ ಮಾಡಿದ್ದಾನೆ. ಇನ್ಮುಂದೆ ಹೀಗಾಗುವುದಿಲ್ಲ ಎಂದು ಭರವಸೆ ನೀಡಿದ. ಆದರೆ ಮತ್ತೆ ಅವರು ಹೀಗೆ ಮಾಡುತ್ತಾನೆ. ಅವನಿಂದಾಗಿ ನನಗೆ ಮೆದುಳಿನ ರಕ್ತಸ್ರಾವವಾಗಿದೆ ಎಂದು ಪೂನಂ ಹೇಳಿದ್ದಾರೆ.

  • ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿದ ಚೋಪ್ರಾ-ನಿಕ್

    ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿದ ಚೋಪ್ರಾ-ನಿಕ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ಪ್ರಿಯಾಂಕಾ ಚೋಪ್ರಾ ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ವಿವಾಹವಾದ ನಂತರ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದಾರೆ. ಅವರು ಭಾರತ ತೊರೆದರೂ ಇಲ್ಲಿಯ ಸಂಸ್ಕೃತಿಯನ್ನು ಚೂರೂ ಮರೆತಿಲ್ಲ. ಇದಕ್ಕೆ ಸಾಕ್ಷಿ ಇವರು ಅಮೆರಿಕಾದಲ್ಲಿ ಇಂದು ಹಬ್ಬ ಆಚರಣೆ ಮಾಡಿರುವ ಫೋಟೋಗಳಾಗಿವೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    ಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ ನಾವು ಅವಳ ಕೃಪೆ ಮತ್ತು ಸಮೃದ್ಧಿಯನ್ನು ನಮ್ಮ ಮನೆಗೆ ಆಹ್ವಾನಿಸುತ್ತೇವೆ. ದೀಪಾವಳಿಯ ಶುಭಾಶಯಗಳು ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಪ್ರಿಯಾಂಕಾ ಅವರ ದೇಶ ಪ್ರೇಮ ಮತ್ತು ಸಂಸ್ಕೃತಿ ಕುರಿತಾಗಿ ಇರುವ ಕಾಳಜಿಗೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

    ಪತಿ ನಿಕ್ ಜೋನಸ್ ಜೊತೆ ಸೇರಿಕೊಂಡು ಪ್ರಿಯಾಂಕಾ ಹಬ್ಬವನ್ನು ಆಚರಣೆ ಮಾಡಿದ್ದಾರೆ. ನಿಕ್ ಜೋನಸ್ ಬಿಳಿ ಕುರ್ತಾ ತೊಟ್ಟರೆ, ಪ್ರಿಯಾಂಕಾ ಹಳದಿ ಬಣ್ಣದ ಸೀರೆ ಉಟ್ಟಿದ್ದಾರೆ. ವಿದೇಶದಲ್ಲಿ ಇದ್ದುಕೊಂಡು ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದಾರೆ. ಈಗ ದೀಪಾವಳಿ ಹಬ್ಬದ ಸಂಭ್ರಮ. ಹಿಂದುಗಳ ಪಾಲಿಗೆ ಇದು ದೊಡ್ಡ ಹಬ್ಬ. ಇದನ್ನು ಪ್ರಿಯಾಂಕಾ ಚೋಪ್ರಾ ಸಂಭ್ರಮದಿಂದ ಆಚರಿಸಿದ್ದಾರೆ.

  • ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

    ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ, ನಾಗಚೈತನ್ಯ ಅವರೊಂದಿಗೆ ವಿಚ್ಛೇದನ ಪಡೆದುಕೊಂಡ ನಂತರ ಚಾರ್ ಧಾಮ್ ಯಾತ್ರೆಯನ್ನು ಮಾಡಿದ್ದಾರೆ.

    ನಟಿ ಸಮಂತಾ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಂತರ ಸ್ನೇಹಿತರ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ನಾಗ ಚೈತನ್ಯ ಅವರ ಜೊತೆಗಿನ ವಿಚ್ಛೇದನ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದಾಗಿನಿಂದ ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ. ಇದೀಗ ಅವರು ಚಾರ್ ಧಾಮ್ ಯಾತ್ರೆ ಮಾಡುತ್ತಿರುವ ಕುರಿತಾಗಿ ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

     

    View this post on Instagram

     

    A post shared by Samantha (@samantharuthprabhuoffl)

    ಯಶಸ್ವಿಯಾಗಿ ಚಾರ್ ಧಾಮ್ ಯಾತ್ರೆ ಪೂರ್ಣಗೊಳಿಸಿದ್ದೇನೆ. ಹಿಮಾಲಯ ಎಂದರೆ ತುಂಬಾ ಇಷ್ಟ. ಮಹಾಭಾರತ ಓದಿದಾಗಿನಿಂದ ಭೂಮಿಯ ಮೇಲಿನ ಈ ಸ್ವರ್ಗಕ್ಕೆ ಭೇಟಿ ಕೊಡಬೇಕೆಂದು ಅಂದುಕೊಂಡಿದ್ದೆ. ಹಿಮಾಲಯಕ್ಕೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ. ಈ ಯಾತ್ರೆಯ ಅನುಭವ ನಿಜಕ್ಕೂ ವಿಶೇಷ ಎಂದು ಸಮಂತಾ ಬರೆದುಕೊಂಡಿದ್ದಾರೆ. ಅಲ್ಲಿ ಸುತ್ತಾಡಿದ ಕೆಲವು ಸುಂದರಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

     

    View this post on Instagram

     

    A post shared by Samantha (@samantharuthprabhuoffl)

    ಕೆಲ ಸಮಯ ರಿಷಿಕೇಷದಲ್ಲಿದ್ದ ಸಮಂತಾ ಅಲ್ಲಿನ ದೇವಾಯಲಗಳು ಮಠಗಳಿಗೆ ಭೇಟಿ ಕೊಟ್ಟಿದ್ದಾರೆ. ಜೊತೆಗೆ ಗಂಗೆಯ ತೀರದಲ್ಲಿ ನಡೆಯುವ ಪೊಜೆ ಹಾಗೂ ಹೋಮದಲ್ಲಿ ಭಾಗಿಯಾಗಿದ್ದಾರೆ. ಸ್ನೇಹಿತೆ ಶಿಲ್ಪಾ ರೆಡ್ಡಿ ಜೊತೆ ಸಮಂತಾ ಅವರು ಚಾರ್ ಧಾಮ್ ಯಾತ್ರೆಯನ್ನು ಮಾಡಿದ್ದಾರೆ. ಯಾತ್ರೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     samantha

    ಸಮಂತಾ, ನಾಗಚೈತನ್ಯ ವಿಚ್ಛೇದನ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿಸುವ ಸುದ್ದಿಗಳ ಕುರಿತಾಗಿ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಾ, ಟ್ರೋಲ್ ಮಾಡುವುದನ್ನು ನಿಲ್ಲಿಸದೇ ಹೋದರೆ, ಕಾನೂನು ರೀತಿಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಕೆಲವು ಯೂಟ್ಯೂಬ್ ಚಾನಲ್‍ಗಳ ಮೇಲೆ ದೂರು ಸಹ ದಾಖಲಿಸಿದ್ದಾರೆ ಸಮಂತಾ.

  • ವಿಚ್ಛೇದನ ಪಡೆದ ಬೆನ್ನಲ್ಲೇ ಆಶ್ರಮಕ್ಕೆ ಹೋಗಿದ್ದಾರಾ ಸಮಂತಾ?

    ವಿಚ್ಛೇದನ ಪಡೆದ ಬೆನ್ನಲ್ಲೇ ಆಶ್ರಮಕ್ಕೆ ಹೋಗಿದ್ದಾರಾ ಸಮಂತಾ?

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ, ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬೆನ್ನಲ್ಲೇ ಆಶ್ರಮಕ್ಕೆ ಭೇಟಿಕೊಟ್ಟಿದ್ದಾರೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ದಾಂಪತ್ಯ ಜೀವನದಿಂದ ಹೊರ ಬಂದ ಬೆನ್ನಲ್ಲೇ ಟಾಲಿವುಡ್ ನಟಿ ಸಮಂತಾ ರಿಷಿಕೇಶಕ್ಕೆ ತೆರಳಿದ್ದಾರೆ. ತಾವು ತಂಗಿರುವ ಬೆಟ್ಟಗಳ ನಡುವಿರುವ ರೆಸಾರ್ಟ್‍ನಿಂದ ಮನಮೋಹಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸುಂದರವಾಗಿರುವ ಈಜುಕೊಳದ ಚಿತ್ರವನ್ನೂ ಅವರು ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಸದ್ಯ ಚರ್ಚೆಯಾಗುತ್ತಿರುವುದು ಸಮಂತಾ ಹಂಚಿಕೊಂಡಿರುವ ಆಶ್ರಮದ ಚಿತ್ರಗಳು. ಆಶ್ರಮವೊಂದರ ದ್ವಾರದ ಹಾಗೂ ಅಲ್ಲಿರುವ ಫಲಕವೊಂದರ ಚಿತ್ರಗಳನ್ನು ಸಮಂತಾ ಪೋಸ್ಟ್ ಮಾಡಿದ್ದು, ಅವರು ಆಶ್ರಮಕ್ಕೆ ತೆರಳಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಇದನ್ನೂ ಓದಿ: ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಕೋಟಿಗೊಬ್ಬ3 ಭರ್ಜರಿ ಕಲೆಕ್ಷನ್‌

    Samantha

    ರಿಷಿಕೇಶದಲ್ಲಿರುವ ಶ್ರೀ ಸ್ವಾಮಿ ಪುರುಷೋತ್ತಮಾನಂದ ಜೀ ಮಹರಾಜ್ ವಸಿಷ್ಠ್ ಆಶ್ರಮದ ದ್ವಾರದ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಜೊತೆಗೆ ಸಂತಸ ಬೇರೆಲ್ಲೂ ಇಲ್ಲ, ನಮ್ಮೊಳಗಿದೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಸಮಂತಾ ರಜೆಯ ಅವಧಿಯಲ್ಲಿ ಆಶ್ರಮಕ್ಕೂ ತೆರಳಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಹೇಳುತ್ತಿವೆ. ಡಿವೋರ್ಸ್ ಕುರಿತು ಹರಿದಾಡುತ್ತಿರುವ ವೈಯಕ್ತಿಕ ದಾಳಿಯ ವಿರುದ್ಧ ಮಾತನಾಡಿ, ಅವುಗಳನ್ನು ಸಂಪೂರ್ಣ ನಿರಾಕರಿಸಿದ್ದರು. ಇದನ್ನೂ ಓದಿ: ನಟ ವಿಕ್ಕಿ ಕೌಶಲ್ ಬೆನ್ನಿನಲ್ಲಿ ಗಾಯ- ನಿಜವಾಗಿ ಆಗಿದ್ದೇನು?

  • ಸ್ಟೈಲಿಶ್ ಲುಕ್‍ನಲ್ಲಿ ಮಿಂಚುತ್ತಿದ್ದಾರೆ ಸ್ಯಾಂಡಲ್‍ವುಡ್ ಸಿಂಡ್ರೆಲಾ

    ಸ್ಟೈಲಿಶ್ ಲುಕ್‍ನಲ್ಲಿ ಮಿಂಚುತ್ತಿದ್ದಾರೆ ಸ್ಯಾಂಡಲ್‍ವುಡ್ ಸಿಂಡ್ರೆಲಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸ್ಟೈಲಿಶ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯದಲ್ಲಿ ಬಾರಿ ಸದ್ದು ಮಾಡುತ್ತಿದೆ.

    ರಾಧಿಕಾ ಪಂಡಿತ್ ಸದ್ಯ ಪತಿ ಯಶ್ ಜೊತೆ ದುಬೈ ಪ್ರವಾಸದಲ್ಲಿದ್ದಾರೆ. ರಾಕಿಂಗ್ ಜೋಡಿಯ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಪ್ರವಾಸದ ಕೆಲವು ಫೋಟೋ ಹರಿದಾಡುತ್ತಿವೆ. ರಾಧಿಕಾ ಪಂಡಿತ್ ವಾಕಿಂಗ್ ಪೋಸ್ ಎಂದು ಬರೆದುಕೊಂಡು ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    radhika pandit

    ರಾಧಿಕಾ ಪಂಡಿತ್ ಇತ್ತೀಚೆಗೆ ಸಿಕ್ಕಾಪಟ್ಟೆ ಸ್ಟೈಲಿಶ್ ಆಗುತ್ತಿದ್ದಾರೆ. ದುಬೈನಲ್ಲಿ ವಿನ್ಯಾಸಿತ ಮಾಡರ್ನ್ ಡ್ರೆಸ್ ತೊಟ್ಟು ದಿನಕ್ಕೊಂದು ಲುಕ್‍ನಲ್ಲಿ ಮಿಂಚುತ್ತಿದ್ದಾರೆ. ದುಬೈನಲ್ಲಿ ತಮ್ಮ ಲುಕ್ ಹೇಗಿದೆ ಅನ್ನೋದ್ರ ಝಲಕ್‍ನನ್ನು ರಾಧಿಕಾ ತಮ್ಮ ಅಭಿಮಾನಿಗಳಿಗೆ ಇನ್‍ಸ್ಟಾಗ್ರಾಂ ಪೋಸ್ಟ್‌ಗಳ ಮೂಲಕ ನೀಡುತ್ತಿದ್ದಾರೆ. ರಾಧಿಕಾ ಸಹ ತಮ್ಮ ಹೇರ್ ಸ್ಟೈಲ್ ಬದಲಾಯಿಸಿರುವುದನ್ನು ನಾವು ಫೋಟೋದಲ್ಲಿ ನೋಡ ಬಹುದಾಗಿದೆ. ರಾಧಿಕಾ, ಯಶ್ ಹಬ್ಬದ ದಿನ ಸಾಂಪ್ರದಾಯಿಕವಾದ ಉಡುಗೆ ತೊಟ್ಟ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ದಸರಾ ಹಬ್ಬಕ್ಕೆ ಶುಭಕೋರಿದ್ದರು. ಇದೀಗ ಅವರ ಹೊಸ ಲುಕ್‍ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ

     

    View this post on Instagram

     

    A post shared by Radhika Pandit (@iamradhikapandit)

    ಮಕ್ಕಳಾದ ನಂತರ ನಟಿ ರಾಧಿಕಾ ಪಂಡಿತ್ ಸಿನಿಮಾಗಳಿಂದ ಕೊಂಚ ದೂರ ಇದ್ದಾರೆ. ಈ ನಟಿ ಯಾವಾಗ ಮತ್ತೆ ರೀ-ಎಂಟ್ರಿ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗಲೇ ನಟಿಯ ಕಡೆಯಿಂದ ಸಿಹಿ ಸುದ್ದಿ ಸಿಗುವ ಸೂಚನೆ ಸಿಗುತ್ತಿದೆ.

  • ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ

    ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ

    ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ದಂಪತಿ ಮುದ್ದು ಮಗಳಾದ, ವಮಿಕಾ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಪುತ್ರಿ ವಮಿಕಾ ಜೊತೆ ಕಾಲಕಳೆಯುತ್ತಿರುವ ಕೊಹ್ಲಿ ಫೋಟೋವನ್ನು ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಪುತ್ರಿ ಜೊತೆ ಆಟವಾಡುತ್ತಿರುವ ಕೊಹ್ಲಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದುವರೆಗೂ ವಮಿಕಾ ಮುಖದ ಫೋಟೋ ರಿವೀಲ್ ಮಾಡಿಲ್ಲ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ವಮಿಕಾ ಮುಖ ಕಾಣುತ್ತಿಲ್ಲ. ಈ ಹಿಂದಿನಂತೆ ರಹಸ್ಯ ಉಳಿಸಿಕೊಂಡೇ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

     

    View this post on Instagram

     

    A post shared by AnushkaSharma1588 (@anushkasharma)

    ಐಪಿಎಲ್ ಟೂರ್ನಿ ಮುಗಿಸಿದ ಕೊಹ್ಲಿ ಕ್ವಾರಂಟೈನ್‍ಲ್ಲಿದ್ದರು. ಹೀಗಾಗಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭೇಟಿಯಾಗಿರಲಿಲ್ಲ. ಕ್ವಾರಂಟೈನ್ ಮುಗಿಸಿದ ಕೊಹ್ಲಿ ಮತ್ತೆ ಜೊತೆಯಾಗಿದ್ದಾರೆ. ಕೊಹ್ಲಿ ಸದ್ಯ ಪಂದ್ಯದ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಅಕ್ಟೋಬರ್ 24 ರಂದು ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ರೋಚಕ ಪಂದ್ಯಕ್ಕಾಗಿ ಕೌಂಟ್‍ಡೌನ್ ಆರಂಭಗೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಳಿತ – ಇಂದು 214 ಕೇಸ್, 12 ಸಾವು

  • ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ- ಮಕ್ಕಳ ಜೊತೆ ಪೂಜೆ ಮಾಡಿದ ನಟಿ

    ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ- ಮಕ್ಕಳ ಜೊತೆ ಪೂಜೆ ಮಾಡಿದ ನಟಿ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ನೀಲಿ ಚಿತ್ರ ನಿರ್ಮಾಣದ ಕೇಸ್‍ನಿಂದಾಗಿ ಬೇಸರಕ್ಕೆ ಒಳಗಾಗಿದ್ದರು. ಆದರೆ ಈಗ ಈ ಎಲ್ಲ ಬೇಸರದಿಂದ ಹೊರಗೆ ಬಂದು ಮಕ್ಕಳ ಜೊತೆಗೆ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಶಿಲ್ಪಾ ಆಚರಣೆ ಮಾಡಿದ್ದಾರೆ.

    ಕೆಲವು ವಿಚಾರಗಳನ್ನು ನಾವು ಆಚರಿಸದ ಹೊರತು ನಮ್ಮ ಮುಂದಿನ ತಲೆಮಾರಿನವರಿಗೆ ಅವುಗಳನ್ನು ದಾಟಿಸಲು ಸಾಧ್ಯವಿಲ್ಲ. ನಮ್ಮ ತಂದೆ-ತಾಯಿ ನಮ್ಮನ್ನು ಬೆಳೆಸಿದ ರೀತಿಯಲ್ಲೇ ಮೌಲ್ಯ ಮತ್ತು ಸಂಪ್ರದಾಯದೊಂದಿಗೆ ನಮ್ಮ ಮಕ್ಕಳು ಕೂಡ ಬೆಳೆಯಬೇಕು ಎಂಬುದು ನನಗೆ ತುಂಬ ಮುಖ್ಯವಾಗಿದೆ. ನನ್ನ ಇಬ್ಬರು ಮಕ್ಕಳಲ್ಲೂ ನಂಬಿಕೆಯ ಬೀಜ ಬಿತ್ತುತ್ತಿದ್ದೇನೆ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡು ಮಕ್ಕಳ ಜೊತೆಗೆ ಪೂಜೆ ಮಾಡುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    ಮಕ್ಕಳ ಜೊತೆ ಸೇರಿ ಅವರು ಸಡಗರದಿಂದ ಹಬ್ಬ ಆಚರಿಸಿದ್ದಾರೆ. ದೇವರಿಗೆ ವಿಶೇಷ ಅಲಂಕಾರ, ನೈವೇದ್ಯ ಮಾಡಿ, ಭಕ್ತಿಯಿಂದ ಪೂಜೆ ನೆರವೇರಿಸಿದ್ದಾರೆ. ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ವೀಡಿಯೋದಲ್ಲಿ ವಿಹಾನ್ ಕುಂದ್ರಾ ಭಕ್ತಿಯಿಂದ ಭಜನೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿ. ಈ ವೀಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಪ್ಪ ಅರೆಸ್ಟ್, ಅಮ್ಮ ಕಣ್ಣೀರು – ಪೋಸ್ಟ್ ಮಾಡಿ ಸುದ್ದಿಯಾದ ಶಿಲ್ಪಾ ಶೆಟ್ಟಿ ಮಗ

    ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿ ಚಿತ್ರ ನಿರ್ಮಾಣದ ಪ್ರಕರಣದಿಂದ ಸದ್ಯ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಒಂದಷ್ಟು ದಿನಗಳ ಕಾಲ ಜೈಲುವಾಸ ಅನುಭವಿಸಿ ಬಂದ ಅವರು ಈಗ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಈ ಪ್ರಕರಣ ಕುರಿತಾಗಿ ಕೋರ್ಟ್ ಯಾವ ರೀತಿ ತೀರ್ಪು ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

  • ತಾಯಿಯಾಗಿರುವ ವಿಚಾರ 2 ವರ್ಷಗಳ ನಂತ್ರ ಬಹಿರಂಗ ಪಡಿಸಿದ ಶ್ರಿಯಾ ಶರಣ್

    ತಾಯಿಯಾಗಿರುವ ವಿಚಾರ 2 ವರ್ಷಗಳ ನಂತ್ರ ಬಹಿರಂಗ ಪಡಿಸಿದ ಶ್ರಿಯಾ ಶರಣ್

    ಹೈದರಾಬಾದ್: ನಟಿ ಶ್ರಿಯಾ ಶರಣ್‍ಗೆ ಹೆಣ್ಣು ಮಗು ಜನಿಸಿದೆ. ಈ ವಿಚಾರವನ್ನು 2 ವರ್ಷಗಳ ನಂತರ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇಷ್ಟು ತಡವಾಗಿ ವಿಷಯವನ್ನು ಹಂಚಿಕೊಳ್ಳಲು ಕಾರಣವೇನು ಎಂದು ಸ್ಪಷ್ಟಪಡಿಸಿದ್ದಾರೆ.

    2020ರ ಕ್ವಾರಂಟೈನ್ ತುಂಬಾನೇ ಅದ್ಭುತವಾಗಿತ್ತು. ಇಡೀ ಪ್ರಪಂಚವು ಕಷ್ಟದಲ್ಲಿ ಸಾಗುತ್ತಿರುವಾಗ, ನಮ್ಮ ಪ್ರಪಂಚವು ಬದಲಾಯಿತು. ನಮಗೆ ಆ ಸಂದರ್ಭದಲ್ಲಿ ಹೆಣ್ಣುಮಗುವಾಗಿದೆ ಎಂದು ಬರೆದುಕೊಂಡು ಒಂದು ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಟಿಗೆ ಕೆಲವು ಪ್ರಶ್ನೆಗಳು ಎದುರಾಗಿವೆ. ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬಂದಿರುವ ವಿಚಾರವನ್ನು ತಿಳಿಸುವುದು ಸೂಕ್ತವಾಗಿರಲಿಲ್ಲ ಎಂದು ಈ ಬಗ್ಗೆ ತಿಳಿಸದಕ್ಕೆ ಕಾರಣ ಹೇಳಿದ್ದಾರೆ. ದನ್ನೂ ಓದಿ: ಯಶ್ ಹೇರ್ ಸ್ಟೈಲ್‍ಗೆ ಅಭಿಮಾನಿಗಳು ಫಿದಾ

     

    View this post on Instagram

     

    A post shared by Shriya Saran (@shriya_saran1109)

    2001ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್‍ಗೆ 2020ರ ಲಾಕ್‍ಡೌನ್ ಸಂದರ್ಭದಲ್ಲಿಯೇ ಮಗು ಜನಿಸಿತ್ತು. ಆದರೆ ಈ ವಿಚಾರವನ್ನು ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮಗು ಜನಿಸಿ ಸುಮಾರು ಎರಡು ವರ್ಷ ಆಗುತ್ತಾ ಬಂದಿದೆ. ಈಗ ಶ್ರಿಯಾ ಈ ವಿಚಾರ ಬಿಚ್ಚಿಟ್ಟಿದ್ದಾರೆ. 2 ವರ್ಷಗಳ ನಂತರ ಈ ವಿಚಾರವಾಗಿ ಬಾಯಿ ಬಿಟ್ಟಿರುವುದಕ್ಕೆ ಅಭಿಮಾನಿಗಳೂ ನಿಜಕ್ಕೂ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ದನ್ನೂ ಓದಿ: ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    ನಟಿ ಶ್ರಿಯಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ರಷ್ಯಾದ ಗೆಳೆಯ ಆಂಡ್ರೆ ಕೊಶ್ಚೆವ್ ಜೊತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶ್ರಿಯಾ 2020ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಈ ವಿಚಾರವನ್ನು ಅವರು ಅಭಿಮಾನಿಗಳಿಗೆ ಇಂದು ಬಹಿರಂಗಪಡಿಸಿದ್ದಾರೆ. ದನ್ನೂ ಓದಿ: ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

    ಶ್ರಿಯಾ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಚಂದ್ರ, ಅರಸು ಸಿನಿಮಾ ಮೂಲಕವಾಗಿ ಕನ್ನಡ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದಾರೆ. ಈ ನಟಿ ಇದೀಗ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  • ಸುದೀಪ್ ನಿಮಗೆ ವಯಸ್ಸು ಆಗೋದೇ ಇಲ್ವಾ: ರಮ್ಯಾ

    ಸುದೀಪ್ ನಿಮಗೆ ವಯಸ್ಸು ಆಗೋದೇ ಇಲ್ವಾ: ರಮ್ಯಾ

    ಬೆಂಗಳೂರು: ಮೋಹಕ ತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇರುವಂತಹ ನಟಿಮಣಿಯಾಗಿದ್ದಾರೆ. ಹಲವು ವಿಚಾರವಾಗಿ ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವ ನಟಿ ಇದೀಗ ಕಿಚ್ಚ ಸುದೀಪ್ ಅವರಿಗೆ ನೇರವಾಗಿ ಒಂದು ಪ್ರಶ್ನೆಯನ್ನು ಕೇಳಿದ್ದಾರೆ.

    ಅ.14ರಂದು ಅದ್ದೂರಿಯಾಗಿ ಕೋಟಿಗೊಬ್ಬ 3 ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಕ್ರೇಜ್ ಇದೆ. ಅ.7ರಂದು ಟ್ರೇಲರ್ ರಿಲೀಸ್ ಆಗಿದ್ದು, ಅದನ್ನು ನೋಡಿ ರಮ್ಯಾ ಕೂಡ ಮೆಚ್ಚಿಕೊಂಡಿದ್ದಾರೆ. ರಮ್ಯಾ ಮೆಚ್ಚಿಕೊಂಡಿದ್ದು ಮಾತ್ರವಲ್ಲದೆ ಸುದೀಪ್ ಅವರನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ:   ತಾಯಿ ಆಗಲು ಸಮಂತಾ ಬಯಸಿದ್ರು-ನಿರ್ದೇಶಕರ ಪುತ್ರಿ ಬಿಚ್ಚಿಟ್ಟರು ವಿಚ್ಛೇದನದ ಗುಟ್ಟು

    ಟ್ರೇಲರ್ ಅದ್ಭುತವಾಗಿದೆ. ಕಿಚ್ಚ ಸುದೀಪ್ ಅವರೇ, ನಿಮಗೆ ವಯಸ್ಸು ಆಗುವುದೇ ಇಲ್ಲವಾ? ಎಂದು ರಮ್ಯಾ ಬರೆದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸುದೀಪ್ ವಯಸ್ಸು ಕಮ್ಮಿ ಆಗುತ್ತಿದೆ ಎಂಬರ್ಥದಲ್ಲಿ ಅವರು ಪ್ರಶಂಸೆ ವ್ಯಕ್ತಪಡಿಸಿ ಇನ್‍ಸ್ಟಾಗ್ರಾಮ್‍ನ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇದನ್ನೂ ಓದಿ:  ಬೀದಿ ನಾಯಿಗಳ ಬಗ್ಗೆ ಟ್ವೀಟ್ ಮಾಡಿದ್ರೆ, ಅದು ನಂಗೆ ಅಂದ್ರೆ ಜವಾಬ್ದಾರ ನಾನಲ್ಲ: ಸಿದ್ದಾರ್ಥ್

    ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೂ ಕೂಡ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಘಟನೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಾ ಅಭಿಮಾನಿಗಳ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇದನ್ನೂ ಓದಿ:  ಟಾಮ್ ಬಾಯ್ ಲುಕ್‍ನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

    ರಮ್ಯಾ ಸುದೀಪ್ ಅವರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ರಂಗ ಎಸ್‍ಎಸ್‍ಎಲ್‍ಸಿ, ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆ ಮಾತು ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್ ನಟಿಸಿದ್ದರು. ಮತ್ತೆ ಅವರು ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.