Tag: actress

  • ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಬೆಂಗಳೂರು: ಫ್ಯಾಟ್‌ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಕಿರುತೆರೆ ಯುವ ನಟಿ ಚೇತನಾ ರಾಜ್‌ ಮೃತಪಟ್ಟಿದ್ದಾರೆ.

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಟಿ ದುರಂತ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ನಟಿ ಕುಟುಂಬ ವಾಸವಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ನಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಮಂಡ್ಯ ಹುಡುಗರ ಪ್ರೀತಿಗೆ ಸನ್ನಿ ಲಿಯೋನ್ ಫಿದಾ

    ಫ್ಯಾಟ್ ಚಿಕಿತ್ಸೆಗೆಂದು ನಿನ್ನೆ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸಿರಿಯಸ್‌ ಆಗಿ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಕಲರ್ಸ್ ಕನ್ನಡದಲ್ಲಿ ಬರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ದಾರಾವಾಹಿಗಳಲ್ಲಿ ಚೇತನಾ ರಾಜ್‌ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟಿಸಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅವರಿಗೆ ಕಲರ್ಸ್ ಕನ್ನಡದ ʻಒಲವಿನ ನಿಲ್ದಾಣʼ ಅನ್ನೋ ಹೊಸ ಧಾರವಾಹಿಯಲ್ಲಿ ಮುಖ್ಯ ಪಾತ್ರ ಸಿಕ್ಕಿತ್ತು. ಇದನ್ನೂ ಓದಿ: ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಪೋಷಕರಿಗೆ ಮಾಹಿತಿ ನೀಡದೇ ಚೇತನಾ ರಾಜ್ ಫ್ಯಾಟ್‌ ಸರ್ಜರಿ ಮಾಡಿಸಿಕೊಂಡಿದ್ದರು. ಸೋಮವಾರ ಬೆಳಗ್ಗೆ 9:30 ಕ್ಕೆ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಂತರ ವಿಚಾರ ಗೊತ್ತಾಗಿ ಪೋಷಕರು ಆಸ್ಪತ್ರೆಗೆ ಹೋಗಿದ್ದರು. ಸರ್ಜರಿ ನಂತರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ನಟಿ ಪರಿಸ್ಥಿತಿ ಗಂಭೀರವಾಗಿದೆ. ನಾಲ್ಕು ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಅಷ್ಟರಲ್ಲಾಗಲೇ ನಟಿ ಮೃತಪಟ್ಟಿದ್ದಾರೆ.

    ವೈದ್ಯರ ನಿರ್ಲಕ್ಷ್ಯದಿಂದ ಚೇತನಾ ರಾಜ್‌ ಮೃತಪಟ್ಟಿದ್ದಾಳೆ. ಯಾವುದೇ ಪೋಷಕರ ಅನುಮತಿ ಇಲ್ಲದೇ ಹೇಗೆ ಸರ್ಜರಿ ಮಾಡಿದರು. ಆಸ್ಪತ್ರೆಯವರೇ ಚೇತನಾ ರಾಜ್ ಸಾವಿಗೆ ಕಾರಣ. ಚೇತನಾ ರಾಜ್ ದೊಡ್ಡಪ್ಪ ರಾಜಣ್ಣ ಆರೋಪಿಸಿದ್ದಾರೆ.

  • ‘ಆಮ್ ಆದ್ಮಿ ಪಕ್ಷ’ ಸೇರಿಕೊಂಡ ಅಡಲ್ಟ್ ಕಾಮಿಡಿ ನಟಿ ಕಂಗನಾ

    ‘ಆಮ್ ಆದ್ಮಿ ಪಕ್ಷ’ ಸೇರಿಕೊಂಡ ಅಡಲ್ಟ್ ಕಾಮಿಡಿ ನಟಿ ಕಂಗನಾ

    ಗ್ರೇಟ್ ಗ್ರ್ಯಾಂಡ್ ಮಸ್ತಿ ಎಂಬ ಅಡಲ್ಟ್ ಕಾಮಿಡಿ ಸಿನಿಮಾದ ಮೂಲಕ ಫೇಮಸ್ ಆಗಿರುವ ಕಂಗನಾ ಶರ್ಮಾ ಇದೀಗ ಹರಿಯಾಣದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ಈ ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ಅಫ್ತಾಭ್ ಶಿವದಾಸ್ ಅವರ ನಾದಿನಿ ಪಾತ್ರ ಮಾಡಿದ್ದ ಕಂಗನಾ, ನಂತರ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಗುರುವಾರ (ಮೇ 12) ಆಮ್ ಆದ್ಮಿ ಪಾರ್ಟಿ ಸೇರುತ್ತಿದ್ದಂತೆಯೇ ಕಂಗನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಕಂಗನಾ ಹಾಟ್ ಹಾಟ್ ಫೋಟೋಗಳನ್ನು ಅಭಿಮಾನಿಗಳು ಅಪ್ ಲೋಡ್ ಮಾಡುತ್ತಿದ್ದು, ಆಮ್ ಆದ್ಮಿ ಪಕ್ಷದ ಕುರಿತು ನಾನಾ ರೀತಿಯ ಟ್ರೋಲ್ ಗಳನ್ನೂ ಮಾಡಲಾಗುತ್ತಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ತಾವು ಆಮ್ ಆದ್ಮಿ ಪಕ್ಷವನ್ನು ಸೇರಿಕೊಂಡಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಂಗನಾ, ‘ನಿಮ್ಮ ಪ್ರೀತಿ ಮತ್ತು ಬೆಂಬಲ ನಿರಂತರವಾಗಿರಲಿ. ನಿಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷ ಕೂಡ ತನ್ನ ಅಧಿಕೃತ ಪೇಜ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    2016ರಲ್ಲಿ ಬಾಲಿವುಡ್ ಪ್ರವೇಶ ಮಾಡಿರುವ ಈ ನಟಿ, ಆನಂತರ ಸಾಕಷ್ಟು ಚಿತ್ರಗಳಲ್ಲಿ ಮತ್ತು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಹಾಟ್ ಹಾಟ್ ಪಾತ್ರಗಳಿಗೆ ಸೀಮಿತವಾಗಿ ಉಳಿದರೂ, ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ‘ರಾಮ್ ರತನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರೆ, ಮ್ಯೂಸಿಕ್ ವಿಡಿಯೋ ಸಾಂಗ್ ಗಳಿಗೂ ಹೆಜ್ಜೆ ಹಾಕಿದ್ದಾರೆ.

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ವೀಕೆಂಡ್ ನಲ್ಲಿ ರಿಲ್ಯಾಕ್ಸ್ ಆಗಿದ್ದ ಅಭಿಮಾನಿಗಳ ಮೆದುಳಿಗೆ ಸಖತ್ ಕೆಲಸ ಕೊಟ್ಟಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ. ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಮತ್ತು ಕರಣ್ ಜೋಶಿ ಅವರೊಂದಿಗಿರುವ ಫೋಟೋ ವೈರಲ್ ಆಗಿದ್ದು, ಆತ್ಮೀಯವಾಗಿರುವ ಈ ಫೋಟೋ ಕುರಿತು ಏನೆಲ್ಲ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್ 

    ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿಯಂತೂ ಹಲವು ದಿನಗಳಿಂದ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ರಮ್ಯಾ ಕೂಡ ಸಿನಿಮಾ ಸಂಬಂಧಿ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಫಸ್ಟ್ ಲುಕ್, ಟ್ರೇಲರ್ ರಿಲೀಸ್, ಪ್ರಶಸ್ತಿ ಪ್ರದಾನ ಸಮಾರಂಭ ಹೀಗೆ ಸಿನಿಮಾ ರಂಗದ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಕುರಿತೂ ಹಲವು ಮಾತುಗಳು ಕೇಳಿ ಬರುತ್ತಿವೆ.

    ಕರಣ್ ಜೋಶಿ ಅವರ ಜೊತೆ ಇರುವ ರಮ್ಯಾ ಫೋಟೋ ಹಿಂದಿನ ಉದ್ದೇಶವೇನು? ಯಾರದು ಈ ಕರಣ್ ಜೋಶಿ ಹೀಗೆ ಅನೇಕ ಮಾರ್ಗದಲ್ಲಿ ಹುಡುಕಾಟ ಆರಂಭಿಸಿದ್ದಾರೆ ಅಭಿಮಾನಿಗಳು. ನಿನ್ನೆಯಷ್ಟೇ ರಮ್ಯಾ ಅವರು ಈ ಫೊಟೋವನ್ನು ಇನ್ಸ್ಟ್  ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಆ ನಂತರ ರಮ್ಯಾ ಆಫೀಸಿಯಲ್ ಪೇಜ್ ನಲ್ಲೂ ಅದನ್ನು ಶೇರ್ ಮಾಡಲಾಗಿದೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ ಫೋಟೋ ಶೇರ್ ಮಾಡಿದ ಸಿಂಡ್ರೆಲಾ 

    ರಮ್ಯಾ ಏನೇ ಮಾಡಿದರೂ ಅಲ್ಲೊಂದು ದೊಡ್ಡ ಸುದ್ದಿ ಆಗುತ್ತದೆ. ಹಾಗಾಗಿ ಈ ಫೋಟೋ ಕುರಿತಾಗಿಯೂ ಸಖತ್ ಸುದ್ದಿಯಾಗಿದೆ. ಆ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಅನ್ನುವುದನ್ನು ಸ್ವತಃ ರಮ್ಯಾ ಅವರೇ ಹೇಳಬೇಕಿದೆ.

  • 5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸಿ 4 ಬಾರಿ ಐವಿಎಫ್ ಚುಚ್ಚುಮದ್ದು ಪಡೆದ ನಟಿ

    5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸಿ 4 ಬಾರಿ ಐವಿಎಫ್ ಚುಚ್ಚುಮದ್ದು ಪಡೆದ ನಟಿ

    ಮುಂಬೈ: ಕಿರಿತೆರೆಯ ನಟಿ ಸಂಭಾವ್ನಾ ಸೆಠ್ 5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸುತ್ತಿದ್ದು, ಇದರ ಸಲುವಾಗಿ ಅವರು 4 ಬಾರಿ ಐವಿಎಫ್ ಮೂಲಕ ಚಿಕಿತ್ಸೆ ಪಡೆದ್ರೂ ವಿಫಲವಾಗಿದ್ದಾರೆ.

    ಈ ಕುರಿತು ಅವರೇ ಖುದ್ದಾಗಿ ತಮ್ಮ ಯೂಟ್ಯೂಬ್ ಚಾನೆಲ್‍ವೊಂದರಲ್ಲಿ ಹೇಳಿಕೊಂಡಿದ್ದು, ನಟಿಯು ಆಗಾಗ ತಮ್ಮ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಅವರು ತಮ್ಮ ಗರ್ಭಾವಸ್ಥೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.

    2016ರಲ್ಲಿ ನಟಿಯು ಅವಿನಾಶ್ ದ್ವಿವೇದಿ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ 1 ವರ್ಷದ ನಂತರ ದಂಪತಿ ಮಗುವನ್ನು ಹೊಂದಲು ಯೋಜಿಸಿದ್ದರು. ಆದರೆ ನಟಿ ಸಂಭವ್ನಾ ಅವರ ವಯಸ್ಸು ಮೀರಿದ್ದ ಕಾರಣ ಅವರು ಐವಿಎಫ್ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು. ದುರದೃಷ್ಟವಶಾತ್, ನಾಲ್ಕು ಬಾರಿ ಐವಿಎಫ್ ಚುಚ್ಚುಮದ್ದು ಪಡೆದು ಗರ್ಭಧರಿಸಲು ಪ್ರಯತ್ನಿಸಿದರೂ, ಅವರು ತಾಯಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

    ಆದಾಗ್ಯೂ, ಸಂಭಾವ್ನಾ ಅವರು ಧೃತಿಗೆಡದೆ 5ನೇ ಬಾರಿಗೆ ಐವಿಎಫ್ ಮೂಲಕ ತಾಯಿಯಾಗಲು ಪ್ರಯತ್ನಿಸುತ್ತಿದ್ದಾರೆ. ದಂಪತಿಯು 2017ರಿಂದ ಮಗು ಹೊಂದಲು ಪ್ರಯತ್ನಿಸುತ್ತಿದ್ದು, ಕೆಲ ಜನರು ಅವರ ಗರ್ಭಾವಸ್ಥೆ ಕುರಿತು ಹಿಯಾಳಿಸತೊಡಗಿದ್ದಾರೆ ಎಂದು ಹೇಳಿದರು.

    ಎಷ್ಟು ದಿನ ನಾಯಿಗಳನ್ನು ಪ್ರೀತಿ ಮಾಡುತ್ತಾ ಇರುತ್ತೀರಾ..?. ನಿಮ್ಮದೇ ಆದ ಮಗುವೊಂದನ್ನು ಹೆತ್ತುಕೊಳ್ಳಿ ಎಂದು ಹಿಯಾಳಿಸುತ್ತಿದ್ದಾರೆ. ಅದಲ್ಲದೆ ಅವರ ದೇಹದ ತೂಕದ ಬಗ್ಗೆಯು ಜನರು ಎಷ್ಟು ದಪ್ಪ ಆಗಿದ್ದೀರಾ ಅಂತ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಐವಿಎಫ್ ಚುಚ್ಚುಮದ್ದಿನಿಂದಾಗಿ ನನ್ನ ದೇಹವೂ ಇಷ್ಟೊಂದು ದಪ್ಪ ಆಗಿದೆ. ಮಗು ಹೊಂದಲು ಜೀವನದಲ್ಲಿ ತುಂಬಾ ಹಿಂಸೆ ಅನುಭವಿಸುತ್ತಿದ್ದೇವೆ ಎಂದು ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋ ಕೊನೆಯಲ್ಲಿ ಸಂಭಾವ್ನಾ ಅವರು ನಾನು ಏನನ್ನು ಬಿಟ್ಟುಕೊಡುವವಳಲ್ಲ, ನಾನು ಹೋರಾಟಗಾರ್ತಿ. ಈ ಬಾರಿಯೂ ಪೂರ್ಣ ಧೈರ್ಯದೊಂದಿಗೆ ಐವಿಎಫ್ ಅನ್ನು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

    ಏನಿದು ಐವಿಎಫ್?
    ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧರಿಸಬಹುದು. ಈ ವಿಧಾನದಲ್ಲಿ, ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ.

    ಉತ್ತಮ ಲ್ಯಾಬ್ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‍ಗೆ ಸುಮಾರು 1.75 ರೂ. ವೆಚ್ಚ ತಗುಲಬಹುದು.

  • ತಾರಾ ತಾಯಿ ನಿಧನ : ಆನೆಕಲ್ ನಲ್ಲಿ ಪುಷ್ಪಾ ಅವರ ಅಂತ್ಯಕ್ರಿಯೆ

    ತಾರಾ ತಾಯಿ ನಿಧನ : ಆನೆಕಲ್ ನಲ್ಲಿ ಪುಷ್ಪಾ ಅವರ ಅಂತ್ಯಕ್ರಿಯೆ

    ದಿಢೀರ್ ಅನಾರೋಗ್ಯದ ಕಾರಣದಿಂದಾಗಿ ನಿನ್ನೆ ಮೈಸೂರಿನಲ್ಲಿ ನಿಧನ ಹೊಂದಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅವರ ತಾಯಿ ಪುಷ್ಪಾ ಅಂತ್ಯಕ್ರಿಯೆಯನ್ನು ಆನೆಕಲ್ ನಲ್ಲಿ ಮಾಡುವುದಾಗಿ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅಂತ್ಯಕ್ರಿಯೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.  ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ತಾರಾ ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಸಿನಿಮಾ ರಂಗದ ಅನೇಕ ಗಣ್ಯರು ಮತ್ತು ರಾಜಕೀಯ ಮುಖಂಡರು ಆಗಮಿಸಿ ಅಂತಿಮ ದರ್ಶನ ಪಡೆದರು. ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. 76 ವರ್ಷದ ಪುಷ್ಪಾ ಅವರು ತಾರಾ ಅವರ ಜೊತೆ ಮೈಸೂರಿನಲ್ಲಿ ನಿನ್ನೆ ನಡೆದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣದ ವೇಳೆ ತೀವ್ರವಾಗಿ ವಾಂತಿಯಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ತಾರಾ ಅವರ ಜೊತೆಯೇ  ಯಾವಾಗಲೂ ಅವರ ತಾಯಿ ಇರುತ್ತಿದ್ದರು. ಶೂಟಿಂಗ್ ನಡೆಯುವ ಸ್ಥಳಕ್ಕೂ ಮಗಳೊಂದಿಗೆ ಪುಷ್ಪಾ ಅವರು ಹೋಗುತ್ತಿದ್ದರು. ಈ ಬಾರಿ ಹೋದಾಗ ಇಂಥದ್ದೊಂದು ದುರಂತ ಸಂಭವಿಸಿದೆ.

  • ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಅತೀ ಚಿಕ್ಕ ವಯಸ್ಸಿನಲ್ಲೇ ನಟನೆ ಮತ್ತು ನಿರ್ದೇಶನವನ್ನು ಸಂಭಾಳಿಸಿಕೊಂಡು ಅಪರೂಪ ಎನ್ನುವಂತಹ ಚಿತ್ರ ಕೊಟ್ಟವರು ಐಶಾನಿ ಶೆಟ್ಟಿ. ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳದೇ ಪ್ರೇಕ್ಷಕರ ಮನತಟ್ಟುವಂತಹ ಪಾತ್ರಗಳಲ್ಲಿ ಈವರೆಗೂ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಹೊಂದಿಸಿ ಬರೆಯಿರಿ ಮತ್ತು ಧರಣಿ ಮಂಡಲ ಚಿತ್ರಗಳಲ್ಲಿ ನಟಿಸಿರುವ ಇವರು, ಚಿತ್ರವೊಂದರ ನಿರ್ದೇಶನಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ್ದಾರೆ.

    ಇಂಜಿನಿಯರಿಂಗ್ ಸ್ಟೂಡೆಂಟ್ ಬದುಕನ್ನು ಆಧರಿಸಿದ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಐಶಾನಿ ಶೆಟ್ಟಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದು, ಮಹತ್ವಾಕಾಂಕ್ಷಿ ಇಟ್ಟುಕೊಂಡಿರುವ ಹುಡುಗಿಯ ಪಾತ್ರವನ್ನು ಈ ಸಿನಿಮಾದಲ್ಲಿ ಅವರು ನಿರ್ವಹಿಸಿದ್ದಾರೆ. ‘ಹೊಂದಿಸಿ ಬರೆಯಿರಿ ಸಿನಿಮಾ ಬಹುತೇಕರ ಬದುಕನ್ನು ಪ್ರತಿನಿಧಿಸುವಂಥದ್ದು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನವನ್ನು ಸಿನಿಮಾದಲ್ಲಿ ತೋರಿಸಿದ್ದರೂ, ಅದು ಬದುಕಿನ ಬೇರೆ ಬೇರೆ ಮಜಲುಗಳ ದರ್ಶನ ಮಾಡಿಸುತ್ತದೆ. ನನ್ನ ಪಾತ್ರವೇ ವಿಶೇಷವಾಗಿದೆ.  ತನ್ನ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡ ಹುಡುಗಿಯೊಬ್ಬಳು, ಅದನ್ನು ಪಡೆಯಲು ಏನೆಲ್ಲ ಹರಸಾಹಸ ಮಾಡುತ್ತಾಳೆ ಎನ್ನುವ ಹಿನ್ನೆಲೆಯಿದೆ. ಮೊನ್ನೆಯಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ತುಂಬಾ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಅಂತಾರೆ ಐಶಾನಿ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಬೋಲ್ಡ್ ಕ್ಯಾರೆಕ್ಟರ್

    ಧರಣಿ ಮಂಡಲ ಸಿನಿಮಾದಲ್ಲಿ ಈವರೆಗೂ ಮಾಡದೇ ಇರುವಂತಹ ಪಾತ್ರವನ್ನು ಐಶಾನಿ ಶೆಟ್ಟಿ ನಿರ್ವಹಿಸಿದ್ದಾರಂತೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಹಾದಿ ತಪ್ಪಿರುವ ಹುಡುಗಿಯ ಬದುಕನ್ನು ಐಶಾನಿ ಪಾತ್ರ ಪ್ರತಿನಿಧಿಸುತ್ತದೆಯಂತೆ. ಅಲ್ಲದೇ, ಈವರೆಗೂ ನೋಡಿರದೇ ಇರುವ ಐಶಾನಿ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ‘ನಿಜ, ನಾನು ಈವರೆಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೆ. ಆದರೆ, ಮೊದಲ ಬಾರಿಗೆ ಬೋಲ್ಡ್ ಆಗಿ ಇರುವಂಥ ಪಾತ್ರ ಪೋಷಿಸುತ್ತಿದ್ದೇನೆ. ಅವಳು ಎಲ್ಲ ರೀತಿಯಲ್ಲೂ ಬೋಲ್ಡ್. ಡೈಲಾಗ್, ಪಾತ್ರ ವರ್ತಿಸುವ ರೀತಿ, ಆಕೆಯ ಹಿನ್ನೆಲೆ ಹೀಗೆ ಎಲ್ಲವೂ ಹೊಸದಾಗಿದೆ. ಈ ಕಾರಣಕ್ಕಾಗಿ ಇಂಥದ್ದೊಂದು ಪಾತ್ರವನ್ನು ನಾನು ಒಪ್ಪಿಕೊಂಡೆ’ ಎನ್ನುವುದು ಐಶಾನಿ ಮಾತು. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

    ನಿರ್ದೇಶಕಿಯಾಗುವ ಕನಸು

    ಐಶಾನಿ ಶೆಟ್ಟಿ ಈಗಾಗಲೇ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದಕ್ಕೆ ಹಲವು ಪ್ರಶಸ್ತಿಗಳು ಕೂಡ ಬಂದಿವೆ. ಈಗ ಸಿನಿಮಾ ಮಾಡುವತ್ತ ಮುಖ ಮಾಡಿದ್ದಾರೆ. ಈಗಾಗಲೇ ಕಥೆಯನ್ನು ಕೂಡ ಬರೆದುಕೊಂಡಿದ್ದಾರೆ. ತಮ್ಮೂರಿನ ಹಿನ್ನೆಲೆಯಾಗಿಟ್ಟುಕೊಂಡು ಕಥೆ ಸಿದ್ಧಪಡಿಸಿರುವ ಅವರು, ಈ ವರ್ಷ ಸಿನಿಮಾ ನಿರ್ದೇಶನವನ್ನು ಮಾಡಲಿದ್ದಾರಂತೆ. ನಿರ್ದೇಶನದ ಜತೆಗೆ ಈ ಸಿನಿಮಾದಲ್ಲಿ ಅವರೇ ಮುಖ್ಯ ಪಾತ್ರವನ್ನೂ ನಿಭಾಯಿಸುತ್ತಿರುವುದು ವಿಶೇಷ. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

     

    ‘ನನ್ನೂರಿನ ಕಥೆಯನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇನೆ. ಅದೊಂದು ಅಪರೂಪದ ಕಥೆ. ಅದನ್ನು ನಾನು ಜನರಿಗೆ ಹೇಳಲೇಬೇಕಿದೆ. ಹಾಗಾಗಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವೆ. ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊರುತಿದ್ದೇನೆ. ಆದಷ್ಟು ಬೇಗ ಎಲ್ಲ ಮಾಹಿತಿಯನ್ನೂ ಹಂಚಿಕೊಳ್ಳುತ್ತೇನೆ’ ಎಂದರು ಐಶಾನಿ.

  • ರಷ್ಯಾ ರಾಕೆಟ್ ದಾಳಿಗೆ ಉಕ್ರೇನಿಯನ್ ಜನಪ್ರಿಯ ನಟಿ ದುರ್ಮರಣ

    ರಷ್ಯಾ ರಾಕೆಟ್ ದಾಳಿಗೆ ಉಕ್ರೇನಿಯನ್ ಜನಪ್ರಿಯ ನಟಿ ದುರ್ಮರಣ

    ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಮುಂದುವರಿದಿದ್ದು, 23ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ರಷ್ಯಾದ ರಾಕೆಟ್ ದಾಳಿಗೆ ಉಕ್ರೇನಿನ ಜನಪ್ರಿಯ ನಟಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.

    ನಟಿಯನ್ನು ಒಕ್ಸಾನಾ ಶ್ವೇಟ್ಸ್‍ನ್ನು(67) ಎಂದು ಗುರುತಿಸಲಾಗಿದೆ. ಕೀವ್‍ನ ರೆಸಿಡೆನ್ಶಿಯಲ್ ಕಟ್ಟಡದ ಮೇಲಾದ ರಾಕೆಟ್ ದಾಳಿಯಲ್ಲಿ ಇವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒಕ್ಸಾನಾಗೆ ಸ್ಥಳೀಯ ಸರ್ಕಾರ ಉಕ್ರೇನ್‍ನ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ ‘ಉಕ್ರೇನ್‍ನ ಗೌರವಾನ್ವಿತ ಕಲಾವಿದೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದನ್ನೂ ಓದಿ: ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

    ಫೆಬ್ರವರಿ 24 ರಂದು ಉಕ್ರೇನ್‍ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಷ್ಯಾಗೆ ಈವರೆಗೂ ಮೇಲುಗೈ ಸಾಧಿಸಲು ಆಗ್ತಿಲ್ಲ. ಉಕ್ರೇನ್ ಸೈನಿಕರ ಸಮರ್ಥ ದಾಳಿಗಳಿಂದ ಕಂಗಟ್ಟಿರುವ ರಷ್ಯಾ ಪಡೆಗಳು ಹೆಚ್ಚುಕಡಿಮೆ ಮುಂದಕ್ಕೆ ಚಲಿಸಲಾಗದ ಚಕ್ರವ್ಯೂಹದಲ್ಲಿ ಸಿಲುಕಿವೆ. ಭೂಮಿ, ಸಮುದ್ರ, ಆಕಾಶ ಮಾರ್ಗವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆಗೆ ಆಗ್ತಿಲ್ಲ. ಬದಲಾಗಿ ಭಾರಿ ನಷ್ಟ ವಾಗುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ನಡುವೆ ಚೆರ್ನಿಹೀವ್‍ನಲ್ಲಿ ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ ನಡೆಸಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ಒಂದು ಹಂತದಲ್ಲಿ ತೀವ್ರ ಒತ್ತಡದಲ್ಲಿರುವ ರಷ್ಯಾ ಪಡೆಗಳು, ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡ್ತಿವೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಇಂದು ಮರಿಯುಪೋಲ್‍ನ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ಹಾಕಿದ್ದು, ರಕ್ತದೋಕುಳಿಯೇ ಹರಿದಿದೆ. ಇಲ್ಲಿ ಮಕ್ಕಳು ಸೇರಿ, 1,200ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಇವರೆಲ್ಲಾ ಸತ್ತು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಿಡ್ನಾಪ್ ಆಗಿದ್ದ ಮೆಲಿಟಪೋಲ್ ಮೇಯರ್ರನ್ನು ರಷ್ಯಾ ರಿಲೀಸ್ ಮಾಡಿದೆ. ಇದಕ್ಕೆ ಪ್ರತಿಯಾಗಿ ರಷ್ಯಾದ 9 ಸೈನಿಕರನ್ನು ಉಕ್ರೇನ್ ಬಿಡುಗಡೆ ಮಾಡಿದೆ.

  • ಟ್ರೆಡಿಶನ್ ಲುಕ್‍ನಂತೆ ಮಾಡರ್ನ್ ಡ್ರೆಸ್‍ನಲ್ಲೂ ಸಖತ್ ಕ್ಯೂಟ್ ರಂಜನಿ ರಾಘವನ್

    ಟ್ರೆಡಿಶನ್ ಲುಕ್‍ನಂತೆ ಮಾಡರ್ನ್ ಡ್ರೆಸ್‍ನಲ್ಲೂ ಸಖತ್ ಕ್ಯೂಟ್ ರಂಜನಿ ರಾಘವನ್

    ಬೆಂಗಳೂರು: ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ರಂಜನಿ ರಾಘವನ್ ಅವರು ಸರಳ ಸ್ವಭಾವವುಳ್ಳವರು, ಚೆಂದುಳ್ಳಿ ಚೆಲುವೆ, ಟ್ರೆಡಿಶನ್ ಲುಕ್‍ಗೆ ಹೇಳಿ ಮಾಡಿಸಿದ ನಟಿ. ಆದರೆ ಈ ನಟಿ ಮಾಡರ್ನ್ ಲುಕ್‍ನಲ್ಲಿಯೂ ಸಖತ್ ಆಗಿಯೇ ಕಾಣುತ್ತಾರೆ ಎನ್ನುವುದಕ್ಕೆ ಬೆಸ್ಟ್ ಎಕ್ಸಾಂಪಲ್ ಇತ್ತೀಚೆಗೆ ಮಾಡಿಸಿರುವ ಫೋಟೋಶೂಟ್ ಆಗಿದೆ.

    ಹೌದು, ರಂಜನಿ ರಾಘವನ್ ಎಂದರೆ ನೆನಪಿಗೆ ಬರುವುದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ. ಈ ಸೀರಿಯಲ್ ಮೂಲಕವಾಗಿ ಕಿರುತೆರೆಗೆ ಎಂಟ್ರಿಕೊಟ್ಟು ತಮ್ಮದೇ ಆಗಿರುವ ನಟನಾ ಶೈಲಿಯ ಮೂಲಕವಾಗಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕೆಲವು ಮನೆಯಲ್ಲಿ ಪ್ರತಿನಿತ್ಯ ಮನೆಗೆ ಬರುವ ಮನೆ ಮಗಳಾಗಿದ್ದಾರೆ. ಇವರ ನಟನೆ, ಸರಳತೆಯನ್ನು ಹೆಚ್ಚಿನ ಅಭಿಮಾನಿಗಳು ಇಷ್ಟಪಡುತ್ತಾರೆ. ಈ ನಟಿ ತಾನು ಸಾಂಪ್ರದಾಯಿಕ ಉಡುಗೆಯಷ್ಟೆ, ಮಾಡರ್ನ್ ಡ್ರೆಸ್‍ನಲ್ಲೂ ಅಷ್ಟೇ ಸುಂದರವಾಗಿ ಕಾಣುತ್ತೇನೆ ಎನ್ನುವಂತೆ ಒಂದು ಫೋಟೋಶೂಟ್ ಮಾಡಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಹೊಸ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು, ಮಹಿಳಾ ದಿನದ ಶುಭಾಶಯಗಳು ಆಲ್ ಮೈ ಲವ್ಲಿ ಲೇಡೀಸ್ ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    ಟ್ರೆಡಿಶನ್ ಔಟ್ ಫಿಟ್‍ನಲ್ಲೇ ಕಾಣಿಸಿಕೊಳ್ಳುವ ರಂಜನಿ ರಾಘವನ್ ಅವರು ಹೊಸ ಲುಕ್‍ನಲ್ಲಿ, ಸಖತ್ ಮಾಡರ್ನ್ ಸ್ಟೈಲ್‍ನಲ್ಲಿ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋವನ್ನು ಮಹಿಳಾ ದಿನಾಚರಣೆಯ ದಿನದ ಅಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ರಂಜನಿ ಅವರ ಸ್ಟೈಲ್‍ಗೆ ಫಿದಾ ಆಗಿರುವುದಾಗಿ ತಿಳಿಸುತ್ತಿದ್ದಾರೆ.

    ನೀಲಿ ಮತ್ತು ಕಪ್ಪು ಬಣ್ಣವಿರುವ ವೆಸ್ಟರ್ನ್ ಡ್ರೆಸ್ ತೊಟ್ಟಿದ್ದಾರೆ. ರಂಜನಿ ಅವರು ಡ್ರೆಸ್, ಹೇರ್‌ಸ್ಟೈಲ್‌  ಚೇಂಜ್ ಮಾಡಿಕೊಂಡಿದ್ದಾರೆ. ಕಂಪ್ಲೀಟ್ ಡಿಫರೆಂಟ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

  • ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಮುಂಬೈ: ಬಾಲಿವುಡ್‌ನ ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಝೈರಾ ವಾಸಿಮ್ ಕರ್ನಾಟಕದ ಹಿಜಬ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಪ್ರೀತಿಸುವ ದೇವರು ತನ್ನ ಮೇಲೆ ವಿಧಿಸಿರುವ ಬಾಧ್ಯತೆ ಎಂದಿದ್ದು, ಹಿಜಬ್ ನಿಷೇಧವನ್ನು ಖಂಡಿಸಿದ್ದಾರೆ.

    ಹಿಜಾಬ್ ಇಸ್ಲಾಂನ ಒಂದು ಬಾಧ್ಯತೆ, ಆಯ್ಕೆಯಲ್ಲ ಎಂದು ಹೇಳಿದ ಝೈರಾ ನಾನು ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಬ್ ಧರಿಸಿಸುತ್ತೇನೆ. ಕೇವಲ ಧಾರ್ಮಿಕ ಬದ್ಧತೆಯನ್ನು ನಿರ್ವಹಿಸುವುದಕ್ಕಾಗಿ ಮಹಿಳೆಯರನ್ನು ನಿಲ್ಲಿಸಿ ಕಿರುಕುಳ ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಮಡಿಕೇರಿ ಪ್ರಿನ್ಸಿಪಾಲರಿಗೆ ಜೀವ ಬೆದರಿಕೆ

     

    View this post on Instagram

     

    A post shared by Zaira Wasim (@zairawasim_)

    ಅಮೀರ್ ಖಾನ್‌ರ ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಝೈರಾ 2019ರಲ್ಲಿ ಬಾಲಿವುಡ್ ತೊರೆದಿದ್ದರು. ಇದೀಗ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಝೈರಾ ಕರ್ನಾಟಕದ ಹಿಜಬ್ ನಿಷೇಧ ಹಾಗೂ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಕಿರುಕುಳವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ಹಾಗೂ ಹಿಜಬ್ ನಡುವೆ ಆಯ್ಕೆಯಾಗಿಸುವಂತೆ ಮಾಡಿರುವುದು ಅನ್ಯಾಯ. ಇದೆಲ್ಲವನ್ನೂ ಸಬಲೀಕರಣ ಹೆಸರಿನಲ್ಲಿ ಮಾಡಲಾಗುತ್ತಿದೆ. ಆದರೆ ಇದು ಮುಸ್ಲಿಮ್ ಮಹಿಳೆಗೆ ಪಕ್ಷಪಾತವಾಗಿದೆ ಎಂದು ತಿಳಿಸಿದ್ದಾರೆ.

  • ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ತುಂಬು ಗರ್ಭಿಣಿ ಅಮೂಲ್ಯ

    ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ತುಂಬು ಗರ್ಭಿಣಿ ಅಮೂಲ್ಯ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಇಂದು ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಇಂದು ವಿಜಯನಗರದ ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರಿಂದ ಭಗವದ್ಗೀತೆ ಗ್ರಂಥವನ್ನು ಪಡೆದಿದ್ದು, ಮನಸ್ಸಿಗೆ ಸಂತೋಷ ನೀಡಿತು ಎಂದು ತಿಳಿಸಿದ್ದಾರೆ.

    2017ರಲ್ಲಿ ಜಗದೀಶ್ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಜಾಸ್ತಿ ಗಮನ ನೀಡುತ್ತಿದ್ದಾರೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ವಿಚಾರವನ್ನು ಕೆಲವೇ ದಿನಗಳ ಹಿಂದೆ ಅಮೂಲ್ಯ ಮತ್ತು ಜಗದೀಶ್ ದಂಪತಿ ತಿಳಿಸಿದ್ದರು. ಇದನ್ನೂ ಓದಿ:  ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ

    ಕೆಲವು ದಿನಗಳ ಹಿಂದೆ ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಸೀಮಂತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ:  ಸಖತ್ ಹಾಟ್ ಫೋಟೋಗಳಿಂದ ಮೋಡಿ ಮಾಡಿದ ರಾಯ್ ಲಕ್ಷ್ಮೀ