Tag: actress

  • ಕನ್ನಡದ ನಟಿ ವೇದಿಕಾಗೆ ಕರೋನಾ ಪಾಸಿಟಿವ್ : ತೀವ್ರ ಜ್ವರದಿಂದ ಬಳಲುತ್ತಿರುವ ನಟಿ

    ಕನ್ನಡದ ನಟಿ ವೇದಿಕಾಗೆ ಕರೋನಾ ಪಾಸಿಟಿವ್ : ತೀವ್ರ ಜ್ವರದಿಂದ ಬಳಲುತ್ತಿರುವ ನಟಿ

    ಶಿವರಾಜ್ ಕುಮಾರ್ ನಟನೆಯ ಶಿವಲಿಂಗು ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿರುವ ವೇದಿಕಾಗೆ ಕರೋನಾ ಪಾಸಿಟಿವ್ ಆಗಿದೆಯಂತೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೊರೊನಾ ಲಕ್ಷಣಗಳನ್ನು ಬರೆದುಕೊಂಡಿದ್ದಾರೆ. ತಾವೀಗ ತೀವ್ರ ರೀತಿಯ ಜ್ವರದಿಂದ ನರಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಹಾಗಾಗಿ ಅಗತ್ಯ ಚಿಕಿತ್ಸೆಯನ್ನೂ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

    ಕನ್ನಡ ಸಂಗಮಾ, ಹೋಮ್ ಮಿನಿಸ್ಟರ್, ಗೌಡರ ಹೋಟೆಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ವೇದಿಕಾ ತಮಗೆ ಕೋವಿಡ್ ಸೋಂಕು ತಗಲಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನನ್ನ ದುರಾದೃಷ್ಟ ಎಂದು ಅವರು ನೋವು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಒಲವೇ ಜೀವನ ಲೆಕ್ಕಾಚಾರ ಅಂತಿದ್ದಾರೆ ಯುವ ಜೋಡಿ

    ಮೊದ ಮೊದಲ ಜ್ವರದ ಲಕ್ಷಣಗಳಷ್ಟೇ ಕಾಣಿಸಿಕೊಂಡವು. ಆನಂತರ ತೀವ್ರ ಜ್ವರ ಶುರುವಾಯಿತು. ತಡಮಾಡದೇ ನಾನು ವೈದ್ಯರನ್ನು ಸಂಪರ್ಕ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಅವರಿಗೆ 103 ಡಿಗ್ರಿ ಜ್ವರ ಇದೆಯಂತೆ. ಮೈಕೈ ನೋವಿನಿಂದಲೂ ಅವರು ನರಳುತ್ತಿದ್ದಾರಂತೆ.

    Live Tv

  • ಬದುಕು ನಡೆಸಲು ಸಾಬೂನು ಮಾರುತ್ತಿರುವ ನಟಿ ಬೇರೆ ಯಾರೂ ಅಲ್ಲ, ಹಿರಿಯನಟಿ ಲಕ್ಷ್ಮೀ ಪುತ್ರಿ ಐಶ್ವರ್ಯ

    ಬದುಕು ನಡೆಸಲು ಸಾಬೂನು ಮಾರುತ್ತಿರುವ ನಟಿ ಬೇರೆ ಯಾರೂ ಅಲ್ಲ, ಹಿರಿಯನಟಿ ಲಕ್ಷ್ಮೀ ಪುತ್ರಿ ಐಶ್ವರ್ಯ

    ನ್ನಡವೂ ಸೇರಿದಂತೆ ದಕ್ಷಿಣದ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ ಐಶ್ವರ್ಯ ಭಾಸ್ಕರನ್ ಇದೀಗ ಕೆಲಸವಿಲ್ಲದೇ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಅವರೇ ಚಾನೆಲ್ ವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ನಾನು ಒಂದ್ಹೊತ್ತು ಮಾತ್ರ ಊಟ ಮಾಡುತ್ತೇನೆ. ಚಿಕ್ಕದೊಂದು ಮನೆಯಲ್ಲಿ ವಾಸ. ಬದುಕಿಗಾಗಿ ಸಾಬೂನು ಮಾರುತ್ತಿದ್ದೇನೆ. ಮನೆಯಾಚೆ ನಗುತ್ತಿದ್ದವಳು, ಮನೆಗೆ ಬಂದ ಮೇಲೆ ದುಃಖಿಸುತ್ತೇನೆ. ನನ್ನ ಬದುಕು ಸರಿ ಹೋಗಬೇಕು ಅಂದರೆ, ಒಂದೊಳ್ಳೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗಬೇಕು’ ಎಂದಿದ್ದಾರೆ.

    ಅಂದಹಾಗೆ ಈ ಐಶ್ವರ್ಯ ಬೇರೆ ಯಾರೂ ಅಲ್ಲ, ಕನ್ನಡಿಗರೇ ಆಗಿ ಹೋಗಿರುವ ಹಿರಿಯ ನಟಿ ಲಕ್ಷ್ಮೀ ಮತ್ತು ಅವರ ಮೊದಲ ಪತಿ ಭಾಸ್ಕರ್ ದಂಪತಿ ಮಗು. 1969ರಲ್ಲಿ ಭಾಸ್ಕರ್ ಮತ್ತು ಲಕ್ಷ್ಮೀ ಹೊಸ ಜೀವನಕ್ಕೆ ಕಾಲಿಟ್ಟರು. ಆ ಹೊಸ ಜೀವನ ಅವರನ್ನು ಅಪ್ಪಿಕೊಳ್ಳಲಿಲ್ಲ. ಹಾಗಾಗಿ 1974ರಲ್ಲಿ ದೂರವಾದರು. ಅಷ್ಟರಲ್ಲೇ ಈ ದಂಪತಿಗೆ ಐಶ್ವರ್ಯ ಹುಟ್ಟಿದ್ದರು. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    ಚಿತ್ರರಂಗದಲ್ಲಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ನಟಿ ಐಶ್ವರ್ಯ ಭಾಸ್ಕರನ್ ಸೌತ್ ಸಿನಿಮಾಗಳಲ್ಲಿ ನಟಿಯಾಗಿ ಗಮನ ಸೆಳೆದಿದ್ದಾರೆ. ಕನ್ನಡದ ಹೊಸ ಕಾವ್ಯ ಸೇರಿದಂತೆ ನಾನಾ ಭಾಷೆಗಳಲ್ಲಿ  ನರಸಿಂಹಂ, ಸತ್ಯಮೇವ ಜಯತೇ, ಪ್ರಜಾ, ದಿ ಫೈರ್, ನೋಟ್ ಬುಕ್‌ನಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ನಟಿ ಐಶ್ವರ್ಯ ಹೊಟ್ಟೆಪಾಡಿಗಾಗಿ ಸಾಬೂನು ಮಾರಾಟ ಮಾಡುತ್ತಿದ್ದಾರೆ. ಅವಕಾಶಗಳ ಕೊರತೆಯಿಂದ ಜೀವನ ನಿರ್ವಹಣೆಗೆ ಸಾಬೂನು ಮಾರಾಟಕ್ಕಿಳಿದಿದ್ದಾರೆ.

    ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಐಶ್ವರ್ಯ ತಮ್ಮ ಖಾಸಗಿ ಜೀವನದ ನಿರ್ವಹಣೆಯ ಕುರಿತು ಮಾತನಾಡಿದ್ದಾರೆ. ನನಗೆ ಈಗ ಕೆಲಸವಿಲ್ಲ ಜತೆಗೆ ಜೀವನ ನಿರ್ವಹಣೆಗೆ ಹಣವಿಲ್ಲ ಮತ್ತು ಸಾಬೂನು ಮಾರುತ್ತಾ ಬೀದಿಗಳಲ್ಲಿ ವಾಸಿಸುತ್ತಿದ್ದೇನೆ. ನನಗೆ ಸಿನಿಮಾ ಮಾಡಲು ಆಸಕ್ತಿಯಿದೆ ಯಾರಾದರೂ ಸಿನಿಮಾಗಾಗಿ ಕರೆ ಮಾಡುತ್ತಾರೆ ಎಂಬ ಭರವಸೆಯಿದೆ ಎಂದು ನಟಿ ಐಶ್ವರ್ಯ ಮುಕ್ತವಾಗಿ ಮಾತನಾಡಿದ್ದಾರೆ. ಒಟ್ನಲ್ಲಿ ಎಷ್ಟೇ ಇದ್ರೂ ಮಾದರಿಯಾಗಿ ಬದುಕುತ್ತಿರುವ ನಟಿ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

    Live Tv

  • ಮಗುವಿನ ಫೇಸ್ ರಿವೀಲ್ ಮಾಡಿದ ನಟಿ ಪ್ರಣಿತಾ

    ಮಗುವಿನ ಫೇಸ್ ರಿವೀಲ್ ಮಾಡಿದ ನಟಿ ಪ್ರಣಿತಾ

    ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣಿತಾ ಈಗಾಗಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೆಣ್ಣು ಮಗವಿಗೆ ಪ್ರಣಿತಾ ಜನ್ಮ ನೀಡಿದ್ದಾರೆ. ಶುಕ್ರವಾರದಂದು ಮನೆಗೆ ಪುಟ್ಟ ಮಹಾಲಕ್ಷ್ಮಿಯ ಆಗಮನವಾಗಿದೆ. ಈ ಬೆನ್ನಲ್ಲೇ ಪ್ರಣಿತಾ, ತಮ್ಮ ಹೆರಿಗೆಯ ವೀಡಿಯೋ ಜೊತೆ ಮಗುವಿನ ಫೇಸ್ ರಿವೀಲ್ ಮಾಡಿದ್ದಾರೆ.

    `ಪೊರ್ಕಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ ಬಹುಭಾಷಾ ನಟಿಯಾಗಿ ಮಿಂಚ್ತಿರುವ ಪ್ರತಿಭಾವಂತ ನಟಿ ಪ್ರಣಿತಾ. ಬೇಡಿಕೆಯಿರುವಾಗಲೇ ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ಜೊತೆ ಹಸೆಮಣೆ ಏರಿದ್ದರು. ಈಗ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಶುಭ ಶುಕ್ರವಾರ (ಜೂ.10)ದಂದು ಮನೆಗೆ ಹೊಸ ಅತಿಥಿ ಮಹಾಲಕ್ಷ್ಮಿಯ ಆಗಮನವಾಗಿದೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಬೆನ್ನಲ್ಲೇ ತಮ್ಮ ಹೆರಿಗೆಯ ವೀಡಿಯೋ ಶೇರ್ ಮಾಡುವುದರ ಜೊತೆ ಮಗುವಿನ ಫೇಸ್ ಕೂಡ ರಿವೀಲ್ ಮಾಡಿದ್ದಾರೆ.

    ನಟಿ ಪ್ರಣಿತಾ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಇದೇ ಖುಷಿಯಲ್ಲಿ ಮಗುವಿನ ಮುಖ ಕೂಡ ರಿವೀಲ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪ್ರಣಿತಾ ಕಡೆಯದಾಗಿ ನಟಿಸಿದ ಸಿನಿಮಾ ಬಾಲಿವುಡ್‌ನ ʻಹಂಗಾಮ 2ʼ, ಮತ್ತು ʻಭುಜ್ ದಿ ಪ್ರೈಡ್‌ʼ ಮೂಲಕ ಗಮನ ಸೆಳೆದಿದ್ದರು. ಕನ್ನಡದ `ರಾಮನ ಅವತಾರ’ ಸದ್ಯದಲ್ಲೇ ತೆರೆಗೆ ಬರಲಿದೆ. ಮುಂದಿನ ದಿನಗಳಲ್ಲಿ ಚಾಲೆಂಜಿಂಗ್ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಪ್ರಣಿತಾ ಮಿಂಚಲಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಕಮ್‌ಬ್ಯಾಕ್ ಆಗಲಿದ್ದಾರೆ.

  • ಹೆಣ್ಣು ಮಗುವಿಗೆ ತಾಯಿಯಾದ ಪ್ರಣಿತಾ ಸುಭಾಷ್

    ಹೆಣ್ಣು ಮಗುವಿಗೆ ತಾಯಿಯಾದ ಪ್ರಣಿತಾ ಸುಭಾಷ್

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಂದು ಹೆಣ್ಣು ಮಗುವಿಗೆ ನಟಿ ಪ್ರಣಿತಾ ತಾಯಿಯಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

    `ಪೊರ್ಕಿ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಣಿತಾ ಸುಭಾಷ್, ಈಗ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡು, ತಮ್ಮ ತಾಯ್ತನದ ಖುಷಿಯಲ್ಲಿದ್ದರು. ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಇಂದು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟಿ ಪ್ರಣಿತಾ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಆಸ್ಟರ್‌ ಆರ್‌ವಿ ಆಸ್ಪತ್ರೆಯಲ್ಲಿ ಪ್ರಣಿತಾ ಹೆರಿಗೆಯಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ. ಈ ಕುರಿತು ನಟಿ ಪ್ರಣಿತಾ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

    ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪ್ರತಿಭಾವಂತ ನಟಿ ಪ್ರಣಿತಾ, ಬೇಡಿಕೆ ಇರುವಾಗಲೇ ಹಸೆಮಣೆ ಏರಿದ್ದರು. ಒಬ್ಬರನೋಬ್ಬರು ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ನಿತಿನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ತಾವು ತಾಯಿಯಾಗಿರುವ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಪ್ರಣಿತಾ ಮತ್ತು ಅವರ ಕುಟುಂಬ ಮುದ್ದು ಹೆಣ್ಣು ಮಗುವಿನ ಆಗಮನ ಖುಷಿಯಲ್ಲಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಗೆ ಶುಭ ಹಾರೈಸುತ್ತಿದ್ದಾರೆ.

  • ಹಾಟ್ ಅವತಾರದಲ್ಲಿ ಪಾರುಲ್ ಯಾದವ್

    ಹಾಟ್ ಅವತಾರದಲ್ಲಿ ಪಾರುಲ್ ಯಾದವ್

    ಣ್ಣದ ಲೋಕದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಬಹುಭಾಷಾ ನಟಿ ಪಾರುಲ್ ಹಾಟ್ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ನಟಿಯ ಬೋಲ್ಡ್ ಲುಕ್ಕಿಗೆ ಫ್ಯಾನ್ಸ್ ಕೂಡ ಬೋಲ್ಡ್ ಆಗಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕನ್ನಡದ ಬಚ್ಚನ್, ಆಟಗಾರ, ಜೆಸ್ಸಿ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಪಾರುಲ್ ಯಾದವ್, ಬೆಳ್ಳಿಪರದೆಯಲ್ಲಿ ಸಾಕಷ್ಟು ಸ್ಟಾರ್ ನಟರ ಜತೆ ತೆರೆಹಂಚಿಕೊಂಡಿದ್ದಾರೆ. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪಾರುಲ್ ಅಪಾರ ಅಭಿಮಾನಿಗಳ ಬಳಗವಿದೆ. ಸಿನಿಮಾಗಳ ಮಧ್ಯೆ ಟ್ರಾವೆಲಿಂಗ್ ಬಗ್ಗೆ ಹೆಚ್ಚು ಆಸಕ್ತಿ ಇರುವ ನಟಿ ಈಗ ಇದೀಗ ಹಾಟ್ ಫೋಟೋಶೂಟ್‌ನಲ್ಲಿ ಪಾರುಲ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

     

    View this post on Instagram

     

    A post shared by Parul Yadav (@theparulyadav)

    ಗ್ರೀನ್ ಕಲರ್ ಚೆಂದದ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಲುಕ್ ಮೂಲಕ ಪಾರುಲ್ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಪಾರುಲ್ ನಯಾ ಲುಕ್ ನೋಡಿರೋ ಹುಡುಗರ ಹಾರ್ಟ್ ಬೀಟ್ ಜೋರಾಗಿದೆ. ಇತ್ತೀಚೆಗಷ್ಟೇ (ಜೂ.5)ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈಗ ಹೊಸ ಲುಕ್ ಶೇರ್ ಮಾಡುವ ಮೂಲಕ ಬರ್ತಡೇ ಶುಭಾಶಯ ತಿಳಿಸಿದ ಅಭಿಮಾನಿಗಳಿಗೆ ಪಾರುಲ್ ಧನ್ಯವಾದ ತಿಳಿಸಿದ್ದಾರೆ. ಇನ್ನು ನೆಚ್ಚಿನ ನಟಿಯ ಮುಂಬರುವ ಸಿನಿಮಾಗಾಗಿ ಕಾಯ್ತಿದ್ದಾರೆ.

  • ಮನಾಲಿಯ ಹೊಸ ಮನೆಯ ಫೋಟೋ ಹಂಚಿಕೊಂಡ ಕಂಗನಾ

    ಮನಾಲಿಯ ಹೊಸ ಮನೆಯ ಫೋಟೋ ಹಂಚಿಕೊಂಡ ಕಂಗನಾ

    ಬಾಲಿವುಡ್ ಕಂಟ್ರಾವರ್ಷಿಯಲ್ ಕ್ವೀನ್ ಕಂಗನಾ ರಣಾವತ್ ಅವರ `ಧಾಕಡ್’ ಚಿತ್ರದ ಸೋಲಿನ ನಂತರ ಇದೀಗ ಕಂಗನಾ ಹೊಸ ಮನೆಯನ್ನ ಖರೀದಿಸಿದ್ದಾರೆ. ತಮ್ಮ ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಮನಾಲಿಯಲ್ಲಿರುವ ಅವರ ಹೊಸ ಮನೆಯ ಬಹಳಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.

     

    View this post on Instagram

     

    A post shared by Kangana Ranaut (@kanganaranaut)

    ಬಾಕ್ಸಾಫೀಸ್‌ನಲ್ಲಿ ಕಂಗನಾ ನಟನೆಯ `ಧಾಕಡ್’ ಚಿತ್ರ ಮಕಾಡೆ ಮಲಗಿದ ನಂತರ ಹೊಸ ಮನೆ ಖರೀದಿ ಮಾಡಿ, ಸುದ್ದಿಯಲ್ಲಿದ್ದಾರೆ. ಈ ಬಾರಿ ತಮ್ಮ ಮನೆಯನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಮನಾಲಿಯಲ್ಲಿರುವ ಕಂಗನಾ ರಣಾವತ್ ಅವರ ಹೊಸ ಮನೆಯ ಕೆಲವು ಅತ್ಯುತ್ತಮ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

     

    View this post on Instagram

     

    A post shared by Kangana Ranaut (@kanganaranaut)

    ನಾನು ಹೊಸ ಮನೆಯನ್ನು ನಿರ್ಮಿಸಿರುವ ಕುರಿತು ಹೇಳಿಕೊಂಡಿದ್ದಾರೆ. ತನ್ನ ಹೊಸ ಮನೆ ವಿಸ್ತರಣೆಯಾಗಿದೆ ಆದರೆ ಈ ಮನೆಗೆ ಸಾಂಪ್ರದಾಯಿಕ ಲುಕ್ ಕುರಿತು ಕಂಗನಾ ರಣಾವತ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ. ಕಂಗನಾ ರಣಾವತ್ ಅವರ ಈ ಮನೆಯಲ್ಲಿ, ದೊಡ್ಡ ಗೋಡೆಯ ಮೇಲೆ ಹಲವು ರೀತಿಯ ಪೇಂಟಿಂಗ್‌ಗಳನ್ನು ಅಳವಡಿಸಲಾಗಿದೆ. ಈ ಗೋಡೆಯು ವಿಶೇಷವಾಗಿದೆ ಮತ್ತು ಹಿಮಾಚಲದ ವಿವಿಧ ಸಂಪ್ರದಾಯಗಳನ್ನು ಅದರ ಮೇಲೆ ತೋರಿಸಲಾಗಿದೆ. ಮನಾಲಿಯ ಸುಂದರ ಪ್ರದೇಶದ ಮಧ್ಯೆ ಕಂಗನಾ ಚೆಂದದ ಮನೆ ಖರೀದಿಸಿದ್ದು, ನಟಿಯ ಅಭಿರುಚಿಗೆ ಮತ್ತು ಅವರ ಹೊಸ ಮನೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುವುದರ ಜತೆಗೆ ಶುಭಹಾರೈಸಿದ್ದಾರೆ.ಮನಾಲಿ

  • ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ

    ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ

    ಚಂದನವನದ ರಾಣಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಸಿನಿಮಾ ಕಾರ್ಯಕ್ರಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ತೀರಾ ರಾಜಕೀಯವಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳದೇ ಇದ್ದರೂ, ಸಿನಿಮಾಗಳ ಕಾರ್ಯಕ್ರಮಗಳು, ಟ್ರೈಲರ್, ಟೀಸರ್ ಹೀಗೆ ಒಂದಿಲ್ಲೊಂದು ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ.

    ಹೆಚ್ಚೆಚ್ಚು ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಅಭಿಮಾನಿಗಳಿಗೆ ಹೊಸ ಹೊಸ ವಿಷಯಗಳನ್ನು ಕೊಡುವ ರಮ್ಯಾ ಅವರಿಗೆ ಕಿಡಿಗೇಡಿಯೊಬ್ಬ ಇನ್ಸ್ಟಾದಲ್ಲಿ ನಿಂದನೆ ಮಾಡಿದ್ದಾನಂತೆ. ಹಾಗಾಗಿ ಅವರು ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಇರುವ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರಂತೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ತಮಗೆ ಇನ್ಸ್ಟಾಗ್ರಾಮ್‌ನಲ್ಲಿ ವ್ಯಕ್ತಿಯೊಬ್ಬ ನಿಂದನೆ ಮಾಡಿದ್ದು, ಅವನ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಸಿಇಎನ್ ಠಾಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರಂತೆ.

  • ಹುಟ್ಟುಹಬ್ಬದಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೋನಮ್ ಕಪೂರ್ ಮಿಂಚಿಂಗ್

    ಹುಟ್ಟುಹಬ್ಬದಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೋನಮ್ ಕಪೂರ್ ಮಿಂಚಿಂಗ್

    ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ `ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮದುವೆಯ ನಂತರವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಸೋನಮ್ ವಿಶೇಷವಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    `ಸಾವರಿಯಾ’ ಚಿತ್ರದ ಮೂಲಕ ನಾಯಕಿಯಾಗಿ ಪಾದರ‍್ಪಣೆ ಮಾಡಿದ ನಟಿ, ಸಾಲು ಸಾಲು ೨೦ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2018ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ಮದುವೆಯಾದರು. ಈಗ ತುಂಬು ರ‍್ಭಿಣಿಯಾಗಿರುವ ಸೋನಮ್ ಕಪೂರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 27ನೇ ವರ್ಷಕ್ಕೆ ಕಾಲಿಟ್ಟರೋ ನಟಿ ವಿಶೇಷವಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿದ್ದಾರೆ.‌ ಇದನ್ನೂ ಓದಿ: ಹಸೆಮಣೆ ಏರುವ ಕೆಲವೇ ನಿಮಿಷಗಳ ಹಿಂದೆ ಭಾವಿಪತ್ನಿ ನಯನತಾರಾ ಜೊತೆಗಿನ ರಹಸ್ಯ ಹಂಚಿಕೊಂಡ ನಿರ್ದೇಶಕ ವಿಘ್ನೇಶ್ ಶಿವನ್

     

    View this post on Instagram

     

    A post shared by Sonam Kapoor Ahuja (@sonamkapoor)

    ವೈಟ್ ಕಲರ್ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಸೋನಮ್ ನಯಾ ಲುಕ್ಕಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಾಯ್ತನದ ಖುಷಿಯಲ್ಲಿರುವ ಸೋನಮ್ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ.

  • ರೆಡ್ ಕಲರ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್

    ರೆಡ್ ಕಲರ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್

    ಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಸಿನಿಮಾ ವಿಚಾರದಿಂದ ಮತ್ತು ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದ್ದಾರೆ. ಸದ್ಯ ರೆಡ್ ಕಲರ್ ಡ್ರೆಸ್‌ನಲ್ಲಿ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ.

    ಸಮಂತಾ ನಾಗಚೈತನ್ಯ ಜತೆಗಿನ ಸಂಬಂಧಕ್ಕೆ ಅದ್ಯಾವಾಗ ಎಳ್ಳು ನೀರು ಬಿಟ್ರೋ ಅಲ್ಲಿಂದ ಸಮಂತಾ ಕುಂತರೂ ಸುದ್ದಿ, ನಿಂತರೂ ಸುದ್ದಿಯಾಗುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಮೇಲೆ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳತ್ತಿರೋ ಸಮಂತಾ ಈಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಆಮ್ ಆದ್ಮಿ ಪಾರ್ಟಿ ಸೇರಿಕೊಂಡ ‘ಮುಖ್ಯಮಂತ್ರಿ’

    ಎಲ್ಲಾ ವುಡ್‌ಗಳಲ್ಲೂ ಬ್ಯುಸಿಯಿರೋ ನಟಿ ಸಮಂತಾ ಈಗ ರೆಡ್ ಕಲರ್ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ಪಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಸಮಂತಾ ರೆಡಿಯಾಗಿದ್ದು, ನಟಿಯ ಹಾಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

  • ಕೂರ್ಗ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ `ರಾಧಾ ರಮಣ’ ನಟಿ ಕಾವ್ಯಾ ಗೌಡ

    ಕೂರ್ಗ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ `ರಾಧಾ ರಮಣ’ ನಟಿ ಕಾವ್ಯಾ ಗೌಡ

    ಮೀರಾ ಮಾಧವ, ಗಾಂಧಾರಿ, ರಾಧಾ ರಮಣ ಸೀರಿಯಲ್ ಮೂಲಕ ಮನೆಮಾತಾದ ನಟಿ ಕಾವ್ಯಾ ಗೌಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೀಗ ಕೂರ್ಗ್‌ನಲ್ಲಿ ಪತಿಯೊಂದಿಗೆ ವಿಶೇಷವಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಾಕಷ್ಟು ಸೀರಿಯಲ್ ಮತ್ತು `ಬಕಾಸುರ’ ಚಿತ್ರದೊಂದಿಗೆ ಹಿರಿತೆರೆಗೆ ಕಾಲಿಟ್ಟ ನಟಿ ಕಾವ್ಯಾ ಗೌಡ, ಕಳೆದ ವರ್ಷ ಉದ್ಯಮಿ ಸೋಮಶೇಖರ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ, ನಟನೆಗೆ ಬೈ ಹೇಳಿ ದಾಂಪತ್ಯ ಜೀವನದತ್ತ ಮುಖ ಮಾಡಿದ್ದಾರೆ. ಇನ್ನು ಆಭರಣ ವಿನ್ಯಾಸ ತರಬೇತಿ ಸಹ ಪಡೆಯುತ್ತಿದ್ದಾರೆ. ಸದ್ಯ ನಟಿ ಕಾವ್ಯಾ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಪತಿಯೊಂದಿಗೆ ಕೂರ್ಗ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ

    ಕೂರ್ಗ್‌ ರೆಸಾರ್ಟ್‌ವೊಂದರಲ್ಲಿ ಬೀಡು ಬಿಟ್ಟಿರುವ ಕಾವ್ಯಾ ಗೌಡ ದಂಪತಿ, ಕೂರ್ಗ್ನ ಸುಂದರ ತಾಣದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ವೈಟ್ ಕಲರ್ ಔಟ್‌ಪೀಟ್‌ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ಬರ್ತಡೇ ಬಂದಿರುವ ಗಿಫ್ಟ್ಗಳನ್ನ ಶೇರ್ ಮಾಡಿರುವ ಕಾವ್ಯಾ ಅವರ ಉಡುಗೊರೆ ಅನ್ನು ನೋಡಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ. ನೆಚ್ಚಿನ ನಟಿಯ ಬರ್ತಡೇಗೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.