ತನ್ನ ಸ್ನೇಹಿತನ ಜೊತೆ ಪಾರ್ಟಿ ಮುಗಿಸಿಕೊಂಡು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಕೇರಳದ ನಟಿ ಅಶ್ವಥಿ ಬಾಬು ಮತ್ತು ಆಕೆಯ ಸ್ನೇಹಿತ ನೌಫಲ್ ಪೊಲೀಸರಿಗೆ ಅತಿಥಿಯಾಗಿದ್ದಾರೆ. ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಐದಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಅಶ್ವಥಿ ಕೇರಳದ ಕಾಕನಾಡ ಮೂಲದವರು ಎನ್ನಲಾಗುತ್ತಿದೆ.

ಜುಲೈ 26ರ ಸಂಜೆ 6.30ರ ವೇಳೆಗೆ ಅಲುವಾದ ಮುತ್ತೊಮ್ ನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಸಿಯುಎಸ್ಎಟಿ ಜಂಕ್ಷನ್ ನಿಂದ ಥ್ರಿಕ್ಕಕ್ಕರ ದೇವಸ್ಥಾನದವರೆಗೂ ನಟಿಯ ಸ್ನೇಹಿತ ನೌಫಲ್ ಕುಡಿದ ಮತ್ತಿನಲ್ಲಿ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡಿದ್ದಾನಂತೆ. ಹೀಗಾಗಿ ಒಂದು ಕಾರು ಮತ್ತು ನಾಲ್ಕು ದ್ವಿಚಕ್ರವಾಹನ ಜಖಂ ಆಗಿವೆ. ಕೂಡಲೇ ಕಾರು ನಿಲ್ಲಿಸಿದ ನಟಿ ಮತ್ತು ಸ್ನೇಹಿತರು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಕೂಡ ಮಾಡಿದ್ದಾರೆ. ಇದನ್ನೂ ಓದಿ:ರಾಕೇಶ್ ಬಾಪಟ್ ಜೊತೆ ಬ್ರೇಕಪ್ ಮಾಡಿಕೊಂಡ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

ಕಾರು ಢಿಕ್ಕಿಯಾದ ನಂತರ ಸ್ಥಳದಿಂದ ತಪ್ಪಿಸಿಕೊಳ್ಳಲು ನಟಿ ಮತ್ತು ನಟಿಯ ಸ್ನೇಹಿತ ಪ್ರಯತ್ನಿಸಿದ್ದಾರೆ. ಕೂಡಲೇ ಅವರನ್ನು ಹಿಡಿದು ಹಾಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ ನೆರೆದಿದ್ದವರು. ಕೂಡಲೇ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನೌಫಲ್ ವಿಪರೀತ ಮದ್ಯ ಸೇವನೆ ಮಾಡಿರುವುದು ತಿಳಿದು ಬಂದಿದೆ.


ಚಿತ್ರರಂಗದಲ್ಲಿ ನಟಿಯಾಗಿ ಮತ್ತು ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಮಸಾಬ ಗುಪ್ತಾ ಟ್ರೋಲಿಗರ ವಿರುದ್ಧ ಫುಲ್ ಗರಂ ಆಗಿದ್ದಾರೆ. ಬಾಡಿ ಶೇಮಿಂಗ್ ಕುರಿತು ಮಾತನಾಡುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ. ತನ್ನ ದೇಹದ ಔಟ್ ಲುಕ್ ಬಗ್ಗೆ ಮಾತನಾಡಿದವರಿಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:
ನೆಟ್ಟಿಗರೊಬ್ಬರು ನಟಿಯನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ನೀವು ನೋಡಲು ತುಂಬಾ ಕೆಟ್ಟದಾಗಿ ಕಾಣುತ್ತೀರಿ. ನೀವು ಫ್ಯಾಶನ್ ಮತ್ತು ಮನರಂಜನಾ ಕ್ಷೇತ್ರದಲ್ಲಿರುವುದು ಒಂದು ವಿಪರ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ನಟಿ ರಿಯಾಕ್ಟ್ ಮಾಡಿದ್ದು, ಯಾವುದೇ ಕ್ಷೇತ್ರದಲ್ಲಿರುವುದು ಅದು ಪ್ರತಿಭೆಗೆ ಸಂಬಂಧಿಸಿದ ವಿಚಾರ, ಕೆಲಸದ ಶ್ರಮ, ಶಿಸ್ತುನಲ್ಲಿ ಒಂದಾಗಿದೆ. ಇದು ನನ್ನ ಮುಖಕ್ಕೆ ಸಂಬಂಧಿಸಿದ ವಿಚಾರವಲ್ಲ. ಜತೆಗೆ ನನ್ನ ಮನಸ್ಸು ಚಾಕುವಿನಷ್ಟೇ ಹರಿತ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.








ಇನ್ನು ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದ ಬಹುಭಾಷಾ ನಟಿ ನಮಿತಾ ಈಗ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ತುಂಬು ಗರ್ಭೀಣಿಯಾಗಿರುವ ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಮಗುವಿನ ಆಗಮನದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಲಿದ್ದಾರೆ. ಮತ್ತೆ ಚಿತ್ರಗಳಲ್ಲಿ ನಮಿತಾ ಕಾಣಿಸಿಕೊಳ್ಳಲಿದ್ದಾರೆ.






ಸದ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಸಂಜನಾ, ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಸಿನಿಮಾರಂಗದತ್ತ ಮುಖ ಮಾಡುತ್ತಾರಾ ಅಂತಾ ಕಾದುನೋಡಬೇಕಿದೆ.
