Tag: actress

  • ಬಿಕಿನಿ ಧರಿಸಿ ಮಾಲ್ಡೀವ್ಸ್‌ನಲ್ಲಿ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟ ಪ್ರಣಿತಾ

    ಬಿಕಿನಿ ಧರಿಸಿ ಮಾಲ್ಡೀವ್ಸ್‌ನಲ್ಲಿ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟ ಪ್ರಣಿತಾ

    ಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಮಗಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕುಟುಂಬದ ಜೊತೆ ಮಾಲ್ಡೀವ್ಸ್‌ಗೆ (Maldives) ಹಾರಿದ್ದಾರೆ. ಕಡಲ ತೀರದಲ್ಲಿ ಸಖತ್ ಆಗಿ ನಟಿ ಏಂಜಾಯ್ ಮಾಡುತ್ತಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಕಳೆದ ವರ್ಷ ಉದ್ಯಮಿ ನಿತಿನ್ ಜತೆ ಪ್ರಣಿತಾ ಹಸೆಮಣೆ ಏರಿದ್ದರು. ಇತ್ತೀಚೆಗೆ ಮುದ್ದು ಮಗಳು `ಅರ್ನಾ’ ಆಗಮನವಾಗಿದೆ. ವೈಯಕ್ತಿಕ ಜೀವನದ ನಡುವೆ ತನ್ನ ಫಿಟ್‌ನೆಸ್ ಕಡೆಗೂ ಗಮನ ಕೊಡುತ್ತಿದ್ದಾರೆ. ಸದ್ಯ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್‌ಗೆ ತಮ್ಮ ಕುಟುಂಬದ ಜತೆ ಭೇಟಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬಿಕಿನಿ ಧರಿಸಿ ಮಾಲ್ಡೀವ್ಸ್‌ನ ಕಡಲ ತೀರದಲ್ಲಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆ ಕಂಡ ಅಚ್ಚರಿಯ ಕ್ಷಣಗಳು

     

    View this post on Instagram

     

    A post shared by Pranita Subhash (@pranitha.insta)

    ಸೆಲೆಬ್ರೆಟಿಗಳ ಅಚ್ಚುಮೆಚ್ಚಿನ ತಾಣ ಅಂದ್ರೆ ಮಾಲ್ಡೀವ್ಸ್. ಇದೀಗ ಈ ಸುಂದರ ತಾಣಕ್ಕೆ ಪ್ರಣಿತಾ ಕೂಡ ಭೇಟಿ ನೀಡಿದ್ದಾರೆ. ಕಡಲ ತೀರದಲ್ಲಿ ವೆರೈಟಿ ತಿಂಡಿಗಳನ್ನ ತಿನ್ನುತ್ತ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಬಿಕಿನಿ ಪೋಸ್ ಕೊಡುತ್ತ ಪಡ್ಡೆಹುಡುಗರ ಹಾರ್ಟಿಗೆ ಲಗ್ಗೆ ಇಟ್ಟಿದ್ದಾರೆ. ಒಟ್ನಲ್ಲಿ ಪ್ರಣಿತಾ ನಯಾ ಲುಕ್ ನೋಡಿ, ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ

    ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ

    ನ್ನಡ ಚಿತ್ರರಂಗದ ಮಹಾನ್ ನಟಿ ಲೀಲಾವತಿ (Leelavathi) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಹಾಸಿಗೆ ಹಿಡಿದಿರುವ ನಟಿ ಲೀಲಾವತಿ ಅವರ ಯೋಗಕ್ಷೇಮ ವಿಚಾರಿಸಲು ಅವರ ನಿವಾಸಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್ ಭೇಟಿ ನೀಡಿದ್ದಾರೆ.

    ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಛಾಪೂ ಮೂಡಿಸಿರುವ ನಟಿ ಲೀಲಾವತಿ ಇದೀಗ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಲೀಲಾವತಿ ನಿವಾಸಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್ (Bama harish) ಭೇಟಿ ನೀಡಿ, ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ:ಸೋಮಣ್ಣ – ಗುರೂಜಿ ಗೆಲುವು ನೋಡಿ, ಗಳಗಳನೆ ಅತ್ತ ಸಾನ್ಯ ಅಯ್ಯರ್

    ಇನ್ನು ನೆಲಮಂಗಲದ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನ ಲೀಲಾವತಿ ಪಡೆದುಕೊಳ್ಳುತ್ತಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ, ಲೀಲಾವತಿ ಅವರ ಪುತ್ರ ವಿನೋದ್ ರಾಜ್‌ಕುಮಾರ್ (Vinod rajkumar) ಅವರ ಬಳಿ ನಟಿಯ ಆರೋಗ್ಯದ ಕುರಿತು ವಿಚಾರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುಸ್ತಕಗಳ ಮಧ್ಯ ತಮ್ಮ ಪುಟಾಣಿ ಮಕ್ಕಳ ಮಲಗಿಸಿ ‘ಹ್ಯಾಪಿ ಗಣೇಶ’ ಎಂದ ನಟಿ ಅಮೂಲ್ಯ

    ಪುಸ್ತಕಗಳ ಮಧ್ಯ ತಮ್ಮ ಪುಟಾಣಿ ಮಕ್ಕಳ ಮಲಗಿಸಿ ‘ಹ್ಯಾಪಿ ಗಣೇಶ’ ಎಂದ ನಟಿ ಅಮೂಲ್ಯ

    ಣೇಶನನ್ನು ವಿದ್ಯೆವಿನಾಯಕ ಅಂತಾನೂ ಕರೆಯುತ್ತಾರೆ. ವಿದ್ಯೆಗೆ ಅಧಿಪತಿ ವಿನಾಯಕ ಎನ್ನುವುದು ವಾಡಿಕೆ. ಹಾಗಾಗಿ ಗಣೇಶ ಹಬ್ಬದ ದಿನದಂದು ತಮ್ಮಿಬ್ಬರ ಮಕ್ಕಳ ಸುತ್ತಲೂ ಪುಸ್ತಕಗಳನ್ನು ಇಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ ನಟಿ ಅಮೂಲ್ಯ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.

    ಮೊನ್ನೆಯಷ್ಟೇ ತಮ್ಮ ಎರಡು ಪುಟಾಣಿ ಮಕ್ಕಳ ವಿಶೇಷ ಫೋಟೋ ಶೂಟ್ ಮಾಡಿಸಿದ್ದರು ಅಮೂಲ್ಯ. ಅವಳಿ ಜವಳಿ ಮಕ್ಕಳ ಫೋಟೋ ಶೂಟ್ ಗೆ ಒಂದು ಕಾನ್ಸೆಪ್ಟ್ ಕೂಡ ಮಾಡಿದ್ದಾರೆ. ಪತಿ ಜಗದೀಶ್ ಮತ್ತು ಅಮೂಲ್ಯ ಇಬ್ಬರೂ ಮಕ್ಕಳ ಜೊತೆಗೆ ಮಕ್ಕಳಂತೆಯೇ ಕ್ಯೂಟ್ ಆಗಿ ಕಂಡಿದ್ದರು. ಆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಪುಟಾಣಿ ಮಕ್ಕಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದರು. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಈಗ ಗಣೇಶ ಹಬ್ಬಕಾಗಿ ವಿಶೇಷ ಫೋಟೋ ಶೂಟ್ ಮಾಡಿಸಿದ್ದು, ವಿದ್ಯೆ ವಿನಾಯಕನನ್ನು ತಮ್ಮ ಮಕ್ಕಳು ಮೂಲಕ ನೆನೆದಿದ್ದಾರೆ ಅಮೂಲ್ಯ. ತಮ್ಮ ಮಕ್ಕಳ ಮೇಲೆ ಎಲ್ಲರ ಪ್ರೀತಿ, ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಸಿನಿಮಾ ರಂಗದಿಂದ ಸದ್ಯ ದೂರವಾಗಿರುವ ಅಮೂಲ್ಯ, ಮಕ್ಕಳೊಂದಿಗೆ ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ರ್ಯಾಣ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೊದಲು ಇದು ಹೃದಯಾಘಾತದಿಂದ ನಡೆದ ಸಾವು ಎಂದು ಹೇಳಲಾಗಿತ್ತು. ಆದರೆ, ಇದನ್ನು ಸೊನಾಲಿ ಕುಟುಂಬ ಒಪ್ಪಿಕೊಳ್ಳಲಿಲ್ಲ. ಇದೊಂದು ಕೊಲೆ ಎಂದು ಆರೋಪಿಸಿ, ತನಿಖೆಗೆ ಒತ್ತಾಯಿಸಲಾಯಿತು. ತನಿಖೆಗೆ ಇಳಿದ ಪೊಲೀಸರು ಸೊನಾಲಿ ಜೊತೆಯೇ ಗೋವಾಗೆ ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆನಂತರ ಇದೊಂದು ಕೊಲೆ ಎನ್ನುವ ತೀರ್ಮಾನಕ್ಕೆ ಬರಲಾಯಿತು.

    ಸೊನಾಲಿ ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದ ಮೇಲೆ ಗಾಯಗಳ ಗುರುತು ಇರುವ ವರದಿ ಬಂದಿದ್ದೇ ತಡ, ಪೊಲೀಸರು ಅಲರ್ಟ್ ಆದರು. ಸೊನಾಲಿ ಜೊತೆಗೆ ಬಂದಿದ್ದ, ಅವರ ಸಹಾಯಕರೂ ಆಗಿರುವ ಸುಧೀರ್ ಸಾಂಗ್ವಾನ್ ಮತ್ತು ಸಖ್ವೀಂದರ್ ಎನ್ನುವವರನ್ನು ಅರೆಸ್ಟ್ ಮಾಡಿದಾಗ, ತಾವು ಸೊನಾಲಿಗೆ ಡ್ರಗ್ಸ್ ಕೊಟ್ಟಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಯಿತು. ಪ್ರತಿಷ್ಠಿತ ಪಬ್ ಗೆ ಹೋಗಿ ಚೆನ್ನಾಗಿ ಕುಡಿದೆವು. ಅದೇ ಪಬ್ ನಲ್ಲಿಯೇ ಡ್ರಗ್ಸ್ ತಗೆದುಕೊಂಡು ನೀರಿನಲ್ಲಿ ಹಾಕಿ ಕುಡಿಸಿದೆವು. ನಂತರ ಹೋಟೆಲ್ ಗೆ ಬಂದೆವು. ಮರು ದಿನ ಸೊನಾಲಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ:ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

    ಸೋನಾಲಿ ಪಬ್ ನಲ್ಲಿ ಡಾನ್ಸ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಈ ವಿಡಿಯೋ ಗೋವಾದಲ್ಲ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ. ಇದು ಗುರುಗ್ರಾಮದ್ದು. ಸೊನಾಲಿ ಹೆಸರು ಹಾಳು ಮಾಡುವುದಕ್ಕೆ ಈ ವಿಡಿಯೋ ಗೋವಾದ್ದು ಎಂದು ನಂಬಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಮೂಲಕ ಸೊನಾಲಿ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ದುಬಾರಿ ಮೊತ್ತದ ಕಾರು ಖರೀದಿಸಿದ `ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ

    ದುಬಾರಿ ಮೊತ್ತದ ಕಾರು ಖರೀದಿಸಿದ `ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿರುವ ಅನುಪಮಾ ಗೌಡ ದುಬಾರಿ ಮೊತ್ತದ ಕಾರನ್ನ ಖರೀದಿಸಿದ್ದಾರೆ. ಕಾರಿನ ಹಿಂದಿನ ಕಥೆಯನ್ನ ಅಭಿಮಾನಿಗಳೊಂದಿಗೆ ನಟಿ ಅನುಪಮಾ ಗೌಡ ಹಂಚಿಕೊಂಡಿದ್ದಾರೆ.

    ನಟಿ, ನಿರೂಪಕಿಯಾಗಿ ಚಂದನವನದಲ್ಲಿ ಛಾಪೂ ಮೂಡಿಸಿದವರು ಅನುಪಮಾ ಗೌಡ, ಇದೀಗ 17 ಲಕ್ಷದ ಮಹೀಂದ್ರಾ ಥಾರ್ ಖರೀದಿಸಿದ್ದಾರೆ. ನಟಿ ಖರೀದಿಸಿರುವ ಮೂರನೇ ಕಾರು ಇದಾಗಿದ್ದು, ಕಾರು ಕೊಂಡಿರುವ ತೆರೆಹಿಂದಿನ ಕಥೆಯನ್ನ ಅನುಪಮಾ ಗೌಡ ಬಿಚ್ಚಿಟ್ಟಿದ್ದಾರೆ. ಪ್ರತಿಯೊಬ್ಬರು ಕನಸುಗಳನ್ನ ಕಾಣಬೇಕು ಅದನ್ನ ನನಸು ಮಾಡಿಕೊಳ್ಳಲು ಶ್ರಮವಿರಬೇಕು ಎಂದು ಸ್ಪೂರ್ತಿಯ ಮಾತುಗಳನ್ನ ಅನುಪಮಾ ಮಾತನಾಡಿದ್ದಾರೆ.

    ನನ್ನ ಜೀವನದಲ್ಲಿ ನಾನು ಮೊದಲು ಕಾರ್ ಖರೀದಿ ಮಾಡಿದ್ದು 2014 ಆಗಸ್ಟ್ 16 ಹುಂಡೈ ಐ10 ಕಾರು, ಶೂಟಿಂಗ್ ದಿನ ಬೆಳಗ್ಗೆ ಬೇಗ ಪಿಕಪ್ ಮಾಡುತ್ತಿದ್ದರು ಆ ಮೇಲೆ ರಾತ್ರಿ ತಡವಾಗಿ ಮನೆ ಬರುತ್ತಿದ್ದೆ, ಆ ಸಮಯದಲ್ಲಿ ತುಂಬಾ ಟೈಮ್ ವೇಸ್ಟ್ ಆಗುತ್ತಿತ್ತು. ಈ ಕಾರಣದಿಂದ ನಾನು ಕಾರು ಖರೀದಿಸಿದೆ. ನಾಲ್ಕು ವರ್ಷ ಆ ಕಾರನ್ನು ಬಳಸಿದೆ. ನೇರವಾಗಿ ಹೋಗುವುದು ವಾಪಸ್ ಬರುವುದಷ್ಟೇ ನನಗೆ ಬರುತ್ತಿತ್ತು. ನನಗೆ ಸರಿಯಾಗಿ ಕಾರು ಓಡಿಸಲು ಬರುತ್ತಿರಲಿಲ್ಲ ಮೊದಲ ಕಾರು ಎಲ್ಲವನ್ನು ಕಲಿಸಿತ್ತು. ಬಿಗ್ ಬಾಸ್ ಮುಗಿಸಿಕೊಂಡು ನಾನು ಹೊರ ಬಂದ ನಂತರ ನಾನು ಕ್ರೇಟಾ ಬುಕ್ ಮಾಡಿದೆ. ಕಾರು ಬರುವುದು ತುಂಬಾ ತಡವಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ನನ್ನ ತಂದೆ ತೀರಿಕೊಂಡಿದ್ದರು ಅಕ್ಟೋಬರ್‌ನಲ್ಲಿ ಕಾರು ಬಂತು. ಅವರಿಗೆ ಕಾರು ಬೇಡ ಅಂತ ಹೇಳಿದೆ ಆದರೆ ಲೋನ್ ಪ್ರೋಸಿಜರ್ ಆಗಿ ಒಂದು ಸಲ ಇಎಂಐ ಕೂಡ ಕಟ್ ಆಗಿತ್ತು ಈ ಕಾರಣಕ್ಕೆ ಇಷ್ಟವಿಲ್ಲದಿದ್ದರೂ ಕಾರು ಖರೀದಿ ಮಾಡಬೇಕಾಯಿತು ಅನುಪಮಾ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಬಳಿಕ ನನ್ನ ಐ10 ಕಾರ್‌ನ ನನ್ನ ಸ್ನೇಹಿತನಿಗೆ ಕೊಟ್ಟೆ. ಮೊದಲನೇ ಕಾರು ಎಮೋಷನ್ ಇದ್ದ ಕಾರಣ ಸ್ನೇಹಿತನಿಗೆ ಕೊಟ್ಟರೆ ಯಾವಾಗ ಬೇಕಿದ್ದರೂ ನೋಡಬಹುದು ಅಂತ. ಈ ಕಾರಿಗೆ ನಾಲ್ಕು ವರ್ಷ ಆಯ್ತು ನನ್ನ ಬಜೆಟ್‌ಗೆ ಬೇರೆ ಯಾವ ಕಾರು ಸಿಕ್ಕಿರಲಿಲ್ಲ. ಒಂದು ದಿನ ರೋಡಲ್ಲಿ ಸಖತ್ ಆಗಿರುವ ಕಾರು ನೋಡಿದೆ, ಕಂಪನಿಗೆ ಕರೆ ಮಾಡಿ ಟೆಸ್ಟ್ ಡ್ರೈವ್ ಮಾಡಿದೆ. ಇಷ್ಟವಾಯಿತು ಬಳಿಕ ಬುಕ್ ಮಾಡಿದೆ ಎಂದು ನಟಿ ಹೇಳಿದ್ದಾರೆ. ನನ್ನ ಕೈಯಲ್ಲಿ ಮಾಡಲು ಆಗುತ್ತೆ ಅಂದ್ರೆ ಎಲ್ಲರ ಕೈಯಲ್ಲೂ ಮಾಡಲು ಆಗುತ್ತೆ. ಜೀರೋಯಿಂದ ನನ್ನ ಕೆರಿಯರ್‌ನ ನಾನು ಶುರು ಮಾಡಿದ್ದೇನೆ. ಇದು ನನ್ನ ಮೂರನೇ ಕಾರ್ ಆಗಿರೋದರಿಂದ ನಾನು ಮೊದಲನೇ ಸಲ ಮಾತನಾಡುತ್ತಿದ್ದೇನೆ. ಜೀವನದಲ್ಲಿ ಒಂದಿಷ್ಟು ಡ್ರೀಮ್‌ಗಳನ್ನು ಇಟ್ಟುಕೊಳ್ಳಿ ಸಾಧನೆ ಮಾಡೇ ಮಾಡುತ್ತೀರಾ. ಕಾರು ತೆಗೆದುಕೊಳ್ಳುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು ತೆಗೆದುಕೊಂಡ ನಂತರ ಪ್ರತಿ ತಿಂಗಳು ಇಎಂಐ ಕಟ್ಟುವುದು ತುಂಬಾನೇ ಇಷ್ಟ. ಜೀವನದಲ್ಲಿ ಎಲ್ಲರೂ ಮೊದಲು ಸೇವಿಂಗ್ಸ್ ಮಾಡಿ. ಸಾಯುವಷ್ಟರಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದಿದ್ದಾರೆ. ತನ್ನ ಕಥೆಯನ್ನ ಹೇಳುವ ಮೂಲಕ ಅಭಿಮಾನಿಗಳಿಗೆ, ನಟಿ ಸ್ಪೂರ್ತಿಯ ಮಾತುಗಳನ್ನ ಆಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಅಂದ್ರು: ಅಮ್ಮನ ನೆನೆದು ಸ್ಪೂರ್ತಿ ಗೌಡ ಭಾವುಕ

    ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಅಂದ್ರು: ಅಮ್ಮನ ನೆನೆದು ಸ್ಪೂರ್ತಿ ಗೌಡ ಭಾವುಕ

    ಬಿಗ್‌  ಬಾಸ್ ಒಟಿಟಿ ಅಲೆ ಜೋರಾಗಿದೆ. ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬುದು ಈಗಾಗಲೇ ರಿವೀಲ್ ಕೂಡ ಆಗಿದೆ. ಸದ್ಯ ಬಿಗ್ ಬಾಸ್ ಒಟಿಟಿಯ ಪ್ರೋಮೋವೊಂದರಲ್ಲಿ ನಟಿ ಸ್ಪೂರ್ತಿ ಗೌಡ ಮಾತು ಸದ್ದು ಮಾಡ್ತಿದೆ. ಜನ ನನ್ನ ತಾಯಿ ಸಾವಿಗೆ ನಾನೇ ಕಾರಣ ಎಂದು ದೂಷಿಸಿರುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ರಿಯಾಲಿಟಿ ಶೋ, ಜತೆ ಸಾಕಷ್ಟು ಸಿರೀಯಲ್‌ನಲ್ಲಿ ಕಾಣಿಸಿಕೊಂಡಿದ್ದ ಮಲೆನಾಡಿನ ಚೆಲುವೆ ಸ್ಪೂರ್ತಿ ಗೌಡ ಇದೀಗ ಬಿಗ್ ಬಾಸ್ ಒಟಿಟಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಜತೆ ತೆಲುಗಿನ ಸೀರಿಯಲ್‌ನಲ್ಲೂ ಸ್ಪೂರ್ತಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಕೊಡಲಾಗಿದೆ. `ನಾನು ಯಾರು’ ಎಂಬ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ನಟಿ ಸ್ಪೂರ್ತಿ ತನ್ನ ತಾಯಿಯ ಸಾವಿಗೆ ನಾನು ಕಾರಣ ಎಂದು ಸಮಾಜ ದೂಷಿಸಿರುವುದರ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಬಿಗ್ ಬಾಸ್‌ನಲ್ಲಿ ಸೋನು ಗೌಡ ಬೋಲ್ಡ್ ಮಾತು

    ಸ್ಪೂರ್ತಿ ಗೌಡ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದರು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಬಿಗ್‌ ಬಾಸ್‌ ಮನೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ನನ್ನ ತಾಯಿಗೆ ಥೈರಾಯ್ಡ್ ಕ್ಯಾನ್ಸರ್ ಇತ್ತು. ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಎಂದು ಹೇಳುತ್ತಿದ್ದರು. ಜನ ತನ್ನನ್ನು ದೂಷಿಸಿರುವುದರ ಬಗ್ಗೆ ನೆನೆದು ಸ್ಪೂರ್ತಿ ಗೌಡ ಈ ವೇಳೆ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಾನ್ಸ್ ಮಾಡಲು ಹೋಗಿ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ

    ಡಾನ್ಸ್ ಮಾಡಲು ಹೋಗಿ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ

    ಸಿನಿಮಾ ರಂಗದಿಂದ ಯಾಕೋ ಕೊಂಚ ದೂರವೇ ಉಳಿದಿರುವ ನಟಿ ರಾಧಿಕಾ ಕುಮಾರಸ್ವಾಮಿ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಇರುತ್ತಾರೆ. ಅದರಲ್ಲೂ ಡಾನ್ಸ್, ವರ್ಕೌಟ್ ಅನ್ನು ಯಾವತ್ತೂ ಅವರು ಮರೆಯುವುದಿಲ್ಲ. ಅದರಲ್ಲೂ ತಮ್ಮಿಷ್ಟದ ಹಾಡುಗಳಿಗೆ ಡಾನ್ಸ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ.

    ಮೊನ್ನೆಯಷ್ಟೇ ರಾಧಿಕಾ ಕುಮಾರಸ್ವಾಮಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು, ಈ ನೃತ್ಯದಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ. ಆ ವಿಡಿಯೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಂದಿನಂತೆ ಡಾನ್ಸ್ ಕ್ಲಾಸಿಗೆ ಹೋಗಿರುವ ರಾಧಿಕಾ, ಮಾಸ್ಟರ್ ಜೊತೆ ಹೊಸ ಹಾಡಿಗೆ ಸ್ಟೆಪ್ ಕಲಿಯಲು ಪ್ರಯತ್ನಿಸಿದ್ದಾರೆ. ಹೀಗೆ ಡಾನ್ಸ್ ಮಾಡುವಾಗ ಬಿದ್ದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಕೂಡ  ಆಗಿದೆ. ಇದನ್ನೂ ಓದಿ:ಟೂ ಪೀಸ್ ಧರಿಸಿ, ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ವೇದಿಕಾ

    ಸಿನಿಮಾ ರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ, ಕೆಲ ವರ್ಷಗಳಿಂದ ಸಿನಿಮಾ ರಂಗದಲ್ಲಿ ಅವರು ಸಕ್ರೀಯರಾಗಿಲ್ಲ. ನಿರ್ಮಾಪಕಿಯಾಗಿ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಎಂದು ಹೇಳಲಾಗಿತ್ತು. ಅದರ ಬಗ್ಗೆಯೂ ಸುಳಿವಿಲ್ಲ. ಆದರೆ, ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಅಭಿಮಾನಿಗಳ ಜೊತೆ ಟಚ್ ನಲ್ಲಿ ಇರುತ್ತಾರೆ ರಾಧಿಕಾ.

    Live Tv
    [brid partner=56869869 player=32851 video=960834 autoplay=true]

  • ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ರು ಶ್ವೇತಾ ಶ್ರೀವಾಸ್ತವ್

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ರು ಶ್ವೇತಾ ಶ್ರೀವಾಸ್ತವ್

    ಚಂದನವನದಲ್ಲಿ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರ ಖ್ಯಾತಿಯ ಶ್ವೇತಾ ಶ್ರೀವಾಸ್ತವ್ ಇದೀಗ ಮಹತ್ತರದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಸಿನಿಮಾ ಜೊತೆ ಲೇಖಕಿಯಾಗಿ ಗುರುತಿಸಿಕೊಳ್ಳುವತ್ತ ನಟಿ ಹೆಜ್ಜೆ ಇಟ್ಟಿದ್ದಾರೆ.

    `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, `ಕಿರಗೂರಿನ ಗಯ್ಯಾಳಿಗಳು’, `ಫೇರ್ & ಲವ್ಲಿ’ ಚಿತ್ರದ ಮೂಲಕ ಗಮನ ಸೆಳೆದಿರುವ ನಟಿ ಮತ್ತೆ ಹೋಪ್ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಈ ಸಿನಿಮಾದ ರಿಲೀಸ್ ಬಳಿಕ, ಶ್ವೇತಾ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದುಂಟು. ಈಗ ಚಿತ್ರರಂಗಕ್ಕೆ ಪ್ರವೇಶ ನೀಡಿರುವ ಅಸಾಧ್ಯವಾದ ಪ್ರಯತ್ನದ ಕುರಿತು ನಟಿ ಶ್ವೇತಾ ಪುಸ್ತಕ ಬರೆಯಲು ಮನಸ್ಸು ಮಾಡಿದ್ದಾರೆ. ಈ ಜರ್ನಿಯಲ್ಲಿ ನೀವು ಕೂಡ ಸಾಥ್ ನೀಡಬಹುದು ಅಂತಾ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ರಿಪೋರ್ಟ್ : ಪಕ್ಕಾ ಲೆಕ್ಕಾಚಾರ

     

    View this post on Instagram

     

    A post shared by Shwetha Srivatsav (@shwethasrivatsav)

    ನಮಸ್ಕಾರ, ಒಂದು ಮುಖ್ಯವಾದ ವಿಷಯ ತಿಳಿಸುವುದಿತ್ತು. ಮದುವೆಯಾದ ನಂತರ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ಪಾತ್ರ ವಹಿಸುವ ನನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ, ಈ ಚಿತ್ರರಂಗಕ್ಕೆ ಪ್ರವೇಶ ನೀಡಿರುವ ನನ್ನ ಅಸಾಧ್ಯವಾದ ಪ್ರಯತ್ನದ ಕುರಿತು, ಒಂದು ಪುಸ್ತಕ ಬರೆಯುತಿದ್ದೇನೆ. ಇದರ ಮುಖ್ಯ ಉದ್ದೇಶವಿಷ್ಟೇ ಇಂದರಿಂದ ಯಾರಿಗಾದರೂ ಸ್ಫೂರ್ತಿ ಸಿಗಬಹುದೇನೋ ಎಂದು. ನಿಮ್ಮಲ್ಲಿ ನನ್ನನ್ನ ಕುರಿತು ಯಾವುದೇ ಪ್ರಶ್ನೆಗಳಿದ್ದರು, ನನ್ನ ಮೈಲ್ ಐಡಿಗೆ ಕಳುಹಿಸಿ. ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸಿ, ನನ್ನ ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ ಎಂದು ನಟಿ ತಿಳಿಸಿದ್ದಾರೆ. ಈ ಮೂಲಕ ನಟಿ ಶ್ವೇತಾ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಹೇಳಿದ್ದು ಹೀಗೆ.?

    ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಹೇಳಿದ್ದು ಹೀಗೆ.?

    ಬಾಲಿವುಡ್‌ನಲ್ಲಿ ವಿಚಿತ್ರ ಉಡುಪಿನ ಮೂಲಕ ಗಮನ ಸೆಳೆದಿರುವ ನಟಿ ಉರ್ಫಿ ಜಾವೇದ್ ಬಟ್ಟೆಯ ಆಯ್ಕೆಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಫ್ಯಾಷನ್ ಡಿಸೈನರ್ ಆಗಿ ಬಿಟೌನ್‌ನಲ್ಲಿ ಗುರುತಿಸಿಕೊಂಡಿರುವ ಮಸಾಬ ಗುಪ್ತಾ ಸದ್ಯ ವೆಬ್ ಸಿರೀಸ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. `ಮಸಾಬ ಮಸಾಬ ಸಿರೀಸ್ 2’ಗೆ ಭರ್ಜರಿ ಪ್ರಚಾರ ನೀಡ್ತಿದ್ದಾರೆ ನಟಿ ಮಸಾಬ ಗುಪ್ತಾ. ಈ ಕುರಿತು ಸಂಬಂಧಿಸಿದ ಸಂದರ್ಶನವೊಂದರಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿರುವ ಮಸಾಬ ಉರ್ಫಿ ಡ್ರೆಸ್ ಸೆನ್ಸ್ ಬಗ್ಗೆ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ನಿಜಕ್ಕೂ ಫ್ಯಾಷನ್ ಕುರಿತು ನಾನು ಕೂಡ ಉರ್ಫಿ ಅವರಿಂದ ಕಲಿಯುವುದು ಸಾಕಷ್ಟಿದೆ. ಉರ್ಫಿ ಅವರ ಫ್ಯಾಷನ್ ಕುರಿತು ಬಹಳಷ್ಟು ತಿಳಿದುಕೊಂಡಿದ್ದಾರೆ. ಯಾವುದೇ ಡಿಸೈನರ್, ಬ್ರ್ಯಾಂಡ್‌ಗಿಂತ ಹೆಚ್ಚಾಗಿ ಉರ್ಫಿ ಕೆಲಸ ಮಾಡ್ತಿದ್ದಾರೆ. ನಿಜಕ್ಕೂ ಉರ್ಫಿ ಅವರ ಶ್ರಮ ಬಹಳಷ್ಟಿದೆ. ಉರ್ಫಿ ಬಟ್ಟೆಯ ಆಯ್ಕೆಗೆ ನಾನು 10/10 ರೇಟ್ ಮಾಡುತ್ತೇನೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭೀಮನ ಅಮವಾಸ್ಯೆ: ಪತಿಯ ಪಾದ ಪೂಜೆ ಮಾಡಿದ ಪ್ರಣಿತಾ ಸುಭಾಷ್

    ಭೀಮನ ಅಮವಾಸ್ಯೆ: ಪತಿಯ ಪಾದ ಪೂಜೆ ಮಾಡಿದ ಪ್ರಣಿತಾ ಸುಭಾಷ್

    ಹುಭಾಷಾ ನಟಿ ಪ್ರಣಿತಾ ಸುಭಾಷ್ ಸದ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಭೀಮನ ಅಮವಾಸ್ಯೆಗೆ ವಿಶೇಷ ಫೋಟೋವೊಂದನ್ನು ಪ್ರಣಿತಾ ಶೇರ್ ಮಾಡಿದ್ದಾರೆ.

    ಕನ್ನಡ ಸಿನಿಮಾದ ಮೂಲಕ ಸಿನಿಪಯಣ ಶುರು ಮಾಡಿದ್ದ ನಟಿ ಪ್ರಣಿತಾ ಬಹುಭಾಷಾ ನಾಯಕಿಯಾಗಿ ಗುರುತಿಸಿಕೊಂಡರು. ಬೇಡಿಕೆಯಿರುವಾಗಲೇ ಕಳೆದ ವರ್ಷ ಹಸೆಮಣೆ ಏರಿದ್ದ ಚೆಲುವೆ ಈಗ ಮುದ್ದು ಮಗನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಭೀಮನ ಅಮವಾಸ್ಯೆಯಂದು ಪತಿಯ ಒಳಿತಿಗೆ ಪ್ರಣಿತಾ ಪಾದ ಪೂಜೆ ಪೂಜೆ ಮಾಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮದುವೆಯ ವದಂತಿ ಬೆನ್ನಲ್ಲೇ ಬಾಯ್‌ಫ್ರೆಂಡ್‌ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ಅಥಿಯಾ ಶೆಟ್ಟಿ

    ಉದ್ಯಮಿ ನಿತಿನ್ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಳೆದ ವರ್ಷ ಕಾಲಿಟ್ಟಿದ್ದರು. ಇದೀನ ಭೀಮನ ಅಮವಾಸ್ಯೆಯನ್ನ ಮತ್ತಷ್ಟು ವಿಶೇಷವಾಗಿ ಆಚರಿಸಿದ್ದಾರೆ. ಈ ವಿಶೇಷ ದಿನದಂದು ಪತಿಯ ಪಾದ ಪೂಜೆ ಮಾಡಿ, ಆರ್ಶೀವಾದ ಪಡೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]