ಪ್ರೇಕ್ಷಕರ ಬಾಯಲ್ಲಿ ಸದ್ಯ ಮನೆಮಾತರಾಗಿರುವ ಶೋ ಅಂದ್ರೆ ಬಿಗ್ ಬಾಸ್, ಕಳೆದ ಒಂಭತ್ತು ಸೀಸನ್‌ನಿಂದ ಬಿಗ್ ಬಾಸ್ ಸಖತ್ ಮೋಡಿ ಮಾಡುತ್ತಲೇ ಬರುತ್ತಿದೆ. ಇದೀಗ ಟಿವಿ ಬಿಗ್ ಬಾಸ್(Bigg Boss) ಹೊಸ ಸೀಸನ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಒಂದು ವಾರ ಕಳೆದಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ದಿವ್ಯಾ ಉರುಡುಗ (Divya Uruduga) ಕಾಲೆಳೆದಿದ್ದಾರೆ ಕಿಚ್ಚ ಸುದೀಪ್.
View this post on Instagram
ಸ್ಯಾಂಡಲ್‌ವುಡ್ ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8ರಲ್ಲಿ ಮೋಡಿ ಮಾಡಿದ್ದರು. ಎರಡನೇ ಬಾರಿ ಸ್ಪರ್ಧಿಯಾಗಿ ಬಿಗ್ ಬಾಸ್ ಸೀಸನ್ 9ರಲ್ಲಿ ಹೈಲೆಟ್ ಆಗುತ್ತಿದ್ದಾರೆ. ಕಳೆದ ಬಾರಿ ಬೈಕ್ ರೇಸರ್ ಅರವಿಂದ್ ಜೊತೆ ದಿವ್ಯಾ ಹೆಸರು ಸಖತ್ ಸುದ್ದಿ ಮಾಡಿತ್ತು. ಬಳಿಕ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ. ಮದುವೆಯ ಹಂತಕ್ಕೂ ಹೋಗಿದೆ ಎನ್ನಲಾಗಿತ್ತು. ಇದೀಗ ಈ ಸೀಸನ್ ದಿವ್ಯಾ ತಮ್ಮ ಪಾರ್ಟರ್ ಆಗಿ ಬೈಕ್ ರೇಸರ್ ಐಶ್ವರ್ಯಾ(Aishwarya) ಅವರನ್ನೇ ಸೆಲೆಕ್ಟ್ ಮಾಡಿರೋದನ್ನ ನೋಡಿ ಸುದೀಪ್ (Sudeep), ದಿವ್ಯಾ ಉರುಡುಗ ಅವರ ಕಾಲೆಳೆದಿದ್ದಾರೆ. ಇದನ್ನೂ ಓದಿ:ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿಕೊತ್ತೀರಾ. ನೀವು ಬೈಕರ್‌ನ್ನೇ ಹುಡುಕುತ್ತೀರಾ ಹಂಗೆ ಅದು. ನೀವು ತಾನೇ ಐಶ್ವರ್ಯ ಅವರನ್ನ ಆಯ್ಕೆ ಮಾಡಿದ್ದು, ನೀವು ಕಳೆದ ಸೀಸನ್ ಯಾರನ್ನು ಬೈಕರ್ ಅಂತಾ ಅಂದುಕೊಂಡಿಲ್ಲಾ ಅಲ್ವಾ. ಅವರು ಬೈಕರ್ ಆದರು ಎಂದು ಪರೋಕ್ಷವಾಗಿ ಅರವಿಂದ್ ಹೆಸರು ಹೇಳದೇ ಕಿಚ್ಚ ಸುದೀಪ್ ದಿವ್ಯಾಗೆ ತಮಾಷೆ ಮಾಡಿದ್ದಾರೆ. ಕಿಚ್ಚ ಮತ್ತು ದಿವ್ಯಾ ಮಾತುಕಥೆ ನೋಡಿ ಮನೆ ಮಂದಿಯೆಲ್ಲಾ ನಕ್ಕಿದ್ದಾರೆ.

















ಈ ವೇಳೆ ಎಎಪಿ ಪಕ್ಷದ ಬಗ್ಗೆ ನಟಿ ಆರೋಹಿತ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಹಾಗೂ ದೇಶದೆಲ್ಲೆಡೆ ಬದಲಾವಣೆ ಸಾಧ್ಯವಾಗಬೇಕಾದರೆ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯು ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಬದಲಾವಣೆ ತಂದಿದೆ. ಸ್ವಚ್ಛ ಹಾಗೂ ಗುಣಮಟ್ಟದ ಆಡಳಿತದಿಂದ ಮಾತ್ರ ಇದು ಸಾಧ್ಯ. ಕರ್ನಾಟಕದಲ್ಲೂ ಅಂತಹ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಎಎಪಿ ಪಕ್ಷಕ್ಕೆ ನಾನು ಸೇರಿದ್ದೇನೆ ಎಂದು ಆರೋಹಿತ ಹೇಳಿದರು.


