ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಟಿಯ ಮನೆಯಲ್ಲಿ ಮದುವೆ ಸದ್ದು ಜೋರಾಗಿದೆ. ಇದೀಗ ಭಾವಿ ಪತಿ ಪ್ರಪೋಸ್ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಭಾವಿ ಪತಿಯ ಜೊತೆಗಿನ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
ಕನ್ನಡದ ಬಿಂದಾಸ್ ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾವಿ ಪತಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ರಾನುಗೆ ʻಐ ಲವ್ ಯೂʼ ಹೇಳಿದ ರಮ್ಯಾ: ರಾನು ಜೊತೆಗಿನ ವರ್ಷದ ನೆನಪು
ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಹನ್ಸಿಕಾಗೆ ಮದುವೆ(Wedding) ನಿಶ್ಚಯವಾಗಿದೆ. ಮದುವೆಗೂ ಮುನ್ನ ಹೈಫಿಲ್ ಟವರ್ ಬಳಿ ಮಂಡಿಯೂರಿ ಮ್ಯಾರಿ ಮೀ ಎಂದು ಪ್ರಪೋಸ್ ಮಾಡಿದ್ದಾರೆ. ಹನ್ಸಿಕಾ ಕೂಡ ಖುಷಿಯಿಂದ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಈ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ಇನ್ನೂ ಡಿಸೆಂಬರ್ 3ರಂದು ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಡಿ.4ರಂದು ರಾಜಸ್ತಾನದ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಮದುವೆ ನಡೆಯಲಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಸದ್ಯ ನೆಚ್ಚಿನ ನಟಿಯ ಹೊಸ ಬಾಳಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೋಹಕತಾರೆ ರಮ್ಯಾ(Actress Ramya) ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದ ಪ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಇನ್ನೂ ಶ್ವಾನದ ಬಗ್ಗೆ ವಿಶೇಷ ಪ್ರೀತಿಯಿರುವ ರಮ್ಯಾ ಇದೀಗ ಬೀದಿ ನಾಯಿಯ ವೀಡಿಯೋವೊಂದನ್ನ ಶೇರ್ ಮಾಡಿ, ನೋಟ್ ಕೂಡ ಬರೆದಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
`ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಾರೆ ಎಂದು ಕಾಯ್ತಿದ್ದ ಫ್ಯಾನ್ಸ್ಗೆ ನಿರಾಸೆಯಾಗಿದೆ. ಕೊನೆಯ ಹಂತದಲ್ಲಿ ನಾಯಕಿಯ ಬದಲಾವಣೆಯಾಗಿದೆ. ಸದ್ಯ ನಿರ್ಮಾಣದ ಹೊಣೆ ಹೊತ್ತಿರುವ ನಟಿ ರಮ್ಯಾ, ಶ್ವಾನದ(Dog) ಬಗ್ಗೆ ವಿಶೇಷ ಪೋಸ್ಟ್‌ವೊಂದನ್ನ ಶೇರ್ ಮಾಡಿದ್ದಾರೆ.
ರಾಣಿ ನಮ್ಮ ಜೊತೆಗಿರುವುದು ಒಂದು ವರ್ಷವಾಗುತ್ತಾ ಬಂತು. ರಾಣಿ ಮೇಲೆ ಕಾರು ಹರಿದು ಹೋಗಿ ರಸ್ತೆಯಲ್ಲಿ ಬಿದ್ದಿತ್ತು. ಗೋವಾದಲ್ಲಿ ಶೆಲ್ಟರ್ ಹೌಸ್ ಒಂದರಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಿದ ನಂತರ ರಾಣಿ ಚೇತರಿಸಿಕೊಂಡಳು. ನಮ್ಮಲ್ಲಿ ವಯಸ್ಸಾದ ಎರಡು ನಾಯಿಗಳಿದ್ದವು. ಹಾಗಾಗಿ ರಾಣಿಯನ್ನು ಸಾಕಬಹುದು ಎನ್ನುವ ಬಗ್ಗೆ ನನಗೆ ಖಚಿತವಿರಲಿಲ್ಲ. ಆದರೆ ರಾಣಿ ನಮ್ಮನೆಗೆ ಬಂದಳು. ನಾನು ಜೀವನದಲ್ಲಿ ಏನನ್ನೂ ನಿರ್ಧರಿಸಬೇಕಾಗಿಲ್ಲ, ಜೀವನವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮೈ ರಾನು, ಮೈ ಬೇಬಿ ಗರ್ಲ್, ನನ್ನ ಹೃದಯ ತೆರೆದಿದ್ದಕ್ಕೆ ಧನ್ಯವಾದಗಳು. ಐ ಲವ್ ಯೂ ಲವ್ ಯೂ ಲವ್ ಯೂ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಪುನೀತ್ ಪತ್ನಿ ಅಶ್ವಿನಿ
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ(Sandalwood Queen Ramya) ಚಿತ್ರರಂಗಕ್ಕೆ ಕಂಬ್ಯಾಕ್ ಆಗುತ್ತಿದ್ದಾರೆ. `ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ನಟನೆ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ. ರಾಜ್ ಬಿ. ಶೆಟ್ಟಿ (Raj B Shetty) ಜೊತೆ ಮೋಹಕತಾರೆ ರಮ್ಯಾ ಕಂಬ್ಯಾಕ್ ಆಗುತ್ತಿದ್ದಾರೆ. ಇದೀಗ ಈ ಚಿತ್ರದ ಲೇಟೆಸ್ಟ್ ಅಪ್ಡೇಟ್‌ವೊಂದು ಹೊರಬಿದ್ದಿದೆ.
ರಮ್ಯಾ ಇದೀಗ ನಿರ್ಮಾಪಕಿಯಾಗಿ(Producer) ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ ತಮ್ಮ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾಗಿ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ರಾಜ್ ಬಿ. ಶೆಟ್ಟಿ ಮತ್ತು ರಮ್ಯಾ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಅದರಂತೆ ಇದೀಗ ಸಿಂಗಲ್ ಶೆಡ್ಯೂಲ್‌ನಲ್ಲಿ ಸಿನಿಮಾ ಕಂಪ್ಲೀಟ್ ಮಾಡಲು ಯೋಚಿಸಿದ್ದಾರೆ. ಇದನ್ನೂ ಓದಿ:ವಾರಾಣಸಿಯಲ್ಲಿ ಗಂಗಾರತಿ ಮಾಡಿದ ‘ಬನಾರಸ್’ ಹೀರೋ ಝೈದ್ ಖಾನ್
ದೀಪಾವಳಿ ಹಬ್ಬದ ನಂತರ `ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಚಿತ್ರದ ಶೂಟಿಂಗ್ ಶುರುವಾಗಲಿದೆ. ಊಟಿ ಮತ್ತು ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಶೂಟಿಂಗ್ ಮಧ್ಯೆ ಎರಡು ದಿನವಷ್ಟೇ ಬ್ರೇಕ್ ಇರಲಿದ್ದು, ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ.
ರಮ್ಯಾ ಬ್ರೇಕ್‌ನ ನಂತರ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ರಮ್ಯಾ ಅಭಿಮಾನಿಗಳ ಪಾಲಿಗೆ ಇದು ಬಿಗ್ ನ್ಯೂಸ್. ಅದರಲ್ಲೂ ರಾಜ್ ಬಿ. ಶೆಟ್ಟಿ ಅವರಂತಹ ಪ್ರತಿಭಾವಂತ ನಟ ಕಮ್ ನಿರ್ದೇಶಕನ ಜೊತೆ ನೆಚ್ಚಿನ ನಟಿ ರಮ್ಯಾ ಬರುತ್ತಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಾಕಷ್ಟು ಸಿನಿಮಾಗಳ ಮೋಡಿ ಮಾಡಿರುವ ನಟಿ ತೆರೆಮರೆಯಲ್ಲಿ ಸೈಲೆಂಟ್ ಆಗಿ ತಮ್ಮ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ತಮಿಳು, ತೆಲುಗು, ಕನ್ನಡ ಸಿನಿಮಾಗಳ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟಿ ಹನ್ಸಿಕಾ ಹೊಸ ಬಾಳಿಗೆ(Wedding) ಕಾಲಿಡುತ್ತಿದ್ದಾರೆ. ತಮ್ಮ ಮಾದಕ ನೋಟದಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಚೆಲುವೆ ಹನ್ಸಿಕಾ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವ ಸಮಯದಲ್ಲೇ ನಟಿ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್
ದಕ್ಷಿಣ ಭಾರತದ ರಾಜಕೀಯ ಮುಖಂಡರೊಬ್ಬರ(Politician) ಮಗನೊಂದಿಗೆ ಮದುವೆಗೆ ನಟಿ ರೆಡಿಯಾಗಿದ್ದಾರೆ. ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರೆ ನಟಿ ಹನ್ಸಿಕಾ ಮೋಟ್ವಾನಿ. ಈಗಾಗಲೇ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಡಿಸೆಂಬರ್‌ನಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಅಂದಹಾಗೆ ಪುನೀತ್ ರಾಜ್‌ಕುಮಾರ್ ನಟನೆಯ ʻಬಿಂದಾಸ್ʼ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಛಾಪೂ ಮೂಡಿಸಿದ್ದರು.
450 ವರ್ಷದ ಹಳೆಯ ಜೈಪುರದ ಪ್ಯಾಲೇಸ್‌ನಲ್ಲಿ(Jaipur Palace) ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕಾಗಿ ಸಕಲ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈ ವರ್ಷದ ಅಂತ್ಯದಲ್ಲಿ ಹನ್ಸಿಕಾ ಮೋಟ್ವಾನಿ ಉದ್ಯಮಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯದಲ್ಲೇ ಈ ವಿಚಾರವನ್ನ ಅಧಿಕೃತವಾಗಿ ಹೇಳಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಶುಭಮನ್ ಗಿಲ್ (Shubaman Gill) ಜೊತೆಗಿನ ಡೇಟಿಂಗ್ ವಿಷ್ಯವಾಗಿ ಸಖತ್ ಸದ್ದು ಮಾಡುತ್ತಿದ್ದಾರೆ. ಮುಂಬೈ ಟು ದೆಹಲಿಗೆ ಸಾರಾ, ಶುಭ್‌ಮನ್ ತೆರಳಿದ್ದಾರೆ.
ಬಿಟೌನ್‌ನ ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸೈಫ್ ಅಲಿ ಖಾನ್ ಪುತ್ರಿ ಸಾರಾ ಸದ್ಯ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಮುಂಬೈ ಮತ್ತು ದೆಹಲಿಯಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಲವ್ವಿ ಡವ್ವಿ ವಿಚಾರ ನಿಜ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡಿದ್ದರು. ಇದೀಗ ದೆಹಲಿಯಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದಾರೆ. ಕ್ಯಾಶುಯಲ್ ಉಡುಗೆಯಲ್ಲಿ ದೆಹಲಿ ಹೋಟೆಲ್‌ನಿಂದ ಇಬ್ಬರು ನಿರ್ಗಮಿಸಿದ್ದಾರೆ. ಬಳಿಕ ವಿಮಾನದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ಕೊಡುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವೇಳೆ ಶುಭಮನ್ ಕೂಡ ಇದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ
ಸದ್ಯ ಬಿಟೌನ್‌ನಲ್ಲಿ ಸಾರಾ ಮತ್ತು ಶುಭಮನ್ ಗಿಲ್ ಲವ್ವಿ ಡವ್ವಿ ವಿಚಾರವೇ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಕನ್ನಡ, ತೆಲುಗು, ಹಿಂದಿ ಬಿಗ್ ಬಾಸ್‌ಗಳು ಏಕಕಾಲಕ್ಕೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ತಮಿಳಿನಲ್ಲೂ ಬಿಗ್ ಬಾಸ್(Bigg Boss Tamil 6) ಹವಾ ಶುರುವಾಗಿದೆ. ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಚೆಲುವೆ ರಚಿತಾ ಮಹಾಲಕ್ಷ್ಮಿ ಇದೀಗ ತಮಿಳಿನ ಬಿಗ್ ಬಾಸ್‌ಗೆ ಲಗ್ಗೆ ಇಟ್ಟಿದ್ದಾರೆ.
ಕಮಲ್ ಹಾಸನ್ (Kamal Hassan) ನೇತೃತ್ವದಲ್ಲಿ ತಮಿಳು ಬಿಗ್ ಬಾಸ್(Bigg Boss Tamil) ಮೂಡಿ ಬರುತ್ತಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಮೋಡಿ ಮಾಡಿರುವ ಕನ್ನಡತಿ ರಚಿತಾ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹುಡುಗಿಯಾಗಿರುವ ರಚಿತಾ ಮಹಾಲಕ್ಷ್ಮಿ (Rachitha Mahalakshmi) ಕನ್ನಡದ ಮೇಘ ಮಂದಾರ, ಸುಪ್ರಭಾತ, ಸವಿಗನಸು, ಹೀಗೆ ಸಾಕಷ್ಟು ಸೀರಿಯಲ್ ಮೂಲಕ ನಟಿ ಫೇಮಸ್ ಆಗಿದ್ದಾರೆ. ಇದನ್ನೂ ಓದಿ:ಭಾಷೆ ಬತ್ತಳಿಕೆ ಇಟ್ಕೊಂಡು ಆಟ ಆಡಬೇಡಿ: ರೂಪೇಶ್ ರಾಜಣ್ಣಗೆ ಸಂಬರ್ಗಿ ವಾರ್ನಿಂಗ್
ಕನ್ನಡದ ಸೂಪರ್ ಹಿಟ್ ಸೀರಿಯಲ್‌ಗಳ ನಂತರ ತಮಿಳು ಮತ್ತು ತೆಲುಗು ಕಿರುತೆರೆಯಲ್ಲಿ ನಟಿಗೆ ಅವಕಾಶಗಳು ಅರಸಿ ಬಂತು. ಅಲ್ಲಿಯೂ ಕೂಡ ನಟಿ ರಚಿತಾ ನಟಿಸಿರುವ ಸೀರಿಯಲ್ ಸೂಪರ್ ಹಿಟ್ ಆಯ್ತು. ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದೀಗ 20 ಸ್ಪರ್ಧಿಗಳ ಮಧ್ಯೆ ತಾವು ಒಬ್ಬರಾಗಿ ಹೊಸ ಹುರುಪಿನೊಂದಿಗೆ ತಮಿಳು ಬಿಗ್ ಬಾಸ್‌ಗೆ ನಟಿ ಕಾಲಿಟ್ಟಿದ್ದಾರೆ.
ಈ ಶೋನಲ್ಲಿ ರಚಿತಾ ಅವರನ್ನು ಸೂಪರ್ ಸ್ಟಾರ್ ಕಮಲ್ ಹಾಸನ್ ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ. ಇನ್ನೂ ತಮಿಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿರುವ ನೆಚ್ಚಿನ ನಟಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಟಾಲಿವುಡ್‌ನ(Tollywood) ಸ್ಟಾರ್ ಜೋಡಿ ವಿಜಯ್ ದೇವರಕೊಂಡ(Vijay Devarakonda) ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ಲವ್ ಸ್ಟೋರಿ ಆಗಾಗ ಸಖತ್ ಸದ್ದು ಮಾಡುತ್ತಲೇ ಇರುತ್ತದೆ. ಇತ್ತೀಚೆಗೆ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎಂದು ಟಿಟೌನ್‌ನಲ್ಲಿ ಸಖತ್ ಸುದ್ದಿಯಾಗಿತ್ತು. ಆದರೆ ಆ ಬ್ರೇಕಪ್ ಕಥೆಗಳಿಗೆಲ್ಲಾ ಬ್ರೇಕ್ ಬಿದ್ದಿದೆ. ವಿಜಯ್ ಮತ್ತು ರಶ್ಮಿಕಾ ಮದಣ್ಣ ಮಾಲ್ಡೀವ್ಸ್‌ಗೆ ಹಾರಿದ್ದಾರೆ.
ಸೌತ್ ಸಿನಿರಂಗದ ಸೆನ್ಸೇಷನ್ ಜೋಡಿ ವಿಜಯ್ ಮತ್ತು ರಶ್ಮಿಕಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಜೋಡಿಯ ಮಧ್ಯೆ ಎನು ಸರಿಯಿಲ್ಲ. ದೂರ ದೂರ ಆಗಿದ್ದಾರೆ ಎನ್ನಲಾಗಿತ್ತು. ಈ ಎಲ್ಲಾ ಗಾಸಿಪ್‌ಗಳಿಗೂ ಈಗ ಬ್ರೇಕ್ ಬಿದ್ದಿದೆ. ವಿಜಯ್ ಮತ್ತು ರಶ್ಮಿಕಾ ಏರ್‌ರ್ಪೋಟ್‌ಗೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಬ್ರೇಕಪ್ ಗಾಸಿಪ್‌ಗೆ ಫುಲ್ ಸ್ಟಾಪ್ ಬಿದ್ದಿದೆ. ಇವರಿಬ್ಬರು ಒಟ್ಟಿಗೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ
`ಗುಡ್‌ಬೈ’ (Good Bye) ಸಿನಿಮಾ ರಿಲೀಸ್ ಆಗುತ್ತಿದ್ದಂತೆ ದೇವರಕೊಂಡ ಜೊತೆ ಮಾಲ್ಡೀವ್ಸ್‌ಗೆ ರಶ್ಮಿಕಾ ಜೊತೆಯಾಗಿ ಹೋಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್ನೂ ಬಿಟೌನ್‌ನ ಚೊಚ್ಚಲ ಚಿತ್ರದ `ಗುಡ್‌ಬೈ’ ಚಿತ್ರದ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಪತಿ ಅರ್ನವ್ ಅಲಿಯಾಸ್ ಅಮ್ಜಾದ್ ಖಾನ್ ತಮಗೆ ದೈಹಿಕವಾಗಿ ಹಿಂಸೆ ನೀಡಿದ್ದು, ಇದರಿಂದಾಗಿ ತಮ್ಮ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆ ಆಗಿದೆ. ನನ್ನ ಮಗುವನ್ನು ನಾನು ಉಳಿಸಿಕೊಳ್ಳಬೇಕಿದೆ ಎಂದು ನಿನ್ನೆಯಷ್ಟೇ ಕನ್ನಡದ ಖ್ಯಾತ ನಟಿ ದಿವ್ಯಾ ಶ್ರೀಧರ್ (Divya Sridhar) ವಿಡಿಯೋವೊಂದರಲ್ಲಿ ಮಾತನಾಡಿದ್ದರು. ತಾವೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ತಿಳಿಸಿದ್ದರು.
ಈ ಕುರಿತಂತೆ ದಿವ್ಯಾ ಪತಿ ಅಮ್ಜಾದ್ ಖಾನ್ (Amjad Khan) ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಹಲ್ಲೆ ಮಾಡುವಂತಹ ಹುಡುಗ ಅಲ್ಲ. ನನ್ನ ಮನೆಯಲ್ಲಿ ಸಿಸಿಟಿವಿ ಇದೆ. ಯಾರು ಬೇಕಾದರೂ ಬಂದು ನೋಡಬಹುದು. ದಿವ್ಯಾಗೆ ಕೆಲ ಕೆಟ್ಟ ಸ್ನೇಹಿತರ ಸಹವಾಸವಿದೆ. ಅವರೆಲ್ಲ ಸೇರಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಗರ್ಭಪಾತ ಮಾಡಿಸಿಕೊಳ್ಳಲು ದಿವ್ಯಾ ಈ ರೀತಿಯಲ್ಲಿ ನಾಟಕವಾಡುತ್ತಿರಬೇಕು. ನನಗೆ ನನ್ನ ಮಗು ಬೇಕು. ನಾನು ಕೂಡ ಕಮಿಷ್ನರ್ ಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:‘ಅರ್ಧಂಬರ್ಧ ಪ್ರೇಮಕಥೆ’ಯಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ
ಅರ್ನವ್ (Arnav) ಅಲಿಯಾಸ್ ಅಮ್ಜದ್ ಖಾನ್ ಕೂಡ ಖ್ಯಾತ ಕಿರುತೆರೆಯ ನಟ. 2017ರಲ್ಲಿ ಅರ್ನವ್ ಮತ್ತು ದಿವ್ಯಾ ಒಂದೇ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ದರು. ದಿನವೂ ಶೂಟಿಂಗ್ ನಲ್ಲಿ ಸಿಗುತ್ತಿದ್ದರಿಂದ ಸ್ನೇಹವಾಗಿ, ಆನಂತರ ಪ್ರೀತಿ ಬೆಳೆದಿದೆ. ಐದು ವರ್ಷಗಳ ಕಾಲ ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಆನಂತರ ಮದುವೆ ಆಗಿದ್ದಾರೆ. ಈ ವಿಷಯವನ್ನು ಸ್ವತಃ ದಿವ್ಯಾ ಶ್ರೀಧರ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು, ‘ತಮ್ಮಿಬ್ಬರದ್ದು ಬೇರೆ ಬೇರೆ ಸಂಪ್ರದಾಯವಾಗಿದ್ದರೂ, ತಾವು ಅದೃಷ್ಟವಂತ ಜೋಡಿಗಳು’ ಎಂದು ಬರೆದುಕೊಂಡಿದ್ದರು.
ಇದೀಗ ಇಬ್ಬರ ನಡುವೆ ಮನಸ್ತಾಪ ಬಂದು, ‘ನಿನ್ನೆ ನನ್ನ ಗಂಡ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದು ಹೊಟ್ಟೆಯ ಭಾಗಕ್ಕೆ ನೋವಾಗಿದೆ. ಕೈಕಾಲಿನ್ನೆಲ್ಲಾ ತುಳಿದು ನೋವು ತಡೆಯಲಾಗದೇ ಪೇಚಾಡಿದ್ದೇನೆ. ಆಗ ಲೋ ಬಿಪಿಯಾಗಿ ಅಸ್ವಸ್ಥಳಾಗಿದ್ದೆ. ತುಂಬಾ ಸಮಯವಾದ ಮೇಲೆ ನನಗೆ ಪ್ರಜ್ಞೆ ಬಂತು. ನನ್ನ ಗಂಡ ಮನೆಯಲ್ಲೇ ಇದ್ದ. ಆದರೂ ನನ್ನನ್ನು ಆಸ್ಪತ್ರೆಗೆ ಸೇರಿಸಿಲ್ಲ. ನನಗೆ ಪ್ರಜ್ಞೆ ಬಂದ ಮೇಲೆ ಮನೆಯಿಂದ ಹೊರಗಡೆ ಹೋದ. ಅಲ್ಲದೇ ಹೊಟ್ಟೆ ನೋವಿನಿಂದ ನಾನು ನರಳಿದೆ. ಮರುದಿನ ಬೆಳಗ್ಗೆ ಅತೀವ ರಕ್ತಸ್ರಾವ ವಾಯ್ತು. ನನ್ನ ಗಂಡನಿಗೆ ಕರೆ ಮಾಡಿದೆ. ಅವನು ಬೇರೆ ಅಪಾರ್ಟ್‍ಮೆಂಟ್‍ನಲ್ಲಿ ಇದ್ದಾನೆ ಎಂದು ಹೇಳಿದ್ರು’ ಎನ್ನುತ್ತಾರೆ ದಿವ್ಯಾ ಶ್ರೀಧರ್.
ಈಗ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆಗೆ ತುಂಬಾ ಪೆಟ್ಟಾಗಿರೋದ್ರಿಂದ ಯಾವಾಗ ಬೇಕಿದ್ದರು ಗರ್ಭಪಾತವಾಗಬಹುದು ಎಂದು ವೈದ್ಯರು ಹೇಳಿದ್ದಾರಂತೆ. ‘ಅವನಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ಆದ್ರೆ ಅವನು ನನ್ನ ನಂಬರ್ ಬ್ಲಾಕ್ ಮಾಡಿದ್ದಾನೆ. ನನ್ನ ಮೆಸೇಜ್‍ಗೆ ರಿಪ್ಲೈ ಕೂಡ ಮಾಡ್ತಿಲ್ಲ. ನನಗೆ ನನ್ನ ಗಂಡ ಬೇಕು. ನನ್ನ ಮಗುವಿಗೆ ಏನೂ ಆಗಬಾರದು ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ದಿವ್ಯಾ ಶ್ರೀಧರ್.
ದಿವ್ಯಾ ಶ್ರೀಧರ್ ವಿಚಿತ್ರ ಪ್ರೇಮಿ, ಹುಚ್ಚುಡುಗಿ, ಹೀಗೂ ಉಂಟಾ, ಸಾಚಾ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದು, ಆಕಾಶ ದೀಪ ಧಾರಾವಾಹಿಯ ಮೂಲಕ ಸಖತ್ ಫೇಮಸ್ ಆಗಿದ್ದವರು. ಇದೀಗ ತಮಿಳಿನ ಧಾರಾವಾಹಿವೊಂದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ದಿವ್ಯಾ ಶ್ರೀಧರನ್ ಕಿರುಕುಳಕ್ಕೆ (Harassment) ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಟಾಲಿವುಡ್ (Tollywood) ನಟಿ ಕೀರ್ತಿ ಸುರೇಶ್ (Keerthi Suresh) ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಂದ ಸದ್ದು ಮಾಡುತ್ತಿದ್ದ ನಟಿ ಕೀರ್ತಿ, ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ದಸರಾ ಹಬ್ಬದಂದು ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ. ದುಬಾರಿ ಕಾರು ಖರೀದಿಸುವ ಮೂಲಕ ಮಹಾನಟಿ ಸುದ್ದಿಯಲ್ಲಿದ್ದಾರೆ.
`ಸರ್ಕಾರು ವಾರಿ ಪಾಟ’ ಚಿತ್ರದ ಸಕ್ಸಸ್ ನಂತರ ಕೊಂಚ ಸೈಲೆಂಟ್ ಆಗಿರುವ ನಟಿ ಕೀರ್ತಿ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. ಸೈಲೆಂಟ್ ಆಗಿ ಒಂದೊಂದೇ ಸಿನಿಮಾಗಳನ್ನ ಕಂಪ್ಲೀಟ್ ಮಾಡಿ ಕೊಡುತ್ತಿದ್ದಾರೆ. ಇದೀಗ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಟಿ, ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೈಲ್ವಾನ್‌ಗಳು: ಎನು ಇದು ಹೊಸ ಟ್ವಿಸ್ಟ್
ದಸರಾ ಹಬ್ಬದ(Dasara Festival) ವೇಳೆ ಕೀರ್ತಿ ಗ್ಯಾರೇಜ್ ಹೊಸ ಕಾರು ಸೇರ್ಪಡೆಯಾಗಿದೆ. BMW*7 ಮನೆಗೆ ಎಂಟ್ರಿ ಕೊಟ್ಟಿದೆ. 1.78 ಕೋಟಿ ಬೆಲೆ ಹೊಸ ಕಾರಿಗೆ ಪೂಜೆ ಮಾಡಿ, ಬಳಿಕ 7 ಆಸನಗಳ ಐಷಾರಾಮಿ ಕಾರಿನಲ್ಲಿ ಎಂದಿನಂತೆ ತಮ್ಮ ಮುದ್ದಿನ ಶ್ವಾನದ ಜೊತೆ ಕಾರು ರೈಡ್ ಹೋಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಟಿ ಕೀರ್ತಿ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ(Rashmika Mandanna) ಸದ್ಯ ಬಾಲಿವುಡ್‌ನಲ್ಲಿ ಮಿಂಚ್ತಿದ್ದಾರೆ. ಬಹುಭಾಷಾ ನಟಿಯಾಗಿ ಸಾಲು ಸಾಲು ಸಿನಿಮಾ ಅವಕಾಶಗಳನ್ನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ನಟಿಯಾಗಿ ಶೈನ್ ಆಗುತ್ತಿರುವ ರಶ್ಮಿಕಾ ಮಂದಣ್ಣ ಈ ಹಿಂದೆ ಸಖತ್ ಟ್ರೋಲ್ ಆಗಿದ್ದರು. ಅದರಲ್ಲೂ ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ಟ್ರೋಲ್ ಬಗ್ಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದ ಸಿನಿ ಜರ್ನಿ ಶುರು ಮಾಡಿದ್ದ ನಟಿಗೆ ತೆಲುಗಿನ `ಗೀತಾ ಗೋವಿಂದಂ’ ಮತ್ತು `ಡಿಯರ್ ಕಾಮ್ರೇಡ್’ ಚಿತ್ರದ ಮೂಲಕ ರಶ್ಮಿಕಾ ಮತ್ತು ವಿಜಯ್ ಹೈಪ್ ಕ್ರಿಯೇಟ್ ಮಾಡಿದ್ದರು. ಡಿಯರ್ ಕಾಮ್ರೇಡ್ ಚಿತ್ರದಲ್ಲಿ ವಿಜಯ್ ಜೊತೆ ಲಿಪ್‌ಲಾಕ್(Lip Lock) ಮಾಡಿದ್ದ ರಶ್ಮಿಕಾ ಮಂದಣ್ಣ ಅಂದು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್
ಅದು ಒಂದು ಸೆಕೆಂಡ್‌ನಲ್ಲಿ ನಡೆದಿತ್ತು. ಆದರೆ ಆ ದೃಶ್ಯ ಇಟ್ಟುಕೊಂಡು ತಿಂಗಳುಗಟ್ಟಲೇ ಟ್ರೋಲ್ ಮಾಡಲಾಗಿತ್ತು. ಅಂದು ಎಲ್ಲರೂ ಬಿಟ್ಟು ಹೋದಂತೆ, ನಾನು ಒಂಟಿ ಆದಂತೆ ಕನಸು ಬೀಳುತ್ತಿತ್ತು ಎಂದು ರೂಮ್‌ನಲ್ಲಿ ಒಬ್ಬಳೇ ಅಳುತ್ತಿದ್ದೆ ಎಂದು ರಶ್ಮಿಕಾ ಈ ವೇಳೆ ತಮಗಾದ ಕಹಿ ಅನುಭವವನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಈ ಎಲ್ಲಾ ಸಂಕಷ್ಟವನ್ನು ತನ್ನ ಮನೆಯವರಿಗೂ ತಿಳಿಸದೆ, ತಾವು ಒಬ್ಬರೇ ಎದುರಿಸಿದ ಕಹಿ ಘಟನೆಯನ್ನು ಇದೀಗ ಬಿಚ್ಚಿಟ್ಟಿದ್ದಾರೆ. ಇದೀಗ ಯಾವುದೇ ಕೆಟ್ಟ ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದೇ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿ ಮಿಂಚುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]