Tag: actress

  • ಪುತ್ರಿ ಆರಾಧ್ಯಗೆ ಲಿಪ್ ಕಿಸ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ ಐಶ್ವರ್ಯಾ ರೈ: ನೆಟ್ಟಿಗರ ಟ್ರೋಲ್

    ಪುತ್ರಿ ಆರಾಧ್ಯಗೆ ಲಿಪ್ ಕಿಸ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ ಐಶ್ವರ್ಯಾ ರೈ: ನೆಟ್ಟಿಗರ ಟ್ರೋಲ್

    ಬಿಗ್ ಬಿ ಸೊಸೆ, ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಮತ್ತು ನಟ ಅಭಿಷೇಕ್ ಬಚ್ಚನ್ ಏಕೈಕ ಪುತ್ರಿ ಆರಾಧ್ಯಾ ಬಚ್ಚನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 11ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆರಾಧ್ಯಾಳಿಗೆ ಅಮ್ಮ ಐಶ್ವರ್ಯಾ ರೈ ಪ್ರೀತಿಯಿಂದ ಸಿಹಿ ಮುತ್ತು ನೀಡಿ ವಿಶ್ ಮಾಡಿದ್ದಾರೆ. ಮಗಳಿಗೆ ಲಿಪ್‌ಕಿಸ್ ಮಾಡಿರುವ ಐಶ್ವರ್ಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಶ್ವರ್ಯಾ ಮಗಳಿಗೆ ಕಿಸ್ ಮಾಡಿರುವುದಕ್ಕೆ ಕೆಲವರು ತಕರಾರು ಮಾಡಿದ್ದಾರೆ.

    `ಪೊನ್ನಿಯನ್ ಸೆಲ್ವನ್'(Ponniyan Selvan) ಚಿತ್ರದ ಸಕ್ಸಸ್ ನಂತರ ಮತ್ತೆ ಸಿನಿಮಾಗಳಲ್ಲಿ ಐಶ್ವರ್ಯಾ ಆಕ್ಟೀವ್ ಆಗಿದ್ದಾರೆ. ಇನ್ನೂ ಇಂದು ಐಶ್ವರ್ಯಾ ಮಗಳು ಆರಾಧ್ಯ ಹುಟ್ಟುಹಬ್ಬವಾಗಿದ್ದು, ವಿಶೇಷವಾಗಿ ನಟಿ ಶುಭಕೋರಿದ್ದಾರೆ. ಈಗ ನಟಿ ಶುಭಕೋರಿರುವ ರೀತಿಗೆ ನೆಟ್ಟಿಗರಿಂದ ತರಾಟೆ ಶುರುವಾಗಿದೆ. ಮಗಳು ಆರಾಧ್ಯಳಿಗೆ ಮುತ್ತು ನೀಡುತ್ತಿರುವ ಫೋಟೋ ಶೇರ್ ಮಾಡಿ, ನನ್ನ ಪ್ರೀತಿ, ನನ್ನ ಜೀವ, ತುಂಬಾ ಪ್ರೀತಿಸುತ್ತೀನಿ, ನನ್ನ ಆರಾಧ್ಯ ಎಂದು ಬರೆದುಕೊಂಡಿದ್ದಾರೆ. ತಾಯಿ-ಮಗಳ ಮುದ್ದಾದ ಫೋಟೋಗೆ ಅಭಿಮಾನಿಗಳು ಲೈಕ್ಸ್ ಮತ್ತು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಅತಿಯಾಯಿತು, ತುಟಿಗೆ ಕಿಸ್ ಮಾಡುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್

    ಅನೇಕರು ಹುಟ್ಟುಹಬ್ಬ ಶುಭಾಶಯಗಳು ಮಿನಿ ಐಶ್ ಎಂದು ಹೇಳಿದ್ದಾರೆ. ಮತ್ತೋರ್ವ ಆಭಿಮಾನಿ ಕಾಮೆಂಟ್ ಮಾಡಿ ಸುಂದರವಾದ ಕ್ಷಣವನ್ನು ಕ್ಯಾಪ್ಚರ್ ಮಾಡಲಾಗಿದೆ ಎಂದು ಹೇಳಿದ್ದಾರೆ. ತಾಯಿ-ಮಗಳ ಅದ್ಭುತವಾದ ಫೋಟೋ ಎಂದು ವ್ಯಕ್ತಿಯೊಬ್ಬ ಪ್ರೀತಿ ವ್ಯಕ್ತಪಡಿಸಿದ್ದಾರೆ.

    ನಟಿ ಐಶ್ವರ್ಯಾ ಸದಾ ಮಗಳ ಜೊತೆಯೇ ಇರುತ್ತಾರೆ. ಕೈ ಹಿಡಿದುಕೊಂಡೆ ಕರೆದುಕೊಂಡು ಹೋಗುತ್ತಾರೆ. ಈ ಎಲ್ಲಾ ವಿಚಾರಗಳು ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು. ಈಗ ಮಗಳಿಗೆ ಲಿಪ್ ಕಿಸ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಕಲ್ಯಾಣಿ ಸಾವು

    ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಕಲ್ಯಾಣಿ ಸಾವು

    ಮರಾಠಿ ಕಿರುತೆರೆಯಲ್ಲಿ (Marathi Serials) ಸಾಕಷ್ಟು ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ಕಲ್ಯಾಣಿ ಕುರಾಲೆ ಜಾಧವ್ (Kalyani Kurale Jadhav) ನಿಧನರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ನಟಿ ವಿಧಿವಶರಾಗಿದ್ದಾರೆ.

    ತಮ್ಮ ಮನೋಜ್ಞ ನಟನೆಯ ಮೂಲಕ ಮರಾಠಿ ಪ್ರೇಕ್ಷಕರ ಮನಗೆದ್ದ ನಟಿ ಕಲ್ಯಾಣಿ ಕುರಾಲೆ‌ ಜಾಧವ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ನಟಿ ಕಲ್ಯಾಣಿ ಶನಿವಾರ(ನ.12)ರಂದು ಸಂಜೆ ಮನೆಗೆ ತೆರಳುತ್ತಿರುವಾಗ ಸಾಂಗ್ಲಿ-ಕೊಲ್ಲಾಪುರ ಹೆದ್ದಾರಿಯ ಡಿವೈಡರ್ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ ಎಂದು ಕೊಲ್ಲಾಪುರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಸ್ನೇಹಾ- ಪ್ರಸನ್ನ ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ 

    ಅಪಘಾತ ಸಂಭವಿಸಿದ ನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ನಟಿ ಕಲ್ಯಾಣಿ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಅವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಕಾಂಕ್ರೀಟ್ ಮಿಕ್ಸರ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಸದ್ಯ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಕೊಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಇನ್ನೂ ನಟಿ ಕಲ್ಯಾಣಿ ಅವರ ಸಾವಿಗೆ ಕಿರುತೆರೆ ರಂಗ ಕಂಬನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]

  • ರಮ್ಯಾ ಧರಿಸಿದ ದುಬಾರಿ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ?

    ರಮ್ಯಾ ಧರಿಸಿದ ದುಬಾರಿ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ?

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಆಗಿದ್ದಾರೆ. `ಉತ್ತರಕಾಂಡ’ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಮಿಂಚಲಿದ್ದಾರೆ. ಸದ್ಯ ರಮ್ಯಾ ಇತ್ತೀಚೆಗೆ ಧರಿಸಿದ್ದ ದುಬಾರಿ ನೆಕ್ಲೆಸ್ ವಿಷ್ಯವಾಗಿ ಸದ್ದು ಮಾಡ್ತಿದ್ದಾರೆ.

    ನಿರ್ಮಾಣದ ಮತ್ತು ನಟನೆಯ ಮೂಲಕ ಚಿತ್ರರಂಗದಲ್ಲಿ ಆಕ್ಟೀವ್ ಇರುವ ನಟಿ ರಮ್ಯಾ, `ಉತ್ತರಕಾಂಡ’ ಚಿತ್ರದಲ್ಲಿ ಡಾಲಿಗೆ ನಾಯಕಿಯಾಗಿ ರಮ್ಯಾ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹೀಗಿರುವಾಗ `ಉತ್ತರಕಾಂಡ’ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ನಟಿ, ಜೆರಿ ಸೀರೆಯುಟ್ಟು ಗ್ರ್ಯಾಂಡ್ ಆಗಿ ಬಂದಿದ್ದರು. ಈ ವೇಳೆ ಅವರು ಧರಿಸಿದ್ದ ನೆಕ್ಲೆಸ್ ಕೂಡ ಹೈಲೈಟ್ ಆಗಿದೆ. ಇದನ್ನೂ ಓದಿ:ಅವಳಿ ಮಕ್ಕಳ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಪ್ರೀತಿ ಜಿಂಟಾ

    ಇನ್ನೂ ರಮ್ಯಾ ಧರಿಸಿದ್ದ ದುಬಾರಿ ಆಭರಣದ ಬೆಲೆ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಾ. ಈ ಚೆಂದದ ನೆಕ್ಲೆಸ್‌ಗೆ ಬರೋಬ್ಬರಿ 20 ಲಕ್ಷ ರೂ. ಎನ್ನಲಾಗಿದೆ. ರಮ್ಯಾ 20 ಲಕ್ಷದ ಅದ್ದೂರಿ ಆಭರಣ ಧರಿಸಿ ಮುಹೂರ್ತಕ್ಕೆ ಬಂದಿದ್ದರು. ಗೋಲ್ಡ್‌ ಪ್ಲೇಟೆಡ್‌ ಆಭರಣವಾಗಿದ್ದು, ಸಿಂಪಲ್‌ ಲುಕ್‌ಯಿದೆ. ಒಟ್ನಲ್ಲಿ ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಥೈಲ್ಯಾಂಡ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮೇಘನಾ ರಾಜ್

    ಥೈಲ್ಯಾಂಡ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮೇಘನಾ ರಾಜ್

    ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್(Meghana Raj) ಸದ್ಯ ಥೈಲ್ಯಾಂಡ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಆಪ್ತ ಸ್ನೇಹಿತೆಯರ ಜೊತೆ ಥೈಲ್ಯಾಂಡ್‌ನಲ್ಲಿ ಚಿಲ್ ಮಾಡುತ್ತಿದ್ದಾರೆ. ಸದ್ಯ ನಟಿಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ರಾಜಹುಲಿ, ಆಟಗಾರ, ಹೀಗೆ ಸಾಕಷ್ಟು ಚಿತ್ರಗಳಲ್ಲಿ ಮಿಂಚಿರುವ ಮೇಘನಾ ರಾಜ್ ವೆಕೇಷನ್ಸ್‌ಗಾಗಿ  ಥೈಲ್ಯಾಂಡ್‌ಗೆ(Thailand) ಹಾರಿದ್ದಾರೆ. ಪತಿ ಚಿರು ಅಗಲಿಕೆಯ ನಂತರ ರಾಯನ್ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ ಇದೀಗ ವಿದೇಶಕ್ಕೆ ಹಾರಿದ್ದಾರೆ. ಸ್ನೇಹಿತೆಯರ ಜೊತೆ ಥೈಲ್ಯಾಂಡ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ:ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್

     

    View this post on Instagram

     

    A post shared by Meghana Raj Sarja (@megsraj)

    ಥೈಲ್ಯಾಂಡ್‌ನ ಸುಂದರ ಪ್ರದೇಶದಲ್ಲಿ ಮೇಘನಾ ರಾಜ್ ಎಂಜಾಯ್ ಮಾಡ್ತಿದ್ದಾರೆ. ಮೇಘನಾ ರಾಜ್ ಹೆಸರಿರುವ ಹ್ಯಾಟ್ ತೊಟ್ಟು, ಮತ್ತೊಂದರಲ್ಲಿ ಸ್ವಿಮಿಂಗ್ ಫೂಲ್‌ನಲ್ಲಿರುವ ಫೋಟೋನಲ್ಲಿ ಮೇಘನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ ಪನ್ನಗಭರಣ ಮತ್ತು ಮೇಘನಾ ರಾಜ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರಲಿದೆ. ಈ ಚಿತ್ರದ ಮೂಲಕ ಮತ್ತೆ ಮೇಘನಾ ತೆರೆಯ ಮೇಲೆ ಮಿಂಚಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಥೈಲ್ಯಾಂಡ್‌ಗೆ ಹಾರಿದ ನಟಿ ಮೇಘನಾ ರಾಜ್

    ಥೈಲ್ಯಾಂಡ್‌ಗೆ ಹಾರಿದ ನಟಿ ಮೇಘನಾ ರಾಜ್

    ಸ್ಯಾಂಡಲ್‌ವುಡ್ ನಟಿ(Sandalwood Actress) ಮೇಘನಾ ರಾಜ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾ, ಮಗುವಿನ ಪಾಲನೆ ಅಂತಾ ಬ್ಯುಸಿಯಿದ್ದ ನಟಿ ಈಗ ಕೊಂಚ ತಮ್ಮ ಎಲ್ಲಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಥೈಲ್ಯಾಂಡ್‌ಗೆ(Thailand) ಹಾರಿದ್ದಾರೆ.

    ರಾಜಾಹುಲಿ, ಆಟಗಾರ, ಹೀಗೆ ಸಾಕಷ್ಟು ಚಿತ್ರಗಳಲ್ಲಿ ಮಿಂಚಿರುವ ನಟಿ ಮೇಘನಾ ರಾಜ್ (Meghana Raj)  ಥೈಲ್ಯಾಂಡ್‌ಗೆ ಹಾರಿದ್ದಾರೆ. ಪತಿ ಚಿರು ಅಗಲಿಕೆಯ ನಂತರ ರಾಯನ್ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ ಇದೀಗ ವಿದೇಶಕ್ಕೆ ಹಾರಿದ್ದಾರೆ. ಸ್ನೇಹಿತೆಯರ ಜೊತೆ ಥೈಲ್ಯಾಂಡ್ ಬೀಚ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ: ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗಶೌರ್ಯ ಮದುವೆ

    View this post on Instagram

     

    A post shared by Meghana Raj Sarja (@megsraj)

    ಬೀಚ್‌ನಲ್ಲಿ ಫ್ರೆಂಡ್ಸ್ ಜೊತೆಯಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನಟಿ ಶೇರ್ ಮಾಡಿದ್ದಾರೆ. ಈ ಫೋಟೋಗಳು ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಮಾನಸ ಜೋಶಿ

    ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಮಾನಸ ಜೋಶಿ

    `ಹಾದೇವಿ'(Mahadevi) ಸೇರಿದಂತೆ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಮಾನಸ ಜೋಶಿ(Manasa Joshi) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿಯ ಕುಟುಂಬದಲ್ಲಿ ಇದೀಗ ಸಂತಸ ಮನೆ ಮಾಡಿದೆ. ಈ ಕುರಿತ ಸಿಹಿ ಸುದ್ದಿಯನ್ನು ಸ್ವತಃ ಸೋಷಿಯಲ್ ಮೀಡಿಯಾ ಮೂಲಕ ನಟಿಯೇ ತಿಳಿಸಿದ್ದಾರೆ.

     

    View this post on Instagram

     

    A post shared by Manasa Joshi (@manasajoshi)

    ಕಿರುತೆರೆಯಲ್ಲಿ(Television ದೇವಿಯಾಗಿ ಮತ್ತು ಬಗೆ ಬಗೆಯ ಪಾತ್ರಗಳಲ್ಲಿ ಮಿಂಚಿದ್ದ ನಟಿ ಮಾನಸ ಜೋಶಿ ಅವರು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಈ ಕುರಿತು ಕೆಲ ತಿಂಗಳುಗಳ ಹಿಂದೆ ಬೇಬಿ ಬಂಪ್ ಫೋಟೋಶೂಟ್ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ತಿಳಿಸಿದ್ದರು. ಇದೀಗ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಇದನ್ನೂ ಓದಿ:ಅಥರ್ವ್-ಆಧವ್ ಎಂದು ಅವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ನಟಿ ಅಮೂಲ್ಯ

     

    View this post on Instagram

     

    A post shared by Manasa Joshi (@manasajoshi)

    ಮಗಳ ಆಗಮನದ ಖುಷಿಯಲ್ಲಿರುವ ನಟಿ, ಬಣ್ಣದ ಲೋಕದಿಂದ ಸದ್ಯಕ್ಕೆ ಅಂತರ ಕಾಯ್ದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

    ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

    ಸಾಜಿದ್ ಖಾನ್ ವಿಷಯದಲ್ಲಿ ರಾಖಿ ಸಾವಂತ್(Rakhi Sawant) ಮತ್ತು ಶೆರ್ಲಿನ್(Sherlyn Chopra) ನಡುವೆ ಮಾತಿನ ಚಕಮಕಿ ಜೋರಾಗಿದೆ. ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದು, ಈ ವಿಚಾರ ಈಗ ಠಾಣೆ ಮೆಟ್ಟಿಲೇರಿದೆ. ಇದೀಗ ಶೆರ್ಲಿನ್ ಚೋಪ್ರಾ ವಿರುದ್ಧ ರಾಖಿ ಸಾವಂತ್ ದೂರು ದಾಖಲಿಸಿದ್ದಾರೆ.

    ಶೆರ್ಲಿನ್ ಮತ್ತು ರಾಖಿ ಸಾವಂತ್ ನಡುವಿನ ವಾರ್ ಇದೀಗ ಕಾನೂನು ರೂಪ ಪಡೆದಿದೆ. ಶೆರ್ಲಿನ್ ವಿರುದ್ಧ ನಟಿ ರಾಖಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಜೊತೆಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶನಿವಾರ ಮುಂಬೈನ(Mumbai) ಓಶಿವಾರ ಪೊಲೀಸ್ ಠಾಣೆಯಲ್ಲಿ ರಾಖಿ ಸಾವಂತ್ ತನ್ನ ವಕೀಲರೊಂದಿಗೆ ಶೆರ್ಲಿನ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಈ ಕುರಿತು ಮಾಧ್ಯಮಕ್ಕೆ ರಾಖಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್‌

    ಶೆರ್ಲಿನ್ ಚೋಪ್ರಾ ವಿರುದ್ಧ ಹಲವು ಸಾಕ್ಷ್ಯಾಧಾರಗಳಿವೆ. ಅದನ್ನು ನ್ಯಾಯಾಲಯಕ್ಕೆ ಒದಗಿಸುತ್ತೇನೆ. ಭಾರತದಲ್ಲಿ ಮಹಿಳೆಯರಿಗೆ ಉತ್ತಮ ಕಾನೂನುಗಳಿವೆ. ಆದರೆ ಅದನ್ನು ಕೆಲವರು ದೂರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಾಜಿದ್ ಖಾನ್(Sajid Khan) ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಇನ್ನೂ ಶೆರ್ಲಿನ್, ಹಣಕ್ಕಾಗಿ ಪುರುಷರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಎಂದು ನಟಿಯ ವಿರುದ್ಧ ರಾಖಿ ಆರೋಪ ಮಾಡಿದ್ದಾರೆ.

    ನಾನು ಸಮಾಜ ಸೇವಕಿ. ನಾನು ಜನರಿಗೆ ಒಳ್ಳೆಯದನ್ನು ಮಾಡುತ್ತೇನೆ ಮತ್ತು ನಾನು ಅದನ್ನು ಮುಂದುವರಿಸುತ್ತೇನೆ ಎಂದು ರಾಖಿ ಸಾವಂತ್ ಮಾತನಾಡಿದ್ದಾರೆ. ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಶೆರ್ಲಿನ್ ಇಲ್ಲಸಲ್ಲದ ಆರೋಪ ಮಾಡಿರುವುದು ನನ್ನ ಜೀವನಕ್ಕೂ ಪರಿಣಾಮ ಬೀರಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್‌

    ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್‌

    ಬಾಲಿವುಡ್(Bollywood) ಬ್ಯೂಟಿ ಆಲಿಯಾ ಭಟ್(Alia Bhatt) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಪೂರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ನಟಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಹಲವು ವರ್ಷಗಳ ಡೇಟಿಂಗ್ ನಂತರ ರಣ್‌ಬೀರ್ ಕಪೂರ್(Ranbir Kapoor) ಮತ್ತು ಆಲಿಯಾ ಭಟ್ ಏಪ್ರಿಲ್‌ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಜೂನ್‌ನಲ್ಲಿ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ತಿಳಿಸಿ, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಇದೀಗ ರಣ್‌ಬೀರ್ ದಂಪತಿ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಭಾನುವಾರ(ನ.6) ಬೆಳಿಗ್ಗೆ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ:`ವಾರಿಸು’ಗಾಗಿ ವಿಜಯ್ ಥಳಪತಿ ಜೊತೆ ಸೊಂಟ ಬಳುಕಿಸಿದ ರಶ್ಮಿಕಾ

    ರಣ್‌ಬೀರ್ ಮತ್ತು ಆಲಿಯಾ ತಮ್ಮ ಚೊಚ್ಚಲ ಮಗುವಿಗೆ ಸ್ವಾಗತಿಸಿದ ಖುಷಿಯಲ್ಲಿದ್ದಾರೆ. ಹೆಣ್ಣು ಮಗುವಿಗೆ ತಾಯಿಯಾಗಿ ಆಲಿಯಾ, ಮುಂಬೈನ ಎಚ್‌ಎನ್ ರಿಲಯನ್ಸ್ ಹಾಸ್ಪಿಟಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

    ಕಪೂರ್ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ನೆಚ್ಚಿನ ನಟಿ ಆಲಿಯಾ ತಾಯಿ ಆಗಿರುವ ಗುಡ್ ನ್ಯೂಸ್ ಕೇಳಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೆಟರ್ನಿಟಿ ಫೋಟೋಶೂಟ್‌ನಲ್ಲಿ ಮಿಂಚಿದ ನಟಿ ಬಿಪಾಶಾ ಬಸು

    ಮೆಟರ್ನಿಟಿ ಫೋಟೋಶೂಟ್‌ನಲ್ಲಿ ಮಿಂಚಿದ ನಟಿ ಬಿಪಾಶಾ ಬಸು

    ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೆಕ್ಸಿ ಲುಕ್‌ನಲ್ಲಿ ಬಿಪಾಶಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Bipasha Basu (@bipashabasu)

    ಹಿಂದಿಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಬಿಪಾಶಾ ಮತ್ತು ಕರಣ್ ಸಿಂಗ್ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಕೆಲ ತಿಂಗಳುಗಳ ಹಿಂದೆ ಪ್ರೆಗ್ನೆನ್ಸಿ ವಿಚಾರವನ್ನ ಅಭಿಮಾನಿಗಳಿಗೆ ತಿಳಿಸುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಮಗುವಿನ ಆಗಮನದ ಖುಷಿಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

     

    View this post on Instagram

     

    A post shared by Bipasha Basu (@bipashabasu)

    ಗೋಲ್ಡನ್ ಕಲರ್ ಗೌನ್‌ನಲ್ಲಿ ಸೆಕ್ಸಿ ಪೋಸ್ ಕೊಟ್ಟು, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಲುಕ್ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Bipasha Basu (@bipashabasu)

    ಇನ್ನೂ ತುಂಬು ಗರ್ಭೀಣಿಯಾಗಿರುವ ಬಿಪಾಶಾಗೆ ಮುಂಬರುವ ಡಿಸೆಂಬರ್‌ಗೆ ಡೆಲಿವೆರಿ ಡೇಟ್ ಕೊಟ್ಟಿದ್ದಾರೆ. ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಟಿಯ ಹೆರಿಗೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಅದಿತಿ ಪ್ರಭುದೇವ ಮದುವೆ ಡೇಟ್ ಫಿಕ್ಸ್

    ನಟಿ ಅದಿತಿ ಪ್ರಭುದೇವ ಮದುವೆ ಡೇಟ್ ಫಿಕ್ಸ್

    ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿ ಅದಿತಿ ಪ್ರಭುದೇವ(Aditi Prabhudeva) ಹಸೆಮಣೆ(Wedding) ಏರಲು ಸಜ್ಜಾಗಿದ್ದಾರೆ. ಸಾಕಷ್ಟು ಸಿನಿಮಾ ನಟಿಸಿ ಸೈ ಎನಿಸಿಕೊಂಡಿರುವ ನಾಯಕಿ ಅದಿತಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದೆ. ಅದಿತಿ ಮತ್ತು ಯಶಸ್ವಿ(Yashasvi) ಜೋಡಿಯ ಮದುವೆ ಆಮಂತ್ರಣ ಪ್ರತಿಕೆ ಕೂಡ ಇದೀಗ ಲಭ್ಯವಾಗಿದೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶ್ಯಾನೆ ಟಾಪ್ ಪ್ರತಿಭೆ ಅದಿತಿ ಪ್ರಭುದೇವ ಧೈಯಂ, ಬಜಾರ್, ಸಿಂಗಂ, ರಂಗನಾಯಕಿ, ಓಲ್ಡ್ಮಾಂಕ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವಾಗಲೇ ನಿಶ್ಚಿತಾರ್ಥ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಶಾಕ್ ನೀಡಿದ್ದರು. ಈಗ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಸಂಬರ್ಗಿಯನ್ನು ಮನೆಗೆ ಕಳುಹಿಸಿ- ಕನ್ನಡಪರ ಹೋರಾಟಗಾರರ ಪಟ್ಟು

    ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜೊತೆ ಇದೇ ನವೆಂಬರ್ 27ರಂದು ಮದುವೆ ಆಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಇದೇ ತಿಂಗಳು ವಿವಾಹವಿರುವುದರಿಂದ ನಟನೆಯಿಂದ ಬ್ರೇಕ್ ಪಡೆಯಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]