Tag: actress

  • ಆಡಿಯೋ ಹುಡುಗಿ ಹೇಳಿದಷ್ಟು ನನ್ನ ಮಗ ಕೆಟ್ಟವನಲ್ಲ: ವಿದ್ಯಾಭರಣ್ ತಾಯಿ

    ಆಡಿಯೋ ಹುಡುಗಿ ಹೇಳಿದಷ್ಟು ನನ್ನ ಮಗ ಕೆಟ್ಟವನಲ್ಲ: ವಿದ್ಯಾಭರಣ್ ತಾಯಿ

    ಟಿ ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದ್ಯಾಭರಣ್ ನಡತೆ ಸರಿ ಇಲ್ಲ ಎಂದು ಹುಡುಗಿಯೊಬ್ಬಳು ಆಡಿಯೋ ಮೂಲಕ ಹೇಳಿದ ವಿಷಯ ಮೊದಲು ಗೊತ್ತಾಗಿದ್ದು ವೈಷ್ಣವಿ ಅವರ ತಾಯಿಗೆ. ಈ ವಿಡಿಯೋ ಇಟ್ಟುಕೊಂಡು ವಿದ್ಯಾಭರಣ್ ತಾಯಿಯನ್ನು ವೈಷ್ಣವಿ ತಾಯಿ ವಿಚಾರಿಸಿದಾಗ, ವಿದ್ಯಾಭರಣ್ ತಾಯಿ ವಾಯ್ಸ್ ನೋಟ್ಸ್ ವೊಂದನ್ನು ಕಳುಹಿಸಿದ್ದಾರೆ.

    ವೈಷ್ಣವಿ ಅವರ ತಾಯಿಗೆ ಕಳುಹಿಸಿದ ವಾಯ್ಸ್ ನೋಟ್ಸ್ ಅನ್ನು ಮಾಧ್ಯಮಗಳ ಮುಂದೆ ಕೇಳಿಸಿದ್ದು, ‘ನೀವು ಸಮಾಧಾನವಾಗಿರಿ. ನಮ್ಮ  ಕಡೆಯಿಂದ ತಪ್ಪಾಗಿದೆ. ಆ ಹುಡುಗಿ ಹೇಳುವಷ್ಟು ನನ್ನ ಮಗ ಕೆಟ್ಟವನಲ್ಲ. ಯಾರು ಹೀಗೆ ಮಾಡಿದ್ದಾರೆ ಅನ್ನೊದನ್ನ ಪತ್ತೆ ಹಚ್ಚುವವರೆಗೆ ಸ್ವಲ್ಪ ಸಮಾಧಾನವಾಗಿರಿ’ ಎಂದು ವಿದ್ಯಾಭರಣ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ. ಇದನ್ನೂ ಓದಿ: ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ವಿದ್ಯಾಭರಣ್ ಕೂಡ ಮಾಧ್ಯಮಗಳ ಮುಂದೆ ಈ ವಿಷಯವನ್ನು ಪದೇ ಪದೇ ಹೇಳುತ್ತಲೇ ಇದ್ದಾರೆ. ನನಗೆ ಗರ್ಲ್ ಫ್ರೆಂಡ್ ಇದ್ದದ್ದು ನಿಜ. ಆದರೆ, ನಾನು ಯಾರೊಂದಿಗೂ ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ರಿಲೇಶನ್ಶಿಪ್ ಅಲ್ಲಿ ಇದ್ದದ್ದು ಹಳೆಯ ಕಥೆ. ಅದನ್ನು ಗುರಿಯಾಗಿಸಿಕೊಂಡು ಈ ರೀತಿ ಮಾತಾಡುತ್ತಿದ್ದಾರಾ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಮತ್ತು ನನ್ನ ಕುಟುಂಬದ ಮಾನವನ್ನು ಕಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

    ವಿದ್ಯಾಭರಣ್ ಬಗ್ಗೆ ಮಾತನಾಡಿದ ಆಡಿಯೋ ಹುಡುಗಿ, ನಟಿ ಎಂದು ಹೇಳಲಾಗಿದ್ದು, ಆ ಹುಡುಗಿ ಮಾಧ್ಯಮವೊಂದರ ಜೊತೆ ಮಾತನಾಡಿ ಆಡಿಯೋ ಹರಿಬಿಟ್ಟಿದ್ದಾರೆ. ಈಗ ಅದೇ ಆಡಿಯೋ ವೈಷ್ಣವಿ ಮತ್ತು ವಿದ್ಯಾಭರಣ್ ಬದುಕಿಗೆ ಮುಳ್ಳಾಗಿ ಕಾಡುತ್ತಿದೆ. ಈ ಸಂಬಂಧ ಇನ್ನು ಮುಂದುವರೆಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವೈಷ್ಣವಿ ಅವರ ತಾಯಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi GOwda) ನಿಶ್ಚಿತಾರ್ಥದ ವಿವಾದ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ವಿದ್ಯಾಭರಣ ವಿಷ್ಯವಾಗಿ ಸಾಕಷ್ಟು ಆರೋಪ ಕೇಳಿ ಬಂದ ಬೆನ್ನಲ್ಲೇ ವೈಷ್ಣವಿ ತಂದೆ ರವಿಕುಮಾರ್ (Ravikumar) ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ವಿದ್ಯಾಭರಣ(Vidyabharan)  ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು. ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ನಟಿ ಮನವಿ ಮಾಡಿದ್ದರು. ಇದೀಗ ವೈಷ್ಣವಿ ತಂದೆ ರವಿಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ನಮಗೂ ಈ ಬಗ್ಗೆ ಶಾಕ್ ಆಗಿದೆ ಎಂದು ಮಾತನಾಡಿದ್ದಾರೆ.

    ಇದೀಗ ಮದುವೆ ಕ್ಯಾನ್ಸಲ್‌ ಆಗಿದೆ. ಇಷ್ಟೆಲ್ಲ ನಡೆದ ಮೇಲೆ ಈ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನಿಸಿತು. ನಮಗೂ ಶಾಕ್ ಆಗಿದೆ. ವೈಷ್ಣವಿ ರೂಂನಿಂದ ಹೊರ ಬಂದಿಲ್ಲ. ತುಂಬಾ ಫೆಡ್ ಅಪ್ ಆಗಿದ್ದಾರೆ. ನಮಗೂ ಕೂಡ ಈ ಬಗ್ಗೆ ಮೊದಲೂ ಏನೂ ಗೊತ್ತಿರಲಿಲ್ಲ. ಆಡಿಯೋ ಬಗ್ಗೆ ಟಿವಿಯಲ್ಲಿ ನೋಡಿದಾಗ ಗೊತ್ತಾಗಿದ್ದು. ಆ ಆಡಿಯೋ ಕೇಳಿ ತುಂಬಾ ಬೇಜಾರಾಗಿದೆ. ಜನವರಿಯಲ್ಲಿ ಎಂಗೇಜ್‌ಮೆಂಟ್ ಮಾಡಲು ತೀರ್ಮಾನ ಮಾಡಿದ್ದೇವು. ಸದ್ಯ ಇವಾಗ ಬೊಟ್ಟು ಇಡುವ ಶಾಸ್ತ್ರ ಮಾಡಿದ್ದೇವು.

     

    View this post on Instagram

     

    A post shared by Vaishnavi (@iamvaishnavioffl)

    ಯಾರೋ ಆಗದೇ ಇರೋರು ಈ ರೀತಿ ಮಾಡಿರಬಹುದು. ಇದು ನನ್ನ ಮಗಳ ಜೀವನ. ಅವಳಿಗೆ ಸಂಪೂರ್ಣ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಅವಳು ಏನು ನಿರ್ಧಾರ ತಗೋತ್ತಾಳೆ ಅನ್ನೋದು ಅವಳಿಗೆ ಬಿಟ್ಟಿದ್ದು ಎಂದು ವೈಷ್ಣವಿ ತಂದೆ ಮಾತನಾಡಿದ್ದಾರೆ.

    ಬಿಗ್ ಬಾಸ್ ನಂತರ ಕಿರುತೆರೆಯಿಂದ ದೂರ ಉಳಿದಿದ್ದ ನಟಿ ಮತ್ತೆ ಹೊಸ ಧಾರಾವಾಹಿ ಮೂಲಕ ವೈಷ್ಣವಿ ಕಂಬ್ಯಾಕ್ ಆಗಿದ್ದಾರೆ. ಈ ಮಧ್ಯೆ ನಟಿಯ ಎಂಗೇಜ್‌ಮೆಂಟ್ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವೈಷ್ಣವಿ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜಾ ಆದರೆ ಇದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದು ಈ ಹಿಂದೆಯೇ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹನಿಮೂನ್ ಸ್ಪಾಟ್ ಬಾಲಿಯಲ್ಲಿ ಒಂಟಿಯಾಗಿ ನಿವೇದಿತಾ ಗೌಡ ಮೋಜು- ಮಸ್ತಿ

    ಹನಿಮೂನ್ ಸ್ಪಾಟ್ ಬಾಲಿಯಲ್ಲಿ ಒಂಟಿಯಾಗಿ ನಿವೇದಿತಾ ಗೌಡ ಮೋಜು- ಮಸ್ತಿ

    ಬಿಗ್ ಬಾಸ್‌ನ ಮಾಜಿ ಸ್ಪರ್ಧಿ ಚಂದನ್ ಶೆಟ್ಟಿ (Chandan Shetty) ಪತ್ನಿ ನಿವೇದಿತಾ ಗೌಡ (Niveditha Gowda)  ಮತ್ತೆ ಸುದ್ದಿಯಲ್ಲಿದ್ದಾರೆ. ಚಂದನ್ ಶೆಟ್ಟಿನ ಬಿಟ್ಟು ಏಂಕಾಗಿಯಾಗಿ ಬಾಲಿಗೆ(Bali) ನಿವೇದಿತಾ ಗೌಡ ಹಾರಿದ್ದಾರೆ. ಪ್ರವಾಸಿಗರ ಸ್ಪರ್ಗ ಎಂದೇ ಕರೆಯಲಾಗುವ ಇಂಡೋನೇಷ್ಯಾ ದೇಶದ ಬಾಲಿಯಲ್ಲಿ ನಿವೇದಿತಾ ಎಂಜಾಯ್ ಮಾಡ್ತಿದ್ದಾರೆ. ಈ ಕುರಿತ ಫೋಟೋ, ವೀಡಿಯೋವನ್ನ ನಟಿ ಹಂಚಿಕೊಂಡಿದ್ದಾರೆ.

    ಕಿರುತೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಿವೇದಿತಾ ಗೌಡ ಬಳಿಕ ನಟನೆ, ಮಾಡೆಲಿಂಗ್, ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ, ಬಾಲಿಯಲ್ಲಿ ನಟಿ ಕಾಲ ಕಳೆಯುತ್ತಿದ್ದಾರೆ. ಪತಿ ಚಂದನ್‌ನ ಬಿಟ್ಟು ಸೋಲೋ ಟ್ರಿಪ್‌ನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಟ್ರಿಪ್ ಫೋಟೋ, ವೀಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಬಾಲಿಗೆ ತಾವು ಸೋಲೋ ಟ್ರಿಪ್ ಹೊರಟಿರುವುದಾಗಿ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಸದ್ಯ ತಮ್ಮ ಸೋಲೋ ಟ್ರಿಪ್‌ನ್ನ ನಿವೇದಿತಾ ಸಖತ್ ಆಗಿ ಏಂಜಾಯ್ ಮಾಡ್ತಿದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ರೀತಿಯಲ್ಲಿಯೇ ಕೈ ಸನ್ನೆ ಮಾಡಿ ರಿಷಬ್ ತಿರುಗೇಟು

    ಇನ್ನೂ ಸದ್ಯದಲ್ಲೇ ನಿವೇದಿತಾ ಗೌಡ, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಆಗಿ ಎರಡೇ ದಿನಕ್ಕೆ ಅಣ್ಣ ಬದಲಾಗಿ ಬಿಟ್ಟ: ದೀಪಿಕಾ ದಾಸ್‌

    ಮದುವೆ ಆಗಿ ಎರಡೇ ದಿನಕ್ಕೆ ಅಣ್ಣ ಬದಲಾಗಿ ಬಿಟ್ಟ: ದೀಪಿಕಾ ದಾಸ್‌

    ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯ ಜೊತೆ ಹೊಸ ಬಗೆಯ ಟಾಸ್ಕ್‌ಗಳ ಮೂಲಕ ಗಮನ ಸೆಳೆಯುತ್ತಿದೆ. ಕಿರುತೆರೆ ಮತ್ತು ಹಿರಿತೆರೆ ಸ್ಟಾರ್‌ಗಳು ಒಟ್ಟಾಗಿರುವ ಈ ಶೋನಲ್ಲಿ, ಕಲಾವಿದರ ತೆರೆ ಹಿಂದಿನ ಕಥೆಗಳು ಅಭಿಮಾನಿಗಳಿಗೆ ತಿಳಿದಿರುವುದಿಲ್ಲ. ಇದೀಗ ತಮ್ಮ ಜೀವನದ ನೋವಿನ ಕಥೆಯನ್ನ ಹೇಳಲು ಬಿಗ್ ಬಾಸ್ ಹೇಳಿದ್ರು. ಅದರಂತೆ ದೀಪಿಕಾ ದಾಸ್, ತಮ್ಮ ಜೀವನದ ಕಥೆಯನ್ನ ಬಿಚ್ಚಿಟ್ಟಿದ್ದಾರೆ.

    ದೀಪಿಕಾ ದಾಸ್ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಂದಿದ್ದಾರೆ. ತಮ್ಮ ಭಿನ್ನ ಶೈಲಿಯಲ್ಲಿ ಆಡುವ ಮೂಲಕ ನಟಿ ಗಮನ ಸೆಳೆದಿದ್ದಾರೆ. ಈಗ ದೀಪಿಕಾ ದಾಸ್ ಅಣ್ಣ ಮಾಡಿರುವ ತಪ್ಪಿನ ಬಗ್ಗೆ ಮೌನ ಮುರಿದಿದ್ದಾರೆ. ನಾನು ತುಂಬಾ ಪ್ರೀತಿಸುವ ನನ್ನ ತಂದೆ ಲಿವರ್ ಜಾಂಡೀಸ್ ನಿಂದ ತೀರಿ ಹೋಗ್ತಾರೆ. ಆಗಾ ನಮ್ಮ ಕುಟುಂಬ ಕುಗ್ಗಿ ಹೋಗುತ್ತೆ. ಇದರ ನಡುವೆ ನಮ್ಮ ತಂದೆ ಸತ್ತು ಹೋದ ಒಂದು ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನಡೆಯಬೇಕು. ಮದುವೆ ಮಾಡಬೇಕು ಎನ್ನುತ್ತಾರೆ. ನಾನು ಚಿಕ್ಕವಳಾದ ಕಾರಣ ಮದುವೆ ಬೇಡ ಎಂದು ಹೇಳುತ್ತೇನೆ.

    ನನ್ನ ಅಣ್ಣನ ಮದುವೆ ಮಾಡಲು ನಿರ್ಧಾರ ಮಾಡ್ತೇವೆ. ಆಗ ಅಷ್ಟೊಂದು ದುಡ್ಡು ಇರಲ್ಲ. ಮಗನ ಮದುವೆ ಗ್ರ‍್ಯಾಂಡ್ ಆಗಿ ಮಾಡಬೇಕು ಎಂದುಕೊಳ್ತೇವೆ. ಅದಕ್ಕಾಗಿ ಮನೆಯಲ್ಲಿದ್ದ ದುಡ್ಡು, ಬೇರೆ ಕಡೆಯಿಂದ ಸಾಲ ತಂದು ಮದುವೆ ಮಾಡುತ್ತೇವೆ. ಮದುವೆ ಆಗಿ ಎರಡೇ ದಿನಕ್ಕೆ ನಮ್ಮ ಅಣ್ಣ ಬದಲಾಗಿ ಬಿಟ್ಟ, ನಮ್ಮ ಅತ್ತಿಗೆ ಮುಂದೆಯೇ ತಟ್ಟೆಯನ್ನು ಬಿಸಾಕಿ ಬಿಟ್ಟ. ಅವರ ಮುಂದೆ ನಮ್ಮನ್ನು ಬಿಟ್ಟು ಕೊಟ್ಟು. 2 ದಿನಕ್ಕೆ ಮನೆ ಬಿಟ್ಟು ಹೊರಟು ಹೋದ. ಇದನ್ನೂ ಓದಿ: ಹೆಂಡ್ತಿ ನೆನಪು ಮಾಡಿಸಿದ್ದಕ್ಕೆ ರಾಜಣ್ಣ, ರೂಪೇಶ್‌ನನ್ನು ಅಟ್ಟಾಡಿಸಿದ ಗುರೂಜಿ

     

    View this post on Instagram

     

    A post shared by Deepika Das (@deepika__das)

    ನಮಗೆ ಆಗ ತುಂಬಾ ಕಷ್ಟ ಆಯ್ತು. ಅಪ್ಪ ಇಲ್ಲ. ಅಣ್ಣ ಮನೆ ಬಿಟ್ಟು ಹೋದ. ಅದೇ ವೇಳೆಯಲ್ಲಿ ನಮ್ಮ ನಾಯಿ ಮರಿ ತೀರಿ ಹೋಯ್ತು. ಸಂಬಂಧಿಕರೆಲ್ಲಾ ದೂರ ಆದ್ರು. ಆ ನೋವು ಯಾರಿಗೂ ಬರಬಾರದು. ಅದೇ ವೇಳೆ ನನಗೆ ನಾಗಿಣಿ ಧಾರಾವಾಹಿ ಸಿಕ್ತು. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಆದಾದ ನಂತರ ಬಿಗ್ ಬಾಸ್, ಮತ್ತೆ ಬಿಗ್ ಬಾಸ್. ಖುಷಿಯಾಗಿದೆ. ಈಗ ನಮ್ಮ ಅಣ್ಣ ಬಂದಿದ್ದಾನೆ. ಖುಷಿಯಾಗಿದ್ದೇವೆ. ಆದ್ರೂ ಆ ದಿನ ಮರೆಯೋಕೆ ಸಾಧ್ಯವಿಲ್ಲ ಎಂದು ದೀಪಿಕಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಮದುವೆ ಆಗಲ್ಲ ಎಂದ ಮೋಹಕತಾರೆ ರಮ್ಯಾ

    ನಾನು ಮದುವೆ ಆಗಲ್ಲ ಎಂದ ಮೋಹಕತಾರೆ ರಮ್ಯಾ

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಸಿನಿಮಾ ತಯಾರಿಯಲ್ಲಿ ಬ್ಯುಸಿಯಿರುವ ನಟಿ ಇದೀಗ ಸಮಾರಂಭವೊಂದರಲ್ಲಿ ತಮ್ಮ ಮದುವೆಯ ಬಗ್ಗೆ ರಮ್ಯಾ ಮೌನ ಮುರಿದಿದ್ದಾರೆ.

    ಸಾಕಷ್ಟು ವರ್ಷಗಳ ನಂತರ ರಮ್ಯಾ ಮತ್ತೆ ಬಣ್ಣ ಹಚ್ತಿದ್ದಾರೆ. ಈ ಗುಡ್ ನ್ಯೂಸ್ ಮಧ್ಯೆ ತಮ್ಮ ಮದುವೆಯ ಬಗ್ಗೆ ಕೂಡ ನಟಿ ಮಾತನಾಡಿದ್ದಾರೆ. ಇತ್ತೀಚೆಗೆ ಬೆಂಗಳೂರು ಕಾಲೇಜುವೊಂದರಲ್ಲಿ ರಮ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ನೆಚ್ಚಿನ ನಟಿ ರಮ್ಯಾಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ.

    ಮದುವೆ ಏನುಕೇ ಆಗಬೇಕು ಎಂಬುದು ಅರ್ಥವಾಗುತ್ತಿಲ್ಲ. ಅದೇ ನಾವು ಹೇಳುತ್ತಿರೋದು ಮದುವೆ ಆಗಬೇಡಿ. ಅದೇ ನಮಗೆ ಬೇಕಾಗಿರೋದು ಎಂದು ಸಭೆಯಲ್ಲಿದ್ದ ವಿದ್ಯಾರ್ಥಿ ಹೇಳಿದ್ದಾರೆ. ಮದುವೆ ಆಗಬಾರದು ಅಲ್ವಾ ಯೆಸ್ ಆಗಲ್ಲಾ ಎಂದಿದ್ದಾರೆ. ಹ್ಯಾಪಿಯಾಗಿರೋದು ಅಥವಾ ಮದುವೆ ಎರಡರಲ್ಲಿ ಒಂದನ್ನ ಚೂಸ್ ಮಾಡಬೇಕು. ಅದಕ್ಕೆ ನಾನು ಹ್ಯಾಪಿಯಾಗಿರೋದನ್ನ ಚ್ಯೂಸ್ ಮಾಡ್ತೀನಿ ಎಂದಿದ್ದಾರೆ. ನಾನು ಮದುವೆ ಆಗಲ್ಲಾ ಎಂದು ರಮ್ಯಾ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಮದುವೆ ಸುಳ್ಳು ಸುಳ್ಳು: ಸುಮಲತಾ ಅಂಬರೀಶ್ ಸ್ಪಷ್ಟನೆ

    ಒಳ್ಳೆಯ ಸೋಲ್‌ಮೇಟ್ ಸಿಕ್ಕಿದ್ರೆ ಮದುವೆ ಆಗಿ ಎಂದಿದ್ದಾರೆ. ನನಗೆ ಇನ್ನೂ ಸಿಕ್ಕಿಲ್ಲ, ಸಿಕ್ಕಿದ್ರೆ ಮದುವೆ ಆಗುತ್ತೀನಿ ಎಂದು ರಮ್ಯಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನ ಉದ್ಯಮಿ, Zerodha ಸಹ ಸಂಸ್ಥಾಪಕ ನಿಖಿಲ್ ಜೊತೆ ಮಾನುಷಿ ಚಿಲ್ಲರ್ ಡೇಟಿಂಗ್

    ಬೆಂಗಳೂರಿನ ಉದ್ಯಮಿ, Zerodha ಸಹ ಸಂಸ್ಥಾಪಕ ನಿಖಿಲ್ ಜೊತೆ ಮಾನುಷಿ ಚಿಲ್ಲರ್ ಡೇಟಿಂಗ್

    ಟಿ ಮಾನುಷಿ ಚಿಲ್ಲರ್(Manushi Chillar) ಸಿನಿಮಾಗಿಂತ ತಮ್ಮ ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಬಿಟೌನ್‌ನಲ್ಲಿ ಸದ್ಯ ಮಾನುಷಿ ಡೇಟಿಂಗ್ ಸುದ್ದಿಯೇ ಸಖತ್ ಸದ್ದು ಮಾಡುತ್ತಿದೆ. ಉದ್ಯಮಿ, Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ಮಾನುಷಿ ಎಂಗೇಜ್ ಆಗಿದ್ದಾರೆ.

    ಅಕ್ಷಯ್ ಕುಮಾರ್(Akshay Kumar) ನಟನೆಯ `ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಇದೀಗ ಸಾಕಷ್ಟು ಚಿತ್ರಗಳ ಆಫರ್ಸ್ ಅರಸಿ ಬರುತ್ತಿದೆ. ಇದರ ಮಧ್ಯೆ ಮಾನುಷಿ ಇದೀಗ ಬೆಂಗಳೂರಿನ ಉದ್ಯಮಿ(Bengaluru Based Businessman) ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ಈ ಜೋಡಿ, ರಿಷಿಕೇಶಕ್ಕೆ ಒಟ್ಟಿಗೆ ಹೋಗಿದ್ದರು. ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಎಂಗೇಜ್ ಆಗಿರುವ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ:ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

     

    View this post on Instagram

     

    A post shared by Nikhil Kamath (@nikhilkamathcio)

    ಬೆಂಗಳೂರಿನ ಮೂಲದ ಬ್ಯುಸಿನೆಸ್ ಮ್ಯಾನ್ ಆಗಿರುವ ನಿಖಿಲ್ ಕಾಮತ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜೊತೆ ವಿವಾಹವಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು. ಇದೀಗ ನಟಿ ಮಾನುಷಿ ಜೊತೆ ನಿಖಿಲ್ ಕಾಮತ್ ಎಂಗೇಜ್ ಆಗಿದ್ದಾರೆ.

    40 ವರ್ಷ ಮತ್ತು ಅದಕ್ಕಿಂತ ಚಿಕ್ಕ ವಯಸ್ಸಿನ ಹುರುನ್‌ ಸೆಲ್ಫ್‌ಮೇಡ್‌ ಶ್ರೀಮಂತರ ಪಟ್ಟಿ-2022 ಬಿಡುಗಡೆಯಾಗಿದ್ದು ಇದರಲ್ಲಿ 36 ವರ್ಷದ ನಿಖಿಲ್‌ ಅವರು 17,500 ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾನ್ಸರ್‌ ಗೆದ್ದಿದ್ದ 24ರ ಹರೆಯದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ

    ಕ್ಯಾನ್ಸರ್‌ ಗೆದ್ದಿದ್ದ 24ರ ಹರೆಯದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ

    ಬಂಗಾಲಿ ಖ್ಯಾತ ನಟಿ (Bengali Actress) ಐಂದ್ರಿಲಾ  ಶರ್ಮಾ(Aindrila Sharma) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ನಿನ್ನೆ ರಾತ್ರಿ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ನ.20) ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

     

    View this post on Instagram

     

    A post shared by Aindrila Sharma (@aindrila.sharma)


    ಬೆಂಗಾಲಿಯ ಸಾಕಷ್ಟು ಸೀರಿಯಲ್ ಮೂಲಕ ಮೋಡಿ ಮಾಡಿದ್ದ ಐಂದ್ರಿಲಾ ಶರ್ಮಾ ಅವರು ಕೊನೆಯುಸಿರೆಳೆದಿದ್ದಾರೆ. ನಟಿ ಅನಾರೋಗ್ಯದಿಂದ ಬಳಲುತ್ತಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಹೋಗಿದ್ದಾರೆ. ಐಂದ್ರಿಲಾ ಶರ್ಮಾ ಅನಾರೋಗ್ಯದ ಸುದ್ದಿ ಹಬ್ಬುತ್ತಿದ್ದಂತೆ ಬಾಯ್‌ಫ್ರೆಂಡ್ ವದಂತಿಯನ್ನು ತಳ್ಳಿ ಹಾಕಿದ್ದರು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಿಪಿಆರ್ ಮಾಡಲಾಯಿತು. ಆದರೆ ಐಂದ್ರಿಲಾ ದೇಹ ಸ್ಪಂದಿಸಲಿಲ್ಲ. ಹಾಗಾಗಿ ಅವರನ್ನು ವೆಂಟಿಲೇಟರ್ ಬೆಂಬಲಕ್ಕೆ ಇರಿಸಲಾಯಿತು. ಐಂದ್ರಿಲಾ ಸ್ಥಿತಿ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 24ನೇ ವಯಸ್ಸಿಗೆ ಐಂದ್ರಿಲಾ ಬದುಕಿನ ಆಟ ನಿಲ್ಲಿಸಿದ್ದಾರೆ. ಇದನ್ನೂ ಓದಿ:ನಿನ್ನ ಯಾರು ಮದುವೆ ಆಗ್ತಾರೆ ಎಂದು ಗೇಲಿ ಮಾಡಿದವರಿಗೆ ಗೀತಾ ಭಟ್ ಖಡಕ್ ಉತ್ತರ

    ಐಂದ್ರಿಲಾ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬಂಗಾಲಿ ಕಿರುತೆರೆ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ. ಅಂದಹಾಗೆ ನಟಿ ಐಂದ್ರಿಲಾ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದರು. ಇತ್ತೀಚಿಗಷ್ಟೆ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದರು. ಕ್ಯಾನ್ಸರ್ ಗೆದ್ದ ನಟಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿದ್ದಂತೆ ಐಂದ್ರಿಲಾ ಬ್ರೈನ್ ಸ್ಟ್ರೋಕ್‌ಗೆ ಒಳಗಾದರು. ಮತ್ತೆ ಐಂದ್ರಿಲಾ ಆಸ್ಪತ್ರೆಗೆ ದಾಖಲಾದರು. ಎರಡೂ ಕಾಯಿಲೆಯಿಂದ ಸುಧಾರಿಸಿಕೊಂಡಿದ್ದ ಐಂದ್ರಿಲಾ ಇದೀಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾವು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ಪ್ರಿಯಾಂಕಾ ಚೋಪ್ರಾ

    ನಾವು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ಪ್ರಿಯಾಂಕಾ ಚೋಪ್ರಾ

    ಬಾಲಿವುಡ್(Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ಕೊಟ್ಟು ಹೋಗಿದ್ದರು. ಈ ಬೆನ್ನಲ್ಲೇ ಚಿತ್ರರಂಗದ ನಟರ ಬಗ್ಗೆ ಪ್ರಿಯಾಂಕಾ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ.

    ಪ್ರಿಯಾಂಕಾ ಚೋಪ್ರಾ ಸದ್ಯ ಮಗಳ ಪಾಲನೆಯ ಜೊತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಸ್‌ಮಸ್ ಆಚರಣೆಗೂ ಕೂಡ ಈಗಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಪ್ರಿಯಾಂಕಾ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಅಷ್ಟಕ್ಕೂ ಅವರು ಏನೂ ಮಾಡುವುದೇ ಇಲ್ಲಾ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್

    ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಕ್ರೆಡಿಟ್ ಕೊಡಲಾಗುತ್ತದೆ. ನಟರು ಏನನ್ನು ಮಾಡುವುದಿಲ್ಲ. ನಟರು ಬೇರೆಯವರು ಬರೆದ ಕಥೆಯಲ್ಲಿ ನಟನೆ ಮಾಡುತ್ತಾರೆ. ಹಾಗೆಯೇ ಬೇರೆಯವರ ನೃತ್ಯ ಸಂಯೋಜನೆಯ ಹೆಜ್ಜೆಗಳಿಗೆ ನೃತ್ಯ ಮಾಡುತ್ತಾರೆ. ಹೇರೆ ಸೆಟಪ್, ಮೇಕಪ್ ಕೂಡ ಯಾರೋ ಮಾಡುತ್ತಾರೆ. ಹಾಗಾದ್ರೆ ನಾವು ಏನೂ ಮಾಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮದುವೆ: ಬಾಳಸಂಗಾತಿಯನ್ನ ಪರಿಚಯಿಸಿದ ನಟಿ

    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮದುವೆ: ಬಾಳಸಂಗಾತಿಯನ್ನ ಪರಿಚಯಿಸಿದ ನಟಿ

    ಟಾಲಿವುಡ್‌ನ(Tollywood) ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatiya) ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಾವು ಮದುವೆಯಾಗುತ್ತಿರುವ(Wedding) ಬ್ಯುಸಿನೆಸ್‌ಮ್ಯಾನ್ ಎಂಬುದನ್ನ ಕೂಡ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

    ಬಹುಭಾಷಾ ನಟಿ ತಮನ್ನಾ ಸದ್ಯ ತಮ್ಮ ಮದುವೆಯ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ನಟಿ ಹಸಮಣೆ ಏರಲಿದ್ದಾರೆ ಎಂದವರಿಗೆ ತಮನ್ನಾ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಮದುವೆ ವಿಷ್ಯ ಏಲ್ಲೆಡೆ ಹಬ್ಬುತ್ತಿದ್ದಂತೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ತಮನ್ನಾ ಸೀರೆ ವೀಡಿಯೋ ಶೇರ್ ಮಾಡಿದ್ದರು. ಈ ವಿಡಿಯೋ ನೋಡಿ ನೆಟ್ಟಿಗರು ತಮನ್ನಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗಿತ್ತು.

     

    View this post on Instagram

     

    A post shared by Viral Bhayani (@viralbhayani)

    ತಮ್ಮ ವೀಡಿಯೋ ಮೂಲಕ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಒಮ್ಮೆ ಸೀರೆಯುಟ್ಟು ಪೋಸ್ ಕೊಟ್ಟ ತಮನ್ನಾ ಸಡನ್ ಆಗಿ ಬಾಗಿಲು ಮುಚ್ಚಿ, ಗಂಡು ಹುಡುಗನ ವೇಷದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಕಾಸ್ಟೂಮ್ ಬದಲಾವಣೆ ಮಾಡುವ ಮೂಲಕ ಎಲ್ಲಾ ವದಂತಿಗೂ ಬ್ರೇಕ್ ಹಾಕಿದ್ದಾರೆ. ಗಂಡು ಹುಡುಗನ ವೇಷ ಧರಿಸಿ, ಇವರೇ ಉದ್ಯಮಿ ಎಂದು ಹೇಳುವ ಮೂಲಕ ತಮ್ಮದೇ ರೀತಿಯಲ್ಲಿ ತಮನ್ನಾ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ಸೀರಿಯಸ್ ಅಗಿ ಹೇಳಿ ಯಾಕೆ ಈ ರೀತಿ ಮಾಡುತ್ತೀರಾ ಎಂದು ವೈರಲ್ ವಿಡಿಯೋಗೆ ತಮನ್ನಾ ಪ್ರಶ್ನೆ ಮಾಡಿದ್ದಾರೆ. ಹಸಿರು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದು ತಮನ್ನಾನೇ. ಹೌದು ಸೀರೆ ಬದಲಾಯಿಸಿ ಹುಡುಗನಂತೆ ವೇಷ ಧರಿಸಿದ ತಮನ್ನಾ, ವೀಡಿಯೋ ಮೂಲಕ ಮದುವೆಯ ಸುದ್ದಿ ಕೇವಲ ಗಾಳಿ ಮಾತುಗಳು. ಪ್ರತಿಯೊಬ್ಬರು ನನ್ನ ಜೀವನ ಕಥೆಯನ್ನು ಬರೆಯುತ್ತಿದ್ದಾರೆ ನನ್ನ ಬಿಟ್ಟು ಎಂದು ತಮನ್ನಾ ಬರೆದುಕೊಳ್ಳುವ ಮೂಲಕ ಸ್ಪಷನೆ ಕೊಟ್ಟಿದ್ದಾರೆ.

    ನನ್ನ ವೃತ್ತಿ ಜೀವನ ಚೆನ್ನಾಗಿದೆ ಮಾಡಲು ತುಂಬಾ ಕೆಲಸ ಇದೆ. ನನ್ನ ವೃತ್ತಿ ಜೀವನದತ್ತ ಗಮನ ಹರಿಸುತ್ತೇನೆ ಎಂದು ಹೇಳಿ, ಮದುವೆ ಬಗ್ಗೆ ಸದ್ಯ ಯಾವುದೇ ಯೋಚನೆ ಇಲ್ಲಾ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಸೆಮಣೆ ಏರಲು ಸಜ್ಜಾದ `ಸತ್ಯ’ ಧಾರಾವಾಹಿ ಹೀರೋ ಸಾಗರ್

    ಹಸೆಮಣೆ ಏರಲು ಸಜ್ಜಾದ `ಸತ್ಯ’ ಧಾರಾವಾಹಿ ಹೀರೋ ಸಾಗರ್

    ಕಿರುತೆರೆಯ ನಂಬರ್ ಒನ್ `ಸತ್ಯ’ (Sathya Serial) ಸೀರಿಯಲ್ ಹೀರೋ ತಮ್ಮ ಫೀಮೇಲ್ ಫ್ಯಾನ್ಸ್‌ಗೆ ಹಾರ್ಟ್ ಬ್ರೇಕಿಂಗ್ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ʻಸತ್ಯʼ ಧಾರಾವಾಹಿಯ ಅಮುಲ್ ಬೇಬಿಯಾಗಿ ಮಿಂಚ್ತಿರುವ ಸಾಗರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

     

    View this post on Instagram

     

    A post shared by Siri ???? (@sirri_raju)

    ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರಧಾರಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ನಟ ಸಾಗರ್ ಗೌಡ(Sagar Gowda) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಮುಲ್ ಬೇಬಿ ಎಂದೇ ಫೇಮಸ್ ಆಗಿದ್ದ ನಟ ಇದೀಗ ನಟಿ, ಕಮ್ ಮಾಡೆಲ್ ಸಿರಿ ರಾಜು(Siri Raju) ಅವರನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ.ಸದ್ಯದಲ್ಲೇ ಬೆಂಗಳೂರಿನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದು, ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ.

     

    View this post on Instagram

     

    A post shared by Siri ???? (@sirri_raju)

    ಸಾಕಷ್ಟು ಸಮಯದಿಂದ ಸಾಗರ್ ಮತ್ತು ಸಿರಿ ರಾಜು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಸೂಕ್ತ ಸಮಯ ಎಂದೇನಿಸಿ ರೊಮ್ಯಾಂಟಿಕ್ ಶೇರ್ ಮಾಡುವ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿಯನ್ನ ತಿಳಿಸಿದ್ದಾರೆ. ಚೆಂದದ ಜೋಡಿಯ ಫೋಟೋ ನೋಡಿ, ಕಲಾವಿದರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದ್ದಾರೆ. ಇದನ್ನೂ ಓದಿ:ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ

     

    View this post on Instagram

     

    A post shared by Siri ???? (@sirri_raju)

    ಇನ್ನೂ ಸಿರಿ ರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ ಅಭಿನಯದ ಹೊಸ ಚಿತ್ರದಲ್ಲಿ ಸಿರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಗರ್ ಮತ್ತು ಸಿರಿ, ಈ ತಾರಾ ಜೋಡಿ ಹಸೆಮಣೆ ಏರುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]