Tag: actress

  • ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ

    ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ

    ಬಿಗ್ ಬಾಸ್ ಮನೆಯಲ್ಲಿ (Bigg Boss House) 85 ವಾರಗಳನ್ನ ಪೂರೈಸಿ ಇದೀಗ ಮನೆಯಿಂದ ಹೊರಬಂದಿರುವ ಅನುಪಮಾ ಆನಂದ್ ಕುಮಾರ್ ಸಾಕಷ್ಟು ವಿಚಾರವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಸಾಕಷ್ಟು ವರ್ಷಗಳ ಗೆಳೆತನವಿರುವ ನೇಹಾ (Neha Gowda) ಮತ್ತು ಅನುಪಮಾ (Anupama) ಮತ್ತೆ ದೊಡ್ಮನೆಯಲ್ಲಿ ಮುಖಾಮುಖಿ ಆಗಿದ್ದು ಹೇಗಿತ್ತು ಎಂಬುದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಮಾತನಾಡಿದ್ದಾರೆ.

    ಬಿಗ್ ಬಾಸ್ ಸೀಸನ್ 5ರಲ್ಲಿ ಮಿಂಚಿದ್ದ ಅನುಪಮಾ, ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟು ಸದ್ದು ಮಾಡಿದ್ದರು. ನೇಹಾ ಮತ್ತು ಅನುಪಮಾ ಸಾಕಷ್ಟು ವರ್ಷಗಳಿಂದ ಫ್ರೆಂಡ್ಸ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಮತ್ತೆ ಬಿಗ್ ಬಾಸ್‌ನಲ್ಲೂ ಜೊತೆಯಾಗಿದ್ದರ ಬಗ್ಗೆ ಅನುಪಮಾ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್

    ನಾವಿಬ್ಬರು ಫ್ರೆಂಡ್ಸ್ ಅಂತಾ ಎಲ್ಲರಿಗೂ ಮೊದಲೇ ತಿಳಿದಿರುವ ವಿಚಾರ. ಮನೆಯಲ್ಲಿ ಬೇಕಂತಲೇ ಬೆಂಬಲ ಕೊಟ್ಟು ಇರುತ್ತೀವಿ ಎಂಬುದು ಪ್ರೇಕ್ಷಕರ ತಲೆಗೂ ಬರುತ್ತೆ ಆ ಯೋಚನೆ ತೆಗೆದು ಹಾಕಬೇಕು ಅಂತನೇ ನಾವು ಯೋಚನೆ ಮಾಡಿದ್ದೀವಿ. ನಾನು ಮೊದಲೇ ಹೇಳಿದ್ದೇ ನೇಹಾಗೆ, ನಿನ್ನ ಆಟ ನಿನಗೆ, ನೀನು ನನ್ನ ಕಾಂಪಿಟೇಟರ್ ಎಂದು ತಿಳಿಸಿದ್ದೆ. ನನ್ನ ಬೆಸ್ಟ್ ಫ್ರೆಂಡ್ ಬಿಗ್ ಬಾಸ್ ಮನೆಯೊಳಗೂ ಸಿಗುತ್ತಾಳೆ ಅಂತಾ ಖುಷಿಯಾಗಿತ್ತು.

    ನಾನು ಲೋ ಆಗಿದ್ದೀನಿ ಅಂದಾಗ ಹಗ್ ಮಾಡಿ, ಬೆಂಬಲ ಕೊಡುತ್ತಿದ್ದಳು. ಬಿಗ್ ಬಾಸ್‌ನಲ್ಲಿ ನೇಹಾ ನ್ಯೂ ವರ್ಷನ್ ನೋಡಿದೆ, ಸ್ಟ್ರಾಂಗ್ ಆಗಿರುವ ನೇಹಾನಾ ನೋಡಿದೆ ಎಂದು ಅನುಪಮಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಬಿಗ್ ಬಾಸ್ ಮನೆಯಲ್ಲಿ (Bigg Boss House) 85 ವಾರಗಳನ್ನ ಪೂರೈಸಿ ಇದೀಗ ಮನೆಯಿಂದ ಹೊರಬಂದಿರುವ ಅನುಪಮಾ ಆನಂದ್ ಕುಮಾರ್ (Anupama Anandkumar) ಸಾಕಷ್ಟು ವಿಚಾರವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ (Roopesh Shetty) ಎನರ್ಜಿ ಲೆವೆಲ್ ಹೇಗಿತ್ತು. ನಂತರ ಅದೆಷ್ಟರ ಮಟ್ಟಿಗೆ ರೂಪೇಶ್ ಬದಲಾದರು ಎಂಬುದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಮಾತನಾಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಿತ್ರಕ್ಕೆ 4 ವರ್ಷಗಳ ಸಂಭ್ರಮ, ಮೈಲಿಗಲ್ಲು ಸೃಷ್ಟಿಸಿದ ದಿನದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮೆಲುಕು

    ಬಿಗ್ ಬಾಸ್ ಸೀಸನ್ 5ರಲ್ಲಿ(Bigg Boss) ಮಿಂಚಿದ್ದ ಅನುಪಮಾ, ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟು ಸದ್ದು ಮಾಡಿದ್ದರು. ಪ್ರವೀಣರ ಸಾಲಿನಲ್ಲಿ ಅನುಪಮಾ ಗಟ್ಟಿ ಸ್ಪರ್ಧಿಯಾಗಿ ಇತರರಿಗೆ ಸೆಡ್ಡು ಹೊಡೆದರು. ಆದರೆ ಅನುಪಮಾ ಧಿಡೀರ್ ಎಲಿಮಿನೇಷನ್(Elimination) ಅನೇಕರಿಗೆ ಶಾಕ್ ಕೊಟ್ಟಿತ್ತು. ಇದೀಗ ತಮ್ಮ ಬಿಗ್ ಬಾಸ್ ಜರ್ನಿಯ ಜೊತೆಗೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ಬಗ್ಗೆ ಅನುಪಮಾ ರಿಯಾಕ್ಟ್ ಮಾಡಿದ್ದಾರೆ.

    ಸಾನ್ಯ ಎಲಿಮಿನೇಷನ್‌ಗೂ ಮುಂಚೆ ರೂಪೇಶ್, ಯಾರ ಜೊತೆನೂ ಮಿಂಗಲ್ ಆಗುತ್ತಾ ಇರಲಿಲ್ಲ. ಒಟಿಟಿಯಿಂದ ಅವರ ಫ್ರೆಂಡ್‌ಶಿಪ್ ಇದ್ದ ಕಾರಣ, ಇಬ್ಬರಿಗೂ ಕಂಫರ್ಟ್‌ಜೋನ್‌ ಇದೆ. ರೂಪೇಶ್ ಎಲ್ಲಿ ಅಂತಾ ಹುಡುಕಿದರೆ ಅವರು ಯಾವಾಗಲೂ ಸಾನು ಜೊತೆನೇ ಇರೋದು. ಸಾನ್ಯ ಹೊರಗೆ ಹೋದ ಮೇಲೆ ಅದನ್ನ ಒಪ್ಪಿಕೊಳ್ಳೋಕೆ ಅವರಿಗೆ ಆಗಲಿಲ್ಲ. ಅವತ್ತು ಸಾನ್ಯ ಬಗ್ಗೆ ತುಂಬಾ ಎಮೋಷನಲ್ ಆಗಿದ್ದರು. ರೂಪೇಶ್ ಸ್ಥಿತಿ ನೋಡಿದಾಗ, ಅಯ್ಯೋ ಪಾಪ ಅನಿಸೋದು. ಒಂದು ವಾರದ ನಂತರ ಇದೀಗ ರೂಪೇಶ್ ಸ್ಟ್ರಾಂಗ್ ಆಗಿ ಆಡ್ತಿದ್ದಾರೆ.

    ಇನ್ನೂ ರೂಪೇಶ್ ಕ್ಯಾಪ್ಟೆನ್ಸಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಅನುಪಮಾ ಹೇಳಿದ್ದಾರೆ. ಹಾಗೆಯೇ ಬಿಗ್ ಬಾಸ್ ಫಿನಾಲೆಯಲ್ಲಿ ಟಾಪ್ 5 ಸ್ಪರ್ಧಿಗಳಲ್ಲಿ ರೂಪೇಶ್ ಶೆಟ್ಟಿ ಕೂಡ ಒಬ್ಬರಾಗಿರುತ್ತಾರೆ ಎಂದು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗುವಿಗೆ ಎದೆಹಾಲುಣಿಸುವ ಆಲಿಯಾ ಭಟ್ ಫೋಟೋ ವೈರಲ್

    ಮಗುವಿಗೆ ಎದೆಹಾಲುಣಿಸುವ ಆಲಿಯಾ ಭಟ್ ಫೋಟೋ ವೈರಲ್

    ಬಾಲಿವುಡ್ (Bollywood) ಸ್ಟಾರ್ ನಟಿ ಆಲಿಯಾ ಭಟ್ (Alia Bhatt)  ಭಾರಿ ಬೇಡಿಕೆ ಇರುವಾಗಲೇ ರಣ್‌ಬೀರ್ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ. ಮಗಳು ರಾಹಾ (Raha) ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮುದ್ದು ಮಗಳಿಗೆ ಹಾಲುಣಿಸುವ ಆಲಿಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.

    ರಣ್‌ಬೀರ್ (Ranbir Kapoor) ಮತ್ತು ಆಲಿಯಾ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಹಸೆಮಣೆ ಏರಿದ್ದರು. ಈಗ ಮಗಳ ಆಗಮನ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಆಲಿಯಾ ಹಾಲುಣಿಸುವ ಫೋಟೋ ವೈರಲ್ ಆಗಿತ್ತು. ಆಲಿಯಾ ಕೆಂಪು ಸೀರೆಯಲ್ಲಿ ಮಗುವಿಗೆ ಹಾಲುಣಿಸುತ್ತಾ ನಗುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಮುಖ ಸ್ವಲ್ಪ ದುಂಡಾಗಿದೆ.

    ಈಗೀಗ ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ತಮ್ಮ ಸೌಂದರ್ಯ ಕಡಿಮೆಯಾಗುತ್ತದೆ, ವಯಸ್ಸಾಗುತ್ತದೆ ಎಂದು ಸೆಲೆಬ್ರಿಟಿಗಳು ಕಾರಣ ಹೇಳುತ್ತಿರುವ ಈ ದಿನಗಳಲ್ಲಿ ಆಲಿಯಾ ನಾರ್ಮಲ್ ಡೆಲಿವರಿ ಮೂಲಕ ತಾಯ್ತನದ ಸಂಪೂರ್ಣ ಖುಷಿ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್ ಗೆಟ್ ಟು ಗೆದರ್ ಸಂಭ್ರಮದಲ್ಲಿ ಮೆಗಾ ಕಸಿನ್ಸ್

    ಈ ನಡುವೆ ಒಂದಿಷ್ಟು ಜನ, ವೈರಲ್ ಆಗಿರುವ ಆಲಿಯಾ ಫೋಟೋ ನಕಲಿ ಎಂದು ಹೇಳುತ್ತಿದ್ದಾರೆ. ಫೇಕ್ ಫೋಟೋವನ್ನ ಕೆಲ ಕಿಡಿಗೇಡಿಗಳು ಬೇಕೆಂದೇ ಹರಿಬಿಟ್ಟಿದ್ದಾರೆ ಎಂಬ ವದಂತಿ ಕೂಡ ಇದೆ.

    Live Tv
    [brid partner=56869869 player=32851 video=960834 autoplay=true]

  • ಡಿವೋರ್ಸ್‌ಗೆ ಮುಂದಾದ ಬಿಗ್ ಬಾಸ್ ಸ್ಪರ್ಧಿ ರಚಿತಾ ಮಹಾಲಕ್ಷ್ಮಿ

    ಡಿವೋರ್ಸ್‌ಗೆ ಮುಂದಾದ ಬಿಗ್ ಬಾಸ್ ಸ್ಪರ್ಧಿ ರಚಿತಾ ಮಹಾಲಕ್ಷ್ಮಿ

    ನ್ನಡ ಕಿರುತೆರೆಯಲ್ಲಿ ಮನೆಮಾತಾದ ನಟಿ ರಚಿತಾ ಮಹಾಲಕ್ಷ್ಮಿ (Rachitha Mahalakshmi) ತಮಿಳು ಕಿರುತೆರೆಯತ್ತ ಮುಖ ಮಾಡಿದ್ದರು. ಇದೀಗ ತಮಿಳಿನ ಬಿಗ್ ಬಾಸ್‌ಗೆ ಕಾಲಿಟ್ಟ ಬೆನ್ನಲ್ಲೇ ತಮ್ಮ ವೈಯಕ್ತಿಕ ವಿಚಾರವಾಗಿಯೂ ನಟಿ ಸುದ್ದಿಯಾಗ್ತಿದ್ದಾರೆ. ಪತಿ ದಿನೇಶ್ ಗೋಪಾಲಸ್ವಾಮಿ (Dinesh Gopalswamy) ಡಿವೋರ್ಸ್ (Divorce) ಕೊಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.

    ತಮಿಳಿನ ಜನಪ್ರಿಯ ಧಾರಾವಾಹಿಯಾದ `ಪಿರಿವೊಮ್ ಸಂದಿಪ್ಪೊಮ್’ನಲ್ಲಿ ರಚಿತಾ- ದಿನೇಶ್ ಜೋಡಿಯಾಗಿ ನಟಿಸಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿ ಗುರುಹಿರಿಯರ ಒಪ್ಪಿಗೆಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಬಳಿಕ `ನಾಚಿಯಾರ್ ಪುರಮ್’ ಸೀರಿಯಲ್‌ನಲ್ಲೂ ಜೋಡಿಯಾಗಿ ನಟಿಸಿದ್ದರು. ಇದನ್ನೂ ಓದಿ: ಆ ಒಂದು ಮಾತಿನಿಂದ ಮುರಿದು ಬಿತ್ತು ರೂಪೇಶ್ ಶೆಟ್ಟಿ- ರಾಜಣ್ಣ ಫ್ರೆಂಡ್‌ಶಿಪ್

    ಕಮಲ್ ಹಾಸನ್ (Kamal Hasan) ನಿರೂಪಣೆಯ ಬಿಗ್ ಬಾಸ್‌ನಲ್ಲಿ (Bigg Boss) ಕನ್ನಡತಿ ರಚಿತಾ 60 ದಿನಗಳನ್ನ ಪೂರೈಸಿದ್ದಾರೆ. ಇನ್ನೂ 40 ದಿನಗಳ ಆಟ ಬಾಕಿಯಿದೆ. ಈ ಬೆನ್ನಲ್ಲೇ ಡಿವೋರ್ಸ್ ವಿಷ್ಯವಾಗಿ ಸೌಂಡ್ ಮಾಡ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲೇ ಇಬ್ಬರ ನಡುವೆ ಹೊಂದಾಣಿಕೆಯಿರಲಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಡಿವೋರ್ಸ್‌ ಸುದ್ದಿ ನಿಜಾನಾ? ಎಂಬುದಕ್ಕೆ ಬಿಗ್‌ ಬಾಸ್‌ ಶೋ ಬಳಿಕ ರಚಿತಾ ಅವರಿಂದಲೇ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಆತ ನೇರವಾಗಿ ಮಂಚಕ್ಕೆ ಕರೆದ: ಭಯಾನಕ ಸತ್ಯ ಬಿಚ್ಚಿಟ್ಟ ನಟಿ ತೇಜಸ್ವಿನಿ

    ಆತ ನೇರವಾಗಿ ಮಂಚಕ್ಕೆ ಕರೆದ: ಭಯಾನಕ ಸತ್ಯ ಬಿಚ್ಚಿಟ್ಟ ನಟಿ ತೇಜಸ್ವಿನಿ

    ಮೀಟೂ ಪ್ರಕರಣಗಳು ಒಂದೊಂದೆ ಬೆಳಕಿಗೆ ಬರುತ್ತಿವೆ. ಸಿನಿಮಾ ರಂಗದ ಕರಾಳಮುಖವನ್ನು ಬಿಚ್ಚಿಡುತ್ತಾ, ಒಬ್ಬೊಬ್ಬರೇ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳುತ್ತಿದ್ದಾರೆ. ತಮಗೆ ತೊಂದರೆ ಕೊಟ್ಟವರ ಹೆಸರನ್ನು ನೇರವಾಗಿ ಹೇಳದೇ ತಮ್ಮ ಬದುಕಿನಲ್ಲಿ ನಡೆದ ಆ ಕರಾಳ ಸತ್ಯವನ್ನು ಬಯಲು ಮಾಡುವ ಮೂಲಕ ಚಿತ್ರರಂಗದ ಮತ್ತೊಂದು ಮುಖವನ್ನು ಅನಾರವಣಗೊಳಿಸುತ್ತಿದ್ದಾರೆ. ಇವರ ಸಾಲಿಗೆ ಇದೀಗ ಮರಾಠಿ ಸಿನಿಮಾ ರಂಗದ ನಟಿಯು ಕೂಡ ಸೇರಿಕೊಂಡಿದ್ದಾರೆ.

    ಇದು ಚಿತ್ರರಂಗದಲ್ಲಿ ನಡೆದಿರುವ ಘಟನೆ ಅಲ್ಲದೇ ಇದ್ದರೂ, ಸಿನಿಮಾ ರಂಗದಲ್ಲಿ ಇರುವವರಿಗೆ ಆದ ಕಹಿ ಘಟನೆ ಆಗಿದ್ದರಿಂದ ಸಿನಿಮಾ ರಂಗ ಇದನ್ನು ಗಂಭೀರವಾಗಿಯೇ ತಗೆದುಕೊಂಡಿದೆ. ಈ ಘಟನೆ ನಡೆದದ್ದು ಮರಾಠಿ ಸಿನಿಮಾ ರಂಗದಲ್ಲಾಗಿದ್ದು, ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ನಟಿ  ತೇಜಸ್ವಿನಿ ಪಂಡಿತ್ ಹತ್ತು ವರ್ಷಗಳ ನಂತರ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.

    ಆಗ ತಾನೆ ಸಿನಿಮಾ ರಂಗಕ್ಕೆ ಬಂದ ದಿನಗಳವು. ಹಾಗಾಗಿ ನನ್ನ ಬಳಿ ತುಂಬಾ ಹಣ ಇರಲಿಲ್ಲ. ಒಂದು ರೀತಿಯಲ್ಲಿ ಕಡಿಮೆ ಹಣದಲ್ಲೇ ನಾನು ಬದುಕು ನಡೆಸುತ್ತಿದ್ದೆ. ಹಾಗಾಗಿ ನನ್ನ ಬಳಿ ಹಣ ಇಲ್ಲ ಅನ್ನು ಕಾರಣಕ್ಕಾಗಿ ಅಂಥದ್ದೊಂದು ಘಟನೆಗೆ ಸಾಕ್ಷಿಯಾಗಬೇಕಾಯಿತು. ಪುಣೆಯ ಅಪಾರ್ಟ್ಮೆಂಟ್ ನಲ್ಲಿ ನಾನು ವಾಸವಿದ್ದೆ. ಆ ಅಪಾರ್ಟ್ಮೆಂಟ್ ಕಾರ್ಪೋರೇಟ್ ಒಬ್ಬರಿಗೆ ಸೇರಿದ್ದಾಗಿತ್ತು. ಬಾಡಿಗೆ ಪಾವತಿಸಲು ಅವರ ಬಳಿ ಹೋದಾಗ, ನೇರವಾಗಿಯೇ ಅವನು ಮಂಚಕ್ಕೆ ಕರೆದ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ತೇಜಸ್ವೀನಿಯನ್ನು ಅವನು ನೇರವಾಗಿ ಮಂಚಕ್ಕೆ ಬರುತ್ತೀಯಾ ಎಂದು ಕೇಳಿದಾಗ ಶಾಕ್ ಆಗಿದ್ದರಂತೆ. ಕೋಪದಿಂದಲೇ ಅವನಿಗೆ ನೀರಿನ ಲೋಟವನ್ನು ಮುಖಕ್ಕೆ ಎಸೆದು ಬಂದಿದೆ ಎಂದು ಹೇಳಿಕೊಂಡಿದ್ದಾರೆ. ‘ಆಗ ಬೈ ಅರಾಚೆ’ ಸಿನಿಮಾದ ಮೂಲಕ ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ತೇಜಸ್ವೀನಿ ಆನಂತರ ಹಲವು ಚಿತ್ರಗಳನ್ನು ಮಾಡಿದ್ದಾರೆ. ಈ ಘಟನೆಯಿಂದಾಗಿ ಅವರು ಎಚ್ಚರಿಕೆಯಿಂದ ಬದುಕಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಗೆ ಸೌದಿ ಅರೇಬಿಯಾ ಗೌರವ

    ಖ್ಯಾತ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಗೆ ಸೌದಿ ಅರೇಬಿಯಾ ಗೌರವ

    ಶ್ರೀರಸ್ತು ಶುಭಮಸ್ತು’, ‘ರಾಧಾ ರಮಣ’ ಧಾರಾವಾಹಿ ಖ್ಯಾತಿಯ ನಟಿ ಶ್ವೇತಾ ಪ್ರಸಾದ್. ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಮೂಲಕ ಬೆಳ್ಳಿ ಪರದೆಯಲ್ಲೂ ಮಿಂಚಿದ್ದಾರೆ. ‘ರಾಧಾ ರಮಣ’ ಧಾರಾವಾಹಿ ಶ್ವೇತಾ ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿದೆ. ರಾಧಾ ಮಿಸ್ ಎಂದೇ ಚಿರಪರಿಚಿತರಾಗಿರುವ ಶ್ವೇತಾ ಪ್ರಸಾದ್ ಅವರನ್ನು ಇತ್ತೀಚೆಗೆ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಆಹ್ವಾನಿಸಿ ಆತಿಥ್ಯ ನೀಡಿದೆ.

    ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಪ್ರವಾಸೋಧ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಬೇರೆ ಬೇರೆ ದೇಶದ ಸೆಲೆಬ್ರಿಟಿಗಳನ್ನು ತನ್ನ ದೇಶಕ್ಕೆ ಆಹ್ವಾನಿಸುತ್ತಿದೆ. ಆರು ದಿನಗಳ ಕಾಲ ಸಕಲ ಸೌಕರ್ಯದ ಜೊತೆಗೆ ಸೌದಿ ಅರೇಬಿಯಾದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ನಟಿ ಶ್ವೇತಾ ಪ್ರಸಾದ್ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದ ಆಹ್ವಾನಕ್ಕೆ ಪಾತ್ರರಾಗಿದ್ದು, ಆರು ದಿನಗಳ ಸೌದಿ ಅರೇಬಿಯಾ ಪ್ರವಾಸ ಮುಗಿಸಿ ವಾಪಾಸ್ಸಾಗಿದ್ದಾರೆ. ಕರ್ನಾಟಕದಿಂದ ಈ ಆಹ್ವಾನಕ್ಕೆ ಪಾತ್ರರಾದವರಲ್ಲಿ ಶ್ವೇತಾ ಪ್ರಸಾದ್ ಮೊದಲಿಗರಾಗಿದ್ದಾರೆ. ಇದನ್ನೂ ಓದಿ: `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್

    ಈ ಬಗ್ಗೆ ಸಂತಸ ಹಂಚಿಕೊಂಡಿರುವ ಶ್ವೇತಾ ಪ್ರಸಾದ್ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನಿಸಲ್ಪಟ್ಟಿದ್ದು ಬಹಳ ಖುಷಿ ನೀಡಿದೆ. ಕರ್ನಾಟಕದಿಂದ ಈ ಆಹ್ವಾನಕ್ಕೆ ಪಾತ್ರಳಾದವರಲ್ಲಿ ಮೊದಲಿಗಳು ನಾನು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅಲ್ಲಿನ ಪ್ರವಾಸೋಧ್ಯಮ ಪ್ರಾಧಿಕಾರ ಈ ಕೆಲಸ ಮಾಡುತ್ತಿದೆ. ಆರು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದ ದಿನಗಳು ಮರೆಯಲಾಗದು. ಒಂದು ಹೊಸ ಅನುಭವವನ್ನು ಈ ಪ್ರವಾಸ ನೀಡಿದೆ. ಅಲ್ಲಿನ ರಿಯಾದ್, ಅಲುಲಾ, ಜೆಡಾ ಮೂರು ಹೆಸರಾಂತ ನಗರಗಳಿಗೆ ಭೇಟಿ ನೀಡಲಾಯಿತು. ರಿಯಾದ್ ನಲ್ಲಿ ಸೌದಿ ಅರೇಬಿಯಾದ ಅತಿ ಎತ್ತರದ ಕಟ್ಟಡ ಕಿಂಗ್ ಡಂ ಟವರ್  ಗೆ ಭೇಟಿ ನೀಡಲಾಯಿತು. ಇದಲ್ಲದೇ ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡವನ್ನು ಅವರು ನಿರ್ಮಿಸುತ್ತಿದ್ದಾರೆ. ಇದೆಲ್ಲವನ್ನು ಕಳೆದ ಮೂರು ವರ್ಷದಿಂದ ಅವರು ಮಾಡುತ್ತಿದ್ದಾರೆ. ಅವರ ಆಹಾರ, ಆತಿಥ್ಯ ಎಲ್ಲವೂ ತುಂಬಾ ಚೆನ್ನಾಗಿತ್ತು. ಟ್ರಾಫಿಕ್ ನಿಯಂತ್ರಣಕ್ಕೆ ದಿ ಲೈನ್ ಎಂಬ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ಹೆಣ್ಣು ಮಕ್ಕಳು ಬುರ್ಖಾ ಧರಿಸುತ್ತಾರೆ, ಹೊರಗಡೆ ಓಡಾಡುವುದಿಲ್ಲ ಎಂದುಕೊಂಡಿದ್ದೆ ಆದ್ರೆ ಅಲ್ಲಿ ಬುರ್ಖಾವನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳು ಆರಾಮಾಗಿ ಓಡಾಡಿಕೊಂಡು ಇದ್ದಾರೆ. ಜೊತೆಗೆ ಭಾರತೀಯರ ಮೇಲೆ ಅಲ್ಲಿನವರು ವಿಶೇಷವಾದ ಪ್ರೀತಿಯನ್ನು ಹೊಂದಿದ್ದಾರೆ ಎಂದು ಪ್ರವಾಸ ಸಂತಸದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಧಾರಾವಾಹಿಯಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ಶ್ವೇತಾ ಪ್ರಸಾದ್ ಸದ್ಯ ‘ಅರಿಹ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಸೆಮಣೆ ಏರಲು ರೆಡಿಯಾದ `ವಿಕ್ರಾಂತ್ ರೋಣ’ ಸುಂದರಿ ನೀತಾ ಅಶೋಕ್

    ಹಸೆಮಣೆ ಏರಲು ರೆಡಿಯಾದ `ವಿಕ್ರಾಂತ್ ರೋಣ’ ಸುಂದರಿ ನೀತಾ ಅಶೋಕ್

    ಸ್ಯಾಂಡಲ್‌ವುಡ್ (Sandalwood) ನಟಿ ನೀತಾ ಅಶೋಕ್ (Neetha Ashok) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.

    ಖಾಸಗಿ ವಾಹಿನಿಯ `ಯಶೋದೆ’ (Yashode) ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಕರಾವಳಿ ಚೆಲುವೆ ನೀತಾ ಅಶೋಕ್, ತುಳುವಿನ `ಜಬರ್‌ದಸ್ತ್ ಶಂಕರ’ ಸಿನಿಮಾಗೆ ನಾಯಕಿಯಾದ್ರು. ಬಳಿಕ ಸುದೀಪ್ (Sudeep) ನಟನೆಯ `ವಿಕ್ರಾಂತ್ ರೋಣ’ (Vikant Rona) ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ವರ್ಲ್ಡ್ ವೈಡ್ ನಾಯಕಿಯಾಗಿ ರೀಚ್ ಆಗಿದ್ದರು. ಈ ಚಿತ್ರದ ನಂತರ ಮುಂದೆ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಕಾದು ಕೂತಿದ್ದ ಫ್ಯಾನ್ಸ್‌ಗೆ ಮದುವೆಯ ಸುದ್ದಿ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ತಮ್ಮ ಬಹುಕಾಲದ ಗೆಳೆಯ ಸತೀಶ್ (Satish) ಜೊತೆ ಇತ್ತೀಚೆಗೆ ನೀತಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕ್ಲಾಸ್‌ಮೇಟ್ ಟು ಸೋಲ್‌ಮೇಟ್ ಎಂಬ ಪೋಸ್ಟ್ ಹಾಕುವ ಮೂಲಕ ತಾವು ಎಂಗೇಜ್ ಆಗಿರುವ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

     

    View this post on Instagram

     

    A post shared by Neetha Ashok (@neethaashok01)

    ನಿಶ್ಚಿತಾರ್ಥದಲ್ಲಿ (Engagement) ಕುಟುಂಬದವರು, ಆಪ್ತರು ಅಷ್ಟೇ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ. ಹಲವಾರು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ದೆವೋಲೀನಾ ಭಟ್ಟಾಚಾರ್ಜಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ದೆವೋಲೀನಾ ಭಟ್ಟಾಚಾರ್ಜಿ

    ಹಿಂದಿ ಕಿರುತೆರೆಯಲ್ಲಿ (Hindi Television) ಸಾಕಷ್ಟು ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ದೆವೋಲೀನಾ ಭಟ್ಟಾಚಾರ್ಜಿ (Devoleena Bhattacharjee) ಬಹುಕಾಲದ ಗೆಳೆಯ ಶಹನವಾಜ್ ಶೇಖ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

     

    View this post on Instagram

     

    A post shared by Devoleena Bhattacharjee (@devoleena)

    `ಸಾಥ್ ನಿಭಾನಾ ಸಾಥಿಯಾ’ (Sath Nibhana Sathiya) ಜನಪ್ರಿಯ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಿರುತೆರೆಯಲ್ಲಿ ಗಮನ ಸೆಳೆದ ನಟಿ ದೆವೋಲೀನಾ, ಶಹನವಾಜ್ ಜೊತೆ 7 ವರ್ಷಗಳಿಂದ ಸ್ನೇಹಿತರಾಗಿದ್ದರು. ಬಳಿಕ 3 ವರ್ಷಗಳ ಡೇಟಿಂಗ್ ನಂತರ ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.‌ ಇದನ್ನೂ ಓದಿ: ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಿದ್ದಾರಾ ರಾಮ್‌ಚರಣ್ ದಂಪತಿ?

     

    View this post on Instagram

     

    A post shared by Devoleena Bhattacharjee (@devoleena)

    ಶಹನವಾಜ್ ಶೇಖ್ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ದೆವೋಲೀನಾಗೂ ಕೂಡ ಇವರೇ ಫಿಟ್‌ನೆಸ್‌ ಟ್ರೈನರ್ ಆಗಿದ್ದರು. ಈ ವೇಳೆ ಪ್ರೇಮಾಂಕುರವಾಗಿ, ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆ ಆಗಿದ್ದಾರೆ. ನವಜೋಡಿಯ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಐಶ್ವರ್ಯ ರೈ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಕೆ ಮಾಡಿದ ವಿದೇಶಿಗರು ಅಂದರ್

    ಐಶ್ವರ್ಯ ರೈ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಕೆ ಮಾಡಿದ ವಿದೇಶಿಗರು ಅಂದರ್

    ಬಾಲಿವುಡ್ (Bollywood) ನಟಿ ಐಶ್ವರ್ಯ ರೈ (Aishwarya Rai) ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದೆ. ಮದುವೆಯಾಗಿ ಮಕ್ಕಳಾಗಿದ್ದರು ಅವರ ಮೇಲಿರುವ ಕ್ರೇಜ್ ಕಮ್ಮಿಯಾಗಿಲ್ಲ. ಹೀಗಿರುವಾಗ ಐಶ್ವರ್ಯ ರೈ ಅವರ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ (Passport) ಬಳಕೆ ಮಾಡಿದ ಖದೀಮರು ಪೊಲೀಸರ ಕೈ ಸೆರೆಯಾಗಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕ್ಷಮೆ ಕೇಳಿದ ನಟ ಶ್ರೀಮುರಳಿ

    ಇತ್ತೀಚೆಗೆ ಐಶ್ವರ್ಯಾ ರೈ ಹೆಸರಲ್ಲಿ ಕೆಲವರು ಆಧಾರ್ ಕಾರ್ಡ್ (Aadhar Card) ಮಾಡಿಸಿದ್ದು ಸುದ್ದಿಯಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಟಿ ಐಶ್ವರ್ಯಾ ರೈ ಹೆಸರಿನ ನಕಲಿ ಪಾಸ್‌ಪೋರ್ಟ್ ಅನ್ನೇ ಮಾಡಿಸಿದ್ದಾರೆ ಖದೀಮರು. ಅದೂ ಭಾರತದವರಲ್ಲ ವಿದೇಶಿಗರು.

    ಉತ್ತರ ಪ್ರದೇಶದ ಪೊಲೀಸರು ಇಬ್ಬರು ನೈಜೀರಿಯನ್ ಹಾಗು ಒಬ್ಬ ಘಾನಾದ ಪ್ರಜೆಗಳನ್ನು ಬಂಧಿಸಿದ್ದು ಅವರಿಂದ ನಟಿ ಐಶ್ವರ್ಯ ರೈ ಅವರ ನಕಲಿ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಜೊತೆಗೆ ನಾಲ್ಕು ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.

    ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾನಲ್ಲಿ ವಾಸವಿದ್ದ ಈ ಮೂವರು ವಿವಿಧ ಸೈಬರ್ ಸಂಬಂಧಿತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರಿಗೆ ಮೋಸ ಮಾಡಿ ಸುಮಾರು 1.81 ಕೋಟಿ ಹಣ ಲಪಟಾಯಿಸಿದ್ದರು. ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು, ಭಾರಿ ಮೊತ್ತದ ಹಣದ ಜೊತೆಗೆ ಐಶ್ವರ್ಯಾ ರೈ ಹೆಸರಿನಲ್ಲಿರುವ ನಕಲಿ ಪಾಸ್‌ಪೋರ್ಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಣ್ಣನಿಗಾಗಿ ಅಭಿಮಾನಿಗಳಿಗೆ ಕೋರಿಕೆಯಿಟ್ಟ ನಟಿ ಖುಷ್ಬೂ

    ಅಣ್ಣನಿಗಾಗಿ ಅಭಿಮಾನಿಗಳಿಗೆ ಕೋರಿಕೆಯಿಟ್ಟ ನಟಿ ಖುಷ್ಬೂ

    ಹುಭಾಷಾ ನಟಿ ಖುಷ್ಬೂ (Kushboo Sundar) ಇದೀಗ ಸಂಕಷ್ಟದಲ್ಲಿದ್ದಾರೆ. ಆದರೆ ಆರ್ಥಿಕವಾಗಿ ಅಲ್ಲ, ಹಿರಿಯಣ್ಣ (Brother) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತನ್ನ ಅಣ್ಣನ ಆರೋಗ್ಯದಲ್ಲಿ (Health) ಚೇತರಿಕೆ ಕಾಣಲಿ, ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ನಟಿ ಕೋರಿಕೆಯಿಟ್ಟಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ವಿವಾದ: ಪ್ರಶಾಂತ್ ಸಂಬರಗಿ ಎಂಟ್ರಿ

    ಸಿನಿಮಾ ಕಲಾವಿದರು ಕಷ್ಟ ಮತ್ತು ಸುಖ ಎರಡನ್ನ ಅಭಿಮಾನಿಗಳ ಬಳಿ ಹೇಳಿಕೊಳ್ಳುತ್ತಾರೆ. ಇದೀಗ ತಮ್ಮ ಅಭಿಮಾನಿಗಳ ಬಳಿ ವಿಶೇಷ ಕೋರಿಕೆಯೊಂದನ್ನ ಇಟ್ಟಿದ್ದಾರೆ. ತನ್ನ ದೊಡ್ಡ ಅಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದ ಸಲುವಾಗಿ ತಾವು ಪ್ರಾರ್ಥನೆ ಮಾಡಿ ಎಂದು ಫ್ಯಾನ್ಸ್‌ಗೆ ವಿನಂತಿ ಮಾಡಿಕೊಂಡಿದ್ದಾರೆ.

    ವೈಯಕ್ತಿಕ ಬದುಕಿನಲ್ಲಿ ಸಂಕಷ್ಟದಲ್ಲಿದ್ದೇನೆ. ನನ್ನ ದೊಡ್ಡ ಅಣ್ಣ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಣ್ಣನಿಗೆ ನಿಮ್ಮ ಪ್ರಾರ್ಥನೆಯ ಅಗತ್ಯವಿದೆ ಎಂದು ನಟಿ ಖುಷ್ಬೂ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]