Tag: actress

  • 15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ

    15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ

    ನ್ನಡ ಚಿತ್ರರಂಗದ (Kannada Film Industry) ಪ್ರತಿಭಾನ್ವಿತ ನಟಿ ಸುಧಾರಾಣಿ ಸಿನಿಮಾ ಬಿಟ್ಟು ಶ್ವಾನದ ವಿಚಾರವಾಗಿ ಇದೀಗ ಸುದ್ದಿಯಲ್ಲಿದ್ದಾರೆ. ತಮ್ಮ ಏರಿಯಾದ ಶ್ವಾನ ಗಂಗಮ್ಮ ಕಾಣಿಸುತ್ತಿಲ್ಲ ಎಂದು ಬೇಸರ ಹೊರಹಾಕೋದರ ಜೊತೆಗೆ ಬಿಬಿಎಂಪಿ (BBMP) ವಿರುದ್ಧ ನಟಿ ಸುಧಾರಾಣಿ (Actress Sudharani) ಗರಂ ಆಗಿದ್ದಾರೆ.

    `ಆನಂದ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಟಿ ಸುಧಾರಾಣಿ ಬಳಿಕ ಸಾಕಷ್ಟು ಚಿತ್ರಗಳ ಮೂಲಕ ಗಮನ ಸೆಳೆದರು. ಪ್ರಸ್ತುತ ಕಿರುತೆರೆಯಲ್ಲಿ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಇದರ ನಡುವೆ ತಮ್ಮ ಶ್ವಾನದ ಬಗ್ಗೆ ನಟಿ ಬೇಸರಹೊರಹಾಕಿದ್ದಾರೆ. ನಮ್ಮ ಏರಿಯಾದ ಶ್ವಾನ ಗಂಗಮ್ಮ (Pet Gangamma) ಸಿಕ್ಕರೆ ಮಾಹಿತಿ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಅಳಲು ತೋಡಿಕೊಂಡಿದ್ದಾರೆ.

     

    View this post on Instagram

     

    A post shared by Dr.Sudharani (@sudharanigovardhan)

    ಇನ್ನೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ (Malleshwaram) ವಾಸಿಸುತ್ತಿರುವ ನಟಿ ಸುಧಾರಾಣಿ ತಮ್ಮ ಮನೆಯಲ್ಲಿ ಎರಡು ಗೋಲ್ಡನ್ ರೆಟ್ರೀವರ್ ಶ್ವಾನಗಳನ್ನು ಸಾಕಿದ್ದಾರೆ. ಜೊತೆಗೆ ತಮ್ಮ ಏರಿಯಾದ ಶ್ವಾನ ಗಂಗಮ್ಮ ಮೇಲೂ ವಿಶೇಷ ಪ್ರೀತಿತಯಿದ್ದು, ಶ್ವಾನ 15 ದಿನಗಳಿಂದ ಕಾಣೆಯಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬಿಬಿಎಂಪಿಗೆ ದೂರು ಕೊಟ್ಟರೂ ಕೂಡ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮಕ್ಕಾಗಿ ಮತ್ತೆ ಜೊತೆಯಾದ ಬಿಗ್ ಬಾಸ್ ಸ್ಪರ್ಧಿಗಳು

     

    View this post on Instagram

     

    A post shared by Dr.Sudharani (@sudharanigovardhan)

    ನಮಸ್ಕಾರ ನಿಮ್ಮೆಲ್ಲರಿಗೂ, ನಾನು ಹಲವಾರು ಬಾರಿ ಪೋಸ್ಟ್ ಹಾಕಿರುವೆ. ಸುಮಾರು 15 ದಿನಗಳಿಂದ ನಮ್ಮ ಶ್ವಾನ ಗಂಗಮ್ಮ ಕಾಣಿಸುತ್ತಿಲ್ಲ ಅಪ್ಪಿತಪ್ಪಿ ನಿಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ ನನ್ನನ್ನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿ. ದಯವಿಟ್ಟು ಇದು ನನ್ನ ಪರ್ಸನಲ್ ರಿಕ್ವೆಸ್ಟ್ ಏಕೆಂದರೆ ನಾವೆಲ್ಲರೂ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಗಂಗಮ್ಮ ಇಂಡೀ ಜಾತಿ (ಬೀದಿ) ನಾಯಿ ಆಗಿದ್ದು ಕಪ್ಪು- ಬಿಳಿ ಬಣ್ಣದಲ್ಲಿದೆ. ಆಕೆ ಮರುಳಿ ಮನೆಗೆ ಬರಬೇಕು. ಬಿಬಿಎಂಪಿಗೆ ನಾವು ಮನವಿ ಮಾಡಿಕೊಳ್ಳುತ್ತೀವಿ ಆಕೆಯನ್ನು ಹುಡುಕಿ ನಮಗೆ ಮಾಹಿತಿ ನೀಡಿ. ಗಂಗಮ್ಮನ ನಾವು ವಾಪಸ್ ಕಡೆದುಕೊಂಡು ಬರಬೇಕು’ ಎಂದು ಸುಧಾರಾಣಿ ಮನವಿ ಮಾಡಿದ್ದಾರೆ.

    ಮನೆಯಲ್ಲಿ ಸಾಕುತ್ತಿರುವ ಎರಡು ಶ್ವಾನಗಳಿಗೆ ಮಿಕ್ಕಿ ಅಂಡ್ ಮಿನಿ ಎಂದು ಹೆಸರಿಟ್ಟಿದ್ದಾರೆ. ಮನೆಯಲ್ಲಿ ಮಗಳ ಜೊತೆ ಸೇರಿಕೊಂಡು ಮಿಕ್ಕಿ-ಮಿನಿ ಮಾಡುವ ತುಂಟಾಟಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    `ವಜ್ರಕಾಯ’ (Vajrakaya) ಸಿನಿಮಾ ಖ್ಯಾತಿಯ ಶುಭ್ರಾ ಅಯ್ಯಪ್ಪ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ (Vishal Sivappa) ಜೊತೆ ನಟಿ ಶುಭ್ರಾ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ.

    ಶಿವರಾಜ್‌ಕುಮಾರ್‌ಗೆ (Shivarajkumar) ನಾಯಕಿಯಾಗುವ ಮೂಲಕ ಕೂರ್ಗ್ ಬ್ಯೂಟಿ ಶುಭ್ರಾ (Shubra Aiyappa) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದರು. ಇದೀಗ ಸಿನಿಮಾ ಅವಕಾಶಗಳು ಅರಸಿ ಬರುತ್ತಿರುವ ಬೆನ್ನಲ್ಲೇ ಉದ್ಯಮಿ ವಿಶಾಲ್ (Businessmen Vishal) ಜೊತೆ ಮದುವೆಗೆ ಸಿದ್ಧರಾಗಿದ್ದಾರೆ.

    ಸತತ 6 ವರ್ಷಗಳ ಡೇಟಿಂಗ್ (Dating) ನಂತರ ಗುರುಹಿರಿಯರ ಸಮ್ಮುಖದಲ್ಲಿ ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ಶಿವಪ್ಪ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಉದ್ಯಮಿ ವಿಶಾಲ್ ಮೊದಲು ಶುಭ್ರಾಗೆ ಪ್ರಪೋಸ್ ಮಾಡಿದ್ರಂತೆ, ಕೊಂಚ ಸಮಯಾವಕಾಶದ ನಂತರ ವಿಶಾಲ್ ಪ್ರೀತಿಗೆ ನಟಿ ಗ್ರೀನ್ ಸಿಗ್ನಲ್ ಕೊಟ್ಟರು. ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಇದೀಗ ಜನವರಿ 18ರಂದು ಫ್ಯಾಮಿಲಿ ಜೊತೆ ಕೂರ್ಗ್‌ನಲ್ಲಿ ವಿಶಾಲ್ ಮತ್ತು ಶುಭ್ರಾ ಸರಳವಾಗಿ ಮದುವೆಯಾಗುತ್ತಿದ್ದಾರೆ. ಇನ್ನೂ ಜ.20 ಮತ್ತು 21ರಂದು ಮೈಸೂರಿನಲ್ಲಿ ಸಿನಿಮಾ ರಂಗದ ಸ್ನೇಹಿತರಿಗೆ, ಗಣ್ಯರಿಗೆ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೇಕ್‌ ಎಂದವರಿಗೆ ದೀಪಿಕಾ ದಾಸ್‌ ಕೊಟ್ರು ಖಡಕ್‌ ಉತ್ತರ

    ಫೇಕ್‌ ಎಂದವರಿಗೆ ದೀಪಿಕಾ ದಾಸ್‌ ಕೊಟ್ರು ಖಡಕ್‌ ಉತ್ತರ

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನಾರೋಗ್ಯದ ನಂತರ ಫಸ್ಟ್ ಟೈಮ್ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಮಂತಾ

    ಅನಾರೋಗ್ಯದ ನಂತರ ಫಸ್ಟ್ ಟೈಮ್ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಮಂತಾ

    `ಪುಷ್ಪ’ (Pushpa) ಬ್ಯೂಟಿ ಸಮಂತಾ ಮಯೋಸೈಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ವಿದೇಶದಲ್ಲಿ ನಟಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಮತ್ತೆ ಮುಂಬೈಗೆ ವಾಪಾಸ ಆಗಿರುವ ಸಮಂತಾ (Samantha) ಅನಾರೋಗ್ಯದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಸೆರೆಯಾಗಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಕೆಲ ತಿಂಗಳುಗಳಿಂದ ಸಮಂತಾ ಮಯೋಸೈಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಇದರ ಮಧ್ಯೆ ʻಯಶೋದʼ (Yashoda Film) ಸಿನಿಮಾ ಪ್ರಚಾರಕ್ಕೆ ಭಾಗಿಯಾಗಿ ಸಮಂತಾ ವಿದೇಶಕ್ಕೆ ಹಾರಿದ್ದರು. ತಮ್ಮ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ನಟಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ, ನಟಿ ಸಮಂತಾ ಮುಂಬೈ (Mumbai) ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣುಗಳಿಗೆ ಸೆರೆ ಸಿಕ್ಕಿದ್ದಾರೆ. ಇದನ್ನೂ ಓದಿ: ಬಿಟ್ಟು ಬಿಡದೇ ರಿಷಬ್ ಪಂತ್‌ನ ಕಾಡುತ್ತಿರುವ ಊರ್ವಶಿ ರೌಟೇಲಾ: ನೆಟ್ಟಿಗರಿಂದ ನಟಿಗೆ ಕ್ಲಾಸ್

     

    View this post on Instagram

     

    A post shared by yogen shah (@yogenshah_s)

    ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾಗಳನ್ನ ಕಂಡರೂ ನಟಿ ಸಮಂತಾ ಸ್ಮೈಲ್ ಮಾಡಲೇ ಇಲ್ಲ. ಅದ್ಯಾಕೋ ತೀರಾ ಡಲ್ ಆಗಿರುವಂತೆ ನಟಿ ಸಮಂತಾ ಕಂಡುಬಂದರು. ಅಭಿಮಾನಿಗಳು ಸೆಲ್ಫಿ ಕೇಳಿದಾಗಲೂ ಸಮಂತಾ ಸುಮ್ಮನೆ ನಿಂತುಬಿಟ್ಟರು.

    ಇನ್ನೂ ಸಮಂತಾ ನಟನೆಯ `ಶಾಕುಂತಲಂ’ ಸಿನಿಮಾ ತೆರೆಗೆ ಅಬ್ಬರಿಸಲು ರೆಡಿಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ನ್ನಡದ `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ (Dhanya Balakrishna) ಸದ್ದಿಲ್ಲದೇ ತಮಿಳು ನಿರ್ದೇಶಕ ಬಾಲಾಜಿ ಮೋಹನ್ (Balaji Mohan) ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕುರಿತು ಇದೀಗ ಮಾಹಿತಿ ಹೊರಬಿದ್ದಿದೆ.

    ನಟಿ ಧನ್ಯಾ ಮೂಲತಃ ಬೆಂಗಳೂರಿನವರಾಗಿದ್ದು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಈ ವರ್ಷದ ಆರಂಭದಲ್ಲೇ ತಮಿಳಿನ ʻಮಾರಿʼ, ʻಮಾರಿ 2ʼ ಖ್ಯಾತಿಯ ನಿರ್ದೇಶಕ ಬಾಲಾಜಿ ಜೊತೆ ಧನ್ಯಾ ಮದುವೆ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಬಾಲಾಜಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಇನ್ನೂ 2023ರಲ್ಲಿ ಅರುಣಾ (Aruna) ಎಂಬುವವರ ಜೊತೆ ಬಾಲಾಜಿ ಮದುವೆ ಆಗಿತ್ತು. ಆದರೆ ಮದುವೆ ಆಗಿ ಒಂದೇ ವರ್ಷಕ್ಕೆ ಈ ಸಂಬಂಧ ಮುರಿದು ಬಿತ್ತು. ಇಬ್ಬರು ಡಿವೋರ್ಸ್ ಪಡೆದರು. ಜನವರಿ 23ರಂದು ಈ ವರ್ಷ ಧನ್ಯಾ ಜೊತೆ ಬಾಲಾಜಿ ಎರಡನೇ ಮದುವೆ ಆಗಿದ್ದಾರೆ. ಇಲ್ಲಿಯವರೆಗೆ ರಿವೀಲ್ ಆಗದ ಈ ಮದುವೆ ಸುದ್ದಿ ಚರ್ಚೆಗೆ ಬಂದಿರುವುದಕ್ಕೆ ಕಾರಣ ನಟಿ ಕಲ್ಪಿಕಾ ಗಣೇಶ್.

    ಇತ್ತೀಚೆಗೆ ನಟಿ ಕಲ್ಪಿಕಾ (Kalpika Ganesh) ತಮ್ಮ ಯೂಟ್ಯೂಬ್‌ನಲ್ಲಿ ಧನ್ಯಾ ಮತ್ತು ಬಾಲಾಜಿ ಮದುವೆ ಆಗಿರುವ ಬಗ್ಗೆ ಮಾತನಾಡಿದ್ದರು. ಬಳಿಕ ಈ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಯಿತು. ಇದನ್ನ ಗಂಭೀರವಾಗಿ ಪರಿಗಣಿಸಿ, ಬಾಲಾಜಿ ಮೋಹನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ಕಲ್ಪಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಈ ಬಗ್ಗೆ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶ ಸೆಂಥಿಲ್ ಕುಮಾರ್ ರಾಮಮೂರ್ತಿ, ನಿರ್ದೇಶಕ ಬಾಲಾಜಿ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡುವುದನ್ನು ಕಲ್ಪಿಕಾ ನಿಲ್ಲಿಸಬೇಕು ಎಂದು ಆದೇಶ ನೀಡಿದ್ದಾರೆ. ಈ ಜೊತೆಗೆ ಈ ಪ್ರಕರಣದ ತೀರ್ಪನ್ನು 2023ರ ಜನವರಿ 23ಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್‌ನಿಂದ ಬಂತು ಬಿಗ್ ಆಫರ್: ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

    ಬಾಲಿವುಡ್‌ನಿಂದ ಬಂತು ಬಿಗ್ ಆಫರ್: ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

    ಕ್ಕಿ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಬಾಲಿವುಡ್ ಸಿನಿಮಾರಂಗದಲ್ಲಿ ಆಕ್ಟೀವ್ ಆಗ್ತಿದ್ದಾರೆ. `ಗುಡ್ ಬೈ’ (Good Bye) ಸಿನಿಮಾದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಇದೀಗ ಬಂಪರ್ ಅವಕಾಶವೊಂದನ್ನ ಗಿಟ್ಟಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಡೆಯಿಂದ ಸಿನಿಮಾ ಆಫರ್‌ ಅರಸಿ ಬಂದಿದೆ.

    ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾಲಿವುಡ್‌ನಲ್ಲಿ (Bollywood) ಕಮಾಲ್ ಮಾಡಲು ಮುಂದಾಗಿದ್ದಾರೆ. `ಗುಡ್ ಬೈ’ ಸಿನಿಮಾ ಹೀನಾಯ ಸೋಲಿನ ನಂತರವೂ ಕಿರಿಕ್ ಬ್ಯೂಟಿಗೆ ಡಿಮ್ಯಾಂಡ್ ಏನು ಕಮ್ಮಿಯಾಗಿಲ್ಲ. ಸಾಲು ಸಾಲು ಸಿನಿಮಾಗಳ ಗೆಲುವಿನ ಸರದಾರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾಗೆ ರಶ್ಮು ಸೆಲೆಕ್ಟ್ ಆಗಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಹುಲಿವೇಷ: ಕುಣಿದು ಕುಪ್ಪಳಿಸಿದ ರೂಪೇಶ್ ಶೆಟ್ಟಿ

    ಇತ್ತೀಚೆಗಷ್ಟೇ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಗೆ ರಶ್ಮಿಕಾ ಭೇಟಿ ಕೊಟ್ಟಿದ್ದಾರೆ. ಸಿನಿಮಾ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ. ಎಲ್ಲಾ ಓಕೆ ಆದರೆ ಸಿನಿಮಾ ಶುರುವಾಗೋದು ಪಕ್ಕಾ ಅಂತಿದ್ದಾರೆ ಬಾಲಿವುಡ್‌ನ ಸಿನಿಪಂಡಿತರು.

     

    View this post on Instagram

     

    A post shared by Manav Manglani (@manav.manglani)

    ಬಾಲಿವುಡ್‌ನ `ಮಿಷನ್ ಮಜ್ನು’ ಸಿನಿಮಾ ರಿಲೀಸ್ ಬೆನ್ನಲ್ಲೇ ರಶ್ಮಿಕಾ ಹೊಸ ಸಿನಿಮಾದ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿಜಾನ್‌ ಖಾನ್‌ ಭೇಟಿಯಾದ ಬಳಿಕ ನಮ್ಮ ಹುಡುಗಿ ಹಿಜಬ್‌ ಧರಿಸುತ್ತಿದ್ದಳು – ನಟಿಯ ಚಿಕ್ಕಪ್ಪ ಆರೋಪ

    ಶಿಜಾನ್‌ ಖಾನ್‌ ಭೇಟಿಯಾದ ಬಳಿಕ ನಮ್ಮ ಹುಡುಗಿ ಹಿಜಬ್‌ ಧರಿಸುತ್ತಿದ್ದಳು – ನಟಿಯ ಚಿಕ್ಕಪ್ಪ ಆರೋಪ

    ಮುಂಬೈ: ಕಿರುತೆರೆ ನಟಿ ತುನಿಷಾ ಶರ್ಮಾ (Tunisha Sharma) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್‌ ಖಾನ್‌ (Sheezan Khan) ವಿರುದ್ಧ ʼಲವ್‌ ಜಿಹಾದ್‌ʼ (Love Jihad) ಆರೋಪಗಳು ಕೇಳಿ ಬರುತ್ತಿವೆ. ನಟಿ ತುನಿಷಾ ಅವರ ಚಿಕ್ಕಪ್ಪ ಪವನ್‌ ಶರ್ಮಾ ಅವರು ಶಿಜಾನ್‌ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

    ನಮ್ಮ ಮಗಳು ತುನಿಷಾ ಶರ್ಮಾ, ಶಿಜಾನ್‌ ಖಾನ್‌ ಭೇಟಿಯಾದ ಬಳಿಕ ಆಕೆ ನಡೆ, ಉಡುಗೆ-ತೊಡುಗೆಯಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ತುನಿಷಾ ಹಿಜಬ್‌ (Hijab) ಕೂಡ ಧರಿಸುತ್ತಿದ್ದಳು. ಆಕೆ ಲವ್‌ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಪವನ್‌ ಶರ್ಮಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ‘ಲವ್ ಜಿಹಾದ್’ ಗೆ ಹೆದರಿಕೊಂಡು ತುನಿಷಾ ಶರ್ಮಾಳಿಂದ ದೂರವಾಗಿದ್ದ ಬಾಯ್ ಫ್ರೆಂಡ್

    ಶಿಜಾನ್‌ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಇಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸಾಧ್ಯವಿರುವ ಎಲ್ಲ ಕೋನಗಳಿಂದ ಅವರು ತುನಿಷಾ ಸಾವಿನ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    ತುನಿಷಾ ಸಾವನ್ನಪ್ಪಿದ ದಿನ ಶಿಜಾನ್ ತನ್ನ‌ ಮತ್ತೊಬ್ಬ ಗೆಳತಿಯೊಂದಿಗೆ ಒಂದರಿಂದ ಒಂದೂವರೆ ಗಂಟೆಗಳ ಕಾಲ ಚಾಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಶಿಜಾನ್‌ ವಿಚಾರಣೆ ವೇಳೆ ಸಹಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಗರ್ಭಿಣಿ ಆಗಿದ್ದು ನಿಜ: ಗೆಳತಿ ನೀಡಿದ ಶಾಕಿಂಗ್ ನ್ಯೂಸ್

    ಕೆಲ ದಿನಗಳ ಹಿಂದಷ್ಟೇ ಕಿರುತೆರೆ ನಟಿ ತುನಿಷಾ ಶರ್ಮಾ ಶೂಟಿಂಗ್‌ ಸೆಟ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್‌ ಖಾನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ನಟನ ವಿರುದ್ಧ ತುನಿಷಾ ಅವರ ಪೋಷಕರು ಲವ್‌ ಜಿಹಾದ್‌ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಅನ್ನೋದು ಒಂದು ಜವಾಬ್ದಾರಿ: ಎರಡನೇ ಮದುವೆ ಬಗ್ಗೆ ನಟಿ ಅಪೂರ್ವ ಮಾತು

    ಮದುವೆ ಅನ್ನೋದು ಒಂದು ಜವಾಬ್ದಾರಿ: ಎರಡನೇ ಮದುವೆ ಬಗ್ಗೆ ನಟಿ ಅಪೂರ್ವ ಮಾತು

    ಕಿರುತೆರೆ `ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾಗಿರುವ ಪುಷ್ಪ ಪಾತ್ರಧಾರಿ ಅಪೂರ್ವ ಅವರು ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ಅಮ್ಮ ಮತ್ತು ಮಗಳ ರೌಂಡ್ ನಡೆಯುತ್ತಿದ್ದು, ಅಪೂರ್ವ (Apoorva) ಅವರಿಗೆ ಮಗಳ ಬಿಗ್ ಸರ್ಪ್ರೈಸ್ (Surprise) ಕೊಟ್ಟಿದ್ದಾರೆ. ಮಗಳ ಗಿಫ್ಟ್ ನೋಡಿ ಅಪೂರ್ವ ಖುಷಿಯಾಗಿದ್ದಾರೆ.

    ಸೂಪರ್ ಕ್ವೀನ್ಸ್ (Super Queens) ಮೂಲಕ ತಮ್ಮ ಜೀವನದ ತೆರೆಹಿಂದಿನ ಕಥೆಯನ್ನ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಹಾಗೆಯೇ ನಟಿ ಅಪೂರ್ವ ಅವರ ಜೀವನದ ಕಥೆ ಪ್ರೇಕ್ಷಕರನ್ನು ಕೂಡ ಭಾವುಕರನ್ನಾಗಿಸಿದೆ. ಇನ್ನೂ ಅಮ್ಮ -ಮಗಳ ರೌಂಡ್‌ನಲ್ಲಿ ಮಗಳು, ಕೆಲವು ಪ್ರಶ್ನೆಗಳನ್ನ ತಾಯಿ ಅಪೂರ್ವಗೆ ಕೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ನನ್ನ ಮೊದಲ ಪ್ರಶ್ನೆ ಇದು. ಯಾವತ್ತಾದ್ದರೂ ಅನಿಸಿದ್ಯಾ ನನ್ನ ಮಗಳು ಇಲ್ಲದಿದ್ದರೆ ನಾನು ಖುಷಿಯಾಗಿರುತ್ತಿದ್ದೆ ಅಥವಾ ಗಂಡು ಮಗು ಆಗಿದ್ದರೆ ಇನ್ನೂ ಖುಷಿಯಾಗಿರುತ್ತಿದ್ದೆ ಕಷ್ಟ ಪಡುತ್ತಿರಲಿಲ್ಲ ಅನಿಸಿದ್ಯಾ ಎಮದು. ಆಗ 100ರಲ್ಲಿ 1% ನನಗೆ ಈ ರೀತಿ ಅನಿಸಿಲ್ಲ. ಎಷ್ಟೋ ದೇವರಲ್ಲಿ ಹರಿಕೆ ಕಟ್ಟಿಕೊಂಡು ಮೊದಲು ಹೆಣ್ಣು ಮಗು ಆಗಬೇಕು ಎಂದು ಹುಟ್ಟಿರುವ ಮಗು ನೀನು ಎಂದು ಅಪೂರ್ವ ಉತ್ತರಿಸಿದ್ದಾರೆ.

    ಮತ್ತೆ ಮದುವೆ ಆಗಬೇಕು ಎಂದು ಯೋಚನೆ ಕೂಡ ಮಾಡಿಲ್ಲ ಯಾಕೆ ಎಂದು ಅಮ್ಮನಿಗೆ ಕೇಳಿದ್ದಾರೆ. ಮದುವೆ ಅಂದ್ರೆ ಏನು ಅದರ ಮಹತ್ವ ಎಲ್ಲ ಅರ್ಥ ಆಗೋಕು ಮುಂಚೆ ಮದುವೆ ಆಗಿದ್ದು ಎಷ್ಟೊಂದು ಸಮಸ್ಯೆ ನೋಡ್ಬಿಟ್ಟು ಮದುವೆ ಆಗಬೇಕು ಅನಿಸಲಿಲ್ಲ. ಕೈಯಲ್ಲಿ ಒಂದು ಹೆಣ್ಣು ಮಗುವಿಗೆ ಬರುವ ಜನರ ಮೆಂಟಾಲಿಟಿ ಹೇಗೆ ಇರುತ್ತೆ. ಏನೇ ಆಗಲಿ ಫಸ್ಟ್ ತಪ್ಪು ಎಂದು ಹೇಳುವುದು ಹೆಣ್ಣು ಮಕ್ಕಳ ಮೇಲೆ ಹೀಗಾಗಿ ಯೋಚನೆ ಮಾಡಿಲ್ಲ ಮಾಡುವ ಯೋಚನೆ ಮಾಡಲ್ಲ. ಮದುವೆ ಅನ್ನೋದು ಒಂದು ಜವಾಬ್ದಾರಿ ರೀತಿ ಬಂದವರನ್ನು ನಾವು ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ನಟಿ ಅಪೂರ್ವ ಮಾತನಾಡಿದ್ದಾರೆ.

    ಇನ್ನೂ ಈ ವೇಳೆ ಅಮ್ಮನಿಗೆ ಚಿನ್ನದ ಮಾಂಗಲ್ಯ ಗಿಫ್ಟ್ ಮಾಡಿದ್ದಾರೆ. ತನಗೆ ಕಾರು ಖರಿದೀಸಲು ಎಂದು ಇಟ್ಟ ಹಣದಲ್ಲಿ ತಾಯಿಗೆ ಚಿನ್ನದ ಮಾಂಗಲ್ಯ ಕಾಣಿಕೆಯಾಗಿ ನೀಡಿದ್ದಾರೆ. ಮಗಳ ಪ್ರೀತಿಗೆ ನಟಿ ಅಪೂರ್ವ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಮೂಲ್ಯ ಅವಳಿ ಮಕ್ಕಳಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ

    ಅಮೂಲ್ಯ ಅವಳಿ ಮಕ್ಕಳಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ

    ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಇತ್ತೀಚೆಗಷ್ಟೇ ತಮ್ಮ ಅವಳಿ ಮಕ್ಕಳ ನಾಮಕರಣ ಮಾಡಿದ್ದರು. ಇದೀಗ ನಟಿ ಅಮೂಲ್ಯ ಮನೆಗೆ ಸಾಲು ಮರದ ತಿಮ್ಮಕ್ಕ (Salu Marada Thimmakka) ಭೇಟಿ ನೀಡಿ, ಅಮೂಲ್ಯ ಮಕ್ಕಳಿಗೆ ಶುಭಹಾರೈಸಿದ್ದಾರೆ.

    ನಟಿ ಅಮೂಲ್ಯ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು. ಫೇಮ್ ಇರೋವಾಗಲೇ ಜಗದೀಶ್ (Jagadeesh) ಜೊತೆ ಹಸೆಮಣೆ ಏರಿದ್ದರು. ನಟನೆಯಿಂದ ದೂರ ಸರಿದು, ಸಂಸಾರ, ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳಿಗೆ ಅದ್ದೂರಿಯಾಗಿ ನಾಮಕರಣ ಮಾಡಿದ್ದರು. ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ.

     

    View this post on Instagram

     

    A post shared by Jagdish R Chandra (@jagdishrchandra)

    ಇದೀಗ ನಟಿ ಅಮೂಲ್ಯ ಸ್ವಗೃಹಕ್ಕೆ ವೃಕ್ಷ ಮಾತೆ ಸಾಲು ಮರ ತಿಮ್ಮಕ್ಕ ಭೇಟಿ ನೀಡಿದ್ದಾರೆ. ಅಮೂಲ್ಯ ಮಕ್ಕಳಿಗೆ ಶುಭಹಾರೈಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತೆ ತಿಮ್ಮಕ್ಕನವರು ಹಾರೈಸಿದ ಕ್ಷಣದ ತುಣುಕುಗಳನ್ನ ಅಮೂಲ್ಯ ಪತಿ ಜಗದೀಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು ಫೈನಲಿಸ್ಟ್ ಹೆಸರು ಘೋಷಿಸಿದ ಕಿಚ್ಚ ಸುದೀಪ್

    ಅವರ ಆಗಮನ ಖುಷಿ ಕೊಟ್ಟಿದೆ ಎಂದು ಕೂಡ ಜಗದೀಶ್ ಬರೆದುಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಶೂಟಿಂಗ್ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ – ಸಹ ನಟ ಶೀಜಾನ್ ಬಂಧನ

    ಶೂಟಿಂಗ್ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ – ಸಹ ನಟ ಶೀಜಾನ್ ಬಂಧನ

    ಮುಂಬೈ: ಟಿವಿ ಕಾರ್ಯಕ್ರಮದ ಸೆಟ್‌ನಲ್ಲಿ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ (Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವ ಆರೋಪದ ಮೇಲೆ ಸಹ ನಟನನ್ನು ಬಂಧಿಸಲಾಗಿದೆ.

    ಮಹಾರಾಷ್ಟ್ರದ (Maharashtra) ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಶನಿವಾರ ಶೂಟಿಂಗ್ ಸೆಟ್‌ನಲ್ಲಿಯೇ (Shooting Set) ಕಿರುತೆರೆ ನಟಿ ತುನೀಶಾ ಶರ್ಮಾ (Tunisha Sharma)(20) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ (Sheezan Mohammed Khan) ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಈಗ ಬಂಧಿಸಲಾಗಿದೆ.

    ತುನೀಶಾ ತಾಯಿ ಶೀಜಾನ್ ವಿರುದ್ಧ ಈ ಬಗ್ಗೆ ದೂರು ನೀಡಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಸೋಮವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆತ್ಮಹತ್ಯೆಗೆ ಶರಣಾದ ನಟಿಯ ಮರಣೋತ್ತರ ಪರೀಕ್ಷೆ ಇಂದು ಮುಂಜಾನೆ ನೈಗಾಂವ್‌ನ ಜೆಜೆ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

    ನಟಿ ಶೂಟಿಂಗ್ ಸೆಟ್‌ನಲ್ಲಿ ಚಹಾದ ವಿರಾಮದ ಬಳಿಕ ವಾಶ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತುನೀಶಾ ಶರ್ಮಾ ಶವ ಪತ್ತೆಯಾಗಿತ್ತು. ಆಕೆ ಎಷ್ಟು ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆ ಸೆಟ್‌ನಲ್ಲಿದ್ದವರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಬಳಿಕ ಅವರನ್ನು ಮಧ್ಯರಾತ್ರಿ 1:30ರ ವೇಳೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಇದನ್ನೂ ಓದಿ: ಸೆಟ್‌ನಲ್ಲೇ ಸೀರಿಯಲ್ ಖ್ಯಾತ ನಟಿ ಆತ್ಮಹತ್ಯೆ

    ತುನಿಶಾ ಶರ್ಮಾ ಅವರ ಸಹೋದ್ಯೋಗಿಗಳು ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸಿದ್ದಾರೆ. ಆದರೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದಿದ್ದಾರೆ. ಆಕೆಯ ಸಾವನ್ನು ಕೊಲೆ ಹಾಗೂ ಆತ್ಮಹತ್ಯೆ ಎರಡೂ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತುನಿಶಾ ಶರ್ಮಾ ‘ಭಾರತ್ ಕಾ ವೀರ್ ಪುತ್ರ – ಮಹಾರಾಣಾ ಪ್ರತಾಪ್’ ಧಾರವಾಹಿಯಲ್ಲಿ ಬಾಲ ನಟಿಯಾಗಿ ಚಂದ್ ಕನ್ವರ್ ಪಾತ್ರವನ್ನು ನಿರ್ವಹಿಸುವ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಅಂದಿನಿಂದ ಅವರು ಹಲವು ಶೋಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಇಷ್ಕ್ ಸುಭಾನ್ ಅಲ್ಲಾ’, ‘ಗಬ್ಬರ್ ಪೂಚ್‌ವಾಲಾ’, ಶೇರ್-ಎ-ಪಂಜಾಬ್: ಮಹಾರಾಜ ರಂಜಿತ್ ಸಿಂಗ್’ ಹಾಗೂ ‘ಚಕ್ರವರ್ತಿ ಅಶೋಕ ಸಾಮ್ರಾಟ್’ ಶೋಗಳಲ್ಲೂ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್: ಅಮೂಲ್ಯ, ಅರುಣ್ ಸಾಗರ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    Live Tv
    [brid partner=56869869 player=32851 video=960834 autoplay=true]