Tag: actress

  • ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ಪ್ರಣಿತಾ ಸುಭಾಷ್

    ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ಪ್ರಣಿತಾ ಸುಭಾಷ್

    ಸ್ಯಾಂಡಲ್‌ವುಡ್ (Sandalwood) ನಟಿ ಪ್ರಣಿತಾ ಸುಭಾಷ್ (Pranitha Subhash) ಸದ್ಯ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ನಟಿ ಇತ್ತೀಚಿಗೆ ಚೆಂದದ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್ ನೆಟ್ಟಿಗರ ಗಮನ ಸೆಳೆದಿದೆ.

    ಕನ್ನಡ, ಹಿಂದಿ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ನಟಿ ಪ್ರಣಿತಾ ಮದುವೆ, ಸಂಸಾರ, ಮಗಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇವೆಂಟ್‌ಗಳಲ್ಲಿ ಗೆಸ್ಟ್ ಆಗಿ ಹೋಗಿ ಬರುತ್ತಾರೆ. ಹೊಸ ಬ್ರ್ಯಾಂಡ್‌ಗಳನ್ನ ಪ್ರಮೋಟ್ ಮಾಡುತ್ತಾರೆ. ಸದ್ಯ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದರು ಕೂಡ ಒಂದಲ್ಲಾ ಒಂದು ಕೆಲಸದ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕ್ಕೆ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿ

     

    View this post on Instagram

     

    A post shared by Pranita Subhash (@pranitha.insta)

    ಇನ್ನೂ ಮದುವೆಯಾಗಿ ಮಗುವಾಗಿದ್ದರು ಕೂಡ ಪ್ರಣಿತಾ ಬಳುಕುವ ಬಳ್ಳಿಯಂತೆ ಆಗಿದ್ದಾರೆ. ಇತ್ತೀಚಗೆ ಹಸಿರು ಬಣ್ಣದ ಸೀರೆಗೆ ಪಿಂಕ್ ಕಲರ್ ಸ್ಲೀವ್‌ಲೆಸ್ ರವಿಕೆ ತೊಟ್ಟು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಅಂದ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಸಂತೂರ್ ಮಮ್ಮಿ ಎಂದು ಕಾಮೆಂಟ್ ಮಾಡ್ತಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಪ್ರಣಿತಾ ಸುಭಾಷ್ ಮದುವೆಗೂ ಮುನ್ನ `ರಾಮನ ಅವತಾರ’ (Ramana Avatara) ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 2023ರಲ್ಲಿ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

    ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್‌ನಲ್ಲಿ (Hollywood) ಬ್ಯುಸಿಯಾಗಿದ್ದಾರೆ. ಜೊತೆಗೆ ಮುದ್ದು ಮಗಳ ಆರೈಕೆಯತ್ತ ಕೂಡ ಗಮನ ಕೊಡುತ್ತಿದ್ದಾರೆ. ಇನ್ನೂ ಪ್ರಿಯಾಂಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿರುವುದಕ್ಕೆ ಸಾಕಷ್ಟು ಬಾರಿ ಪರ ವಿರೋಧ ಚರ್ಚೆಯಾಗುತ್ತಿತ್ತು. ಈಗ ಈ ಬಗ್ಗೆ ಸ್ವತಃ ನಟಿಯೇ ಮೌನ ಮುರಿದಿದ್ದಾರೆ. ಇದನ್ನೂ ಓದಿ: ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಬರಮಾಡಿಕೊಂಡಿದ್ದ ನಟಿ ಪ್ರಿಯಾಂಕ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದ್ದರು. ಹಾಲಿವುಡ್‌ನಲ್ಲಿ ನಟಿಗೆ ಭಾರಿ ಬೇಡಿಕೆಯಿದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಪ್ರಿಯಾಂಕಾಗೆ ವಯಸ್ಸಾಗಿದೆ ಎಂದು ಹಲವು ಟೀಕೆಗಳನ್ನು ನಟಿಯ ವಿರುದ್ಧ ಮಾಡಲಾಗಿತ್ತು. ಈಗ ಈ ಎಲ್ಲಾ ವದಂತಿಗಳಿಗೂ ಪ್ರಿಯಾಂಕಾ ಚೋಪ್ರಾ ಉತ್ತರ ನೀಡಿದ್ದಾರೆ.

    ಈ ಮಗು ನಿಗದಿತ ಸಮಯಕ್ಕಿಂತ ಮೂರು ತಿಂಗಳು ಮೊದಲೇ ಜನಿಸಿತ್ತು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಇದನ್ನು ನಟಿ ಒಪ್ಪಿಕೊಂಡಿದ್ದಾರೆ. ಮಾಲ್ತಿ ಜನಿಸುವಾಗ ನಾನು ಆಪರೇಷನ್ ರೂಮ್‌ನಲ್ಲಿದ್ದೆ. ಅವಳು ತುಂಬಾನೇ ಚಿಕ್ಕವಳಾಗಿದ್ದಳು. ನನ್ನ ಕೈಗಿಂತ ಚಿಕ್ಕವಳಿದ್ದಳು. ಮನೆಗೆ ಕರೆತರುವುದಕ್ಕೂ ಮುನ್ನ ಅವಳನ್ನು ನಾವು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದೇವೆ. ನಿತ್ಯ ನಾವು ಆಸ್ಪತ್ರೆಗೆ ತೆರಳುತ್ತಿದ್ದೆವು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

    ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ನಟಿ ಉತ್ತರಿಸಿದ್ದಾರೆ. ನನಗೆ ನನ್ನದೇ ಆದ ಆರೋಗ್ಯ ಸಮಸ್ಯೆಗಳು (Health Issue) ಇದೆ. ಈ ಮೂಲಕ ಜನರ ಟೀಕೆಗಳಿಗೆ ನಟಿ ತೆರೆ ಎಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಮಿಂಚಿದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

    ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಮಿಂಚಿದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

    ಣ್ಣು ಹೊಡೆದು ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪ್ರಿಯಾ ವಾರಿಯರ್ ಸದಾ ಸಿನಿಮಾ ಮತ್ತು ಹಸಿಬಿಸಿ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ಈಗ ಮಲೆಯಾಳಿ ಸುಂದರಿ ಪ್ರಿಯಾ ತಮ್ಮ ಹೊಸ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ನಯಾ ಲುಕ್‌ನಲ್ಲಿ ಮಿಂಚಿದ್ದಾರೆ.

    `ಒರು ಅಡಾರ್ ಲವ್’ ಸಿನಿಮಾ ಮೂಲಕ ನಟಿ ಚಿತ್ರರಂಗಕ್ಕೆ ಪರಿಚಯವಾದರು. ಸಿನಿಮಾ ಹಿಟ್ ಆಗದೇ ಇದ್ದರು ಪ್ರಿಯಾ ಫೇಮ್ ಮಾತ್ರ ಕಮ್ಮಿಯಾಗಲಿಲ್ಲ. ಈ ಚಿತ್ರದಲ್ಲಿ ಕಣ್ಣು ಹೊಡೆದು ಬೆಳಗಾಗೋದರ ಒಳಗೆ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಪಡೆದು ಸ್ಟಾರ್ ಆಗಿದ್ದರು. ಇದನ್ನೂ ಓದಿ:ʻಸೂರರೈ ಪೊಟ್ರುʼ ನಾಯಕಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಅನುಚಿತ ವರ್ತನೆ

    ಸದ್ಯ ಬಿಳಿ ಬಣ್ಣದ ಸೀರೆ ಗೋಲ್ಡನ್ ಬಾರ್ಡರ್ ಡಿಸೈನ್‌ಯಿರುವ ಸೀರೆಯಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ಮಿಂಚಿದ್ದಾರೆ. ಅಪ್ಸರೆಯಂತೆ ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಈ ಫೋಟೋಶೂಟ್ ನೋಡಿದ ನೆಟ್ಟಿಗರೆಲ್ಲಾ ಜ್ಯೂನಿಯರ್ ಸಮಂತಾ ನೀವು, ನಟಿ ಸಮಂತಾರಂತೆ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ʻಸೂರರೈ ಪೊಟ್ರುʼ ನಾಯಕಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಅನುಚಿತ ವರ್ತನೆ

    ʻಸೂರರೈ ಪೊಟ್ರುʼ ನಾಯಕಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಅನುಚಿತ ವರ್ತನೆ

    `ಸೂರರೈ ಪೊಟ್ರು’ (Soorarai Potru) ಸಿನಿಮಾದ ನಟಿ ಅಪರ್ಣಾ ಬಾಲಮುರಳಿ (Aparna Balamurali) ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹಲವು ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವ ನಟಿ ಅಪರ್ಣಾ ಇತ್ತೀಚೆಗೆ ಕೇರಳದ ಕಾಲೇಜಿಗೆ ಭೇಟಿ ನೀಡಿದ್ದರು. ಕಾಲೇಜು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಅಪರ್ಣಾ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ʻತಂಕಂʼ ಸಿನಿಮಾ ಪ್ರಚಾರ ಕಾರ್ಯಕ್ಕಾಗಿ ಕೇರಳದ (Kerala) ಕಾಲೇಜಿಗೆ ಅಪರ್ಣಾ ಮತ್ತು ತಂಡ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಕುಳಿತಿದ್ದ ಅಪರ್ಣಾ ಕಡೆ ವಿದ್ಯಾರ್ಥಿಯೊಬ್ಬರು (Student) ಓಡಿ ಬಂದ. ಬಂದವನೇ ಅಪರ್ಣಾ ಕೈ ಹಿಡಿದು ಮಾತನಾಡಿದ, ಬಳಿಕ ಸೆಲ್ಫಿ ಕೇಳಿದ. ಅಪರ್ಣಾ ಕೂಡ ಸೆಲ್ಫಿ ಕೊಡಲು ಎದ್ದು ನಿಂತರು. ಆಗ ವಿದ್ಯಾರ್ಥಿ ಅಪರ್ಣಾ ಹೆಗಲ ಮೇಲೆ ಕೈ ಹಾಕಿದ. ಅಪರ್ಣಾ ಆತನಿಂದ ತಪ್ಪಿಸಿಕೊಂಡು ದೂರ ಹೋದರು. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    ಕಾಲೇಜು ವಿದ್ಯಾರ್ಥಿಯ ಕೆಟ್ಟ ವರ್ತನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯಿಂದ ಅಪರ್ಣಾ ತುಂಬಾ ಹಿಂಸೆ ಅನುಭವಿಸಿದ್ದಾರೆ.

    ಈ ಘಟನೆಯ ಬಳಿಕ ಕೆಲವು ವಿದ್ಯಾರ್ಥಿಗಳು ನಟಿಯ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಬಳಿಕ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿ ಕೂಡ ಕ್ಷಮೆ ಕೇಳಿದ್ದಾರೆ. ನಾನು ನಿಮ್ಮ ದೊಡ್ಡ ಅಭಿಮಾನಿ, ನಿಮ್ಮ ಜೊತೆ ಹೀಗೆ ವರ್ತಿಸುವ ಯೋಚನೆ ನನ್ನಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಘಟನೆ ನಡೆದ ವೇಳೆ `ತಂಕಂ’ ಚಿತ್ರತಂಡ ಒಂದು ಮಾತನಾಡದೇ ಸೈಲೆಂಟ್ ಆಗಿದ್ದಕ್ಕೆ ತಂಡದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೋಷಿಯಲ್ ಮೀಡಿಯಾದಿಂದ ಮಗನನ್ನು ದೂರ ಇರಿಸಲು ಕಾರಣ ತಿಳಿಸಿದ ಸೋನಂ ಕಪೂರ್

    ಸೋಷಿಯಲ್ ಮೀಡಿಯಾದಿಂದ ಮಗನನ್ನು ದೂರ ಇರಿಸಲು ಕಾರಣ ತಿಳಿಸಿದ ಸೋನಂ ಕಪೂರ್

    ಬಾಲಿವುಡ್ (Bollywood) ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ (Sonam Kapoor) ಸದ್ಯ ಮದರ್‌ಹುಡ್ (Motherhood) ಎಂಜಾಯ್ ಮಾಡ್ತಿದ್ದಾರೆ. ಇನ್ನೂ ಸಿನಿಮಾಗೆ ಕಮ್‌ಬ್ಯಾಕ್ ಆಗುವ ಬಗ್ಗೆ ಮತ್ತು ಮಗನ ಮುಖ ಇನ್ನೂ ಯಾಕೆ ರಿವೀಲ್ ಮಾಡಿಲ್ಲ ಎಂಬುದರ ಬಗ್ಗೆ ಸೋನಂ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

    ಸೋನಂಗೆ 2022 ತುಂಬಾ ಸ್ಪೆಷಲ್ ಯಾಕೆಂದರೆ, ಮಗ ವಾಯು ಆಗಮನ ಇಡೀ ಕಪೂರ್ ಕುಟುಂಬಕ್ಕೆ ಖುಷಿಕೊಟ್ಟಿತ್ತು. ಕಳೆದ ಮಾರ್ಚ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಸೋನಂ, ಮುದ್ದು ಮಗನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಿನಿಮಾಗೆ ಮತ್ತೆ ಬರೋದಾಗಿ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇನ್ನೂ ಮಗನ ಮುಖ ಇನ್ನೂ ಯಾಕೆ ರಿವೀಲ್ ಮಾಡಿಲ್ಲ ಎಂದು ಸಂದರ್ಶನದಲ್ಲಿ ಅಚ್ಚರಿಯ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ನಾವು ಸಾಕಷ್ಟು ಕಲಾವಿದರನ್ನ ಲಾಂಚ್ ಮಾಡಿದ್ದೇವೆ: ರಶ್ಮಿಕಾ ಮಂದಣ್ಣಗೆ ರಿಷಬ್ ಶೆಟ್ಟಿ ಟಾಂಗ್

    ನನ್ನ ಅಡಲ್ಟ್ ಲೈಫ್ ಶುರುವಿನಿಂದಲೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವೆ. ಈಗ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಮಾಡಬೇಕು ಎನಿಸುತ್ತಿದೆ. ಮತ್ತೆ ಆಕ್ಟಿಂಗ್ ಮಾಡಲು ರೆಡಿಯಾಗಿರುವೆ. ಪ್ರೆಗ್ನೆಂಟ್ ಆಗುವ ಮುನ್ನ ನಿರ್ದೇಶಕ ಸುಜಯ್ ಘೋಷ್ (Sujay Ghosh) ಜೊತೆ ಒಂದು ಸಿನಿಮಾ ಮಾಡಿದ್ದೆ. ಇದೊಂದು ಥ್ರಿಲರ್ ಕಥೆಯಾಗಿದ್ದು, ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗಲಿದೆ.

    ಮಗನ ಮುಖ ಇದುವರೆಗೂ ಯಾಕೆ ತೋರಿಸಿಲ್ಲ ಎಂದು ಸಂದರ್ಶನದಲ್ಲಿ ಪ್ರಶ್ನಿಸಿದಾಗ, ಸೋಷಿಯಲ್ ಮೀಡಿಯಾದಲ್ಲಿ ವಾಯು (Son Vayu) ಫೋಟೋ ಶೇರ್ ಮಾಡುವುದರಿಂದ ಅವನ ಬೆಳವಣಿಗೆಗೆ ಪರಿಣಾಮ ಬೀರುತ್ತದೆ. ಆತ ದೊಡ್ಡವನಾದ ಮೇಲೆ ಆತನೇ ಈ ಬಗ್ಗೆ ನಿರ್ಧರಿಸಲಿ ಎಂದು ಸೋನಂ ಉತ್ತರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    `ಸತ್ಯ’ ಸೀರಿಯಲ್ (Sathya Serial) ಸಾಗರ್ ಬಿಳಿಗೌಡ (Sagar Biligowda) ಮತ್ತು ಮಾಡೆಲ್ ಕಮ್ ನಟಿ ಸಿರಿ ರಾಜು (Siri Raju) ವೈವಾಹಿಕ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ ಕೂಡ ನೆರವೇರಿತ್ತು. ಇದೀಗ ಮದುವೆಯ (Wedding) ದಿನಾಂಕ ಕೂಡ ಫಿಕ್ಸ್ ಆಗಿದೆ. ಈ ಕುರಿತು ನಟಿ ಸಿರಿ ರಾಜು ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

    ಸಾಗರ್ ಮತ್ತು ಸಿರಿ ರಾಜು ಭೇಟಿ ಅನಿರಿಕ್ಷಿತ ಭೇಟಿಯೇ, ಮದುವೆ ಎಂಬ ಬಂಧದವರೆಗೂ ತಂದು ನಿಲ್ಲಿಸಿದೆ. ಖಾಸಗಿ ವಾಹಿನಿಯ ಇವೆಂಟ್‌ನಲ್ಲಿ ಸಾಗರ್-‌ ಸಿರಿ ಪರಿಚಯವಾಯ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ಯಿತ್ತು. ಆದರೆ ಮದುವೆ ಆಲೋಚನೆ ಇಬ್ಬರಿಗೂ ಇರಲಿಲ್ಲ. ಇದು ಪಕ್ಕಾ ಅರೆಂಜ್ ಮ್ಯಾರೇಜ್ (Arrange Marriage) ಆಗಿದ್ದು, ಗುರುಹಿರಿಯರು ನಿಶ್ಚಿಯಿಸಿದ ಮದುವೆ ಎಂದು ಸಿರಿ ರಾಜು ತಿಳಿಸಿದ್ದಾರೆ.

    ಕಳೆದ ತಿಂಗಳು ನವೆಂಬರ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸಿರಿ ರಾಜು ಮತ್ತು ಸಾಗರ್ ಎಂಗೇಜ್‌ಮೆಂಟ್ (Engagemnet) ನಡೆದಿತ್ತು. ಇದೀಗ ಇದೇ ಜನವರಿ 26ರಂದು ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸಾಗರ್, ಸಿರಿ ಜೋಡಿ ಮದುವೆಯಾಗುತ್ತಿದೆ. ಜ.25ರಂದು ಆರತಕ್ಷತೆ ನಡೆಯಲಿದೆ. ಅದಕ್ಕೂ ಮುನ್ನ ವಿವಾಹ ಪೂರ್ವ ಕಾರ್ಯಗಳು ಜರುಗಲಿದೆ.

    ಸಾಗರ್ ಬಿಳಿಗೌಡ ಮದುವೆಯಾಗುತ್ತಿರುವ ಹುಡುಗಿ ಸಿರಿ ರಾಜು ಕೂಡ ಕಲಾವಿದೆ. ಸಿರಿ ರಾಜು ಉದ್ಯಮಿ ಕೂಡ ಹೌದು. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಸಿರಿ ರಾಜು ಅಭಿನಯಿಸಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ (Vijay Raghavendra) ಜೊತೆಗೆ `FIR 6 to 6′ ಸಿನಿಮಾದಲ್ಲಿ ಸಿರಿ ರಾಜು ನಟಿಸಿದ್ದಾರೆ. ಸಾಗರ್ ಬಿಳಿಗೌಡ ಪ್ರಸ್ತುತ `ಸತ್ಯ’ ಸೀರಿಯಲ್‌ನಲ್ಲಿ ನಾಯಕ ನಟನಾಗಿ ಜನಮನ ಗೆದ್ದಿದ್ದಾರೆ. ಇದನ್ನೂ ಓದಿ:ಒಂದೇ ದಿನ ತೆರೆಗೆ ಅಬ್ಬರಿಸುತ್ತಿದೆ ರಣ್‌ಬೀರ್- ಆಲಿಯಾ ಭಟ್ ಸಿನಿಮಾ: ಬಾಕ್ಸಾಫೀಸ್‌ ಫೈಟ್‌

    ಇನ್ನೂ ವೈವಾಹಿಕ ಬದುಕಿಗೆ ಕಾಲಿಡುತ್ತಿರುವ ಸಾಗರ್ ಮತ್ತು ಸಿರಿ ರಾಜುಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇವಸ್ಥಾನದ ಬಾಗಿಲಲ್ಲೇ `ಹೆಬ್ಬುಲಿ’ ನಟಿಗೆ ಅವಮಾನ

    ದೇವಸ್ಥಾನದ ಬಾಗಿಲಲ್ಲೇ `ಹೆಬ್ಬುಲಿ’ ನಟಿಗೆ ಅವಮಾನ

    ಹುಭಾಷಾ ನಟಿ ಅಮಲಾ ಪೌಲ್ (Amala Paul) ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ (Mahadeva Temple) ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ಕಹಿ ಅನುಭವವಾಗಿದೆ. ದೇವಸ್ಥಾನದ ಬಾಗಿಲಲ್ಲೇ ನಟಿಗೆ ಅವಮಾನ ಮಾಡಲಾಗಿದೆ.

    ಕೇರಳದ ಮಹಾದೇವ ದೇವಸ್ಥಾನಕ್ಕೆ ನಟಿ ಅಮಲಾ ಪೌಲ್ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನಕ್ಕೆ ಪ್ರವೇಶ ನೀಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದರು. ಒಳಗಡೆ ಬರಬೇಡಿ, ಹೊರಗಡೆಯೇ ದೇವರ ದರ್ಶನ ಪಡೆದು ಹೋಗಿ ಎಂದಿದ್ದರು.

    ದೇಶದ ಕೆಲವು ಹಿಂದೂ (Hindu) ಧರ್ಮದ ದೇವಾಲಯದಲ್ಲಿ ಅನ್ಯ ಧರ್ಮದವರಿಗೆ ಪ್ರವೇಶ ನೀಡುವುದಿಲ್ಲ. ಈ ನಿಯಮಗಳನ್ನ ಅಲ್ಲಿನ ಅರ್ಚಕರು, ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದರಂತೆಯೇ ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ಅಮಲಾ ಬರದಂತೆ ತಡೆದಿದ್ದಾರೆ. ಅಮಲಾ ಪೌಲ್ ಕ್ರಿಶ್ಚಿಯನ್ (Christian) ಧರ್ಮದವರು ಆಗಿರುವ ಕಾರಣ ದೇವಸ್ಥಾನದ ಪ್ರವೇಶಕ್ಕೆ ನಿರಾಕರಿಸಲಾಗಿದೆ. ಇದನ್ನೂ ಓದಿ: ತಾಯಿಯಾಗುತ್ತಿರುವ ಗುಡ್‌ ನ್ಯೂಸ್‌ ಕೊಟ್ರು ʻಯೇ ಜವಾನಿ ಹೇ ದಿವಾನಿ’ ನಟಿ

    ಇನ್ನು ನಟಿ ಅಮಲಾ ಪೌಲ್ ದೇವಸ್ಥಾನದ ನೋಂದಣಿ ಪುಸ್ತಕದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. 2023ರಲ್ಲೂ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದು ದುಃಖಕರ ವಿಷಯವಾಗಿದೆ. ನನಗೆ ದೇವಾಲಯ ಪ್ರವೇಶಿಸಲು ನಿರಾಕರಿಸಿದರೂ ದೂರದಿಂದಲೇ ದೈವಿಕ ಅನುಭವವಾಯಿತು. ನಾನು ಮನಸ್ಸಿನಲ್ಲೇ ಪ್ರಾರ್ಥಿಸಿದೆ. ಆದಷ್ಟು ಬೇಗ ಈ ಧಾರ್ಮಿಕ ತಾರತಮ್ಯ ಬದಲಾಗಲಿ ಎಂದು ಆಶಿಸುತ್ತೇನೆ. ನಾವೆಲ್ಲರೂ ಒಂದೇ ಎಂದು ಎಲ್ಲರನ್ನು ಸಮಾನವಾಗಿ ಪರಿಗಣಿಸುವ ಸಮಯ ಬರುತ್ತದೆ ಎಂದು ಅಮಲಾ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೀತಿಯ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ರು ನಟಿ ರಜಿನಿ: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್‌

    ಪ್ರೀತಿಯ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ರು ನಟಿ ರಜಿನಿ: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್‌

    ಕಿರುತೆರೆಯ ಸೂಪರ್ ಹಿಟ್ ಸೀರಿಯಲ್ `ಅಮೃತವರ್ಷಿಣಿ’ (Amruthavarshini) ಮೂಲಕ ಕರ್ನಾಟಕ ಜನತೆಯ ಮನಗೆದ್ದ ಚಲುವೆ ನಟಿ ರಜಿನಿ (Actress Rajini) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪ್ರೀತಿಯ ಹುಡುಗನ ಬಗ್ಗೆ ನಟಿ ಮಾತನಾಡಿದ್ದಾರೆ.

    ಕೆಲ ವರ್ಷಗಳ `ಅಮೃತವರ್ಷಿಣಿ’ ಎಂಬ ಸೀರಿಯಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಧಾರಾವಾಹಿಯಲ್ಲಿ ರಜಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಸಿನಿಮಾಗಳ ಜೊತೆ ʻಸೂಪರ್ ಕ್ವೀನ್ಸ್ʼಎಂಬ ರಿಯಾಲಿಟಿ ಶೋನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಂಕ್ರಾಂತಿ ಹಬ್ಬದ ಶುಭ ವೇಳೆಯಲ್ಲಿ ರಜಿನಿ ತಮ್ಮ ಫ್ಯಾನ್ಸ್ ಸಿಹಿಸುದ್ದಿ ಕೊಟ್ಟಿದ್ದಾರೆ.

     

    View this post on Instagram

     

    A post shared by Rajini (@rajiniiofficial)

    `ಸೂಪರ್ ಕ್ವೀನ್ಸ್’ ಶೋನಲ್ಲಿ ತಮ್ಮ ಬದುಕಿನ ಕೆಲ ವಿಚಾರಗಳನ್ನ ನಟಿ ಹಂಚಿಕೊಂಡಿದ್ದಾರೆ. ಹಾಗೆಯೇ ಈಗ ತಮ್ಮ ಹುಡುಗನ ಬಗ್ಗೆ ನಟಿ ಹಿಂಟ್ ಕೊಟ್ಟಿದ್ದಾರೆ. ʻಹಿಟ್ಲರ್ ಕಲ್ಯಾಣʼ ಧಾರಾವಾಹಿಯಲ್ಲಿ ಅಂತರ ಎಂಬ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಇದರಲ್ಲಿ ತಮ್ಮ ಪತ್ನಿ ಅಂತರಳನ್ನ ಎಜೆ ಪ್ರೀತಿಸುವ ರೀತಿಯನ್ನ ತೋರಿಸಲಾಗಿದೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಹಾಗಾಗಿ ಶೋನಲ್ಲಿ `ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅಂತಾರಳನ್ನು ಎಜೆ ಪ್ರೀತಿಸುವ ರೀತಿ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಾರಾ ಎಂದು ರಜಿನಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ನಟಿ ಹೌದು ಎಂದು ಹೇಳಿದ್ದಾರೆ. ಆದರೆ, ಯಾರವರು, ಮದುವೆ ಯಾವಾಗ ಎಂಬ ಯಾವ ವಿಚಾರವನ್ನು ಹೇಳಿಲ್ಲ. ಒಟ್ನಲ್ಲಿ ರಜಿನಿ ಅವರು ತಮ್ಮ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊನೆಗೂ ಮುದ್ದಿನ ಶ್ವಾನ ಸಿಕ್ಕ ಖುಷಿಯಲ್ಲಿ ನಟಿ ಸುಧಾರಾಣಿ

    ಕೊನೆಗೂ ಮುದ್ದಿನ ಶ್ವಾನ ಸಿಕ್ಕ ಖುಷಿಯಲ್ಲಿ ನಟಿ ಸುಧಾರಾಣಿ

    ನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ (Sudharani) ಇತ್ತೀಚೆಗೆ ತಮ್ಮ ಏರಿಯಾದ ಶ್ವಾನ ಕಳೆದು ಹೋಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು. ಜೊತೆಗೆ ಬಿಬಿಎಂಪಿ (Bbmp) ವಿರುದ್ಧ ನಟಿ ಕಿಡಿಕಾರಿದ್ದರು. ಈಗ ಮುದ್ದಿನ ಶ್ವಾನ ಗಂಗು, ಸುಧಾರಾಣಿ ಅವರಿಗೆ ಸಿಕ್ಕಿದೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಬೆಡಗಿಗೆ ಒಲಿಯುತ್ತಾ ಭುವನ ಸುಂದರಿ ಕಿರೀಟ?

    ನಟಿ ಸುಧಾರಾಣಿ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ (Sankrathi Festival) ಹೆಚ್ಚಾಗಿದೆ. ಈ ವೇಳೆ ನಟಿಯ ಕುಟುಂಬಕ್ಕೆ ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಕಳೆದುಹೋಗಿದ್ದ ಶ್ವಾನ ಗಂಗು ವಾಪಾಸ್ ಆದ ಸಂತಸದಲ್ಲಿದ್ದಾರೆ. ಸುಧಾರಾಣಿ ಅವರ ಮನೆಯ ಪ್ರೀತಿಯ ನಾಯಿ ಗಂಗು ಕಳೆದುಹೋಗಿತ್ತು. ಕಳೆದ 15 ದಿನಗಳಿಂದ ನಾಯಿ ಕಾಣಿಸುತ್ತಿಲ್ಲ ಹುಡುಕಿ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಭಾವುಕ ಪೋಸ್ಟ್ ಶೇರ್ ಮಾಡಿದ್ದರು. ಅಲ್ಲದೇ ಬಿಬಿಎಂಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಗಂಗು ಸಿಕ್ಕಿದೆ ಎನ್ನುವ ಸಂತಸದ ವಿಚಾರವನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Dr.Sudharani (@sudharanigovardhan)

    ಪ್ರೀತಿಯ ಗಂಗು ಜೊತೆ ವಿಡಿಯೋ ಶೇರ್ ಮಾಡಿರುವ ಸುಧಾರಾಣಿ ಅವರು ಹುಡುಕಿ ಕೊಟ್ಟವರಿಗೆ ಧನ್ಯವಾದ ತಿಳಿಸಿದ್ದಾರೆ. `ನಮಸ್ಕಾರ ನನಗೆ ತುಂಬಾ ಖುಷಿಯಾಗಿದೆ. ನನ್ನ ಗಂಗು ಸಿಕ್ಕಿದ್ದಾಳೆ. ಗಂಗುಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಶಬೀರ್ ಪಾಷ, ಅಮನ್ ದೀಪ್ ಸಿಂಗ್, ಪೂಜಾ ಎಲ್ಲರಿಗೂ ಧನ್ಯವಾದಗಳು.

    ಗಂಗು ಹತ್ತಿರನೇ ಕಾದು ಕುಳಿತು ಎಲ್ಲಿಗೂ ಹೋಗದಂತೆ ನೋಡಿಕೊಂಡು ಅದನ್ನು ರಕ್ಷಿಸಿ ತಂದು ಕೊಟ್ಟ ಶಬೀರ್ ಮತ್ತು ಅಮನ್ ದೀಪ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ. ಸುಧಾರಾಣಿ ಜೊತೆ ಕುಳಿತಿರುವ ಗಂಗು ಕೂಡ ಕಾಣಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

    ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

    ಚಂದನವನದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Actress Ragini Dwivedi) ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಾಲಿವುಡ್ (Bollywood) ಅಂಗಳಕ್ಕೂ ನಟಿ ಲಗ್ಗೆ ಇಡ್ತಿದ್ದಾರೆ. ಹೀಗಿರುವಾಗ ಮದುವೆ, ಸಂಸಾರಿಕ ಜೀವನದ ಬಗ್ಗೆ ರಾಗಿಣಿ ಮಾತನಾಡಿದ್ದಾರೆ.

    ಕನ್ನಡದ ಚಿತ್ರರಂಗದ ಬ್ಯುಸಿ ನಟಿಯರಲ್ಲಿ ರಾಗಿಣಿ ಕೂಡ ಒಬ್ಬರು. ಹಿಂದಿ ಸೇರಿದಂತೆ ಒಟ್ಟು ಏಳು ಸಿನಿಮಾಗಳು (7 Films) ರಾಗಿಣಿ ಕೈಯಲ್ಲಿದೆ. ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಗಾಂಧಿನಗರದಲ್ಲಿ ಸ್ಟಾರ್ ಜೋಡಿಗಳ ಗಟ್ಟಿಮೇಳ ಕೂಡ ಜೋರಾಗಿದೆ. ಹರಿಪ್ರಿಯಾ ಮತ್ತು ವಸಿಷ್ಠ ಹಸೆಮಣೆ ಏರುತ್ತಿರುವ ಬೆನ್ನಲ್ಲೇ ರಾಗಿಣಿ ಅವರಿಗೂ ಕೂಡ ಮದುವೆ ಯಾವಾಗ ಎಂಬುದರ ಬಗ್ಗೆ ಪ್ರಶ್ನೆ ಎದುರಾಗಿದೆ. ಚಿತ್ರವೊಂದರ ಸುದ್ದಿಗೋಷ್ಠಿಯಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ಸಾಕಷ್ಟು ಸಿನಿಮಾಗಳು ನನ್ನ ಕೈಯಲ್ಲಿದೆ. ಮದುವೆಯ ಬಗ್ಗೆ ಈಗ ನನಗೆ ಆಲೋಚನೆ ಇಲ್ಲ. ಸದ್ಯ ನನಗೆ ಕೆಲಸ ಖುಷಿ ಕೊಡ್ತಿದೆ ಎಂದು ಮಾತನಾಡಿದ್ದಾರೆ. ಎಲ್ಲರೂ ಎಂಜಾಯ್ ಮಾಡ್ತಾ ಮದುವೆಯಾಗಲಿ. ನಾನು ಮದುವೆಗೆ ಹೋಗಿ ಎಂಜಾಯ್ ಮಾಡುತ್ತೇನೆ ಎಂದು ರಾಗಿಣಿ ತಮ್ಮ ಮದುವೆಯ ಬಗ್ಗೆ ಇರುವ ಭಾವನೆಯನ್ನ ಮುಕ್ತವಾಗಿ ಮಾತನಾಡಿದ್ದಾರೆ. ಹಾಗೆಯೇ ಈ ವೇಳೆ, ಒಂದು ತಿಂಗಳು ಟೈಮ್ ಕೊಡಿ. ನಿಮಗೆ ಬಿಗ್ ಅನೌನ್ಸ್‌ಮೆಂಟ್ ಕೊಡುತ್ತೇನೆ ಎಂದು ಮಾತನಾಡಿದ್ದಾರೆ.

    ಇನ್ನೂ ರಾಗಿಣಿ, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k