Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬೆಂಗಳೂರು: ಇತ್ತೀಚೆಗೆ ಜೈಲು ಶಿಕ್ಷೆಗೆ ಗುರಿಯಾಗಿರುವ ಅನುಭವ ಖ್ಯಾತಿಯ ನಟಿ (Actress) ಅಭಿನಯ (Abhinaya) ಹಾಗೂ ಆಕೆಯ ಕುಟುಂಬದ ಮೇಲೆ ಲುಕೌಟ್ ನೋಟಿಸ್ (Lookout Notice) ಜಾರಿಯಾಗಿದೆ.
ಅತ್ತಿಗೆ ವರಲಕ್ಷ್ಮಿ ಅವರು ನಟಿ ಅಭಿನಯ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು ಮಾಡಿದ್ದರು. ಅಭಿನಯ ಕುಟುಂಬ ವರದಕ್ಷಿಣೆ ಹಣ ಪಡೆದಿದ್ದಲ್ಲದೆ ಲಕ್ಷ್ಮಿದೇವಿಯವರನ್ನು ಪೋಷಕರ ಮನೆಗೆ ಅಟ್ಟಿದ್ದರು. 80 ಸಾವಿರ ರೂ. ನಗದು ಹಾಗೂ 250 ಗ್ರಾಂ ಚಿನ್ನಾಭರಣ ವರದಕ್ಷಿಣೆ ರೂಪವಾಗಿ ಪಡೆದಿರುವುದು ಕೂಡ ಸಾಬೀತಾಗಿತ್ತು. ಸೆಷನ್ಸ್ ಕೋರ್ಟ್ ಅಭಿನಯ, ತಾಯಿ ಹಾಗೂ ಸಹೋದರನಿಗೆ ಜೈಲು ಶಿಕ್ಷೆ ವಿಧಿಸಿತ್ತು.

ಯಾವಾಗ ಜೈಲು ಶಿಕ್ಷೆ ಪ್ರಕಟವಾಯಿತೋ, ಅಂದಿನಿಂದ ಅಭಿನಯ ಮತ್ತು ಕುಟುಂಬದ ಸದಸ್ಯರು ಪೊಲೀಸರ ಕೈಗೆ ಸಿಗದೇ ತಕೆಮರೆಸಿಕೊಂಡಿದ್ದಾರೆ. ಈ ಮೊದಲು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಅಭಿನಯ, ಸಹೋದರ ಹಾಗೂ ತಾಯಿ ಹೈಕೋರ್ಟ್‌ಗೆ ಹೋಗಿದ್ದರು. ಆದರೆ ಹೈಕೋರ್ಟ್ ಸಹ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೆ ಪೊಲೀಸರ ಕೈಗೆ ಅವರು ಸಿಗದೇ ತಲೆಮರೆಸಿಕೊಂಡಿದ್ದಾರೆ. ಇದೀಗ ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜು ಪತ್ತೆಗೆ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಅರಸೀಕೆರೆಯಲ್ಲಿ ಮತ್ತೆ ಜೆಡಿಎಸ್ ಗೆಲ್ಲುವವರೆಗೂ ನಾನು ನಿದ್ರೆ ಮಾಡಲ್ಲ – ಪ್ರಜ್ವಲ್ ಶಪಥ

ಸಾರ್ವಜನಿಕರಿಗೆ ಈ ಎಲ್ಲಾ ಆರೋಪಿಗಳ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಬಾರಿ ರಾಜ್ಯಸಭಾ ಕಲಾಪದ ಅಧ್ಯಕ್ಷತೆ ವಹಿಸಿದ ಪಿ.ಟಿ ಉಷಾ
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್ (Imran Khan) ಅವರು ಈಗ ನಟಿ ಲೇಖಾ ವಾಷಿಂಗ್ಟನ್ (Lekha Washington) ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋಗಳು ಹರಿದಾಡುತ್ತಿದೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

ಹಿಂದಿಯ `ಐ ಹೇಟ್ ಲವ್ ಸ್ಟೋರಿ’, ಲಕ್, ಬ್ರೇಕ್ ಕೆ ಬಾದ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ಇಮ್ರಾನ್ ಖಾನ್ ಬಣ್ಣ ಹಚ್ಚಿದ್ದಾರೆ. ಸದ್ಯ ಸೌತ್ ನಟಿ ಲೇಖಾ (Actress Lekha) ಜೊತೆ ಇಮ್ರಾನ್ ಖಾನ್ ಡೇಟಿಂಗ್ ಮಾಡ್ತಿದ್ದಾರೆ. 2011ರಲ್ಲಿ ಮೊದಲ ಪತ್ನಿ ಆವಂತಿಕಾ ಮಲ್ಲಿಕ್ ಖಾನ್ ಜೊತೆ ಡಿವೋರ್ಸ್ ಪಡೆದ ನಂತರ ಇದೀಗ ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಬಿಟೌನ್ ಗಲ್ಲಿಯಲ್ಲಿ ಇಮ್ರಾನ್-ಲೇಖಾ ಜೋಡಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಇಬ್ಬರ ಲವ್ವಿ-ಡವ್ವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಇನ್ನೂ ನಟಿ ಲೇಖಾ 2010ರಲ್ಲಿ ಕನ್ನಡದ `ಹುಡುಗ ಹುಡುಗಿ’ (Huduga Hudugi) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದರು.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬಾಲಿವುಡ್ (Bollywood) ಬ್ಯೂಟಿ ಬಿಪಾಶಾ ಬಸು (Bipasha Basu)ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ. ಮನೆಗೆ ಎಂಟ್ರಿಯಾಗಿರುವ ಮುದ್ದು ಮಗಳ ಆರೈಕೆಯಲ್ಲಿದ್ದಾರೆ. ಈಗ ಮಗಳ ಜೊತೆಗಿನ ಮುದ್ದಾದ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
View this post on Instagram
ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮಗಳ ಆಗಮನ ಖುಷಿಯಲ್ಲಿದ್ದಾರೆ. ಆಗಾಗ ಮಗಳ ಜೊತೆಗಿನ ಫೋಟೋ, ವೀಡಿಯೋ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗೆ ಅಪ್‌ಡೇಟ್ ಕೊಡುತ್ತಾರೆ. ಇದನ್ನೂ ಓದಿ: ಸಿನಿಮಾ ಸಕ್ಸಸ್ ಸೆಲೆಬ್ರೇಶನ್ ಸಂಭ್ರಮದಲ್ಲಿ `ಕಾಂತಾರ’ ಟೀಮ್
View this post on Instagram
ನಟಿ ಬಿಪಾಶಾ ಮಗುವಿನ ಫೋಟೋ ಶೇರ್ ಮಾಡಿ, ಚೆಂದದ ಅಡಿಬರಹ ನೀಡಿದ್ದಾರೆ. ನನ್ನ ಜೀವನದ ಅತ್ಯಂತ ಸಂತೋಷದ ವಿಷಯವೆನೆಂದರೆ ಮಗಳು ದೇವಿಗೆ (Devi) ತಾಯಿಯಾಗಿದ್ದು ಎಂದು ಬರೆದುಕೊಂಡಿದ್ದಾರೆ. ಈ ಮುದ್ದಾದ ಪೋಸ್ಟ್ ಈಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
View this post on Instagram
ಸದ್ಯ ಮಗಳು ಆರೈಕೆಯಲ್ಲಿರುವ ನಟಿ ಬಿಪಾಶಾ ಬಸು ಸಿನಿಮಾಗೆ ಕಮ್‌ಬ್ಯಾಕ್ ಆಗುತ್ತಾರಾ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಟಾಲಿವುಡ್ (Tollywood) ಬ್ಯೂಟಿ ಸಮಂತಾ (Samantha) ಈಗ ಅಪರೂಪದ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾಗಳತ್ತ ಬ್ಯುಸಿಯಿರುವ ನಟಿ ಮತ್ತೆ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅಕ್ಕಿನೇನಿ ಕುಟುಂಬದ ಜೊತೆ ಸ್ಯಾಮ್ ಟಚ್‌ನಲ್ಲಿದ್ದಾರೆ. ಮಾಜಿ ಪತಿ ನಾಗಚೈತನ್ಯ (Nagachaitanya) ಸಹೋದರ ಅಖಿಲ್ ಅಕ್ಕಿನೇನಿ (AKhil Akkineni) ಕಾರ್ಯಕ್ಕೆ ಮೆಚ್ಚುಗೆ ಸೂಚಿಸುವ ಮೂಲಕ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದ್ದಾರೆ.

ಬಹುವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ಜೋಡಿ ನಾಗ್-ಸ್ಯಾಮ್ 2021ರಲ್ಲಿ ಡಿವೋರ್ಸ್ ನೀಡುವ ಮೂಲಕ ದೂರವಾದರು. ತೆರೆಯ ಮೇಲೆ ಮತ್ತು ತೆರೆಹಿಂದೆ ರೋಲ್ ಮಾಡೆಲ್ ಆಗಿದ್ದ ಈ ಜೋಡಿ ದೂರವಾಗಿದ್ದು, ಅನೇಕರಿಗೆ ಬೇಸರ ಮೂಡಿಸಿತ್ತು. ಸಾಮಾನ್ಯವಾಗಿ ಡಿವೋರ್ಸ್ (Divorce) ಬಳಿಕ ಮಾಜಿ ಪತಿ ಮತ್ತು ಕುಟುಂಬದ ಜೊತೆ ಯಾವುದೇ ರೀತಿಯ ಒಡನಾಟ ಇಟ್ಟುಕೊಳ್ಳುವುದಿಲ್ಲ. ಆದರೆ ಈಗ ಸಮಂತಾ ನಡೆಗೆ ನೆಟ್ಟಿಗರಿಗೆ ಆಶ್ಚರ್ಯವುಂಟು ಮಾಡಿದೆ. ಇದನ್ನೂ ಓದಿ: ಸನ್ನಿ ಲಿಯೋನ್ ಗೆ ಆತಂಕ ಮೂಡಿಸಿದ ಬಾಂಬ್ ಸ್ಫೋಟ
View this post on Instagram
ನಾಗ್ ಚೈತನ್ಯ ಜೊತೆ ಯಾವುದೇ ರೀತಿಯಲ್ಲೂ ಕನೆಕ್ಷನ್ ಇಟ್ಟುಕೊಳ್ಳದೇ ಇದ್ದರೂ, ಅವರ ಸಹೋದರ ಅಖಿಲ್ ಅಕ್ಕಿನೇನಿ ಜೊತೆ ಸಮಂತಾ ಟಚ್‌ನಲ್ಲಿದ್ದಾರೆ. ಅಖಿಲ್ ಅಕ್ಕಿನೇನಿ ಅಭಿನಯ ʻಏಜೆಂಟ್ʼ (Agent Film) ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಖಡಕ್ ಲುಕ್‌ನಲ್ಲಿ ನಟ ಮಿಂಚಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಖಿಲ್ ಪೋಸ್ಟ್‌ಗೆ ಸಮಂತಾ ರಿಯಾಕ್ಟ್ ಮಾಡಿದ್ದಾರೆ.

ಅಖಿಲ್ ಲುಕ್‌ಗೆ ಸ್ಯಾಮ್ ಕ್ರೇಜಿ ಕಾಮೆಂಟ್ ಮಾಡಿದ್ದಾರೆ. ಅತ್ಯುತ್ತಮ ಮೋಡ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಅಖಿಲ್ ಹೊಸ ಸಿನಿಮಾಗೆ ಸಮಂತಾ ಮೆಚ್ಚುಗೆ ಸೂಚಿಸಿದ್ದಾರೆ. ಈ ಮೂಲಕ ಅಕ್ಕಿನೇನಿ ಕುಟುಂಬದ ಜೊತೆ ನಟಿ ಸಂಪರ್ಕದಲ್ಲಿದ್ದಾರೆ. ಇವರಿಬ್ಬರ ಸ್ನೇಹ ನೋಡಿ ಅಭಿಮಾನಿಗಳು ಮತ್ತೆ ನಾಗ್-ಸ್ಯಾಮ್ ಒಂದಾಗಲಿ ಎಂದು ಆಶಿಸುತ್ತಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಟಾಲಿವುಡ್, ಬಾಲಿವುಡ್ (Bollywood) ಅಂತಾ ಎಲ್ಲಾ ರಂಗದಲ್ಲೂ ಮಿಂಚ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಹೊಸ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದೀಗ ಅಭಿಮಾನಿಗೆ ರಶ್ಮಿಕಾ ಪ್ರಪೋಸ್ ಮಾಡಿದ್ದು, ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

`ಮಿಷನ್ ಮಜ್ನು’ (Mission Majnu) ರಿಲೀಸ್ ಬಳಿಕ ಮತ್ತಷ್ಟು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇದೀಗ ಸಮಾರಂಭವೊಂದರಲ್ಲಿ ರಶ್ಮಿಕಾ ಬಂದಿದ್ದರು ಈ ವೇಳೆ ಅಭಿಮಾನಿಗಳು ನಟಿಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇನ್ನೊಬ್ಬ ಅಭಿಮಾನಿ, ರಶ್ಮಿಕಾ ಬಳಿ ಬಂದು ತೆಲುಗಿನಲ್ಲಿ ಪ್ರಪೋಸ್ ಮಾಡುವುದು ಹೇಗೆ ಎಂದು ಕೇಳಿದ್ದಾರೆ. ಹಾಯ್ ಹಾಗಾದರೆ ಯಾರೋ ಹುಡುಗಿ ಇದ್ದಾರೆ ಎಂದಿದ್ದಾರೆ. ಬಳಿಕ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಅಭಿಮಾನಿಗೆ ರಶ್ಮಿಕಾ ಹೇಳಿದ್ದಾರೆ. ಅಭಿಮಾನಿ ಕೂಡ ಸೇಮ್ ಟು ಯು ಎಂದಿದ್ದಾರೆ. ನಟಿ ಕೂಡ ನಗುತ್ತಾ ಸಮಾರಂಭಕ್ಕೆ ತೆರಳಿದ್ದಾರೆ.
View this post on Instagram
ಇದೀಗ ರಶ್ಮಿಕಾ ಅಭಿಮಾನಿಗೆ ಪ್ರಪೋಸ್ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇನ್ನೂ ಈ ವೀಡಿಯೋವನ್ನ ವಿಜಯ್ ದೇವರಕೊಂಡಗೆ (Vijay Devarakonda) ಟ್ಯಾಗ್ ಮಾಡಿ ನಿಮ್ಮ ಹುಡುಗಿ ಇಲ್ಲಿ ಯಾರಿಗೋ ಪ್ರಪೋಸ್ ಮಾಡ್ತಿದ್ದಾರೆ ನೋಡಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇದನ್ನೂ ಓದಿ: ಸುದೀಪ್ ಕಾಂಗ್ರೆಸ್ ಸೇರಿದರೆ ಸ್ವಾಗತ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಇನ್ನೂ ರಶ್ಮಿಕಾ ನಟನೆಯ ಅನಿಮಲ್, ಪುಷ್ಪ 2, ಸೇರಿದಂತೆ ಸಿನಿಮಾಗಳು ನಟಿಯ ಕೈಯಲ್ಲಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಟಾಲಿವುಡ್ (Tollywood) ನಟಿ ಸಮಂತಾ `ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ವಿರುದ್ಧ ಹೋರಾಡುತ್ತಲೇ ಸಿನಿಮಾ ಶೂಟಿಂಗ್‌ನಲ್ಲಿ ಸಮಂತಾ (Samantha) ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮಾಸ್ ಲುಕ್‌ನಲ್ಲಿ ಸ್ಯಾಮ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್ ತೇಜ್

ಇತ್ತೀಚಿಗಷ್ಟೆ ಸಮಂತಾ ನಟನೆಯ `ಶಾಕುಂತಲಂ’ (Shakuntalam) ಸಿನಿಮಾದ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲೂ ಸಮಂತಾ ಹಾಜರಿದ್ದರು. ಅನಾರೋಗ್ಯದ ಬಳಿಕ ಸಮಂತಾ ಕಾಣಿಸಿಕೊಂಡ ಮೊದಲ ಕಾರ್ಯಕ್ರಮ ಇದಾಗಿತ್ತು. ಅನೇಕ ತಿಂಗಳುಗಳ ಬಳಿಕ ಸಮಂತಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.
View this post on Instagram
ಸಮಂತಾ ಬಾಲಿವುಡ್‌ನ (Bollywood) `ಸಿಟಾಡೆಲ್’ (Citadel) ಸೀರಿಸ್‌ನ ಶೂಟಿಂಗ್‌ನಲ್ಲಿದ್ದಾರೆ. `ಫ್ಯಾಮಿಲಿ ಮ್ಯಾನ್’ ಬಳಿಕ ಸಮಂತಾ ನಟಿಸುತ್ತಿರುವ ಸೀರಿಸ್ ಇದಾಗಿದೆ. ಇತ್ತೀಚಿಗಷ್ಟೆ ಶೂಟಿಂಗ್‌ಗೆ ಹಾಜರಾಗಿದ್ದ ಸಮಂತಾ ಇದೀಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. `ಫ್ಯಾಮಿಲಿ ಮ್ಯಾನ್ 2′ ನಂತರ ಸದ್ಯ ಸಿಟಾಡೆಲ್ ಮೂಲಕ ಎಲ್ಲರ ಮನ ಗೆಲ್ಲಲು ಸಜ್ಜಾಗಿದ್ದಾರೆ. ಸದ್ಯ ಪ್ರೈಮ್ ವಿಡಿಯೋ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫಸ್ಟ್ ಲುಕ್ ಹಂಚಿಕೊಂಡಿದ್ದು, ಸಮಂತಾ ಫಸ್ಟ್ ಲುಕ್ ಶೇರ್ ಮಾಡಿ, `ಮಿಷನ್ ಪ್ರಾರಂಭವಾಗಿದೆ. ನಾವು ಸಿಟಾಡೆಲ್‌ನ ಭಾರತೀಯ ವರ್ಷನ್ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ. ಫಸ್ಟ್ ಲುಕ್‌ನಲ್ಲಿ ಸಮಂತಾ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟು ಮಿಂಚಿದ್ದಾರೆ. ನಟಿಯಲ್ಲಿ ಈಗ ಚಾರ್ಮ್ ಇಲ್ಲಾ ಎಂದವರಿಗೆ ಸಮಂತಾ ನಯಾ ಲುಕ್‌ನಿಂದ ತಿರುಗೇಟು ನೀಡಿದ್ದಾರೆ.

ಅಂದಹಾಗೆ `ಸಿಟಾಡೆಲ್’ ಸೀರಿಸ್‌ನಲ್ಲಿ ಸಮಂತಾ ನಟ ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಸಮಂತಾ ವರುಣ್ ಜೊತೆ ತೆರೆಹಂಚಿಕೊಳ್ಳುತ್ತಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಈ ಸೀರಿಸ್‌ಗೆ ಫ್ಯಾಮಿಲ್ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಸೋಷಿಯಲ್ ಮೀಡಿಯಾ ಸೆನ್ಸೆಷನಲ್ ಸ್ಟಾರ್ (Social Media Star) ಉರ್ಫಿ ಜಾವೇದ್ (Urfi Javed) ಮತ್ತೆ ಸುದ್ದಿಯಲ್ಲಿದ್ದಾರೆ. ಮತ್ತೆ ನೆಟ್ಟಿಗರ ಬಾಯಿಗೆ ಬಿಸಿ ಬಿಸಿ ಸುದ್ದಿ ಕೊಟ್ಟಿದ್ದಾರೆ. ಜೀನ್ಸ್ ಪ್ಯಾಂಟನ್ನೇ ಟಾಪ್ ಮಾಡಿಕೊಂಡು ಕ್ಯಾಮೆರಾ ಕಣ್ಣಿಗೆ ಉರ್ಫಿ ಪೋಸ್ ನೀಡಿದ್ದಾರೆ. ನಟಿಯ ಹೊಸ ಲುಕ್ ಎಲ್ಲೆಡೆ ವೈರಲ್ ಆಗುತ್ತಿದೆ.

ಗೋಣಿ ಚೀಲ, ಪ್ಲಾಸ್ಟಿಕ್ ಕವರ್, ನೋಟು, ಹೂವುಗಳ ಡ್ರೆಸ್ ಹೀಗೆ ಬಗೆ ಬಗೆಯ ಅವತಾರಗಳ ಮೂಲಕ ಈಗಾಗಲೇ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದಾರೆ. ನಟಿಯ ಅವತಾರಗಳು ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಹಾಗೆಯೇ ಅನೇಕರ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ ಪಬ್ಲಿಕ್ ಸ್ಥಳದಲ್ಲಿ ಜೀನ್ಸ್ ಪ್ಯಾಂಟನ್ನೇ ಟಾಪ್ ಮಾಡಿಕೊಂಡು ಬಂದಿದ್ದಾರೆ.
View this post on Instagram
ಕಾರಿನಿಂದ ಉರ್ಫಿ ಕೆಳಗಿಳಿಯುತ್ತಿದ್ದಂತೆ ನೆರೆದಿದ್ದವರು ಶಾಕ್ ಆದ್ರೂ ಇದೇನಪ್ಪಾ ಉರ್ಫಿ ಜಾವೇದ್ ಕಾಲಿಗೆ ಹಾಕೋ ಜೀನ್ಸ್‌ನ್ನೇ ಟಾಪ್ (Jeans Top) ಮಾಡಿಕೊಂಡಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ರು. ಜೊತೆಗೆ ಇದೆಲ್ಲಾ ಅವತಾರ ಬೇಕಾ ಅಂತಾ ನಟಿಯ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಶುಭಾ ಪೂಂಜಾ ಫ್ಯಾಮಿಲಿ ಜೊತೆ ಮಂಜು ಪಾವಗಡ ಟೆಂಪಲ್ ರನ್
View this post on Instagram
ಇನ್ನೂ ಐ ಲವ್ ಯೂ ಶಾರುಖ್. ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ ಎಂದು ಉರ್ಫಿ ಜಾವೇದ್ ಹೇಳಿಕೆ ನೀಡುವ ಮೂಲಕ ಇತ್ತೀಚಿಗೆ ಸುದ್ದಿಯಾಗಿದ್ರು.
Join our Whatsapp group by clicking the below link
https://chat.whatsapp.com/E6YVEDajTzH06LOh77r25k