Tag: actress

  • ತಮ್ಮನ್ನು ಪೋರ್ನ್ ನಟಿ ಎಂದವರ ವಿರುದ್ಧ ಗರಂ ಆದ ಅನಿತಾ ಭಟ್

    ತಮ್ಮನ್ನು ಪೋರ್ನ್ ನಟಿ ಎಂದವರ ವಿರುದ್ಧ ಗರಂ ಆದ ಅನಿತಾ ಭಟ್

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅನಿತಾ ಭಟ್ (Anita Bhatt), ಈ ವಿಷಯವಾಗಿ ಸಾಕಷ್ಟು ಕಿರಿಕಿರಿಯನ್ನು ಅವರು ಎದುರಿಸಿದ್ದಾರೆ. ಅನಿತಾ ಭಟ್ ಹಾಕಿರುವ ಕಾಸ್ಟ್ಯೂಮ್, ಮಾಡಿರುವ ಪಾತ್ರಗಳನ್ನು ಕೆಲವರು ಹುಡುಕಿ ಹುಡುಕಿ ಇವರನ್ನು ರೇಗಿಸುತ್ತಾರೆ. ಅನಿತಾ ಅವುಗಳಿಗೆ ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತಾರೆ. ಅದರಲ್ಲೂ ಎಡ ಮತ್ತು ಬಲಗಳ ಚರ್ಚೆ ಇವರ ಖಾತೆಯಲ್ಲಿ ಅನೇಕ ಬಾರಿ ಆಗಿದೆ. ಈ ಬಾರಿ ಬೇರೆ ಕಾರಣಕ್ಕಾಗಿ ಅನಿತಾ ಗರಂ ಆಗಿದ್ದಾರೆ.

    ಕೆಲವು ಖಾತೆಗಳಿಂದ ತಮಗೆ ನಿರಂತರವಾಗಿ ಅವಹೇಳನಕಾರಿ ಮಸೇಜ್ ಗಳು ಬರುತ್ತಿವೆ ಎಂದು ಸ್ವತಃ ಅನಿತಾ ಬರೆದುಕೊಂಡಿದ್ದಾರೆ. ಅದರಲ್ಲಿ ಒಬ್ಬ ತಮ್ಮನ್ನು ಅಶ್ಲೀಲ (Porn) ಚಿತ್ರಗಳ ನಟಿ (Actress) ಎಂದು ಕರೆದಿರುವ ಕುರಿತು ಹೇಳಿಕೊಂಡಿದ್ದಾರೆ. ಯಾವ ಅಶ್ಲೀಲ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಬಹಿರಂಗ ಪಡಿಸಿ ಎಂದು ಅನಿತಾ ಸವಾಲು ಹಾಕಿದ್ದಾರೆ. ಇಂತಹ ಬೆದರಿಕೆಗೆ ಜಗ್ಗುವುದಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ತಮ್ಮ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡುವವರು ಹೆಸರಿನ ಸಮೇತ ಟ್ವಿಟರ್ ಖಾತೆಯಿಂದಲೇ ಅನಿತಾ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪೊಲೀಸರು ಕೂಡ ಉತ್ತರಿಸಿದ್ದು, ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಸಲಹೆ ನೀಡಿದ್ದಾರೆ. ಲಿಖಿತ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಕಿರುತೆರೆ ನಟಿ ಶಿಲ್ಪಾ ಅಯ್ಯರ್ (Actress Shilpa Iyer) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ನಟಿ ಶಿಲ್ಪಾ ಅವರು ಎಂಗೇಜ್ ಆಗಿದ್ದು, ಇದೀಗ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

    ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಸೀರಿಯಲ್ ಮೂಲಕ ಮೋಡಿ ಮಾಡಿರುವ ನಟಿ ಶಿಲ್ಪಾ ಅಯ್ಯರ್ ಅವರು ಇತ್ತೀಚಿಗೆ ಸಚಿನ್ ವಿಶ್ವನಾಥ್ (Sachin Vishwanath) ಜೊತೆ ಎಂಗೇಜ್ ಆಗಿದ್ದಾರೆ.

    ಕುಟುಂಬಸ್ಥರು ಸೂಚಿಸಿದ ವರನ ಜೊತೆ ಜನವರಿಯಲ್ಲಿ ಶಿಲ್ಪಾ ಅವರ ನಿಶ್ಚಿತಾರ್ಥ ನೆರವೇರಿದೆ. ಪ್ರೇಮಿಗಳ ದಿನ ಫೆ.14ರಂದು ತಮ್ಮ ಎಂಗೇಜ್‌ಮೆಂಟ್ ವೀಡಿಯೋ ಶೇರ್ ಮಾಡಿಕೊಳ್ಳುವ ಸಿಹಿಸುದ್ದಿ ನೀಡಿದ್ದಾರೆ. ಶಿಲ್ಪಾ- ಸಚಿನ್ ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದೆ.

    ಸಚಿನ್ ವಿಶ್ವನಾಥ್ ಅವರು ಲಾಯರ್ (Advocate) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ಶಿಲ್ಪಾ ಅಯ್ಯರ್- ಸಚಿನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇನ್ನೂ ಶಿಲ್ಪಾ ಅವರ ಎಂಗೇಜ್‌ಮೆಂಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದು, Classy Captures ಅವರ ಕ್ಯಾಮೆರಾ ಕಣ್ಣಲ್ಲಿ ಸುಂದರ ಫೋಟೋಗಳು ಸೆರೆಯಾಗಿದೆ. ಇದನ್ನೂ ಓದಿ: ಮಲಯಾಳಂ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾದ ರಾಜ್ ಬಿ ಶೆಟ್ಟಿ

    ಸುದ್ದಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಶಿಲ್ಪಾ ಅವರು ಇದೀಗ ಕಿರುತೆರೆಯಲ್ಲಿ ನಟಿಯಾಗಿ ಛಾಪು ಮೂಡಿಸುತ್ತಿದ್ದಾರೆ. ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ `ಒಲವಿನ ನಿಲ್ದಾಣ’ ಸೀರಿಯಲ್‌ನಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಸೌತ್ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatia) ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ನಂದಮೂರಿ ಬಾಲಕೃಷ್ಣ (Nandamuri Balakrishna) ಜೊತೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆಯನ್ನೇ (Remuneration) ಮಿಲ್ಕಿ ಬ್ಯೂಟಿ ಡಿಮ್ಯಾಂಡ್ ಮಾಡಿದ್ದಾರೆ.

    ಮಿಲ್ಕಿ ಬ್ಯೂಟಿ ತಮನ್ನಾ ಅವರು 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಇದೀಗ ತಮ್ಮ ಚಾರ್ಮ್ ಕಳೆದುಕೊಳ್ಳದೇ ಬಹುಭಾಷೆಗಳಲ್ಲಿ ನಟಿ ಮಿಂಚ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚ್ತಿರುವ ತಮನ್ನಾಗೆ ಬಾಲಯ್ಯ (Actor Balayya) ಸಿನಿಮಾದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. ಹೀಗಿರುವಾಗ ತಮ್ಮ ಸಂಭಾವನೆಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೇ ದುಬಾರಿ ಸಂಭಾವನೆಯನ್ನೇ ನಟಿ ಬೇಡಿಕೆಯಿಟ್ಟಿದ್ದಾರೆ.

    ಬಾಲಯ್ಯ-ಅನಿಲ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ತಮನ್ನಾಗೆ ಡ್ಯಾನ್ಸ್ ಮಾಡಲು ಬುಲಾವ್ ಬಂದಿದೆ. ನಟಿ ಕೂಡ ಸೊಂಟ ಬಳುಕಿಸಲು ಓಕೆ ಎಂದಿದ್ದಾರೆ. ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ತಮನ್ನಾ 50 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ಈ ವಿಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದನ್ನೂ ಓದಿ: ಪ್ರಾಣಿ ರಕ್ಷಣೆಗೆ ನಟಿ ಸಂಯುಕ್ತಾ ಅಂಬುಲೆನ್ಸ್‌ ಹೆಲ್ಪ್‌ಲೈನ್‌ಗೆ ಚಾಲನೆ

    ನಾಯಕಿಯಾಗಿ ಡಿಮ್ಯಾಂಡ್‌ನಲ್ಲಿರುವ ನಟಿ ಈಗಾಗಲೇ ಸಾಕಷ್ಟು ಚಿತ್ರದಲ್ಲಿನ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೋ, ಗಣಿ, ಜಾಗ್ವಾರ್, ಜೈ ಲವಕುಶ, ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹೆಜ್ಜೆ ಹಾಕಿ ಮಿಂಚಿದ್ದಾರೆ. ಸದ್ಯ ಬಾಲಯ್ಯ ಜೊತೆ ತಮನ್ನಾ ಐಟಂ ಡ್ಯಾನ್ಸ್ ನ್ಯೂಸ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರತಿಭೆ ಇದ್ದಿದ್ರೆ ಮೈ ತೋರಿಸುವ ಅಗತ್ಯವಿರಲಿಲ್ಲ: ದಿಶಾ ಪಟಾನಿಗೆ ನೆಟ್ಟಿಗರ ಕ್ಲಾಸ್

    ಪ್ರತಿಭೆ ಇದ್ದಿದ್ರೆ ಮೈ ತೋರಿಸುವ ಅಗತ್ಯವಿರಲಿಲ್ಲ: ದಿಶಾ ಪಟಾನಿಗೆ ನೆಟ್ಟಿಗರ ಕ್ಲಾಸ್

    ಬಾಲಿವುಡ್ (Bollywood) ನಟಿ ದಿಶಾ ಪಟಾನಿ(Disha Patani) ಸಿನಿಮಾಗಿಂತ ಸದಾ ಹಾಟ್ ಫೋಟೋಶೂಟ್ (Hot Photoshoot) ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ನಟಿಯ ಹೊಸ ಫೋಟೋಶೂಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ ಮಾಡೋದು ಬಿಟ್ಟು ಇದೆಲ್ಲಾ ನಿಮಗೆ ಬೇಕಾ ಅಂತಾ ದಿಶಾಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಎಂ.ಎಸ್ ಧೋನಿ, ಭಾಘಿ 2, ಭಾಘಿ 3, ಸಲ್ಮಾನ್ ಖಾನ್ (Salman Khan) ಜೊತೆ ರಾಧೆ (Radhe) ಹೀಗೆ ಸಾಕಷ್ಟು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ದಿಶಾ ಪಟಾನಿಗೆ ತಮ್ಮ ಸಿನಿಮಾಗಳಿಂದ ಚಿತ್ರರಂಗದಲ್ಲಿ ಬಿಗ್ ಬ್ರೇಕ್ ಸಿಗುತ್ತಿಲ್ಲ. ಸಿನಿಮಾ ಜೊತೆ ಸದಾ ಹಾಟ್ ಫೋಟೋಶೂಟ್ ಮೂಲಕ ಗಮನ ಸೆಳೆಯುವ ನಟಿ ದಿಶಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇತ್ತೀಚಿನ ಫೋಟೋಶೂಟ್‌ವೊಂದರಲ್ಲಿ ನೇರಳೆ ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ದಿಶಾ ಮಿಂಚಿದ್ದಾರೆ. ಮಾದಕ ನೋಟದಿಂದ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಫೋಟೋದಲ್ಲಿ ಗಮನ ಸೆಳೆದಿದ್ದಾರೆ. ಆದರೆ ನಟಿಯ ಹೊಸ ಲುಕ್‌ಗೆ ನೆಗೆಟಿವ್ ಕಾಮೆಂಟ್ ಬಂದಿದೆ. ಇದನ್ನೂ ಓದಿ: ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?

    ಫೋಟೋಶೂಟ್ ಎಲ್ಲಾ ಬಿಟ್ಟು ನಿಮ್ಮ ಸಿನಿಮಾಗಳತ್ತ ಗಮನ ಕೊಡಿ. ಟ್ಯಾಲೆಂಟ್ ಇದ್ದಿದ್ರೆ ಈ ತರಹ ಮೈ ತೋರಿಸುವ ಅಗತ್ಯವಿರಲ್ಲ ಎಂದು ದಿಶಾ ಪಟಾನಿಗೆ ಖಡಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇನ್ನೂ ದಿಶಾ ಪಟಾನಿ ಮುಂಬರುವ ಸಿನಿಮಾಗಳು, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಯೋಧ (Yodha), ಪ್ರಭಾಸ್ ಜೊತೆ `ಪ್ರಾಜೆಕ್ಟ್ ಕೆ’ (Project k) ಸಿನಿಮಾಗಳು ರೆಡಿಯಿದೆ. ಈ ಚಿತ್ರವಾದರೂ ತೆರೆಗೆ ಮೇಲೆ ಮೋಡಿ ಮಾಡುತ್ತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?

    ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?

    ಸೌತ್ ನಟಿ ಸಮಂತಾ (Samantha) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇದೀಗ ಸಮಂತಾರಂತೆಯೇ ಕಾಣುವ ಮಾಲಿವುಡ್ (Mollywood)  ನಟಿ ಸಂಯುಕ್ತಾಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನೆಟ್ಟಿಗರು ಸಮಂತಾಗೆ ಹೋಲಿಸಿ ಸಂಯುಕ್ತಾ ಮೆನನ್‌ (Samyuktha Menon) ಅವರನ್ನ  ಹಾಡಿಹೊಗಳಿದ್ದಾರೆ. ಈ ಬಗ್ಗೆ ನಟಿ ಕೂಡ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಮದುವೆ ಡೇಟ್ ಫಿಕ್ಸ್

    ಕನ್ನಡ, ಮಲಯಾಳಂ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿರುವ ನಟಿ ಸಂಯುಕ್ತಾ ಮೆನನ್ ಸದ್ಯ ಧನುಷ್ (Dhanush) ಜೊತೆಗಿನ `ವಾತಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂದರ್ಶನದ ವೇಳೆ, ನೆಟ್ಟಿಗರು ಸಂಯುಕ್ತಾರನ್ನ ಸಮಂತಾಳಿಗೆ ಹೋಲಿಸಿರುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ವಿಚಾರವಾಗಿ ನಟಿ ಮಾತನಾಡಿದ್ದಾರೆ.

     

    View this post on Instagram

     

    A post shared by Samyuktha (@iamsamyuktha_)

    ನಾನು ಸಮಂತಾ ತರಹ ಕಾಣುತ್ತೇನೆ ಎಂದು ಕೆಲವರು ಹೇಳುತ್ತಾರೆ. ಆದರೆ ಸಮಂತಾರಂತೆಯೇ ನಟಿಸುತ್ತೀರಿ ಎಂದು ಯಾರಾದರೂ ಹೇಳಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು ಎಂದು ಸಂಯುಕ್ತಾ ಮೆನನ್ ಪ್ರತಿಕ್ರಿಯೆ ನೀಡಿದ್ದಾರೆ.

     

    View this post on Instagram

     

    A post shared by Samyuktha (@iamsamyuktha_)

    ಭೀಮ್ಲಾ ನಾಯಕ್, ಕಡುವ, ಕಲ್ಕಿ, ಕನ್ನಡದ ಗಾಳಿಪಟ 2 (Galipata 2) ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಂಯುಕ್ತಾ ನಟಿಸಿದ್ದಾರೆ. `ಗಾಳಿಪಟ 2’ನಲ್ಲಿ ದಿಗಂತ್‌ಗೆ (Diganth) ನಾಯಕಿಯಾಗಿ ಸಂಯುಕ್ತಾ ಗಮನ ಸೆಳೆದಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಸ್ಟಿಂಗ್‌ ಕೌಚ್‌ ಅನುಭವ ಹಂಚಿಕೊಂಡ ನಟಿ ಚಿತ್ರಾಲ್

    ಕಾಸ್ಟಿಂಗ್‌ ಕೌಚ್‌ ಅನುಭವ ಹಂಚಿಕೊಂಡ ನಟಿ ಚಿತ್ರಾಲ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೀರೋಯಿನ್‌ ಆಗಬೇಕು ಎನ್ನುವುದು ನನ್ನ Childhood Dream

    ಹೀರೋಯಿನ್‌ ಆಗಬೇಕು ಎನ್ನುವುದು ನನ್ನ Childhood Dream

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದುನಿಯಾ ವಿಜಯ್‌ ಡೈನಾಮಿಕ್‌ & ಡ್ಯಾಶಿಂಗ್‌ ಸ್ಟಾರ್‌ ಎಂದು ಹಾಡಿ ಹೊಗಳಿದ ನಟಿ ರಿಷಿಕಾ

    ದುನಿಯಾ ವಿಜಯ್‌ ಡೈನಾಮಿಕ್‌ & ಡ್ಯಾಶಿಂಗ್‌ ಸ್ಟಾರ್‌ ಎಂದು ಹಾಡಿ ಹೊಗಳಿದ ನಟಿ ರಿಷಿಕಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ ನಟಿ ಸಮಂತಾ

    ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ ನಟಿ ಸಮಂತಾ

    ಸೌತ್ ಬ್ಯೂಟಿ ಸಮಂತಾ (Samantha) ಅವರು ಮೈಯೋಸಿಟಿಸ್ (Myosities) ಎಂಬ ಕಾಯಿಲೆಯ ಜೊತೆ ಹೋರಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ಬ್ಯುಸಿಯ ನಡುವೆ ತಮ್ಮ ಹೆಲ್ತ್ ಬಗ್ಗೆ ನಟಿ ಅಪ್‌ಡೇಟ್ ನೀಡಿದ್ದಾರೆ. ಈ ಕುರಿತ ಪೋಸ್ಟ್‌ವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    `ಯಶೋದ’ (Yashoda) ಸಿನಿಮಾ ರಿಲೀಸ್ ಸಮಯದಲ್ಲಿ ಮೈಯೋಸಿಟಿಸ್ ಕಾಯಿಲೆಗೆ ನಟಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಪ್ರತಿದಿನವೂ ಈ ಅಪರೂಪದ ಕಾಯಿಲೆಯ ಜೊತೆ ಸ್ಯಾಮ್ ಹೋರಾಡುತ್ತಿದ್ದಾರೆ. ಹೀಗಿರುವಾಗ ಇತ್ತೀಚಿನ `ಶಾಕುಂತಲಂ’ ಸಿನಿಮಾ ಈವೆಂಟ್‌ನಲ್ಲಿ ಸಮಂತಾ ಕಣ್ಣೀರಿಟ್ಟಿದ್ದರು. ಇಷ್ಟೇಲ್ಲಾ ಸಂಕಷ್ಟದ ನಡುವೆಯೂ ಸಿನಿಮಾ ಮೇಲಿನ ಪ್ರೀತಿ ಸಮಂತಾಗೆ ಕಮ್ಮಿಯಾಗಿಲ್ಲ.

    ಶೂಟಿಂಗ್‌ಗಳ ನಡುವೆ ಸಮಂತಾ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. IVIG ಥೆರಪಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸಮಂತಾ, ನಿರ್ದೇಶಕ ರಾಹುಲ್ ಮತ್ತು ನಂದಿನಿ ರೆಡ್ಡಿ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದರು. ಫೋಟೋ ಕೂಡ ಶೇರ್ ಮಾಡಿದ್ದಾರೆ. ʻತಿಂಗಳ IVIG ಪಾರ್ಟಿ, ಹೊಸದುʼ ಎಂದು ನಟಿ ಹೇಳಿದ್ದಾರೆ. IVIG ಎಂದರೆ ಥೆರಪಿಯಾಗಿದೆ. ದುರ್ಬಲಗೊಂಡಿರುವ ವ್ಯಕ್ತಿ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ. ಸದ್ಯ ಸಮಂತಾ ಕೂಡ ಇದೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಗಟ್ಟಿಮೇಳ’ ನಟಿ ಪ್ರಿಯಾ- ಸಿದ್ದು ಮೂಲಿಮನಿ

    ಈ ಚಿಕಿತ್ಸೆಯ ಪ್ರಕ್ರಿಯೆ ಸುಮಾರು 2 ರಿಂದ 4 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಮತ್ತು ಚಿಕಿತ್ಸೆಯ ಸಮಯದಲ್ಲಿ, ತಯಾರಾದ ಇಮ್ಯುನೊಗ್ಲಾಬ್ಯುಲಿನ್ ಅನ್ನು ರಕ್ತನಾಳಗಳಲ್ಲಿ ತುಂಬಿಸಲಾಗುತ್ತದೆ. ಸಮಂತಾ ಫೋಟೋವನ್ನು ಶೇರ್ ಮಾಡಿದ್ದಾರೆ. ಡ್ರಿಪ್ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಆದರೆ ಅವರ ಮುಖ ಕಾಣುವುದಿಲ್ಲ. ಸಮಂತಾ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಧಾ ಕಲ್ಯಾಣ ಧಾರಾವಾಹಿ ಬಗ್ಗೆ ಚಿತ್ರಾಲ್‌ ಮಾತು

    ರಾಧಾ ಕಲ್ಯಾಣ ಧಾರಾವಾಹಿ ಬಗ್ಗೆ ಚಿತ್ರಾಲ್‌ ಮಾತು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k