Tag: actress Vijayashanti

  • ಗಡಿ ಭಾಗದ ಮತಕ್ಕಾಗಿ ತೆಲುಗು ನಟಿ ಮೊರೆ ಹೋದ ಖರ್ಗೆ

    ಗಡಿ ಭಾಗದ ಮತಕ್ಕಾಗಿ ತೆಲುಗು ನಟಿ ಮೊರೆ ಹೋದ ಖರ್ಗೆ

    ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆ ಕಲಬುರಗಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಪರ ಪ್ರಚಾರ ಮಾಡಲು ತೆಲುಗು ಭಾಷೆಯ ಖ್ಯಾತ ನಟಿಯೊಬ್ಬರ ಮೊರೆ ಹೋಗಿದ್ದಾರೆ.

    ಲೋಕಸಮರಕ್ಕೆ ಕಲಬುರಗಿ ಕ್ಷೇತ್ರದ ಚುನಾವಣಾ ಕಣ ದಿನ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳು ಗೆಲುವಿಗಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಕರ್ನಾಟಕ-ಆಂದ್ರ ಗಡಿ ಭಾಗದ ಮತಗಳ ಮೇಲೆ ಕಣ್ಣಿಟ್ಟಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಪ್ಲಾನ್ ಮಾಡಿದ್ದಾರೆ. ಗಡಿ ಭಾಗದ ಜನರ ವಿಶ್ವಾಸ ಹಾಗೂ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಟಾಲಿವುಡ್‍ನ ಖ್ಯಾತ ನಟಿ ವಿಜಯಶಾಂತಿ ಅವರನ್ನು ತಮ್ಮ ಪರ ಪ್ರಚಾರಕ್ಕೆ ಕರೆತರಲಿದ್ದಾರೆ. ಇದನ್ನೂ ಓದಿ:ಮೋದಿ ಭಯೋತ್ಪಾದಕನಂತೆ ಕಾಣ್ತಾರೆ – ಜನ ಪ್ರಧಾನಿಯನ್ನ ಕಂಡ್ರೆ ಭಯಪಡ್ತಿದ್ದಾರೆ: ಕಾಂಗ್ರೆಸ್ ಸ್ಟಾರ್ ನಾಯಕಿ

    ಹೌದು, ನಟಿ ವಿಜಯಶಾಂತಿ ಅವರು ಏಪ್ರಿಲ್ 19ರಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಾಲ್ಕು ಕಡೆಯಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ ಖರ್ಗೆ ಪರ ಭರ್ಜರಿ ಪ್ರಚಾರ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.