Tag: Actress Vijayalakshmi

  • ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ

    ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮಿ ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ ಎಂದು ಹೇಳಿದ್ದಾರೆ.

    ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ವಿಜಯಲಕ್ಷ್ಮಿ, ಅಮ್ಮ ತೀರಿಹೋದ ತಕ್ಷಣ ಏನು ತೋಚಲಿಲ್ಲ, ಭಾಮಾ. ಹರೀಶ್ ನನಗೆ ಸಹಾಯ ಮಾಡಿದ್ದಾರೆ. ನನಗೆ ಅಳೋದು ಬಿಟ್ಟು ಬೇರೇನೂ ಗೊತ್ತಾಗಲಿಲ್ಲ. ಸಡನ್ನಾಗಿ ನನ್ನ ಅಕೌಂಟ್ ಬಗ್ಗೆ ಅನುಮಾನ ಬಂದುಬಿಡ್ತು. ಕಲಾವಿದರು ಎಲ್ಲ ಒಂದೇ ಕುಟುಂಬ. ಶಿವಣ್ಣ, ಯಶ್ ಹತ್ರನೂ ಮಾತನಾಡಿದ್ದೀನಿ, ಜಗದೀಶ್ ಮಾತನಾಡಿದ್ದು ಸ್ವಲ್ಪ ತಪ್ಪಾಯ್ತು. ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ, ಎಲ್ಲದಕ್ಕೂ ನಾವು ಭಿಕ್ಷೆ ಬೇಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ

    ಭಿಕ್ಷೆ ಅಂತ ಆದ್ರೂ ತಿಳಿದುಕೊಂಡು ಸಹಾಯ ಮಾಡಿ ಎಂದಿದ್ದ ವಿಜಯಲಕ್ಷ್ಮಿ ಅವರ ಮನವಿಗೆ ಸ್ಪಂದಿಸಿದ ಜನ 1 ರೂಪಾಯಿಯಿಂದ ಸಾವಿರದವರೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಒಟ್ಟು 6,92,350 ರೂಪಾಯಿ ಸಂದಾಯವಾಗಿದೆ. ಇದನ್ನೂ ಓದಿ:  ನಟಿ ವಿಜಯಲಕ್ಷ್ಮಿ ತಾಯಿ ನಿಧನ

    ವಿಜಯಲಕ್ಷ್ಮಿ ನೆರವಿಗೆ ಕನ್ನಡ ಚಿತ್ರರಂಗ ಬಂದಿಲ್ಲ ಎಂಬ ಲಾಯರ್ ಜಗದೀಶ್ ಹೇಳಿಕೆ ಹಿನ್ನಲೆ, ಲಾಯರ್ ಜಗದೀಶ್ ಬಗ್ಗೆ ನಿರ್ಮಾಪಕ ಸುರೇಶ್ ಕೆಂಡಾಮಂಡಲವಾಗಿದ್ದಾರೆ. ಚಿತ್ರರಂಗದ ಬಗ್ಗೆ ಮಾತಾಡೋಕೆ ಈ ಜಗದೀಶ್ ಯಾರು? ನಿಮ್ಮ ಕೇಸ್ ಮಾಡ್ಕೊಂಡು ಸುಮ್ಮನೆ ಇರಿ. ಸಿನಿಮಾ ಇಂಡಸ್ಟ್ರಿಯ ಮಾತಾಡೋ ಹಕ್ಕು ನಿಮಗಿಲ್ಲ. ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಹುಷಾರ್. ಚಿತ್ರರಂಗ ಹೇಗೆ ಬೆಳೆದು ಬಂದಿದೆ ಅಂತ ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

  • ಕರ್ನಾಟಕದವಳೆಂದು ಹಿಂಸೆ ನೀಡಿದ್ರು- ಇದೇ ಕೊನೆಯ ವಿಡಿಯೋ ಎಂದ ವಿಜಯಲಕ್ಷ್ಮಿ

    ಕರ್ನಾಟಕದವಳೆಂದು ಹಿಂಸೆ ನೀಡಿದ್ರು- ಇದೇ ಕೊನೆಯ ವಿಡಿಯೋ ಎಂದ ವಿಜಯಲಕ್ಷ್ಮಿ

    – ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ

    ಚೆನ್ನೈ: ನಟಿ ವಿಜಯಲಕ್ಷ್ಮಿ ಆಘಾತಕಾರಿ ಪೋಸ್ಟ್ ಮಾಡಿದ್ದು, ನನ್ನ ಸಾವಿಗೆ ನಟ ರಾಜಕಾರಣಿ ನಟ, ರಾಜಕಾರಣಿ ಸೀಮನ್ ಅವರೇ ಕಾರಣ. ನಾನು ಈಗಾಗಲೇ ಬಿಪಿ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಫೇಸ್ಬುಕ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮಿ ಫೇಸ್ಬುಕ್ ವಿಡಿಯೋ ಅಪ್‍ಲೋಡ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾರೆ. ನನ್ನ ಸಾವಿಗೆ ನಟ, ನಿರ್ದೇಶಕ, ರಾಜಕಾರಣಿ ಸೀಮನ್ ಅವರೇ ಕಾರಣ ಎಂದು ವಿಜಯಲಕ್ಷ್ಮಿ ನೇರ ಆರೋಪ ಮಾಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರೆಗಳನ್ನು ನುಂಗಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

    ವಿಡಿಯೋದಲ್ಲಿ ಮಾತನಾಡಿರುವ ಅವರು, ಕರ್ನಾಟಕದ ನನ್ನ ಅಭಿಮಾನಿಗಳಿಗೆ ಹೇಳುವುದೇನೆಂದರೆ, ನಾನು ಬಹಳ ಕಷ್ಟಪಟ್ಟಿದ್ದೇನೆ. ತಮಿಳಿನಲ್ಲಿ ಸೀಮನ್ ಅನ್ನುವ ಓರ್ವ ನಟ ನನಗೆ ಬಹಳ ಹಿಂಸೆ ನೀಡಿದ್ದಾರೆ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಒಂದು ಕಾರಣಕ್ಕೆ ತುಂಬಾ ಕಾಟ ಕೊಟ್ಟಿದ್ದಾರೆ. ನಾನು ವೇಶ್ಯಾವೃತ್ತಿ ಮಾಡುತ್ತಿದ್ದೇನೆ ಎಂದೆಲ್ಲ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಇವರು ಬದುಕುವುದಕ್ಕೆ ಬಿಡುತ್ತಿಲ್ಲ ಎಂದು ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ ವಿಜಯಲಕ್ಷ್ಮಿ.

    ನಾನೀಗ ಒಂದಷ್ಟು ಬಿಪಿ ಮಾತ್ರೆಗಳನ್ನು ನುಂಗಿದ್ದೇನೆ. ಇನ್ನು ಸ್ವಲ್ಪ ಹೊತ್ತಿಗೆ ನನ್ನ ಬಿಪಿ ಕಮ್ಮಿ ಆಗಲಿದೆ. ನನ್ನ ಸಾವಿಗೆ ಕಾರಣರಾದ ಈ ಸೀಮನ್ ಮತ್ತು ಹರಿ ನಾಡರ್ ಅವರನ್ನು ಯಾವುದೇ ಕಾರಣಕ್ಕೂ ಬಿಡಲೇಬೇಡಿ. ‘ನಾಮ್ ತಮಿಳರ್ ಕಚ್ಚಿ’ ಎಂಬ ಪಕ್ಷವನ್ನು ಸೀಮನ್ ಕಟ್ಟಿದ್ದಾನೆ. ಕನ್ನಡಿಗರಿಗೆ ಆತ ಬಹಳಷ್ಟು ಕಾಟ ಕೊಟ್ಟಿದ್ದಾನೆ. ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ನನ್ನ ಮಾತೃಭಾಷೆ ತಮಿಳು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ತುಂಬಾ ತೊಂದರೆ ನೀಡಿದ್ದಾನೆ’ ಎಂದಿದ್ದಾರೆ ವಿಜಯಲಕ್ಷ್ಮಿ.

    ಇದು ನನ್ನ ಕಡೆಯ ವಿಡಿಯೋ. ಸೀಮನ್ ತಪ್ಪಿಸಿಕೊಳ್ಳಲು ಯಾರೂ ಬಿಡಬೇಡಿ. ನಾನು ತುಂಬ ಸಮಯ ಬದುಕಬೇಕು ಎಂದು ಆಸೆ ಪಟ್ಟೆ, ಅದು ಸಾಧ್ಯವಾಗಲಿಲ್ಲ. ಸೀಮನ್ ಮತ್ತು ಹರಿ ನಾಡರ್ ನನಗೆ ತುಂಬಾ ತೊಂದರೆ ನೀಡಿದ್ದಾರೆ. ಅವರಿಗೆ ತಕ್ಕ ಶಿಕ್ಷೆ ಆಗಲಿ. ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ. ನಾನು ಇನ್ನೂ ನೆನಪಾಗಿ ಉಳಿಯಲಿದ್ದೇನೆ. ನಿಮಗೆ ಏನಾದರೂ ತೊಂದರೆ ನೀಡಿದ್ದರೆ ನನ್ನನ್ನು ಕ್ಷಮಿಸಿ. ನನ್ನ ಸಾವು ಎಲ್ಲರ ಕಣ್ಣು ತೆರೆಸಲಿ. ನಾನು ಯಾರಿಗೂ ಗುಲಾಮಳಾಗಿ ಇರುವುದಿಲ್ಲ ಎಂದು ಅವರು ವಿಡಿಯೋದ ಕೊನೆಯಲ್ಲಿ ಹೇಳಿದ್ದಾರೆ. ಸದ್ಯ ಅಸ್ವಸ್ಥರಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    https://www.youtube.com/watch?v=vzQ4CtE6B8I

  • ‘ನಮ್ಮನ್ನು ಬದುಕಲು ಬಿಡಿ’- ನಿರ್ದೇಶಕನ ಜೊತೆ ಓಡಿಹೋಗಿದ್ದ ನಟಿ ರಾಯಚೂರಿನಲ್ಲಿ ಪ್ರತ್ಯಕ್ಷ

    ‘ನಮ್ಮನ್ನು ಬದುಕಲು ಬಿಡಿ’- ನಿರ್ದೇಶಕನ ಜೊತೆ ಓಡಿಹೋಗಿದ್ದ ನಟಿ ರಾಯಚೂರಿನಲ್ಲಿ ಪ್ರತ್ಯಕ್ಷ

    ರಾಯಚೂರು: ನಿರ್ಮಾಪಕರಿಂದ ಹಣ ಪಡೆದು ಪರಾರಿಯಾಗಿದ್ದಾರೆ ಎನ್ನಲಾಗಿದ್ದ ತುಂಗಭದ್ರಾ ಸಿನಿಮಾ ನಟಿ ವಿಜಯಲಕ್ಷ್ಮಿ ರಾಯಚೂರಿನಲ್ಲಿ ಗಂಡನ ಜೊತೆ ಪ್ರತ್ಯಕ್ಷವಾಗಿದ್ದಾರೆ. ನಿರ್ದೇಶಕ ಆಂಜಿನಯ್ಯ ಅವರನ್ನು ಲವ್ ಮಾಡಿ ಮದುವೆ ಆಗಿದ್ದೇನೆ. ನಾನು ಯಾವ ನಿರ್ಮಾಪಕರ ಬಳಿಯೂ ಹಣ ಪಡೆದು ಪರಾರಿಯಾಗಿಲ್ಲ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ.

    ನಾನು ತುಂಗಭದ್ರಾ ಸಿನಿಮಾದಲ್ಲಿ ನಟಿಸುವಾಗ ಲವ್ ಮಾಡಿ ಮದುವೆ ಆಗಿದ್ದೇನೆ. ನನ್ನನ್ನು ಯಾರೂ ಕರೆದುಕೊಂಡು ಬಂದಿಲ್ಲ. ನಾನು ಪ್ರೀತಿಸಿ ಮದುವೆ ಆಗಿದ್ದೇನೆ. ನಮ್ಮ ಅಜ್ಜಿ ಸಾವನ್ನಪ್ಪಿಲ್ಲ, ನಮ್ಮ ತಾಯಿ ನಾಟಕ ಮಾಡುತ್ತಿದ್ದಾರೆ. ನಾವು ಗಂಗಾವತಿಯಲ್ಲಿ ಮದುವೆ ಆಗಿದ್ದೇವೆ. ನನ್ನ ತಾಯಿ ಸವಿತಾ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ನನ್ನ ತಾಯಿ ಮೊದಲು ಹೀಗೆ ವಿಷ ಸೇವಿಸಿ ನಾಟಕ ಮಾಡಿದ್ದರು. ಈಗಲೂ ಅವರಿಗೆ ನಾನು ಮದುವೆ ಆಗಿದ್ದು ಇಷ್ಟವಿಲ್ಲ. ಹೀಗಾಗಿ ನಾಟಕ ಮಾಡುತ್ತಿದ್ದಾರೆ. ನನ್ನ ತಂದೆ-ತಾಯಿ ಬೇರೆಯಾಗಿ 6 ವರ್ಷಗಳು ಕಳೆದಿದೆ. ನನ್ನ ತಾಯಿ ಮತ್ತು ನನ್ನ ಸಾಕು ತಂದೆ ನನಗೆ ಕಿರುಕುಳ ನೀಡಿದ್ದಾರೆ. ನನಗೆ ಚಿತ್ರ-ವಿಚಿತ್ರ ಹಿಂಸೆ ನೀಡಿದ್ದಾರೆ. ಕೈಗೆ, ತೊಡೆಗೆ ಮತ್ತು ಬೆನ್ನಿಗೆ ನನ್ನ ಸಾಕು ತಂದೆ ಹಲ್ಲೆ ಮಾಡಿದ್ದಾರೆ. ನಾನು ಮದುವೆ ಆಗಿರುವ ವಿಷಯ ತಿಳಿದು ನನ್ನ ಗಂಡನನ್ನು ಸಾಯಿಸಲು ಪ್ಲಾನ್ ಮಾಡಿದ್ದರು ಎಂದು ವಿಜಯಲಕ್ಷ್ಮಿ ದೂರಿದ್ದಾರೆ.

    ಮನೆಯಲ್ಲಿ ಖಾರದ ಪುಡಿ, ಮಚ್ಚು ಮತ್ತು ಬಾಟಲ್‍ಗಳ ಸಮೇತ ರೆಡಿಯಾಗಿದ್ದರು. ಆದರೆ ನಾನು ನನ್ನ ಗಂಡನನ್ನು ಬಿಟ್ಟು ಅಮ್ಮನಿಗೆ ಕಾಯಿಲೆ ಎಂದು ಒಬ್ಬಳೇ ಹೋಗಿದ್ದೆ. ಆಗ ನನ್ನ ತಾಯಿ ನಾಟಕ ಮಾಡಿದ್ದರು. ಈಗಲೂ ಅಮ್ಮ ಮತ್ತು ಮಹಾದೇವ ಸ್ವಾಮಿ ನಾಟಕ ಮಾಡುತ್ತಿದ್ದಾರೆ ಅಂತ ವಿಜಯಲಕ್ಷ್ಮಿ ಕಿಡಿಕಾರಿದರು.

    ನಾವು ಬರುವಾಗ ಯಾರ ಬಳಿಯೂ ಹಣ ಆಗಲಿ, ಚಿನ್ನವಾಗಲಿ, ಒಡವೆಯಾಗಲಿ ಪಡೆದು ತಂದಿಲ್ಲ. ನಮ್ಮ ಮೇಲೆ ಸಾಕು ತಂದೆ ಮಾಡುತ್ತಿರುವ ಎಲ್ಲಾ ಆರೋಪ ಸುಳ್ಳು. ನನ್ನ ತಾಯಿಗೆ ಹಾಗೂ ಸಾಕು ತಂದೆಗೆ ಬರೀ ದುಡ್ಡು ಬೇಕು. ನಾನು ಪ್ರೀತಿ ಮಾಡಿ ಮದುವೆ ಆಗಿದ್ದೇನೆ. ನಾನು ಅವರು ಹೇಳಿದಂತೆ ಕೇಳಿಲ್ಲ. ಅದಕ್ಕೆ ನನ್ನ ಗಂಡನ ಮನೆಗೂ ಬಂದು ನಮಗೆ ಕಿರುಕುಳ ನೀಡುತ್ತಿದ್ದಾರೆ.

    ರಾಯಚೂರಿನ ಸಿರವಾರದ ಹಳ್ಳಿಹೊಸುರು ನನ್ನ ಗಂಡನ ಮನೆ. ಹೀಗಾಗಿ ರಾಯಚೂರು ಎಸ್‍ಪಿ ಡಾ. ಸಿ.ಬಿ ವೇದಮೂರ್ತಿಯವರನ್ನು ಭೇಟಿ ಮಾಡಿ ರಕ್ಷಣೆಗಾಗಿ ಮನವಿ ಮಾಡಿದ್ದೇವೆ. ನಮ್ಮನ್ನು ಬದುಕಲು ಬಿಡಿ, ನಾವು ಮುಂದಿನ ದಿನಗಳಲ್ಲಿ ಸಿನಿಮಾ ಮಾಡುತ್ತೇವೆ ಅಂತ ವಿಜಯಲಕ್ಷ್ಮಿ ಹಾಗೂ ಆಂಜಿನಯ್ಯ ಮನವಿ ಮಾಡಿದ್ದಾರೆ.

  • ನಟಿ ವಿಜಯಲಕ್ಷ್ಮಿರನ್ನ ಭೇಟಿ ಮಾಡಿ ಸಹಾಯಕ್ಕೆ ಮುಂದಾದ ಕಾರುಣ್ಯ ರಾಮ್

    ನಟಿ ವಿಜಯಲಕ್ಷ್ಮಿರನ್ನ ಭೇಟಿ ಮಾಡಿ ಸಹಾಯಕ್ಕೆ ಮುಂದಾದ ಕಾರುಣ್ಯ ರಾಮ್

    ಬೆಂಗಳೂರು: ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ ಅವರನ್ನು ಇಂದು ನಟಿ ಕಾರುಣ್ಯ ರಾಮ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

    ಆಸ್ಪತ್ರೆಗೆ ಭೇಟಿ ನೀಡಿದ್ದ ಕಾರುಣ್ಯ ರಾಮ್, ವಿಜಯ ಲಕ್ಷ್ಮಿ ಅವರಿಗೆ ಧೈರ್ಯ ತುಂಬಿ ಸಹಾಯ ಮಾಡಿದ್ದಾರೆ. ಸದ್ಯ ಕಾರುಣ್ಯ ಕನ್ನಡ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಡಾನ್ಸ್ ಶೋದಲ್ಲಿ ಭಾಗವಹಿಸುತ್ತಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಪ ಮಟ್ಟಿಗೆ ಚೇತರಿಸಿಕೊಂಡಿರುವ ವಿಜಯಲಕ್ಷ್ಮಿ ಅವರು ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ಅವರನ್ನು ನೆನೆದು ಕಾಣಿರಿಟ್ಟಿದ್ದರು. ಅವರಿಲ್ಲದೆ ನಾನು ಅನಾಥೆಯಾಗಿದ್ದು, ಇಂಡಸ್ಟ್ರಿಯಲ್ಲಿ ಸುದೀಪ್ ಸರ್ ಬಿಟ್ಟು ಬೇರೆ ಯಾರಿಗೂ ಕರುಣೆ ಬಂದಿಲ್ಲ. ನಾನು ಏನ್ ತಪ್ಪು ಮಾಡಿದ್ದೀನಿ, ಯಾಕೆ ಇಷ್ಟು ಶಿಕ್ಷೆ ಕೊಡುತ್ತಿದ್ದೀರಿ ಎಂದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದರು.

    ನಾನಿರುವ ಪರಿಸ್ಥಿತಿಯಲ್ಲಿ ಶೀಘ್ರವೇ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ನನ್ನ ಬಳಿ ಇರುವುದಕ್ಕೆ ಮನೆ ಇಲ್ಲ. ಬಾಡಿಗೆ ಮನೆಗೆ ಹೋಗಲು ಅಡ್ವಾನ್ಸ್ ಕೊಡುವುದಕ್ಕೂ ಹಣ ಇಲ್ಲ. ಮನೆ ಇಲ್ಲದ ಕಾರಣ ನಾನು ಮನೆ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆರೋಗ್ಯ ಹದಗೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಕಿಚ್ಚ

    ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಕಿಚ್ಚ

    ಬೆಂಗಳೂರು: ನಟಿ ವಿಜಯಲಕ್ಷ್ಮಿಯವರು ಅನಾರೋಗ್ಯದ ವಿಷಯ ತಿಳಿದು ನಟ ಕಿಚ್ಚ ಸುದೀಪ್ ಅವರು 1 ಲಕ್ಷ ರೂಪಾಯಿಗಳನ್ನು ನೀಡಿ ಸಹಾಯ ಹಸ್ತ ಚಾಚಿದ್ದಾರೆ.

    ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿಗಳಾದ ಬಾ.ಮ.ಹರೀಶ್ ಅವರು ಮಾಹಿತಿ ನೀಡಿದ್ದು, ವಿಜಯ ಲಕ್ಷ್ಮಿ ಅವರಿಗೆ ಸಹಾಯ ಮಾಡಿದ ಸುದೀಪ್ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.

    ವಿಜಯಲಕ್ಷ್ಮಿ ಅವರು ತೀವ್ರ ಜ್ವರ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯ ಖರ್ಚು ಬರಿಸುವ ಹಣವಿಲ್ಲದೆ ವಿಜಯಲಕ್ಷ್ಮಿ ಅವರ ಸಹೋದರಿ ಚಿತ್ರರಂಗದ ಸಹಾಯ ಕೋರಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯಿಂದ ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಆಗಮಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು.

    ವಿಜಯಲಕ್ಷ್ಮಿಯವರ ಆರೋಗ್ಯ ಸಹಾಯವಲ್ಲದೇ ಚೇತರಿಸಿಕೊಂಡ ಬಳಿಕ ಮತ್ತೆ ಬಣ್ಣ ಹಚ್ಚಬೇಕೆಂಬ ಅವರ ಆಸೆಯನ್ನ ಈಡೇರಿಸಲು ಫಿಲ್ಮ್ ಚೇಂಬರ್ ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ನೀಡಿದ್ದರು. ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದ ವಿಜಯಲಕ್ಷ್ಮಿ ಅವರು ಸಾಹಸಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೇರಿದಂತೆ ಅನೇಕ ನಟರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv