Tag: actress Shubha Poonja

  • 20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ

    20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶೂಭಾ ಪೂಂಜಾ ವಿಶೇಷವಾದ ಗೆಟಪ್‍ನಲ್ಲಿ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಇದೀಗ ಅವರು ತೊಟ್ಟಿರುವ ಲಂಬಾಣಿ ಉಡುಗೆಯ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

    ಬಿಗ್‍ಬಾಸ್ ನಂತರ ಸಿನಿಮಾ ಕೆಲಸಗಳಿಗೆ ಮರಳಿರುವ ನಟಿ ಶುಭಾ ಪೂಂಜಾ ‘ಅಂಬುಜ’ ಸಿನಿಮಾ ಮೂಲಕವಾಗಿ ಮತ್ತೆ ಬಿಗ್ ಸ್ಕ್ರೀನ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಥೇಟ್ ಲಂಬಾಣಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಕಾಸ್ಟ್ಯೂಮ್ ಕೂಡ ಅತ್ಯಂತ ವಿಶೇಷವಾಗಿದೆ. ಶ್ರೀನಿ ಹನುಮಂತರಾಜು ನಿರ್ದೇಶನ ಮಾಡುತ್ತಿರುವ ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಶುಭಾ ಎರಡು ಶೇಡ್‍ನ ಪಾತ್ರದಲ್ಲಿದ್ದಾರೆ. ಅವರನ್ನು ಲಂಬಾಣಿ ಹುಡುಗಿಯಾಗಿ ಮತ್ತು ಪತ್ರಕರ್ತೆಯಾಗಿ ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ Vs ಪ್ರೀತಂ ಗೌಡ – ಫೋಟೋ ಪಾಲಿಟಿಕ್ಸ್ ಜಟಾಪಟಿ ತಾರಕಕ್ಕೆ

    ಶುಭಾ ಪೂಂಜಾ ಅವರು ಲಂಬಾಣಿಗಳ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ಕುಸುರಿ ಕಲೆಗೆ ಹೆಸರಾದ ಲಂಬಾಣಿಗಳು ತಮ್ಮ ತಾಂಡಾದಲ್ಲಿ ಸತತ ನಾಲ್ಕು ತಿಂಗಳ ಕಾಲ ಈ ವಿಶೇಷ ಉಡುಪನ್ನು ಸಿದ್ಧಪಡಿಸಿದ್ದಾರೆ. ಗದಗ ಜಿಲ್ಲೆಯ ಲಂಬಾಣಿಗಳು ಈ ಉಡುಪನ್ನು ತಯಾರಿಸಿದ್ದಾರೆ. ಇದರ ತೂಕ 20 ಕೆ.ಜಿ ಇದೆ. ಆಭರಣಗಳು, ಕುಸುರಿ ಕೆಲಸ ಇತ್ಯಾದಿಗಳನ್ನು ಬಹಳ ವಿಶೇಷವಾಗಿ ಮಾಡಲಾಗಿದೆ. ಇದು ಸಿನಿಮಾದ ಹೈಲೆಟ್ ಆಗಿದೆ ಎಂದು ನಿರ್ದೆಶಕ ಶ್ರೀನಿ ಹೇಳಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಈ ಸಿನಿಮಾ ನೈಜ ಘಟನೆಯಾಧಾರಿತ ಕಥಾಹಂದರವನ್ನು ಹೊಂದಿದೆ. ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಅವರು ಕಥೆ ಬರೆಯುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮುರುಳಿಧರ್ ಕ್ಯಾಮೆರಾ ಹಾಗೂ ಸಂಗೀತವನ್ನು ಪ್ರಸ್ನ್ ಕುಮಾರ್ ಸಂಯೋಜನೆ ಮಾಡಲಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ರಿಯಾಲಿಟಿ ಶೋನ ನಟರಾದ ಗೋವಿಂದೇ ಗೌಡ, ಪ್ರಿಯಾಂಕಾ ಕಾಮತ್ ಮತ್ತಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

  • ಶುಭಾ ಅರ್ಥವಾಗದ ಭಾಷೆಗೆ ಬಿಗ್‍ಬಾಸ್ ಗರಂ

    ಶುಭಾ ಅರ್ಥವಾಗದ ಭಾಷೆಗೆ ಬಿಗ್‍ಬಾಸ್ ಗರಂ

    ಬಿಗ್‍ಬಾಸ್‍ಮನೆಯಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ಬೇರೆ ಭಾಷೆಗಳನ್ನು ಬಳಸುವಂತಿಲ್ಲ. ಆದರೆ ಶುಭಾ ಬಳಸಿರುವ ಭಾಷೆ ಯಾವುದು ಎಂದು ಅರ್ಥವಾಗದೆ ಬಿಗ್‍ಬಾಸ್ ನಾವು ಆಡುವ ನುಡಿಯೇ ಕನ್ನಡನುಡಿ ಎಂದು ಸಾಂಗ್ ಹಾಕಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಶುಭಾ ಆಗಾಗ ಸಣ್ಣ ಮಕ್ಕಳಂತೆ ಆಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಬಿಗ್‍ಬಾಸ್ ಬಳಿ ಹಟ ಮಾಡುವುದು ಸಣ್ಣ ಮಕ್ಕಳಂತೆ ಓಡಾಡುತ್ತಾ ಕಿತಾಪತಿಗಳನ್ನು ಮಾಡುತ್ತಾ ಇರುವ ಶುಭಾ ಇದೀಗ ಅರ್ಥವಾಗದೆ ಇರುವಯಾವುದೋ ಭಾಷೆಯಲ್ಲಿ ಮಾತನಾಡಿ ಬಿಗ್‍ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದ್ದೂ ಅಲ್ಲದೇ ಬಿಗ್‍ಬಾಸ್‍ಸ್‍ಗೆ ಅವಾಜ್ ಹಾಕಿದ್ದಾರೆ. ಬಿಗ್‍ಬಾಸ್ ನಾನು ಮಾತನಾಡಿರುವುದು ಯಾವ್ ಭಾಷೆ ಹೇಳಿ ಎಂದು ಜೋರಾಗಿ ಅವಾಜ್ ಹಾಕಿದ್ದಾರೆ. ಬಿಗ್‍ಬಾಸ್ ಏನು ಮಾತನಾಡೆ ಸುಮ್ಮನಾಗಿದ್ದಾರೆ.

    ಬಿಗ್‍ಬಾಸ್ ಮೈಕ್ ಸರಿ ಹಾಕಿಕೊಳ್ಳಿ ಎಂದು ನನ್ನ ಕರೆದು ಬೈದರು ಎಂದು ಮಂಜು ಶುಭಾ ಬಳಿ ಹೇಳಿದ್ದಾರೆ. ಆಗ ಶುಭಾ ಮುದ್ದಾಗಿ ಆಗಲ್ಲ. ಮಾಡಲ್ಲ ಬನ್ನಿ ನೀವೆ ಎಂದು ಹೇಳಬೇಕಿತ್ತು ಬಿಗ್‍ಬಾಸ್‍ಗೆ ಎಂದು ಅವಾಜ್ ಹಾಕಿದ್ದಾರೆ. ಆಗ ಬಿಗ್‍ಬಾಸ್ ಶುಭಾ ಮೇಲೆ ಕೋಪಗೊಂಡು ಶುಭಾ ನಿಮ್ಮ ಮೈಕ್ ಸರಿ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಆಗ ಶುಭಾ ಮಾಡಲ್ಲ ಬಿಗ್‍ಬಾಸ್ ಏನ್ ಇವಾಗ, ಬನ್ನಿ ಎಂದು ಬಿಗ್‍ಬಾಸ್‍ಗೆ ಅವಾಜ್ ಹಾಕಿದ್ದಾರೆ.

    ಶುಭಾ ಮಕ್ಕಳಂತೆ ಮಾಡುತ್ತಾ ಬಿಗ್‍ಬಾಸ್‍ಗೆ ಜೋರು ಮಾಡುತ್ತಿದ್ದಾರೆ. ಬಿಗ್‍ಬಾಸ್ ಕೂಡ ಕೆಲವೊಮ್ಮೆ ಶುಭಾಗೆ ಸೂಕ್ಷ್ಮವಾಗಿ ಹೇಳುತ್ತಾರೆ. ಆದರೆ ಶುಭಾ ಮಾತ್ರ ಇನ್ನು ಸಣ್ಣಮಕ್ಕಳಂತೆ ಆಡುತ್ತಾ ಬಿಗ್‍ಬಾಸ್‍ಗೆ ಜೋರು ಮಾಡುತ್ತಿದ್ದಾರೆ.

  • ಮೊಗ್ಗಿನ ಮನಸಿನ ಬೆಡಗಿ ಶುಭಾ ಪೂಂಜಾ ಮದ್ವೆಯಾಗೋ ಹುಡುಗ ಹೀಗಿರಬೇಕಂತೆ!

    ಮೊಗ್ಗಿನ ಮನಸಿನ ಬೆಡಗಿ ಶುಭಾ ಪೂಂಜಾ ಮದ್ವೆಯಾಗೋ ಹುಡುಗ ಹೀಗಿರಬೇಕಂತೆ!

    ಬೆಂಗಳೂರು: ಚಂದನವನದ ಮೊಗ್ಗಿನ ಮನಸಿನ ಬೆಡಗಿ ಶುಭಾ ಪೂಂಜಾ ತಮ್ಮ ಕನಸಿನ ಹುಡುಗನಲ್ಲಿ ಇರಬೇಕಾದ ಪ್ರಮುಖ ಗುಣಗಳ ಪಟ್ಟಿಯನ್ನು ಬಹಿರಂಗ ಪಡಿಸಿದ್ದಾರೆ.

    ಹೌದು, ಸೋಮವಾರ ಆಯೋಜಿಸಲಾಗಿದ್ದ ನಟಿ ಶುಭಾ ಪೂಂಜಾ ನಟನೆಯ `ಜಯಮಹಲ್’ ಸಿನಿಮಾ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಆರಂಭವಾಗುವ ಮೊದಲು ಪತ್ರಕರ್ತರ ಜತೆ ಮಾತಿಗೆ ಕುಳಿತಿದ್ದರು. ಈ ವೇಳೆ ಪತ್ರಕರ್ತರು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಿದರು. ಇದಕ್ಕೆ ಅವರು, ನಾನು ಮೆಚ್ಚುವ ಹುಡುಗ ಇನ್ನೂ ಸಿಕ್ಕಿಲ್ಲ ಎಂದು ನಾನು ನಗು ಮುಖದಲ್ಲೇ ಉತ್ತರಿಸಿದರು.

    ಮರುಕ್ಷಣವೇ ನೀವು ಇಷ್ಟಪಡುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಅವರು ಪೇಪರ್, ಪೇನ್ ತೆಗೆದುಕೊಂಡು ಕನಸಿನ ಹುಡುಗನ ಗುಣಗಳ ಬಗ್ಗೆ ಪಟ್ಟಿ ಮಾಡಿದರು. ಪ್ರಾಣಿಗಳನ್ನು ಪ್ರೀತಿಸಬೇಕು, ಹಳ್ಳಿ ಜೀವನಕ್ಕೆ ಸಿದ್ಧನಾಗಿರಬೇಕು, ಮಹತ್ವಾಕಾಂಕ್ಷೆಗಳು ಇರಬಾರದು, ಕಪ್ಪು ಬಣ್ಣ ಇಷ್ಟ, ಒಳ್ಳೆ ಮನುಷ್ಯನಾಗಿರಬೇಕು ಎಂದು ಪಟ್ಟಿ ಬರೆದರು.

    ಈ ಉತ್ತರ ಸಿಕ್ಕಿದ ಕೂಡಲೇ, ನಿಮ್ಮ ಪ್ರಕಾರ ಹುಡುಗ ಶ್ರೀಮಂತನಾಗಿರುವುದು ಬೇಡವೇ ಎನ್ನುವ ಮರು ಪ್ರಶ್ನೆಗೆ ಶ್ರೀಮಂತ ಏನೂ ಬೇಕಾಗಿಲ್ಲ. ಮಧ್ಯಮ ವರ್ಗದ ಹುಡುಗನಾಗಿದ್ದರೂ ಓಕೆ. ಆದರೆ ಜೀವನ ನಿರ್ವಹಣೆಗೆ ತೊಂದರೆ ಆಗದಷ್ಟು ಹಣ ಇದ್ದರೆ ಸಾಕು ಎಂದು ಉತ್ತರಿಸಿದರು. ಕೊನೆಯಲ್ಲಿ ತಮ್ಮ ಪಟ್ಟಿಗೆ ಶುಭಾ ಅವರು ಹುಡುಗ ರೈತನಾಗಿದ್ದರೆ ಆಗಿದ್ದರೆ ಇನ್ನು ಪ್ರಶಸ್ತ್ಯ ಹೆಚ್ಚು ಎಂದು ಹೇಳಿ ತಮ್ಮ ಕನಸಿನ ರಾಜನಲ್ಲಿರಬೇಕಾದ ಗುಣಗಳ ಬೇಡಿಕೆ ಪಟ್ಟಿಯನ್ನು ಕೊನೆಗೊಳಿಸಿದರು. ಇದನ್ನೂ ಓದಿ: ಬಿಗ್ ಬಾಸ್ ನ ಬಾರ್ಬಿ ಡಾಲ್ ಮದುವೆಯಾಗೋ ಹುಡುಗ ಹೀಗಿರಬೇಕಂತೆ!