Tag: Actress Shruti

  • ಹೀರೋಯಿನ್ ಆಗಿ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ ಹಿರಿಯ ನಟಿ ಶೃತಿ ಪುತ್ರಿ

    ಹೀರೋಯಿನ್ ಆಗಿ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ ಹಿರಿಯ ನಟಿ ಶೃತಿ ಪುತ್ರಿ

    90ರ ದಶಕದ ನಟ ನಟಿಯರ (Actress) ಮಕ್ಕಳು ಅನೇಕರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವರು ಎಂಟ್ರಿ ಕೊಡೋಕೆ ತಯಾರಿ ಮಾಡಿಕೊಳ್ತಿದ್ದಾರೆ.

    ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಶೃತಿ ಮಗಳ ಸಿನಿಮಾ (Cinema) ಎಂಟ್ರಿಯ ಕುರಿತಾಗಿ ಸುದ್ದಿ ಕೇಳಿ ಬರ್ತಾ ಇತ್ತು. ಇದೀಗ ಆ ಸಮಯ ಹತ್ತಿರದಲ್ಲೇ ಇರುವ ಸೂಚನೆ ಕಂಡುಬರುತ್ತಿದೆ. ನಟಿ ಶೃತಿ ಮಗಳು ಗೌರಿ (Mahendar Gowri) ಮೇಕೋವರ್ ಮಾಡಿಕೊಂಡಿದ್ದು ಹೀರೋಯಿನ್ ಆಗಿ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ಗೌರಿ-ಗಣೇಶ ಹಬ್ಬಕ್ಕೆ ಶೃತಿ ಮಗಳು ʻಗೌರಿ ಅಲಿಯಾಸ್ ಮಿಲಿʼ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ

    ಶೃತಿ ಮಗಳು ಗೌರಿ ಕೂಡ ತಾಯಿಯಂತೆ ಸರಳ, ಗಂಭೀರ ಉಡುಗೆಯಲ್ಲಿ ಸದಾ ಮಿಂಚುತ್ತಾರೆ. ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿದ್ದು ಹೊಸ ನಾಯಕಿಯಂತೆ ಕಂಗೊಳಿಸುತ್ತಿದ್ದಾರೆ. ಎಸ್.ಮಹೇಂದರ್ ಹಾಗೂ ಶೃತಿ ಪುತ್ರಿಯಾಗಿರುವ ಗೌರಿ ತಮ್ಮ ಸಿನಿಮಾ ಕುಟುಂಬದ ಪೀಳಿಗೆಯ ಮುಂದಿನ ನಟಿ. ಶೀಘ್ರದಲ್ಲೇ ಶೃತಿ ಮಗಳು ಗೌರಿ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ. ಇದನ್ನೂ ಓದಿ: ಖುಷಿಯಾಗಿ ಗಣೇಶ ಹಬ್ಬ ಆಚರಣೆ – ಡಿವೋರ್ಸ್ ವದಂತಿ ತಳ್ಳಿಹಾಕಿದ ನಟ ಗೋವಿಂದ ದಂಪತಿ

  • ಗುಜರಿ ಮಾಲೀಕರಾದ್ರು ರಾಘವೇಂದ್ರ  ರಾಜ್‌ಕುಮಾರ್!

    ಗುಜರಿ ಮಾಲೀಕರಾದ್ರು ರಾಘವೇಂದ್ರ ರಾಜ್‌ಕುಮಾರ್!

    ಸ್ಯಾಂಡಲ್‌ವುಡ್ ನಟ ರಾಘವೇಂದ್ರ ರಾಜ್‌ಕುಮಾರ್ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟ ಈಗ ವಿಶೇಷ ಪಾತ್ರಗಳ ಮೂಲಕ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈಗ `13′ ಅನ್ನೋ ಹೊಸ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸುತ್ತಿದ್ದಾರೆ.

    ನಟ ರಾಘಣ್ಣ ಕೈಯಲ್ಲಿ ಸಾಕಷ್ಟು ಚಿತ್ರಗಳಿಗೆ ಅದರ ಬೆನ್ನಲ್ಲೇ ಹೊಸ ಕಥೆಯನ್ನು ಒಪ್ಪಿಕೊಂಡಿದ್ದಾರೆ. `13′ ಚಿತ್ರದಲ್ಲಿ ಗುಜರಿ ಅಂಗಡಿಯ ಮಾಲೀಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟ ರಾಘಣ್ಣ ಜೊತೆ ಪ್ರಮುಖ ಪಾತ್ರದಲ್ಲಿ ನಟಿ ಶ್ರುತಿ ಕಾಣಿಸಿಕೊಳ್ತಿದ್ದಾರೆ. ಮುಸ್ಲಿಂ ಧರ್ಮದ ಮಹಿಳೆಯಾಗಿ ಶ್ರುತಿ ನಟಿಸಲಿದ್ದಾರೆ. `ಗೆಲುವಿನ ಸರದಾರ’ ಚಿತ್ರದ ಬಳಿಕ 25 ವರ್ಷಗಳ ನಂತರ ನಟ ರಾಘಣ್ಣ ಮತ್ತು ನಟಿ ಶ್ರುತಿ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿಯ ಭಿನ್ನ ಕಥೆಯಿರೋ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸುತ್ತಿದ್ದು, ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಕಷ್ಟು ಕಾರಣಗಳಿಂದ `13′ ಚಿತ್ರ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ನರೇಂದ್ರ ಬಾಬು ಡೈರೆಕ್ಷನ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಿರುತೆರೆಗೆ ಮರಳಿದ ಹ್ಯಾಟ್ರಿಕ್ ಹೀರೋ; ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಶಿವಣ್ಣ

    ಪುನೀತ್ ರಾಜ್‌ಕುಮಾರ್ ನಿಧನದ ನೋವಿನಲ್ಲೂ ಬದುಕು ಸಾಗಿಸಬೇಕಿರುವುದು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ರಾಘಣ್ಣ ನಟನೆಯ ಹೊಸ ಚಿತ್ರದ ಸುದ್ದಿಯಿಂದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ನಟಿ ಶೃತಿ ಮಾಜಿ ಕಾರು ಡ್ರೈವರ್ ಮಂಜುನಾಥ್ ಸಿಂಗ್ ಆತ್ಮಹತ್ಯೆ

    ನಟಿ ಶೃತಿ ಮಾಜಿ ಕಾರು ಡ್ರೈವರ್ ಮಂಜುನಾಥ್ ಸಿಂಗ್ ಆತ್ಮಹತ್ಯೆ

    – ಟವಲ್‍ನಲ್ಲಿ ನೇಣು ಹಾಕಿಕೊಂಡು ಸಾವು

    ನೆಲಮಂಗಲ: ಕಳೆದ ಎರಡುವರೆ ವರ್ಷಗಳ ಕಾಲ ನಟಿ ಶೃತಿ ಕಾರು ಡ್ರೈವರ್ ಆಗಿ ಕಾರ್ಯನಿರ್ವಹಿಸಿ, ಆರು ತಿಂಗಳ ಹಿಂದೆ ಕೆಲಸ ಬಿಟ್ಟ ಕಾರು ಚಾಲಕ ಮಂಜುನಾಥ್ ಸಿಂಗ್ ಇಂದು ಅನುಮಾನಾಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಫಾರೆಸ್ಟ್ ಗೇಟ್ ನಲ್ಲಿ ನೇಣಿಗೆ ಶರಣಾಗಿರುವ ಮಂಜುನಾಥ್ ಸಿಂಗ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಮಾಗಡಿ ರಸ್ತೆಯ ಮಾಚೋಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ಕಳೆದ ಕೆಲವು ವರ್ಷಗಳಿಂದ ನಟಿ ಶೃತಿ ಮತ್ತು ಶರಣ್ ಕಾರ್ ಡ್ರೈವರ್ ಆಗಿದ್ದು ಮಂಜುನಾಥ್, ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಕಡಬಗೆರೆಯಲ್ಲಿ ಪಾರ್ಟಿಗೆ ಹೋಗಿದ್ದ ಎನ್ನಲಾಗಿದೆ. ನಂತರ ಟವಲ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿದ್ದಾನೆ.

    ಮಂಜುನಾಥ್ ಸಾವಿನ ಬಗ್ಗೆ ಹಲವು ಅನುಮಾನವನ್ನು ಸಂಬಂಧಿಗಳು ವ್ಯಕ್ತಪಡಿಸುತ್ತಿದ್ದಾರೆ. ಮಂಜುನಾಥ್ ಸಿಂಗ್ ಬಾವ ದೀಪಕ್ ಸಿಂಗ್ ಮಾತನಾಡಿ, ಮಂಜುನಾಥ್ ಸಾಯುವ ವ್ಯಕ್ತಿಯಲ್ಲ. ಪೊಲೀಸರಿಂದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.