Tag: actress Ramya

  • ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್‌ – ಬಂಧಿತರಲ್ಲಿ ಓರ್ವ ʻಡಿ ಬಾಸ್‌ʼ ಅಭಿಮಾನಿ

    ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್‌ – ಬಂಧಿತರಲ್ಲಿ ಓರ್ವ ʻಡಿ ಬಾಸ್‌ʼ ಅಭಿಮಾನಿ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಮ್ಯಾ (Actress Ramya) ಪೋಸ್ಟ್‌ಗೆ ಅಶ್ಲೀಲ ಕಾಮೆಂಟ್‌ ಮಾಡಿದ ಕಿಡಿಗೇಡಿಗಳು ಯಾರು ಎಂಬುದು ಬಹಿರಂಗವಾಗಿದೆ.

    ಸೋಷಿಯಲ್‌ ಮೀಡಿಯಾ (Social Media) ಪೋಸ್ಟ್‌ಗೆ ಅಶ್ಲೀಲ ಕಾಮೆಂಸ್ಟ್‌ ಹಾಕಿದವರಲ್ಲಿ ಒಬ್ಬ ದರ್ಶನ್ ಫ್ಯಾನ್, ಮತ್ತೊಬ್ಬ ನಟ ಧನ್ವೀರ್ ಫ್ಯಾನ್ ಎಂಬುದು ಪೊಲೀಸರ (Bengaluru City Police) ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಕಲಬುರಗಿ ಕೇಂದ್ರಿಯ ವಿವಿ ಆವರಣದಲ್ಲಿ ಗೋರಿ – ರಾತ್ರೋರಾತ್ರಿ ಕಾಂಪೌಂಡ್‌ ನಿರ್ಮಾಣ

    ಅಶ್ಲೀಲ ಕಾಮೆಂಟ್ ಜೊತೆಗೆ ಏನ್ ಮಾಡ್ಕೊಳಕ್ಕೆ ಆಗುತ್ತೆ ಅಂತಾ? ಇಬ್ಬರು ನಟರ ಅಭಿಮಾನಿಗಳಾದ ಓಬಣ್ಣ ಮತ್ತು ಗಂಗಾಧರ್ ಧಮ್ಕಿ ಹಾಕಿ ಕೆಟ್ಟ ಕಾಮೆಂಟ್ಸ್ ಹಾಕಿದ್ರು. ಇದನ್ನೂ ಓದಿ: ಕೊಪ್ಪಳ| ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ ಕೊಲೆ

    ಏನಿದು ಪ್ರಕರಣ?
    ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಇದಲ್ಲದೇ ಅಶ್ಲೀಲ ಮೆಸೇಜ್ ಹಾಕಿದ್ದ ಇನ್ನೂ ಮೂವರನ್ನ ಸಿಸಿಬಿ ಪೊಲೀಸ್ರು ಲಾಕ್ ಮಾಡಿದ್ದಾರೆ. ಉಳಿದ ಕಿಡಿಗೇಡಿಗಳ ಪತ್ತೆಗೆ 6 ತಂಡವನ್ನ ರಚನೆ ಮಾಡಲಾಗಿದೆ.

    ಬೆಂಗಳೂರು, ಮೈಸೂರು, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಅಶ್ಲೀಲ ಕಾಮೆಂಟ್‌ ಹಾಕಿ ವಿಕೃತಿ ಮೆರೆದರೆ ಸಿಸಿಬಿ ಪೊಲೀಸರಂಥೂ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ. ಇದನ್ನೂ ಓದಿ: ಗ್ರೌಂಡ್‌ ಪೆನೆಟೇರಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

  • ಅಶ್ಲೀಲ ಮೆಸೇಜ್ ಮಾಡಿದ್ದ ಮೂವರು ಅರೆಸ್ಟ್ – ಬೆಂಗ್ಳೂರು ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

    ಅಶ್ಲೀಲ ಮೆಸೇಜ್ ಮಾಡಿದ್ದ ಮೂವರು ಅರೆಸ್ಟ್ – ಬೆಂಗ್ಳೂರು ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

    -11 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramya) ಅಶ್ಲೀಲ ಮೆಸೇಜ್ ಮಾಡಿದ್ದವರ ಪೈಕಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಪೊಲೀಸರ (Bengaluru Police) ಕಾರ್ಯಕ್ಕೆ ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ನಟಿ ರಮ್ಯಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಪ್ಪು ಮಾಡಿದವರು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರ ಘನತೆಗೆ ಧಕ್ಕೆ ತಂದವರನ್ನು ಬಂಧಿಸುವ ಕೆಲಸ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬೆಂಗಳೂರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಇಡೀ ರಾಷ್ಟ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ: ಬಿ.ಕೆ ಹರಿಪ್ರಸಾದ್‌ ಬಾಂಬ್‌

    ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು.

    ದೂರಿನ ಬಳಿಕ ಆರೋಪಿಗಳ ಪತ್ತೆಗಿಳಿದ ಪೊಲೀಸರು ಸದ್ಯ 11 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಹಾಗೂ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.ಇದನ್ನೂ ಓದಿ: ಹಿಮಾಚಲ ಪ್ರದೇಶ | ಭಾರೀ ಮಳೆಯಿಂದ ನೀರಿನ ಮಟ್ಟ ದಿಢೀರ್‌ ಏರಿಕೆ – ಡ್ಯಾಂ ಕುಸಿತ

  • ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ – ಬಂಧಿತರು ದರ್ಶನ್‌ ಅಭಿಮಾನಿಗಳೇ‌ ಅಂತ ಪರಿಶೀಲಿಸ್ತಿದ್ದೇವೆ: ಸೀಮಂತ್‌ ಕುಮಾರ್‌ ಸಿಂಗ್‌

    ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ – ಬಂಧಿತರು ದರ್ಶನ್‌ ಅಭಿಮಾನಿಗಳೇ‌ ಅಂತ ಪರಿಶೀಲಿಸ್ತಿದ್ದೇವೆ: ಸೀಮಂತ್‌ ಕುಮಾರ್‌ ಸಿಂಗ್‌

    ಬೆಂಗಳೂರು: ನಟಿ ರಮ್ಯಾ ಕುರಿತು ಅಶ್ಲೀಲ ಕಾಮೆಂಟ್ಸ್‌ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನ ಬಂಧಿಸಿರುವುದಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ (Seemanth Kumar Singh) ತಿಳಿಸಿದ್ದಾರೆ.

    ಮಾತನಾಡಿದ ಅವರು, ನಟಿ ರಮ್ಯಾ (Actress Ramya) ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ಅಶ್ಲೀಲ ಕಾಮೆಂಟ್‌ ಮಾಡಿದ ಇಬ್ಬರು ಕಿಡಿಗೇಡಿಗಳನ್ನ ಬಂಧಿಸಲಾಗಿದೆ. 11 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿರಿಯ ಐಪಿಎಸ್‌ ಅಧಿಕಾರಿ ಬಿ.ದಯಾನಂದ್‌, ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ಗೆ ರಾಷ್ಟ್ರಪತಿ ಪದಕ

    ಸೋಷಿಯಲ್‌ ಮೀಡಿಯಾ ಕಾಮೆಂಟ್ಸ್‌ ವೆರಿಫೈ ಮಾಡಿದ್ದೇವೆ
    ರಮ್ಯಾ ದೂರಿನನ್ವಯ ಸಿಸಿಬಿಯವರು ಹಲವರನ್ನ ಗುರುತಿಸಿದ್ದಾರೆ. ಕೆಲವರ ಸ್ಪಷ್ಟ ಮಾಹಿತಿ ಸಿಕ್ಕಿದೆ, ಇಬ್ಬರನ್ನ ಅರೆಸ್ಟ್ ಮಾಡಿದ್ದೇವೆ. ಇನ್ನೂ ಹನ್ನೊಂದು ಜನರ ಮಾಹಿತಿ ಸಿಕ್ಕಿದ್ದು ತನಿಖೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗಿದ್ದ ಕಾಮೆಂಟ್‌ಗಳನ್ನೂ ವೆರಿಫೈ ಮಾಡಿದ್ದೇವೆ. 13 ಜನರ ಪೈಕಿ ಇಬ್ಬರನ್ನ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾಗೆ ಅವಹೇಳನ – ಮೂವರು ಕಿಡಿಗೇಡಿಗಳು ಅರೆಸ್ಟ್‌

    ಸೈಬರ್‌ ಪೊಲೀಸರಿಗೆ ವಿಶೇಷ ತರಬೇತಿ
    ಅಲ್ಲದೇ ಬಂಧಿತರು ಯಾರ ಅಭಿಮಾನಿ ಅನ್ನೊದರ ಬಗ್ಗೆ ತನಿಖೆ ನಡೆಯುತ್ತಿದೆ. ಯಾರೇ ಆಗಿರಲಿ ಅಶ್ಲೀಲ ಸಂದೇಶ ಹಾಕಿದ್ರೆ ಕಠಿಣ ಕ್ರಮ ಕೈಗೊಳ್ತೀವಿ. ಈ ಬಗ್ಗೆ ಸೈಬರ್ ಪೊಲೀಸರಿಗೆ ವಿಶೇಷ ತರಬೇತಿ ನೀಡಿದ್ದೇವೆ. ಅವಹೇಳನಕಾರಿಯಾಗಿ ಯಾರೇ ಸಂದೇಶ ಹಾಕಿದ್ರೂ ಕ್ರಮ ಕೈಗೊಳ್ತೀವಿ ಅಂತ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.  ಇದನ್ನೂ ಓದಿ: `ವೇದ’ ಸಿನಿಮಾ ನೋಡಿ ಅಪ್ಪಾಜಿ ತರ ಕಾಣ್ತೀಯಾ ಅಂದಿದ್ರು – ಅತ್ತೆ ನಾಗಮ್ಮನ ನೆನೆದು ಶಿವಣ್ಣ ಭಾವುಕ

  • ನಟಿ ರಮ್ಯಾಗೆ ಅವಹೇಳನ – ಇಬ್ಬರು ಕಿಡಿಗೇಡಿಗಳು ಅರೆಸ್ಟ್‌

    ನಟಿ ರಮ್ಯಾಗೆ ಅವಹೇಳನ – ಇಬ್ಬರು ಕಿಡಿಗೇಡಿಗಳು ಅರೆಸ್ಟ್‌

    ಬೆಂಗಳೂರು: ನಟಿ ರಮ್ಯಾಗೆ (Actress Ramya) ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಓಬಣ್ಣ ಹಾಗೂ ಗಂಗಾಧರ್‌ ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಲಾರ (Kolar) , ಚಿತ್ರದುರ್ಗ (Chitradurga) ಮೂಲದವರು ಎಂದು ತಿಳಿದು ಬಂದಿದೆ. ಈ ಮೂವರು ಅಶ್ಲೀಲ ಕಮೆಂಟ್ ಹಾಕಿ ಸವಾಲ್ ಹಾಕಿದ್ದರು. ಐಪಿ ಅಡ್ರೆಸ್ ಆಧರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದವ್ರಿಗೆ ಶಿಕ್ಷೆ ಆಗ್ಬೇಕು: ರಾಕ್‍ಲೈನ್ ವೆಂಕಟೇಶ್

    ರಮ್ಯಾ ದೂರು ದಾಖಲಿಸುವ ವೇಳೆ 43 ಅಕೌಂಟ್‍ಗಳ ಹೆಸರು ಉಲ್ಲೇಖಿಸಿ ದೂರು ದಾಖಲಿಸಿದ್ದರು. ನಂತರ ಪೊಲೀಸರ ಮುಂದೆ ಹೇಳಿಕೆ ನೀಡುವ ವೇಳೆ ಮತ್ತೆ ಐದು ಅಕೌಂಟ್‍ಗಳನ್ನು ಸೇರಿಸಿ 48 ಅಕೌಂಟ್‍ಗಳ ಮೇಲೆ ದೂರು ದಾಖಲಿಸಿದ್ದರು. ಎಫ್‍ಐಆರ್ ದಾಖಲಾದ ತಕ್ಷಣ ಬಹುತೇತ ಅಕೌಂಟ್‍ಗಳು ಡಿಲಿಟ್ ಆಗಿದ್ದವು. ಅಷ್ಟರಲ್ಲಿ ಪೊಲೀಸರು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದು ಐಪಿ ಅಡ್ರೆಸ್‍ಗಳು ಅಕೌಂಟ್ ಡಿಟೇಲ್ಸ್ ಕೊಡುವಂತೆ ಮನವಿ ಮಾಡಿದ್ದರು.

    ಪೊಲೀಸರ ಮನವಿಯಂತೆ ಸಂಬಂಧಪಟ್ಟ ಸಂಸ್ಥೆಗಳು ಡಿಲಿಟ್ ಆಗಿದ್ದ ಅಕೌಂಟ್‍ಗಳ ಎಲ್ಲಾ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ನೀಡಿವೆ. ಈ ಅಶ್ಲೀಲ ಕಮೆಂಟ್‌ ಹಾಕಿ, ಅಕೌಂಟ್ ಡಿಲಿಟ್ ಮಾಡಿ ಆರಾಮಾಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 40 ಮಂದಿಯ ಚಹರೆ ಗುರುತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ – ತಪ್ಪಿತಸ್ಥರಿಗೆ 5 ವರ್ಷ ಜೈಲು, ದಂಡ: ಸೈಬರ್ ತಜ್ಞರ ಮಾಹಿತಿ

    ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ರದ್ದು ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಪೋಸ್ಟ್ ಮಾಡಿದ್ದರು. ಇದಕ್ಕೆ ಕೆಲವು ಕಿಡಿಗೇಡಿಗಳು ಅಶ್ಲೀಲ ಸಂದೇಶ ಹಾಗೂ ಕಮೆಂಟ್‌ ಹಾಕಿದ್ದರು.

  • ‘ಎಲ್ಲಾ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ’ ಪ್ರಜ್ವಲ್ ಕೇಸ್ ಬಗ್ಗೆ ರಮ್ಯಾ ಪೋಸ್ಟ್‌ 

    ‘ಎಲ್ಲಾ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ’ ಪ್ರಜ್ವಲ್ ಕೇಸ್ ಬಗ್ಗೆ ರಮ್ಯಾ ಪೋಸ್ಟ್‌ 

    ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ (Actress Ramya) ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜೋಗಿ ನಿರ್ಮಾಪಕರಿಂದ ಮತ್ತೊಂದು ಹೊಸ ಸಾಹಸದ ಸಂಕಲ್ಪ

    ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ, ಪ್ರಜ್ವಲ್ ಅತ್ಯಾಚಾರ ಪ್ರಕರಣದ ಸಂಬಂಧ ಕೋರ್ಟ್‌ ನೀಡಿದ ತೀರ್ಪನ್ನು ಹಂಚಿಕೊಂಡಿದ್ದಾರೆ. ಜೊತೆಗೆ “ಎಲ್ಲಾ ಹೆಣ್ಣುಮಕ್ಕಳಿಗೂ ನ್ಯಾಯ ಸಿಕ್ಕಿದೆ” ಎಂದು ಬರೆದುಕೊಂಡಿದ್ದಾರೆ.

    ಸದ್ಯ ಕೋರ್ಟ್‌ ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ನಾಳೆಗೆ ಕಾಯ್ದಿರಿಸಿದೆ. ಇನ್ನೂ ತೀರ್ಪು ಪ್ರಕಟವಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟಿದ್ದಾರೆ.ಇದನ್ನೂ ಓದಿ: ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

     

     

  • ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದವ್ರಿಗೆ ಶಿಕ್ಷೆ ಆಗ್ಬೇಕು: ರಾಕ್‍ಲೈನ್ ವೆಂಕಟೇಶ್

    ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದವ್ರಿಗೆ ಶಿಕ್ಷೆ ಆಗ್ಬೇಕು: ರಾಕ್‍ಲೈನ್ ವೆಂಕಟೇಶ್

    – ನಿಮ್ಮನೆ ಹೆಣ್ಮಕ್ಳನ್ನ ಖುಷಿಯಾಗಿ ನೋಡ್ಕೊಳ್ಳಿ ಯಾವ್ ಸ್ಟಾರ್ ಕೂಡ ಕಾಪಾಡಲ್ಲ

    ಬೆಂಗಳೂರು: ನಟಿ ರಮ್ಯಾಗೆ (Actress Ramya) ಅಶ್ಲೀಲ ಸಂದೇಶ ಕಳುಹಿಸಿದವರಿಗೆ ಶಿಕ್ಷೆಯಾಗಬೇಕು ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ (Rockline Venkatesh) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಮ್ಯಾಗೆ ದರ್ಶನ್ ಫ್ಯಾನ್ಸ್ (Darshan Fans) ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದರು. ಇಂತಹ ವಿಚಾರ ಉದ್ಭವ ಮಾಡಿದವರು ಹಾಗೂ ಮುಂದುವರೆಸಿಕೊಂಡು ಹೋಗುವವರಿಗೆ ಶಿಕ್ಷೆ ಆಗ್ಬೇಕು. ಎದುರು ನಿಂತು ಮಾತನಾಡುವವರನ್ನು ಎದುರಿಸಬಹುದು. ಎಲ್ಲೋ ನಿಂತು ಮಾತಾಡುವವರನ್ನು ಹೇಗೆ ಸಹಿಸಿಕೊಳ್ಳೋದು? ಯಾರೇ ಹೀರೋ ಆಗಿದ್ರೂ ಅವರ ಅಭಿಮಾನಿಗಳು ನಿಜಕ್ಕೂ ಹೀಗೆ ಮಾಡಿದ್ದೇ ಆಗಿದ್ರೆ ತಪ್ಪು. ನಿಮ್ಮ ಮನೆ ಹೆಣ್ಣು ಮಕ್ಕಳನ್ನ ತೃಪ್ತಿ, ಸಂತೋಷವಾಗಿಟ್ಟುಕೊಳ್ಳಿ. ಯಾವ ಸ್ಟಾರ್ ನಟರೂ ಬಂದು ಕಾಪಾಡೋಲ್ಲ ಎಂದಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ – ತಪ್ಪಿತಸ್ಥರಿಗೆ 5 ವರ್ಷ ಜೈಲು, ದಂಡ: ಸೈಬರ್ ತಜ್ಞರ ಮಾಹಿತಿ

    ಗಾಳಿಯಲ್ಲಿ ಗುಂಡು ಹೊಡೆಯುವವರನ್ನು ಕೇರ್ ಮಾಡಲ್ಲ ನಾನು. ಹೀರೋಗೆ ಸಪೋರ್ಟ್ ಮಾಡ್ಕೊಂಡು ನಿಲ್ಲೋದಾದ್ರೆ ಎದುರು ಬಂದು ನಿಲ್ಲೋದು ಗಂಡಸ್ತನ. ಆದರೆ ಎಲ್ಲೋ ಇದ್ದುಕೊಂಡು ಕೆಟ್ಟ ಕೆಟ್ಟ ಸಂದೇಶ ಕಳುಹಿಸಿದ್ದಾರೆ. ನಾನೇ ರಮ್ಯಾಗೆ ಹೇಳ್ತೀನಿ ಪಾಠ ಕಲಿಸಿ, ಎಂದಿದ್ದಾರೆ.‌

    ಇಂತಹ ವಿಚಾರಗಳಿಗಾಗಿಯೇ ಸಿನಿಮಾ ಮಾಡೋಕೆ ಭಯ ಆಗ್ತಿದೆ. ರಾಜ್ ಕುಮಾರ್, ಅಂಬರೀಶ್, ವಿಷ್ರ್ಣುವರ್ಧನ್ ಚಿತ್ರರಂಗ ಕಟ್ಟಿಕೊಟ್ರು.
    ಆದರೆ ಅವರು ಕಟ್ಟಿಕೊಟ್ಟ ವೇದಿಕೆ ನಾವು ಹೇಗೆ ಬಳಕೆ ಮಾಡಿಕೊಳ್ತಿದ್ದೇವೆ? ಫಾನ್ಸ್‍ಗೆ ಮನವಿ ಮಾಡಿಕೊಳ್ಳುತ್ತೇನೆ ಈ ಧೋರಣೆ ಇರಬಾರದು. ಆಗಿರೋ ತಪ್ಪನ್ನು ಸರಿಪಡಿಸಿಕೊಂಡು ನೀವೇ ಬನ್ನಿ. ನಿಮ್ಮ ಸ್ವಾರ್ಥಕ್ಕೆ ಚಿತ್ರರಂಗ ಬಲಿ ಕೊಡಬೇಡಿ
    ಯಾರೋ ಎಂಟತ್ತು ಜನ ಹೊಟ್ಟೆ ತುಂಬಿದವರ ಬಗ್ಗೆ ನೀವು ಮಾತಾಡಿದ್ರೆ ಇನ್ನುಳಿದ ಸಾವಿರಾರು ಜನ ಏನ್ಮಾಡ್ಬೇಕು? ಇಲ್ಲಿಗೆ ನಿಲ್ಲಿಸಿ. ಇದಕ್ಕೆ ಸಂಬಂಧಪಟ್ಟ ಕಲಾವಿದ ಆಗಲಿ ಅಥವಾ ಸಂಬಂಧಪಟ್ಟವರೇ ಆಗಿದ್ದರೂ ನಿಲ್ಲಿಸಿ ಎಂದಿದ್ದಾರೆ.

    ಹಿರಿಯರು ಕಷ್ಟಪಟ್ಟು ಚಿತ್ರರಂಗ ಕಟ್ಟಿದ್ದಾರೆ. ಚಿತ್ರರಂಗಕ್ಕೆ ನಮ್ಮ ಕೊಡುಗೆ ಏನು? ನಾವು ಕ್ಯಾಮೆರಾ ಮುಂದೆ ಜನಗಳಿಗೆ ಬುದ್ಧಿ ಹೇಳೋದನ್ನ ನಿಜ ಜೀವನದಲ್ಲಿ ಫಾಲೋ ಮಾಡಿದ್ರೆ ಎಷ್ಟೋ ಚೆನ್ನಾಗಿರುತ್ತೆ. ಅಭಿಮಾನಿಗಳಿಗೆ ಹೇಳಿ ಪರಿಸ್ಥಿತಿ ತಿಳಿ ಪಡಿಸಬೇಕು. ನನ್ನ ಹೆಸರು ಇಟ್ಕೊಂಡು ಹೀಗೆಲ್ಲ ಮಾಡೋಕೆ ಹೋಗಬಾರದು. ದರ್ಶನ್ ಆಗಲಿ ಸುದೀಪ್ ಆಗಲಿ ಯಾವುದೇ ಸೂಪರ್ ಸ್ಟಾರ್ ಆಗಲಿ ಮುಂದೆ ಬರಬೇಕು. ನಾನು ಸ್ಪಂದಿಸುತ್ತೇನೆ. ಶೀಘ್ರದಲ್ಲೇ ಸಭೆ ಕರೆಯುತ್ತೇನೆ. ಕಲಾವಿದರನ್ನೆಲ್ಲ ಕರೆಯುತ್ತೇನೆ. ಅವರವರು ಅವರವರ ಹೇಳಿಕೆ ಕೊಡಬಹುದು. ಹೇಗೆ ಇದಕ್ಕೆ ಸ್ಪಂದಿಸಬೇಕು ಅನ್ನೋದನ್ನ ಕೇಳ್ತೀನಿ. ನಮ್ಮ ಮನೆಗೆ ಹತ್ತಿರೋ ಬೆಂಕಿಯನ್ನ ನಾವು ಆರಿಸಿಕೊಳ್ಳೋಕೆ ಪ್ರಯತ್ನ ಪಡ್ತೀವಿ ಎಂದಿದ್ದಾರೆ.

    ಸರ್ಕಾರ ಸ್ಪಂದಿಸುತ್ತದೆ ಎನ್ನುವ ನಂಬಿಕೆ ಇದೆ. ನೀವೇ ಬಗೆಹರಿಸಿಕೊಳ್ಳಿ ಎಂದರೆ ಬಗೆಹರಿಸಿಕೊಳ್ತೀವಿ. ನನಗೇ ಸಹ ಕೆಟ್ಟದಾಗಿ ಬೈದು ಟ್ರೋಲ್ ಮಾಡಿದ್ರು. ಇದಕ್ಕೆ ಪ್ರೂಫ್ ಇದೆ ಅಂತ ಗೊತ್ತಾಗಿ ಲೀಗಲ್ ಆಗಿ ಕೇಸ್ ಹಾಕಿದೀನಿ. ಎಂಟತ್ತು ಕೇಸ್ ಹಾಕಿದೀನಿ. ಇನ್ನು ಹಲವು ವರ್ಷ ಅವರು ಕೋರ್ಟ್‍ಗೆ ಅಲೆಯಬೇಕು.

    ಯಾಕೆ ಹೊಡೀಲಿ ಬಡೀಲಿ, ಲೀಗಲಿ ಆಕ್ಷನ್ ತಗೋತಿನಿ. ಕೆಲವರು ಬಂದ್ರು ಅವರಿಗೆ ಹೇಳ್ದೆ ಕೋರ್ಟ್‍ನಲ್ಲೇ ನೋಡ್ಕೊಳ್ಳಿ ಅಂತ. ಆವಾಗ ಯಾವ್ ಸ್ಟಾರ್ ಕೈಹಿಡಿತಾರೆ ಅಂತ ಗೊತ್ತಾಗುತ್ತೆ, ಗೊತ್ತಾಗಬೇಕು. ಅಮ್ಮ ಅಕ್ಕ ಎಲ್ಲ ದೇವರು, ಬಯ್ಯೋವ್ನಿಗೆ ಅವರೂ ಕೇಸ್ ಹಾಕಿದ್ದಾರೆ. ಲೈಫ್ ಲಾಂಗ್ ಅವರು ಕೋರ್ಟ್‍ಗೆ ಅಲೆಯಬೇಕು ಎಂದಿದ್ದಾರೆ. ಇದನ್ನೂ ಓದಿ: ಡಿ-ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ದೂರಿನ ಬಳಿಕವೂ ನಿಲ್ಲದ ಕಾಮೆಂಟ್ಸ್

  • ಡಿ-ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ದೂರಿನ ಬಳಿಕವೂ ನಿಲ್ಲದ ಕಾಮೆಂಟ್ಸ್

    ಡಿ-ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ದೂರಿನ ಬಳಿಕವೂ ನಿಲ್ಲದ ಕಾಮೆಂಟ್ಸ್

    ಡಿ-ಫ್ಯಾನ್ಸ್‌ನಿಂದ (D-Boss) ಬರುತ್ತಿರುವ ಅಶ್ಲೀಲ ಮೆಸೇಜ್ ವಿಚಾರವಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Actress Ramya) ಈಗಾಗಲೇ ಕಾನೂನು ಸಮರಕ್ಕಿಳಿದಿದ್ದಾರೆ. ಆದರೂ ಕೂಡ ಅಶ್ಲೀಲ ಮೆಸೇಜ್‌ಗಳು ನಿಲ್ಲುತ್ತಿಲ್ಲ.

    ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಮೆಸೇಜ್ ಬಂದ ಹಿನ್ನೆಲೆ ನಟಿ ರಮ್ಯಾಗೆ ಈಗಾಗಲೇ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಷ್ಟೆಲ್ಲಾ ಆದರೂ ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್‌ಗಳು ಮುಂದುವರಿದಿವೆ.ಇದನ್ನೂ ಓದಿ: ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ಬೆಂಬಲಕ್ಕೆ ನಿಂತ ದೊಡ್ಮನೆ ಕುಟುಂಬ

    ದೂರು ದಾಖಲಾದ 43 ಅಕೌಂಟ್‌ಗಳ ಪೈಕಿ ಒಂದು ಅಕೌಂಟ್ `ದಿ-ಡೆವಿಲ್-ಲವ್-181′ ನಿಂದ ಪದೇ ಪದೇ ಅಶ್ಲೀಲ ಸ್ಟೇಟಸ್ ಹಾಗೂ ಮೆಸೇಜ್‌ಗಳು ಬರುತ್ತಲೇ ಇವೆ. ಇನ್ನೊಂದು ಕಡೆ ಡಿ-ಬಾಸ್ ಅಭಿಮಾನಿಗಳು ಸ್ವಲ್ಪ ದಿನ ಸುಮ್ನಿರೋಣ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಇನ್ನೂ ಎಫ್‌ಐಆರ್ ದಾಖಲಾಗಿ ಎರಡು ದಿನ ಕಳೆದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ.

    ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣರಾಗುತ್ತಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ. ಜೊತೆಗೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ಬಹಿರಂಗಗೊಳಿಸಿ, ದೂರು ದಾಖಲಿಸಿದ್ದರು.ಇದನ್ನೂ ಓದಿ: ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ರಮ್ಯಾ – ದರ್ಶನ್ ಅಭಿಮಾನಿಗಳ ವಿರುದ್ಧ FIR

  • ರೇಣುಕಾಸ್ವಾಮಿಗೂ ಇವ್ರಿಗೂ ಏನ್ ವ್ಯತ್ಯಾಸ? – `ಡಿ’ ಬಾಸ್ ಫ್ಯಾನ್ಸ್ ವಿರುದ್ಧ  ರಮ್ಯಾ ದೂರು

    ರೇಣುಕಾಸ್ವಾಮಿಗೂ ಇವ್ರಿಗೂ ಏನ್ ವ್ಯತ್ಯಾಸ? – `ಡಿ’ ಬಾಸ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು

    ರ್ಶನ್ ಫ್ಯಾನ್ಸ್ (Darshan Fans) ಅಶ್ಲೀಲ ಮೆಸೇಜ್‍ಗಳ ವಿರುದ್ಧ ನಟಿ ರಮ್ಯಾ (Actress Ramya) ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

    ದೂರು ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರೇಣುಕಾಸ್ವಾಮಿ ಹತ್ಯೆ ಕೇಸ್ (Renukaswamy Case) ವಿಚಾರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಾ ಸಿಗುತ್ತೆ ಎಂದು ಸ್ಟೇಟಸ್ ಹಾಕಿದ್ದೆ. ಇದಕ್ಕೆ ನನಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದರು. ಇವರಿಗೂ ರೇಣುಕಾಸ್ವಾಮಿಗೂ ಎನು ವ್ಯತ್ಯಾಸ? ಹಾಗಾಗಿ ನಾನು ದೂರು ಕೊಟ್ಟಿದ್ದೇನೆ. ದೂರನ್ನು ಕಮಿಷನರ್ ಸ್ವೀಕರಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

    ಕಮಿಷನರ್ ಕಚೇರಿಯಲ್ಲಿರುವ ಸೈಬರ್ ಠಾಣೆಯಲ್ಲಿ ದೂರು ಕೊಡಲು ಸೂಚಿಸುವ ಬಗ್ಗೆ ಕಮಿಷನರ್ ಹೇಳಿದ್ದಾರೆ. ಆದಷ್ಟು ಬೇಗ ಕ್ರಮಕೈಗೊಳ್ಳೋದಾಗಿಯೂ ಹೇಳಿದ್ದಾರೆ. ಎಲ್ಲಾ ಹೆಣ್ಮಕ್ಕಳ ಪರವಾಗಿ ದೂರು ನೀಡಿದ್ದೇನೆ. ಇದರಿಂದ ಸಮಾಜಕ್ಕೆ ಸಂದೇಶ ಹೋಗಬೇಕು.

    ಚಿತ್ರರಂಗದಿಂದ ಹೆಣ್ಣುಮಕ್ಕಳಿಂದ ಸಂಪೂರ್ಣ ಬೆಂಬಲ ಇದೆ. ಆದರೆ ಚಿತ್ರರಂಗದವರು ನಮ್ಮ ಬೆಂಬಲಕ್ಕೆ ನಿಲ್ಲಲು ಭಯವಿದೆ. ನಾನು 2 ವರ್ಷದ ಹಿಂದೆಯೂ ಯಶ್‌, ಸುದೀಪ್ ವಿಚಾರದಲ್ಲೂ ಪೋಸ್ಟ್‌ ಮಾಡಿದ್ದೆ. ಆಗಲೂ ಮನೆಯವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ.

    ರಕ್ಷಿತಾ ಹಾಗೂ ವಿಜಯಲಕ್ಷ್ಮೀ ನನ್ನ ಬಗ್ಗೆ ಮಾತನಾಡಿದ್ದಾರೆ ಅಂತ ನನಗೆ ಅನ್ನಿಸಲ್ಲ. ನ್ಯಾಯದ ಪರ ನನ್ನ ಹಕ್ಕಿನ ಪರ ನಾನು ಹಕ್ಕು ಚಲಾಯಿಸುತ್ತಿದ್ದೇನೆ ಎಂದಿದ್ದಾರೆ. ಇದೇ ವೇಳೆ, ನಟ ಪ್ರಥಮ್ ಸಹ ಬೆದರಿಕೆ ಬಗ್ಗೆ ದೂರು ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

  • `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

    `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

    – ಸ್ವಯಂಪ್ರೇರಿತ ದೂರು ದಾಖಲಿಸಲು ನಿರ್ಧಾರ

    ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramay) ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಅಶ್ಲೀಲ ಮೆಸೇಜ್ ಬರುತ್ತಿರುವ ಹಿನ್ನೆಲೆ ಮಹಿಳಾ ಆಯೋಗ (Women Commission) ಸ್ವಯಂಪ್ರೇರಿತ ದೂರು ದಾಖಲಿಸಲು ನಿರ್ಧರಿಸಿದೆ. ಅಲ್ಲದೇ ನಟಿ ರಮ್ಯಾ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ದೂರು ಕೊಟ್ಟರೆ, 3 ರಿಂದ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

    ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ರಮ್ಯಾ ಅಂತಲ್ಲ, ಬೇರೆ ಬೇರೆ ಕಡೆ ಏನಾದರೂ ಆದಾಗ ಈ ತರ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ತುಂಬಾ ಜನ ಸೆಲೆಬ್ರಿಟಿಗಳು ನಮ್ಮಲ್ಲಿಗೆ ಬಂದು ದೂರು ಕೊಡುತ್ತಾರೆ. ಯಾರು ಅಶ್ಲೀಲ ಪದವನ್ನು ಬಳಕೆ ಮಾಡಬೇಡಿ. ಯಾವ ಮಹಿಳೆಗೂ ಕೂಡ ಅಗೌರವ ತೋರಬೇಡಿ. ನಿಮ್ಮ ಕೆಟ್ಟ ಪದಬಳಕೆಯಿಂದಾಗಿ ಮುಂದೊಂದು ದಿನ ಜೈಲಿಗೂ ಹೋಗಬಹುದು. ಕಾನೂನಿನ ಪ್ರಕಾರ ಇದು ದೊಡ್ಡ ಅಪರಾಧ. ಈ ರೀತಿ ಒಬ್ಬರನ್ನು ನೋಡಿ ಇನ್ನೊಬ್ಬರು ಮಾಡೋದು ಬೇಡ. ಇದು ಸರಿಯಲ್ಲ. ಒಂದು ವೇಳೆ ರಮ್ಯಾ ದೂರು ದಾಖಲು ಮಾಡಿದರೆ ಖಂಡಿತಾ ಎಫ್‌ಐಆರ್ ಆಗುತ್ತದೆ. ಬಳಿಕ ಮೂರರಿಂದ ಏಳು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದ್ದಾರೆ.ಇದನ್ನೂ ಓದಿ: `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

    ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿ ಪ್ರಕರಣ ಮಾಡಿದರೆ ಅದಕ್ಕೆ ತುಂಬಾ ಗಂಭೀರ ಶಿಕ್ಷೆ ಇದೆ. ಬಹುತೇಕರಿಗೆ ಇದರ ಬಗ್ಗೆ ಅರಿವೇ ಇಲ್ಲ. ಸದ್ಯ ಮಹಿಳಾ ಆಯೋಗ ರಮ್ಯಾ ವಿಚಾರವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸ್ ಕಮೀಷನರ್‌ಗೆ ಪತ್ರ ಬರೆಯಲು ನಿರ್ಧರಿಸಿದೆ. ಇಲ್ಲದೇ ಹೋದರೆ ಇದೇ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ. ಜೊತೆಗೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ಬಹಿರಂಗೊಳಿಸಿದ್ದಾರೆ.ಇದನ್ನೂ ಓದಿ: `I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಒಳ್ಳೆ ಹುಡ್ಗ ಪ್ರಥಮ್

  • `I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಒಳ್ಳೆ ಹುಡ್ಗ ಪ್ರಥಮ್

    `I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಒಳ್ಳೆ ಹುಡ್ಗ ಪ್ರಥಮ್

    – ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ ಅಂತ ಕರೆ

    ಟ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿಯಲು ಮುಂದಾಗಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramya) ಒಳ್ಳೆ ಹುಡ್ಗ ಪ್ರಥಮ್ (Olle Hudga Pratham) ಸಾಥ್ ನೀಡಲು ಮುಂದಾಗಿದ್ದಾರೆ.

    ಎಕ್ಸ್ ಖಾತೆಯಲ್ಲಿ ಟ್ವೀಟ್ ಹಂಚಿಕೊಂಡಿರುವ ಅವರು, ನಾನು ರಮ್ಯಾ ಮೇಡಂ ಘನತೆಗೆ ಬೆಂಬಲ ನೀಡುತ್ತೇನೆ. ಎಲ್ಲರೂ ನಟಿ ರಮ್ಯಾ ಪರ ನಿಲ್ಲೋಣ. ಈಗಲೂ ನಾವು ರಮ್ಯಾ ಅವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದರೂ ಜಾಣಕಿವುಡರಾಗಿರುವ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರು ಕಾಲ ಬಾಳುವ ಆಯಸ್ಸು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: `ದಯೆಯಿಂದಿರಿ’ ಡಿ-ಬಾಸ್ ಫ್ಯಾನ್ಸ್‌ಗೆ ರಕ್ಷಿತಾ ಕಿವಿಮಾತು – ಸ್ಯಾಂಡಲ್‌ವುಡ್ ಕ್ವೀನ್‌ಗೆ ಟಾಂಗ್ ಕೊಟ್ರಾ ಕ್ರೇಜಿ ಕ್ವೀನ್?

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ.

    ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ಬಹಿರಂಗೊಳಿಸಿದ್ದಾರೆ. ರೇಣುಕಾಸ್ವಾಮಿ ಕಳುಹಿಸಿದ ಸಂದೇಶಕ್ಕೂ, ಡಿಬಾಸ್ ಫ್ಯಾನ್ಸ್ ಕಳುಹಿಸುತ್ತಿರುವ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀ-ದ್ವೇಷಿ ಮನೋಭಾವದವರು. ಇಂತವರಿಂದಲೇ ಹೆಣ್ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಅಂತ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಮ್ಯಾ ಆಕ್ರೋಶ ಹೊರಹಾಕಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ.

    ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿರೋ ಮೋಹಕತಾರೆ, ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್‌ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕಚಿಕ್ಕ ಮಕ್ಕಳ ಬಗ್ಗೆ ಕೆಟ್ಟಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: `ಡಿ’ ಫ್ಯಾನ್ಸ್ ವಿರುದ್ಧ ದೂರು ಕೊಡಲು ಮುಂದಾದ ರಮ್ಯಾ; ಪತಿ ಪರ ಕಾನೂನು ಸಮರಕ್ಕಿಳಿದ ವಿಜಯಲಕ್ಷ್ಮಿ