Tag: actress Ramya

  • ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ನಟಿ ರಮ್ಯಾ

    ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ನಟಿ ರಮ್ಯಾ

    ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ (Actress Ramya) ಶಕ್ತಿ ದೇವತೆ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ (Bande Mahakali Temple) ಭೇಟಿ ನೀಡಿದ್ದಾರೆ. ದೀಪಾವಳಿ ಅಮವಾಸ್ಯೆಯ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಂಡೆ ಮಹಾಕಾಳಿ ದರ್ಶನ ಪಡೆದಿದ್ದಾರೆ.

    ನಟಿ ರಮ್ಯಾ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಟಿ ರಮ್ಯಾ ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಗೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ನಿರ್ಮಾಣದ ಜೊತೆಗೆ ನಟನೆ ಮಾಡಲು ಮನಸ್ಸು ಮಾಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಇನ್ನು ಯಾವ ಅಪ್‌ಡೇಟ್ ಸಿಕ್ಕಿಲ್ಲ.ಇದನ್ನೂ ಓದಿ: ಗೋಲ್ಡನ್ ಪಾಸ್ ಪಡೆದು, ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ

    ದೀಪಾವಳಿ ಹಬ್ಬದ ಪ್ರಯುಕ್ತ ಮಹಾಕಾಳಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಹಾಗೂ ನಟನೆಯ ಬಗ್ಗೆ ಹೊಸ ಅಪ್‌ಡೇಟ್ ಕೊಡುವ ನಿರೀಕ್ಷೆಗಳಿವೆ. ಇದರ ಮಧ್ಯೆ ಜಾಲತಾಣದಲ್ಲಿ ತಮಗೆ ಕೆಟ್ಟದಾಗಿ ಕಮೆಂಟ್ಸ್ ಮಾಡಿದವರ ವಿರುದ್ಧ ಸಮರ ಸಾರಿದ್ದರು. ಅದಕ್ಕೆ ತಕ್ಕ ಶಾಸ್ತಿಯನ್ನೂ ಮಾಡಿಸಿದ್ದಾರೆ.

  • ಮೈಸೂರು ಅರಮನೆ ಪೇಂಟಿಂಗ್‌ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!

    ಮೈಸೂರು ಅರಮನೆ ಪೇಂಟಿಂಗ್‌ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!

    – ರಾಣಿಯಂತೆ ಪೋಸ್ ಕೊಟ್ಟ ಸ್ಯಾಂಡಲ್‌ವುಡ್‌ ಕ್ವೀನ್‌! 

    ಮೋಹಕ ತಾರೆ ರಮ್ಯಾ (Actress Ramya) ದಸರಾ (Dasara) ಹಾಗೂ ವಿಜಯದಶಮಿ (Vijayadashami) ಆಚರಣೆ ಮಾಡಿ ಗೋಲ್ಡನ್‌ ಕಲರ್‌ ಸ್ಯಾರಿಯಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಮೈಸೂರು ದಸರಾ ಜಂಬೂ ಸವಾರಿ ಹಾಗೂ ಅರಮನೆಯ ಪೇಂಟಿಂಗ್‌ (Mysuru Palace) ಮುಂದೆ ದಸರಾ ಗೊಂಬೆಯಂತೆ ಪೋಸ್‌ ಕೊಟ್ಟಿದ್ದಾರೆ!

    ಈ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿರುವ ರಮ್ಯಾ, ಚೆಂದದ ಸಾಲೊಂದನ್ನು ಕ್ಯಾಪ್ಷನ್‌ ಕೊಟ್ಟಿದ್ದಾರೆ. ಒಳ್ಳೆಯದು ಮತ್ತು ಕೆಟ್ಟದು, ಸರಿ ಮತ್ತು ತಪ್ಪು ಎಂಬ ದ್ವಂದ್ವತೆಯನ್ನು ಮೀರಿ ದೈವಿಕತೆಯನ್ನು ಮಾತ್ರ ಕಂಡುಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ. ಫೋಟೋಗಳಿಗೆ ಮನಸೋತ ಫ್ಯಾನ್ಸ್‌ ʻಅರೆರೆ ಅಪ್ಸರೆʼ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: 2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, ಹೌಸ್‌ಫುಲ್‌ ಶೋಗಳ ಈ ಅದ್ಭುತ ಪಯಣ: ಜನತೆಗೆ ರಿಷಬ್‌ ಕೃತಜ್ಞತೆ

    ಫೋಟೋ ಅಪ್ಲೋಡ್‌ ಆಗಿ 30 ನಿಮಿಷದಲ್ಲೇ ಸುಮಾರು 14,500 ಮಂದಿಯ ಲೈಕ್‌ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ತಮಟೆ ಸದ್ದಿಗೆ ಸ್ಟೇಪ್ ಹಾಕಿದ ಶಿವಣ್ಣ

  • ನಟಿ ರಮ್ಯಾ ವಿರುದ್ಧ ಅಶ್ಲೀಲ ಸಂದೇಶ; ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

    ನಟಿ ರಮ್ಯಾ ವಿರುದ್ಧ ಅಶ್ಲೀಲ ಸಂದೇಶ; ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

    – ಕಾಮೆಂಟ್ಸ್‌ ಡಿಲೀಟ್‌ ಮಾಡಿ ತಲೆಮರೆಸಿಕೊಂಡಿರೋ ಅನೇಕ ಆರೋಪಿಗಳು

    ಬೆಂಗಳೂರು: ನಟಿ ರಮ್ಯಾಗೆ (Actress Ramya) ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ ಮತ್ತಷ್ಟು ಮಂದಿಯನ್ನ ಸಿಸಿಬಿ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಕೊಟ್ಟಿದ್ದಾರೆ‌. ನಟಿಗೆ ಅಶ್ಲೀಲ ಸಂದೇಶ ಮಾಡಿ ಸಿಕ್ಕಿ ಬಿದ್ದವರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.

    ಬಿಜಾಪುರ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಂದ 9 ಮಂದಿ ಆರೋಪಿಗಳನ್ನ ಬಂಧಿಸಿದ್ದ ಸಿಸಿಬಿ ಪೊಲೀಸರು ಮತ್ತೆ ಇಬ್ಬರು ಉತ್ತರ ಕರ್ನಾಟಕದ ಮೂಲದ ಯುವಕರನ್ನ ಬಂಧನ ಮಾಡಿದ್ದಾರೆ. ಬಂಧಿತ ಇಬ್ಬರು ಕೂಡ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಮತ್ತಿಬ್ಬರ ಬಂಧನ, ಒಟ್ಟು 9 ಯುವಕರು ಅರೆಸ್ಟ್

    ನಟಿ ರಮ್ಯಾ ದೂರಿನಲ್ಲಿ ಸುಮಾರು 40 ಕ್ಕೂ ಅಧಿಕ ಅಕೌಂಟ್‌ಗಳ ಡಿಟೈಲ್ಸ್ ಕೊಟ್ಟಿದ್ದು. 12 ಅಕೌಂಟ್‌ಗಳ ಮಾಹಿತಿ ಪಡೆದು 12 ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮತ್ತೆ 10 ಕ್ಕೂ ಹೆಚ್ಚು ಮಂದಿಯ ಇನ್ಸ್ಟಾಗ್ರಾಂ ಖಾತೆಯ ಮಾಹಿತಿ ಪಡೆದಿದ್ದು, ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

    ಕೆಲವರು ಕೋರ್ಟ್ ಮೊರೆ ಹೋಗಿದ್ದು, ಉಳಿದ ಕೆಲವರು ಅಕೌಂಟ್‌ನಲ್ಲಿ ಹಾಕಿದ್ದ ಕಾಮೆಂಟ್‌ಗಳನ್ನ‌ ಡಿಲೀಟ್ ಮಾಡಿಕೊಂಡು ತಲೆಮರಿಸಿಕೊಂಡಿದ್ದಾರೆ. ಹಾಗಾಗಿ, ಆರೋಪಿತರ ಟವರ್ ಲೊಕೇಷನ್‌ಗಳನ್ನ ಪತ್ತೆ ಮಾಡಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಪ್ರಜ್ವಲ್ ಕಿಡಿ

  • ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಮತ್ತಿಬ್ಬರ ಬಂಧನ, ಒಟ್ಟು 9 ಯುವಕರು ಅರೆಸ್ಟ್

    ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಮತ್ತಿಬ್ಬರ ಬಂಧನ, ಒಟ್ಟು 9 ಯುವಕರು ಅರೆಸ್ಟ್

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramya) ಅಶ್ಲೀಲ ಕಾಮೆಂಟ್ ಹಾಕಿದ್ದವರ ಪೈಕಿ ಸಿಸಿಬಿ ಪೊಲೀಸರು (CCB Police) ಮತ್ತೆ ಇಬ್ಬರನ್ನು ಬಂಧಿಸಿದ್ದು, ಈವರೆಗೂ ಒಟ್ಟು 9 ಜನರನ್ನು ಅರೆಸ್ಟ್ ಮಾಡಿದ್ದಾರೆ.

    ಉಡುಪಿ ಮೂಲದವರಾದ ಸುಜನ್ ಮತ್ತು ಆದರ್ಶ್ ಬಂಧಿತ ಯುವಕರು. ಇದಕ್ಕೂ ಮುನ್ನ ಸಿಸಿಬಿ ಪೊಲೀಸರು ಮಂಜುನಾಥ, ಭುವನ್ ಗೌಡ, ಪವನ್, ಓಬಣ್ಣ ಮತ್ತು ಗಂಗಾಧರ್ ಸೇರಿ ಒಟ್ಟು 9 ಯುವಕರನ್ನು ಬಂಧಿಸಿದ್ದರು.ಇದನ್ನೂ ಓದಿ: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ – 5.80 ಲಕ್ಷ ಜನರಿಂದ ವೀಕ್ಷಣೆ

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು.

    ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈವರೆಗೂ ಸಿಸಿಬಿ ಪೊಲೀಸರು ಒಟ್ಟು 9 ಜನರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಶೋಧ ವೆಬ್ ಸಿರೀಸ್ ಸ್ಟ್ರೀಮಿಂಗ್ ಡೇಟ್ ಫಿಕ್ಸ್

  • ಸಾಧಕನಿಗೆ ಸಾವಿಲ್ಲ, ಅಭಿಮಾನಿಗಳ ಹೃದಯವೇ ನಿಮಗೆ ಗುಡಿ – ವಿಷ್ಣು ಸ್ಮಾರಕದ ಬಗ್ಗೆ ರಮ್ಯಾ ಪೋಸ್ಟ್

    ಸಾಧಕನಿಗೆ ಸಾವಿಲ್ಲ, ಅಭಿಮಾನಿಗಳ ಹೃದಯವೇ ನಿಮಗೆ ಗುಡಿ – ವಿಷ್ಣು ಸ್ಮಾರಕದ ಬಗ್ಗೆ ರಮ್ಯಾ ಪೋಸ್ಟ್

    ಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ (Actor Vishnuvardhan) ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮಗೊಳಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು

    ಇನ್ಸ್‌ಸ್ಟಾಗ್ರಾಂನಲ್ಲಿ ನಟಿ ಹಾಕಿಕೊಂಡಿರುವ ಸ್ಟೋರಿಯಲ್ಲಿ, ನಟ ವಿಷ್ಣುವರ್ಧನ್ ಅವರ ಫೋಟೋ ಹಂಚಿಕೊಂಡು ಅದರಲ್ಲಿ ಸಾಧಕನಿಗೆ ಸಾವಿಲ್ಲ, ಅಭಿಮಾನಿಗಳ ಹೃದಯವೇ ನಿಮಗೆ ಗುಡಿ ಎಂದು ಬರೆದುಕೊಂಡಿದ್ದಾರೆ.

    ಇತ್ತೀಚಿಗೆ ನಟ ಅನಿರುದ್ಧ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ ಎಂದು ವಿಷ್ಣು ಅಭಿಮಾನಿಗಳ ಪರವಾಗಿ ನಿಂತಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ನಡೆದ ಘಟನೆ ಖಂಡನೀಯ. ನಮಗೆಲ್ಲರಿಗೂ ದುಃಖ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.ಇದನ್ನೂ ಓದಿ: ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ; Golden Book of World Records ನಲ್ಲಿ ದಾಖಲು

  • ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ: ರಮ್ಯಾ

    ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ: ರಮ್ಯಾ

    ದುಬಾರಿ ಬಜೆಟ್, ಸ್ಟಾರ್ ನಟರು ಇಲ್ಲದೇ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ಸು ಫ್ರಂ ಸೋ ಸಿನಿಮಾ ಸಾಕ್ಷಿ ಎಂದಿದ್ದಾರೆ ನಟಿ ರಮ್ಯಾ. ದರ್ಶನ್ ರೀತಿಯ ಸ್ಟಾರ್ ನಟರು ಜೈಲಿಗೆ ಹೋದಾಗ, ಸಿನಿಮಾ ರಂಗ ಪಾತಾಳಕ್ಕೆ ಬೀಳುತ್ತದೆ. ಸ್ಟಾರ್ ನಟರು ಸಿನಿಮಾ ಮಾಡದೇ ಇದ್ದರೆ ಸಿನಿಮಾ ರಂಗಕ್ಕೆ ನಷ್ಟಕ್ಕೆ ತಿರುಗುತ್ತಾ? ಎಂದು ಕೇಳಲಾದ ಪ್ರಶ್ನೆಗೆ ರಮ್ಯಾ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಸು ಫ್ರಂ ಸೋನಲ್ಲಿ ಯಾವ ಸ್ಟಾರ್ ನಟರು ಇದ್ದಾರೆ?.. ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಅಂದಿದ್ದಾರೆ ರಮ್ಯಾ.

    ದರ್ಶನ್ ಬಗ್ಗೆ ರಮ್ಯಾ ಹೇಳಿದ್ದೇನು?
    ದರ್ಶನ್ (Darshan) ಲೈಟ್ಬಾಯ್ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು ಅಂತ ನಟಿ ರಮ್ಯಾ (Actress Ramya) ಕೊಲೆ ಆರೋಪಿ ದಚ್ಚು ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್ ಕಾಮೆಂಟ್ಸ್ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಹೇಳಿದರು.

    ಮುಂದುವರಿದು… ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಅಂತ ಹೇಳಿದ್ದಾರೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುತ್ತೀನಿ ಅಂದರು. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಅಂತಿನಿ ಅಂದರು.

  • ದರ್ಶನ್‌ ಕಷ್ಟಪಟ್ಟು ಮೇಲೆ ಬಂದಿದ್ರು, ಆದ್ರೆ ಜೀವನ ಹಾಳು ಮಾಡಿಕೊಂಡ್ರು: ರಮ್ಯಾ ಸಾಫ್ಟ್‌ ಕಾರ್ನರ್‌

    ದರ್ಶನ್‌ ಕಷ್ಟಪಟ್ಟು ಮೇಲೆ ಬಂದಿದ್ರು, ಆದ್ರೆ ಜೀವನ ಹಾಳು ಮಾಡಿಕೊಂಡ್ರು: ರಮ್ಯಾ ಸಾಫ್ಟ್‌ ಕಾರ್ನರ್‌

    – ವಿಜಯಲಕ್ಷ್ಮಿ ಪರವೂ ಬ್ಯಾಟ್‌ ಬೀಸಿದ ರಮ್ಯಾ

    ಚಿತ್ರರಂಗಕ್ಕೆ ದರ್ಶನ್‌ (Darshan) ಲೈಟ್‌ಬಾಯ್‌ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು ಅಂತ ನಟಿ ರಮ್ಯಾ (Actress Ramya) ಕೊಲೆ ಆರೋಪಿ ದಚ್ಚು ಬಗ್ಗೆ ಸಾಫ್ಟ್‌ ಕಾರ್ನರ್‌ ತೋರಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್‌ ಕಾಮೆಂಟ್ಸ್‌ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್‌ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸುವುದಾಗಿ ಹೇಳಿದರು. ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ – ಅಭಿಮಾನಿಗಳೊಂದಿಗೆ ನಿಂತ ನಟ ಅನಿರುದ್ಧ

    ಮುಂದುವರಿದು… ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್‌

    ಇನ್ನೂ ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುತ್ತೀನಿ ಅಂದರು. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಅಂತಿನಿ ಅಂದರು. ಇದನ್ನೂ ಓದಿ: ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

  • ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

    ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

    – ಪವಿತ್ರಾ ಗೌಡಗೆ ಈ ಸ್ಥಿತಿ ಬರಬಾರದಿತ್ತು ಎಂದ ನಟಿ

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ಲ್ಲಿ (Renukaswamy Case) ಸುಪ್ರೀಂ (Supreme Court) ಆದೇಶದ ಬೆನ್ನಲ್ಲೇ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Actress Ramya) ಸಾಫ್ಟ್ ಕಾರ್ನರ್ ತೋರಿಸಿದ್ದಾರೆ.

    ದರ್ಶನ್ ಜೈಲುಪಾಲಾಗಿರುವ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಅವರು, ನಟ ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಸಿನಿಮಾ ಶೂಟಿಂಗ್ ವೇಳೆ ತಾವು ನಡೆದುಕೊಂಡು ಬಂದ ಹಾದಿ ಬಗ್ಗೆ ನನ್ನ ಬಳಿ ಹಂಚಿಕೊಂಡಿದ್ದರು. ನನಗೆ ಹೆಮ್ಮೆ ಅನಿಸಿತ್ತು. ಲೈಟ್ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಇತ್ತೀಚಿಗೆ ಅವರ ನಡವಳಿಕೆಯಿಂದ ತುಂಬಾ ಬೇಜಾರಾಗಿತ್ತು. ಎಲ್ಲೋ ಒಂದು ಕಡೆ ಅವರು ತಮ್ಮ ಜೀವನ ಹಾಳು ಮಾಡಿಕೊಂಡರು. ಈ ಮಟ್ಟಕ್ಕೆ ಬೆಳೆದ ಮೇಲೆ ಜವಾಬ್ದಾರಿ ಇರುತ್ತದೆ. ಅವರ ಅಕ್ಕಪಕ್ಕ ಯಾರು ಒಳ್ಳೆಯವರಿಲ್ಲ ಅನಿಸುತ್ತೆ ಗೊತ್ತಿಲ್ಲ. ತಮ್ಮ ಸುತ್ತಮುತ್ತ ಒಳ್ಳೆಯವರನ್ನು ಇಟ್ಟುಕೊಂಡು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಮೊದಲು ಅಕ್ಕಪಕ್ಕದವರ ಸಹವಾಸ ಬಿಡಬೇಕು ಕಿವಿಮಾತು ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರು | ನಿಗೂಢ ಸ್ಫೋಟ – ಬಾಲಕ ಸಾವು, 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಇನ್ನೊಂದು ಕಡೆ ಜಡ್ಜ್ಮೆಂಟ್ ಕೇಳಿದಾಗ ರಿಲೀಫ್ ಅಂತಾ ಅನಿಸಿದೆ. ಈಗ ನಾವು ಹೋಗುತ್ತಿರುವ ಸಮಾಜ ಕೆಟ್ಟ ದಾರಿಯಲ್ಲಿದೆ. ಹೆಣ್ಣುಮಕ್ಕಳ ರಕ್ಷಣೆ, ಗೌರವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆರ್ಡರ್ ಬಂದಾಗ ನಾನು ಮಾಡಿದ ಪೋಸ್ಟ್ಗೆ ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದರು. ನಾವೇ ಕಾನೂನು ಕೈಗೆತ್ತಿಕೊಂಡರೆ ಈ ರೀತಿಯ ಕೆಟ್ಟ ಕೆಲಸಗಳು ಆಗುತ್ತವೆ. ಜಡ್ಜ್ಮೆಂಟ್‌ನಿಂದ ಸಮಾಜಕ್ಕೆ ಒಳ್ಳೆಯದಾಗುತ್ತೆ. ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಹೋಗಿದೆ. ಯಾರೇ ಆಗಿರಲಿ ಎಲ್ಲರೂ ಸಮಾನರು. ದೊಡ್ಡವರೇ ಆಗ್ಲಿ ಚಿಕ್ಕವರೇ ಆಗ್ಲಿ ಎಲ್ಲರೂ ಕಾನೂನಿನ ಮುಂದೆ ಒಂದೇ ಎಂದು ತಿಳಿಸಿದ್ದಾರೆ.

    ಪವಿತ್ರಾ ಗೌಡ ಯಾರು ಅಂತಾ ನನಗೆ ಮೊದಲು ಗೊತ್ತಿರಲಿಲ್ಲ. ಆಕೆಗೆ ಈ ಸ್ಥಿತಿ ಬರಬಾರದಿತ್ತು. ಒಂದು ಕಡೆ ನನಗೆ ಬೇಜಾರಾಗುತ್ತೆ. ಯಾಕಂದ್ರೆ ಪವಿತ್ರಾ ಗೌಡ ಒಬ್ಬ ತಾಯಿ, ಅವರಿಗೆ ಮಗಳಿದ್ದಾಳೆ. ಕಾನೂನು ಕೈಗೆ ತೆಗೆದುಕೊಳ್ಳದೇ ನಾವು ನಿಯಮಗಳ ಪ್ರಕಾರ ನಡೆದುಕೊಂಡಿದ್ರೆ ಇದೆಲ್ಲಾ ಆಗುತ್ತಿರಲಿಲ್ಲ. ನಾವು ಏನಾದರೂ ಮಾಡುವ ಮುಂಚೆ ಯೋಚನೆ ಮಾಡಬೇಕು. ಕೋಪ ಬರೋದು ಸಾಮಾನ್ಯ, ಆದರೆ ಎಲ್ಲರ ಜೀವನದಲ್ಲಿ ಒಳ್ಳೆಯದೇ ಆಗಲ್ಲ. ಕೆಲವೊಂದು ಘಟನೆಗಳು ನಡೆಯುತ್ತವೆ. ಹಾಗಂತ ನಾವು ಕಾನೂನನ್ನ ಕೈಗೆತ್ತಿಕೊಳ್ಳಬಾರದು. ಕಾನೂನು ಪ್ರಕಾರವೇ ನಡೆದುಕೊಂಡು ಬರಬೇಕು. ಮತ್ತೇನಾದರೂ ಆದರೆ ಅಂತ ಜೀವನ ಹಾಳು ಮಾಡಿಕೊಳ್ತೀರಾ? ಅದೇ ರೀತಿ ಬೇರೆಯವರು ಶುರು ಮಾಡ್ಕೊಂಡ್ರೆ ಸಮಾಜ ಹೇಗೆ ಬದಲಾಗುತ್ತೆ? ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತೆ. ಆದರೆ ಕಾನೂನಿಂದ ನಾವ್ಯಾರು ಎಸ್ಕೇಪ್ ಆಗೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿ, ಅವರದ್ದು ಬಡಕುಟುಂಬ. ಅವರಿಗೆ ಎಲ್ಲೋ ಒಂದು ಕಡೆ ಸುಪ್ರೀಂ ತೀರ್ಪಿನಿಂದ ನ್ಯಾಯ ಸಿಕ್ಕಂತಾಗಿದೆ ಅನಿಸುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ದೇಶದ ಜನತೆಗೆ ಮೋದಿ ದೀಪಾವಳಿ ಡಬಲ್‌ ಗಿಫ್ಟ್‌ – ತೆರಿಗೆ ಇಳಿಕೆ, ಯುವಜನತೆಗೆ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆ

  • ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಕೊಪ್ಪಳ ಮೂಲದ ಓರ್ವ ವಶಕ್ಕೆ

    ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಕೊಪ್ಪಳ ಮೂಲದ ಓರ್ವ ವಶಕ್ಕೆ

    ಕೊಪ್ಪಳ: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramya) ಅಶ್ಲೀಲ ಕಾಮೆಂಟ್ ಹಾಕಿದವರ ಪೈಕಿ ಓರ್ವ ಯುವಕನನ್ನು ಸೈಬರ್ ಕ್ರೈಮ್‌ (Cyber Crime) ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಶಕ್ಕೆ ಪಡೆದ ಯುವಕನನ್ನು ಕೊಪ್ಪಳದ (Koppal) ಗಂಗಾವತಿ (Gangavathi) ತಾಲೂಕಿನ ಸಿಂಗನಾಳ ಗ್ರಾಮದ ಮಂಜುನಾಥ ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಸಿಸಿಬಿ ಪೊಲೀಸರು ಭುವನ್ ಗೌಡ, ಪವನ್, ಓಬಣ್ಣ ಮತ್ತು ಗಂಗಾಧರ್ ಎಂಬ ನಾಲ್ವರನ್ನು ಬಂಧಿಸಿದ್ದರು.ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಪ್ರಜ್ವಲ್ ಕಿಡಿ

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು.

    ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು, ಮೈಸೂರು, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈವರೆಗೂ ಸಿಸಿಬಿ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಸಿಸಿಬಿ ಪೊಲೀಸರಿಂದ ಇನ್ನಿಬ್ಬರು ಅರೆಸ್ಟ್

  • ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಸಿಸಿಬಿ ಪೊಲೀಸರಿಂದ ಇನ್ನಿಬ್ಬರು ಅರೆಸ್ಟ್

    ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಸಿಸಿಬಿ ಪೊಲೀಸರಿಂದ ಇನ್ನಿಬ್ಬರು ಅರೆಸ್ಟ್

    ಸ್ಯಾಂಡಲ್‌ವುಡ್ ಕ್ವೀನ್ಗೆ ರಮ್ಯಾ (Actress Ramya) ಅಶ್ಲೀಲ ಮೆಸೇಜ್ ಹಾಕಿದ್ದವರ ಪೈಕಿ ಸದ್ಯ ಸಿಸಿಬಿ ಪೊಲೀಸರು (CCB Police) ಮತ್ತಿಬ್ಬರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 4ಕ್ಕೆ ಏರಿದೆ.

    ಸಿಸಿಬಿ ಪೊಲೀಸರು ರಾಜೇಶ್ ಹಾಗೂ ಭುವನ್‌ ಗೌಡ ಎಂಬುವವರನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಓಬಣ್ಣ ಮತ್ತು ಗಂಗಾಧರ್‌ನ್ನು ಬಂಧಿಸಿದ್ದರು.ಇದನ್ನೂ ಓದಿ: ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿಗೆ ಭಾರಿ ಡಿಮ್ಯಾಂಡ್

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು.

    ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು, ಮೈಸೂರು, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತೀಚಿಗೆ ಬಂಧಿಸಿದ್ದ ಇಬ್ಬರ ಪೈಕಿ ಓರ್ವ ದರ್ಶನ್ ಅಭಿಮಾನಿ ಹಾಗೂ ಇನೋರ್ವ ಧನ್ವೀರ್ ಅಭಿಮಾನಿ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಮಳೆ – ರೈತರ ಮೊಗದಲ್ಲಿ ಮಂದಹಾಸ